< ಅರಸುಗಳು - ದ್ವಿತೀಯ ಭಾಗ 6 >
1 ೧ ಒಂದು ದಿನ ಪ್ರವಾದಿಮಂಡಳಿಯವರು ಎಲೀಷನಿಗೆ, “ನಾವು ನಿನ್ನ ಜೊತೆಯಲ್ಲಿ ವಾಸಿಸುತ್ತಿರುವ ಈ ಸ್ಥಳವು ಬಹಳ ಇಕ್ಕಟ್ಟಾಗಿದೆ.
१भविष्यद्वक्ताओं के दल में से किसी ने एलीशा से कहा, “यह स्थान जिसमें हम तेरे सामने रहते हैं, वह हमारे लिये बहुत छोटा है।
2 ೨ ಆದುದರಿಂದ ನಾವು ಯೊರ್ದನಿಗೆ ಹೋಗಿ, ಅಲ್ಲಿ ಪ್ರತಿಯೊಬ್ಬನೂ ಒಂದೊಂದು ತೊಲೆಯನ್ನು ಕಡಿದುಕೊಂಡು ಬಂದು, ನಮ್ಮ ವಾಸಕ್ಕಾಗಿ ಒಂದು ಮನೆಯನ್ನು ಮಾಡಿಕೊಳ್ಳೋಣ” ಎಂದರು. ಎಲೀಷನು ಅವರಿಗೆ, “ಹೋಗಿಬನ್ನಿರಿ” ಎಂದು ಹೇಳಿದನು.
२इसलिए हम यरदन तक जाएँ, और वहाँ से एक-एक बल्ली लेकर, यहाँ अपने रहने के लिये एक स्थान बना लें;” उसने कहा, “अच्छा जाओ।”
3 ೩ ಅವರಲ್ಲೊಬ್ಬನು, “ದಯವಿಟ್ಟು ನೀನೂ, ನಿನ್ನ ಸೇವಕರು ನಮ್ಮ ಜೊತೆಯಲ್ಲಿ ಬರಬೇಕು” ಎಂದು ಬೇಡಿಕೊಂಡನು. ಅದಕ್ಕೆ ಎಲೀಷನು, “ಬರುತ್ತೇನೆ” ಎಂದು ಹೇಳಿ ಅವರೊಡನೆ ಹೊರಟನು.
३तब किसी ने कहा, “अपने दासों के संग चल;” उसने कहा, “चलता हूँ।”
4 ೪ ಅವರು ಯೊರ್ದನಿಗೆ ಹೋಗಿ ಮರಗಳನ್ನು ಕಡಿಯುತ್ತಿರುವಾಗ,
४अतः वह उनके संग चला और वे यरदन के किनारे पहुँचकर लकड़ी काटने लगे।
5 ೫ ಒಬ್ಬನ ಕೊಡಲಿಯು ಕೈಜಾರಿ ನೀರೊಳಗೆ ಬಿದ್ದಿತು. ಆಗ ಅವನು, “ಅಯ್ಯೋ, ಸ್ವಾಮಿ ನಾನು ಅದನ್ನು ಸಾಲವಾಗಿ ತಂದಿದ್ದೆನು” ಎಂದು ಕೂಗಿದನು.
५परन्तु जब एक जन बल्ली काट रहा था, तो कुल्हाड़ी बेंट से निकलकर जल में गिर गई; इसलिए वह चिल्लाकर कहने लगा, “हाय! मेरे प्रभु, वह तो माँगी हुई थी।”
6 ೬ ದೇವರ ಮನುಷ್ಯನು ಅವನಿಗೆ, “ಅದು ಎಲ್ಲಿ ಬಿದ್ದಿತು?” ಎಂದು ಕೇಳಲು, ಅದು ಬಿದ್ದ ಸ್ಥಳವನ್ನು ಅವನು ತೋರಿಸಿದನು. ಆಗ ದೇವರ ಮನುಷ್ಯನು ಮರದಿಂದ ಒಂದು ತುಂಡು ಕಟ್ಟಿಗೆಯನ್ನು ಮುರಿದು ಅಲ್ಲಿ ಹಾಕಿದನು, ಕೂಡಲೆ ಕೊಡಲಿಯು ಮೇಲಕ್ಕೆ ಬಂದು ತೇಲಾಡಿತು.
