< ಕೊರಿಂಥದವರಿಗೆ ಬರೆದ ಎರಡನೆಯ ಪತ್ರಿಕೆ 11 >
1 ೧ ನಾನು ನನ್ನನ್ನು ಹೊಗಳಿಕೊಳ್ಳುವ ಹುಚ್ಚುತನವನ್ನು ನೀವು ಸ್ವಲ್ಪ ಸಹಿಸಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ. ನೀವು ನನ್ನನ್ನು ಸಹಿಸಿಕೊಳ್ಳಿರಿ.
১যূযং মমাজ্ঞানতাং ক্ষণং যাৱৎ সোঢুম্ অর্হথ, অতঃ সা যুষ্মাভিঃ সহ্যতাং|
2 ೨ ಯಾಕೆಂದರೆ ದೇವರಲ್ಲಿರುವಂಥ ಚಿಂತೆಯಿಂದಲೇ ನಾನು ನಿಮ್ಮ ವಿಷಯದಲ್ಲಿ ಚಿಂತಿಸುತ್ತೇನೆ. ನಿಮ್ಮನ್ನು ಕ್ರಿಸ್ತನೆಂಬ ಒಬ್ಬನೇ ಪುರುಷನಿಗೆ ಶುದ್ಧ ಕನ್ಯೆಯಾಗಿ ಒಪ್ಪಿಸಬೇಕೆಂದು ನಿಮ್ಮನ್ನು ಆತನಿಗೆ ನಿಶ್ಚಯಮಾಡಿಸಿದ್ದೇನಲ್ಲ.
২ঈশ্ৱরে মমাসক্তৎৱাদ্ অহং যুষ্মানধি তপে যস্মাৎ সতীং কন্যামিৱ যুষ্মান্ একস্মিন্ ৱরেঽর্থতঃ খ্রীষ্টে সমর্পযিতুম্ অহং ৱাগ্দানম্ অকার্ষং|
3 ೩ ಆದರೆ ಹೇಗೆ ಹವ್ವಳು ಸರ್ಪದ ಕುಯುಕ್ತಿಗೆ ಒಳಗಾಗಿ ಮೋಸಹೋದಳೋ ಹಾಗೆ ನಿಮ್ಮ ಮನಸ್ಸು ಕ್ರಿಸ್ತನ ವಿಷಯದಲ್ಲಿರಬೇಕಾದ ಯಥಾರ್ಥತ್ವವನ್ನೂ ಶುದ್ಧತ್ವವನ್ನೂ ಬಿಟ್ಟು ಕೆಟ್ಟುಹೋದೀತೆಂದು ನನಗೆ ಭಯವಾಗಿದೆ.
৩কিন্তু সর্পেণ স্ৱখলতযা যদ্ৱদ্ হৱা ৱঞ্চযাঞ্চকে তদ্ৱৎ খ্রীষ্টং প্রতি সতীৎৱাদ্ যুষ্মাকং ভ্রংশঃ সম্ভৱিষ্যতীতি বিভেমি|
4 ೪ ಯಾಕೆಂದರೆ ಯಾರಾದರು ಬಂದು ನಾವು ಬೋಧಿಸಿದ ಯೇಸುವನ್ನಲ್ಲದೆ ಮತ್ತೊಬ್ಬ ಯೇಸುವನ್ನು ನಿಮಗೆ ಪ್ರಕಟಿಸುವಾಗಲೂ ಇಲ್ಲವೇ ನೀವು ಹೊಂದದೆ ಇದ್ದ ಬೇರೆ ವಿಧವಾದ ಆತ್ಮಪ್ರೇರಣೆಯನ್ನು ಹೊಂದುವಾಗಲೂ, ನೀವು ಒಪ್ಪಿಕೊಳ್ಳದೆ ಇದ್ದ ಬೇರೊಂದು ಸುವಾರ್ತೆಯನ್ನು ಕೇಳುವಾಗಲೂ ನೀವು ಸಹಿಸಿಕೊಳ್ಳುತ್ತಿರುವುದು ಬಹು ಆಶ್ಚರ್ಯ.
