< ಸಮುವೇಲನು - ದ್ವಿತೀಯ ಭಾಗ 16 >

1 ದಾವೀದನು ಗುಡ್ಡದ ತುದಿಯ ಆಚೆಗೆ ಹೋದ ಕೂಡಲೆ ಮೆಫೀಬೋಶೆತನ ಸೇವಕನಾದ ಚೀಬನು ತಡಿಹಾಕಿದ ಎರಡು ಕತ್ತೆಗಳ ಮೇಲೆ ಇನ್ನೂರು ರೊಟ್ಟಿಗಳನ್ನೂ, ನೂರು ಒಣಗಿದ ದ್ರಾಕ್ಷಿ ಗೊಂಚಲುಗಳನ್ನೂ, ನೂರು ಅಂಜೂರ ಹಣ್ಣುಗಳನ್ನೂ, ಒಂದು ಬುದ್ದಲಿ ದ್ರಾಕ್ಷಾರಸವನ್ನೂ ಹೇರಿಕೊಂಡು ಬಂದು ಅವನನ್ನು ಎದುರುಗೊಂಡನು.
А коли Давид пройшов трохи з верхі́в'я, аж ось Ціва́, Мефівошетів слуга назу́стріч йому, та пара в'ючених ослів, а на них двісті хлібі́в, і сто в'язок родзи́нок, і сто літніх плоді́в, та бурдю́к вина.
2 ಅರಸನು ಚೀಬನನ್ನು, “ಇವುಗಳನ್ನು ಯಾಕೆ ತಂದಿ?” ಎಂದು ಕೇಳಿದನು. ಅವನು, “ಅರಸನ ಮನೆಯವರು ಸವಾರಿಮಾಡುವುದಕ್ಕಾಗಿ ಕತ್ತೆಗಳನ್ನು, ಆಳುಗಳು ತಿನ್ನುವುದಕ್ಕಾಗಿ ಹಣ್ಣು ಮತ್ತು ರೊಟ್ಟಿಗಳನ್ನು, ಅರಣ್ಯದಲ್ಲಿ ದಣಿದವರು ಕುಡಿಯುವುದಕ್ಕಾಗಿ ದ್ರಾಕ್ಷಾರಸವನ್ನು ತಂದಿದ್ದೇನೆ” ಎಂದು ಉತ್ತರಕೊಟ್ಟನು.
І сказав цар до Ціви: „Що це тобі?“А Ціва́ відказав: „Ці осли для царсько́го дому на їзду, а хліб та літні плоди́ — на їду юнака́м, а вино — на пиття́ зму́ченому в пустині“.
3 ಅರಸನು ತಿರುಗಿ ಅವನನ್ನು, “ನಿನ್ನ ಯಜಮಾನನ ಮಗನು ಎಲ್ಲಿದ್ದಾನೆ?” ಎಂದು ಕೇಳಲು ಅವನು, “ತನ್ನ ತಂದೆಯ ರಾಜ್ಯವನ್ನು ಇಸ್ರಾಯೇಲರು ಮರಳಿ ತನಗೇ ಕೊಡುವರೆಂದು ಹೇಳಿ ಅವನು ಯೆರೂಸಲೇಮಿನಲ್ಲೇ ಉಳಿದನು” ಅಂದನು
І сказав цар: „А де син твого пана?“А Ціва відказав царе́ві: „Он він сидить в Єрусалимі, бо сказав: Сьогодні Ізраїлів дім поверне мені царство мого батька“.
4 ಆಗ ಅರಸನು ಅವನಿಗೆ, “ಮೆಫೀಬೋಶೆತನ ಆಸ್ತಿಯೆಲ್ಲಾ ನಿನ್ನದೇ” ಎಂದು ಹೇಳಲು ಅವನು, “ಅರಸನೇ ನಿನಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ. ನನ್ನ ಒಡೆಯನೇ, ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಲಿ” ಎಂದನು.
І сказав цар до Ціви: „Ось тобі все, що в Мефівошета“. А Ціва відказав, уклонившись: „Нехай я знайду́ ласку в оча́х твоїх, пане мій ца́рю“.
5 ಅರಸನಾದ ದಾವೀದನು ಬಹುರೀಮಿಗೆ ಬಂದಾಗ ಸೌಲನ ವಂಶದವನೂ, ಗೇರನ ಮಗನೂ ಆದ ಶಿಮ್ಮೀಯು ದಾವೀದನನ್ನು ಶಪಿಸುತ್ತಾ, ಆ ಊರಿನಿಂದ ಹೊರಗೆ ಬಂದನು.
