< ಅರಸುಗಳು - ದ್ವಿತೀಯ ಭಾಗ 20 >
1 ೧ ಆ ಕಾಲದಲ್ಲಿ ಹಿಜ್ಕೀಯನನ್ನು ಮರಣಕರವಾದ ರೋಗವು ಬಾಧಿಸಿತು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು ಅವನಿಗೆ, “‘ನಿನ್ನ ಮನೆಯ ಕಾರ್ಯಗಳನ್ನೆಲ್ಲಾ ಕ್ರಮಪಡಿಸಿ ಸೂಕ್ತಮಾಡಿಕೋ, ನೀನು ಮರಣ ಹೊಂದುವಿ’ ಎಂದು ಯೆಹೋವನು ತಿಳಿಸಿದ್ದಾನೆ” ಎಂದು ಹೇಳಿದನು.
၁ထိုအချိန်ကာလ၌ပင်ဟေဇကိမင်းသည် သေလုမတတ်ဖျားနာ၏။ အာမုတ်၏သား ပရောဖက်ဟေရှာယသည် မင်းကြီးကိုလာ ရောက်ကြည့်ရှုပြီးနောက်``အရှင်သည်ပြန်လည် ကျန်းမာလာတော့မည်မဟုတ်သဖြင့် အရှင် နောက်ဆုံးမှာကြားရန်ရှိသည်တို့ကိုမှာကြား ခဲ့ရန် ထာဝရဘုရားမိန့်တော်မူပါ၏။ သို့ ဖြစ်၍သေရန်အသင့်ပြင်ပါလော့'' ဟုဆင့် ဆို၏။
2 ೨ ಇದನ್ನು ಕೇಳಿದೊಡನೆ ಹಿಜ್ಕೀಯನು ಗೋಡೆಯ ಕಡೆಗೆ ತಿರುಗಿಕೊಂಡು ಯೆಹೋವನಿಗೆ ಪ್ರಾರ್ಥಿಸಿ, ಹೀಗೆ ವಿಜ್ಞಾಪಿಸಿಕೊಂಡನು.
၂ဟေဇကိသည် နံရံဘက်သို့မျက်နှာလှည့်လျက်၊-
3 ೩ “ಯೆಹೋವನೇ, ದಯವಿಟ್ಟು ನಾನು ನಂಬಿಗಸ್ತನಾಗಿಯೂ ನಿನಗೆ, ಪ್ರಾಮಾಣಿಕನಾಗಿಯೂ ಶ್ರದ್ಧೆಯಿಂದಲೂ ನಡೆದುಕೊಂಡು ನಿನ್ನ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದುದನ್ನು ನೆನಪುಮಾಡಿಕೋ” ಎಂದು ಹೇಳಿ ಹಿಜ್ಕೀಯನು ಬಹಳವಾಗಿ ಕಣ್ಣೀರಿಟ್ಟು ಪ್ರಾರ್ಥಿಸಿದನು.
၃``အို ထာဝရဘုရား၊ အကျွန်ုပ်သည်ကိုယ်တော် ၏အမှုတော်ကိုသစ္စာနှင့်ဆောင်ရွက်လျက် ကိုယ် တော်ပြုစေလိုသည်အတိုင်းပြုသည်ကိုသတိ ရတော်မူပါ'' ဟုပတ္ထနာပြုပြီးလျှင်အလွန် ငိုကြွေးလေ၏။
4 ೪ ಯೆಶಾಯನು ಅರಮನೆಯ ಮಧ್ಯಪ್ರಾಕಾರವನ್ನು ದಾಟುವುದಕ್ಕೆ ಮೊದಲು ಯೆಹೋವನಿಂದ ಅಪ್ಪಣೆಯಾಯಿತು.
၄ဟေရှာယသည်မင်းကြီးထံမှထွက်ခွာသွား ရာ နန်းတော်အလယ်ဝင်းကိုမဖြတ်မီဟေ ရှာယထံသို့၊-
5 ೫ “ನೀನು ಹಿಂದಿರುಗಿ ಹೋಗಿ, ನನ್ನ ಜನಗಳ ಪ್ರಭುವಾಗಿರುವ ಹಿಜ್ಕೀಯನಿಗೆ, ‘ನಿನ್ನ ಪಿತೃವಾದ ದಾವೀದನ ದೇವರಾದ ಯೆಹೋವನು ಹೇಳಿದ್ದೇನೆಂದರೆ, ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನು ನೋಡಿದ್ದೇನೆ. ನೀನು ಗುಣಹೊಂದಿ ಮೂರನೆಯ ದಿನ ನನ್ನ ಆಲಯಕ್ಕೆ ಬರುವೆ.
