< ಅರಸುಗಳು - ದ್ವಿತೀಯ ಭಾಗ 10 >
1 ೧ ಆಗ ಸಮಾರ್ಯ ಪಟ್ಟಣದಲ್ಲಿ ಅಹಾಬನ ಸಂತಾನದ ಎಪ್ಪತ್ತು ಮಂದಿ ರಾಜಪುತ್ರರಿದ್ದರು. ಯೇಹುವು ಆ ಪಟ್ಟಣದಲ್ಲಿದ್ದ ಇಜ್ರೇಲಿನ ಅಧಿಕಾರಿಗಳಾದ ಹಿರಿಯರಿಗೂ, ಅಧಿಕಾರಿಗಳಿಗೂ ರಾಜ್ಯಪಾಲಕರಿಗೂ ಪತ್ರಗಳನ್ನು ಬರೆದು ಅವುಗಳನ್ನು ದೂತರ ಮುಖಾಂತರವಾಗಿ ಕಳುಹಿಸಿದನು.
阿哈布在撒瑪黎雅尚有七十個孫子,為此,耶胡寫信給撒瑪黎雅城中的首領、長老和阿哈布子孫的師保,說:「
2 ೨ ಪತ್ರಗಳಲ್ಲಿ, “ನಿಮ್ಮ ವಶದಲ್ಲಿರುವ ನಿಮ್ಮ ಯಜಮಾನನ ಮಕ್ಕಳೂ, ರಥಾಶ್ವಬಲಗಳೂ, ಕೋಟೆಕೊತ್ತಲುಗಳುಳ್ಳ ಪಟ್ಟಣಗಳೂ, ಯುದ್ಧಾಯುಧಗಳೂ ಇರುತ್ತವಷ್ಟೇ.
你們主上的子孫,既然都同你們在一起,又有車馬、堅城和武器;那麼,這信一到你們手中,
3 ೩ ಈ ಪತ್ರವು ಕೈ ಸೇರಿದೊಡನೆ ಆ ರಾಜ ಪುತ್ರರಲ್ಲಿ ಉತ್ತಮನೂ, ಸಮರ್ಥನೂ ಆದ ಒಬ್ಬನನ್ನು ಆರಿಸಿಕೊಂಡು, ಅವನನ್ನು ಅವನ ತಂದೆಯ ಸಿಂಹಾಸನದ ಮೇಲೆ ಕುಳ್ಳಿರಿಸಿ ನಿಮ್ಮ ಯಜಮಾನನ ಕುಟುಂಬದವರಿಗಾಗಿ ಯುದ್ಧಮಾಡಿರಿ” ಎಂಬುದಾಗಿ ಬರೆದಿತ್ತು.
你們就在你們主上的子孫中,選出一位最好最能幹的,坐上他父親的寶座,來為你們主上的家作戰。」
4 ೪ ಅವರು ಬಹಳವಾಗಿ ಭಯಪಟ್ಟು, “ಇಬ್ಬರೂ ರಾಜರು ಅವನ ಮುಂದೆ ನಿಲ್ಲಲಾರದೆ ಹೋದಮೇಲೆ, ನಾವು ನಿಲ್ಲುವುದು ಹೇಗೆ?” ಅಂದುಕೊಂಡರು.
但是,他們都很害怕說:「哎! 兩位君王尚且不能抵抗他,我們又怎能抵抗﹖」
5 ೫ ಅನಂತರ ರಾಜಗೃಹಾಧಿಪತಿ, ಪಟ್ಟಣದ ಪುರಾಧಿಕಾರಿ, ಹಿರಿಯರು, ರಾಜಪುತ್ರಪಾಲಕರು ಇವರೆಲ್ಲ ಸೇರಿ ಯೇಹುವಿಗೆ, “ನಾವು ನಿನ್ನ ಆಜ್ಞಾಪಾಲರಕರಾದ ಸೇವಕರು. ನಾವಾಗಿ ನಮಗೊಬ್ಬ ಅರಸನನ್ನು ನೇಮಿಸಿಕೊಳ್ಳುವುದಿಲ್ಲ, ನಿನ್ನ ಚಿತ್ತವೇ ನೆರವೇರಲಿ” ಎಂದು ಹೇಳಿ ಕಳುಹಿಸಿದರು.
