< ಕೊರಿಂಥದವರಿಗೆ ಬರೆದ ಎರಡನೆಯ ಪತ್ರಿಕೆ 10 >

1 ಪೌಲನು ನಮ್ಮೆದುರಿನಲ್ಲಿರುವಾಗ ದೀನನಾಗಿ ನಡೆದುಕೊಳ್ಳುವನೂ ದೂರದಲ್ಲಿರುವಾಗ ನಮ್ಮನ್ನು ಕುರಿತು ದಿಟ್ಟತನ ತೋರಿಸುವವನೂ ಆಗಿದ್ದಾನೆ ಎಂದು ಹೇಳಲ್ಪಡುವ ಆ ಪೌಲನೆಂಬ ನಾನು ಕ್ರಿಸ್ತನ ಶಾಂತ ಮನಸ್ಸನ್ನೂ ಸಾತ್ವಿಕತ್ವವನ್ನೂ ನೆನಪಿಗೆ ತಂದುಕೊಂಡು ನಿಮಗೆ ಖಂಡಿತವಾಗಿ ಹೇಳುವುದೇನಂದರೆ,
ᎾᏍᎩᏃ ᎠᏴ ᏉᎳ ᎠᏋᏒ ᎢᏨᏍᏗᏰᏗᎭ ᏥᏁᎢᏍᏗᎭ ᎤᏙᎵᏍᏙᏏᏳ ᎨᏒ ᎠᎴ ᎤᏓᏅᏘᏳ ᎨᏒ ᎦᎶᏁᏛ, ᎠᏴ ᎾᏍᎩ ᏥᏨᏰᎳᏗᏙᎰ ᎠᏆᏓᎾᏰᏍᏗ ᏥᎨᎰᎢ, ᎠᏎᏃ ᎠᎩᎪᏁᎸ ᏂᏨᎾᏰᏍᎬᎾ ᏥᎩ ᏂᎯ —
2 ಯಾರು ನಮ್ಮನ್ನು ಲೋಕ ರೀತಿಯಾಗಿ ಜೀವಿಸುವವರೆಂದು ಎಣಿಸುತ್ತಾರೋ ಅವರೊಂದಿಗೆ ದಿಟ್ಟತನದಿಂದಲೇ ಇರಬೇಕೆಂದು ಅಂದುಕೊಂಡಿದೇನೆ. ನಾವು ನಿಮ್ಮೊಂದಿಗಿರುವಾಗ ಅಂಥ ದಿಟ್ಟತನವನ್ನು ತೋರಿಸುವುದಕ್ಕೆ ಅವಕಾಶವುಂಟಾಗಬಾರದೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
ᎠᏎᏃ ᎢᏨᏔᏲᏎᎭ ᎢᏨᏰᎳᏗᏙᎲ ᎾᏆᏓᎾᏰᏍᏛᎾ ᎢᏯᏆᎵᏍᏙᏗᏱ ᏂᎨᏒᎾ, ᎾᏍᎩᏯ ᎾᏆᏓᎾᏰᏍᏛᎾ ᎦᏥᏴᏓᏁᏗ ᏣᎩᏰᎸᎭ ᎢᎦᏛ, ᎾᏍᎩ ᎤᏇᏓᎵ ᎠᏓᏅᏖᏍᎬ ᏓᏂᎧᎿᎭᏩᏗ ᏥᎪᎨᎵᏎᎭ.
3 ನಾವು ಲೋಕದಲ್ಲಿದ್ದರೂ ಲೋಕಾನುಸಾರವಾಗಿ ಯುದ್ಧಮಾಡುವವರಲ್ಲ.
ᎤᏙᎯᏳᎯᏍᎩᏂᏃᏅ ᎤᏇᏓᎸ ᎤᏤᏙᎭ, ᎠᏎᏃ ᎥᏝ ᎤᏇᏓᎵ ᏧᏟᏴᏙᏗ ᎨᏒ ᏱᏙᏣᏟᏴᏗᎭ;
4 ನಾವು ಉಪಯೋಗಿಸುವ ಆಯುಧಗಳು ಲೋಕದ ಆಯುಧಗಳಲ್ಲ. ಅವು ದೇವರ ಎಣಿಕೆಯಲ್ಲಿ ಬಲವಾಗಿದ್ದು ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ.