৪অস্মাভিরনাখ্যাপিতোঽপরঃ কশ্চিদ্ যীশু র্যদি কেনচিদ্ আগন্তুকেনাখ্যাপ্যতে যুষ্মাভিঃ প্রাগলব্ধ আত্মা ৱা যদি লভ্যতে প্রাগগৃহীতঃ সুসংৱাদো ৱা যদি গৃহ্যতে তর্হি মন্যে যূযং সম্যক্ সহিষ্যধ্ৱে|
5 ೫ “ಅತಿಶ್ರೇಷ್ಟರಾದ ಅಪೊಸ್ತಲರು” ಅನ್ನಿಸಿಕೊಳ್ಳುವ ಅವರಿಗಿಂತ ನಾನು ಒಂದರಲ್ಲಾದರೂ ಕಡಿಮೆಯಾದವನಲ್ಲವೆಂದು ಎಣಿಸುತ್ತೇನೆ
৫কিন্তু মুখ্যেভ্যঃ প্রেরিতেভ্যোঽহং কেনচিৎ প্রকারেণ ন্যূনো নাস্মীতি বুধ্যে|
6 ೬ ನಾನು ವಾಕ್ಚಾತುರ್ಯದಲ್ಲಿ ನಿಪುಣನಲ್ಲದಿದ್ದರೂ ಜ್ಞಾನದಲ್ಲಿ ಅಲ್ಪನಲ್ಲ. ಇದನ್ನು ಎಲ್ಲಾ ಸಮಯಸಂದರ್ಭಗಳಲ್ಲೂ ಸ್ಪಷ್ಟಪಡಿಸಿದ್ದೇನೆ.
৬মম ৱাক্পটুতাযা ন্যূনৎৱে সত্যপি জ্ঞানস্য ন্যূনৎৱং নাস্তি কিন্তু সর্ৱ্ৱৱিষযে ৱযং যুষ্মদ্গোচরে প্রকাশামহে|
7 ೭ ನೀವು ಅಭಿವೃದ್ಧಿಹೊಂದಬೇಕೆಂದು ನನ್ನನ್ನು ನಾನೇ ತಗ್ಗಿಸಿಕೊಂಡು ದೇವರ ಸುವಾರ್ತೆಯನ್ನು ನಿಮಗೆ ಉಚಿತವಾಗಿ ಸಾರಿದರಲ್ಲಿ ಪಾಪಮಾಡಿದ್ದೇನೋ?
৭যুষ্মাকম্ উন্নত্যৈ মযা নম্রতাং স্ৱীকৃত্যেশ্ৱরস্য সুসংৱাদো ৱিনা ৱেতনং যুষ্মাকং মধ্যে যদ্ অঘোষ্যত তেন মযা কিং পাপম্ অকারি?
8 ೮ ನಿಮಗೆ ಸೇವೆಮಾಡುವುದಕ್ಕೋಸ್ಕರ ನಾನು ಬೇರೆ ಸಭೆಗಳಿಂದ ನೆರವು ಪಡೆಯುತ್ತಿದ್ದೆ, ನಿಮಗೋಸ್ಕರ ಇತರ ಸಭೆಗಳಿಂದ ಹಣ ವಸೂಲಿಮಾಡುತ್ತಿದ್ದೆ.
৮যুষ্মাকং সেৱনাযাহম্ অন্যসমিতিভ্যো ভৃতি গৃহ্লন্ ধনমপহৃতৱান্,
9 ೯ ನಾನು ನಿಮ್ಮಲ್ಲಿದ್ದಾಗ ಖರ್ಚಿಗೆ ಏನೂ ಇಲ್ಲದ ಸಮಯದಲ್ಲಿ ಯಾರ ಮೇಲೆಯೂ ಭಾರ ಹಾಕಲಿಲ್ಲ. ಮಕೆದೋನ್ಯದಿಂದ ಬಂದ ಸಹೋದರರು ನನಗೆ ಬೇಕಾದದ್ದೆಲ್ಲವನ್ನೂ ಕೊಟ್ಟರು. ನಾನು ನಿಮಗೆ ಯಾವುದರಲ್ಲಿಯೂ ಭಾರವಾಗಿರಬಾರದೆಂದು ನೋಡಿಕೊಳ್ಳುತ್ತಿದ್ದೆನು. ಇನ್ನು ಮೇಲೆಯೂ ನೋಡಿಕೊಳ್ಳುವೆನು.
