< ಸಮುವೇಲನು - ದ್ವಿತೀಯ ಭಾಗ 11 >
1 ೧ ರಾಜರೆಲ್ಲರು ಸಾಮಾನ್ಯವಾಗಿ ವಸಂತಕಾಲದ ಪ್ರಾರಂಭದಲ್ಲಿ ಯುದ್ಧಕ್ಕೆ ಹೊರಡುವ ಸಮಯವನ್ನು ಗೊತ್ತುಮಾಡುತ್ತಿದ್ದರು. ದಾವೀದನು ಯೋವಾಬನನ್ನೂ, ತನ್ನ ಸೇವಕರನ್ನೂ ಎಲ್ಲಾ ಇಸ್ರಾಯೇಲ್ಯರನ್ನೂ ಯುದ್ಧಕ್ಕೆ ಕಳುಹಿಸಿದನು. ಇವರು ಹೋಗಿ ಅಮ್ಮೋನಿಯರ ಪ್ರಾಂತ್ಯಗಳನ್ನು ನಾಶ ಮಾಡಿ ರಬ್ಬಕ್ಕೆ ಮುತ್ತಿಗೆ ಹಾಕಿದರು. ಆದರೆ ದಾವೀದನು ಯೆರೂಸಲೇಮಿನಲ್ಲಿಯೇ ಇದ್ದನು.
Εν δε τω ακολούθω έτει, καθ' ον καιρόν εκστρατεύουσιν οι βασιλείς, απέστειλεν ο Δαβίδ τον Ιωάβ και τους δούλους αυτού μετ' αυτού και πάντα τον Ισραήλ· και κατέστρεψαν τους υιούς Αμμών και επολιόρκησαν την Ραββά. Ο δε Δαβίδ έμεινεν εν Ιερουσαλήμ.
2 ೨ ಅವನು ಒಂದು ದಿನ ಸಂಜೆ ಹೊತ್ತಿನಲ್ಲಿ ಅರಮನೆಯ ಮಾಳಿಗೆಯ ಮೇಲೆ ತಿರುಗಾಡುತ್ತಿದ್ದನು. ಅವನು ಅಲ್ಲಿಂದ ಬಹು ಸುಂದರಿಯಾದ ಒಬ್ಬ ಸ್ತ್ರೀ ಸ್ನಾನಮಾಡುವುದನ್ನು ಕಂಡನು.
Και προς το εσπέρας, ότε ο Δαβίδ εσηκώθη από της κλίνης αυτού, περιεπάτει επί του δώματος του βασιλικού οίκου· και είδεν από του δώματος γυναίκα λουομένην· και η γυνή ήτο ώραία την όψιν σφόδρα.
3 ೩ ಕೂಡಲೆ ದಾವೀದನು ಒಬ್ಬನನ್ನು ಕರೆದು, “ಆ ಸ್ತ್ರೀ ಯಾರು?” ಎಂದು ವಿಚಾರಿಸಲು ಅವನು, “ಆಕೆಯು ಎಲೀಯಾಮನ ಮಗಳೂ, ಹಿತ್ತಿಯನಾದ ಊರೀಯನ ಹೆಂಡತಿಯೂ ಆಗಿರುವ ಬತ್ಷೆಬೆ ಅಲ್ಲವೇ?” ಎಂದು ಉತ್ತರ ಕೊಟ್ಟನು.
Και απέστειλεν ο Δαβίδ και ηρεύνησε περί της γυναικός. Και είπε τις, Δεν είναι αύτη Βηθ-σαβεέ, η θυγάτηρ του Ελιάμ, η γυνή Ουρίου του Χετταίου;
4 ೪ ಆಗ ದಾವೀದನು ಆಗ ತಾನೇ ಋತುಸ್ನಾನಮಾಡಿಕೊಂಡಿದ್ದ ಆಕೆಯನ್ನು ಕರೆದು ತರುವಂತೆ ದೂತರನ್ನು ಕಳುಹಿಸಿದನು. ಆಕೆಯು ಬರಲು ಅವನು ಆಕೆಯನ್ನು ಸಂಗಮಿಸಿದನು. ಅನಂತರ ಆಕೆಯು ತನ್ನ ಮನೆಗೆ ಹೋದಳು.