因此,家臣、市長、長老和師保,便派人去見耶胡說:「我們是你的僕人,凡你吩咐的,我們都必照辦。我們不選立任何人作王;你看著怎樣好,就怎樣辦罷! 」
6 ೬ ಆಗ ಯೇಹುವು ಇನ್ನೊಂದು ಪತ್ರದ ಮೂಲಕವಾಗಿ ಅವರಿಗೆ, “ನೀವು ನನ್ನ ಪಕ್ಷದವರಾಗಿದ್ದು ನನ್ನ ಆಜ್ಞಾನುಸಾರ ನಡೆದುಕೊಳ್ಳುವ ಮನಸ್ಸುಳ್ಳವರಾಗಿದ್ದರೆ, ನಾಳೆ ಇಷ್ಟು ಹೊತ್ತಿಗೆ ನಿಮ್ಮ ಯಜಮಾನನ ಸಂತಾನದವರ ತಲೆಗಳೊಡನೆ ಇಜ್ರೇಲಿಗೆ ಬನ್ನಿರಿ” ಎಂದು ಆಜ್ಞಾಪಿಸಿದನು. ಆಹಾಬನ ಎಪ್ಪತ್ತು ಮಂದಿ ರಾಜಪುತ್ರರು ಪಟ್ಟಣದ ಪ್ರಧಾನಪುರುಷರ ಪರಾಂಬರಿಕೆಯಲ್ಲಿದ್ದರು.
耶胡又給他們寫了第二封信:「如果你們擁護我,願聽從我的號令;那麼,明天這個時候,你們就帶著你們主上的子孫的頭,到依次勒耳來見我。」君王的七十個子孫,其時都教養在城中的官紳家中。
7 ೭ ಪ್ರಧಾನಪುರುಷರು ಪತ್ರಿಕೆಯನ್ನು ಓದಿದೊಡನೆ, ಆ ಎಪ್ಪತ್ತು ಮಂದಿ ರಾಜಪುತ್ರರನ್ನು ಹಿಡಿದು ಕೊಂದು ಅವರ ತಲೆಗಳನ್ನು ಪುಟ್ಟಿಗಳಲ್ಲಿ ತುಂಬಿ ಇಜ್ರೇಲಿನಲ್ಲಿದ್ದ ಯೇಹುವಿಗೆ ಕಳುಹಿಸಿಕೊಟ್ಟರು.
這封信一到,他們便將君王的七十個子孫全都殺了,把他們的頭放在籃子裏,送到依次勒耳耶胡那裏。
8 ೮ ರಾಜಪುತ್ರರ ತಲೆಗಳನ್ನು ತಂದಿದ್ದಾರೆಂಬ ವರ್ತಮಾನವು ಯೇಹುವಿಗೆ ತಲುಪಿದಾಗ ಅವನು, “ಬೆಳಗಾಗುವ ತನಕ ಅವುಗಳನ್ನು ಹೆಬ್ಬಾಗಿಲಿನ ಹತ್ತಿರ ಎರಡು ರಾಶಿಗಳಾಗಿ ಮಾಡಿ ಹಾಕಿರಿ” ಎಂದು ಆಜ್ಞಾಪಿಸಿದನು.
有使者來報告耶胡說:「他們將君王子孫的頭送來了。」耶胡即下令說:「將頭分成兩堆,放在城門口,直到明天早晨。」
9 ೯ ಮರುದಿನ ಬೆಳಿಗ್ಗೆ ಯೇಹುವು ಅವುಗಳ ಹತ್ತಿರ ಹೋಗಿ ಎಲ್ಲಾ ಜನರ ಎದುರಿಗೆ ನಿಂತು ಅವರಿಗೆ, “ನೀವು ನಿರಪರಾಧಿಗಳು, ನಾನಾದರೋ ನನ್ನ ಯಜಮಾನನಿಗೆ ವಿರೋಧವಾಗಿ ಒಳಸಂಚು ಮಾಡಿ ಅವನನ್ನು ಕೊಂದವನು, ಆದರೆ ಇವರನ್ನೆಲ್ಲಾ ಹತಿಸಿದವರಾರು?
