< ಅರಸುಗಳು - ದ್ವಿತೀಯ ಭಾಗ 14 >

1 ಇಸ್ರಾಯೇಲರ ಅರಸನಾದ ಯೆಹೋವಾಹಾಜನ ಮಗನಾದ ಯೋವಾಷನ ಆಳ್ವಿಕೆಯ ಎರಡನೆಯ ವರ್ಷದಲ್ಲಿ ಯೆಹೂದದ ಅರಸನಾದ ಯೆಹೋವಾಷನ ಮಗ ಅಮಚ್ಯ ಎಂಬವನು ಅರಸನಾದನು.
Amy taom-paha-roe’ Iehoase, ana’ Iehoakaze mpanjaka’ Israeley, ty niorota’ i Amatsià ana’ Ioase mpanjaka’ Iehodà nifehe.
2 ಅವನು ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರ್ಷದವನಾಗಿದ್ದು ಯೆರೂಸಲೇಮಿನಲ್ಲಿ ಇಪ್ಪತ್ತೊಂಬತ್ತು ವರ್ಷ ಆಳಿದನು. ಯೆರೂಸಲೇಮಿನವಳಾದ ಯೆಹೋವದ್ದೀನ್ ಎಂಬಾಕೆಯು ಇವನ ತಾಯಿ.
Roapolo taoñe lime amby re te niorotse nifehe, le nifeleke roapolo taoñe sive amby e Ierosalaime ao. Ie­ho­a­dinee nte-Ierosalaime, ty tahinan-drene’e.
3 ಇವನು ತನ್ನ ತಂದೆಯಾದ ಯೆಹೋವಾಷನ ಮಾರ್ಗದಲ್ಲಿ ತಪ್ಪದೆ ನಡೆದು ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾದನು, ಆದರೂ ತನ್ನ ಪೂರ್ವಿಕನಾದ ದಾವೀದನಷ್ಟು ಉತ್ತಮನಾಗಿರಲಿಲ್ಲ.
Nanao ty hiti’e am-pivazohoa’ Iehovà re, fe tsy nanahake i Davide rae’e fa hambañe an-tsatan-drae’e Ioase ty fitoloña’e.
4 ಇವನ ಕಾಲದಲ್ಲಿ ಪೂಜಾಸ್ಥಳಗಳು ಇನ್ನೂ ತೆಗೆಯಲ್ಪಟ್ಟಿರಲಿಲ್ಲ, ಆದ್ದರಿಂದ ಜನರು ಅವುಗಳಲ್ಲಿ ಯಜ್ಞಧೂಪಗಳನ್ನು ಅರ್ಪಿಸುತ್ತಿದ್ದರು.
Mboe tsy nafaha’e añe o toets’ aboo, mbe nanao soroñe naho nañoro tsotse amo toets-aboo avao ondatio.
5 ಅವನು ರಾಜ್ಯವನ್ನು ಭದ್ರಪಡಿಸಿಕೊಂಡ ಕೂಡಲೇ ತನ್ನ ತಂದೆಯನ್ನು ಕೊಂದ ಸೇವಕರಿಗೆ ಮರಣದಂಡನೆ ವಿಧಿಸಿದನು.
Ie vaho nioreñe am-pità’e i fifeheañey le zinevo’e i mpitoroñe nañoho-doza aman-drae’e mpanjaka rey;
6 ಮೋಶೆಯ ಧರ್ಮನಿಯಮಗ್ರಂಥದಲ್ಲಿರುವ ಯೆಹೋವನ ಅಪ್ಪಣೆಯಂತೆ, “ಮಕ್ಕಳ ಪಾಪದ ದೆಸೆಯಿಂದ ತಂದೆಗೂ, ತಂದೆಯ ಪಾಪದ ದೆಸೆಯಿಂದ ಮಕ್ಕಳಿಗೂ ಮರಣಶಿಕ್ಷೆಯಾಗಬಾರದು; ಪ್ರತಿಯೊಬ್ಬನೂ ತನ್ನ ಪಾಪಫಲವನ್ನು ತಾನೇ ಅನುಭವಿಸಬೇಕು” ಎಂಬುದನ್ನು ನೆನಪುಮಾಡಿಕೊಂಡು ಅವರ ಮಕ್ಕಳನ್ನು ಕೊಲ್ಲಿಸಲಿಲ್ಲ.