६परमेश्वर के भक्त ने पूछा, “वह कहाँ गिरी?” जब उसने स्थान दिखाया, तब उसने एक लकड़ी काटकर वहाँ डाल दी, और वह लोहा पानी पर तैरने लगा।
7 ೭ ಎಲೀಷನು “ಅದನ್ನು ತೆಗೆದುಕೋ” ಎಂದು ಆಜ್ಞಾಪಿಸಲು ಆ ಮನುಷ್ಯನು ಕೈಚಾಚಿ ಅದನ್ನು ತೆಗೆದುಕೊಂಡನು.
७उसने कहा, “उसे उठा ले।” तब उसने हाथ बढ़ाकर उसे ले लिया।
8 ೮ ಅರಾಮ್ಯರ ಅರಸನು ಇಸ್ರಾಯೇಲರಿಗೆ ವಿರೋಧವಾಗಿ ಯುದ್ಧಕ್ಕೆ ಬಂದನು. ಅವನು ತನ್ನ ಸೇನಾಧಿಪತಿಗಳಿಗೆ, “ಯುದ್ಧದಲ್ಲಿ ಹೊಂಚುಹಾಕತಕ್ಕ ಸ್ಥಳವನ್ನು ಗೊತ್ತುಮಾಡಬೇಕು” ಎಂದನು.
८अराम का राजा इस्राएल से युद्ध कर रहा था, और सम्मति करके अपने कर्मचारियों से कहा, “अमुक स्थान पर मेरी छावनी होगी।”
9 ೯ ದೇವರ ಮನುಷ್ಯನು ಇಸ್ರಾಯೇಲರ ಅರಸನಿಗೆ, “ಜಾಗರೂಕತೆಯಿಂದಿರಿ, ನೀವು ಇಂಥಿಂಥ ಸ್ಥಳದಲ್ಲಿ ಹೋಗಬಾರದು. ಅಲ್ಲಿ ಅರಾಮ್ಯರು ಅಡಗಿಕೊಂಡಿದ್ದಾರೆ” ಎಂದು ತಿಳಿಸುತ್ತಿದ್ದನು.
९तब परमेश्वर के भक्त ने इस्राएल के राजा के पास कहला भेजा, “चौकसी कर और अमुक स्थान से होकर न जाना क्योंकि वहाँ अरामी चढ़ाई करनेवाले हैं।”
10 ೧೦ ದೇವರ ಮನುಷ್ಯನು ಸೂಚಿಸುವ ಎಲ್ಲಾ ಸ್ಥಳಗಳಿಗೂ ಇಸ್ರಾಯೇಲರ ಅರಸನು ಹೇಳಿ ಕಳುಹಿಸುತ್ತಿದ್ದನು. ಹೀಗೆ ಅವನು ಹಲವು ಸಾರಿ ಅರಾಮ್ಯರ ಅರಸನ ಕೈಗೆ ಸಿಕ್ಕದಂತೆ ತಪ್ಪಿಸಿಕೊಂಡನು.
१०तब इस्राएल के राजा ने उस स्थान को, जिसकी चर्चा करके परमेश्वर के भक्त ने उसे चिताया था, दूत भेजकर, अपनी रक्षा की; और इस प्रकार एक दो बार नहीं वरन् बहुत बार हुआ।
11 ೧೧ ಇದರ ದೆಸೆಯಿಂದ ಅರಾಮ್ಯರ ಅರಸನು ಕಳವಳಗೊಂಡು ತನ್ನ ಸೇನಾಧಿಪತಿಗಳನ್ನು ಕರೆದು ಅವರನ್ನು, “ನಮ್ಮವರಲ್ಲಿ ಇಸ್ರಾಯೇಲರ ಅರಸನ ಪಕ್ಷದವರು ಯಾರು? ನನಗೆ ತಿಳಿಸುವುದಿಲ್ಲವೋ” ಎಂದು ಕೇಳಿದನು.
