< ಅರಸುಗಳು - ದ್ವಿತೀಯ ಭಾಗ 18 >
1 ೧ ಇಸ್ರಾಯೇಲರ ಅರಸನೂ ಏಲನ ಮಗನಾದ ಹೋಶೇಯನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಯೆಹೂದ ರಾಜನಾದ ಆಹಾಜನ ಮಗ ಹಿಜ್ಕೀಯನು ಆಳ್ವಿಕೆಗೆ ಬಂದನು.
I Israels konge Hoseas, Elas sønns tredje år blev Esekias, sønn av Judas konge Akas, konge.
2 ೨ ಇವನು ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಇಪ್ಪತ್ತೊಂಭತ್ತು ವರ್ಷಗಳ ಕಾಲ ಆಳಿದನು. ಜೆಕರ್ಯನ ಮಗಳಾದ ಅಬೀ ಎಂಬಾಕೆಯು ಇವನ ತಾಯಿ.
Han var fem og tyve år gammel da han blev konge, og han regjerte ni og tyve år i Jerusalem; hans mor hette Abi og var datter av Sakarja.
3 ೩ ಇವನು ಎಲ್ಲಾ ವಿಷಯಗಳಲ್ಲಿಯೂ ತನ್ನ ಪೂರ್ವಿಕನಾದ ದಾವೀದನಂತೆ ಯೆಹೋವನ ಚಿತ್ತಾನುಸಾರವಾಗಿ ನಡೆದನು.
Han gjorde hvad rett var i Herrens øine, aldeles som hans far David hadde gjort.
4 ೪ ಪೂಜಾಸ್ಥಳಗಳನ್ನು ಹಾಳುಮಾಡಿ, ಕಲ್ಲುಕಂಬಗಳನ್ನು ಒಡೆದು, ಅಶೇರ ವಿಗ್ರಹ ಸ್ತಂಭಗಳನ್ನು ಕತ್ತರಿಸಿ ಹಾಕಿದನು. ಮೋಶೆಯು ಮಾಡಿಸಿದ ತಾಮ್ರದ ಸರ್ಪವನ್ನು ಚೂರುಚೂರು ಮಾಡಿದನು. ಇಸ್ರಾಯೇಲರು ಅದಕ್ಕೆ ಆ ವರೆಗೂ ಧೂಪವನ್ನರ್ಪಿಸುತ್ತಿದ್ದರು. ಅದಕ್ಕೆ “ನೆಹುಷ್ಟಾನ್” ಎಂಬ ಹೆಸರಿತ್ತು.
Han nedla offerhaugene og sønderslo billedstøttene og hugg Astarte-billedet i stykker og knuste den kobberslange Moses hadde gjort; for like til den tid hadde Israels barn brent røkelse for den; de kalte den Nehustan.
5 ೫ ಹಿಜ್ಕೀಯನು ಇಸ್ರಾಯೇಲರ ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದನು. ಯೆಹೂದ್ಯರಲ್ಲಿ ಇವನಿಗೆ ಸಮಾನನಾದ ಅರಸನು ಹಿಂದೆಯೂ ಇರಲಿಲ್ಲ, ಆಮೇಲೂ ಇರಲಿಲ್ಲ.
Til Herren, Israels Gud, satte han sin lit, og efter ham har det ikke vært hans like blandt alle Judas konger, heller ikke blandt dem som hadde vært før ham.
6 ೬ ಇದಲ್ಲದೆ, ಇವನು ಯೆಹೋವನನ್ನೇ ಆಶ್ರಯಿಸಿಕೊಂಡು ಆತನನ್ನು ಬಿಡದೆ ಹಿಂಬಾಲಿಸಿ, ಮೋಶೆಯ ಮುಖಾಂತರವಾಗಿ ಅನುಗ್ರಹಿಸಿದ ಆಜ್ಞೆಗಳನ್ನು ಕೈಕೊಂಡು ನಡೆದನು.
