< ಕೊರಿಂಥದವರಿಗೆ ಬರೆದ ಎರಡನೆಯ ಪತ್ರಿಕೆ 7 >
1 ೧ ಪ್ರಿಯರೇ, ಈ ವಾಗ್ದಾನಗಳು ನಮಗಿರುವುದರಿಂದ, ನಾವು ದೇಹಾತ್ಮಗಳ ಕಲ್ಮಷವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತೆಯ ಸಂಪೂರ್ಣತೆಗೆ ಪ್ರಯತ್ನಿಸೋಣ.
ᎯᎠᏃ ᎾᏍᎩ ᏥᏄᏍᏗ ᎡᎩᏚᎢᏍᏓᏁᎸᎯ ᏥᎩ, ᎢᏨᎨᏳᎢ, ᎢᏓᏓᏅᎦᎸ ᎢᏗᎲᎾ ᏄᏓᎴᏒ ᎦᏓᎭ ᎨᏒ ᎢᎩᏇᏓᎸ, ᎠᎴ ᎢᎦᏓᏅᏙᎩᎯ, ᎢᏗᏍᏆᏗᏍᎨᏍᏗ ᏚᏳᎪᏛ ᎨᏒᎢ, ᎤᏁᎳᏅᎯ ᎡᏗᎾᏰᏍᎬᎢ.
2 ೨ ನಿಮ್ಮ ಹೃದಯಗಳಲ್ಲಿ ನಮಗೆ ಸ್ಥಳ ಕೊಡಿರಿ; ನಿಮ್ಮಲ್ಲಿ ಯಾರಿಗೂ ನಾವು ಅನ್ಯಾಯ ಮಾಡಲಿಲ್ಲ, ಯಾರಿಗೂ ಹಾನಿಯುಂಟುಮಾಡಿಲ್ಲ, ಯಾರನ್ನೂ ವಂಚಿಸಲಿಲ್ಲ.
ᏗᏍᎩᏯᏓᏂᎸᎩ; ᎥᏝ ᎩᎶ ᎤᏣᏘᏂ ᏱᏃᏨᏁᎸ, ᎥᏝ ᎩᎶ ᎠᏍᎦᎾ ᏱᏃᏨᏁᎸ, ᎥᏝ ᎩᎶ ᏲᏥᎶᏄᎡᎸ.
3 ೩ ನಿಮ್ಮ ಮೇಲೆ ತಪ್ಪುಹೊರಿಸಬೇಕೆಂದು ನಾನು ಇದನ್ನು ಹೇಳುತ್ತಿಲ್ಲ; ನಿಮ್ಮ ಜೊತೆ ಸಾಯುವುದಕ್ಕೂ, ಬದುಕುವುದಕ್ಕೂ ಎನ್ನುವಷ್ಟರ ಮಟ್ಟಿಗೆ ನೀವು ನಮ್ಮ ಹೃದಯದಲ್ಲಿದ್ದೀರೆಂದು ನಾನು ಮೊದಲೇ ಹೇಳಿದ್ದೆನಲ್ಲಾ.
ᎯᎠ ᎾᏍᎩ ᏥᏂᏥᏪᎭ ᎥᏝ ᏗᏨᏳᎪᏓᏁᏗᏱ ᏯᎩᏰᎸᎭ; ᎦᏳᎳᏰᏃ ᎯᎠ ᏥᏂᎠᎩᏪᏒ, ᏦᎩᎾᏫᏱ ᎢᏥᏯᎠ, ᎣᎦᏛᏅᎢᏍᏗᏉ ᎢᏧᎳᎭ ᏗᎩᏂᏲᎱᎯᏍᏗᏱ, ᎠᎴ ᎢᏧᎳᎭ ᎢᎦᏕᏗᏱ.
4 ೪ ನಿಮ್ಮಲ್ಲಿ ನನಗೆ ಬಹಳ ಭರವಸೆ ಉಂಟು, ಗಾಢವಾದ ಅಭಿಮಾನವುಂಟು. ನಾನು ಎಲ್ಲಾ ಸಂಕಟಗಳಲ್ಲಿಯೂ ಎದೆಗುಂದದೆ ಆನಂದಭರಿತನಾಗಿದ್ದೇನೆ.
ᎤᏣᏘ ᎢᏨᏲᎢᏳᎭ; ᎤᏣᏘ ᎢᏨᎸᏉᏗᏍᎪᎢ; ᎠᎩᎧᎵᏨᎯ ᎤᎦᎵᏍᏗ ᎨᏒᎢ; ᎤᏣᏔᏅᎯ ᎤᎵᎮᎵᏍᏗ ᎠᏆᏓᏅᏔᏩᏕᎪ ᏂᎦᎥ ᎣᏥᎩᎵᏲᏥᏙᎲᎢ.
