< ಕೊರಿಂಥದವರಿಗೆ ಬರೆದ ಎರಡನೆಯ ಪತ್ರಿಕೆ 10 >
1 ೧ ಪೌಲನು ನಮ್ಮೆದುರಿನಲ್ಲಿರುವಾಗ ದೀನನಾಗಿ ನಡೆದುಕೊಳ್ಳುವನೂ ದೂರದಲ್ಲಿರುವಾಗ ನಮ್ಮನ್ನು ಕುರಿತು ದಿಟ್ಟತನ ತೋರಿಸುವವನೂ ಆಗಿದ್ದಾನೆ ಎಂದು ಹೇಳಲ್ಪಡುವ ಆ ಪೌಲನೆಂಬ ನಾನು ಕ್ರಿಸ್ತನ ಶಾಂತ ಮನಸ್ಸನ್ನೂ ಸಾತ್ವಿಕತ್ವವನ್ನೂ ನೆನಪಿಗೆ ತಂದುಕೊಂಡು ನಿಮಗೆ ಖಂಡಿತವಾಗಿ ಹೇಳುವುದೇನಂದರೆ,
ಯುಷ್ಮತ್ಪ್ರತ್ಯಕ್ಷೇ ನಮ್ರಃ ಕಿನ್ತು ಪರೋಕ್ಷೇ ಪ್ರಗಲ್ಭಃ ಪೌಲೋಽಹಂ ಖ್ರೀಷ್ಟಸ್ಯ ಕ್ಷಾನ್ತ್ಯಾ ವಿನೀತ್ಯಾ ಚ ಯುಷ್ಮಾನ್ ಪ್ರಾರ್ಥಯೇ|
2 ೨ ಯಾರು ನಮ್ಮನ್ನು ಲೋಕ ರೀತಿಯಾಗಿ ಜೀವಿಸುವವರೆಂದು ಎಣಿಸುತ್ತಾರೋ ಅವರೊಂದಿಗೆ ದಿಟ್ಟತನದಿಂದಲೇ ಇರಬೇಕೆಂದು ಅಂದುಕೊಂಡಿದೇನೆ. ನಾವು ನಿಮ್ಮೊಂದಿಗಿರುವಾಗ ಅಂಥ ದಿಟ್ಟತನವನ್ನು ತೋರಿಸುವುದಕ್ಕೆ ಅವಕಾಶವುಂಟಾಗಬಾರದೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
ಮಮ ಪ್ರಾರ್ಥನೀಯಮಿದಂ ವಯಂ ಯೈಃ ಶಾರೀರಿಕಾಚಾರಿಣೋ ಮನ್ಯಾಮಹೇ ತಾನ್ ಪ್ರತಿ ಯಾಂ ಪ್ರಗಲ್ಭತಾಂ ಪ್ರಕಾಶಯಿತುಂ ನಿಶ್ಚಿನೋಮಿ ಸಾ ಪ್ರಗಲ್ಭತಾ ಸಮಾಗತೇನ ಮಯಾಚರಿತವ್ಯಾ ನ ಭವತು|
3 ೩ ನಾವು ಲೋಕದಲ್ಲಿದ್ದರೂ ಲೋಕಾನುಸಾರವಾಗಿ ಯುದ್ಧಮಾಡುವವರಲ್ಲ.
ಯತಃ ಶರೀರೇ ಚರನ್ತೋಽಪಿ ವಯಂ ಶಾರೀರಿಕಂ ಯುದ್ಧಂ ನ ಕುರ್ಮ್ಮಃ|
4 ೪ ನಾವು ಉಪಯೋಗಿಸುವ ಆಯುಧಗಳು ಲೋಕದ ಆಯುಧಗಳಲ್ಲ. ಅವು ದೇವರ ಎಣಿಕೆಯಲ್ಲಿ ಬಲವಾಗಿದ್ದು ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ.