第二天早晨,耶胡出來,站著對全民眾說:「你們都沒有罪。看,我背叛了我的主上,且殺了他,但是,這些人是誰殺的呢﹖
10 ೧೦ ಇಗೋ, ಯೆಹೋವನ ವಾಕ್ಯವು ಅಹಾಬನ ಮನೆಯವರನ್ನು ಕುರಿತು ಹೇಳಿದ ಮಾತುಗಳೆಲ್ಲಾ ತಪ್ಪದೆ ನೆರವೇರುವುದೆಂದು ತಿಳಿದುಕೊಳ್ಳಿರಿ. ಯೆಹೋವನು ತನ್ನ ಸೇವಕನಾದ ಎಲೀಯನ ಮುಖಾಂತರವಾಗಿ ಹೇಳಿದ್ದನ್ನು ಮಾಡಿದ್ದಾನಷ್ಟೇ” ಎಂದು ಹೇಳಿದನು.
你們也知道上主的話,即上主論及阿哈布家所說的話,一句也沒有落空;上主藉他僕人厄里亞所說的話,都實現了。」
11 ೧೧ ಅನಂತರ ಯೇಹುವು ಇಜ್ರೇಲಿನಲ್ಲಿ ಉಳಿದ ಅಹಾಬನ ಕುಟುಂಬದವರನ್ನೂ, ಅವನ ಸರದಾರರೂ, ಆಪ್ತಮಿತ್ರರೂ, ಪುರೋಹಿತರು ಇವರನ್ನೂ ಸಂಹರಿಸಿದನು. ಒಬ್ಬನನ್ನೂ ಉಳಿಸಲಿಲ್ಲ.
然後,耶胡把阿哈布家在依次勒耳所剩下的人,所有的親屬、友人和司祭,全都殺了,一個也沒有留下。
12 ೧೨ ನಂತರ ಯೇಹುವು ಸಮಾರ್ಯಕ್ಕೆ ಹೊರಟು ಹೋದನು. ಅವನು ದಾರಿಯಲ್ಲಿ ಕುರುಬರು ಉಣ್ಣೆಕತ್ತರಿಸುವ ಮನೆಯ ಬಳಿಗೆ ಬಂದಾಗ,
以後,耶胡起程往撒瑪黎雅去了。途中經過牧人聚集地貝特厄刻得時,
13 ೧೩ ಯೇಹುವು ಯೆಹೂದ್ಯರ ಅರಸನಾದ ಅಹಜ್ಯನ ಸಹೋದರರನ್ನು ಕಂಡು ಅವರಿಗೆ, “ನೀವು ಯಾರು?” ಎಂದು ಕೇಳಿದನು. ಅದಕ್ಕೆ ಅವರು, “ನಾವು ಅಹಜ್ಯನ ಸಹೋದರರು. ರಾಜಪುತ್ರರನ್ನೂ, ರಾಜಮಾತೆಯ ಮಕ್ಕಳನ್ನೂ ವಂದಿಸುವುದಕ್ಕೋಸ್ಕರ ಇಲ್ಲಿಗೆ ಬಂದಿದ್ದೇವೆ” ಎಂದು ಉತ್ತರ ಕೊಟ್ಟರು.
遇見猶大王阿哈齊雅的兄弟,就問他們說:「你們是誰﹖」他們回答說:「我們是阿哈齊雅的兄弟,現在下去向君王和太后的兒子請安。」
14 ೧೪ ಆಗ ಯೇಹುವು ತನ್ನ ಸೇವಕರಿಗೆ, “ಅವರನ್ನು ಜೀವಸಹಿತ ಹಿಡಿಯಿರಿ” ಎಂದು ಆಜ್ಞಾಪಿಸಿದನು. ಅವರು ಅವರನ್ನು ಹಿಡಿದು ಕೊಂದು, ಉಣ್ಣೆ ಕತ್ತರಿಸುವ ಮನೆಯ ಬಾವಿಯಲ್ಲಿ ಹಾಕಿಬಿಟ್ಟರು. ಅವರು ನಲ್ವತ್ತೆರಡು ಮಂದಿ ಇದ್ದರು. ಅವರಲ್ಲಿ ಒಬ್ಬನನ್ನೂ ತಪ್ಪಿಸಿಕೊಳ್ಳಲು ಬಿಡಲಿಲ್ಲ.