( ᎣᎦᎵᏍᏕᎸᏙᏗᏰᏃ ᎨᏒ ᏓᏅᏩ ᎣᏣᎢᏒ ᎥᏝ ᎤᏇᏓᎵ ᏧᏩᏙᏗ ᏱᎩ, ᏧᎵᏂᎩᏗᏳᏍᎩᏂ ᎤᏁᎳᏅᎯ ᎢᏳᏩᏂᏌᏛ, ᏓᏐᏲᎥᏗᏍᎬ ᎤᎵᏂᎩᏛ ᏓᏐᏴᎢ.)
5 ನಾವು ದೇವಜ್ಞಾನಕ್ಕೆ ವಿರೋಧವಾಗಿ ಏಳುವ ಅಹಂಭಾವಗಳನ್ನು ಧ್ವಂಸಮಾಡಿ, ಪ್ರತಿಯೊಂದು ಆಲೋಚನೆಗಳನ್ನೂ ಕ್ರಿಸ್ತನಿಗೆ ವಿಧೇಯರಾಗುವಂತೆ ಸೆರೆಹಿಡಿದು,
ᎡᎳᏗ ᏂᏙᏨᏁᎰ ᎠᏓᏅᏖᏗ ᎨᏒ, ᎠᎴ ᏄᏓᎴᏒ ᎢᏅ ᎢᎦᏘ ᎾᏍᎩ ᎠᏓᎵᏌᎳᏗᏍᎩ ᎤᏁᎳᏅᎯ ᎤᏤᎵ ᎠᎦᏙᎥᎯᏍᏗ ᎨᏒ ᏗᎦᏘᎴᎩ, ᎠᎴ ᏙᏥᏎᎪᎩᏍᎪ ᏙᏣᏘᏁᎪ ᏄᏓᎴᏒ ᎠᏓᏅᏖᏗ ᎨᏒ ᎦᎶᏁᏛ ᎬᏬᎯᏳᏗᏱ ᏃᏨᏁᎰᎢ;
6 ನಿಮ್ಮ ವಿಧೇಯತ್ವವು ಪರಿಪೂರ್ಣವಾದ ಮೇಲೆ ಎಲ್ಲಾ ಅವಿಧೇಯತ್ವಕ್ಕೆ ಪ್ರತಿಕಾರವನ್ನು ನೀಡುವುದಕ್ಕೆ ಸಿದ್ಧರಾಗಿದ್ದೇವೆ.
ᎠᎴ ᎣᎦᏛᏅᎢᏍᏗ ᏦᏥᏍᏛᏗᏍᏙᏗᏱ ᎾᏂᎥ ᏄᏃᎯᏳᏒᎾ ᎨᏒᎢ, ᎾᎯᏳ ᎢᏦᎯᏳᏒ ᎤᎧᎵᏨᎯ ᎨᏎᏍᏗ.
7 ನೀವು ಬಾಹ್ಯವಾದುದ್ದುನ್ನು ಮಾತ್ರ ನೋಡುತ್ತೀರಿ. ಯಾವನಾದರೂ ತನ್ನನ್ನು ಕ್ರಿಸ್ತನವನೆಂದು ಒಪ್ಪಿಕೊಂಡರೆ ಅವನು ಆಲೋಚನೆಮಾಡಿಕೊಂಡು ತಾನು ಹೇಗೆ ಕ್ರಿಸ್ತನವನೋ ಹಾಗೆ ನಾವೂ ಕ್ರಿಸ್ತನವರೆಂದು ತಿಳಿದುಕೊಳ್ಳಲಿ.
ᏥᎪ ᎦᏚ-ᎢᏗᏢ ᏄᏍᏛ ᏗᎧᏃᏗᏱ ᎪᎱᏍᏗ ᏕᏣᎧᏂᏍᎪᎢ? ᎢᏳᏃ ᎩᎶ ᎤᏩᏒᏉ ᎠᏓᎵᏍᎦᏍᏙᏗᏍᎨᏍᏗ ᎦᎶᏁᏛ ᏥᏯᏤᎵ ᎠᏴ ᎢᎡᎵᏍᎨᏍᏗ, ᎤᏩᏒ ᎨᏒ ᏔᎵᏁ ᎯᎠ ᎾᏍᎩ ᏥᎠᏓᏅᏛᎵ, ᎾᏍᎩ ᎾᏍᎩᏯ ᎦᎶᏁᏛ ᎤᏤᎵ ᎨᏒ ᎾᏍᎩ, ᎾᏍᎩᏯ ᎾᏍᏉ ᎠᏴ ᎦᎶᏁᏛ ᎣᏣᏤᎵᎦ.
