< ಅರಸುಗಳು - ದ್ವಿತೀಯ ಭಾಗ 5 >

1 ಅರಾಮ್ಯರ ಅರಸನಿಗೆ ನಾಮಾನನೆಂಬ ಒಬ್ಬ ಸೇನಾಧಿಪತಿಯಿದ್ದನು. ಯೆಹೋವನು ಇವನ ಮುಖಾಂತರವಾಗಿ ಅರಾಮ್ಯರಿಗೆ ಜಯವನ್ನು ಅನುಗ್ರಹಿಸಿದ್ದದರಿಂದ ಅರಸನು ಇವನನ್ನು ಮಹಾ ಪುರುಷನೆಂದೂ ಸನ್ಮಾನಯೋಗ್ಯನೆಂದೂ ಗೌರವಿಸುತ್ತಿದ್ದನು. ಆದರೆ ಪರಾಕ್ರಮಶಾಲಿಯಾದ ಇವನು ಕುಷ್ಠರೋಗಿಯಾಗಿದ್ದನು.
И Нееман князь силы Сирийския бе муж велий пред господином своим и дивен лицем, яко им даде Господь спасение Сирии: и муж бе силен крепостию прокажен.
2 ಅರಾಮ್ಯರು ಒಂದು ಸಾರಿ ಸುಲಿಗೆ ಮಾಡುವುದಕ್ಕೋಸ್ಕರ ಇಸ್ರಾಯೇಲರ ಪ್ರಾಂತ್ಯಕ್ಕೆ ಹೋಗಿ ಬರುವಾಗ ಅಲ್ಲಿನ ಒಬ್ಬ ಹುಡುಗಿಯನ್ನು ಹಿಡಿದುಕೊಂಡು ಬಂದಿದ್ದರು. ಆಕೆಯು ನಾಮಾನನ ಹೆಂಡತಿಗೆ ಸೇವಕಿಯಾದಳು.
И из Сирии изыдоша воини и плениша юнотку малу от земли Израилевы: и бе пред женою Неемановою (служа)
3 ಆಕೆಯು ಒಂದು ದಿನ ತನ್ನ ಯಜಮಾನಿಯ ಬಳಿ, “ನಮ್ಮ ದಣಿಯು ಸಮಾರ್ಯದಲ್ಲಿರುವ ಪ್ರವಾದಿಯ ಹತ್ತಿರ ಇದ್ದಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು. ಅವನು ನನ್ನ ಯಜಮಾನನನ್ನು ಕುಷ್ಠರೋಗದಿಂದ ವಾಸಿಮಾಡುತ್ತಿದ್ದನು” ಎಂದು ಹೇಳಿದಳು.
и рече госпоже своей: о, дабы господин мой был у пророка Божия, иже в Самарии, той бы очистил его и проказы его.
4 ನಾಮಾನನು ಅರಸನ ಸನ್ನಿಧಿಗೆ ಹೋಗಿ ಇಸ್ರಾಯೇಲ್ ದೇಶದ ಹುಡುಗಿಯು ಹೇಳಿದ್ದನ್ನು ತಿಳಿಸಿದನು.
И вниде и возвести господину своему и рече: тако и тако глагола юнотка, яже от земли Израилевы.
5 ಅರಾಮ್ಯರ ಅರಸನು ಅವನಿಗೆ, “ನೀನು ಅಲ್ಲಿಗೆ ಹೋಗಿ ಬಾ. ನಾನು ನಿನ್ನ ಕೈಯಲ್ಲಿ ಇಸ್ರಾಯೇಲರ ಅರಸನಿಗೆ ಒಂದು ಪತ್ರವನ್ನು ಕೊಡುತ್ತೇನೆ” ಎಂದನು. ನಾಮಾನನು ಹತ್ತು ತಲಾಂತು ಬೆಳ್ಳಿ, (ಮೂವತ್ತು ಸಾವಿರ) ಆರು ಸಾವಿರ ತೊಲೆ ಬಂಗಾರ, ಹತ್ತು ಜೊತೆ ಬಟ್ಟೆಗಳು ಇವುಗಳನ್ನು ತೆಗೆದುಕೊಂಡು ಸಮಾರ್ಯಕ್ಕೆ ಹೋಗಿ,
И рече царь Сирийский ко Нееману: иди, вниди, и послю писание ко царю Израилеву. И пойде, и взя в руце свои десять талант сребра и шесть тысящ златник и десять изменяемых риз.