ಅಸ್ಮಾಕಂ ಯುದ್ಧಾಸ್ತ್ರಾಣಿ ಚ ನ ಶಾರೀರಿಕಾನಿ ಕಿನ್ತ್ವೀಶ್ವರೇಣ ದುರ್ಗಭಞ್ಜನಾಯ ಪ್ರಬಲಾನಿ ಭವನ್ತಿ,
5 ೫ ನಾವು ದೇವಜ್ಞಾನಕ್ಕೆ ವಿರೋಧವಾಗಿ ಏಳುವ ಅಹಂಭಾವಗಳನ್ನು ಧ್ವಂಸಮಾಡಿ, ಪ್ರತಿಯೊಂದು ಆಲೋಚನೆಗಳನ್ನೂ ಕ್ರಿಸ್ತನಿಗೆ ವಿಧೇಯರಾಗುವಂತೆ ಸೆರೆಹಿಡಿದು,
ತೈಶ್ಚ ವಯಂ ವಿತರ್ಕಾನ್ ಈಶ್ವರೀಯತತ್ತ್ವಜ್ಞಾನಸ್ಯ ಪ್ರತಿಬನ್ಧಿಕಾಂ ಸರ್ವ್ವಾಂ ಚಿತ್ತಸಮುನ್ನತಿಞ್ಚ ನಿಪಾತಯಾಮಃ ಸರ್ವ್ವಸಙ್ಕಲ್ಪಞ್ಚ ಬನ್ದಿನಂ ಕೃತ್ವಾ ಖ್ರೀಷ್ಟಸ್ಯಾಜ್ಞಾಗ್ರಾಹಿಣಂ ಕುರ್ಮ್ಮಃ,
6 ೬ ನಿಮ್ಮ ವಿಧೇಯತ್ವವು ಪರಿಪೂರ್ಣವಾದ ಮೇಲೆ ಎಲ್ಲಾ ಅವಿಧೇಯತ್ವಕ್ಕೆ ಪ್ರತಿಕಾರವನ್ನು ನೀಡುವುದಕ್ಕೆ ಸಿದ್ಧರಾಗಿದ್ದೇವೆ.
ಯುಷ್ಮಾಕಮ್ ಆಜ್ಞಾಗ್ರಾಹಿತ್ವೇ ಸಿದ್ಧೇ ಸತಿ ಸರ್ವ್ವಸ್ಯಾಜ್ಞಾಲಙ್ಘನಸ್ಯ ಪ್ರತೀಕಾರಂ ಕರ್ತ್ತುಮ್ ಉದ್ಯತಾ ಆಸ್ಮಹೇ ಚ|
7 ೭ ನೀವು ಬಾಹ್ಯವಾದುದ್ದುನ್ನು ಮಾತ್ರ ನೋಡುತ್ತೀರಿ. ಯಾವನಾದರೂ ತನ್ನನ್ನು ಕ್ರಿಸ್ತನವನೆಂದು ಒಪ್ಪಿಕೊಂಡರೆ ಅವನು ಆಲೋಚನೆಮಾಡಿಕೊಂಡು ತಾನು ಹೇಗೆ ಕ್ರಿಸ್ತನವನೋ ಹಾಗೆ ನಾವೂ ಕ್ರಿಸ್ತನವರೆಂದು ತಿಳಿದುಕೊಳ್ಳಲಿ.
ಯದ್ ದೃಷ್ಟಿಗೋಚರಂ ತದ್ ಯುಷ್ಮಾಭಿ ರ್ದೃಶ್ಯತಾಂ| ಅಹಂ ಖ್ರೀಷ್ಟಸ್ಯ ಲೋಕ ಇತಿ ಸ್ವಮನಸಿ ಯೇನ ವಿಜ್ಞಾಯತೇ ಸ ಯಥಾ ಖ್ರೀಷ್ಟಸ್ಯ ಭವತಿ ವಯಮ್ ಅಪಿ ತಥಾ ಖ್ರೀಷ್ಟಸ್ಯ ಭವಾಮ ಇತಿ ಪುನರ್ವಿವಿಚ್ಯ ತೇನ ಬುಧ್ಯತಾಂ|
8 ೮ ನಮಗಿರುವ ಅಧಿಕಾರವನ್ನು ಕುರಿತು ನಾವು ಒಂದು ವೇಳೆ ಹೆಚ್ಚಾಗಿ ಹೊಗಳಿಕೊಂಡರೂ ಹಾಗೆ ಹೊಗಳಿಕೊಳ್ಳುವುದರಲ್ಲಿ ನಾಚಿಕೆಪಡಬೇಕಾಗಿರುವುದಿಲ್ಲ. ಆದರೆ ನಿಮ್ಮನ್ನು ಕೆಡವಿಹಾಕುವುದಕ್ಕಲ್ಲ ಕಟ್ಟುವುದಕ್ಕಾಗಿಯೇ ಕರ್ತನು ಈ ಅಧಿಕಾರವನ್ನು ನಮಗೆ ಕೊಟ್ಟಿರುವವನು.