৯যদা চ যুষ্মন্মধ্যেঽৱঽর্ত্তে তদা মমার্থাভাৱে জাতে যুষ্মাকং কোঽপি মযা ন পীডিতঃ; যতো মম সোঽর্থাভাৱো মাকিদনিযাদেশাদ্ আগতৈ ভ্রাতৃভি ন্যৱার্য্যত, ইত্থমহং ক্কাপি ৱিষযে যথা যুষ্মাসু ভারো ন ভৱামি তথা মযাত্মরক্ষা কৃতা কর্ত্তৱ্যা চ|
10 ೧೦ ಈ ನನ್ನ ಹೊಗಳಿಕೆಯನ್ನು ಅಖಾಯದ ಪ್ರಾಂತ್ಯಗಳಲ್ಲಿ ಒಬ್ಬರೂ ತಡೆಯಲಾರರೆಂದು ಕ್ರಿಸ್ತನ ಮುಂದೆ ಸತ್ಯವಾಗಿ ಹೇಳುತ್ತೇನೆ.
১০খ্রীষ্টস্য সত্যতা যদি মযি তিষ্ঠতি তর্হি মমৈষা শ্লাঘা নিখিলাখাযাদেশে কেনাপি ন রোৎস্যতে|
11 ೧೧ ನಿಮ್ಮಿಂದ ನಾನು ಏನನ್ನೂ ತೆಗೆದುಕೊಳ್ಳುತ್ತಿಲ್ಲವೇಕೆ? ನಿಮ್ಮ ಮೇಲೆ ಪ್ರೀತಿ ಇಲ್ಲದ್ದರಿಂದಲೋ? ಇಲ್ಲ, ನಿಮ್ಮ ಮೇಲೆ ನಮಗಿರುವ ಪ್ರೀತಿ ಎಷ್ಟೆಂದು ದೇವರೇ ಬಲ್ಲನು.
১১এতস্য কারণং কিং? যুষ্মাসু মম প্রেম নাস্ত্যেতৎ কিং তৎকারণং? তদ্ ঈশ্ৱরো ৱেত্তি|
12 ೧೨ ಕೆಲವರು ತಾವು ಮಾಡುತ್ತಿರುವ ಕಾರ್ಯ, ನಾವು ಅಪೊಸ್ತಲರಾಗಿ ಮಾಡುತ್ತಿರುವ ಕಾರ್ಯಕ್ಕೆ ಸರಿಸಮವೆಂದು ವಾದಿಸಲು ಅವಕಾಶವನ್ನು ಹುಡುಕುತ್ತಿದ್ದಾರೆ. ಹುಡುಕುವವರಿಗೆ ಯಾವ ಆಸ್ಪದವೂ ಸಿಕ್ಕದಂತೆ ನಾನೀಗ ಮಾಡುತ್ತಿರುವುದನ್ನೇ ಮುಂದುವರಿಸಿಕೊಂಡು ಹೋಗುತ್ತೇನೆ.
১২যে ছিদ্রমন্ৱিষ্যন্তি তে যৎ কিমপি ছিদ্রং ন লভন্তে তদর্থমেৱ তৎ কর্ম্ম মযা ক্রিযতে কারিষ্যতে চ তস্মাৎ তে যেন শ্লাঘন্তে তেনাস্মাকং সমানা ভৱিষ্যন্তি|
13 ೧೩ ಆದರೆ ಅಂಥವರು ಸುಳ್ಳು ಅಪೊಸ್ತಲರೂ, ಮೋಸಗಾರರಾದ ಕೆಲಸದವರೂ, ಕ್ರಿಸ್ತನ ಅಪೊಸ್ತಲರಾಗಿ ಕಾಣಿಸುವುದಕ್ಕೆ ವೇಷಹಾಕಿಕೊಳ್ಳುವವರೂ ಆಗಿದ್ದಾರೆ.
