< ಅರಸುಗಳು - ದ್ವಿತೀಯ ಭಾಗ 1 >
1 ೧ ಅಹಾಬನು ಮರಣಹೊಂದಿದ ನಂತರ ಮೋವಾಬ್ಯರು ಇಸ್ರಾಯೇಲರಿಗೆ ವಿರುದ್ಧವಾಗಿ ದಂಗೆ ಎದ್ದರು.
Erga Ahaab duʼee booddee Moʼaab Israaʼelitti fincile.
2 ೨ ಅಹಜ್ಯನು ಸಮಾರ್ಯದಲ್ಲಿ ತನ್ನ ಮೇಲುಪ್ಪರಿಗೆಯ ಕಿಟಿಕಿಯಿಂದ ಬಿದ್ದು ಅಸ್ವಸ್ಥನಾದಾಗ ತನ್ನ ಸೇವಕರನ್ನು ಕರೆದು ಅವರಿಗೆ, “ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನ ಸನ್ನಿಧಿಗೆ ಹೋಗಿ ನಾನು ಈ ಅಸ್ವಸ್ಥತೆಯಿಂದ ವಾಸಿಯಾಗುವೆನೋ ಇಲ್ಲವೋ ಎಂಬುದನ್ನು ವಿಚಾರಿಸಿರಿ” ಎಂದು ಹೇಳಿಕಳುಹಿಸಿದನು.
Ahaaziyaanis qaawwa darbii mana isaa kan Samaariyaa keessaan kufee miidhamee ture. Kanaafuu inni, “Akka ani miidhaa kana irraa fayyuu fi fayyuu baachuu koo beekuuf dhaqaatii Baʼaal Zebuul waaqicha Eqroon sana naaf gaafadhaa” jedhee ergamoota erge.
3 ೩ ಆಗ ಯೆಹೋವನ ದೂತನು ತಿಷ್ಬೀಯನಾದ ಎಲೀಯನಿಗೆ, “ನೀನು ಹೋಗಿ ಸಮಾರ್ಯದ ಅರಸನ ಸೇವಕರನ್ನು ಎದುರುಗೊಂಡು ಅವರಿಗೆ, ‘ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವುದಕ್ಕೆ ಹೋಗುವುದೇನು ಇಸ್ರಾಯೇಲರಲ್ಲಿ ದೇವರಿಲ್ಲವೋ?
Ergamaan Waaqayyoo garuu Eeliyaas namicha gosa Tishbii sanaan akkana jedhe; “Kaʼiitii gara ergamoota mooticha Samaariyaa sanaatti ol baʼiitii akkana jedhii isaan gaafadhu; ‘Wanni isin Baʼaal Zebuul waaqicha Eqroon sana gorsa gaafachuu dhaqxaniif Israaʼel keessaa Waaqni dhabameetii?’
4 ೪ ಅಹಜ್ಯನು ತಾನು ಹತ್ತಿ ಮಲಗಿದ ಮಂಚದಿಂದ ಇಳಿಯದೆ ಸಾಯಲೇ ಬೇಕು’ ಎಂಬುದಾಗಿ ಯೆಹೋವನು ಅನ್ನುತ್ತಾನೆ” ಎಂಬುದಾಗಿ ಹೇಳು ಎಂದು ಆಜ್ಞಾಪಿಸಿದನು. ಎಲೀಯನು ಹಾಗೆಯೇ ಮಾಡಿದನು.
Kanaafuu Waaqayyo, ‘Ati siree amma irra ciiftu kana irraa hin kaatu. Ati dhugumaan ni duuta!’ jedha.” Kana irratti Eeliyaas kaʼee deeme.
5 ೫ ದೂತರು ಅರಸನ ಬಳಿಗೆ ಹಿಂದಿರುಗಿ ಬಂದಾಗ, “ನೀವು ಹಿಂದಿರುಗಿ ಬಂದ್ದದೇಕೆ?” ಎಂದು ಕೇಳಿದನು.
Mootichis yommuu ergamoonni gara isaatti deebiʼanitti, “Isin maaliif deebitan?” jedhee isaan gaafate.