fe tsy vinono’e o ana’ i mpamono reio ty amy sinokitse amy boke Hà’ i Mosey, ie nandilia’ Iehovày ty hoe: Tsy ho vonoeñe ty amo ana’eo o roaeo, naho tsy ho vonoeñe ty aman-droae’e o anakeo; fa sindre i hakeo’ey ty hamonoañe ondaty.
7 ಇದಲ್ಲದೆ ಉಪ್ಪಿನ ತಗ್ಗಿನಲ್ಲಿ ಎದೋಮ್ಯರ ಹತ್ತು ಸಾವಿರ ಮಂದಿ ಸೈನಿಕರನ್ನು ಸದೆಬಡಿದು, ಅವರಿಂದ ಸೆಲ ದುರ್ಗವನ್ನು ಕಿತ್ತುಕೊಂಡು ಅದಕ್ಕೆ ಯೊಕ್ತೆಯೇಲ್ ಎಂಬ ಹೆಸರಿಟ್ಟನು. ಅದಕ್ಕೆ ಇಂದಿನವರೆಗೂ ಇದೇ ಹೆಸರಿರುತ್ತದೆ.
Nizevoña’e ty rai-ale’ i Edome am-bavatanen-tsira ao, le tinava’e añ’aly ty Selà, ze natao’e ty hoe Ioktile ampara henane.
8 ಅನಂತರ ಅಮಚ್ಯನು ಯೇಹುವಿನ ಮೊಮ್ಮಗನೂ, ಯೆಹೋವಾಹಾಜನ ಮಗನೂ, ಇಸ್ರಾಯೇಲರ ಅರಸನಾದ ಯೆಹೋವಾಷನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ನಾವು ಒಬ್ಬರನ್ನೊಬ್ಬರು ಒಂದು ಕೈ ನೋಡೋಣ ಬಾ” ಎಂದು ಹೇಳಿದನು.
Nampihitrike ìrak’ amy Iehoase ana’ Iehoakaze, ana’ Ieho, mpanjaka’ Israele t’i Amatsià nanao ty hoe: Antao hifañisa-daharañe.
9 ಆಗ ಇಸ್ರಾಯೇಲರ ಅರಸನಾದ ಯೆಹೋವಾಷನು ಯೆಹೂದದ ಅರಸನಾದ ಅಮಚ್ಯನಿಗೆ, “ಲೆಬನೋನಿನ ಮುಳ್ಳು ಗಿಡವು ಅಲ್ಲಿನ ದೇವದಾರುಮರಕ್ಕೆ, ‘ನನ್ನ ಮಗನಿಗೆ ನಿನ್ನ ಮಗಳನ್ನು ಕೊಡು’ ಎಂದು ಹೇಳಿ ಕಳುಹಿಸಿತು. ಸ್ವಲ್ಪ ಹೊತ್ತಾದ ಮೇಲೆ ಲೆಬನೋನಿನ ಒಂದು ಕಾಡು ಮೃಗವು ಅಲ್ಲಿಂದ ಹಾದುಹೋಗುತ್ತಿರುವಾಗ ಅದನ್ನು ತುಳಿದುಬಿಟ್ಟಿತು.
Aa le nampañitrik’ amy Amatsià mpanjaka’ Iehoda t’Iehoase mpanjaka’ Israele, ty hoe: Nampisangitrife’ i hisatse e Lebanone añey amy mendoraveñe e Lebanone añe ty hoe: Atoloro amy ana-dahikoy i anak’ ampela’oy ho vali’e; vaho niary eo o biby hako’ i Lebanoneo nandialia i hisatsey.
