< ಪೇತ್ರನು ಬರೆದ ಎರಡನೆಯ ಪತ್ರಿಕೆ 1 >

1 ಯೇಸು ಕ್ರಿಸ್ತನ ದಾಸನೂ ಅಪೊಸ್ತಲನೂ ಆಗಿರುವ ಸಿಮೆಯೋನ ಪೇತ್ರನು ನಮ್ಮ ದೇವರು ಮತ್ತು ರಕ್ಷಕನಾದ ಯೇಸು ಕ್ರಿಸ್ತನ ನೀತಿಯಿಂದ ನಮ್ಮಂತೆಯೇ ಅಮೂಲ್ಯವಾದ ನಂಬಿಕೆಯನ್ನು ಹೊಂದಿದವರಿಗೆ ಬರೆಯುವುದೇನಂದರೆ,
ಯೇ ಜನಾ ಅಸ್ಮಾಭಿಃ ಸಾರ್ದ್ಧಮ್ ಅಸ್ತದೀಶ್ವರೇ ತ್ರಾತರಿ ಯೀಶುಖ್ರೀಷ್ಟೇ ಚ ಪುಣ್ಯಸಮ್ಬಲಿತವಿಶ್ವಾಸಧನಸ್ಯ ಸಮಾನಾಂಶಿತ್ವಂ ಪ್ರಾಪ್ತಾಸ್ತಾನ್ ಪ್ರತಿ ಯೀಶುಖ್ರೀಷ್ಟಸ್ಯ ದಾಸಃ ಪ್ರೇರಿತಶ್ಚ ಶಿಮೋನ್ ಪಿತರಃ ಪತ್ರಂ ಲಿಖತಿ|
2 ದೇವರನ್ನು ಕುರಿತಾಗಿಯೂ, ನಮ್ಮ ಕರ್ತನಾದ ಯೇಸು ಕ್ರಿಸ್ತನ ವಿಷಯವಾಗಿಯೂ ಇರುವ ಪರಿಜ್ಞಾನದಲ್ಲಿ ನಿಮಗೆ ಕೃಪೆಯೂ, ಶಾಂತಿಯೂ ಹೆಚ್ಚುಹೆಚ್ಚಾಗಿ ದೊರೆಯಲಿ.
ಈಶ್ವರಸ್ಯಾಸ್ಮಾಕಂ ಪ್ರಭೋ ರ್ಯೀಶೋಶ್ಚ ತತ್ವಜ್ಞಾನೇನ ಯುಷ್ಮಾಸ್ವನುಗ್ರಹಶಾನ್ತ್ಯೋ ರ್ಬಾಹುಲ್ಯಂ ವರ್ತ್ತತಾಂ|
3 ನಮ್ಮನ್ನು ತನ್ನ ಮಹಿಮೆಯಿಂದಲೂ, ಗುಣಾತಿಶಯದಿಂದಲೂ ಕರೆದ ದೇವರ ವಿಷಯವಾಗಿ ಯೇಸುವಿನ ದಿವ್ಯಶಕ್ತಿಯು ನಮಗೆ ದೈವಿಕ ಪರಿಜ್ಞಾನವನ್ನು ಕೊಟ್ಟಿರುವುದರ ಮೂಲಕ ಜೀವಕ್ಕೂ, ಭಕ್ತಿಗೂ ಬೇಕಾದದ್ದೆಲ್ಲವನ್ನೂ ದಾನಮಾಡಲಾಗಿದೆಯೆಂದು ನಾವು ಬಲ್ಲೆವು.
ಜೀವನಾರ್ಥಮ್ ಈಶ್ವರಭಕ್ತ್ಯರ್ಥಞ್ಚ ಯದ್ಯದ್ ಆವಶ್ಯಕಂ ತತ್ ಸರ್ವ್ವಂ ಗೌರವಸದ್ಗುಣಾಭ್ಯಾಮ್ ಅಸ್ಮದಾಹ್ವಾನಕಾರಿಣಸ್ತತ್ತ್ವಜ್ಞಾನದ್ವಾರಾ ತಸ್ಯೇಶ್ವರೀಯಶಕ್ತಿರಸ್ಮಭ್ಯಂ ದತ್ತವತೀ|
4 ನೀವು ಲೋಕದಲ್ಲಿ ದುರಾಶೆಯಿಂದುಂಟಾಗುವ ಕೆಟ್ಟತನದಿಂದ ದೂರವಾಗಿ ದೈವಸ್ವಭಾವದಲ್ಲಿ ಪಾಲನ್ನು ಹೊಂದುವವರಾಗಬೇಕೆಂಬ ಉದ್ದೇಶದಿಂದ ದೇವರು ತನ್ನ ಅತ್ಯಂತ ಮಹತ್ವವುಳ್ಳ ಮತ್ತು ಅಮೂಲ್ಯವಾದ ವಾಗ್ದಾನಗಳನ್ನು ನಮಗೆ ದಯಪಾಲಿಸಿದ್ದಾನೆ.