ಯುಷ್ಮಾಕಂ ನಿಪಾತಾಯ ತನ್ನಹಿ ಕಿನ್ತು ನಿಷ್ಠಾಯೈ ಪ್ರಭುನಾ ದತ್ತಂ ಯದಸ್ಮಾಕಂ ಸಾಮರ್ಥ್ಯಂ ತೇನ ಯದ್ಯಪಿ ಕಿಞ್ಚಿದ್ ಅಧಿಕಂ ಶ್ಲಾಘೇ ತಥಾಪಿ ತಸ್ಮಾನ್ನ ತ್ರಪಿಷ್ಯೇ|
9 ೯ ನಾನು ಪತ್ರಿಕೆಗಳಿಂದ ನಿಮ್ಮನ್ನು ಹೆದರಿಸುತ್ತಿದ್ದೆನೆಂದು ತಿಳಿದುಕೊಳ್ಳಬೇಡಿರಿ.
ಅಹಂ ಪತ್ರೈ ರ್ಯುಷ್ಮಾನ್ ತ್ರಾಸಯಾಮಿ ಯುಷ್ಮಾಭಿರೇತನ್ನ ಮನ್ಯತಾಂ|
10 ೧೦ “ಅವನಿಂದ ಬಂದ ಪತ್ರಿಕೆಗಳು ಕಠೋರವಾದವುಗಳೂ, ಪ್ರಬಲವಾದವುಗಳೂ ಆಗಿವೆ. ಆದರೆ ದೈಹಿಕವಾಗಿ ಅವನು ದುರ್ಬಲನು ಅವನ ಮಾತುಗಳು ನಿಂದಾತ್ಮಕವಾದವುಗಳೆಂದು ಕೆಲವರು ಹೇಳುತ್ತಾರಲ್ಲಾ.”
ತಸ್ಯ ಪತ್ರಾಣಿ ಗುರುತರಾಣಿ ಪ್ರಬಲಾನಿ ಚ ಭವನ್ತಿ ಕಿನ್ತು ತಸ್ಯ ಶಾರೀರಸಾಕ್ಷಾತ್ಕಾರೋ ದುರ್ಬ್ಬಲ ಆಲಾಪಶ್ಚ ತುಚ್ಛನೀಯ ಇತಿ ಕೈಶ್ಚಿದ್ ಉಚ್ಯತೇ|
11 ೧೧ ಅಂಥವರು, ನಾವು ದೂರದಲ್ಲಿರುವಾಗ ಪತ್ರಿಕೆಗಳ ಮೂಲಕ ಮಾತಿನಲ್ಲಿ ಎಂಥವರಾಗಿದ್ದೇವೋ ಹತ್ತಿರದಲ್ಲಿರುವಾಗ ಕಾರ್ಯದಲ್ಲಿಯೂ ಅಂಥವರಾಗಿಯೇ ಇದ್ದೇವೆಂದು ತಿಳಿದುಕೊಳ್ಳಲಿ.