5 ೫ ನಾವು ಮಕೆದೋನ್ಯಕ್ಕೆ ಬಂದ ಮೇಲೂ ನಮ್ಮ ದೇಹಕ್ಕೆ ನೆಮ್ಮದಿ ಇರಲಿಲ್ಲ, ಬದಲಾಗಿ ಎಲ್ಲಾ ವಿಷಯಗಳಲ್ಲಿಯೂ ನಮಗೆ ತೊಂದರೆಗಳಿದ್ದವು. ಹೊರಗೆ ಜಗಳ, ಒಳಗೆ ಭಯ
ᎹᏏᏙᏂᏰᏃ ᏬᎩᎷᏨ, ᎥᏝ ᎣᎩᏇᏓᎸ ᎬᏩᏣᏪᏐᎸᏍᏙᏗ ᏱᎨᏎᎢ, ᎬᏩᏚᎾᏛᏍᎩᏂ ᎣᎦᏕᏯᏙᏗᎬᎩ; ᏙᏱᏗᏢ ᎠᎵᏛ ᎨᏒᎢ, ᎭᏫᏂᏃ ᎢᏗᏢ ᎣᏥᎾᏰᏍᎬᎢ.
6 ೬ ಆದರೆ ದೀನಾವಸ್ಥೆಯಲ್ಲಿರುವವರನ್ನು ಸಂತೈಸುವ ದೇವರು ತೀತನನ್ನು ಕಳುಹಿಸುವ ಮೂಲಕ ನಮ್ಮನ್ನು ಸಂತೈಸಿದನು.
ᎤᏁᎳᏅᎯᏍᎩᏂᏃᏅ ᏗᎦᎵᏍᏓᏗᏍᎩ ᎤᏪᎵᎯᏍᏗ ᎤᎾᏓᏅᏔᏩᏕᎩ, ᎣᎩᎦᎵᏍᏓᏗᏍᏔᏅᎩ ᏓᏓᏏ ᎤᎷᏨᎢ;
7 ೭ ಅವನ ಬರುವಿಕೆಯಿಂದ ಮಾತ್ರವಲ್ಲದೆ ನಿಮ್ಮಿಂದ ಅವನು ಬಹಳ ಸಮಾಧಾನವನ್ನು ಹೊಂದಿದೆನೆಂದೂ, ನಿಮ್ಮ ಹಂಬಲ, ನಿಮ್ಮ ದುಃಖ, ನನ್ನ ಮೇಲಿರುವ ನಿಮ್ಮ ಕಾಳಜಿ; ಇವುಗಳನ್ನು ನಮಗೆ ತಿಳಿಸಿದಾಗ ನಾನು ಇನ್ನೂ ಹೆಚ್ಚಾಗಿ ಸಂತೋಷಪಟ್ಟೆನು.
ᎥᏝᏍᎩᏂᏃᏅ ᎤᎷᏨᏉ ᎤᏩᏒ, ᎤᎦᎵᏍᏗᏍᎩᏂ ᎾᏍᏉ ᎤᏓᏅᏓᏛᎢ ᏂᎯ ᎨᏒ ᎢᏳᏍᏗ, ᎣᎩᏃᏁᎸ ᏂᎯ ᎤᏣᏘ ᎢᏣᏚᎵᏍᎬᎢ, ᎤᏲ ᎢᏥᏰᎸᏒᎯ, ᎤᏣᏘ ᏍᎩᎨᏳᎢᏳ ᎨᏒᎢ; ᎾᏍᎩ ᎢᏳᏍᏗ ᎤᏟ ᎢᎦᎢ ᎠᏆᎵᎮᎵᏨᎩ.
8 ೮ ನಾನು ಬರೆದ ಪತ್ರದಿಂದ ನಿಮಗೆ ದುಃಖವಾಗಿದ್ದರೂ ನನಗೆ ವಿಷಾದವಿಲ್ಲ, ಅದು ನಿಮ್ಮನ್ನು ಸ್ವಲ್ಪ ಸಮಯ ದುಃಖಪಡಿಸಿತೆಂದು ನಾನು ಮೊದಲು ಪಶ್ಚಾತ್ತಾಪ ಪಟ್ಟಿದ್ದರೂ ಈಗ ಸಂತೋಷಪಡುತ್ತೇನೆ.