Και απέστειλεν ο Δαβίδ μηνυτάς και έλαβεν αυτήν· και ότε ήλθε προς αυτόν, εκοιμήθη μετ' αυτής, διότι είχε καθαρισθή από της ακαθαρσίας αυτής· και επέστρεψεν εις τον οίκον αυτής.
5 ೫ ಆಕೆಯು ತಾನು ಗರ್ಭಧರಿಸಿದ್ದು ಗೊತ್ತಾದಾಗ ದಾವೀದನಿಗೆ ವರ್ತಮಾನ ಕಳುಹಿಸಿದಳು.
Και συνέλαβεν η γυνή· και αποστείλασα απήγγειλε προς τον Δαβίδ και είπεν, Έγκυος είμαι.
6 ೬ ಆಗ ದಾವೀದನು ದೂತರ ಮುಖಾಂತರವಾಗಿ ಯೋವಾಬನಿಗೆ, “ಹಿತ್ತಿಯನಾದ ಊರೀಯನನ್ನು ನನ್ನ ಬಳಿಗೆ ಕಳುಹಿಸು” ಎಂದು ಹೇಳಿ ಕಳುಹಿಸಿದನು. ಅವನು ಊರೀಯನನ್ನು ಕಳುಹಿಸಿದನು.
Και απέστειλεν ο Δαβίδ προς τον Ιωάβ, λέγων, Απόστειλόν μοι Ουρίαν τον Χετταίον. Και απέστειλεν ο Ιωάβ τον Ουρίαν προς τον Δαβίδ.
7 ೭ ಊರೀಯನು ಬಂದಾಗ ದಾವೀದನು, “ಯೋವಾಬನೂ ಮತ್ತು ಸೈನ್ಯದವರೂ ಹೇಗಿರುತ್ತಾರೆ? ಯುದ್ಧವು ಹೇಗೆ ನಡೆದಿದೆ?” ಎಂದು ವಿಚಾರಿಸಿದ, ನಂತರ
Και ότε ήλθε προς αυτόν ο Ουρίας, ηρώτησεν ο Δαβίδ πως έχει ο Ιωάβ και πως έχει ο λαός και πως έχουσι τα του πολέμου.
8 ೮ ಅವನಿಗೆ, “ಮನೆಗೆ ಹೋಗಿ ಕೈಕಾಲು ತೊಳೆದುಕೋ” ಎಂದು ಹೇಳಿದನು. ಊರೀಯನು ಅರಮನೆಯಿಂದ ಹೊರಟ ಕೂಡಲೆ ಅವನ ಹಿಂದೆಯೆ ಅರಸನ ಭೋಜನ ಪದಾರ್ಥಗಳು ಹೋದವು.
Και είπεν ο Δαβίδ προς τον Ουρίαν, Κατάβα εις τον οίκόν σου και νίψον τους πόδας σου· και εξήλθεν ο Ουρίας εκ του οίκου του βασιλέως· και κατόπιν αυτού ήλθε μερίδιον από της τραπέζης του βασιλέως.
9 ೯ ಆದರೆ ಊರೀಯನು ತನ್ನ ಮನೆಗೆ ಹೋಗದೆ ಅರಸನ ಸೇವಕರೊಡನೆ ಅರಮನೆಯ ಬಾಗಿಲಲ್ಲೇ ಮಲಗಿಕೊಂಡನು.
Αλλ' ο Ουρίας εκοιμήθη παρά την θύραν του οίκου του βασιλέως, μετά πάντων των δούλων του κυρίου αυτού και δεν κατέβη εις τον οίκον αυτού.
10 ೧೦ ಊರೀಯನು ತನ್ನ ಮನೆಗೆ ಹೋಗಲಿಲ್ಲ ಎಂಬ ವರ್ತಮಾನವು ದಾವೀದನಿಗೆ ತಿಳಿದಾಗ ಅವನು ಊರೀಯನಿಗೆ, “ನೀನು ಪ್ರಯಾಣಮಾಡಿಕೊಂಡು ಬಂದಿಯಲ್ಲಾ, ಯಾಕೆ ಮನೆಗೆ ಹೋಗಲಿಲ್ಲ?” ಅಂದನು.