၅``ငါထာဝရဘုရား၏လူမျိုးတော်ကို အစိုး ရသူဟေဇကိမင်းထံသို့ပြန်သွား၍`သင်၏ ဘိုးတော်ဒါဝိဒ်၏ဘုရားသခင်၊ ငါထာဝရ ဘုရားသည် သင်၏ပတ္ထနာကိုကြားတော်မူ၍ သင်၏မျက်ရည်ကိုမြင်တော်မူပြီ။ ငါသည် သင်၏အနာရောဂါကိုပျောက်ကင်းစေမည် ဖြစ်၍ သင်သည်သုံးရက်ကြာသော်ဗိမာန် တော်သို့သွားနိုင်လိမ့်မည်။-
6 ೬ ಇದಲ್ಲದೆ, ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನು ಹೆಚ್ಚಿಸಿದ್ದೇನೆ, ನಿನ್ನನ್ನೂ, ಈ ಪಟ್ಟಣವನ್ನೂ ಅಶ್ಶೂರನ ಅರಸನ ಕೈಗೆ ಬೀಳದಂತೆ ತಪ್ಪಿಸುವೆನು. ನನಗಾಗಿಯೂ, ನನ್ನ ಸೇವಕನಾದ ದಾವೀದನಿಗಾಗಿಯೂ ಈ ಪಟ್ಟಣವನ್ನು ಉಳಿಸಿ ಕಾಪಾಡುವೆನು’ ಎಂಬುದಾಗಿ ನಿನ್ನ ಪೂರ್ವಿಕನಾದ ದಾವೀದನ ದೇವರಾಗಿರುವ ಯೆಹೋವನು ಹೇಳುತ್ತಾನೆ ಎಂದು ತಿಳಿಸು” ಅಂದನು.
၆ငါသည်သင့်အားနောက်ထပ်တစ်ဆယ့်ငါးနှစ် အသက်ရှင်စေမည်။ ငါသည်သင်နှင့်ဤယေရု ရှလင်မြို့ကို အာရှုရိဧကရာဇ်မင်း၏လက် မှကယ်ဆယ်မည်။ ငါ၏ဂုဏ်တော်ကိုလည်းကောင်း၊ ငါ၏အစေခံဒါဝိဒ်အားငါပေးသည့်ကတိ တော်ကိုလည်းကောင်းထောက်၍ ငါသည်ဤမြို့ ကိုကာကွယ်မည်' ဟုဆင့်ဆိုလော့'' ဟုထာဝရ ဘုရားဗျာဒိတ်တော်ရောက်လာ၏။
7 ೭ ಅನಂತರ ಯೆಶಾಯನು, ಒಂದು ಅಂಜೂರಹಣ್ಣನ್ನು ತೆಗೆದು ಅವನ ಗಾಯದ ಮೇಲೆ ಇಟ್ಟಾಗ ಹಿಜ್ಕೀಯನು ಗುಣಹೊಂದಿದನು.
၇ဟေရှာယသည်မင်းကြီး၏အစေခံတို့ အား``အရှင်၏အနာစိမ်းကိုသင်္ဘောသဖန်း သီးဖြင့်အုံ၍ထားပါ။ ထိုအနာသည်သက် သာပျောက်ကင်းသွားပါလိမ့်မည်'' ဟုပြော၏။-
8 ೮ ಹಿಜ್ಕೀಯನು ಯೆಶಾಯನಿಗೆ, “ಯೆಹೋವನು ನನ್ನನ್ನು ಗುಣಪಡಿಸುವನೆಂಬುವುದಕ್ಕೂ, ನಾನು ಮೂರನೆಯ ದಿನ ಆತನ ಆಲಯಕ್ಕೆ ಹೋಗುವೆನೆಂಬುವುದಕ್ಕೂ, ಇರುವ ಗುರುತು ಏನು?” ಎಂದು ಕೇಳಿದನು.
၈မင်းကြီးက``ထာဝရဘုရားသည်ငါ၏အနာ ကိုပျောက်ကင်းစေသဖြင့် ငါသည်သုံးရက်ကြာ သော်ဗိမာန်တော်သို့သွားနိုင်လိမ့်မည်ဖြစ်ကြောင်း အဘယ်သက်သေလက္ခဏာအားဖြင့်သိရှိနိုင် ပါမည်နည်း'' ဟုမေးတော်မူ၏။-
9 ೯ ಅದಕ್ಕೆ ಯೆಶಾಯನು, “ಯೆಹೋವನು ನುಡಿದಿದ್ದನ್ನು ನೆರವೇರಿಸುವನು ಎಂಬುದಕ್ಕೆ ಯೆಹೋವನಿಂದ ಉಂಟಾದ ಗುರುತು ಕೇಳುತ್ತಿರುವೆ, ಹಾಗಾದರೆ ನೆರಳು ಹತ್ತು ಮೆಟ್ಟಲು ಮುಂದೆ ಹೋಗಬೇಕೋ? ಹಿಂದೆ ಬರಬೇಕೋ? ಹೇಳು ಹಿಂದೆ ಹೋಗಬೇಕೋ ಹೇಳು?” ಎಂದು ಕೇಳಿದನು.