І прийшов цар Давид до Бахурі́му, аж ось виходить ізвідти чоловік з роду Саулового дому, а ім'я́ йому Шім'ї́, син Ґерин. Він ішов і все проклинав.
6 ಅವನು ದಾವೀದನಿಗೂ, ಅವನ ಎಲ್ಲಾ ಸೇವಕರಿಗೂ, ಎಡಬಲದಲ್ಲಿರುವ ಸೈನಿಕರಿಗೂ ಮತ್ತು ಶೂರರಿಗೂ ಕಲ್ಲೆಸೆಯ ತೊಡಗಿದನು.
І він кидав камі́нням на Давида та на всіх рабів царя Давида, хоч увесь народ та всі ли́царі були на прави́ці його та на ліви́ці його.
7 ಅವನು ಅವರನ್ನು ಶಪಿಸುತ್ತಾ, “ಹೋಗು ಕೊಲೆಗಾರನೆ, ನೀಚನೆ ಹೋಗು,
І отак говорив Шім'ї в прокльо́ні своїм: „Іди, іди геть, кривавий пересту́пнику та чоловіче негі́дний!
8 ಸೌಲನ ರಾಜ್ಯವನ್ನು ಕಸಿದುಕೊಂಡು ಅವನ ಮನೆಯವರನ್ನು ಕೊಂದದ್ದಕ್ಕಾಗಿ ಯೆಹೋವನು ನಿನಗೆ ಮುಯ್ಯಿ ತೀರಿಸಿದ್ದಾನೆ. ಆತನು ರಾಜ್ಯವನ್ನು ನಿನ್ನ ಮಗನಾದ ಅಬ್ಷಾಲೋಮನಿಗೆ ಕೊಟ್ಟು ಬಿಟ್ಟನು. ಕೊಲೆಗಾರನೇ ಇಗೋ, ನಿನಗೆ ಈಗ ತಕ್ಕ ಆಪತ್ತು ಬಂದಿದೆ” ಎಂದನು.
Госпо́дь обернув на тебе всю кров Саулового дому, що зацарюва́в ти замість нього. І віддав Госпо́дь царство в руку сина твого Авесалома, а ти ось у своєму злі, бо ти кривавий переступник!“
9 ಆಗ ಚೆರೂಯಳ ಮಗನಾದ ಅಬೀಷೈಯು ಅರಸನಿಗೆ, “ಈ ಸತ್ತ ನಾಯಿ, ಅರಸನಾದ ನನ್ನ ಒಡೆಯನನ್ನು ಶಪಿಸುವುದೇನು? ಅಪ್ಪಣೆಯಾಗಲಿ. ನಾನು ಅವನಿರುವಲ್ಲಿಗೆ ಹೋಗಿ, ಅವನ ತಲೆಯನ್ನು ಹಾರಿಸಿಕೊಂಡು ಬರುವೆನು” ಎಂದನು.
І сказав до царя Авішай, син Церуї: „Нащо проклинає цей мертвий пес мого пана царя? Піду́ я, і зітну́ йому голову!“
10 ೧೦ ಅದಕ್ಕೆ ಅರಸನು, “ಚೆರೂಯಳ ಮಕ್ಕಳೇ, ನಾನು ನಿಮಗೇನು ಮಾಡಿದೆ? ಬಹುಶಃ ಅವನು ನನ್ನನ್ನು ಶಪಿಸಿದ್ದಾನೆ, ಏಕೆಂದರೆ, ‘ದಾವೀದನನ್ನು ಶಪಿಸು’ ಎಂದು ಯೆಹೋವನೇ ಅವನಿಗೆ ಆಜ್ಞಾಪಿಸಿದ ಮೇಲೆ ‘ನೀನು ಹೀಗೇಕೆ ಮಾಡಿದಿ?’ ಎಂದು ಅವನನ್ನು ಕೇಳುವವರು ಯಾರು?” ಎಂದು ಉತ್ತರ ಕೊಟ್ಟನು.
А цар відказав: „Що́ обходить це мене та вас, сини Церуїні? Що він проклинає, то це Господь йому сказав: Прокляни Давида! А хто скаже: На́що ти так зробив?“
11 ೧೧ ಇದಲ್ಲದೆ ಅವನು ಅಬೀಷೈಗೂ ತನ್ನ ಎಲ್ಲಾ ಸೇವಕರಿಗೂ, “ನೋಡಿರಿ, ನನ್ನಿಂದ ಹುಟ್ಟಿದ ನನ್ನ ಮಗನೇ ನನ್ನ ಪ್ರಾಣವನ್ನು ತೆಗೆಯಬೇಕೆಂದಿರುವಲ್ಲಿ ಈ ಬೆನ್ಯಾಮೀನನು ಹೀಗೆ ಮಾಡುವುದು ಯಾವ ದೊಡ್ಡ ಮಾತು? ಬಿಡಿರಿ, ಅವನು ಶಪಿಸಲಿ. ಹೀಗೆ ಮಾಡಬೇಕೆಂದು ಯೆಹೋವನೇ ಅವನಿಗೆ ಆಜ್ಞಾಪಿಸಿದ್ದಾನೆ.