Και ότε απήγγειλαν προς τον Δαβίδ, λέγοντες, Δεν κατέβη ο Ουρίας εις τον οίκον αυτού, είπεν ο Δαβίδ προς τον Ουρίαν, Συ δεν έρχεσαι εξ οδοιπορίας; διά τι δεν κατέβης εις τον οίκόν σου;
11 ೧೧ ಅದಕ್ಕೆ ಊರೀಯನು, “ಒಡಂಬಡಿಕೆಯ ಮಂಜೂಷವೂ, ಇಸ್ರಾಯೇಲ್ಯರೂ, ಯೆಹೂದ್ಯರೂ ಗುಡಾರಗಳಲ್ಲಿ ವಾಸವಾಗಿದ್ದಾರೆ. ನನ್ನ ಒಡೆಯನಾದ ಯೋವಾಬನೂ, ಅವನ ಸೇವಕರೂ ಬಯಲಿನಲ್ಲಿ ಪಾಳೆಯಮಾಡಿಕೊಂಡಿದ್ದಾರೆ. ಹೀಗಿರುವಾಗ ನಾನು ಮಾತ್ರ ನನ್ನ ಮನೆಗೆ ಹೋಗಿ ಊಟಮಾಡಿ, ಕುಡಿದು, ಹೆಂಡತಿಯೊಡನೆ ಮಲಗಿಕೊಳ್ಳುವುದು ಹೇಗೆ? ನಿನ್ನಾಣೆ, ನಿನ್ನ ಜೀವದ ಆಣೆ, ನಾನು ಇಂಥದ್ದನ್ನು ಮಾಡುವುದೇ ಇಲ್ಲ” ಎಂದು ಉತ್ತರಕೊಟ್ಟನು.
Και είπεν ο Ουρίας προς τον Δαβίδ, Η κιβωτός και ο Ισραήλ και ο Ιούδας κατοικούσιν εν σκηναίς, και ο κύριός μου Ιωάβ και οι δούλοι του κυρίου μου, είναι εστρατοπεδευμένοι επί το πρόσωπον της πεδιάδος· και εγώ θέλω υπάγει εις τον οίκόν μου, διά να φάγω και να πίω και να κοιμηθώ μετά της γυναικός μου; ζης και ζη η ψυχή σου, δεν θέλω κάμει το πράγμα τούτο.
12 ೧೨ ಆಗ ದಾವೀದನು ಅವನಿಗೆ, “ನೀನು ಈ ಹೊತ್ತು ಇಲ್ಲೇ ಇರು. ನಾಳೆ ನಿನ್ನನ್ನು ಕಳುಹಿಸುತ್ತೇನೆ” ಎಂದು ಆಜ್ಞಾಪಿಸಿದನು. ಊರೀಯನು ಆ ದಿನ ಯೆರೂಸಲೇಮಿನಲ್ಲೇ ಇದ್ದನು.
Και είπεν ο Δαβίδ προς τον Ουρίαν, Μείνε ενταύθα και σήμερον, και αύριον θέλω σε εξαποστείλει. Και έμεινεν ο Ουρίας εν Ιερουσαλήμ την ημέραν εκείνην και την επαύριον.
13 ೧೩ ಮರುದಿನ ದಾವೀದನು ಅವನನ್ನು ಅನ್ನಪಾನಗಳನ್ನೂ ತೆಗೆದುಕೊಳ್ಳಬೇಕೆಂದು ತನ್ನ ಮನೆಗೆ ಕರೆದುಕೊಂಡು ಹೋಗಿ, ಮತ್ತನನ್ನಾಗಿ ಮಾಡಿದನು. ಆದರೆ ಆ ರಾತ್ರಿಯಲ್ಲಿಯೂ ಅವನು ಹೋಗಿ ಯಜಮಾನನ ಸೇವಕರ ಹತ್ತಿರ ಹಾಸಿಗೆ ಹಾಸಿಕೊಂಡು ಮಲಗಿಕೊಂಡನೇ ಹೊರತು ತನ್ನ ಮನೆಗೆ ಹೋಗಲಿಲ್ಲ.