ತತ್ಸರ್ವ್ವೇಣ ಚಾಸ್ಮಭ್ಯಂ ತಾದೃಶಾ ಬಹುಮೂಲ್ಯಾ ಮಹಾಪ್ರತಿಜ್ಞಾ ದತ್ತಾ ಯಾಭಿ ರ್ಯೂಯಂ ಸಂಸಾರವ್ಯಾಪ್ತಾತ್ ಕುತ್ಸಿತಾಭಿಲಾಷಮೂಲಾತ್ ಸರ್ವ್ವನಾಶಾದ್ ರಕ್ಷಾಂ ಪ್ರಾಪ್ಯೇಶ್ವರೀಯಸ್ವಭಾವಸ್ಯಾಂಶಿನೋ ಭವಿತುಂ ಶಕ್ನುಥ|
5 ಈ ಕಾರಣದಿಂದಲೇ ನೀವು ಪೂರ್ಣಾಸಕ್ತಿಯುಳ್ಳವರಾಗಿ ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ, ಸದ್ಗುಣಕ್ಕೆ ಜ್ಞಾನವನ್ನೂ,
ತತೋ ಹೇತೋ ರ್ಯೂಯಂ ಸಮ್ಪೂರ್ಣಂ ಯತ್ನಂ ವಿಧಾಯ ವಿಶ್ವಾಸೇ ಸೌಜನ್ಯಂ ಸೌಜನ್ಯೇ ಜ್ಞಾನಂ
6 ಜ್ಞಾನಕ್ಕೆ ದಮೆಯನ್ನೂ, ದಮೆಗೆ ತಾಳ್ಮೆಯನ್ನೂ,
ಜ್ಞಾನ ಆಯತೇನ್ದ್ರಿಯತಾಮ್ ಆಯತೇನ್ದ್ರಿಯತಾಯಾಂ ಧೈರ್ಯ್ಯಂ ಧೈರ್ಯ್ಯ ಈಶ್ವರಭಕ್ತಿಮ್
7 ತಾಳ್ಮೆಗೆ ಭಕ್ತಿಯನ್ನೂ, ಭಕ್ತಿಗೆ ಸಹೋದರ ಸ್ನೇಹವನ್ನೂ, ಸಹೋದರ ಸ್ನೇಹಕ್ಕೆ ಪ್ರೀತಿಯನ್ನೂ ಕೂಡಿಸಿರಿ.
ಈಶ್ವರಭಕ್ತೌ ಭ್ರಾತೃಸ್ನೇಹೇ ಚ ಪ್ರೇಮ ಯುಙ್ಕ್ತ|
8 ಇವು ನಿಮ್ಮಲ್ಲಿದ್ದು ಬೆಳೆದು ಬಂದರೆ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಕುರಿತಾದ ಪರಿಜ್ಞಾನದಲ್ಲಿ ನೀವು ನಿರುತ್ಸಾಹಿಗಳೂ, ನಿಷ್ಪ್ರಯೋಜಕರೂ ಆಗದಂತೆ ಮಾಡುತ್ತವೆ.
ಏತಾನಿ ಯದಿ ಯುಷ್ಮಾಸು ವಿದ್ಯನ್ತೇ ವರ್ದ್ಧನ್ತೇ ಚ ತರ್ಹ್ಯಸ್ಮತ್ಪ್ರಭೋ ರ್ಯೀಶುಖ್ರೀಷ್ಟಸ್ಯ ತತ್ತ್ವಜ್ಞಾನೇ ಯುಷ್ಮಾನ್ ಅಲಸಾನ್ ನಿಷ್ಫಲಾಂಶ್ಚ ನ ಸ್ಥಾಪಯಿಷ್ಯನ್ತಿ|
9 ಇವುಗಳಿಲ್ಲದವನು ಕುರುಡನಾಗಿದ್ದಾನೆ. ಅವನು ದೂರ ದೃಷ್ಟಿಯಿಲ್ಲದವನಾಗಿದ್ದು ತನ್ನ ಹಿಂದಣ ಪಾಪಗಳು ಪರಿಹಾರವಾಗಿ ತಾನು ಶುದ್ಧನಾದದ್ದನ್ನು ಮರೆತುಬಿಟ್ಟಿದ್ದಾನೆ.