І сказав Давид до Авішая та до всіх своїх слуг: „Ось син мій, що вийшов з утро́би моє́ї, шукає моєї душі, а що́ вже говорити про цього веніями́нівця! Дайте йому спо́кій, і нехай проклинає, бо так наказав йому зробити Господь!
12 ೧೨ ಒಂದು ವೇಳೆ ಯೆಹೋವನು ನನ್ನ ಕಷ್ಟವನ್ನು ನೋಡಿ ಈ ಹೊತ್ತಿನ ಶಾಪಕ್ಕೆ ಬದಲಾಗಿ ನನಗೆ ಶುಭವನ್ನು ಅನುಗ್ರಹಿಸಾನು” ಎಂದು ಹೇಳಿದನು.
Може зглянеться Господь над моєю бідою, і пове́рне мені цього дня добром замість його прокляття“.
13 ೧೩ ದಾವೀದನೂ ಅವನ ಜನರೂ ದಾರಿ ಹಿಡಿದು ಹೋಗುವಾಗ ಶಿಮ್ಮಿಯು ಶಪಿಸುತ್ತಾ, ಕಲ್ಲೆಸೆಯುತ್ತಾ, ಮಣ್ಣೆರೆಚುತ್ತಾ ಗುಡ್ಡದ ಪಕ್ಕದಲ್ಲೇ ನಡೆಯುತ್ತಿದ್ದನು.
І йшов Давид та люди його дорогою, а Шім'ї́ йшов узбіччям гори навпроти нього. І він ішов та все проклинав, і кидав камінням на нього, та поро́шив по́рохом.
14 ೧೪ ಅರಸನೂ ಅವನ ಜೊತೆಯಲ್ಲಿ ಬಂದವರೆಲ್ಲರೂ ದಣಿದವರಾಗಿ, ಹೋಗಬೇಕಾದ ಸ್ಥಳವನ್ನು ಸೇರಿ, ಅಲ್ಲಿ ವಿಶ್ರಮಿಸಿಕೊಂಡರು.
І прийшов цар та ввесь народ, що був із ним, зму́чені, і відідхну́ли там.
15 ೧೫ ಅಬ್ಷಾಲೋಮನು ಎಲ್ಲಾ ಇಸ್ರಾಯೇಲರೊಡನೆ ಯೆರೂಸಲೇಮಿಗೆ ಬಂದನು. ಅಹೀತೋಫೇಲನೂ ಅವನ ಸಂಗಡ ಇದ್ದನು.
А Авесало́м та ввесь ізра́їльський народ увійшли до Єрусалиму, а з ними Ахіто́фел.
16 ೧೬ ಅರ್ಕಿಯನೂ ದಾವೀದನ ಸ್ನೇಹಿತನೂ ಆಗಿದ್ದ ಹೂಷೈಯು ಅಬ್ಷಾಲೋಮನ ಬಳಿಗೆ ಬಂದು, “ಅರಸನು ಚಿರಂಜೀವಿಯಾಗಿರಲಿ, ಅರಸನು ಚಿರಂಜೀವಿಯಾಗಿರಲಿ” ಎಂದು ಕೂಗಿದನು.
І сталося, як прийшов аркеянин Хуша́й, Давидів товариш, до Авесалома, то сказав Хушай до Авесалома: „Нехай живе цар, нехай живе цар!“
17 ೧೭ ಅಬ್ಷಾಲೋಮನು ಅವನಿಗೆ “ಸ್ನೇಹಿತನ ಬಗ್ಗೆ ನಿನಗಿರುವ ಪ್ರಾಮಾಣಿಕತೆ ಪ್ರೀತಿ ಇಷ್ಟೇತಾನೇ? ನೀನು ನಿನ್ನ ಸ್ನೇಹಿತನೊಡನೆ ಯಾಕೆ ಹೋಗಲಿಲ್ಲ?” ಅಂದನು.