10 ೧೦ ನೀನು ಎದೋಮ್ಯರನ್ನು ಸೋಲಿಸಿದರಿಂದ ಬಹಳವಾಗಿ ಉಬ್ಬಿಕೊಂಡಿದ್ದೀ; ಆ ಕೀರ್ತಿಯು ಸಾಕೆಂದು ನೆನದು ಸುಮ್ಮನೆ ಮನೆಯಲ್ಲಿ ಕುಳಿತುಕೋ. ನನ್ನನ್ನು ಕೆಣಕಿ ನಿನ್ನ ಮೇಲೆಯೂ, ನಿನ್ನ ರಾಜ್ಯವಾದ ಯೆಹೂದದ ಮೇಲೆಯೂ ಯಾಕೆ ಕೇಡನ್ನು ಬರಮಾಡಿಕೊಳ್ಳುತ್ತೀ?” ಎಂದು ಉತ್ತರ ಕೊಟ್ಟುಕಳುಹಿಸಿದನು.
Toe zinevo’o ty Edome vaho nampitoabotse azo ty arofo’o; isengeo, fe mitoboha añ’akiba’o ao. Ino ty hitoloña’o ty raty hikorovoha’o, ihe naho Iehoda rekets’ ama’o?
11 ೧೧ ಅಮಚ್ಯನು ಇದನ್ನು ಗಮನಕ್ಕೆ ತೆಗೆದುಕೊಳ್ಳದೆ ಇದ್ದುದರಿಂದ ಇಸ್ರಾಯೇಲರ ಅರಸನಾದ ಯೆಹೋವಾಷನು ಯುದ್ಧಕ್ಕೆ ಹೊರಟನು. ಅವರು ಯೆಹೂದ ಪ್ರಾಂತ್ಯದ ಬೇತ್ಷೆಮೆಷಿನಲ್ಲಿ ಒಬ್ಬರನ್ನೊಬ್ಬರು ಎದುರುಗೊಂಡರು.
Fe tsy nañaoñe t’i Amatsià. Aa le nionjomb’eo t’Iehoase mpanjaka’ Israele, le nifañisa-daharañe amy Amatsià e Betesemese e Iehoda ao.
12 ೧೨ ಯೆಹೂದ್ಯರು ಇಸ್ರಾಯೇಲರಿಂದ ಸೋಲಿಸಲ್ಪಟ್ಟು ತಮ್ಮ ತಮ್ಮ ನಿವಾಸಗಳಿಗೆ ಓಡಿಹೋದರು.
Fe nikorovok’ añ’ atrefa’ Israele t’Iehoda vaho songa nitriban-day mb’an-kiboho’e mb’eo.
13 ೧೩ ಇಸ್ರಾಯೇಲರ ಅರಸನಾದ ಯೋವಾಷನೂ, ಅಹಜ್ಯನ ಮೊಮ್ಮಗನೂ, ಯೆಹೋವಾಷನ ಮಗನೂ ಯೆಹೂದದ ಅರಸನೂ ಆದ ಅಮಚ್ಯನನ್ನು ಇಸ್ರಾಯೇಲರ ಅರಸನಾದ ಯೆಹೋವಾಷನು ಬೇತ್ಷೆಮೆಷಿನಲ್ಲಿ ಹಿಡಿದು ಅವನನ್ನು ಯೆರೂಸಲೇಮಿಗೆ ಕರೆದುಕೊಂಡು ಬಂದು, ಎಫ್ರಾಯೀಮ್ ಬಾಗಿಲಿನಿಂದ ಮೂಲೆಯ ಬಾಗಿಲಿನವರೆಗೂ ಇದ್ದ ಯೆರೂಸಲೇಮಿನ ನಾನೂರು ಮೊಳ ಗೋಡೆಯನ್ನು ಕೆಡವಿ ಬಿಟ್ಟನು.
Mbore tsinepa’ Iehoase mpanjaka’ Israele t’i Amatsià mpanjaka’ Iehoda, ana’ Iehoase, ana’ i Ahatsià, e Betesemese le nimb’e Ierosalaime mb’eo vaho rinotsa’e i kijoli’ Ierosalaimey boak’ an-dalambei’ i Efraime pak’ an-dalambein-kotsoke eo, efa-jato kiho.