6 ೬ ಅದಕ್ಕೆ ಅವರು, “ಒಬ್ಬ ಮನುಷ್ಯನು ನಮ್ಮನ್ನು ಎದುರುಗೊಂಡು ನಮಗೆ, ‘ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹೋಗಿ’ ಯೆಹೋವನ ಹೆಸರಿನಲ್ಲಿ ಅವನಿಗೆ, ‘ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವುದಕ್ಕೆ ಕಳುಹಿಸುವುದೇನು? ಇಸ್ರಾಯೇಲರಲ್ಲಿ ದೇವರಿಲ್ಲವೋ? ನೀನು ಹೀಗೆ ಮಾಡಿದ್ದರಿಂದ ಹತ್ತಿದ ಮಂಚದಿಂದ ಇಳಿಯದೆ ಸಾಯಲೇ ಬೇಕು’ ಎಂಬುದಾಗಿ ಹೇಳಿರಿ ಎಂದು ಆಜ್ಞಾಪಿಸಿದನು” ಎಂದು ಉತ್ತರ ಕೊಟ್ಟರು.
Isaanis akkana jedhanii deebisan; “Namicha tokkotu karaatti nutti dhufee, ‘Gara mooticha isin erge sanaatti deebiʼaatii akkana jedhaanii’ nuun jedhe; ‘Waaqayyo akkana jedha: Wanni ati Baʼaal Zebuul waaqicha Eqroon sana gorsa gaafachuuf namoota ergituuf Israaʼel keessaa Waaqni dhabameetii? Kanaafuu ati siree irra ciiftu kana irraa hin kaatu. Ati dhugumaan ni duuta!’”
7 ೭ ಅರಸನು ತಿರುಗಿ ಅವರನ್ನು, “ನಿಮಗೆ ಎದುರಾಗಿ ಹೀಗೆ ಹೇಳಿದ ಮನುಷ್ಯನು ಹೇಗಿದ್ದನು?” ಎಂದು ಕೇಳಲು,
Mootichi, “Namichi karaatti isinitti dhufee waan kana isinitti hime sun nama akkamii ti?” jedhee isaan gaafate.
8 ೮ ಅವರು, “ಅವನು ಕಂಬಳಿ ಹೊದ್ದುಕೊಂಡಿದ್ದನು. ಅವನ ಸೊಂಟಕ್ಕೆ ತೊಗಲಿನ ನಡುಕಟ್ಟು ಇತ್ತು” ಎಂದು ಉತ್ತರ ಕೊಟ್ಟರು. ಅದಕ್ಕೆ ಅರಸನು, “ಆ ಮನುಷ್ಯನು ತಿಷ್ಬೀಯನಾದ ಎಲೀಯನೇ ಆಗಿರಬೇಕು” ಎಂದನು.
Isaanis, “Inni nama uffata rifeensa irraa hojjetame uffatee sabbata gogaa mudhii isaatti hidhatu tokkoo dha” jedhanii deebisaniif. Mootichis, “Inni Eeliyaas namicha Tishbii sanaa dha” jedhe.
9 ೯ ಆಗ ಅರಸನು ಎಲೀಯನನ್ನು ಕರೆತರುವುದಕ್ಕಾಗಿ ಪಂಚದಶಾಧಿಪತಿಯನ್ನು, ಅವನ ಐವತ್ತು ಮಂದಿ ಸಿಪಾಯಿಗಳೊಡನೆ ಕಳುಹಿಸಿದನು. ಇವನು ಹೋಗಿ ಎಲೀಯನು ಬೆಟ್ಟದ ತುದಿಯಲ್ಲಿ ಕುಳಿತಿರುವುದನ್ನು ಕಂಡು ಅವನಿಗೆ, “ದೇವರ ಮನುಷ್ಯನೇ ಇಳಿದು ಬಾ ಅರಸನು ನಿನ್ನನ್ನು ಕರೆಯುತ್ತಾನೆ” ಎಂದು ಹೇಳಿದನು.
Kana irratti mootichi ajajaa waraanaa tokko namoota shantama wajjin Eeliyaasitti erge. Ajajaan sunis fiixee gaara inni irra taaʼaa ture tokkootti Eeliyaasitti ol baʼee, “Yaa nama Waaqaa, mootichi ‘Gad kottu!’ siin jedha” jedheen.
10 ೧೦ ಅದಕ್ಕೆ ಎಲೀಯನು ಪಂಚದಶಾಧಿಪತಿಗೆ, “ನಾನು ದೇವರ ಮನುಷ್ಯನಾಗಿರುವುದಾದರೆ ಆಕಾಶದಿಂದ ಬೆಂಕಿಬಿದ್ದು ನಿನ್ನನ್ನೂ ನಿನ್ನ ಐವತ್ತು ಮಂದಿ ಸಿಪಾಯಿಗಳನ್ನೂ ದಹಿಸಿಬಿಡಲಿ” ಎಂದನು. ಕೂಡಲೆ ಆಕಾಶದಿಂದ ಬೆಂಕಿ ಬಿದ್ದು ಅವನನ್ನೂ, ಅವನ ಸಿಪಾಯಿಗಳನ್ನೂ ದಹಿಸಿಬಿಟ್ಟಿತು.