8 ನಮಗಿರುವ ಅಧಿಕಾರವನ್ನು ಕುರಿತು ನಾವು ಒಂದು ವೇಳೆ ಹೆಚ್ಚಾಗಿ ಹೊಗಳಿಕೊಂಡರೂ ಹಾಗೆ ಹೊಗಳಿಕೊಳ್ಳುವುದರಲ್ಲಿ ನಾಚಿಕೆಪಡಬೇಕಾಗಿರುವುದಿಲ್ಲ. ಆದರೆ ನಿಮ್ಮನ್ನು ಕೆಡವಿಹಾಕುವುದಕ್ಕಲ್ಲ ಕಟ್ಟುವುದಕ್ಕಾಗಿಯೇ ಕರ್ತನು ಈ ಅಧಿಕಾರವನ್ನು ನಮಗೆ ಕೊಟ್ಟಿರುವವನು.
ᎢᏳᏰᏃ ᎾᏍᏉ ᎤᏟ ᎢᎦᎢ ᏯᏆᏢᏈᏍᏔᏅ ᏄᏍᏛ ᎣᎦᏒᎦᎸᎢ, ᎾᏍᎩ ᎤᎬᏫᏳᎯ ᏦᎩᏁᎸ ᎢᏣᎵᏍᏕᎸᏙᏗ ᎨᏒᎢ, ᎥᏝᏃ ᎡᎳᏗ ᎢᏰᏨᏁᏙᏗ ᎨᏒᎢ, ᎥᏝ ᏱᎦᎦᏕᎣᏍᎦ.
9 ನಾನು ಪತ್ರಿಕೆಗಳಿಂದ ನಿಮ್ಮನ್ನು ಹೆದರಿಸುತ್ತಿದ್ದೆನೆಂದು ತಿಳಿದುಕೊಳ್ಳಬೇಡಿರಿ.
ᏞᏍᏗ ᎠᏗᎾ ᎢᏨᏲᏪᎳᏁᎲ ᎢᏨᏍᎦᏍᏓᏁᏗᏱᏉ ᏣᎩᏰᎸᏐ ᏱᏅᏩᏍᏕᏍᏗ.
10 ೧೦ “ಅವನಿಂದ ಬಂದ ಪತ್ರಿಕೆಗಳು ಕಠೋರವಾದವುಗಳೂ, ಪ್ರಬಲವಾದವುಗಳೂ ಆಗಿವೆ. ಆದರೆ ದೈಹಿಕವಾಗಿ ಅವನು ದುರ್ಬಲನು ಅವನ ಮಾತುಗಳು ನಿಂದಾತ್ಮಕವಾದವುಗಳೆಂದು ಕೆಲವರು ಹೇಳುತ್ತಾರಲ್ಲಾ.”
ᏕᎪᏪᎵᏍᎬᏰᏃ ᏗᎦᎨᏗᏳ ᎠᎴ ᏧᎵᏂᎩᏗᏳ, ᎤᏙᎯᏳ, ᎠᎾᏗᎭ; ᎠᏰᎸᏍᎩᏂ ᏲᏪᎳᏗᏙᎭ ᎠᏩᎾᎦᎳᎯᏳ, ᎦᏬᏂᏍᎬᏃ ᎬᏕᎰᏙᏗᏉ.
11 ೧೧ ಅಂಥವರು, ನಾವು ದೂರದಲ್ಲಿರುವಾಗ ಪತ್ರಿಕೆಗಳ ಮೂಲಕ ಮಾತಿನಲ್ಲಿ ಎಂಥವರಾಗಿದ್ದೇವೋ ಹತ್ತಿರದಲ್ಲಿರುವಾಗ ಕಾರ್ಯದಲ್ಲಿಯೂ ಅಂಥವರಾಗಿಯೇ ಇದ್ದೇವೆಂದು ತಿಳಿದುಕೊಳ್ಳಲಿ.
ᎾᏍᎩ ᎢᏰᎵᏍᎩ ᎯᎠ ᎾᏍᎩ ᏄᏍᏕᏍᏗ ᎠᏓᏅᏖᏍᎨᏍᏗ, ᎾᏍᎩ ᎠᏴ ᎾᏍᎩᏯ ᏃᎦᏍᏛ ᎣᏥᏬᏂᏍᎬ ᏙᏦᏪᎵᏍᎬᎢ, ᎾᎿᎭᏫᏃᏤᏙᎲᎾ ᎨᏒᎢ, ᎾᏍᎩᏯ ᎾᏍᏉ ᏃᎦᏍᏕᏍᏗ ᏙᎩᎸᏫᏍᏓᏁᎲ ᎿᎭᏉ ᎾᎿᎭᏬᏤᏙᎮᏍᏗ.