११इस कारण अराम के राजा का मन बहुत घबरा गया; अतः उसने अपने कर्मचारियों को बुलाकर उनसे पूछा, “क्या तुम मुझे न बताओगे कि हम लोगों में से कौन इस्राएल के राजा की ओर का है?” उसके एक कर्मचारी ने कहा, “हे मेरे प्रभु! हे राजा! ऐसा नहीं,
12 ೧೨ ಆಗ ಅವರಲ್ಲೊಬ್ಬನು ಅವನಿಗೆ, “ನನ್ನ ಒಡೆಯನಾದ ಅರಸನೇ, ಹಾಗಲ್ಲ, ಇಸ್ರಾಯೇಲರಲ್ಲಿ ಎಲೀಷನೆಂಬ ಒಬ್ಬ ಪ್ರವಾದಿಯಿರುತ್ತಾನೆ. ನೀನು ನಿನ್ನ ಮಲಗುವ ಕೋಣೆಯಲ್ಲಿ ಆಡುವ ಮಾತುಗಳನ್ನು ಸಹ ಅವನು ಅರಿತುಕೊಂಡು ಎಲ್ಲವನ್ನೂ ಇಸ್ರಾಯೇಲರ ಅರಸನಿಗೆ ತಿಳಿಸುತ್ತಾನೆ” ಎಂದನು.
१२एलीशा जो इस्राएल में भविष्यद्वक्ता है, वह इस्राएल के राजा को वे बातें भी बताया करता है, जो तू शयन की कोठरी में बोलता है।”
13 ೧೩ ಅರಸನು ಇದನ್ನು ಕೇಳಿ, “ಎಲೀಷನು ಎಲ್ಲಿರುತ್ತಾನೆ ಎಂದು ವಿಚಾರಿಸಿರಿ. ನಾನು ಅವನನ್ನು ಹಿಡಿಸುತ್ತೇನೆ” ಎಂದು ಹೇಳಿದನು. “ಪ್ರವಾದಿಯು ದೋತಾನಿನಲ್ಲಿ ಇರುತ್ತಾನೆ” ಎಂದು ಅರಸನು ತಿಳಿದುಕೊಂಡನು.
१३राजा ने कहा, “जाकर देखो कि वह कहाँ है, तब मैं भेजकर उसे पकड़वा मँगाऊँगा।” उसको यह समाचार मिला: “वह दोतान में है।”
14 ೧೪ ಆಗ ಅರಸನು ರಥರಥಾಶ್ವ ಸಹಿತವಾದ ಮಹಾಸೈನ್ಯವನ್ನು ದೋತಾನಿಗೆ ಕಳುಹಿಸಿದನು. ಸೈನ್ಯದವರು ರಾತ್ರಿಯಲ್ಲಿ ಆ ಪಟ್ಟಣವನ್ನು ಸಮೀಪಿಸಿ ಅದಕ್ಕೆ ಮುತ್ತಿಗೆ ಹಾಕಿದರು.
१४तब उसने वहाँ घोड़ों और रथों समेत एक भारी दल भेजा, और उन्होंने रात को आकर नगर को घेर लिया।
15 ೧೫ ದೇವರ ಮನುಷ್ಯನ ಸೇವಕನು ಬೆಳಿಗ್ಗೆ ಎದ್ದು ಹೊರಗೆ ಬಂದು ನೋಡಿದಾಗ ರಥರಥಾಶ್ವಸಹಿತವಾದ ಮಹಾಸೈನ್ಯವು ಬಂದು ಪಟ್ಟಣದ ಸುತ್ತಲೂ ನಿಂತಿರುವುದನ್ನು ಕಂಡು ತನ್ನ ಯಜಮಾನನಿಗೆ, “ಅಯ್ಯೋ, ಸ್ವಾಮಿ ನಾವು ಏನು ಮಾಡೋಣ?” ಎಂದನು.
१५भोर को परमेश्वर के भक्त का टहलुआ उठा और निकलकर क्या देखता है कि घोड़ों और रथों समेत एक दल नगर को घेरे हुए पड़ा है। तब उसके सेवक ने उससे कहा, “हाय! मेरे स्वामी, हम क्या करें?”