Han holdt fast ved Herren, han vek ikke fra ham, og han holdt hans bud, dem som Herren hadde gitt Moses.
7 ೭ ಯೆಹೋವನು ಹಿಜ್ಕೀಯನ ಸಂಗಡ ಇದ್ದುದರಿಂದ ಅವನು ಹೋದ ಎಲ್ಲ ಕಡೆ ಅಭಿವೃದ್ಧಿ ಹೊಂದಿದನು. ಇವನು ಅಶ್ಶೂರದ ಅರಸನಿಗೆ ವಿರುದ್ಧವಾಗಿ ದಂಗೆ ಎದ್ದು ಸ್ವತಂತ್ರನಾದನು.
Og Herren var med ham; i alt han tok sig fore, bar han sig viselig at. Han falt fra kongen i Assyria og vilde ikke tjene ham lenger.
8 ೮ ಗಾಜ ಪ್ರಾಂತ್ಯದವರೆಗೆ ವಾಸವಾಗಿದ್ದ ಫಿಲಿಷ್ಟಿಯರನ್ನು ಸೋಲಿಸಿ, ಕಾವಲುಗಾರರ ಗೋಪುರ ಮೊದಲುಗೊಂಡು ಕೋಟೆಕೊತ್ತಲುಗಳುಳ್ಳ ಚಿಕ್ಕಗ್ರಾಮ ಮೊದಲುಗೊಂಡು ಮಹಾನಗರಗಳವರೆಗೂ ಎಲ್ಲಾ ಊರುಗಳನ್ನು ನಾಶಮಾಡಿದನು.
Han slo filistrene og tok deres land like til Gasa og de omliggende bygder like fra vakttårnene til de faste byer.
9 ೯ ಇಸ್ರಾಯೇಲರ ಅರಸನೂ ಏಲನ ಮಗನೂ ಆದ ಹೋಶೇಯನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಅಂದರೆ ಹಿಜ್ಕೀಯನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಅಶ್ಶೂರದ ಅರಸನಾದ ಶಲ್ಮನೆಸರನು ಸಮಾರ್ಯಕ್ಕೆ ವಿರೋಧವಾಗಿ ಬಂದು ಮೂರು ವರ್ಷಗಳವರೆಗೂ ಅದಕ್ಕೆ ಮುತ್ತಿಗೆ ಹಾಕಿ ಅದನ್ನು ವಶಪಡಿಸಿಕೊಂಡನು.
I kong Esekias' fjerde år, som var Israels konge Hoseas, Elas sønns syvende år, drog Salmanassar, kongen i Assyria, op imot Samaria og kringsatte det.
10 ೧೦ ಮೂರು ವರ್ಷಗಳ ತರುವಾಯ, ಇಸ್ರಾಯೇಲರ ಅರಸನಾದ ಹೋಶೇಯನ ಆಳ್ವಿಕೆಯ ಒಂಭತ್ತನೆಯ ವರ್ಷದಲ್ಲಿ ಅಂದರೆ ಹಿಜ್ಕೀಯನ ಆಳ್ವಿಕೆಯ ಆರನೆಯ ವರ್ಷದಲ್ಲಿ ಅವನು ಸಮಾರ್ಯವನ್ನು ಸ್ವಾಧೀನಮಾಡಿಕೊಂಡನು.
Da tre år var gått, inntok de det; det var i Esekias' sjette år, som var Israels konge Hoseas niende år, Samaria blev inntatt.
11 ೧೧ ಅಶ್ಶೂರದ ಅರಸನು ಇಸ್ರಾಯೇಲರನ್ನು ಸೆರೆಹಿಡಿದು ಅವರನ್ನು ಹಲಹು, ಹಾಬೋರ್ ನದಿಯಿರುವ ಗೋಜಾನ್ ಪ್ರಾಂತ್ಯ, ಮೇದ್ಯರ ಪಟ್ಟಣಗಳಲ್ಲಿ ಇರಿಸಿದನು.