Eeliyaas immoo ajajaa sanaan, “Yoo ani nama Waaqaa taʼe, ibiddi samii irraa gad buʼee siʼii fi namoota kee shantamman haa fixu!” jedhe. Ergasii ibiddi samii irraa gad buʼee ajajaa sanaa fi namoota isaa hunda fixe.
11 ೧೧ ತರುವಾಯ ಅರಸನು ಇನ್ನೊಬ್ಬ ಪಂಚದಶಾಧಿಪತಿಯನ್ನೂ, ಅವನ ಐವತ್ತು ಮಂದಿ ಸಿಪಾಯಿಗಳನ್ನೂ ಕಳುಹಿಸಿದನು. ಇವನು ಹೋಗಿ ಎಲೀಯನಿಗೆ “ದೇವರ ಮನುಷ್ಯನೇ ಬೇಗನೆ ಇಳಿದು ಬಾ, ಅರಸನು ನಿನ್ನನ್ನು ಕರೆಯುತ್ತಾನೆ” ಎಂದು ಹೇಳಿದನು.
Kana irratti mootichi amma illee ajajaa biraa namoota shantama wajjin Eeliyaasitti erge. Ajajaan sunis, “Yaa nama Waaqaa, mootichi, ‘Dafii gad buʼiitii kottu!’ siin jedha” jedheen.
12 ೧೨ ಆಗ ಎಲೀಯನು, “ನಾನು ದೇವರ ಮನುಷ್ಯನಾಗಿರುವುದಾದರೆ ಆಕಾಶದಿಂದ ಬೆಂಕಿಬಿದ್ದು ನಿನ್ನನ್ನೂ, ನಿನ್ನ ಐವತ್ತು ಮಂದಿ ಸಿಪಾಯಿಗಳನ್ನೂ ದಹಿಸಿಬಿಡಲಿ” ಎಂದನು. ಕೂಡಲೆ ಆಕಾಶದಿಂದ ಬೆಂಕಿ ಬಿದ್ದು ಅವನನ್ನೂ, ಅವನ ಸಿಪಾಯಿಗಳನ್ನೂ ದಹಿಸಿಬಿಟ್ಟಿತು.
Eeliyaas garuu, “Yoo ani nama Waaqaa taʼe, ibiddi samii irraa gad buʼee siʼii fi namoota kee shantammanuu haa fixu!” jedhee deebiseef. Ibiddi Waaqaas samii irraa gad buʼee isaa fi namoota isaa shantammanuu ni fixe.
13 ೧೩ ಆಗ ಅರಸನು ಇನ್ನೊಬ್ಬ ಪಂಚದಶಾಧಿಪತಿಯನ್ನು, ಅವನ ಐವತ್ತು ಮಂದಿ ಸಿಪಾಯಿಗಳನ್ನೂ ಕಳುಹಿಸಿದನು. ಇವನು ಬಂದು ಎಲೀಯನ ಮುಂದೆ ಮೊಣಕಾಲೂರಿ ಬೇಡಿಕೊಂಡು ಅವನಿಗೆ, “ದೇವರ ಮನುಷ್ಯನೇ, ನನ್ನ ಮತ್ತು ನಿನ್ನ ಸೇವಕರಾದ ಈ ಐವತ್ತು ಮಂದಿಯ ಪ್ರಾಣವು ನಿನ್ನ ದೃಷ್ಟಿಯಲ್ಲಿ ಬೆಲೆಯುಳ್ಳದ್ದಾಗಿರಲಿ.
Kanaafuu mootichi ammas ajajaa sadaffaa namoota shantama wajjin ni erge. Ajajaan sadaffaan kun ol baʼee jilba ofii isaatiin Eeliyaas duratti jilbeenfatee akkana jedhee isa ni kadhate; “Yaa nama Waaqaa, maaloo lubbuun koo fi lubbuun garboota kee shantamman kanneenii gatii hin dhabin!