16 ೧೬ ಆಗ ಎಲೀಷನು ಅವನಿಗೆ, “ಹೆದರಬೇಡ, ಅವರ ಕಡೆಯಲ್ಲಿರುವವರಿಗಿಂತಲೂ, ನಮ್ಮ ಕಡೆಯಲ್ಲಿರುವವರು ಹೆಚ್ಚಾಗಿದ್ದಾರೆ” ಎಂದು ಹೇಳಿ,
१६उसने कहा, “मत डर; क्योंकि जो हमारी ओर हैं, वह उनसे अधिक हैं, जो उनकी ओर हैं।”
17 ೧೭ “ಯೆಹೋವನೇ, ಇವನು ನೋಡುವಂತೆ ಇವನ ಕಣ್ಣುಗಳನ್ನು ತೆರೆ” ಎಂದು ಪ್ರಾರ್ಥಿಸಲು ಯೆಹೋವನು ಅವನ ಕಣ್ಣುಗಳನ್ನು ತೆರೆದನು. ಆಗ ಎಲೀಷನ ರಕ್ಷಣೆಗಾಗಿ ಸುತ್ತಣ ಗುಡ್ಡಗಳಲ್ಲಿ ಬಂದು ನಿಂತಿದ್ದ ಅಗ್ನಿಮಯವಾದ ರಥಾರಥಾಶ್ವಗಳು ಆ ಸೇವಕನಿಗೆ ಕಂಡವು.
१७तब एलीशा ने यह प्रार्थना की, “हे यहोवा, इसकी आँखें खोल दे कि यह देख सके।” तब यहोवा ने सेवक की आँखें खोल दीं, और जब वह देख सका, तब क्या देखा, कि एलीशा के चारों ओर का पहाड़ अग्निमय घोड़ों और रथों से भरा हुआ है।
18 ೧೮ ಶತ್ರುಗಳಾದ ಅರಾಮ್ಯರು ಸಮೀಪಕ್ಕೆ ಬಂದಾಗ ಎಲೀಷನು, “ಸ್ವಾಮಿ, ಈ ಜನರನ್ನು ಕುರುಡರನ್ನಾಗಿ ಮಾಡು” ಎಂದು ಯೆಹೋವನನ್ನು ಪ್ರಾರ್ಥಿಸಿದನು. ಯೆಹೋವನು ಅವನ ಮೊರೆಯನ್ನು ಲಾಲಿಸಿ ಅವರನ್ನು ಕುರುಡರನ್ನಾಗಿ ಮಾಡಿದನು.
१८जब अरामी उसके पास आए, तब एलीशा ने यहोवा से प्रार्थना की कि इस दल को अंधा कर डाल। एलीशा के इस वचन के अनुसार उसने उन्हें अंधा कर दिया।
19 ೧೯ ಆಗ ಎಲೀಷನು ಅವರಿಗೆ, “ನೀವು ಹೋಗಬೇಕೆಂದಿದ್ದ ಪಟ್ಟಣವೂ, ದಾರಿಯೂ ಇದಲ್ಲ, ನನ್ನ ಜೊತೆಯಲ್ಲಿ ಬನ್ನಿರಿ, ನೀವು ಹುಡುಕುತ್ತಿರುವ ಮನುಷ್ಯನ ಬಳಿಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ” ಎಂದು ಹೇಳಿ ಅವರನ್ನು ಸಮಾರ್ಯಕ್ಕೆ ಕರೆದುಕೊಂಡು ಹೋದನು.
१९तब एलीशा ने उनसे कहा, “यह तो मार्ग नहीं है, और न यह नगर है, मेरे पीछे हो लो; मैं तुम्हें उस मनुष्य के पास जिसे तुम ढूँढ़ रहे हो पहुँचाऊँगा।” तब उसने उन्हें सामरिया को पहुँचा दिया।
20 ೨೦ ಅವರು ಸಮಾರ್ಯದೊಳಗೆ ಬಂದಾಗ ಎಲೀಷನು, “ಇವರು ನೋಡುವಂತೆ ಇವರ ಕಣ್ಣುಗಳನ್ನು ತೆರೆ” ಎಂದು ಯೆಹೋವನನ್ನು ಬೇಡಿಕೊಂಡದ್ದರಿಂದ ಆತನು ಅವರ ಕಣ್ಣುಗಳನ್ನು ತೆರೆದನು. ಆಗ ಅವರಿಗೆ ತಾವು ಸಮಾರ್ಯದಲ್ಲಿದ್ದೇವೆಂದು ತಿಳಿದುಬಂತು.
२०जब वे सामरिया में आ गए, तब एलीशा ने कहा, “हे यहोवा, इन लोगों की आँखें खोल कि देख सकें।” तब यहोवा ने उनकी आँखें खोलीं, और जब वे देखने लगे तब क्या देखा कि हम सामरिया के मध्य में हैं।
21 ೨೧ ಇಸ್ರಾಯೇಲರ ಅರಸನು ಅವರನ್ನು ಕಂಡು ಎಲೀಷನಿಗೆ, “ಅಪ್ಪಾ, ನಾನು ಇವರನ್ನು ಸಂಹರಿಸಿ ಬಿಡಲೋ? ಸಂಹರಿಸಲೇ?” ಎಂದು ಕೇಳಿದನು.