၉ဟေရှာယက``ထာဝရဘုရားသည်မိမိ၏ ကတိတော်အတိုင်းပြုတော်မူမည်ဖြစ်ကြောင်း အရှင်သိရှိစေရန်သက်သေလက္ခဏာတစ်ခု ကိုပြတော်မူမည်။ အရှင်သည်လှေကား ပေါ်တွင်ကျလျက်ရှိသောအရိပ်ကိုရှေ့သို့ ဆယ်ထစ်တိုးစေလိုပါသလော။ သို့မဟုတ် နောက်သို့ဆယ်ထစ်ဆုတ်စေလိုပါသလော'' ဟုပြန်၍မေး၏။
10 ೧೦ ಅದಕ್ಕೆ ಹಿಜ್ಕೀಯನು, “ನೆರಳು ಮುಂದೆ ಹೋಗುವುದು ಸುಲಭ, ಆದುದರಿಂದ ಹತ್ತು ಮೆಟ್ಟಲು ಹಿಂದೆ ಬರುವಂತೆ ಮಾಡು” ಎಂದು ಹೇಳಿದನು.
၁၀ဟေဇကိက``အရိပ်ကိုဆယ်ထစ်တိုးစေရန် မှာလွယ်ကူ၏။ သို့ဖြစ်၍ဆယ်ထစ်ဆုတ်ပါ လေစေ'' ဟုဆို၏။
11 ೧೧ ಆಗ ಪ್ರವಾದಿಯಾದ ಯೆಶಾಯನು ಯೆಹೋವನಿಗೆ ಮೊರೆಯಿಡಲು ಆತನು ಆಹಾಜನ ಗಡಿಯಾರದ ವೇಳಾನುಸಾರ ಹತ್ತು ಮೆಟ್ಟಲು ಮುಂದೆ ಹೋಗಿದ್ದ ನೆರಳನ್ನು ಹತ್ತು ಮೆಟ್ಟಲು ಹಿಂದೆ ಬರುವಂತೆ ಮಾಡಿದನು.
၁၁ဟေရှာယသည်ထာဝရဘုရားထံပတ္ထနာ ပြုခြင်းအားဖြင့် အာခတ်မင်းဆောက်လုပ်ထား ခဲ့သည့်လှေကားပေါ်တွင်ကျလျက်ရှိသော အရိပ်သည်နောက်သို့ဆယ်ထစ်ဆုတ်လေ၏။
12 ೧೨ ಅದೇ ಕಾಲದಲ್ಲಿ ಬಲದಾನನ ಮಗನೂ, ಬಾಬೆಲಿನ ಅರಸನೂ ಆದ ಬೆರೋದಕಬಲದಾನ ಎಂಬುವವನು ಹಿಜ್ಕೀಯನು ಅಸ್ವಸ್ಥನಾಗಿದ್ದಾನೆಂದು ಕೇಳಿ, ದೂತರ ಮುಖಾಂತರವಾಗಿ ಅವನಿಗೆ ಪತ್ರವನ್ನೂ, ಬಹುಮಾನವನ್ನೂ ಕಳುಹಿಸಿದನು.
၁၂ထိုအချိန်ကာလ၌ဗာလဒန်မင်း၏သားတော် ဗာဗုလုန်ဘုရင်မေရောဒဗာလဒန်သည် ဟေ ဇကိမင်းဖျားနာလျက်ရှိကြောင်းကြားသိရ သဖြင့် သဝဏ်လွှာတစ်စောင်နှင့်လက်ဆောင်ပေး ပို့ရာ၊-
13 ೧೩ ಹಿಜ್ಕೀಯನು ಬಂದಂಥ ದೂತರ ಮಾತನ್ನು ಕೇಳಿ, ಅವರಿಗೆ ಬೆಳ್ಳಿಬಂಗಾರ, ಸುಗಂಧದ್ರವ್ಯ, ಪರಿಮಳತೈಲ, ಮೊದಲಾದ ಪದಾರ್ಥಗಳಿರುವ ಮನೆಯನ್ನೂ, ಆಯುಧಶಾಲೆಯನ್ನೂ, ತನ್ನ ಭಂಡಾರದಲ್ಲಿದ್ದದೆಲ್ಲವನ್ನೂ ತೋರಿಸಿದನು. ಅವನ ಅರಮನೆಯಲ್ಲಿಯೂ, ರಾಜ್ಯದಲ್ಲಿಯೂ ಅವರಿಗೆ ತೋರಿಸದಿದ್ದ ವಸ್ತುವು ಒಂದೂ ಇರಲಿಲ್ಲ.