6 ಪತ್ರವನ್ನು ಇಸ್ರಾಯೇಲರ ಅರಸನಿಗೆ ಕೊಟ್ಟನು. ಅದರಲ್ಲಿ, “ನನ್ನ ಸೇವಕನಾದ ನಾಮಾನನನ್ನು ನಿನ್ನ ಬಳಿಗೆ ಕಳುಹಿಸಿದ್ದೇನೆ, ನೀನು ಅವನ ಕುಷ್ಠರೋಗವನ್ನು ವಾಸಿಮಾಡತಕ್ಕದ್ದೆಂದು ಈ ಪತ್ರದಿಂದ ತಿಳಿದುಕೋ” ಎಂಬುದಾಗಿ ಬರೆದಿತ್ತು.
И внесе писание к царю Израилеву глаголя: и ныне егда приидет писание сие к тебе, се, послах к тебе Неемана раба моего, да очистиши его от проказы его.
7 ಇಸ್ರಾಯೇಲರ ಅರಸನು ಪತ್ರವನ್ನು ಓದಿದ ಕೂಡಲೆ ಬಟ್ಟೆಗಳನ್ನು ಹರಿದುಕೊಂಡು, ತನ್ನ ಪರಿವಾರದವರಿಗೆ, “ಅವನು ಕಳುಹಿಸಿದ ಮನುಷ್ಯನನ್ನು ಕುಷ್ಠರೋಗದಿಂದ ವಾಸಿಮಾಡಬೇಕಂತೆ. ಇದು ಎಂಥ ಅಪ್ಪಣೆ! ನಾನೇನು ದೇವರೋ? ಜೀವದಾನಮಾಡುವುದಕ್ಕಾಗಲಿ, ಸಾಯಿಸುವುದಕ್ಕಾಗಲಿ ನನಗೆ ಸಾಮರ್ಥ್ಯ ಉಂಟೋ? ಇವನು ನನ್ನೊಡನೆ ಜಗಳವಾಡುವುದಕ್ಕೆ ಕಾರಣ ಹುಡುಕುತ್ತಿದ್ದಾನಲ್ಲವೇ ನೀವೇ ಆಲೋಚಿಸಿ ನೋಡಿರಿ” ಎಂದು ಹೇಳಿದನು.
И бысть егда прочте писание царь Израилев, раздра ризы своя и рече: еда аз Бог есмь, еже мертвити и животворити, яко сей посла и мне, да очищу мужа от проказы его? Прочее разумейте и видите, яко се ищет вины ко мне.
8 ಇಸ್ರಾಯೇಲರ ಅರಸನು ತನ್ನ ಬಟ್ಟೆಗಳನ್ನು ಹರಿದುಕೊಂಡನೆಂಬುದನ್ನು ದೇವರ ಮನುಷ್ಯನಾದ ಎಲೀಷನು ಕೇಳಿ ದೂತರ ಮುಖಾಂತರವಾಗಿ ಅವನಿಗೆ, “ನೀನು, ನಿನ್ನ ಬಟ್ಟೆಗಳನ್ನು ಹರಿದುಕೊಂಡದ್ದೇಕೆ? ಅವನನ್ನು ನನ್ನ ಬಳಿಗೆ ಕಳುಹಿಸು, ಇಸ್ರಾಯೇಲರಲ್ಲಿ ಒಬ್ಬ ಪ್ರವಾದಿಯಿದ್ದಾನೆಂಬುದು ಅವನಿಗೆ ಗೊತ್ತಾಗಲಿ” ಎಂದು ಹೇಳಿ ಕಳುಹಿಸಿದನು.
И бысть егда услыша Елиссеи, яко раздра ризы своя царь Израилев, и посла к царю Израилеву, глаголя: почто раздрал еси ризы твоя? Да приидет ко мне ныне Нееман, и да разумеет, яко есть пророк во Израили.
9 ನಾಮಾನನು ರಥಾಶ್ವಗಳೊಡನೆ ಎಲೀಷನ ಮನೆಗೆ ಹೋಗಿ ಬಾಗಿಲಿನ ಮುಂದೆ ನಿಂತನು.
И прииде Нееман на конех и на колесницех и ста при дверех дому Елиссеева.