১৩তাদৃশা ভাক্তপ্রেরিতাঃ প্রৱঞ্চকাঃ কারৱো ভূৎৱা খ্রীষ্টস্য প্রেরিতানাং ৱেশং ধারযন্তি|
14 ೧೪ ಇದೇನೂ ಆಶ್ಚರ್ಯವಲ್ಲ. ಸೈತಾನನು ತಾನೇ ಪ್ರಕಾಶ ರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳುವಾಗ,
১৪তচ্চাশ্চর্য্যং নহি; যতঃ স্ৱযং শযতানপি তেজস্ৱিদূতস্য ৱেশং ধারযতি,
15 ೧೫ ಅವನ ಸೇವಕರೂ ಸಹ ನೀತಿಗೆ ಸೇವಕರಾಗಿ ಕಾಣಿಸುವುದಕ್ಕೆ ವೇಷಹಾಕಿಕೊಳ್ಳುವುದು ಆಶ್ಚರ್ಯವೇನಲ್ಲ. ಅವರ ಅಂತ್ಯಾವಸ್ಥೆಯು ಅವರ ಕೃತ್ಯಗಳಿಗೆ ತಕ್ಕಂತೆಯೇ ಇರುವುದು.
১৫ততস্তস্য পরিচারকা অপি ধর্ম্মপরিচারকাণাং ৱেশং ধারযন্তীত্যদ্ভুতং নহি; কিন্তু তেষাং কর্ম্মাণি যাদৃশানি ফলান্যপি তাদৃশানি ভৱিষ্যন্তি|
16 ೧೬ ಯಾರೂ ನನ್ನನ್ನು ಬುದ್ಧಿಹೀನನೆಂದು ತಿಳಿಯಬಾರದೆಂದು ತಿರುಗಿ ಹೇಳುತ್ತೇನೆ. ಹಾಗೆ ನೆನಸಿದರೂ ಚಿಂತೆಯಿಲ್ಲ. ನನ್ನನ್ನು ಬುದ್ಧಿಹೀನನಾಗಿಯೇ ಸ್ವೀಕರಿಸಿ. ಆಗ ನಾನು ಆತ್ಮ ಪ್ರಶಂಸೆ ಮಾಡಿಕೊಳ್ಳಲು ಅಲ್ಪಸ್ವಲ್ಪವಾದರೂ ಆಸ್ಪದವಾಗುತ್ತದೆ.
১৬অহং পুন র্ৱদামি কোঽপি মাং নির্ব্বোধং ন মন্যতাং কিঞ্চ যদ্যপি নির্ব্বোধো ভৱেযং তথাপি যূযং নির্ব্বোধমিৱ মামনুগৃহ্য ক্ষণৈকং যাৱৎ মমাত্মশ্লাঘাম্ অনুজানীত|
17 ೧೭ ನಾನು ಈಗ ಆಡುವ ಮಾತುಗಳನ್ನು ಕರ್ತನನ್ನು ಅನುಸರಿಸುವವರಾಗಿ ಆಡದೆ ಭರವಸದಿಂದ ತನ್ನನ್ನು ಹೊಗಳಿಕೊಳ್ಳುವ ಬುದ್ಧಿಹೀನನಂತೆ ಆಡುತ್ತೇನೆ.
১৭এতস্যাঃ শ্লাঘাযা নিমিত্তং মযা যৎ কথিতৱ্যং তৎ প্রভুনাদিষ্টেনেৱ কথ্যতে তন্নহি কিন্তু নির্ব্বোধেনেৱ|
18 ೧೮ ಅನೇಕರು ಲೋಕಸಂಬಂಧವಾದ ಕಾರ್ಯಗಳಲ್ಲಿ ಹೊಗಳಿಕೊಳ್ಳುವುದರಿಂದ ನಾನೂ ಹೊಗಳಿಕೊಳ್ಳುತ್ತೇನೆ.
১৮অপরে বহৱঃ শারীরিকশ্লাঘাং কুর্ৱ্ৱতে তস্মাদ্ অহমপি শ্লাঘিষ্যে|
19 ೧೯ ನೀವು ಬುದ್ಧಿವಂತರಾಗಿದ್ದು ಬುದ್ಧಿಹೀನರನ್ನು ಸಂತೋಷದಿಂದ ಸಹಿಸಿಕೊಳ್ಳುತ್ತೀರಲ್ಲಾ
১৯বুদ্ধিমন্তো যূযং সুখেন নির্ব্বোধানাম্ আচারং সহধ্ৱে|
20 ೨೦ ಒಬ್ಬನು ನಿಮ್ಮನ್ನು ತನಗೆ ವಶಮಾಡಿಕೊಂಡರೂ, ಒಬ್ಬನು ನಿಮ್ಮನ್ನು ನುಂಗಿಬಿಟ್ಟರೂ, ಒಬ್ಬನು ನಿಮ್ಮನ್ನು ಮರಳುಗೊಳಿಸಿ ಹಿಡಿದರೂ, ಒಬ್ಬನು ತನ್ನನ್ನು ಹೆಚ್ಚಿಸಿಕೊಂಡರೂ, ಒಬ್ಬನು ನಿಮ್ಮ ಮುಖದ ಮೇಲೆ ಹೊಡೆದರೂ ಸಹಿಸಿಕೊಳ್ಳುತ್ತೀರಲ್ಲಾ.