Και εκάλεσεν αυτόν ο Δαβίδ, και έφαγεν ενώπιον αυτού και έπιεν· και εμέθυσεν αυτόν· και το εσπέρας εξήλθε να κοιμηθή επί της κλίνης αυτού μετά των δούλων του κυρίου αυτού, πλην εις τον οίκον αυτού δεν κατέβη.
14 ೧೪ ಮರುದಿನ ಬೆಳಿಗ್ಗೆ ದಾವೀದನು ಯೋವಾಬನಿಗೆ ಒಂದು ಪತ್ರವನ್ನು ಬರೆದು ಅದನ್ನು ಊರೀಯನ ಕೈಯಲ್ಲಿ ಕೊಟ್ಟು ಕಳುಹಿಸಿದನು.
Και το πρωΐ έγραψεν ο Δαβίδ επιστολήν προς τον Ιωάβ, και έστειλεν αυτήν διά χειρός του Ουρίου.
15 ೧೫ ಅದರಲ್ಲಿ, “ಊರೀಯನು ಗಾಯಗೊಂಡು ಸಾಯುವಂತೆ ಅವನನ್ನು ಘೋರ ಯುದ್ಧ ನಡೆಯುತ್ತಿರುವ ಕಡೆ ಮುಂಭಾಗದಲ್ಲಿ ನಿಲ್ಲಿಸಿ, ನೀವು ಹಿಂದಕ್ಕೆ ಸರಿದುಕೊಳ್ಳಿರಿ” ಎಂಬುದಾಗಿ ಬರೆದಿದ್ದನು.
Και έγραψεν εν τη επιστολή, λέγων, Θέσατε τον Ουρίαν απέναντι της σκληροτέρας μάχης· έπειτα σύρθητε απ' αυτού, διά να κτυπηθή και να αποθάνη.
16 ೧೬ ಯೋವಾಬನು ಪಟ್ಟಣಕ್ಕೆ ಮುತ್ತಿಗೆ ಹಾಕುವಾಗ ಶೂರರಾದ ಶತ್ರುಸೈನಿಕರು ಎಲ್ಲಿರುತ್ತಾರೆಂದು ಗೊತ್ತುಮಾಡಿಕೊಂಡು ಊರೀಯನನ್ನು ಅಲ್ಲಿ ನಿಲ್ಲಿಸಿದನು.
Και αφού παρετήρησε την πόλιν ο Ιωάβ, διώρισε τον Ουρίαν εις θέσιν, όπου ήξευρεν ότι ήσαν άνδρες δυνάμεως.
17 ೧೭ ಆ ಊರಿನ ಜನರು ಹೊರಗೆ ಬಂದು ಯೋವಾಬನೊಡನೆ ಕಾದಾಡಿದಾಗ ದಾವೀದನ ಸೇವಕರಲ್ಲಿ ಕೆಲವರು ಸತ್ತರು. ಹಿತ್ತಿಯನಾದ ಊರೀಯನೂ ಸಹ ಸತ್ತನು.
Και εξήλθον οι άνδρες της πόλεως, και επολέμησαν μετά του Ιωάβ· και έπεσον εκ του λαού τινές των δούλων του Δαβίδ· εθανατώθη δε και Ουρίας ο Χετταίος.
18 ೧೮ ಅನಂತರ ಯೋವಾಬನು ಒಬ್ಬ ದೂತನನ್ನು ಕರೆದು ಅವನಿಗೆ, “ನೀನು ಹೋಗಿ ದಾವೀದನಿಗೆ ಯುದ್ಧ ವರ್ತಮಾನವನ್ನೆಲ್ಲಾ ತಿಳಿಸು.
Και απέστειλεν ο Ιωάβ και ανήγγειλε προς τον Δαβίδ πάντα τα περί του πολέμου.