耶胡遂下令說:「將他們活活捉住! 」隨從就將他們活活捉住,在貝特厄刻得井旁把他們殺了,共計四十二人,一個也沒有留下。
15 ೧೫ ಯೇಹುವು ಅಲ್ಲಿಂದ ಮುಂದೆ ಹೋಗುತ್ತಿರುವಾಗ, ತನ್ನನ್ನು ಎದುರುಗೊಳ್ಳುವುದಕ್ಕಾಗಿ ಬಂದ ರೇಕಾಬನ ಮಗನಾದ ಯೆಹೋನಾದಾಬನನ್ನು ಕಂಡು ವಂದಿಸಿ, “ನಿನ್ನ ವಿಷಯದಲ್ಲಿ, ನನ್ನ ಹೃದಯವು ಯಥಾರ್ಥವಾಗಿರುವಂತೆ ನಿನ್ನ ಹೃದಯವು ಯಥಾರ್ಥವಾಗಿರುವುದೋ?” ಎಂದು ಕೇಳಿದನು. ಅವನು, “ಹೌದು” ಎಂದು ಉತ್ತರ ಕೊಟ್ಟನು. ಆಗ ಯೇಹುವು, “ಹಾಗಾದರೆ ನಿನ್ನ ಕೈಯನ್ನು ಕೊಡು” ಎನ್ನಲು ಅವನು ತನ್ನ ಕೈಯನ್ನು ಕೊಟ್ಟನು. ಯೇಹುವು ಅವನನ್ನು ಕೈಹಿಡಿದು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡನು.
耶胡從那裏起身前行,又遇見勒加布的兒子約納達布前來迎接他;耶胡向他請安,問他說:「你對我的心是否同我對你的心,請你伸出手來。」他就向耶胡伸過手去;耶胡就拉他上車,坐在自己身旁,
16 ೧೬ ಯೇಹುವು ಅವನಿಗೆ, “ನನ್ನ ಜೊತೆಯಲ್ಲಿ ಬಂದು, ಯೆಹೋವನಲ್ಲಿ ನನಗಿರುವ ಆಸಕ್ತಿಯನ್ನು ನೋಡು” ಎಂದು ಹೇಳಿ ಅವನನ್ನು ಕೈಹಿಡಿದು ತನ್ನ ರಥದಲ್ಲಿ ಕರೆದುಕೊಂಡು ಹೋದನು.
對他說:「你跟我來,看看我對天主是怎樣的熱誠。」於是叫他坐上他自己的車。
17 ೧೭ ಸಮಾರ್ಯವನ್ನು ಸೇರಿದ ನಂತರ ಅಲ್ಲಿ ಉಳಿದಿದ್ದ ಅಹಾಬನ ಸಂತಾನದವರನ್ನೆಲ್ಲಾ ಸಂಹರಿಸಿಬಿಟ್ಟನು. ಹೀಗೆ ಯೆಹೋವನು ಎಲೀಯನ ಮುಖಾಂತರವಾಗಿ ಹೇಳಿಸಿದ ಮಾತು ನೆರವೇರಿತು.
到了撒瑪黎雅,就照上主對厄里亞所說的話,將阿哈布家在撒瑪黎雅剩下的人,全都殺了。
18 ೧೮ ತರುವಾಯ ಅವನು ಎಲ್ಲಾ ಜನರನ್ನು ಒಟ್ಟಿಗೆ ಸೇರಿಸಿ ಅವರಿಗೆ, “ಅಹಾಬನು ಬಾಳ್ ದೇವತೆಯನ್ನು ಸ್ವಲ್ಪ ಮಾತ್ರ ಆರಾಧಿಸಿದನು. ಯೇಹುವಾದರೂ ಇನ್ನೂ ಅಧಿಕವಾಗಿ ಸೇವಿಸಬೇಕೆಂದಿದ್ದಾನೆ.