၁၃ဟေဇကိသည်စေတမန်တို့ကိုကြိုဆိုပြီး လျှင် မိမိ၏ဘဏ္ဍာတော်များဖြစ်သည့် ရွှေ၊ ငွေ၊ နံ့သာမျိုး၊ နံ့သာဆီနှင့်လက်နက်ရှိသမျှ ကိုပြ၏။ ပစ္စည်းသိုလှောင်ခန်းများနှင့်နိုင်ငံ တော်အရပ်ရပ်တွင်ရှိသမျှသောအရာများ ကို ထိုသူတို့အားမင်းကြီးပြလေ၏။-
14 ೧೪ ಆಗ ಪ್ರವಾದಿಯಾದ ಯೆಶಾಯನು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನನ್ನು, “ಆ ಮನುಷ್ಯರು ಎಲ್ಲಿಯವರು? ಏನು ಹೇಳಿದರು?” ಎಂದು ಕೇಳಲು ಅವನು, “ಅವರು ಬಹು ದೂರ ದೇಶವಾದ ಬಾಬೆಲಿನಿಂದ ಬಂದವರು” ಎಂದು ಉತ್ತರ ಕೊಟ್ಟನು.
၁၄ထိုနောက်ဟေရှာယသည်ဟေဇကိမင်းထံသွား ၍``ထိုသူတို့သည်အဘယ်အရပ်မှလာကြပါ သနည်း။ သူတို့ကအရှင်အားအဘယ်သို့တင် လျှောက်ကြပါသနည်း'' ဟုမေး၏။ ဟေဇကိ က``သူတို့သည်အလွန်ဝေးသောဗာဗုလုန် ပြည်မှလာပါသည်'' ဟုဖြေ၏။
15 ೧೫ ಯೆಶಾಯನು ತಿರುಗಿ ಹಿಜ್ಕೀಯನನ್ನು, “ಅವರು ನಿನ್ನ ಮನೆಯಲ್ಲಿ ಏನು ನೋಡಿದರು?” ಎಂದು ಕೇಳಲು ಅವನು, “ಅರಮನೆಯಲ್ಲಿ ಇರುವುದೆಲ್ಲವನ್ನೂ ನೋಡಿದರು. ನನ್ನ ಭಂಡಾರದಲ್ಲಿ ನಾನು ಅವರಿಗೆ ತೋರಿಸದಿದ್ದ ಒಂದು ವಸ್ತುವು ಇರುವುದಿಲ್ಲ” ಎಂದನು.
၁၅ဟေရှာယက``သူတို့သည်နန်းတော်တွင်း၌ အဘယ်အရာများကိုတွေ့မြင်သွားကြ ပါသနည်း'' ဟုမေးပြန်၏။ ဟေဇကိက``သူတို့သည်နန်းတော်တွင်း၌ရှိ သမျှသောအရာတို့ကိုတွေ့မြင်ကြပါ၏။ ပစ္စည်းသိုလှောင်ခန်းများထဲမှသူတို့အား ငါ မပြသောအရာတစ်စုံတစ်ခုမျှမရှိ'' ဟု မိန့်တော်မူ၏။
16 ೧೬ ಆಗ ಯೆಶಾಯನು ಹಿಜ್ಕೀಯನಿಗೆ, “ಯೆಹೋವನ ಮಾತನ್ನು ಕೇಳು,
၁၆ထိုအခါဟေရှာယသည်မင်းကြီးအား``အရှင့် နန်းတော်တွင်ရှိသမျှသောအရာတို့ကိုလည်း ကောင်း၊ ယနေ့တိုင်အောင်အရှင့်ဘိုးဘေးတို့စု ဆောင်းထားရှိခဲ့သည့်ပစ္စည်းဥစ္စာရှိသမျှကို လည်းကောင်း ဗာဗုလုန်ပြည်သို့ဆောင်ယူသွား ရာနေ့ရက်ကာလရောက်ရှိလာလိမ့်မည်။ အဘယ်အရာတစ်စုံတစ်ခုမျှကျန်ရစ် လိမ့်မည်မဟုတ်။-
17 ೧೭ ‘ಆತನು ನಿನ್ನ ಪೂರ್ವಿಕರ ಕಾಲದಿಂದ ಇಂದಿನವರೆಗೂ ಅರಮನೆಯಲ್ಲಿ ಸಂಗ್ರಹವಾದದ್ದೆಲ್ಲವನ್ನು ಬಾಬಿಲೋನಿಗೆ ಒಯ್ಯಲ್ಪಡುವ ದಿನವು ಬರುವುದು, ಇಲ್ಲಿ ಏನೂ ಉಳಿಯುವುದಿಲ್ಲ ಎಂದು ಯೆಹೋವನು ಹೇಳುತ್ತಾನೆ.