২০কোঽপি যদি যুষ্মান্ দাসান্ করোতি যদি ৱা যুষ্মাকং সর্ৱ্ৱস্ৱং গ্রসতি যদি ৱা যুষ্মান্ হরতি যদি ৱাত্মাভিমানী ভৱতি যদি ৱা যুষ্মাকং কপোলম্ আহন্তি তর্হি তদপি যূযং সহধ্ৱে|
21 ೨೧ ನಾವು ಬಲವಿಲ್ಲದವರಾಗಿದ್ದೆವೆಂಬುದನ್ನು ನಾಚಿಕೆಗೇಡಿನಿಂದ ಹೇಳುತ್ತಿದ್ದೇನೆ. ಯಾವ ಆಧಾರದಿಂದ ಯಾವನಾದರೂ ದೊಡ್ಡಸ್ತಿಕೆಯಿಂದ ಹೊಗಳಿಕೊಳ್ಳುತ್ತಾನೋ ಅದರಿಂದಲೇ ನಾನು ಹೊಗಳಿಕೊಳ್ಳುವುದಾಗಿ ಬುದ್ಧಿಹೀನನಂತೆ ಮಾತನಾಡುತ್ತಿದ್ದೇನೆ.
২১দৌর্ব্বল্যাদ্ যুষ্মাভিরৱমানিতা ইৱ ৱযং ভাষামহে, কিন্ত্ৱপরস্য কস্যচিদ্ যেন প্রগল্ভতা জাযতে তেন মমাপি প্রগল্ভতা জাযত ইতি নির্ব্বোধেনেৱ মযা ৱক্তৱ্যং|
22 ೨೨ ಅವರು ಇಬ್ರಿಯರೋ? ನಾನೂ ಇಬ್ರಿಯನು. ಅವರು ಇಸ್ರಾಯೇಲ್ಯರೋ? ನಾನೂ ಇಸ್ರಾಯೇಲ್ಯನು. ಅವರು ಅಬ್ರಹಾಮನ ವಂಶದವರೋ? ನಾನೂ ಅದೇ ವಂಶದವನು.
২২তে কিম্ ইব্রিলোকাঃ? অহমপীব্রী| তে কিম্ ইস্রাযেলীযাঃ? অহমপীস্রাযেলীযঃ| তে কিম্ ইব্রাহীমো ৱংশাঃ? অহমপীব্রাহীমো ৱংশঃ|
23 ೨೩ ಅವರು ಕ್ರಿಸ್ತನ ಸೇವಕರೋ? ಅವರಿಗಿಂತ ನಾನು ಹೆಚ್ಚಾಗಿ ಸೇವೆಮಾಡುವವನಾಗಿದ್ದೇನೆ. ನಾನು ಬುದ್ಧಿ ಕೆಟ್ಟವನಂತೆಯೇ ಮಾತನಾಡುತ್ತಿದ್ದೇನೆ ಕ್ರಿಸ್ತನ ಸೇವೆಯಲ್ಲಿ ಅವರಿಗಿಂತ ಹೆಚ್ಚಾಗಿ ಪ್ರಯಾಸಪಟ್ಟೆನು, ಹೆಚ್ಚಾಗಿ ಸೆರೆಮನೆಯ ವಾಸವನ್ನು ಅನುಭವಿಸಿದ್ದೇನೆ, ಮಿತಿಮೀರಿ ಏಟುಪೆಟ್ಟುಗಳನ್ನು ತಿಂದಿದ್ದೇನೆ. ಅನೇಕ ಸಾರಿ ಮರಣದ ಬಾಯೊಳಗೆ ಸಿಕ್ಕಿಕೊಂಡಿದ್ದೇನೆ.