ಕಿನ್ತ್ವೇತಾನಿ ಯಸ್ಯ ನ ವಿದ್ಯನ್ತೇ ಸೋ ಽನ್ಧೋ ಮುದ್ರಿತಲೋಚನಃ ಸ್ವಕೀಯಪೂರ್ವ್ವಪಾಪಾನಾಂ ಮಾರ್ಜ್ಜನಸ್ಯ ವಿಸ್ಮೃತಿಂ ಗತಶ್ಚ|
10 ೧೦ ಆದ್ದರಿಂದ ಸಹೋದರರೇ, ದೇವರಲ್ಲಿ ನಿಮ್ಮ ಕರೆಯುವಿಕೆಯನ್ನೂ, ಆಯ್ಕೆಯನ್ನೂ ದೃಢಪಡಿಸಿಕೊಳ್ಳುವುದಕ್ಕೆ ಮತ್ತಷ್ಟು ಪ್ರಯಾಸಪಡಿರಿ. ಏಕೆಂದರೆ ನೀವು ಹೀಗೆ ಮಾಡುವುದಾದರೆ ಎಂದಿಗೂ ಎಡುವುದಿಲ್ಲ.
ತಸ್ಮಾದ್ ಹೇ ಭ್ರಾತರಃ, ಯೂಯಂ ಸ್ವಕೀಯಾಹ್ವಾನವರಣಯೋ ರ್ದೃಢಕರಣೇ ಬಹು ಯತಧ್ವಂ, ತತ್ ಕೃತ್ವಾ ಕದಾಚ ನ ಸ್ಖಲಿಷ್ಯಥ|
11 ೧೧ ಹೀಗಿರುವುದರಿಂದ ನಮ್ಮ ಕರ್ತನೂ, ರಕ್ಷಕನೂ ಆಗಿರುವ ಯೇಸುಕ್ರಿಸ್ತನ ನಿತ್ಯ ರಾಜ್ಯದಲ್ಲಿ ನಿಮಗೆ ಧಾರಾಳವಾಗಿ ಪ್ರವೇಶವು ದೊರೆಯುವುದು. (aiōnios g166)
ಯತೋ ಽನೇನ ಪ್ರಕಾರೇಣಾಸ್ಮಾಕಂ ಪ್ರಭೋಸ್ತ್ರಾತೃ ರ್ಯೀಶುಖ್ರೀಷ್ಟಸ್ಯಾನನ್ತರಾಜ್ಯಸ್ಯ ಪ್ರವೇಶೇನ ಯೂಯಂ ಸುಕಲೇನ ಯೋಜಯಿಷ್ಯಧ್ವೇ| (aiōnios g166)
12 ೧೨ ಆದ್ದರಿಂದ ನೀವು ಈ ಸಂಗತಿಗಳನ್ನು ತಿಳಿದವರಾಗಿ ನಿಮಗೆ ದೊರೆತಿರುವ ಸತ್ಯದಲ್ಲಿ ಸ್ಥಿರವಾಗಿದ್ದರೂ ಅವುಗಳನ್ನು ನಿಮಗೆ ನೆನಪಿಸಿಕೊಡುವುದಕ್ಕೆ ನಾನು ಯಾವಾಗಲೂ ಸಿದ್ಧವಾಗಿರುವೆನು.
ಯದ್ಯಪಿ ಯೂಯಮ್ ಏತತ್ ಸರ್ವ್ವಂ ಜಾನೀಥ ವರ್ತ್ತಮಾನೇ ಸತ್ಯಮತೇ ಸುಸ್ಥಿರಾ ಭವಥ ಚ ತಥಾಪಿ ಯುಷ್ಮಾನ್ ಸರ್ವ್ವದಾ ತತ್ ಸ್ಮಾರಯಿತುಮ್ ಅಹಮ್ ಅಯತ್ನವಾನ್ ನ ಭವಿಷ್ಯಾಮಿ|
13 ೧೩ ನಾನು ನನ್ನ ದೇಹವೆಂಬ ಗುಡಾರದಲ್ಲಿರುವ ತನಕ ನಿಮ್ಮನ್ನು ನೆನಪುಮಾಡಿಸಿ ಪ್ರೇರೇಪಿಸುವುದು ಯುಕ್ತವೆಂದೆಣಿಸಿದ್ದೇನೆ.