10 ೧೦ ಎಲೀಷನು ಅವನಿಗೆ, “ಹೋಗಿ ಯೊರ್ದನ್ ನದಿಯಲ್ಲಿ ಏಳು ಸಾರಿ ಮುಳುಗಿ ಬಾ, ಆಗ ನಿನ್ನ ದೇಹವು ಮೊದಲಿನಂತಾಗುವುದು; ನೀನು ಶುದ್ಧನಾಗುವಿ” ಎಂದು ಹೇಳಿ ಕಳುಹಿಸಿದನು.
И посла Елиссей посланника к нему, глаголя: шед измыйся седмижды во Иордане, и возвратится плоть твоя к тебе, и очистишися.
11 ೧೧ ನಾಮಾನನು ಇದನ್ನು ಕೇಳಿ ಕೋಪಗೊಂಡು, “ಇದೇನು? ಅವನು ಹೊರಗೆ ಬಂದು ತನ್ನ ದೇವರಾದ ಯೆಹೋವನ ಹೆಸರನ್ನು ಹೇಳಿ ನನ್ನ ಕುಷ್ಠದ ಮೇಲೆ ಕೈಯಾಡಿಸಿ ವಾಸಿಮಾಡುವನೆಂದು ನೆನಸಿದೆನು.
И разгневася Нееман, и отиде, и рече: се, убо глаголах, яко изыдет ко мне, и станет, и призовет во имя Бога своего, и возложит руку свою на место, и очистит проказу:
12 ೧೨ ದಮಸ್ಕದ ಅಬಾನಾ ಮತ್ತು ಪರ್ಪರ್ ಎಂಬ ನದಿಗಳು ಇಸ್ರಾಯೇಲರ ಎಲ್ಲಾ ನದಿ ಹೊಳೆಹಳ್ಳಗಳಿಗಿಂತ ಉತ್ತಮವಾಗಿವೆಯಲ್ಲವೋ? ಸ್ನಾನದಿಂದ ಶುದ್ಧನಾಗುವ ಹಾಗಿದ್ದರೆ ನಾನು ಅವುಗಳಲ್ಲಿಯೇ ಸ್ನಾನಮಾಡಬಹುದಲ್ಲವೇ?” ಎಂದು ಹೇಳಿ, ಬಲು ಸಿಟ್ಟಿನಿಂದ ಹೊರಟುಹೋದನು.
не благи ли Авана и Фарфар реки Дамасковы паче Иордана и всех вод Израилевых? Не шед ли измыюся в них и очишуся? И уклонися и отиде во гневе.
13 ೧೩ ಆಗ ಅವನ ಸೇವಕರು ಹತ್ತಿರ ಬಂದು ಅವನಿಗೆ, “ಸ್ವಾಮೀ, ಪ್ರವಾದಿಯು ಒಂದು ಕಠಿಣವಾದ ಕೆಲಸ ಹೇಳಿದ್ದರೆ, ಅದನ್ನು ನೀವು ಮಾಡುತ್ತಿದ್ದಿರಲ್ಲವೇ? ಹಾಗಾದರೆ ‘ಸ್ನಾನಮಾಡಿ ಶುದ್ಧನಾಗು’ ಎಂದು ಹೇಳಿದರೆ ಯಾಕೆ ಅದರಂತೆ ಮಾಡಬಾರದು” ಎಂದು ಹೇಳಿದರು.
И приближишася отроцы его и реша ему: аще бы велие слово глаголал пророк тебе, не бы ли сотворил еси? А яко рече к тебе: измыйся, и очистишися.
14 ೧೪ ಅವನು ಯೊರ್ದನ್ ನದಿಗೆ ಹೋಗಿ ಏಳು ಸಾರಿ ಅದರಲ್ಲಿ ಮುಳುಗಿ ಎದ್ದನು. ಕೂಡಲೆ ದೇವರ ಮನುಷ್ಯನ ಮಾತಿಗನುಸಾರವಾಗಿ ಅವನ ದೇಹವು ಕೂಸಿನ ದೇಹದಂತೆ ಶುದ್ಧವಾಯಿತು.
И сниде Нееман, и погрузися во Иордане седмижды, по глаголу Елиссееву: и возвратися плоть его яко плоть отрочате млада, и очистися.