Og kongen i Assyria bortførte Israel til Assyria og flyttet dem til Halah og til Habor, en elv i Gosan, og til Medias byer,
12 ೧೨ ಏಕೆಂದರೆ ಅವರು ತಮ್ಮ ದೇವರಾದ ಯೆಹೋವನ ಮಾತನ್ನು ಕೇಳದೆ ಆತನ ಒಡಂಬಡಿಕೆಯನ್ನು ಮೀರಿ, ಆತನ ಸೇವಕನಾದ ಮೋಶೆಯ ಆಜ್ಞೆಗಳಿಗೆ ವಿಧೇಯರಾಗಿ ನಡೆಯಲಿಲ್ಲ. ದೇವರ ಆಜ್ಞೆಗಳಿಗೆ ಕಿವಿಗೊಡದೇ ಅವುಗಳಂತೆ ನಡೆಯದೇ ಇದ್ದುದರಿಂದಲೇ ಹೀಗಾಯಿತು.
fordi de ikke hadde hørt på Herrens, sin Guds røst, men overtrådt hans pakt - alt det Moses, Herrens tjener, hadde befalt; de hverken hørte eller gjorde efter det.
13 ೧೩ ಅರಸನಾದ ಹಿಜ್ಕೀಯನ ಆಳ್ವಿಕೆಯ ಹದಿನಾಲ್ಕನೆಯ ವರ್ಷದಲ್ಲಿ ಅಶ್ಶೂರದ ಅರಸನಾದ ಸನ್ಹೇರೀಬನು ಬಂದು ಯೆಹೂದ ಪ್ರಾಂತ್ಯದ ಕೋಟೆಕೊತ್ತಲುಗಳುಳ್ಳ ಎಲ್ಲಾ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡನು.
I kong Esekias' fjortende år drog kongen i Assyria Sankerib op imot alle Judas faste byer og inntok dem.
14 ೧೪ ಆಗ ಯೆಹೂದ್ಯರ ಅರಸನಾದ ಹಿಜ್ಕೀಯನು ಲಾಕೀಷಿನಲ್ಲಿದ್ದ ಅಶ್ಶೂರದ ಅರಸನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ನಾನು ಅಪರಾಧಿ; ನೀನು ನನ್ನನ್ನು ಬಿಟ್ಟು ಹೋಗು. ನೀನು ನನಗೆ ವಿಧಿಸುವಷ್ಟು ದಂಡವನ್ನು ಕೊಡುತ್ತೇನೆ” ಎಂದು ಹೇಳಿ ಕಳುಹಿಸಿದನು. ಅಶ್ಶೂರದ ಅರಸನು ಮುನ್ನೂರು ತಲಾಂತು ಬೆಳ್ಳಿಯನ್ನೂ, ಮೂವತ್ತು ತಲಾಂತು ಬಂಗಾರವನ್ನೂ ಕೊಡಬೇಕೆಂದು ಆಜ್ಞಾಪಿಸಿದನು.
Da sendte Judas konge Esekias bud til den assyriske konge i Lakis og lot si: Jeg har syndet; vend tilbake fra mig! Hvad du legger på mig, vil jeg bære. Da påla kongen i Assyria Judas konge Esekias å betale tre hundre talenter sølv og tretti talenter gull.
15 ೧೫ ಆಗ ಹಿಜ್ಕೀಯನು ಯೆಹೋವನ ಆಲಯದಲ್ಲಿಯೂ, ಅರಸನ ಅರಮನೆಯ ಭಂಡಾರದಲ್ಲಿಯೂ ಸಿಕ್ಕಿದ ಬೆಳ್ಳಿಯನ್ನು ಅವನಿಗೆ ಕೊಟ್ಟನು.
Og Esekias gav alt det sølv som fantes i Herrens hus og i skattkammerne i kongens hus.
