< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 7 >
1 ೧ ಸೊಲೊಮೋನನು ಪ್ರಾರ್ಥಿಸುವುದನ್ನು ಮುಗಿಸಿದ ಕೂಡಲೆ, ಆಕಾಶದಿಂದ ಬೆಂಕಿಯು ಬಿದ್ದು ಸರ್ವಾಂಗಹೋಮಗಳನ್ನೂ, ಯಜ್ಞಮಾಂಸವನ್ನೂ ದಹಿಸಿ ಬಿಟ್ಟಿತು, ಯೆಹೋವನ ತೇಜಸ್ಸು ಆಲಯದ ತುಂಬಾ ತುಂಬಿಕೊಂಡಿತು.
Now, when Solomon had made an end of praying, Fire, came down out of the heavens, and consumed the ascending-offering and the sacrifices, —and, the glory of Yahweh, filled the house;
2 ೨ ಯೆಹೋವನ ತೇಜಸ್ಸು ಆಲಯವನ್ನು ತುಂಬಿಕೊಂಡಿದ್ದರಿಂದ ಯಾಜಕರು ಒಳಗೆ ಪ್ರವೇಶಿಸಲಾರದೆ ಹೋದರು.
so that the priests could not enter into the house of Yahweh, —because the glory of Yahweh filled the house of Yahweh;
3 ೩ ಇಸ್ರಾಯೇಲರೆಲ್ಲರೂ ಆಕಾಶದಿಂದ ಬೆಂಕಿ ಕೆಳಗೆ ಇಳಿದು ಬರುವುದನ್ನೂ ಮತ್ತು ಯೆಹೋವನ ತೇಜಸ್ಸು ಆಲಯವನ್ನು ತುಂಬಿಕೊಂಡಿರುವುದನ್ನು ನೋಡಿದಾಗ, ಜನರು ನೆಲದವರೆಗೆ ಸಾಷ್ಟಾಂಗವೆರಗಿ ಯೆಹೋವನನ್ನು ಆರಾಧಿಸಿ, “ಯೆಹೋವನು ಒಳ್ಳೆಯವನು, ಆತನ ಕೃಪೆಯು ಶಾಶ್ವತವಾದದ್ದು” ಎಂದು ಕೃತಜ್ಞತಾಸ್ತುತಿ ನಮನ ಮಾಡಿದರು.
and, all the sons of Israel, seeing the descending of the fire and the glory of Yahweh upon the house, then knelt they down with their faces toward the ground, upon the pavement, and bowed themselves in prostration, and gave thanks unto Yahweh, For he is good, For, age-abiding, is his lovingkindness.
4 ೪ ಅರಸನೂ ಮತ್ತು ಎಲ್ಲಾ ಜನರೂ ಯೆಹೋವನ ಸನ್ನಿಧಿಯಲ್ಲಿ ಸರ್ವಾಂಗಹೋಮವನ್ನು ಅರ್ಪಿಸಿದರು.
And, the king and all the people, were offering sacrifice before Yahweh.
5 ೫ ಅರಸನಾದ ಸೊಲೊಮೋನನು ಯಜ್ಞಕ್ಕಾಗಿ ಇಪ್ಪತ್ತೆರಡು ಸಾವಿರ ಹೋರಿಗಳನ್ನು, ಲಕ್ಷದ ಇಪ್ಪತ್ತು ಸಾವಿರ ಕುರಿಗಳನ್ನು ಯೆಹೋವನಿಗೆ ಸರ್ವಾಂಗಹೋಮವಾಗಿ ಅರ್ಪಿಸಿದನು. ಈ ಪ್ರಕಾರ ಅರಸನು ಮತ್ತು ಎಲ್ಲಾ ಇಸ್ರಾಯೇಲರು ಯೆಹೋವನ ದೇವಾಲಯವನ್ನು ಪ್ರತಿಷ್ಠೆ ಮಾಡಿದರು.