ಯಾವದ್ ಏತಸ್ಮಿನ್ ದೂಷ್ಯೇ ತಿಷ್ಠಾಮಿ ತಾವದ್ ಯುಷ್ಮಾನ್ ಸ್ಮಾರಯನ್ ಪ್ರಬೋಧಯಿತುಂ ವಿಹಿತಂ ಮನ್ಯೇ|
14 ೧೪ ಏಕೆಂದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನು ನನಗೆ ತಿಳಿಸಿದ ಪ್ರಕಾರ ನಾನು ಈ ಗುಡಾರವನ್ನು ಬಿಟ್ಟುಹೋಗುವ ಕಾಲವು ಸಮೀಪವಾಗಿದೆಯೆಂದು ಬಲ್ಲೆನು.
ಯತೋ ಽಸ್ಮಾಕಂ ಪ್ರಭು ರ್ಯೀಶುಖ್ರೀಷ್ಟೋ ಮಾಂ ಯತ್ ಜ್ಞಾಪಿತವಾನ್ ತದನುಸಾರಾದ್ ದೂಷ್ಯಮೇತತ್ ಮಯಾ ಶೀಘ್ರಂ ತ್ಯಕ್ತವ್ಯಮ್ ಇತಿ ಜಾನಾಮಿ|
15 ೧೫ ನೀವು ನನ್ನ ಮರಣಾನಂತರ ಇವುಗಳನ್ನು ಯಾವಾಗಲೂ ಜ್ಞಾಪಕ ಮಾಡಿಕೊಳ್ಳುವುದಕ್ಕಾಗಿ ನಾನು ಆಸಕ್ತಿವಹಿಸುವೆನು.
ಮಮ ಪರಲೋಕಗಮನಾತ್ ಪರಮಪಿ ಯೂಯಂ ಯದೇತಾನಿ ಸ್ಮರ್ತ್ತುಂ ಶಕ್ಷ್ಯಥ ತಸ್ಮಿನ್ ಸರ್ವ್ವಥಾ ಯತಿಷ್ಯೇ|
16 ೧೬ ನಮ್ಮ ಕರ್ತನಾದ ಯೇಸುಕ್ರಿಸ್ತನ ಶಕ್ತಿಯನ್ನೂ, ಪ್ರತ್ಯಕ್ಷತೆಯನ್ನೂ ನಿಮಗೆ ತಿಳಿಯಪಡಿಸಿದ್ದರಲ್ಲಿ ಚಮತ್ಕಾರದಿಂದ ಕಲ್ಪಿಸಿದ ಕಟ್ಟುಕಥೆಗಳನ್ನು ನಾವು ಅನುಸರಿಸಲಿಲ್ಲ. ಆತನ ಮಹತ್ತನ್ನು ಕಣ್ಣಾರೆ ಕಂಡವರಾಗಿಯೇ ಅದನ್ನು ತಿಳಿಯಪಡಿಸಿದೆವು.
ಯತೋ ಽಸ್ಮಾಕಂ ಪ್ರಭೋ ರ್ಯೀಶುಖ್ರೀಷ್ಟಸ್ಯ ಪರಾಕ್ರಮಂ ಪುನರಾಗಮನಞ್ಚ ಯುಷ್ಮಾನ್ ಜ್ಞಾಪಯನ್ತೋ ವಯಂ ಕಲ್ಪಿತಾನ್ಯುಪಾಖ್ಯಾನಾನ್ಯನ್ವಗಚ್ಛಾಮೇತಿ ನಹಿ ಕಿನ್ತು ತಸ್ಯ ಮಹಿಮ್ನಃ ಪ್ರತ್ಯಕ್ಷಸಾಕ್ಷಿಣೋ ಭೂತ್ವಾ ಭಾಷಿತವನ್ತಃ|
17 ೧೭ ಏಕೆಂದರೆ, “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ” ಎಂಬ ವಾಣಿಯು ಮಹೋನ್ನತವಾದ ಮಹಿಮೆಯಿಂದ ಆತನಿಗೆ ಉಂಟಾದದ್ದರಲ್ಲಿ ಆತನು ತಂದೆಯಾದ ದೇವರಿಂದ ಗೌರವವನ್ನೂ, ಮಹಿಮೆಯನ್ನೂ ಹೊಂದಿದನಲ್ಲವೇ.
ಯತಃ ಸ ಪಿತುರೀಶ್ವರಾದ್ ಗೌರವಂ ಪ್ರಶಂಸಾಞ್ಚ ಪ್ರಾಪ್ತವಾನ್ ವಿಶೇಷತೋ ಮಹಿಮಯುಕ್ತತೇಜೋಮಧ್ಯಾದ್ ಏತಾದೃಶೀ ವಾಣೀ ತಂ ಪ್ರತಿ ನಿರ್ಗತವತೀ, ಯಥಾ, ಏಷ ಮಮ ಪ್ರಿಯಪುತ್ರ ಏತಸ್ಮಿನ್ ಮಮ ಪರಮಸನ್ತೋಷಃ|
18 ೧೮ ನಾವು ಪರಿಶುದ್ಧ ಪರ್ವತದ ಮೇಲೆ ಆತನ ಸಂಗಡ ಇದ್ದಾಗ ಪರಲೋಕದಿಂದ ಬಂದ ಆ ವಾಣಿಯನ್ನು ನಾವು ಕೇಳಿಸಿಕೊಂಡೆವು.