І сказав Авесало́м до Хуша́я: „Це така ласка твоя з при́ятелем твоїм? Чому не пішов ти з своїм при́ятелем?“
18 ೧೮ ಅದಕ್ಕೆ ಹೂಷೈಯು, “ಹಾಗಲ್ಲ ಯೆಹೋವನೂ, ಈ ಜನರೂ, ಎಲ್ಲಾ ಇಸ್ರಾಯೇಲರೂ ಯಾರನ್ನು ಆರಿಸಿದ್ದಾರೋ ನಾನು ಅವನ ಪಕ್ಷದವನಾಗಿರುತ್ತೇನೆ. ನಾನು ಅವನ ಬಳಿಯಲ್ಲಿ ವಾಸಿಸುವೆನು.
І сказав Хуша́й до Авесалома: „Ні, бо кого вибрав Господь та цей народ, та кожен Ізраїлів муж, то я буду його, і з ним позоста́нуся.
19 ೧೯ ಇದಲ್ಲದೆ ನಾನು ಈಗ ಸೇವೆಮಾಡಬೇಕೆಂದಿರುವುದು ರಾಜಪುತ್ರನ ಸನ್ನಿಧಿಯಲ್ಲಿ ಅಲ್ಲವೇ? ನಿನ್ನ ತಂದೆಯ ಸನ್ನಿಧಿಯಲ್ಲಿ ಸೇವೆ ಸಲ್ಲಿಸಿದಂತೆ ನಿನ್ನ ಸನ್ನಿಧಿಯಲ್ಲಿಯೂ ಸೇವೆ ಸಲ್ಲಿಸುವೆನು” ಎಂದು ಉತ್ತರ ಕೊಟ್ಟನು.
А подруге, кому я буду служити? Чи ж не синові його? Як служив я ба́тькові твоєму, так буду й тобі“.
20 ೨೦ ಅನಂತರ ಅಬ್ಷಾಲೋಮನು, “ನಾವು ಈಗ ಮಾಡತಕ್ಕದ್ದೇನು? ಆಲೋಚನೆ ಹೇಳು” ಎಂಬುದಾಗಿ ಅಹೀತೋಫೆಲನನ್ನು ಕೇಳಿದನು.
І сказав Авесало́м до Ахіто́фела: „Дайте пораду, що маємо робити“.
21 ೨೧ ಆಗ ಅಹೀತೋಫೆಲನು, “ಹೋಗಿ ನಿನ್ನ ತಂದೆಯು ಮನೆಕಾಯುವುದಕ್ಕೆ ಬಿಟ್ಟಿರುವ ಅವನ ಉಪಪತ್ನಿಯರೊಡನೆ ಸಂಗಮಿಸು. ಹೀಗೆ ಮಾಡುವುದಾದರೆ ನೀನು ನಿನ್ನ ತಂದೆಗೆ ವೈರಿಯಾಗುವೆ ಎಂದು ಎಲ್ಲಾ ಇಸ್ರಾಯೇಲ್ಯರಿಗೆ ತಿಳಿಯುವುದರಿಂದ ನಿನ್ನ ಪಕ್ಷದವರು ಬಲಗೊಳ್ಳುವರು” ಎಂದು ಉತ್ತರ ಕೊಟ್ಟನು.
І сказав Ахіто́фел до Авесалома: „Прийди до наложниць свого батька, яких він позоставив стерегти дім. І коли почує ввесь Ізраїль, що став ти зненави́джений у свого батька, то зміцняться руки всім, хто з тобою“.
22 ೨೨ ಆಗ ಅವರು ಅಬ್ಷಾಲೋಮನಿಗೋಸ್ಕರ ಮಾಳಿಗೆಯ ಮೇಲೆ ಗುಡಾರ ಹಾಕಿದರು. ಅವನು ಎಲ್ಲಾ ಇಸ್ರಾಯೇಲ್ಯರ ಮುಂದೆಯೇ ತನ್ನ ತಂದೆಯ ಉಪಪತ್ನಿಗಳನ್ನು ಸಂಗಮಿಸಿದನು.
І розтягли́ Авесаломові намета на даху́, і Авесалом прийшов до наложниць батька свого на оча́х усього Ізраїля.
23 ೨೩ ಆ ಕಾಲದಲ್ಲಿ ಅಹೀತೋಫೆಲನ ಆಲೋಚನೆಗಳಿಗೆ ದೈವೋತ್ತರಗಳಿರುವಷ್ಟು ಬೆಲೆಯಿತ್ತು. ದಾವೀದನೂ ಮತ್ತು ಅಬ್ಷಾಲೋಮನೂ ಅವನ ಆಲೋಚನೆಗಳನ್ನು ಗೌರವಿಸುತ್ತಿದ್ದರು.
А Ахіто́фелова порада, яку він радив тими днями, була така певна, як питати про Боже слово, — така була Ахіто́фелова порада і для Давида, і для Авесалома!

< ಸಮುವೇಲನು - ದ್ವಿತೀಯ ಭಾಗ 16 >