19 ೧೯ ನೀನು ಯುದ್ಧ ಸಮಾಚಾರವನ್ನು ಹೇಳಿ ಮುಗಿಸಿದ ನಂತರ ಅರಸನು ಕೋಪಗೊಂಡು ನಿನ್ನನ್ನು,
Και προσέταξε τον μηνυτήν, λέγων, Αφού τελειώσης λαλών προς τον βασιλέα πάντα τα περί του πολέμου,
20 ೨೦ ‘ನೀವು ಯುದ್ಧ ಮಾಡುವುದಕ್ಕಾಗಿ ಪಟ್ಟಣದ ಸಮೀಪಕ್ಕೆ ಹೋದದ್ದೇಕೆ? ಶತ್ರುಗಳು ಊರಗೋಡೆಯ ಮೇಲಣಿಂದ ಬಾಣಗಳನ್ನು ಎಸೆಯುವರೆಂದು ನಿಮಗೆ ತಿಳಿದಿರಲಿಲ್ಲವೋ?
εξαφθή ο θυμός του βασιλέως, και είπη προς σε, Διά τι επλησιάσατε εις την πόλιν μαχόμενοι; δεν ηξεύρετε ότι ήθελον τοξεύσει από του τείχους;
21 ೨೧ ಯೆರುಬ್ಬೇಷೆತನ ಮಗನಾದ ಅಬೀಮೆಲೇಕನನ್ನು ಕೊಂದವರು ಯಾರು ಎಂದು ನಿಮಗೆ ಗೊತ್ತಿಲ್ಲವೋ? ತೇಬೇಚಿನಲ್ಲಿ ಒಬ್ಬ ಹೆಂಗಸು ಗೋಡೆಯ ಮೇಲಿನಿಂದ ಒಂದು ಬೀಸುವ ಕಲ್ಲನ್ನು ಅವನ ಮೇಲೆ ಎತ್ತಿ ಹಾಕಿ ಅವನನ್ನು ಕೊಂದಳಲ್ಲವೇ. ಹೀಗಿರುವುದರಿಂದ ನೀವು ಗೋಡೆಯ ಸಮೀಪಕ್ಕೆ ಹೋದದ್ದೇಕೆ?’ ಎಂದು ಕೇಳಿದರೆ ನೀನು, ಹಿತ್ತಿಯನಾದ ನಿನ್ನ ಸೇವಕ ಊರೀಯನು ಮೃತನಾದನೆಂದು ಹೇಳು” ಎಂಬುದಾಗಿ ಆಜ್ಞಾಪಿಸಿ ಅವನನ್ನು ಕಳುಹಿಸಿದನು.
τις επάταξεν Αβιμέλεχ τον υιόν του Ιερουβέσεθ; γυνή τις δεν έρριψεν επ' αυτόν τμήμα μυλοπέτρας από του τείχους, και απέθανεν εν Θαιβαίς; διά τι επλησιάσατε εις το τείχος; τότε ειπέ, Απέθανε και ο δούλός σου Ουρίας ο Χετταίος.
22 ೨೨ ಆ ದೂತನು ಹೋಗಿ ಯೋವಾಬನ ಆಜ್ಞೆಯಂತೆ ದಾವೀದನಿಗೆ ತಿಳಿಸಿದ್ದೇನೆಂದರೆ,
Υπήγε λοιπόν ο μηνυτής και ελθών, απήγγειλε προς τον Δαβίδ πάντα εκείνα, διά τα οποία απέστειλεν αυτόν ο Ιωάβ.
23 ೨೩ “ಆ ಊರಿನವರು ಮಹಾಸೈನ್ಯಬಲದೊಡನೆ ಯುದ್ಧಮಾಡುವುದಕ್ಕೆ ಬಯಲಿಗೆ ಬಂದರು. ನಾವು ಅವರನ್ನು ಊರ ಬಾಗಿಲಿನವರೆಗೂ ಹಿಂದಟ್ಟಿದೆವು.