ಕಿನ್ತು ಪರೋಕ್ಷೇ ಪತ್ರೈ ರ್ಭಾಷಮಾಣಾ ವಯಂ ಯಾದೃಶಾಃ ಪ್ರಕಾಶಾಮಹೇ ಪ್ರತ್ಯಕ್ಷೇ ಕರ್ಮ್ಮ ಕುರ್ವ್ವನ್ತೋಽಪಿ ತಾದೃಶಾ ಏವ ಪ್ರಕಾಶಿಷ್ಯಾಮಹೇ ತತ್ ತಾದೃಶೇನ ವಾಚಾಲೇನ ಜ್ಞಾಯತಾಂ|
12 ೧೨ ತಮ್ಮನ್ನು ತಾವೇ ಹೊಗಳಿಕೊಳ್ಳುವ ಕೆಲವರಲ್ಲಿ ನಮ್ಮನ್ನು ಸೇರಿಸಿಕೊಳ್ಳುವುದಕ್ಕಾಗಲಿ ಅವರೊಂದಿಗೆ ಹೋಲಿಸುವುದಕ್ಕಾಗಲಿ ನಾನು ಇಷ್ಟಪಡುವುದಿಲ್ಲ. ಅವರಂತೂ ತಮ್ಮತಮ್ಮೊಳಗೆ ತಮ್ಮನ್ನು ಅಳತೆಮಾಡಿಕೊಂಡು ತಮ್ಮನ್ನು ತಮಗೇ ಹೋಲಿಸಿಕೊಂಡು ವಿವೇಕವಿಲ್ಲದವರಾಗಿದ್ದಾರೆ.
ಸ್ವಪ್ರಶಂಸಕಾನಾಂ ಕೇಷಾಞ್ಚಿನ್ಮಧ್ಯೇ ಸ್ವಾನ್ ಗಣಯಿತುಂ ತೈಃ ಸ್ವಾನ್ ಉಪಮಾತುಂ ವಾ ವಯಂ ಪ್ರಗಲ್ಭಾ ನ ಭವಾಮಃ, ಯತಸ್ತೇ ಸ್ವಪರಿಮಾಣೇನ ಸ್ವಾನ್ ಪರಿಮಿಮತೇ ಸ್ವೈಶ್ಚ ಸ್ವಾನ್ ಉಪಮಿಭತೇ ತಸ್ಮಾತ್ ನಿರ್ಬ್ಬೋಧಾ ಭವನ್ತಿ ಚ|
13 ೧೩ ನಾವಾದರೋ ನಮ್ಮ ಯೋಗ್ಯತೆಗೆ ಮೀರಿ ಹೊಗಳಿಕೊಳ್ಳದೇ ದೇವರು ನಮಗೆ ನೇಮಿಸಿರುವಂಥ ಮೇರೆಯೊಳಗಿದ್ದು ಹೊಗಳಿಕೊಳ್ಳುತ್ತೇವೆ. ಈ ಮೇರೆಯೊಳಗಿದ್ದು ನಿಮ್ಮ ತನಕ ಬಂದಿದ್ದೇವೆ.
ವಯಮ್ ಅಪರಿಮಿತೇನ ನ ಶ್ಲಾಘಿಷ್ಯಾಮಹೇ ಕಿನ್ತ್ವೀಶ್ವರೇಣ ಸ್ವರಜ್ಜ್ವಾ ಯುಷ್ಮದ್ದೇಶಗಾಮಿ ಯತ್ ಪರಿಮಾಣಮ್ ಅಸ್ಮದರ್ಥಂ ನಿರೂಪಿತಂ ತೇನೈವ ಶ್ಲಾಘಿಷ್ಯಾಮಹೇ|
14 ೧೪ ನಾವು ಕ್ರಿಸ್ತನ ಸುವಾರ್ತೆಯನ್ನು ಸಾರುತ್ತಾ ಇತರರಿಗಿಂತ ಮೊದಲು ನಿಮ್ಮ ಬಳಿಗೆ ಬಂದದ್ದರಿಂದ ನಿಮ್ಮ ಮೇಲೆ ಅಧಿಕಾರವಿಲ್ಲದವರಂತೆ ಮೇರೆಯನ್ನು ಅತಿಕ್ರಮಿಸಿಹೋಗುತ್ತಿಲ್ಲ.