16 ೧೬ ಅಲ್ಲದೆ ಹಿಜ್ಕೀಯನು ಯೆಹೋವನ ಆಲಯದ ಕದಗಳಿಗೂ, ಕಂಬಗಳಿಗೂ ಹೊದಿಸಿದ್ದ ಬಂಗಾರದ ತಗಡನ್ನೂ ತೆಗೆದು ಅಶ್ಶೂರದ ಅರಸನಿಗೆ ಕಳುಹಿಸಿದನು.
Ved den leilighet lot Esekias gullet bryte av dørene på Herrens tempel og av dørstolpene som Esekias, Judas konge, hadde klædd med gull, og gav det til kongen i Assyria.
17 ೧೭ ಆದರೆ ಅಶ್ಶೂರದ ಅರಸನು ಲಾಕೀಷಿನಿಂದ ಮಹಾಸೈನ್ಯ ಸಹಿತವಾಗಿ ತರ್ತಾನ್, ರಬ್ಸಾರೀಸ್, ರಬ್ಷಾಕೆ ಎಂಬುವವರನ್ನು ಯೆರೂಸಲೇಮಿನಲ್ಲಿದ್ದ ಹಿಜ್ಕೀಯನ ಬಳಿಗೆ ಕಳುಹಿಸಿದನು. ಇವರು ಗಟ್ಟಾ ಹತ್ತಿ ಯೆರೂಸಲೇಮಿಗೆ ಬಂದು ಅಗಸರ ಹೊಲದ ಮೇಲೆ ಹೋಗುವ ರಾಜಮಾರ್ಗದ ಹತ್ತಿರ ಇರುವ ಕೆರೆಯ ಕಾಲುವೆಯ ಬಳಿಯಲ್ಲಿ ಪಾಳೆಯ ಮಾಡಿಕೊಂಡರು.
Men kongen i Assyria sendte Tartan og Rabsaris og Rabsake med en stor hær fra Lakis til kong Esekias i Jerusalem; og de drog op og kom til Jerusalem, og da de var kommet dit, stanset de ved vannledningen fra den øvre dam, ved alfarveien til Vaskervollen.
18 ೧೮ ಅವರು ಅರಸನನ್ನು ಕೂಗಿ ಕರೆದಾಗ, ಹಿಲ್ಕೀಯನ ಮಗನೂ, ರಾಜಗೃಹಾಧಿಪತಿಯಾದ ಎಲ್ಯಾಕೀಮ್, ಲೇಖಕನಾದ ಶೆಬ್ನ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಎಂಬುವವರು ಅವರ ಬಳಿಗೆ ಬಂದರು.
Og de ropte på kongen; da gikk slottshøvdingen Eljakim, Hilkias' sønn, ut til dem sammen med statsskriveren Sebna og historieskriveren Joah, Asafs sønn.
19 ೧೯ ರಬ್ಷಾಕೆಯು ಅವರಿಗೆ, ನೀವು ಹೋಗಿ ಹಿಜ್ಕೀಯನಿಗೆ ಮಹಾರಾಜನಾದ ಅಶ್ಶೂರದ ಅರಸನ ಮಾತುಗಳನ್ನು ತಿಳಿಸಿರಿ. ಅವನು, “ನಿನ್ನ ಭರವಸಕ್ಕೆ ಯಾವ ಆಧಾರವುಂಟು?
Og Rabsake sa til dem: Si til Esekias: Så sier den store konge, kongen i Assyria: Hvad er det for en trygghet som er kommet over dig?
20 ೨೦ ಬರೀ ಒಂದು ಬಾಯಿ ಮಾತಿನಲ್ಲಿ ಯುದ್ಧಕ್ಕೆ ಬೇಕಾದ ವಿವೇಕವೂ, ಬಲವೂ ಉಂಟೆಂದು ಅಂದುಕೊಳ್ಳುತ್ತಿರುವೆಯೋ? ನೀನು ಯಾರ ಮೇಲೆ ಭರವಸವಿಟ್ಟು ನನಗೆ ವಿರೋಧವಾಗಿ ತಿರುಗಿ ಬಿದ್ದಿರುವೆ?