Και είπεν ο μηνυτής προς τον Δαβίδ, ότι υπερίσχυσαν καθ' ημών οι άνδρες και εξήλθον προς ημάς εις την πεδιάδα, και κατεδιώξαμεν αυτούς μέχρι της εισόδου της πύλης·
24 ೨೪ ಆಗ ಬಿಲ್ಲುಗಾರರು ಗೋಡೆಯ ಮೇಲಿನಿಂದ ನಿನ್ನ ಸೇವಕರ ಮೇಲೆ ಬಾಣಗಳನ್ನು ಎಸೆದದ್ದರಿಂದ ಅವರಲ್ಲಿ ಕೆಲವರು ಸತ್ತರು. ಹಿತ್ತಿಯನಾದ ನಿನ್ನ ಸೇವಕ ಊರೀಯನೂ ಸತ್ತನು” ಎಂದನು.
αλλ' οι τοξόται ετόξευσαν από του τείχους επί τους δούλους σου· και τινές των δούλων του βασιλέως απέθανον, και ο δούλός σου έτι Ουρίας ο Χετταίος απέθανε.
25 ೨೫ ಅದಕ್ಕೆ ದಾವೀದನು ದೂತನಿಗೆ, “ನೀನು ಹೋಗು, ಇದಕ್ಕೋಸ್ಕರ ವ್ಯಸನಪಡಬೇಡ. ಕತ್ತಿಯು ಈ ಹೊತ್ತು ಒಬ್ಬನನ್ನು ನುಂಗಿದರೆ, ನಾಳೆ ಇನ್ನೊಬ್ಬನನ್ನು ನುಂಗುವುದು, ಮತ್ತಷ್ಟು ಶೂರತನದಿಂದ ಯುದ್ಧಮಾಡಿ ಪಟ್ಟಣವನ್ನು ಕೆಡವಿಬಿಡಿರಿ ಎಂಬುದಾಗಿ ಅರಸನು ಆಜ್ಞಾಪಿಸುತ್ತಾನೆ ಎಂದು ಯೋವಾಬನಿಗೆ ಹೇಳಿ ಅವನನ್ನು ಧೈರ್ಯಪಡಿಸು” ಎಂದನು.
Τότε είπεν ο Δαβίδ προς τον μηνυτήν, Ούτω θέλεις ειπεί προς τον Ιωάβ· Μη σε ανησυχή τούτο το πράγμα· διότι η ρομφαία κατατρώγει ποτέ μεν ένα, ποτέ δε άλλον· ενίσχυσον την μάχην σου εναντίον της πόλεως και κατάστρεψον αυτήν· και συ ενθάρρυνε αυτόν.
26 ೨೬ ಊರೀಯನ ಮರಣದ ವಾರ್ತೆಯನ್ನು ಅವನ ಹೆಂಡತಿಯು ಕೇಳಿ ಗಂಡನಿಗೋಸ್ಕರ ಗೋಳಾಡಿದಳು.
Ότε δε ήκουσεν η γυνή του Ουρίου, ότι Ουρίας ο ανήρ αυτής απέθανεν, επένθησε διά τον άνδρα αυτής.
27 ೨೭ ದುಃಖಕಾಲವು ತೀರಿದ ನಂತರ ದಾವೀದನು ಆಕೆಯನ್ನು ತನ್ನ ಮನೆಗೆ ಕರತರಿಸಿ, ತನ್ನ ಹೆಂಡತಿಯನ್ನಾಗಿ ಮಾಡಿಕೊಂಡನು. ಆಕೆಯು ಅವನಿಂದ ಒಬ್ಬ ಮಗನನ್ನು ಹೆತ್ತಳು. ದಾವೀದನು ಮಾಡಿದ ಈ ಕೃತ್ಯಗಳು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದೂ, ಅನೀತಿಯೂ ಆಗಿತ್ತು.
Και αφού επέρασε το πένθος, απέστειλεν ο Δαβίδ και παρέλαβεν αυτήν εις τον οίκον αυτού· και έγεινε γυνή αυτού και εγέννησεν εις αυτόν υιόν· το πράγμα όμως το οποίον έπραξεν ο Δαβίδ, εφάνη κακόν εις τους οφθαλμούς του Κυρίου.