२१उनको देखकर इस्राएल के राजा ने एलीशा से कहा, “हे मेरे पिता, क्या मैं इनको मार लूँ? मैं उनको मार लूँ?”
22 ೨೨ ಅದಕ್ಕೆ ಅವನು, “ಇವರನ್ನು ನೀನು ಸಂಹರಿಸಬೇಡ, ಕತ್ತಿಬಿಲ್ಲುಗಳಿಂದ ಸ್ವಾಧೀನಪಡಿಸಿಕೊಂಡು ಸೆರೆಯಾಗಿ ತಂದವರನ್ನು ನೀನು ಸಂಹರಿಸುವೆಯೋ? ಇವರಿಗೆ ಅನ್ನಪಾನಗಳನ್ನು ಕೊಡು, ಉಂಡು ಕುಡಿದು ತಮ್ಮ ಯಜಮಾನನ ಬಳಿಗೆ ಹಿಂದಿರುಗಿ ಹೋಗಲಿ” ಎಂದು ಉತ್ತರಕೊಟ್ಟನು.
२२उसने उत्तर दिया, “मत मार। क्या तू उनको मार दिया करता है, जिनको तू तलवार और धनुष से बन्दी बना लेता है? तू उनको अन्न जल दे, कि खा पीकर अपने स्वामी के पास चले जाएँ।”
23 ೨೩ ಆಗ ಅರಸನು ಅವರಿಗಾಗಿ ಒಂದು ದೊಡ್ಡ ಔತಣವನ್ನು ಮಾಡಿಸಿ ಅವರು ಅನ್ನ ಪಾನಗಳನ್ನು ತೆಗೆದುಕೊಂಡಾದ ಮೇಲೆ ಅವರನ್ನು ಅವರ ಯಜಮಾನನ ಬಳಿಗೆ ಕಳುಹಿಸಿದನು. ಅಂದಿನಿಂದ ಸುಲಿಗೆ ಮಾಡುವ ಅರಾಮ್ಯರ ಗುಂಪುಗಳು ಇಸ್ರಾಯೇಲರ ಪ್ರಾಂತ್ಯದೊಳಗೆ ಮತ್ತೆ ಬರಲೇ ಇಲ್ಲ.
२३तब उसने उनके लिये बड़ा भोज किया, और जब वे खा पी चुके, तब उसने उन्हें विदा किया, और वे अपने स्वामी के पास चले गए। इसके बाद अराम के दल इस्राएल के देश में फिर न आए।
24 ೨೪ ಆ ನಂತರ ಅರಾಮ್ಯರ ಅರಸನಾದ ಬೆನ್ಹದದನು ತನ್ನ ಎಲ್ಲಾ ಸೈನ್ಯವನ್ನು ಕೂಡಿಸಿಕೊಂಡು ಬಂದು ಸಮಾರ್ಯಕ್ಕೆ ಮುತ್ತಿಗೆ ಹಾಕಿದನು.
२४इसके बाद अराम के राजा बेन्हदद ने अपनी समस्त सेना इकट्ठी करके, सामरिया पर चढ़ाई कर दी और उसको घेर लिया।
25 ೨೫ ಆಗ ಸಮಾರ್ಯ ಪಟ್ಟಣದಲ್ಲಿ ಘೋರವಾದ ಬರವಿದ್ದಿತು. ಮುತ್ತಿಗೆಯ ದೆಸೆಯಿಂದ ಅದು ಮತ್ತಷ್ಟು ಘೋರವಾಗಿದ್ದುದರಿಂದ ಒಂದು ಕತ್ತೆಯ ತಲೆಗೆ ಎಂಭತ್ತು ರೂಪಾಯಿಗಳೂ, ಅರ್ಧ ಸೇರು ಪಾರಿವಾಳದ ಮಲವು ಐದು ರೂಪಾಯಿಗಳಿಗೂ ಮಾರಲ್ಪಟ್ಟವು.