Du sier - men det er bare tomme ord -: Her er innsikt og styrke nok til krig. Til hvem setter du da din lit, siden du har gjort oprør mot mig?
21 ೨೧ ಜಜ್ಜಿದ ದಂಟಿಗೆ ಸಮಾನವಾಗಿರುವ ಐಗುಪ್ತದಲ್ಲಿ ಭರವಸವಿಟ್ಟಿರುವೆಯೋ? ಒಬ್ಬನು ಅಂಥ ದಂಟಿನ ಮೇಲೆ ಕೈಯೂರಿಕೊಳ್ಳುವುದಾದರೆ ಅದು ಅವನ ಕೈಯನ್ನು ತಿವಿದು ಒಳಗೆ ಹೋಗುತ್ತದಲ್ಲವೇ; ಐಗುಪ್ತದ ಅರಸನಾದ ಫರೋಹನನಲ್ಲಿ ಭರವಸವಿಟ್ಟವರಿಗೆ ಇದೇ ಗತಿಯಾಗುವುದು.
Nuvel, du setter din lit til Egypten, denne knekkede rørstav, som når en støtter sig på den, går inn i hans hånd og gjennemborer den; således er kongen i Egypten Farao for alle dem som setter sin lit til ham.
22 ೨೨ ಒಂದು ವೇಳೆ ನೀವು, ‘ನಮ್ಮ ದೇವರಾದ ಯೆಹೋವನ ಮೇಲೆ ಭರವಸವಿಟ್ಟಿದ್ದೇವೆ’ ಎಂದು ಹೇಳುವುದಾದರೆ ಹಿಜ್ಕೀಯನು, ‘ಯೆರೂಸಲೇಮಿನ ಯಜ್ಞವೇದಿಯ ಮುಂದೆಯೇ ಆರಾಧನೆಮಾಡಬೇಕು’ ಎಂಬುದಾಗಿ ಯೆಹೂದ್ಯರಿಗೂ, ಯೆರೂಸಲೇಮಿನವರಿಗೂ ಆಜ್ಞಾಪಿಸಿ ಆ ಯೆಹೋವನ ಪೂಜಾಸ್ಥಳಗಳನ್ನೂ, ಎಲ್ಲಾ ಯಜ್ಞವೇದಿಗಳನ್ನೂ ಹಾಳುಮಾಡಿದ್ದಾನಲ್ಲಾ,
Men sier I til mig: Vi setter vår lit til Herren vår Gud - er det da ikke hans offerhauger og altere Esekias har tatt bort, da han sa til Juda og Jerusalem: For dette alter skal I tilbede, her i Jerusalem?
23 ೨೩ ನನ್ನ ಒಡೆಯನಾದ ಅಶ್ಶೂರದ ಅರಸನೊಂದಿಗೆ ಸವಾಲು ಮಾಡಿನೋಡು. ಆಗ ಕುದುರೆ ಸವಾರರನ್ನು ಬಳಸಲು ನಿನಗೆ ಸಾಮರ್ಥ್ಯವಿದ್ದರೆ ಆತನು ಎರಡು ಸಾವಿರ ಕುದುರೆಗಳನ್ನು ಕೊಡುತ್ತಾನೆ.
Men gjør nu et veddemål med min herre, kongen i Assyria: Jeg vil gi dig to tusen hester om du kan få dig folk til å ride på dem.
24 ೨೪ ಹೀಗಿದ್ದಾಗ ನೀನು ನನ್ನ ಒಡೆಯನ ಸೇನಾಧಿಪತಿಗಳಲ್ಲಿ ಅತಿ ಸಣ್ಣವನನ್ನಾದರೂ ಸೋಲಿಸುವುದು ಸಾಧ್ಯವೇ? ರಥಾಶ್ವಬಲಗಳ ವಿಷಯವಾಗಿ ನೀನು ಐಗುಪ್ತರ ಮೇಲೆ ಭರವಸೆಯಿಟ್ಟಿರುವೆ.