14 ೧೪ ಆಕಾಶದಿಂದ ಬೆಂಕಿಬಿದ್ದು ಮೊದಲು ಬಂದ ಇಬ್ಬರು ಪಂಚದಶಾಧಿಪತಿಗಳನ್ನೂ, ಅವರ ಸಿಪಾಯಿಗಳನ್ನೂ ದಹಿಸಿಬಿಟ್ಟಿತಲ್ಲಾ, ನನ್ನ ಪ್ರಾಣವಾದರೂ ನಿನ್ನ ದೃಷ್ಟಿಯಲ್ಲಿ ಬೆಲೆಯುಳ್ಳದ್ದೆಂದು ಎಣಿಸಲ್ಪಡಲಿ” ಎಂದು ಬೇಡಿಕೊಂಡನು.
Kunoo, ibiddi samii irraa gad buʼee ajajjuuwwan duraa lamaanii fi namoota isaanii hunda fixeera. Amma garuu lubbuun koo fuula kee duratti gatii haa qabaattu!”
15 ೧೫ ಆಗ ಯೆಹೋವನ ದೂತನು ಎಲೀಯನಿಗೆ, “ನೀನು ಇವನ ಸಂಗಡ ಹೋಗು, ಅವನಿಗೆ ಹೆದರಬೇಡ” ಎಂದು ಹೇಳಿದ್ದರಿಂದ ಅವನು ಎದ್ದು, ಇವನ ಜೊತೆಯಲ್ಲಿ ಅರಸನ ಬಳಿಗೆ ಹೋದನು.
Ergamaan Waaqayyoos Eeliyaasiin, “Isa wajjin gad buʼi; isa hin sodaatin” jedhe. Kanaafuu Eeliyaas kaʼee isa wajjin gara mootichaatti gad buʼe.
16 ೧೬ ನಂತರ ಎಲೀಯನು ಅರಸನಿಗೆ, “ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವುದಕ್ಕೆ ದೂತರನ್ನು ಕಳುಹಿಸಿದ್ದೇನು? ಅಂಥ ವಿಚಾರ ಮಾಡುವುದಕ್ಕೆ ಇಸ್ರಾಯೇಲರಲ್ಲಿ ದೇವರಿಲ್ಲವೋ? ನೀನು ಹೀಗೆ ಮಾಡಿದ್ದರಿಂದ ಹತ್ತಿದ ಮಂಚದಿಂದ ಇಳಿಯದೆ ಸಾಯಲೇಬೇಕು ಎಂಬುದಾಗಿ ಯೆಹೋವನು ಅನ್ನುತ್ತಾನೆ” ಎಂದು ಹೇಳಿದನು.
Innis akkana jedhee mootichatti hime; “Waaqayyo akkana jedha: Wanni ati Baʼaal Zebuul waaqicha Eqroon gorsa gaafachuudhaaf ergamoota ergiteef Israaʼel keessaa Waaqni gorsa gaafatamu dhabameetii? Ati sababii waan kana hojjetteef siree irra ciiftu kana irraa hin kaatu. Ati dhugumaan ni duuta!”
17 ೧೭ ಯೆಹೋವನು ಎಲೀಯನ ಮುಖಾಂತರವಾಗಿ ಮುಂತಿಳಿಸಿದಂತೆ ಅರಸನು ಸತ್ತನು. ಅವನಿಗೆ ಮಗನಿಲ್ಲದೆ ಇದ್ದುದರಿಂದ ಅವನಿಗೆ ಬದಲಾಗಿ ಅವನ ತಮ್ಮನಾದ ಯೋರಾಮನೆಂಬವನು ಯೆಹೂದ್ಯರ ಅರಸನಾದ ಯೆಹೋಷಾಫಾಟನ ಮಗ ಯೆಹೋರಾಮನ ಆಳ್ವಿಕೆಯ ಎರಡನೆಯ ವರ್ಷದಲ್ಲಿ ಇಸ್ರಾಯೇಲರ ಅರಸನಾದನು
Kanaafuu inni akkuma dubbii Waaqayyoo kan Eeliyaas dubbate sanaatti duʼe. Sababii Ahaaziyaan ilma hin qabneef obboleessi isaa Yehooraam iddoo isaa buʼee mootii taʼe; kunis bara Yehooraam ilmi Yehooshaafaax mootii Yihuudaa ture keessa waggaa lammaffaatti taʼe.
18 ೧೮ ಅಹಜ್ಯನ ಉಳಿದ ಚರಿತ್ರೆಯೂ, ಅವನ ಕೃತ್ಯಗಳೂ ಇಸ್ರಾಯೇಲರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.
Wantoonni bara mootummaa Ahaaziyaa keessa hojjetaman kan biraa hundii fi wanti inni hojjete kitaaba seenaa mootota Israaʼel keessatti barreeffamaniiru mitii?