२५तब सामरिया में बड़ा अकाल पड़ा और वह ऐसा घिरा रहा, कि अन्त में एक गदहे का सिर चाँदी के अस्सी टुकड़ों में और कब की चौथाई भर कबूतर की बीट पाँच टुकड़े चाँदी तक बिकने लगी।
26 ೨೬ ಒಂದು ದಿನ ಇಸ್ರಾಯೇಲರ ಅರಸನು ಪೌಳಿಗೋಡೆಯ ಮೇಲೆ ಹಾದುಹೋಗುತ್ತಿರುವಾಗ, ಒಬ್ಬ ಸ್ತ್ರೀಯು, “ಅರಸನೇ, ನನ್ನ ಒಡೆಯನೇ, ನನ್ನನ್ನು ರಕ್ಷಿಸು” ಎಂದು ಮೊರೆಯಿಟ್ಟಳು.
२६एक दिन इस्राएल का राजा शहरपनाह पर टहल रहा था, कि एक स्त्री ने पुकारके उससे कहा, “हे प्रभु, हे राजा, बचा।”
27 ೨೭ ಅರಸನು ಆಕೆಗೆ, “ಯೆಹೋವನು ನಿನ್ನನ್ನು ರಕ್ಷಿಸದಿದ್ದರೆ ನಾನು ಹೇಗೆ ರಕ್ಷಿಸಬಹುದು? ಕಣದಲ್ಲಾಗಲಿ, ದ್ರಾಕ್ಷಿ ಆಲೆಯಲ್ಲಾಗಲಿ ಏನಾದರೂ ಉಂಟೋ” ಎಂದು ಕೇಳಿ,
२७उसने कहा, “यदि यहोवा तुझे न बचाए, तो मैं कहाँ से तुझे बचाऊँ? क्या खलिहान में से, या दाखरस के कुण्ड में से?”
28 ೨೮ “ನಿನಗಿರುವ ದುಃಖ ಯಾವುದು” ಎಂದು ಅರಸನು ಕೇಳಿದನು. ಆಗ ಆಕೆಯು, “ಈ ಸ್ತ್ರೀಯು ನನಗೆ, ನಿನ್ನ ಮಗನನ್ನು ತೆಗೆದುಕೊಂಡು ಬಾ, ನಾವು ಈ ಹೊತ್ತು ಅವನನ್ನು ತಿಂದುಬಿಡೋಣ, ನಾಳೆ ನನ್ನ ಮಗನನ್ನು ತಿನ್ನೋಣ” ಎಂದು ಹೇಳಿದ್ದರಿಂದ,
२८फिर राजा ने उससे पूछा, “तुझे क्या हुआ?” उसने उत्तर दिया, “इस स्त्री ने मुझसे कहा था, ‘मुझे अपना बेटा दे, कि हम आज उसे खा लें, फिर कल मैं अपना बेटा दूँगी, और हम उसे भी खाएँगी।’”
29 ೨೯ ನಾವಿಬ್ಬರೂ ನನ್ನ ಮಗನನ್ನು ಕೊಂದು ಬೇಯಿಸಿ ತಿಂದು ಬಿಟ್ಟೆವು. ಮರುದಿನ ನಾನು ಆಕೆಗೆ, “ಈ ಹೊತ್ತು ನಿನ್ನ ಮಗನನ್ನು ತೆಗೆದುಕೊಂಡು ಬಾ, ಅವನನ್ನು ಕೊಂದು ತಿನ್ನೋಣ ಅಂದಾಗ ಆಕೆಯು ಅವನನ್ನು ಎಲ್ಲಿಯೋ ಅಡಗಿಸಿಟ್ಟಳು” ಎಂದು ಹೇಳಿದಳು.
२९तब मेरे बेटे को पकाकर हमने खा लिया, फिर दूसरे दिन जब मैंने इससे कहा “अपना बेटा दे कि हम उसे खा लें, तब इसने अपने बेटे को छिपा रखा।”
30 ೩೦ ಗೋಡೆಯ ಮೇಲೆ ಹೋಗುತ್ತಿದ್ದ ಅರಸನು ಆ ಸ್ತ್ರೀಯ ಮಾತನ್ನು ಕೇಳಿದೊಡನೆ ತನ್ನ ಬಟ್ಟೆಗಳನ್ನು ಹರಿದುಕೊಂಡನು. ಆಗ ಅವನ ಮೈ ಮೇಲೆ ಗೋಣಿತಟ್ಟು ಇರುವುದು ಜನರಿಗೆ ಕಂಡಿತು.