ಸ್ವರ್ಗಾತ್ ನಿರ್ಗತೇಯಂ ವಾಣೀ ಪವಿತ್ರಪರ್ವ್ವತೇ ತೇನ ಸಾರ್ದ್ಧಂ ವಿದ್ಯಮಾನೈರಸ್ಮಾಭಿರಶ್ರಾವಿ|
19 ೧೯ ಇದಲ್ಲದೆ ಪ್ರವಾದನವಾಕ್ಯವು ನಮಗೆ ಬಹುದೃಢವಾಗಿ ದೊರೆತಿದೆ. ಆ ದಿನವು ಅರುಣೋದಯವಾಗುವರೆಗೆ ಮತ್ತು ಉದಯ ನಕ್ಷತ್ರವು ನಿಮ್ಮ ಹೃದಯಗಳಲ್ಲಿ ಮೂಡುವತನಕ ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪವೆಂದೆಣಿಸಿ ಅದಕ್ಕೆ ಲಕ್ಷ್ಯಕೊಟ್ಟರೆ ಒಳ್ಳೆಯದು.
ಅಪರಮ್ ಅಸ್ಮತ್ಸಮೀಪೇ ದೃಢತರಂ ಭವಿಷ್ಯದ್ವಾಕ್ಯಂ ವಿದ್ಯತೇ ಯೂಯಞ್ಚ ಯದಿ ದಿನಾರಮ್ಭಂ ಯುಷ್ಮನ್ಮನಃಸು ಪ್ರಭಾತೀಯನಕ್ಷತ್ರಸ್ಯೋದಯಞ್ಚ ಯಾವತ್ ತಿಮಿರಮಯೇ ಸ್ಥಾನೇ ಜ್ವಲನ್ತಂ ಪ್ರದೀಪಮಿವ ತದ್ ವಾಕ್ಯಂ ಸಮ್ಮನ್ಯಧ್ವೇ ತರ್ಹಿ ಭದ್ರಂ ಕರಿಷ್ಯಥ|
20 ೨೦ ಯಾವ ಪ್ರವಾದನಾ ವಾಕ್ಯವೂ ಕೇವಲ ಮನುಷ್ಯನ ಸ್ವಬುದ್ಧಿಯಿಂದ ವಿವರಿಸತಕ್ಕಂಥದ್ದಲ್ಲವೆಂಬುದನ್ನು ಮುಖ್ಯವಾಗಿ ಮೊದಲು ತಿಳಿದುಕೊಳ್ಳಿರಿ.
ಶಾಸ್ತ್ರೀಯಂ ಕಿಮಪಿ ಭವಿಷ್ಯದ್ವಾಕ್ಯಂ ಮನುಷ್ಯಸ್ಯ ಸ್ವಕೀಯಭಾವಬೋಧಕಂ ನಹಿ, ಏತದ್ ಯುಷ್ಮಾಭಿಃ ಸಮ್ಯಕ್ ಜ್ಞಾಯತಾಂ|
21 ೨೧ ಏಕೆಂದರೆ ಯಾವ ಪ್ರವಾದನೆಯೂ ಎಂದೂ ಮನುಷ್ಯರ ಚಿತ್ತದಿಂದ ಉಂಟಾಗಲಿಲ್ಲ. ಆದರೆ ಮನುಷ್ಯರು ಪವಿತ್ರಾತ್ಮಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತನಾಡಿರುವುದು.
ಯತೋ ಭವಿಷ್ಯದ್ವಾಕ್ಯಂ ಪುರಾ ಮಾನುಷಾಣಾಮ್ ಇಚ್ಛಾತೋ ನೋತ್ಪನ್ನಂ ಕಿನ್ತ್ವೀಶ್ವರಸ್ಯ ಪವಿತ್ರಲೋಕಾಃ ಪವಿತ್ರೇಣಾತ್ಮನಾ ಪ್ರವರ್ತ್ತಿತಾಃ ಸನ್ತೋ ವಾಕ್ಯಮ್ ಅಭಾಷನ್ತ|

< ಪೇತ್ರನು ಬರೆದ ಎರಡನೆಯ ಪತ್ರಿಕೆ 1 >