২৩তে কিং খ্রীষ্টস্য পরিচারকাঃ? অহং তেভ্যোঽপি তস্য মহাপরিচারকঃ; কিন্তু নির্ব্বোধ ইৱ ভাষে, তেভ্যোঽপ্যহং বহুপরিশ্রমে বহুপ্রহারে বহুৱারং কারাযাং বহুৱারং প্রাণনাশসংশযে চ পতিতৱান্|
24 ೨೪ ಐದು ಸಾರಿ ಯೆಹೂದ್ಯರಿಂದ ನನಗೆ ಒಂದು ಕಡಿಮೆ ನಲವತ್ತು ಏಟುಗಳು ಬಿದ್ದವು.
২৪যিহূদীযৈরহং পঞ্চকৃৎৱ ঊনচৎৱারিংশৎপ্রহারৈরাহতস্ত্রির্ৱেত্রাঘাতম্ এককৃৎৱঃ প্রস্তরাঘাতঞ্চ প্রপ্তৱান্|
25 ೨೫ ಮೂರು ಸಾರಿ ಬಾರುಕೋಲಿನಿಂದ ನನ್ನನ್ನು ಹೊಡೆದರು. ಒಂದು ಸಾರಿ ಜನರು ನನ್ನನ್ನು ಕೊಲ್ಲುವುದಕ್ಕೆ ಕಲ್ಲೆಸೆದರು. ಮೂರು ಸಾರಿ ನಾನಿದ್ದ ಹಡಗು ಒಡೆದು ಹೋಯಿತು. ಒಂದು ರಾತ್ರಿ ಒಂದು ಹಗಲು ಸಮುದ್ರದ ನೀರಿನಲ್ಲಿ ಕಳೆದೆನು.
২৫ৱারত্রযং পোতভঞ্জনেন ক্লিষ্টোঽহম্ অগাধসলিলে দিনমেকং রাত্রিমেকাঞ্চ যাপিতৱান্|
26 ೨೬ ಕ್ರಿಸ್ತನ ಸೇವೆಯಲ್ಲಿ ಎಷ್ಟೋ ಪ್ರಯಾಣಗಳನ್ನು ಮಾಡಿದೆನು. ನದಿಗಳ ಅಪಾಯಗಳೂ, ಕಳ್ಳರ ಅಪಾಯಗಳೂ, ಸ್ವಂತ ಜನರಿಂದ ಅಪಾಯಗಳೂ, ಅನ್ಯಜನರಿಂದ ಅಪಾಯಗಳೂ, ಪಟ್ಟಣದಲ್ಲಿ ಅಪಾಯ, ನಿರ್ಜನ ಸ್ಥಳದಲ್ಲಿ ಅಪಾಯ, ಸಮುದ್ರದಲ್ಲಿ ಅಪಾಯ, ಸುಳ್ಳು ಸಹೋದರರೊಳಗಿನಿಂದಾದ ಅಪಾಯಗಳೂ ನನಗೆ ಸಂಭವಿಸಿದವು.
২৬বহুৱারং যাত্রাভি র্নদীনাং সঙ্কটৈ র্দস্যূনাং সঙ্কটৈঃ স্ৱজাতীযানাং সঙ্কটৈ র্ভিন্নজাতীযানাং সঙ্কটৈ র্নগরস্য সঙ্কটৈ র্মরুভূমেঃ সঙ্কটৈ সাগরস্য সঙ্কটৈ র্ভাক্তভ্রাতৃণাং সঙ্কটৈশ্চ
27 ೨೭ ಶ್ರಮೆಪಟ್ಟು ದುಡಿದಿದ್ದೇನೆ, ಎಷ್ಟೋ ಸಾರಿ ನಿದ್ದೆಗೆಟ್ಟಿದ್ದೇನೆ; ಹಸಿವು ನೀರಡಿಕೆಗಳಿಂದ ಬಳಲಿದ್ದೇನೆ; ಅನೇಕ ಸಾರಿ ಊಟ, ಬಟ್ಟೆಯಿಲ್ಲದೆ ಅಲೆದಿದ್ದೇನೆ; ಚಳಿಗಾಳಿಯಲ್ಲಿ ನಡುಗಿದ್ದೇನೆ.