耶胡召集了全國人民,對他們說:「阿哈布事奉巴耳不夠熱心,我耶胡要更熱心事奉他。
19 ೧೯ ಆದುದರಿಂದ, ನೀವು ಬಾಳ್ ದೇವತೆಯ ಆರಾಧಕರಾದ ಎಲ್ಲಾ ಪ್ರವಾದಿಗಳನ್ನೂ, ಭಕ್ತರನ್ನೂ, ಯಾಜಕರನ್ನೂ ನನ್ನ ಬಳಿಗೆ ಕರೆದುಕೊಂಡು ಬನ್ನಿರಿ. ನಾನೂ ಬಾಳ್ ದೇವತೆಗೋಸ್ಕರ ಸರ್ವಾಂಗಯಜ್ಞವನ್ನು ಸಮರ್ಪಿಸಬೇಕೆಂದಿದ್ದೇನೆ, ಆದುದರಿಂದ ಅವರಲ್ಲಿ ಒಬ್ಬನೂ ಈ ಕಾರ್ಯಕ್ಕೆ ಬಾರದಿರಕೂಡದು, ಬಾರದವನು ಸಾಯಬೇಕು” ಎಂದು ಹೇಳಿದನು. ಯೇಹುವು ಬಾಳ್ ದೇವತೆಯ ಭಕ್ತರನ್ನು ಸಂಹರಿಸಬೇಕೆಂದು ಈ ಯುಕ್ತಿಯನ್ನು ಮಾಡಿದನು.
所以現在,你們去召集所有巴耳的先知,所有敬拜巴耳的人,和所有的司祭,都到我這裏來,一個也不要缺席,因為我要向巴耳奉獻大祭;誰缺席,誰就不能生存。」這原是耶胡運用的詭計,想消滅所有敬拜巴耳的人。
20 ೨೦ ಇದಲ್ಲದೆ, ಯೇಹುವು ದೂತರ ಮುಖಾಂತರವಾಗಿ, “ಬಾಳ್ ದೇವತೆಯನ್ನು ಆರಾಧಿಸುವ ಎಲ್ಲಾ ಭಕ್ತರೂ ತಮ್ಮನ್ನು ಶುದ್ಧಿಮಾಡಿಕೊಂಡು ಉತ್ಸವಕ್ಕೆ ಬರಬೇಕು” ಎಂದು ಹೇಳಿದನು.
耶胡下令說:「你們要為巴耳召開一個聖會! 」他們就宣布召開。
21 ೨೧ ಯೇಹುವು ಇಸ್ರಾಯೇಲರ ಸಮಸ್ತ ಪ್ರಾಂತ್ಯಗಳಲ್ಲಿ, ಬಾಳ್ ದೇವತೆಯನ್ನು ಸೇವಿಸುವ ಭಕ್ತರಲ್ಲಿ ಒಬ್ಬನೂ ತಪ್ಪದೆ ಎಲ್ಲರೂ ಸೇರಿ ಬರಬೇಕೆಂದು ಪ್ರಕಟಿಸಿದನು. ಅವನು ಎಲ್ಲಾ ಕಡೆಗಳಿಗೂ ದೂತರನ್ನು ಕಳುಹಿಸಿದ್ದರಿಂದ ಅವರಲ್ಲಿ ಒಬ್ಬನೂ ತಪ್ಪಿಸಿ ಕೊಳ್ಳದೆ ಎಲ್ಲರೂ ಸೇರಿ ಬಂದಿದ್ದರು. ಬಾಳ್ ದೇವತೆಯ ದೇವಸ್ಥಾನವು ಪೂರ್ಣವಾಗಿ ಅವನ ಪೂಜಾರಿಗಳಿಂದ, ಭಕ್ತರಿಂದ ತುಂಬಿಹೋಯಿತು.