Hvorledes skulde du da kunne drive tilbake en eneste stattholder, en av min herres ringeste tjenere? Derfor setter du din lit til Egypten og håper å få vogner og hestfolk derfra.
25 ೨೫ ಈ ದೇಶವನ್ನು ಹಾಳುಮಾಡುವುದಕ್ಕೆ ಯೆಹೋವನ ಚಿತ್ತವಿಲ್ಲದೆ ಬಂದೆನೆಂದು ನೆನಸುತ್ತೀಯೋ? ‘ಈ ದೇಶಕ್ಕೆ ಬಂದು, ಇದನ್ನು ಹಾಳುಮಾಡಿಬಿಡು ಎಂದು ಯೆಹೋವನೇ ನನಗೆ ಆಜ್ಞಾಪಿಸಿದ್ದಾನೆ’” ಎಂದನು.
Mener du da at jeg har draget op mot dette sted for å ødelegge det, uten at Herren har villet det? Nei, Herren har selv sagt til mig: Dra op mot dette land og ødelegg det!
26 ೨೬ ಆಗ ಹಿಲ್ಕೀಯನ ಮಗನಾದ ಎಲ್ಯಾಕೀಮ್, ಶೆಬ್ನ, ಯೋವ ಎಂಬುವವರು ರಬ್ಷಾಕೆಗೆ, “ನೀನು ಮಾತನಾಡುವುದು ಪೌಳಿಗೋಡೆಯ ಮೇಲಿರುವ ಯೆಹೂದ್ಯರಿಗೂ ಕೇಳಿಸುತ್ತದೆ. ಆದುದರಿಂದ ದಯವಿಟ್ಟು ನಿನ್ನ ಸೇವಕರಾದ ನಮ್ಮೊಡನೆ ಅರಾಮ್ಯ ಭಾಷೆಯಲ್ಲಿ ಮಾತನಾಡು, ಅದು ನಮಗೆ ತಿಳಿಯುತ್ತದೆ. ಆದರೆ ಯೂದಾಯ ಭಾಷೆಯಲ್ಲಿ ಮಾತನಾಡಬೇಡ” ಎಂದು ಹೇಳಿದರು.
Da sa Eljakim, Hilkias' sønn, og Sebna og Joah til Rabsake: Tal til dine tjenere på syrisk, for vi forstår det sprog, og tal ikke til oss på jødisk, så folket som står på muren, hører det!
27 ೨೭ ಅದಕ್ಕೆ ರಬ್ಷಾಕೆಯು, “ನನ್ನ ಯಜಮಾನನು ನಿಮ್ಮ ಸಂಗಡವಾಗಲಿ, ನಿಮ್ಮ ಒಡೆಯನ ಸಂಗಡವಾಗಲಿ ಮಾತನಾಡಬೇಕೆಂದು ನನ್ನನ್ನು ಕಳುಹಿಸಲಿಲ್ಲ. ಈ ಪೌಳಿಗೋಡೆಯ ಮೇಲೆ ಕುಳಿತಿರುವ ಜನರ ಸಂಗಡ ಮಾತನಾಡುವುದಕ್ಕೋಸ್ಕರ ಕಳುಹಿಸಿದ್ದಾನೆ. ಅವರು ನಿಮ್ಮೊಡನೆ ಇದ್ದರೆ ಸ್ವಂತ ಮಲವನ್ನು ತಿಂದು ಸ್ವಂತ ಮೂತ್ರವನ್ನು ಕುಡಿಯಬೇಕಾಗುವುದು” ಎಂದು ಉತ್ತರಕೊಟ್ಟನು.
Men Rabsake svarte: Er det til din herre og til dig min herre har sendt mig for å tale disse ord? Er det ikke til de menn som sitter på muren og må ete sitt eget skarn og drikke sitt eget vann likesom I selv?