15 ೧೫ ಅನಂತರ, ನಾಮಾನನು ತನ್ನ ಪರಿವಾರದವರೊಡನೆ, ಹಿಂದಿರುಗಿ ದೇವರ ಮನುಷ್ಯನ ಹತ್ತಿರ ಹೋಗಿ, ಅವನ ಮುಂದೆ ನಿಂತು, “ಇಸ್ರಾಯೇಲ್ ದೇಶದಲ್ಲಿರುವ ದೇವರ ಹೊರತಾಗಿ ಲೋಕದಲ್ಲಿ ಬೇರೆ ದೇವರು ಇರುವುದೇ ಇಲ್ಲವೆಂಬುದು ಈಗ ನನಗೆ ಗೊತ್ತಾಯಿತು. ನೀನು ದಯವಿಟ್ಟು ಕಾಣಿಕೆಯನ್ನು ಅಂಗೀಕರಿಸಬೇಕು” ಎಂದು ಹೇಳಿದನು.
И возвратися ко Елиссею сам и все ополчение его, и прииде и ста пред ним и рече: се, ныне разумех, яко несть Бога во всей земли, но токмо во Израили: и ныне приими благословение от раба твоего.
16 ೧೬ ಅದಕ್ಕೆ ಎಲೀಷನು, “ನಾನು ಸೇವೆಮಾಡುತ್ತಿರುವ ನನ್ನ ದೇವರು ನಿಜವಾಗಿಯೂ ಜೀವಿಸುವ ದೇವರಾದದರಿಂದ ನಿನ್ನಿಂದ ಏನೂ ತೆಗೆದುಕೊಳ್ಳುವುದಿಲ್ಲ” ಎಂದನು. ನಾಮಾನನು ಎಷ್ಟು ಒತ್ತಾಯಪಡಿಸಿದರೂ ಅವನು ಕಾಣಿಕೆಯನ್ನು ತೆಗೆದುಕೊಳ್ಳಲೇ ಇಲ್ಲ.
И рече Елиссей: жив Господь, Емуже предстах пред ним, аще прииму. И понуждаше его взяти, и не послуша.
17 ೧೭ ಆಗ ನಾಮಾನನು ಎಲೀಷನಿಗೆ, “ನೀನು ನನ್ನ ಕಾಣಿಕೆಯನ್ನು ಸ್ವೀಕರಿಸದಿದ್ದರೆ, ನಿನ್ನ ಸೇವಕನಾದ ನನಗೆ ಎರಡು ಹೇಸರಗತ್ತೆಯ ಹೊರುವಷ್ಟು ಮಣ್ಣನ್ನು ಕೊಡಿಸಬೇಕೆಂದು ಬೇಡಿಕೊಳ್ಳುತ್ತೇನೆ. ನಾನು ಇನ್ನು ಮುಂದೆ ಎಲ್ಲಾ ದೇವತೆಗಳನ್ನು ಬಿಟ್ಟು ಯೆಹೋವನೊಬ್ಬನಿಗೇ ಸರ್ವಾಂಗಹೋಮಯಜ್ಞಗಳನ್ನು ಸಮರ್ಪಿಸಬೇಕೆಂದಿದ್ದೇನೆ.
И рече Нееман: аще ли не (хощеши взяти), то даждь рабу твоему время, супруг мсков, от земли сея червленыя: яко и сотворит отселе раб твой всесожжения и жертвы богом иным, но Господу единому,
18 ೧೮ ಆದರೆ ಈ ವಿಷಯದಲ್ಲಿ ಯೆಹೋವನು ನನ್ನನ್ನು ಕ್ಷಮಿಸಲಿ, ನನ್ನ ಒಡೆಯನು ಆರಾಧನೆಗೋಸ್ಕರ ರಿಮ್ಮೋನನ ದೇವಸ್ಥಾನಕ್ಕೆ ಹೋಗಿ ನನ್ನ ಕೈಹಿಡಿದು ಆ ದೇವತೆಗೆ ನಮಸ್ಕಾರ ಮಾಡುವಾಗ ನಾನೂ ನಮಸ್ಕಾರ ಮಾಡಬೇಕಾಗುವುದು. ಈ ಒಂದು ವಿಷಯದಲ್ಲಿ ಮಾತ್ರ ಯೆಹೋವನು ನನಗೆ ಕ್ಷಮೆಯನ್ನು ಅನುಗ್ರಹಿಸಬೇಕು” ಎಂದನು.
по глаголу сему и о словеси сем: и очистит Господь раба твоего, егда внидет господин мой в дом Ремманов на поклонение тамо: и той почиет на руку моею, и поклонюся в дому Реммани, внегда кланятися ему в дому Реммани, и очистит Господь раба твоего по словеси сему.