耶胡派人走遍全以色列;凡敬百拜巴耳的人都來了,沒有一個缺席不來的;他們都進了巴耳廟,巴耳廟內全擠滿了人。
22 ೨೨ ಯೇಹುವು ವಸ್ತ್ರಗಾರದ ಅಧಿಪತಿಗೆ, “ಬಾಳ್ ದೇವತೆಯನ್ನು ಸೇವಿಸುವ ಭಕ್ತರೆಲ್ಲರಿಗೂ ಬಟ್ಟೆಗಳನ್ನು ಕೊಡು” ಎಂದು ಆಜ್ಞಾಪಿಸಿಲು ಅವನು ತಂದುಕೊಟ್ಟನು.
耶胡對管祭衣的人說:「為所有敬拜巴耳的人,拿出衣服來! 」那人就給他們拿出衣服來。
23 ೨೩ ಅನಂತರ ಯೇಹುವು ರೇಕಾಬನ ಮಗನಾದ ಯೆಹೋನಾದಾಬನೊಡನೆ ದೇವಸ್ಥಾನವನ್ನು ಪ್ರವೇಶಿಸಿ ಬಾಳ್ ದೇವತೆಯನ್ನು ಸೇವಿಸುವ ಭಕ್ತರಿಗೆ, “ಯೆಹೋವನ ಭಕ್ತರು ನಿಮ್ಮ ಮಧ್ಯದಲ್ಲಿ ಬಂದಿರುತ್ತಾರೋ? ವಿಚಾರಿಸಿ ನೋಡಿರಿ. ಬಾಳ್ ದೇವತೆಯ ಭಕ್ತರು ಮಾತ್ರ ಇಲ್ಲಿರಬೇಕು” ಎಂದು ಹೇಳಿದನು.
耶胡和勒加布的兒子約納達布進了巴耳廟,對敬拜巴耳的人說:「你們要搜查看看,這裏不要有事奉雅威的人同你們在一起,只准敬拜巴耳的人。」
24 ೨೪ ಆಮೇಲೆ ಅವರು ಸರ್ವಾಂಗಹೋಮಯಜ್ಞಗಳನ್ನು ಸಮರ್ಪಿಸುವುದಕ್ಕೆ ಹೋದರು. ಇದಕ್ಕೆ ಮೊದಲೇ ಅವನು ದೇವಸ್ಥಾನದ ಹೊರಗೆ ಎಂಭತ್ತು ಮಂದಿಯನ್ನು ಕಾಯುವುದಕ್ಕಾಗಿ ಇರಿಸಿ ಯೇಹುವು ಅವರಿಗೆ, “ನಾನು ಯಾರನ್ನು ನಿಮ್ಮ ಕೈಗೆ ಸಿಕ್ಕುವ ಹಾಗೆ ಮಾಡುವೆನೋ ಅವರಲ್ಲಿ ಒಬ್ಬನನ್ನೂ ಬಿಡಬೇಡಿರಿ. ಬಿಟ್ಟರೆ ಅವನ ಪ್ರಾಣಕ್ಕೆ ಬದಲಾಗಿ ನಿಮ್ಮ ಪ್ರಾಣವು ಹೋಗುವುದು” ಎಂಬುದಾಗಿ ಆಜ್ಞಾಪಿಸಿದ್ದನು.