12 ೧೨ ತಮ್ಮನ್ನು ತಾವೇ ಹೊಗಳಿಕೊಳ್ಳುವ ಕೆಲವರಲ್ಲಿ ನಮ್ಮನ್ನು ಸೇರಿಸಿಕೊಳ್ಳುವುದಕ್ಕಾಗಲಿ ಅವರೊಂದಿಗೆ ಹೋಲಿಸುವುದಕ್ಕಾಗಲಿ ನಾನು ಇಷ್ಟಪಡುವುದಿಲ್ಲ. ಅವರಂತೂ ತಮ್ಮತಮ್ಮೊಳಗೆ ತಮ್ಮನ್ನು ಅಳತೆಮಾಡಿಕೊಂಡು ತಮ್ಮನ್ನು ತಮಗೇ ಹೋಲಿಸಿಕೊಂಡು ವಿವೇಕವಿಲ್ಲದವರಾಗಿದ್ದಾರೆ.
ᎥᏝᏰᏃ ᏰᎵ ᎦᏲᎦᎵᏠᏯᏍᏙᏗ ᏱᎩ, ᎠᎴ ᏗᎦᏲᎦᏓᏟᎶᏍᏙᏗ ᏱᎩ ᏄᎾᏍᏛ ᎾᏍᎩ ᎤᏅᏒ ᎠᎾᏓᎸᏉᏗᏍᎩ; ᎾᏍᎩᏰᏃ ᎤᏅᏒ ᎨᏒ ᎤᏅᏒᏉ ᏄᎾᏍᏛ ᏓᎾᏓᏟᎶᏍᏗᏍᎬ, ᎠᎴ ᎤᏅᏒᏉ ᏓᎾᏓᏤᎳᏍᏗᏍᎬ ᎥᏝ ᏳᎾᏓᏅᏔ.
13 ೧೩ ನಾವಾದರೋ ನಮ್ಮ ಯೋಗ್ಯತೆಗೆ ಮೀರಿ ಹೊಗಳಿಕೊಳ್ಳದೇ ದೇವರು ನಮಗೆ ನೇಮಿಸಿರುವಂಥ ಮೇರೆಯೊಳಗಿದ್ದು ಹೊಗಳಿಕೊಳ್ಳುತ್ತೇವೆ. ಈ ಮೇರೆಯೊಳಗಿದ್ದು ನಿಮ್ಮ ತನಕ ಬಂದಿದ್ದೇವೆ.
ᎠᏴᏍᎩᏂ ᎥᏝ ᏴᎦᏲᏣᏢᏈ ᎠᎦᏲᏥᎶᏒᏍᏓ ᎠᏟᎶᎥᎢ; ᎾᏍᎩᏯᏉᏍᎩᏂ ᏩᏍᏛ ᎢᏴᏛ ᎠᏟᎶᎥ ᎤᏁᎳᏅᎯ ᏙᎩᏲᎯᏎᎸᎢ, ᎾᏍᎩ ᎠᏟᎶᏍᏗ ᏂᎯ ᏗᏤᎲ ᏫᎦᎷᎩ.
14 ೧೪ ನಾವು ಕ್ರಿಸ್ತನ ಸುವಾರ್ತೆಯನ್ನು ಸಾರುತ್ತಾ ಇತರರಿಗಿಂತ ಮೊದಲು ನಿಮ್ಮ ಬಳಿಗೆ ಬಂದದ್ದರಿಂದ ನಿಮ್ಮ ಮೇಲೆ ಅಧಿಕಾರವಿಲ್ಲದವರಂತೆ ಮೇರೆಯನ್ನು ಅತಿಕ್ರಮಿಸಿಹೋಗುತ್ತಿಲ್ಲ.