14 ೧೪ ಇದಲ್ಲದೆ ಅವನು ಯೆಹೋವನ ಆಲಯದ ಮತ್ತು ರಾಜನ ಅರಮನೆಯ ಭಂಡಾರಗಳಲ್ಲಿ ಸಿಕ್ಕಿದ ಎಲ್ಲಾ ಬೆಳ್ಳಿ ಬಂಗಾರವನ್ನೂ, ಪಾತ್ರೆಗಳನ್ನೂ ತೆಗೆದುಕೊಂಡು ಒತ್ತೆಯಾಳಾಗಿ ಕೆಲವರನ್ನು ಸೆರೆಹಿಡಿದು ಸಮಾರ್ಯಕ್ಕೆ ಹಿಂದಿರುಗಿದನು.
Le rinambe’e iaby ze volamena naho volafoty naho fànake nizoeñe añ’ anjom­ba’ Iehovà naho amy fañajàm-bara añ’ anjomba’ i mpanjakaiy naho o ana-dahi’eo ho àntoke vaho nimpoly mb’e Somerone mb’eo.
15 ೧೫ ಯೆಹೋವಾಷನ ಉಳಿದ ಚರಿತ್ರೆಯೂ, ಅವನ ಶೂರ ಕೃತ್ಯಗಳೂ ಮತ್ತು ಯೆಹೂದ ರಾಜನಾದ ಅಮಚ್ಯನೊಡನೆ ನಡಿಸಿದ ಯುದ್ಧದ ವಿವರವೂ ಇಸ್ರಾಯೇಲರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಿದೆ.
Aa naho o fitoloña’ Iehoase ila’eo, o fifanehafa’eo, ty haozara’e naho ty fialia’e amy Amatsià, mpanjaka’ Iehoda, tsy fa sinokitse amy bokem-pamoliliañe o mpanjaka’ Israeleoy hao?
16 ೧೬ ಯೆಹೋವಾಷನು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ಸಮಾರ್ಯದೊಳಗೆ ಇಸ್ರಾಯೇಲರ ರಾಜಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಯಾರೊಬ್ಬಾಮನು ಅರಸನಾದನು.
Nitrao-piròtse aman-droae’e t’Iehoase, le nalenteke e Somerone ao mindre amo mpanjaka’ Israeleo; le nandimbe aze nifehe t’Iarovame ana’e.
17 ೧೭ ಇಸ್ರಾಯೇಲರ ಅರಸನೂ, ಯೆಹೋವಾಹಾಜನ ಮಗನೂ ಆದ ಯೋವಾಷನು ಸತ್ತನಂತರ ಯೆಹೂದದ ಅರಸನೂ ಯೆಹೋವಾಷನ ಮಗನೂ ಆದ ಅಮಚ್ಯನು ಇನ್ನೂ ಹದಿನೈದು ವರ್ಷ ಬದುಕಿದ್ದನು.
Mbe niveloñe folo taoñe lime amby nanonjohy ty fihomaha’ Iehoase ana’ Iehoakaze, mpanjaka’ Israele t’i Amatsià ana’ Ioase, mpanjaka’ Iehoda.
18 ೧೮ ಅಮಚ್ಯನ ಉಳಿದ ಚರಿತ್ರೆಯು ಯೆಹೂದ್ಯರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತದೆ.
Le ty ila’ o fitoloña’ i Amatsiào, tsy fa sinokitse amy bokem-pamoliliañe o mpanjaka’ Iehodaoy hao?
19 ೧೯ ಯೆರೂಸಲೇಮಿನವರು ಅವನಿಗೆ ವಿರೋಧವಾಗಿ ಒಳಸಂಚು ಮಾಡಿದ್ದರಿಂದ ಅವನು ಲಾಕೀಷಿಗೆ ಓಡಿಹೋದನು. ಆದರೆ ಅವರು ಅಲ್ಲಿಗೆ ಆಳುಗಳನ್ನು ಕಳುಹಿಸಿ ಅವನನ್ನು ಕೊಲ್ಲಿಸಿದರು.
Nikililien-dre e Ierosalaime ao le nipolititse mb’e Lakise añe; f’ie nampañitrifeñe e Lakise añe vaho zinevo ao.