他們於是進去奉獻犧牲和全燔祭。耶胡預先在外已派定八十人,對他們說:「誰若讓我交於你們手中的一個人逃走,就要他以命抵命。」
25 ೨೫ ಸರ್ವಾಂಗಹೋಮವನ್ನು ಅರ್ಪಿಸಿದ ಕೂಡಲೆ ಯೇಹುವು ಕಾವಲುಗಾರರಿಗೂ, ಸೇನಾಧಿಪತಿಗಳಿಗೂ, “ಒಳಗೆ ಹೋಗಿ ಅವರೆಲ್ಲರನ್ನೂ ಸಂಹರಿಸಿರಿ. ಒಬ್ಬನೂ ತಪ್ಪಿಸಿಕೊಳ್ಳಬಾರದು” ಎಂದು ಆಜ್ಞಾಪಿಸಿದನು. ಅವರು ಒಳಗೆ ಹೋಗಿ ಅವರನ್ನು ಕತ್ತಿಯಿಂದ ಕೊಂದು ಅವರ ಶವಗಳನ್ನು ಹೊರಗೆ ಹಾಕಿ ಬಾಳ್ ದೇವತೆಯ ದೇವಸ್ಥಾನಕ್ಕೆ ಸೇರಿದ ಪಟ್ಟಣವನ್ನು ಪ್ರವೇಶಿಸಿದರು.
全燔祭奉獻完畢,耶胡吩咐衛兵和軍官說:「你們進去擊殺,一個耶不可叫他逃走! 」衛兵和軍官便用刀擊殺了他們,把他們的屍體拋出,然後進入巴耳廟的內堂,
26 ೨೬ ಅವರು ಅಲ್ಲಿನ ಬಾಳ್ ದೇವತೆಯ ವಿಗ್ರಹ ಸ್ತಂಭಗಳನ್ನು ತೆಗೆದುಕೊಂಡು ಬಂದು ಸುಟ್ಟುಹಾಕಿದರು.
把巴耳廟內的神柱搬出來燒了,
27 ೨೭ ಇದಲ್ಲದೆ, ಬಾಳ್ ದೇವತೆಯ ವಿಗ್ರಹ ಸ್ತಂಭಗಳನ್ನೂ, ದೇವಸ್ಥಾನಗಳನ್ನೂ ಕೆಡವಿ ಹಾಳುಮಾಡಿದರು. ಅಂದಿನಿಂದ ಇಂದಿನವರೆಗೂ ಆ ಸ್ಥಳವನ್ನು ಶೌಚಾಲಯಕ್ಕಾಗಿ ಉಪಯೋಗಿಸುತ್ತಿದ್ದಾರೆ.
推倒了巴耳偶像,拆毀了巴耳廟,使之成為一個廁所,直到今日。
28 ೨೮ ಹೀಗೆ ಯೇಹುವು ಇಸ್ರಾಯೇಲರಲ್ಲಿ ಬಾಳ್ ದೇವತೆಯ ಪೂಜೆಯನ್ನು ನಿಲ್ಲಿಸಿದನು.
這樣,耶胡將巴耳從以色列中剷除了;
29 ೨೯ ಆದರೂ ಯೇಹುವು ಇಸ್ರಾಯೇಲರನ್ನು ಬೇತೇಲ್ ಮತ್ತು ದಾನ್ ಊರುಗಳಲ್ಲಿದ್ದ ಚಿನ್ನದ ಬಸವನನ್ನು ಪೂಜಿಸಿ ಪಾಪಕ್ಕೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗವನ್ನು ಬಿಡದೆ ಅದನ್ನು ಅನುಸರಿಸಿದನು.
但他仍沒有離棄乃巴特的兒子雅洛貝罕使以色列陷於罪惡的罪:即那兩頭設在貝特耳和丹的金牛。
30 ೩೦ ಯೆಹೋವನು ಯೇಹುವಿಗೆ, “ನೀನು ನನ್ನ ದೃಷ್ಟಿಗೆ ಹಿತಕರವಾದದ್ದನ್ನು ನಡಿಸಿ ನನ್ನ ಮೆಚ್ಚಿಕೆಯನ್ನು ಪಡೆದಿರುವೆ. ಅಹಾಬನ ಮನೆಯವರನ್ನು ಕುರಿತು ನನ್ನ ಚಿತ್ತವನ್ನು ನೆರವೇರಿಸಿದ್ದೀ. ಆದುದರಿಂದ ನಿನ್ನ ಸಂತಾನದವರು ನಾಲ್ಕನೆಯ ತಲೆಮಾರಿನವರೆಗೂ ಇಸ್ರಾಯೇಲರ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು” ಎಂದು ಹೇಳಿದನು.