ᎤᏙᎯᏳᎯᏍᎩᏂᏃᏅ ᎤᏲ ᎢᏨᏯᏓᏅᏓᏗᏍᏔᏅᎩ ᎪᏪᎵ ᏫᏨᏅᏁᎸᎢ, ᎥᏝ ᎤᏲ ᏯᎩᏰᎸᎭ, ᎤᏲᏍᎩᏂᏃᏅ ᎠᎩᏰᎸᏒᎩ; ᎢᏥᎪᏩᏘᏰᏃ ᎾᏍᎩ ᎪᏪᎵ ᎤᏲ ᎢᏣᏓᏅᏓᏗᏍᏔᏅᎢ, ᎠᏎᏃ ᏞᎦᏉ.
9 ೯ ನಿಮಗೆ ಯಾತನೆಯಾಯಿತೆಂದು ನಾನು ಈಗ ಸಂತೋಷಪಡದೆ ನೀವು ದುಃಖಪಟ್ಟು ಪಶ್ಚಾತ್ತಾಪಪಟ್ಟು ಮಾನಸಾಂತರ ಹೊಂದಿದ್ದಕ್ಕಾಗಿ ಸಂತೋಷಪಡುತ್ತೇನೆ. ನೀವು ದೇವರ ಚಿತ್ತಾನುಸಾರವಾಗಿ ದುಃಖಿಸಿದ್ದರಿಂದ ನಮ್ಮಿಂದಾಗಿ ಯಾವುದರಲ್ಲಿಯೂ ನಿಮಗೆ ನಷ್ಟವಾಗಲಿಲ್ಲವಲ್ಲಾ.
ᎪᎯᏃ ᏥᎩ ᎦᎵᎡᎵᎦ, ᎥᏝ ᎠᏗᎾ ᎤᏲ ᎢᏣᏓᏅᏓᏛ ᏱᏅᏗᎦᎵᏍᏙᏗᎭ, ᏅᏗᎦᎵᏍᏙᏗᎭᏍᎩᏂ ᏗᎨᏥᏁᏟᏴᏍᏗ ᏕᏣᏓ ᏅᏛ ᎢᏴᏛ ᎤᏲ ᎢᏣᏓᏅᏓᏛᎢ; ᎤᏲᏰᏃ ᎢᏣᏓᏅᏓᏛᎩ ᎾᏍᎩᏯ ᎤᏁᎳᏅᎯ ᏗᎬᏩᏓᏂᎸᎢᏍᏗ ᏥᎩ, ᎾᏍᎩ ᏅᏓᏳᎵᏍᏙᏗᏱ ᎪᎱᏍᏗ ᎡᏍᎦ ᎢᏨᏴᏁᏗᏱ ᏂᎨᏒᎾ.
10 ೧೦ ದೇವರ ಚಿತ್ತಾನುಸಾರವಾಗಿರುವ ದುಃಖವು ರಕ್ಷಣೆಗೆ ಕಾರಣವಾಗುವ ಮಾನಸಾಂತರವನ್ನುಂಟು ಮಾಡುತ್ತದೆ, ಆ ಮಾನಸಾಂತರದಲ್ಲಿ ಪಶ್ಚಾತ್ತಾಪಕ್ಕೆ ಆಸ್ಪದವಿಲ್ಲ; ಆದರೆ ಲೋಕದವರಿಗಿರುವಂಥ ದುಃಖವು ಮರಣವನ್ನುಂಟುಮಾಡುತ್ತದೆ.
ᎤᏲᏰᏃ ᎠᏓᏅᏓᏗᏍᏗ ᎤᏁᎳᏅᎯ ᏗᎬᏩᏓᏂᎸᎢᏍᏗ ᎨᏒ ᎦᏁᏟᏴᏍᏗ ᎨᏒ ᎣᏓᏅᏛ ᏩᎵᏰᎢᎶᎯᎭ ᎥᏓᏗᏍᏕᎸᏗᏱ ᏫᎦᎷᎩ, ᎾᏍᎩ ᎤᏲ ᎠᏰᎸᏗ ᏂᎨᏒᎾ; ᎡᎶᎯᏍᏗᏂ ᎡᎯ ᎤᏲ ᎠᏓᏅᏓᏗᏍᏗ ᎨᏒ ᎠᏲᎱᎯᏍᏗ ᎨᏒ ᏩᎵᏰᎢᎶᎯᎭ.