20 ೨೦ ಅವನ ಜನರು ಅವನ ಶವವನ್ನು ಕುದುರೆಗಳ ಮೇಲೆ ಯೆರೂಸಲೇಮಿಗೆ ತಂದು ದಾವೀದನಗರದೊಳಗೆ ಅವನ ಪೂರ್ವಿಕರ ಸ್ಮಶಾನಭೂಮಿಯಲ್ಲಿ ಸಮಾಧಿ ಮಾಡಿದರು.
Nen­dese’ iereo an-tsoavala, le nalenteke e Ierosalaime aman-droae’e, an-drova’ i Davide ao.
21 ೨೧ ಅಮಚ್ಯನ ಮರಣದ ನಂತರ ಎಲ್ಲಾ ಯೆಹೂದ್ಯರು ಸೇರಿ ಹದಿನಾರು ವರ್ಷದವನಾದ ಅಜರ್ಯನನ್ನು ಅರಸನನ್ನಾಗಿ ಮಾಡಿದರು.
Rinambe’ ze hene ondati’ Iehoda t’i Azarià ie nifolo-taoñ’ eneñ’ amby, ho mpanjaka handimbe i Amatsià rae’e.
22 ೨೨ ಅರಸನಾದ ಅಮಚ್ಯನು ಪೂರ್ವಿಕರ ಬಳಿಗೆ ಸೇರಿದ ಮೇಲೆ ಉಜ್ಜೀಯನು ಏಲತ್ ಎಂಬ ಪಟ್ಟಣವನ್ನು ಪುನಃ ಯೆಹೂದರಾಜ್ಯಕ್ಕೆ ಸೇರಿಸಿ ಭದ್ರಪಡಿಸಿದನು.
Namboare’e t’i Elate naho nahere’e am’Iehoda vaho nirotse aman-droae’e ao i mpanjakay.
23 ೨೩ ಯೆಹೂದದ ಅರಸನೂ, ಯೆಹೋವಾಷನ ಮಗನೂ ಆದ ಅಮಚ್ಯನ ಆಳ್ವಿಕೆಯ ಹದಿನೈದನೆಯ ವರ್ಷದಲ್ಲಿ ಇಸ್ರಾಯೇಲರ ಅರಸನಾದ ಯೋವಾಷನ ಮಗನಾದ ಯಾರೊಬ್ಬಾಮನು ಅರಸನಾಗಿ ಸಮಾರ್ಯದಲ್ಲಿ ನಲ್ವತ್ತೊಂದು ವರ್ಷ ಆಳಿದನು.
Ie amy taom-paha folo-lime ambi’ i Amatsià ana’ Ioase mpanjaka’ Iehodà le niorotse nifehe e Somerone ao t’Iarovame ana’ Ioase mpanjaka’ Israele vaho nifeleke efa-polo taoñe raik’ amby.
24 ೨೪ ಇವನು ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗವನ್ನು ಬಿಡದೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.
Fe nanao haratiañe ampivazohoa’ Iehovà, tsy nisitaha’e o fonga hakeo Iarovame ana’ i Nebate, nampanaña’e tahiñe Israeleo.
25 ೨೫ ಇಸ್ರಾಯೇಲರ ದೇವರಾದ ಯೆಹೋವನ ವಾಕ್ಯದ ಮೂಲಕ ತನ್ನ ಸೇವಕನೂ ಗತ್ ಹೇಫೆರಿನವನಾದ ಅಮಿತ್ತೈಯನ ಮಗನೂ ಆದ ಯೋನಾ ಎಂಬ ಪ್ರವಾದಿಯ ಮುಖಾಂತರವಾಗಿ ಮುಂತಿಳಿಸಿದಂತೆ ಹಮಾತಿನ ದಾರಿಯಿಂದ ಅರಾಬಾ ತಗ್ಗಿನ ಸಮುದ್ರದವರೆಗಿದ್ದ ಇಸ್ರಾಯೇಲರ ಮೇರೆಯನ್ನು ಪುನಃ ವಶಪಡಿಸಿಕೊಂಡವನು ಇವನೇ ಆಗಿದ್ದನು.