২৭পরিশ্রমক্লেশাভ্যাং ৱারং ৱারং জাগরণেন ক্ষুধাতৃষ্ণাভ্যাং বহুৱারং নিরাহারেণ শীতনগ্নতাভ্যাঞ্চাহং কালং যাপিতৱান্|
28 ೨೮ ಇಂಥ ಇನ್ನಿತರ ಬೇರೆ ಸಂಗತಿಗಳಲ್ಲದೆ, ಎಲ್ಲಾ ಸಭೆಗಳ ಕುರಿತಾದ ಚಿಂತೆಯು ದಿನದಿನ ನನ್ನನ್ನು ಕಾಡಿಸುತ್ತಿತ್ತು.
২৮তাদৃশং নৈমিত্তিকং দুঃখং ৱিনাহং প্রতিদিনম্ আকুলো ভৱামি সর্ৱ্ৱাসাং সমিতীনাং চিন্তা চ মযি ৱর্ত্ততে|
29 ೨೯ ಯಾವನಾದರೂ ಬಲಹೀನನಾಗಿದ್ದರೆ ನಾನೂ ಅವನೊಂದಿಗೆ ಬಲಹೀನನಾಗದೆ ಇದ್ದೆನೋ? ಯಾವನಾದರೂ ತಪ್ಪಿಹೋಗಿದ್ದಲ್ಲಿ ನಾನು ಸಂತಾಪಪಡದೆ ಇದ್ದೆನೋ?
২৯যেনাহং ন দুর্ব্বলীভৱামি তাদৃশং দৌর্ব্বল্যং কঃ পাপ্নোতি?
30 ೩೦ ನಾನು ಹೊಗಳಿಕೊಳ್ಳುವುದ್ದಾದರೆ ನನ್ನ ಬಲಹೀನತೆಯನ್ನು ಕುರಿತೆ ಹೊಗಳಿಕೊಳ್ಳುತ್ತೇನೆ.
৩০যদি মযা শ্লাঘিতৱ্যং তর্হি স্ৱদুর্ব্বলতামধি শ্লাঘিষ্যে|
31 ೩೧ ನನ್ನ ಮಾತುಗಳು ಸುಳ್ಳಲ್ಲವೆಂಬುದನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ, ತಂದೆಯೂ ಆಗಿರುವಾತನು ನಿರಂತರ ಸ್ತುತಿ ಹೊಂದತಕ್ಕ ದೇವರೇ ಬಲ್ಲನು. (aiōn )
৩১মযা মৃষাৱাক্যং ন কথ্যত ইতি নিত্যং প্রশংসনীযোঽস্মাকং প্রভো র্যীশুখ্রীষ্টস্য তাত ঈশ্ৱরো জানাতি| (aiōn )
32 ೩೨ ದಮಸ್ಕದಲ್ಲಿ ಅರಸನಾದ ಅರೇತನ ಅಧೀನದಲ್ಲಿದ್ದ ಅಧಿಪತಿಯು ನನ್ನನ್ನು ಹಿಡಿಯಬೇಕೆಂದು ದಮಸ್ಕದವರ ಪಟ್ಟಣವನ್ನು ಕಾಯುತ್ತಿರಲು
৩২দম্মেষকনগরেঽরিতারাজস্য কার্য্যাধ্যক্ষো মাং ধর্ত্তুম্ ইচ্ছন্ যদা সৈন্যৈস্তদ্ দম্মেষকনগরম্ অরক্ষযৎ
33 ೩೩ ಅವರು ನನ್ನನ್ನು ಒಂದು ಬುಟ್ಟಿಯಲ್ಲಿ ಕುಳ್ಳಿರಿಸಿ ಗೋಡೆಯಲ್ಲಿದ್ದ ಒಂದು ಕಿಟಕಿಯಿಂದ ಇಳಿಸಿಬಿಟ್ಟರು. ಹೀಗೆ ಅವನ ಕೈಯಿಂದ ತಪ್ಪಿಸಿಕೊಂಡು ಓಡಿಹೋದೆನು.
৩৩তদাহং লোকৈঃ পিটকমধ্যে প্রাচীরগৱাক্ষেণাৱরোহিতস্তস্য করাৎ ত্রাণং প্রাপং|