३०उस स्त्री की ये बातें सुनते ही, राजा ने अपने वस्त्र फाड़े (वह तो शहरपनाह पर टहल रहा था), जब लोगों ने देखा, तब उनको यह देख पड़ा कि वह भीतर अपनी देह पर टाट पहने है।
31 ೩೧ ಇದಲ್ಲದೆ ಅವನು, “ನಾನು ಈ ಹೊತ್ತು ಶಾಫಾಟನ ಮಗನಾದ ಎಲೀಷನ ತಲೆಯನ್ನು ಅವನ ದೇಹದಿಂದ ಬೇರ್ಪಡಿಸದೆ ಹೋದರೆ ದೇವರು ನನಗೆ ಬೇಕಾದದ್ದನ್ನು ಮಾಡಲಿ” ಎಂದು ಆಣೆಯಿಟ್ಟುಕೊಂಡನು.
३१तब वह बोल उठा, “यदि मैं शापात के पुत्र एलीशा का सिर आज उसके धड़ पर रहने दूँ, तो परमेश्वर मेरे साथ ऐसा ही वरन् इससे भी अधिक करे।”
32 ೩೨ ಎಲೀಷನು ಊರಿನ ಹಿರಿಯರೊಡನೆ ತನ್ನ ಮನೆಯಲ್ಲಿ ಕುಳಿತುಕೊಂಡಿದ್ದನು. ಅರಸನು ತನ್ನ ಹತ್ತಿರವಿದ್ದ ಒಬ್ಬ ಆಳನ್ನು ಕಳುಹಿಸಿದನು. ಅವನು ಇನ್ನೂ ದೂರದಲ್ಲಿರುವಾಗಲೇ ಎಲೀಷನು ಹಿರಿಯರಿಗೆ, “ನೋಡಿರಿ, ಆ ಕೊಲೆಗಾರನ ಮಗನು ನನ್ನ ತಲೆಯನ್ನು ಹಾರಿಸುವುದಕ್ಕೆ ಆಳನ್ನು ಕಳುಹಿಸಿದ್ದಾನೆ. ಆಳು ಇಲ್ಲಿಗೆ ಬಂದ ಕೂಡಲೆ ನೀವು ಬಾಗಿಲನ್ನು ಮುಚ್ಚಿ ಅವನು ಒಳಗೆ ಬಾರದಂತೆ ಅದನ್ನು ಒತ್ತಿ ಹಿಡಿಯಿರಿ. ಅವನ ಹಿಂದೆಯೇ ಬರುತ್ತಿರುವ ಅವನ ಒಡೆಯನ ಕಾಲಿನ ಸಪ್ಪಳವು ಕೇಳಿಸುತ್ತಿದೆಯಲ್ಲಾ” ಎಂದು ಹೇಳಿದನು.
३२एलीशा अपने घर में बैठा हुआ था, और पुरनिये भी उसके संग बैठे थे। सो जब राजा ने अपने पास से एक जन भेजा, तब उस दूत के पहुँचने से पहले उसने पुरनियों से कहा, “देखो, इस खूनी के बेटे ने किसी को मेरा सिर काटने को भेजा है; इसलिए जब वह दूत आए, तब किवाड़ बन्द करके रोके रहना। क्या उसके स्वामी के पाँव की आहट उसके पीछे नहीं सुन पड़ती?”
33 ೩೩ ಅವನು ಅವರೊಡನೆ ಮಾತನಾಡುತ್ತಿರುವಾಗಲೇ, ಸೇವಕನು ಅರಸನೊಂದಿಗೆ ಬಂದನು. ಅರಸನು ಎಲೀಷನಿಗೆ, “ನೋಡು, ಈ ಆಪತ್ತು ಯೆಹೋವನಿಂದಲೇ ಬಂದದ್ದು, ಇನ್ನು ಮುಂದೆ ನಾನೇಕೆ ಆತನನ್ನು ನಿರೀಕ್ಷಿಸಿಕೊಂಡಿರಬೇಕು” ಎಂದನು.
३३वह उनसे यह बातें कर ही रहा था कि दूत उसके पास आ पहुँचा। और राजा कहने लगा, “यह विपत्ति यहोवा की ओर से है, अब मैं आगे को यहोवा की बाट क्यों जोहता रहूँ?”