ᎥᏝᏰᏃ ᏲᏥᎶᏒᏍᏗᎭ ᎣᎦᏟᎶᏒᎸᎢ, ᎾᏍᎩᏯ ᏂᎯ ᏗᏤᎲ ᏫᎦᏲᎩᎷᎯᏍᏗ ᏂᎨᏒᎾ ᏥᎨᏐ ᎢᏳᏍᏗ; ᏂᎯᏰᏃ ᎾᏍᏉ ᏗᏤᎲ ᎢᏴᏛ ᏬᎩᎷᏨ ᎣᏣᎵᏥᏙᎲᏍᎬ ᎣᏍᏛ ᎧᏃᎮᏛ ᎦᎶᏁᏛ ᎤᏤᎵᎦ;
15 ೧೫ ನಾವು ಮಿತಿಗಳನ್ನು ಮೀರಿ ಮತ್ತೊಬ್ಬರ ಪ್ರಯಾಸದ ಫಲಗಳನ್ನು ತೆಗೆದುಕೊಂಡು, ಇವು ನಮ್ಮವು ಎಂದು ಹಿಗ್ಗುವವರಲ್ಲ. ಆದರೆ ನಿಮ್ಮ ನಂಬಿಕೆಯು ಹೆಚ್ಚಿದಾಗೆಲ್ಲಾ ನಿಮ್ಮ ಮೂಲಕ ನಮ್ಮ ಮಿತಿಯು ಇನ್ನೂ ವಿಸ್ತರಿಸಿತು.
ᏃᏣᏢᏈᏍᏗᏍᎬᎾ ᎠᏟᎶᎥ ᏙᏱᏗᏢ ᎨᏒᎢ, ᎾᏍᎩ ᎠᏂᏐᎢ ᏴᏫ ᏚᏂᎸᏫᏍᏓᏁᎸᎢ; ᎤᏚᎩᏍᎩᏂ ᎣᎬᏒᎢ, ᎾᏍᎩ ᎢᏦᎯᏳᏒ ᎿᎭᏉ ᎤᏁᏉᏨᎯ ᎨᏎᏍᏗ, ᏂᎯ ᏍᎩᏁᏉᎡᏗᏱ ᏍᎩᏍᏕᎸᏗᏱ ᏩᏍᏛ ᎢᏴᏛ ᎣᎦᏟᎶᎡᎸ ᏬᎩᎶᏒᏍᏙᏗᏱ,
16 ೧೬ ನಿಮಗೆ ಆಚೆಯಿರುವ ಸೀಮೆಗಳಲ್ಲಿಯೂ ಸುವಾರ್ತೆಯನ್ನು ಸಾರುವೆವೆಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದೆವಷ್ಟೇ. ಮತ್ತೊಬ್ಬರ ಜಾಗದಲ್ಲಿ ಸಿದ್ಧವಾಗಿ ನಮಗೆ ಸಿಕ್ಕಿದ ಫಲವನ್ನು ಕುರಿತು ನಾವು ಹೆಚ್ಚಳಪಡುವುದಿಲ್ಲ.
ᎣᎦᎵᏥᏙᏗᏱ ᎣᏍᏛ ᎧᏃᎮᏛ ᏗᏤᎲ ᎤᏗᏗᏢ, ᎥᏝᏃ ᎣᎦᏢᏈᏍᏗᏱ ᏅᏗᎦᎵᏍᏙᏗᏍᎬ ᏅᏩᏓᏕ ᎩᎶ ᏩᏍᏛ ᎢᏴᏛ ᎠᎦᏟᎶᎡᎸᎢ, ᎦᏳᎳ ᎣᎦᏛᏅᎢᏍᏓᏁᎸᎯ ᎨᏒᎢ.
17 ೧೭ “ಹೆಚ್ಚಳಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ.”
ᎩᎶᏍᎩᏂ ᎠᏢᏈᏍᎨᏍᏗ ᎤᎬᏫᏳᎯ ᎠᏢᏈᏍᏗᏍᎨᏍᏗ.
18 ೧೮ ತನ್ನನ್ನು ತಾನೇ ಹೊಗಳಿಕೊಳ್ಳುವವನು ಯೋಗ್ಯನಲ್ಲ. ಕರ್ತನು ಯಾರನ್ನು ಹೊಗಳುತ್ತಾನೋ ಅವನೇ ಯೋಗ್ಯನು.
ᎥᏝᏰᏃ ᎾᏍᎩ Ꮎ ᎤᏩᏒ ᎠᏓᎸᏉᏗᏍᎩ ᏣᎦᏓᏂᎸᎢᏍᏗ ᏱᎩ, ᎾᏍᎩᏍᎩᏂ Ꮎ ᎤᎬᏫᏳᎯ ᎤᎸᏉᏔᏅᎯ.

< ಕೊರಿಂಥದವರಿಗೆ ಬರೆದ ಎರಡನೆಯ ಪತ್ರಿಕೆ 10 >