11 ೧೧ ನೀವು ದೇವರ ಚಿತ್ತಾನುಸಾರವಾಗಿ ಪಟ್ಟ ದುಃಖವು ನಿಮ್ಮಲ್ಲಿ ಎಂಥ ಶ್ರದ್ದೆಯನ್ನು ಉಂಟುಮಾಡಿತು ನೋಡಿರಿ. ನೀವು ನಿರ್ದೋಷಿಗಳೆಂದು ಸಾಬೀತುಪಡಿಸುವುದಕ್ಕೆ ಎಂಥ ಪ್ರಯಾಸ, ಎಂಥ ರೋಷ; ಎಂಥ ಭಯ; ಎಂಥ ಹಂಬಲ; ಎಂಥ ಉತ್ಸಾಹ; ತಪ್ಪಿತಸ್ಥರನ್ನು ಶಿಕ್ಷಿಸಲು ಎಂಥ ಬಯಕೆ. ನೀವು ಆ ಕಾರ್ಯದಲ್ಲಿ ನಿರ್ದೋಷಿಗಳೆಂದು ಎಲ್ಲಾ ವಿಧದಲ್ಲಿಯೂ ತೋರಿಸಿದ್ದೀರಿ.
ᎬᏂᏳᏉᏰᏃ ᎯᎠ ᎾᏍᎩ ᎤᏲ ᏥᏣᏓᏅᏓᏛᎩ ᎾᏍᎩ ᏗᎬᏩᏓᏂᎸᎢᏍᏗ ᎨᏒ ᎤᏁᎳᏅᎯ, ᏂᎦᎥ ᎢᏣᎵᏂᎬᏁᏗ ᎨᏒ ᏭᎵᏰᎢᎶᎸ; ᏂᎦᎥ ᏗᏣᏢᏫᏍᏙᏗ ᎢᏥᏲᎲᎢ, ᎥᎥ ᏂᎦᎥ ᎢᏥᏂᏆᏘᎲᎢ, ᎥᎥ, ᏂᎦᎥ ᎢᏥᎾᏰᏍᎬᎢ, ᎥᎥ, ᏂᎦᎥ ᎤᏣᏘ ᎢᏣᏑᎵᏍᎬᎢ, ᎥᎥᎢ, ᏂᎦᎥ ᎤᎵᏂᎩᏛ ᎢᏣᏓᏅᏛᎢ, ᎥᎥ, ᏂᎦᎥ ᎠᏓᏍᏛᏗᏍᏙᏗ ᎨᏒᎢ! ᏂᎦᎥ ᏧᏓᎴᏅᏛ ᎬᏂᎨᏒ ᏂᏨᏁᎸ ᏂᏥᏍᎦᏅᎾ ᎨᏒ ᎯᎠ ᎾᏍᎩ ᎧᏃᎮᏗ ᏥᎩ.
12 ೧೨ ನಾನು ನಿಮಗೆ ಬರೆದದ್ದು ತಪ್ಪುಮಾಡಿದವನಿಗೆ ದಂಡನೆಯಾಗಲಿ ಎಂದಲ್ಲ, ಆ ತಪ್ಪಿನಿಂದ ನೊಂದವನಿಗೆ ನ್ಯಾಯ ದೊರಕಲೆಂದೂ ಅಲ್ಲ; ನಮ್ಮ ಬಗ್ಗೆ ನಿಮಗಿರುವ ಅಕ್ಕರೆ, ಆಸಕ್ತಿಗಳು ದೇವರ ಸನ್ನಿಧಿಯಲ್ಲಿ ನಿಮಗೆ ವ್ಯಕ್ತವಾಗಲೆಂದೇ ಬರೆದೆನು. ಆದ್ದರಿಂದಲೇ ನಮ್ಮ ಮನಸ್ಸಿಗೆ ನೆಮ್ಮದಿ ಉಂಟಾಗಿದೆ.
ᎾᏍᎩ ᏥᏄᏍᏗ ᎤᏙᎯᏳᎯᏍᎩᏂᏃᏅ ᏫᏨᏲᏪᎳᏁᎸᎩ, ᎠᏎᏃ ᎥᏝ ᎤᏣᏘᏂ ᎢᏳᏛᏁᎸᎯ ᏳᎬᏩᎴᎢ, ᎥᏝ ᎠᎴ Ꮎ ᎤᏣᏘᏂ ᎢᏯᎦᏛᏁᎸᎯ ᏳᎬᏩᎴᎢ; ᎠᏍᎩᏂ ᎢᏨᏍᏆᏂᎪᏗᏳ ᎨᏒ ᎤᏁᎳᏅᎯ ᎠᎦᏔᎲ ᎬᏂᎨᏒ ᎢᏣᎵᏍᏓᏁᏗᏱ.