၁၇
18 ೧೮ ಬಾಬೆಲಿನ ಅರಸನು ಬಂದು ನಿನ್ನಿಂದ ಹುಟ್ಟುವಂಥ ಮಕ್ಕಳನ್ನು ತೆಗೆದುಕೊಂಡು ಹೋಗಿ, ಅವರನ್ನು ತಮ್ಮ ಅರಮನೆಯಲ್ಲಿ ಕಂಚುಕಿಗಳನ್ನಾಗಿ ನೇಮಿಸಿಕೊಳ್ಳುವರು ಎಂದು ಯೆಹೋವನು ಅನ್ನುತ್ತಾನೆ’” ಎಂದು ಹೇಳಿದನು.
၁၈အရှင့်သားမြေးအရင်းအချာအချို့တို့သည် လည်းအဖမ်းခံရလျက် ဗာဗုလုန်ဘုရင်၏နန်း တော်တွင် မိန်းမစိုးများအဖြစ်ဖြင့်အမှုထမ်း ရကြလိမ့်မည်ဖြစ်ကြောင်း အနန္တတန်ခိုးရှင် ထာဝရဘုရားမိန့်တော်မူပါ၏'' ဟုဆင့် ဆိုလေသည်။
19 ೧೯ ಹಿಜ್ಕೀಯನು ಯೆಶಾಯನಿಗೆ, “ನೀನು ತಿಳಿಸಿದ ಯೆಹೋವನ ಮಾತು ಒಳ್ಳೆಯದಾಗಿದೆ. ನನ್ನ ಜೀವಮಾನ ಕಾಲದಲ್ಲಿ ಸಮಾಧಾನವೂ, ಭದ್ರತೆಯೂ ಇರುವುದಲ್ಲವೇ?” ಎಂದು ಕೊಂಡನು.
၁၉ဟေဇကိမင်းသည်မိမိ၏လက်ထက်၌ ငြိမ်း ချမ်းသာယာမှုနှင့်ဘေးမဲ့လုံခြုံမှုရှိလိမ့် မည်ဟု အနက်အဋ္ဌိပ္ပါယ်ကောက်ယူကာ``ငါ့အား ဆင့်ဆိုသည့်ထာဝရဘုရားထံမှဗျာဒိတ် တော်သည်ကောင်းပေ၏'' ဟုဆို၏။
20 ೨೦ ಹಿಜ್ಕೀಯನ ಉಳಿದ ಚರಿತ್ರೆಯೂ, ಅವನ ಪರಾಕ್ರಮಕೃತ್ಯಗಳೂ, ಅವನು ಕೆರೆಕಾಲುವೆಗಳನ್ನು ಮಾಡಿಸಿ ಊರೊಳಗೆ ನೀರನ್ನು ತಂದ ವಿವರವೂ ಯೆಹೂದ ರಾಜಕಾಲವೃತ್ತಾಂತ ಪುಸ್ತಕ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.
၂၀ဟေဇကိမင်း၏လက်ရုံးရည်၊ ရေလှောင်ကန် ဆောက်လုပ်ခြင်း၊ မြို့တွင်းသို့ရေသွင်းပြွန်သွယ် ခြင်းအပါအဝင် သူလုပ်ဆောင်ခဲ့သည့်အခြား အမှုအရာရှိသမျှကို ယုဒရာဇဝင်တွင်ရေး ထားသတည်း။-
21 ೨೧ ಹಿಜ್ಕೀಯನು ಪೂರ್ವಿಕರ ಬಳಿಗೆ ಸೇರಲು ಅವನಿಗೆ ಬದಲಾಗಿ ಅವನ ಮಗನಾದ ಮನಸ್ಸೆಯು ಅರಸನಾದನು.
၂၁ဟေဇကိကွယ်လွန်သောအခါသူ၏သားတော် မနာရှေသည် ခမည်းတော်၏အရိုက်အရာကို ဆက်ခံ၍နန်းတက်လေသည်။