19 ೧೯ ಎಲೀಷನು ಅವನಿಗೆ, “ಸಮಾಧಾನದಿಂದ ಹೋಗು” ಎಂದು ಉತ್ತರ ಕೊಟ್ಟನು. ಅವನು ಹೊರಟುಹೋದನು.
И рече Елиссей ко Нееману: иди с миром. И отиде от него на Хаврафа земли.
20 ೨೦ ನಾಮಾನನು ಸ್ವಲ್ಪ ದೂರಕ್ಕೆ ಹೋದ ನಂತರ ದೇವರ ಮನುಷ್ಯನಾದ ಎಲೀಷನ ಸೇವಕನಾದ ಗೇಹಜಿಯು ಮನಸ್ಸಿನಲ್ಲಿ, “ನೋಡು, ನನ್ನ ಯಜಮಾನನು ಆ ಅರಾಮ್ಯನಾದ ನಾಮಾನನಿಂದ ಏನೂ ತೆಗೆದುಕೊಳ್ಳದೆ ಅವನನ್ನು ಹಾಗೆಯೇ ಕಳುಹಿಸಿಬಿಟ್ಟನಲ್ಲಾ, ಯೆಹೋವನಾಣೆ, ನಾನು ಅವನ ಹಿಂದೆ ಓಡುತ್ತಾ ಹೋಗಿ ಅವನಿಂದ ಸ್ವಲ್ಪವನ್ನಾದರೂ ತೆಗೆದುಕೊಂಡು ಬರುವೆನು” ಅಂದುಕೊಂಡು ಹೊರಟನು.
И рече Гиезий отрочищь Елиссеев: се, пощаде господин мой Неемана Сирянина сего, еже не взяти от руки его, яже принесе: жив Господь, яко имам тещи вслед его, и возму от него нечто.
21 ೨೧ ನಾಮಾನನು ತನ್ನ ಹಿಂದೆ ಓಡುತ್ತಾ ಬರುವ ಗೇಹಜಿಯನ್ನು ಕಂಡು ರಥದಿಂದ ಇಳಿದು ಅವನನ್ನು ಎದುರುಗೊಂಡು, “ಎಲ್ಲಾ ಕ್ಷೇಮವೋ?” ಎಂದು ಕೇಳಿದನು.
И тече Гиезий во след Нееманов. И виде его Нееман текуща вслед себе, и возвратися с колесницы на сретение ему и рече: мир ли?
22 ೨೨ ಅದಕ್ಕೆ ಗೇಹಜಿಯು, “ಕ್ಷೇಮ, ಎಫ್ರಾಯೀಮ್ ಪರ್ವತ ಪ್ರದೇಶದಿಂದ ಪ್ರವಾದಿಮಂಡಳಿಯವರಾದ ಇಬ್ಬರು ಯೌವನಸ್ಥರು ಬಂದಿರುತ್ತಾರೆ. ಆದುದರಿಂದ ಅವರಿಗೋಸ್ಕರ ಬೇಗನೇ ಒಂದು ತಲಾಂತು ಬೆಳ್ಳಿಯನ್ನೂ, ಎರಡು ಜೋಡಿ ಬಟ್ಟೆಗಳನ್ನೂ ತೆಗೆದುಕೊಂಡು ಬರಬೇಕೆಂದು ನನ್ನ ಯಜಮಾನನು ನನ್ನನ್ನು ನಿನ್ನ ಬಳಿಗೆ ಕಳುಹಿಸಿದನು” ಎಂದು ಉತ್ತರ ಕೊಟ್ಟನು.
И рече Гиезий: мир: господин мой посла мя, глаголя: се, ныне приидоста ко мне два отрочища от горы Ефремли от сынов пророчих: даждь убо има талант сребра и две премены риз.
23 ೨೩ ನಾಮಾನನು, “ಎರಡು ತಲಾಂತನ್ನಾದರೂ ತೆಗೆದುಕೊಳ್ಳಬಾರದೆ?” ಎಂದು ಅವನನ್ನು ಒತ್ತಾಯಪಡಿಸಿ ಎರಡು ಚೀಲಗಳಲ್ಲಿ ಬೆಳ್ಳಿ ನಾಣ್ಯಗಳನ್ನು ತುಂಬಿಸಿ, ಆ ಚೀಲಗಳಲ್ಲಿ ಎರಡು ಜೋಡಿ ಬಟ್ಟೆಗಳನ್ನೂ ಇಟ್ಟು ಇಬ್ಬರು ಸೇವಕರ ಮೇಲೆ ಹೊರಿಸಿ ಅವರನ್ನು ಗೇಹಜಿಯ ಸಂಗಡ ಕಳುಹಿಸಿದನು. ಅವರು ಹೊತ್ತುಕೊಂಡು ಅವನ ಮುಂದೆ ನಡೆದರು.