13 ೧೩ ಅಷ್ಟೇ ಅಲ್ಲ, ನೀವೆಲ್ಲರೂ ತೀತನ ಮನಸ್ಸನ್ನು ತಣಿಸಿದ್ದರಿಂದ ಆತನ ಸಂತೋಷವನ್ನು ಕಂಡು ನಾವು ಮತ್ತಷ್ಟು ತೃಪ್ತರಾಗಿದ್ದೇವೆ.
ᎾᏍᎩ ᎢᏳᏍᏗ ᏂᎯ ᎤᎦᎵᏍᏗ ᎢᏣᏓᏅᏛ ᎠᏴ ᎣᎩᎦᎵᏍᏓᏛᎩ; ᎥᎥ, ᎠᎴ ᎤᏟ ᎢᎦᎢ ᎣᎦᎵᎮᎵᏍᏗ ᏄᎵᏍᏔᏅᎩ, ᏓᏓᏏ ᎠᎵᎮᎵᎬ ᎢᏳᏍᏗ, ᏅᏓᎦᎵᏍᏙᏗᏍᎬᎩ ᎾᏍᎩ ᎤᏓᏅᏙ ᏂᏥᎥ ᎡᏥᎦᎵᏍᏓᏕᎸᎢ.
14 ೧೪ ಯಾಕೆಂದರೆ ನಾನು ಅವನ ಮುಂದೆ ನಿಮ್ಮನ್ನು ಹೊಗಳಿದ್ದಕ್ಕಾಗಿ ನಾನು ನಾಚಿಕೆಪಡಬೇಕಾಗಿ ಬರಲಿಲ್ಲ. ಬದಲಾಗಿ ನಾವು ನಿಮಗೆ ಹೇಳಿದ ಎಲ್ಲಾ ಮಾತುಗಳು ಹೇಗೆ ಸತ್ಯವಾಗಿದ್ದವೋ ಹಾಗೆಯೇ ನಾವು ತೀತನ ಮುಂದೆ ಆಡಿದ ಹೊಗಳಿಕೆಯ ಮಾತುಗಳೆಲ್ಲವೂ ಸತ್ಯವೆಂದು ಕಂಡುಬಂದವು.
ᎢᏳᏰᏃ ᏥᏯᏢᏈᏎᎸᎯ ᎨᏎᏍᏗ, ᏂᎯ ᎢᏨᏁᎢᏍᏗᏍᎬᎢ, ᎥᏝ ᏱᎦᏕᎣᏍᎦ; ᏂᎦᏗᏳᏍᎩᏂ ᏧᏓᎴᏅᏛ ᎢᏨᏬᏁᏔᏅᎢ ᎤᏙᎯᏳᎯᏯ ᏥᎩ, ᎾᏍᎩᏯᏉ ᎣᎦᏢᏆᏒᎢ, ᎾᏍᎩ ᏓᏓᏏ ᎣᏣᏢᏆᏎᎸᎢ, ᎤᏙᎯᏳᎯᏯ ᏄᎵᏍᏔᏅ.
15 ೧೫ ನೀವು ವಿಧೇಯತೆಯಲ್ಲಿ ಭಯಭಕ್ತಿಯಿಂದ ಅವನನ್ನು ಸ್ವೀಕರಿಸಿಕೊಂಡಿದ್ದನ್ನು ಜ್ಞಾಪಕಮಾಡಿಕೊಳ್ಳುವಾಗ ನಿಮ್ಮ ಮೇಲೆ ಅವನಿಗಿರುವ ಪ್ರೀತಿ ಹೆಚ್ಚಾಗಿದೆ.
ᎠᎴ ᎤᎾᏫᏱ ᎢᏥᎨᏳᎯᏳ ᎨᏒ ᎤᏣᏘ ᎤᏁᏉᏨ, ᎤᏅᏓᏛ ᎢᏦᎯᏳᎯᏳ ᎨᏒ ᏂᏥᎥᎢ, ᎾᏍᎩ ᎢᏥᎾᏰᏍᎩ ᎠᎴ ᏗᏥᎾᏫᏍᎩ ᏕᏣᏓᏂᎸᏨᎢ.
16 ೧೬ ನಿಮ್ಮ ಮೇಲೆ ನನಗೆ ಎಲ್ಲಾ ವಿಧಗಳಲ್ಲಿಯೂ ಪೂರ್ಣ ಭರವಸೆ ಇರುವುದರಿಂದ ನಾನು ಸಂತೋಷಪಡುತ್ತೇನೆ.
ᎾᏍᎩ ᎢᏳᏍᏗ ᎦᎵᎡᎵᎦ, ᎨᏨᏲᎢᏳᏗ ᎨᏒ ᏄᏓᎴᏒ ᎪᎱᏍᏗ ᎤᎬᏩᎵ.