And King Solomon offered a sacrifice—of oxen, twenty-two thousand, and of sheep, a hundred and twenty thousand, —and so the king and all the people, dedicated the house of God;
6 ೬ ಪ್ರತಿಯೊಬ್ಬ ಯಾಜಕನು ತನ್ನ ಸೇವೆಗನುಸಾರವಾಗಿ ನಿಂತರು. ಲೇವಿಯರೂ ಮತ್ತು ದಾವೀದ ರಾಜನು ಯೆಹೋವನ ಗಾಯನ ಸೇವೆಗೋಸ್ಕರ ಮಾಡಿಸಿದ ವಾದ್ಯಗಳನ್ನು ತಮ್ಮ ಕೈಗಳಲ್ಲಿ ಹಿಡಿದುಕೊಂಡು, ದೇವಾರಾಧನೆ ಮಾಡುತ್ತಾ, “ಆತನ ಕೃಪೆಯು ಶಾಶ್ವತವಾದದ್ದು” ಎಂಬುದಾಗಿ ಸ್ತುತಿ ಸಲ್ಲಿಸಿದರು. ಎಲ್ಲಾ ಯಾಜಕರು ಅವರ ಮುಂದೆ ತುತ್ತೂರಿಗಳನ್ನು ಊದಿದರು. ಸಮಸ್ತ ಇಸ್ರಾಯೇಲ್ಯರು ಎದ್ದು ನಿಂತಿದ್ದರು.
while, the priests, over their charges, were standing, the Levites also, with the instruments for the songs of Yahweh, which David the king had made, for giving thanks unto Yahweh, For, age-abiding, is his lovingkindness, when David offered praise by their means, —and, the priests, kept on blowing trumpets over against them, while, all Israel, were standing.
7 ೭ ಸೊಲೊಮೋನನು ಯೆಹೋವನ ಆಲಯದ ಮುಂದಿನ ಪ್ರಾಕಾರದ ಮಧ್ಯಸ್ಥಳವನ್ನು ಪ್ರತಿಷ್ಠೆ ಮಾಡಿದನು. ಸೊಲೊಮೋನನು ಮಾಡಿಸಿದ ತಾಮ್ರದ ಯಜ್ಞವೇದಿಯ ಮೇಲೆ ಸರ್ವಾಂಗಹೋಮವನ್ನೂ, ಸಮಾಧಾನ ಯಜ್ಞದ ಕೊಬ್ಬನ್ನೂ ಇಡುವುದಕ್ಕೆ ಸ್ಥಳ ಸಾಲದೆ ಇದ್ದುದರಿಂದ, ಅಲ್ಲಿ ಅವನು ಸರ್ವಾಂಗಹೋಮವನ್ನೂ, ಧಾನ್ಯನೈವೇದ್ಯಗಳನ್ನೂ, ಸಮಾಧಾನ ಯಜ್ಞದ ಕೊಬ್ಬಿನ ಕಾಣಿಕೆಯನ್ನು ಸಮರ್ಪಿಸಿದನು.
And Solomon hallowed the middle of the court that was before the house of Yahweh, for he offered there the ascending-sacrifices, and the fat portions of the peace-offerings, —because, the altar of bronze which Solomon had made, was not able to receive the ascending-sacrifice and the meal-offering and the fat portions.
8 ೮ ಈ ಪ್ರಕಾರ ಸೊಲೊಮೋನನೂ ಹಮಾತಿನ ದಾರಿಯಿಂದ ಐಗುಪ್ತದ ಹಳ್ಳದ ವರೆಗಿರುವ ಪ್ರಾಂತ್ಯಗಳಿಂದ, ಮಹಾ ಸಮೂಹವಾಗಿ ಕೂಡಿಬಂದಿದ್ದ ಎಲ್ಲಾ ಇಸ್ರಾಯೇಲರೂ ಅಲ್ಲಿ ಏಳು ದಿನಗಳವರೆಗೂ ಪರ್ಣಶಾಲೆಗಳ ಜಾತ್ರೆ ಆಚರಿಸಿದರು.
And Solomon made a festival—at that time—for seven days, and all Israel with him, an exceeding great convocation, —from the entering in of Hamath, unto the ravine of Egypt.
9 ೯ ತರುವಾಯ ಎಂಟನೆಯ ದಿನದಲ್ಲಿ ಪರಿಶುದ್ಧ ಸಭೆ ನಡಿಸಿದರು. ಹೀಗೆ ಏಳು ದಿನ ಯಜ್ಞವೇದಿಯ ಪ್ರತಿಷ್ಠೆಯನ್ನು ಮತ್ತು ಇನ್ನು ಏಳು ದಿನ ಜಾತ್ರೆಯ ಹಬ್ಬವನ್ನು ಆಚರಿಸಿದರು.