28 ೨೮ ನಂತರ, ರಬ್ಷಾಕೆಯು ಎದ್ದು ನಿಂತು ಯೂದಾಯ ಭಾಷೆಯಲ್ಲಿ, “ಅಶ್ಶೂರದ ಮಹಾರಾಜನ ಮಾತನ್ನು ಕೇಳಿರಿ.
Og Rabsake trådte frem og ropte med høi røst på jødisk og talte således: Hør den store konges, den assyriske konges ord!
29 ೨೯ ಅರಸನು ನಿಮಗೆ, ‘ಹಿಜ್ಕೀಯನಿಂದ ಮೋಸಹೋಗಬೇಡಿರಿ, ಅವನು ನಿಮ್ಮನ್ನು ನನ್ನ ಕೈಯಿಂದ ಬಿಡಿಸಲಾರನು’
Så sier kongen: La ikke Esekias få narret eder! For han makter ikke å redde eder av hans hånd.
30 ೩೦ ಹಿಜ್ಕೀಯನು ನಿಮಗೆ, ‘ಯೆಹೋವನ ಮೇಲೆ ಭರವಸದಿಂದಿರಿ; ಆತನು ನಿಮ್ಮನ್ನು ಹೇಗೂ ರಕ್ಷಿಸುವನು. ಈ ಪಟ್ಟಣವು ಅಶ್ಶೂರದ ಅರಸನ ವಶವಾಗುವುದಿಲ್ಲ’ ಎಂಬುದಾಗಿ ಹೇಳಿದರೆ ಅವನ ಮಾತಿಗೆ ಕಿವಿಗೊಡಬೇಡಿರಿ, ಒಪ್ಪಬೇಡಿರಿ”
Og la ikke Esekias få eder til å sette eders lit til Herren, idet han sier: Herren vil redde oss, og denne by skal ikke gis i kongen av Assyrias hånd.
31 ೩೧ ಹಿಜ್ಕೀಯನ ಮಾತನ್ನು ಕೇಳಬೇಡಿರಿ. ಅಶ್ಶೂರದ ಅರಸನಾದ ನನ್ನ ಮಾತನ್ನು ಕೇಳಿರಿ, “ನನ್ನೊಡನೆ ಒಡಂಬಡಿಕೆ ಮಾಡಿಕೊಂಡು ನನ್ನ ಬಳಿಗೆ ಬಂದು ನನ್ನೊಡನೆ ಒಪ್ಪಂದ ಮಾಡಿಕೊಂಡು ನನ್ನ ಆಶ್ರಯಕ್ಕೆ ಬನ್ನಿ ಆಗ ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಅಂಜೂರ ಮರ, ದ್ರಾಕ್ಷಾಲತೆ ಇವುಗಳ ಹಣ್ಣುಗಳನ್ನು ತಿಂದು ತನ್ನ ತನ್ನ ಬಾವಿಯ ನೀರನ್ನು ಕುಡಿಯುವನು.
Hør ikke på Esekias! For så sier kongen i Assyria: Gjør fred med mig og kom ut til mig, så skal I få ete hver av sitt vintre og av sitt fikentre og drikke hver av vannet i sin brønn,
32 ೩೨ ಸ್ವಲ್ಪ ಕಾಲವಾದ ನಂತರ ನಾನು ಬಂದು ನಿಮ್ಮನ್ನು ಧಾನ್ಯ, ದ್ರಾಕ್ಷಾರಸ ಆಹಾರ, ದ್ರಾಕ್ಷಿತೋಟ, ಎಣ್ಣೆಮರ, ಜೇನುತುಪ್ಪವು ಸಮೃದ್ಧಿಯಾಗಿರುವ ನಿಮ್ಮ ದೇಶಕ್ಕೆ ಸಮಾನವಾದ ಇನ್ನೊಂದು ದೇಶಕ್ಕೆ ಕರೆದುಕೊಂಡು ಹೋಗುವೆನು. ನೀವು ಸಾಯುವುದಿಲ್ಲ, ಬದುಕುವಿರಿ. ಯೆಹೋವನು ನಿಮ್ಮನ್ನು ರಕ್ಷಿಸುವನು ಎಂಬ ನಂಬಿಕೆಯನ್ನು ನಿಮ್ಮಲ್ಲಿ ಹುಟ್ಟಿಸುವುದಕ್ಕೆ ಪ್ರಯತ್ನಿಸುವ ಹಿಜ್ಕೀಯನಿಗೆ ಕಿವಿಗೊಡಬೇಡಿರಿ.