И рече Нееман: возми два таланта сребра. И взя два таланта во два мешца и две премены риз, и возложи на два отрочиша своя, и несоста пред ним:
24 ೨೪ ಗೇಹಜಿಯು ಗುಡ್ಡವನ್ನು ಮುಟ್ಟಿದಾಗ, ಎರಡು ಚೀಲ ಬೆಳ್ಳಿಯನ್ನು ತೆಗೆದುಕೊಂಡು ಮನೆಯಲ್ಲಿ ಅಡಗಿಸಿಟ್ಟು, ಆಳುಗಳನ್ನು ಕಳುಹಿಸಿಬಿಟ್ಟನು, ಅವರು ಹೊರಟು ಹೋದರು.
и приидоша в сумраки, и взя от рук их и сокры во храмине, и отпусти мужы.
25 ೨೫ ನಂತರ ಗೇಹಜಿಯು ತನ್ನ ಯಜಮಾನನ ಬಳಿಗೆ ಬಂದನು. ಎಲೀಷನು ಅವನನ್ನು, “ಗೇಹಜಿಯೇ, ಎಲ್ಲಿಗೆ ಹೋಗಿ ಬಂದಿರುವೆ?” ಎಂದು ಕೇಳಿದನು. ಅದಕ್ಕೆ ಅವನು, “ನಿನ್ನ ಸೇವಕನಾದ ನಾನು ಎಲ್ಲಿಯೂ ಹೋಗಲಿಲ್ಲ” ಎಂದು ಉತ್ತರಕೊಟ್ಟನು.
И сам вниде и предста господину своему. И рече к нему Елиссей: откуду (пришел еси), Гиезие? И рече Гиезий: не исходил раб твой никаможе.
26 ೨೬ ಆಗ ಎಲೀಷನು ಗೇಹಜಿಗೆ, “ಒಬ್ಬನು ರಥದಿಂದ ಇಳಿದು ಬಂದು, ನಿನ್ನನ್ನು ಎದುರುಗೊಂಡದ್ದು ನನ್ನ ಜ್ಞಾನದೃಷ್ಟಿಗೆ ಕಾಣಲಿಲ್ಲವೆಂದು ತಿಳಿದಿರುವೆಯಾ? ದ್ರವ್ಯ, ಬಟ್ಟೆಗಳು, ಎಣ್ಣೇ ಮರದ ತೋಪುಗಳು, ದ್ರಾಕ್ಷಿತೋಟಗಳು, ಕುರಿದನಗಳು, ದಾಸದಾಸಿಯರು, ಜನರೂ ಇವುಗಳನ್ನು ಸಂಪಾದಿಸುವುದಕ್ಕೆ ಇದು ಸಮಯವೋ?
И рече к нему Елиссей: не ходило ли сердце мое с тобою, и видех, егда возвращашеся муж с колесницы своей во сретение тебе? И ныне взял еси сребро и ризы взял еси, да купиши за них вертограды и маслины и винограды, и овцы и волы, и отроки и отроковицы:
27 ೨೭ ನಾಮಾನನ ಕುಷ್ಠವು ನಿನ್ನನ್ನೂ, ನಿನ್ನ ಸಂತಾನದವರನ್ನೂ ಸದಾಕಾಲ ಹಿಡಿದಿರುವುದು” ಎಂದನು. ಕೂಡಲೆ ಅವನಿಗೆ ಕುಷ್ಠ ಹತ್ತಿತು. ಗೇಹಜಿ ಹಿಮದಂತೆ ಬಿಳುಪಾಗಿ ಎಲೀಷನ ಸನ್ನಿಧಿಯಿಂದ ಹೊರಟುಹೋದನು.
и проказа Нееманова да прильпнет к тебе и к семени твоему во веки. И изыде от лица его прокажен яко снег.

< ಅರಸುಗಳು - ದ್ವಿತೀಯ ಭಾಗ 5 >