ಯುಷ್ಮಾಕಂ ದೇಶೋಽಸ್ಮಾಭಿರಗನ್ತವ್ಯಸ್ತಸ್ಮಾದ್ ವಯಂ ಸ್ವಸೀಮಾಮ್ ಉಲ್ಲಙ್ಘಾಮಹೇ ತನ್ನಹಿ ಯತಃ ಖ್ರೀಷ್ಟಸ್ಯ ಸುಸಂವಾದೇನಾಪರೇಷಾಂ ಪ್ರಾಗ್ ವಯಮೇವ ಯುಷ್ಮಾನ್ ಪ್ರಾಪ್ತವನ್ತಃ|
15 ೧೫ ನಾವು ಮಿತಿಗಳನ್ನು ಮೀರಿ ಮತ್ತೊಬ್ಬರ ಪ್ರಯಾಸದ ಫಲಗಳನ್ನು ತೆಗೆದುಕೊಂಡು, ಇವು ನಮ್ಮವು ಎಂದು ಹಿಗ್ಗುವವರಲ್ಲ. ಆದರೆ ನಿಮ್ಮ ನಂಬಿಕೆಯು ಹೆಚ್ಚಿದಾಗೆಲ್ಲಾ ನಿಮ್ಮ ಮೂಲಕ ನಮ್ಮ ಮಿತಿಯು ಇನ್ನೂ ವಿಸ್ತರಿಸಿತು.
ವಯಂ ಸ್ವಸೀಮಾಮ್ ಉಲ್ಲಙ್ಘ್ಯ ಪರಕ್ಷೇತ್ರೇಣ ಶ್ಲಾಘಾಮಹೇ ತನ್ನಹಿ, ಕಿಞ್ಚ ಯುಷ್ಮಾಕಂ ವಿಶ್ವಾಸೇ ವೃದ್ಧಿಂ ಗತೇ ಯುಷ್ಮದ್ದೇಶೇಽಸ್ಮಾಕಂ ಸೀಮಾ ಯುಷ್ಮಾಭಿರ್ದೀರ್ಘಂ ವಿಸ್ತಾರಯಿಷ್ಯತೇ,
16 ೧೬ ನಿಮಗೆ ಆಚೆಯಿರುವ ಸೀಮೆಗಳಲ್ಲಿಯೂ ಸುವಾರ್ತೆಯನ್ನು ಸಾರುವೆವೆಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದೆವಷ್ಟೇ. ಮತ್ತೊಬ್ಬರ ಜಾಗದಲ್ಲಿ ಸಿದ್ಧವಾಗಿ ನಮಗೆ ಸಿಕ್ಕಿದ ಫಲವನ್ನು ಕುರಿತು ನಾವು ಹೆಚ್ಚಳಪಡುವುದಿಲ್ಲ.
ತೇನ ವಯಂ ಯುಷ್ಮಾಕಂ ಪಶ್ಚಿಮದಿಕ್ಸ್ಥೇಷು ಸ್ಥಾನೇಷು ಸುಸಂವಾದಂ ಘೋಷಯಿಷ್ಯಾಮಃ, ಇತ್ಥಂ ಪರಸೀಮಾಯಾಂ ಪರೇಣ ಯತ್ ಪರಿಷ್ಕೃತಂ ತೇನ ನ ಶ್ಲಾಘಿಷ್ಯಾಮಹೇ|
17 ೧೭ “ಹೆಚ್ಚಳಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ.”
ಯಃ ಕಶ್ಚಿತ್ ಶ್ಲಾಘಮಾನಃ ಸ್ಯಾತ್ ಶ್ಲಾಘತಾಂ ಪ್ರಭುನಾ ಸ ಹಿ|
18 ೧೮ ತನ್ನನ್ನು ತಾನೇ ಹೊಗಳಿಕೊಳ್ಳುವವನು ಯೋಗ್ಯನಲ್ಲ. ಕರ್ತನು ಯಾರನ್ನು ಹೊಗಳುತ್ತಾನೋ ಅವನೇ ಯೋಗ್ಯನು.
ಸ್ವೇನ ಯಃ ಪ್ರಶಂಸ್ಯತೇ ಸ ಪರೀಕ್ಷಿತೋ ನಹಿ ಕಿನ್ತು ಪ್ರಭುನಾ ಯಃ ಪ್ರಶಂಸ್ಯತೇ ಸ ಏವ ಪರೀಕ್ಷಿತಃ|