上主對耶胡說:「由於你好好執行了我視為義的事,照我心中所想的一切對待了阿哈布家,你的子孫要坐以色列的王位,直到第四代。」
31 ೩೧ ಆದರೆ ಯೇಹುವು ಇಸ್ರಾಯೇಲರ ದೇವರಾದ ಯೆಹೋವನ ಧರ್ಮನಿಯಮಗಳನ್ನು ಪೂರ್ಣಮನಸ್ಸಿನಿಂದ ಕೈಕೊಳ್ಳುವುದಕ್ಕೆ ಮನಸ್ಸುಮಾಡಲು ಪ್ರಯತ್ನಿಸಲಿಲ್ಲ. ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿದ ಯಾರೊಬ್ಬಾಮನ ಮಾರ್ಗವನ್ನು ಬಿಡಲೂ ಇಲ್ಲ.
但耶胡並沒有全心謹守遵行上主以色列天主的法律,沒有放棄雅洛貝罕使以色列陷於罪惡的罪。
32 ೩೨ ಯೆಹೋವನು ಆ ಕಾಲದಲ್ಲಿ ಇಸ್ರಾಯೇಲರನ್ನು ಕುಗ್ಗಿಸತೊಡಗಿದನು. ಹಜಾಯೇಲನು ಬಂದು ಇಸ್ರಾಯೇಲರನ್ನು ಇಸ್ರಾಯೇಲರ ಮೇರೆಗಳಲ್ಲಿ ಸೋಲಿಸಿದನು.
那時,上主開始削弱以色列,哈匝耳也在四面邊境上攻擊以色列,
33 ೩೩ ಯೊರ್ದನ್ ನದಿಯ ಪೂರ್ವದಿಕ್ಕಿಗೂ, ಅರ್ನೋನ್ ತಗ್ಗಿನ ಅರೋಯೇರ್ ಪಟ್ಟಣದ ಉತ್ತರದಿಕ್ಕಿಗೂ ಇರುವ ಗಿಲ್ಯಾದ್, ಬಾಷಾನ್ ಪ್ರಾಂತ್ಯಗಳಲ್ಲಿ ವಾಸವಾಗಿದ್ದ ಗಾದ್, ರೂಬೇನ್ ಮತ್ತು ಮನಸ್ಸೆ ಕುಲಗಳವರನ್ನೂ, ಬೇರೆ ಎಲ್ಲಾ ಪ್ರಾಂತ್ಯಗಳಲ್ಲಿರುವ ಇಸ್ರಾಯೇಲರನ್ನೂ ಬಾಧಿಸಿದನು.
侵佔了約旦河東基肋阿得全地,即加得人,勒烏本和默納協人的地方,從阿爾農河附近的阿洛厄爾城,直到基肋阿得和巴商。
34 ೩೪ ಯೇಹುವಿನ ಉಳಿದ ಚರಿತ್ರೆಯೂ, ಅವನ ಶೂರಕೃತ್ಯಗಳ ವಿವರವೂ ಇಸ್ರಾಯೇಲರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಿದೆ.
耶胡其餘的事蹟,他的一切作為和武功,都記載在以色列列王實錄上。
35 ೩೫ ಯೇಹುವು ಪೂರ್ವಿಕರ ಬಳಿಗೆ ಸೇರಲು, ಅವನ ಶವವನ್ನು ಸಮಾರ್ಯದಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಯೆಹೋವಾಹಾಜನು ಅರಸನಾದನು.
耶胡與列祖同眠,人將他葬在撒瑪黎雅;他的兒子約阿哈次繼位為王。
36 ೩೬ ಯೇಹುವು ಸಮಾರ್ಯ ಪಟ್ಟಣದಲ್ಲಿ ವಾಸವಾಗಿದ್ದುಕೊಂಡು ಇಸ್ರಾಯೇಲರನ್ನು ಇಪ್ಪತ್ತೆಂಟು ವರ್ಷಗಳ ಕಾಲ ಆಳಿದನು.
耶胡在撒瑪黎雅作以色列王,凡二十八年。