Nahere’e ty efe-tane’ Israele boak’ amy fimoahañe e Kamatey pak’an-dria’ i Arabày ty amy tsara’ Iehovà Andrianañahare’ Israele, nitsarae’e am-pità’ Ionà mpitoro’e, ana’ i Amitay, mpitoky, nte-Gata­kefe­rey.
26 ೨೬ ಇಸ್ರಾಯೇಲರು ಯೆಹೋವನಿಗೆ ಅವಿಧೇಯರಾಗಿ ಘೋರಕಷ್ಟವನ್ನು ಅನುಭವಿಸುತ್ತಿದ್ದರು. ಅವರಲ್ಲಿ ಸ್ವತಂತ್ರರೂ, ಪರತಂತ್ರರೂ ನಾಶವಾಗುತ್ತಿದ್ದರೆ, ಅವರನ್ನು ರಕ್ಷಿಸುವವನು ಒಬ್ಬನೂ ಇರಲಿಲ್ಲ.
Amy te nivazoho’ Iehovà ty hasotria’ Israele, t’ie vata’e nafaitse; fa tsy eo ty naga­beñe ndra ty nadoñe hidada, ndra iaia ty hañolotse Israele;
27 ೨೭ ಯೆಹೋವನು ಇದನ್ನು ನೋಡಿ ಇಸ್ರಾಯೇಲರನ್ನು ಭೂಲೋಕದಿಂದ ನಿರ್ನಾಮ ಮಾಡುವುದಕ್ಕೆ ಮನಸ್ಸಿಲ್ಲದೆ ಯೋವಾಷನ ಮಗನಾದ ಯಾರೊಬ್ಬಾಮನ ಮುಖಾಂತರವಾಗಿ ಅವರನ್ನು ರಕ್ಷಿಸಿದನು.
le tsy tsi­nara’ Iehovà ty hamaopaohañe ty tahina’ Israele am­banen-dikerañe ao; f’ie rinomba’e am-pità’ Iarovame, ana’ Ioase.
28 ೨೮ ಯಾರೊಬ್ಬಾಮನ ಉಳಿದ ಚರಿತ್ರೆಯೂ ಅವನು ಯುದ್ಧದಲ್ಲಿ ನಡಿಸಿದ ಶೂರಕೃತ್ಯಗಳೂ, ಯೆಹೂದ್ಯರ ಸ್ವಾಧೀನದಲ್ಲಿದ್ದ ದಮಸ್ಕ, ಹಮಾತ್ ಎಂಬ ಪಟ್ಟಣಗಳು ಅವನಿಂದ ಇಸ್ರಾಯೇಲ್ ರಾಜ್ಯಕ್ಕೆ ಸೇರಿಸಲ್ಪಟ್ಟ ವಿವರಗಳೆಲ್ಲವೂ ಇಸ್ರಾಯೇಲರ ರಾಜಕಾಲವೃತ್ತಾಂತ ಇತಿಹಾಸ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಲಾಗಿದೆ.
Aa naho o fitoloña’ Iarovame ila’eo, ze he’e nanoe’e, naho i haozara’ey, o fialia’eo naho ty nampibaliha’e am’ Iehodà ho a Israele t’i Damesèke vaho i Kamate; tsy fa sinokitse amy bokem-pamoliliañe o mpanjaka’ Israeleoy hao?
29 ೨೯ ಯಾರೊಬ್ಬಾಮನು ಇಸ್ರಾಯೇಲರ ರಾಜರಾಗಿದ್ದ ತನ್ನ ಪೂರ್ವಿಕರ ಬಳಿಗೆ ಸೇರಲು ಅವನ ನಂತರ ಅವನ ಮಗನಾದ ಜೆಕರ್ಯನು ಅರಸನಾದನು.
Nirotse aman-droae’e mpanjaka’ Israeleo t’Iarovame, vaho nandimbe aze nifehe t’i Zekarià, ana’e.

< ಅರಸುಗಳು - ದ್ವಿತೀಯ ಭಾಗ 14 >