til jeg kommer og henter eder til et land som ligner eders land, et land med korn og most, et land med brød og vingårder, et land med oljetrær og honning, så I kan leve og ikke skal dø! Hør ikke på Esekias når han vil forføre eder og si: Herren vil redde oss!
33 ೩೩ ಯಾವ ಜನಾಂಗದ ದೇವತೆಯು ತನ್ನ ದೇಶವನ್ನು ಅಶ್ಶೂರದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸಿ ಕಾಪಾಡಲು ಸಾಧ್ಯ?
Har vel nogen av folkenes guder reddet sitt land av kongen i Assyrias hånd?
34 ೩೪ ಹಮಾತ್, ಅರ್ಪಾದ್, ಸೆಫರ್ವಯಿಮ್, ಹೇನ ಮತ್ತು ಇವ್ವಾ ಎಂಬ ಪಟ್ಟಣಗಳ ದೇವತೆಗಳೇನಾದವು? ಅವು ಸಮಾರ್ಯವನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸಲು ಸಾಧ್ಯವಾಯಿತೇ?
Hvor er Hamats og Arpads guder? Hvor er Sefarva'ims, Henas og Ivvas guder? Har vel Samarias guder reddet det av min hånd?
35 ೩೫ ಯಾವ ಜನಾಂಗದ ದೇವತೆಯಾದರೂ ತನ್ನ ದೇಶವನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸಿ ಕಾಪಾಡಲು ಆಗದೆ ಹೋದ ಮೇಲೆ ಯೆಹೋವನು ಯೆರೂಸಲೇಮನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸಿ ಕಾಪಾಡುವನೋ?” ಎಂದು ಹೇಳಿದನು.
Hvem er det blandt alle landenes guder som har reddet sitt land av min hånd, så Herren skulde redde Jerusalem av min hånd?
36 ೩೬ ಆ ಸೇನಾಪತಿಗಳಿಗೆ ಯಾವ ಉತ್ತರವನ್ನೂ ಕೊಡಬಾರದೆಂದು ಅರಸನು ತನ್ನ ಪ್ರಜೆಗಳಿಗೆ ಆಜ್ಞಾಪಿಸಿದ್ದರಿಂದ ಅವರು ಸುಮ್ಮನಿದ್ದರು. ಏನೂ ಹೇಳಲಿಲ್ಲ.
Men folket tidde og svarte ham ikke et ord; for kongens bud lød så: I skal ikke svare ham.
37 ೩೭ ಹಿಲ್ಕೀಯನ ಮಗನೂ, ರಾಜಗೃಹಾಧಿಪತಿಯೂ ಆಗಿದ್ದ ಎಲ್ಯಾಕೀಮ್ ಲೇಖಕನಾದ ಶೆಬ್ನ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಎಂಬುವವರು ತಮ್ಮ ಬಟ್ಟೆಗಳನ್ನು ಹರಿದುಕೊಂಡು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ ರಬ್ಷಾಕೆಯ ಮಾತುಗಳನ್ನು ತಿಳಿಸಿದರು.
Så kom slottshøvdingen Eljakim, Hilkias' sønn, og statsskriveren Sebna og historieskriveren Joah, Asafs sønn, til Esekias med sønderrevne klær og meldte ham hvad Rabsake hadde sagt.