And they made, on the eighth day, a closing feast, —because, the dedication of the altar, they had kept seven days and a festival seven days.
10 ೧೦ ಏಳನೆಯ ತಿಂಗಳಿನ ಇಪ್ಪತ್ತ ಮೂರನೆಯ ದಿನದಲ್ಲಿ, ಅರಸನು ಜನರಿಗೆ ಅಪ್ಪಣೆಕೊಡಲು ಅವರು ಯೆಹೋವನಿಂದ ದಾವೀದ, ಸೊಲೊಮೋನರಿಗೂ, ಆತನ ಪ್ರಜೆಗಳಾದ ಇಸ್ರಾಯೇಲರಿಗೂ ಉಂಟಾದ ಉಪಕಾರಗಳನ್ನು ನೆನಪುಮಾಡಿಕೊಂಡು ಆನಂದಭರಿತರಾಗಿ, ಸಂತೋಷಿಸುತ್ತಾ ತಮ್ಮ ತಮ್ಮ ನಿವಾಸಗಳಿಗೆ ಹೊರಟು ಹೋದರು.
And, on the twenty-third of the seventh month, he sent the people away to their own homes, —rejoicing and glad in heart, over the goodness which Yahweh had performed unto David and unto Solomon, and unto Israel his people.
11 ೧೧ ಸೊಲೊಮೋನನು ಯೆಹೋವನ ಆಲಯವನ್ನೂ, ತನ್ನ ಅರಮನೆಯನ್ನೂ ಕಟ್ಟಿಸಿ, ಆ ಕಟ್ಟಡಗಳ ವಿಷಯವಾಗಿ ತನ್ನ ಹೃದಯದಲ್ಲಿದ್ದ ಎಲ್ಲವನ್ನೂ ಅರಸನು ಈಡೇರಿಸಿದನು.
Thus Solomon finished the house of Yahweh, and the house of the king, —and, all that had come in upon the heart of Solomon, to do in the house of Yahweh and in his own house, he prosperously executed.
12 ೧೨ ಯೆಹೋವನು ಸೊಲೊಮೋನನಿಗೆ ರಾತ್ರಿಯಲ್ಲಿ ಪ್ರತ್ಯಕ್ಷನಾಗಿ, “ನೀನು ನನಗೆ ಮಾಡಿದ ಪ್ರಾರ್ಥನೆಯನ್ನು ಲಾಲಿಸಿ, ಬಲಿಯನ್ನರ್ಪಿಸುವ ಆಲಯವಾಗಿ ಈ ಸ್ಥಳವನ್ನು ಆರಿಸಿಕೊಂಡಿದ್ದೇನೆ.
Then appeared Yahweh unto Solomon by night, —and said to him, I have heard thy prayer, and have made choice of this place for myself, as a house of sacrifice: —
13 ೧೩ ನಾನು ಆಕಾಶವನ್ನು ಮಳೆಗರೆಯದಂತೆ ಮುಚ್ಚುವಾಗಲೂ, ದೇಶವನ್ನು ತಿಂದು ಬಿಡುವುದಕ್ಕೆ ಮಿಡತೆಗಳನ್ನು ಕಳುಹಿಸುವಾಗಲೂ, ನನ್ನ ಪ್ರಜೆಯ ಮೇಲೆ ಘೋರವ್ಯಾಧಿಯನ್ನು ಬರಮಾಡುವಾಗಲೂ,
If I shut up the heavens that there be no rain, or if I lay command on the locust, to devour the land, —or if I send pestilence, amongst my people:
14 ೧೪ ಈಗ ನನ್ನವರೆಂದು ಹೆಸರುಗೊಂಡಿರುವ ನನ್ನ ಪ್ರಜೆಗಳು ತಮ್ಮನ್ನು ತಗ್ಗಿಸಿಕೊಂಡು ತಮ್ಮ ಕೆಟ್ಟ ನಡತೆಯನ್ನು ಬಿಟ್ಟು ನನ್ನ ಕಡೆಗೆ ತಿರುಗಿಕೊಂಡು, ನನ್ನನ್ನು ಕುರಿತು ಪ್ರಾರ್ಥಿಸಿ, ನನ್ನ ದರ್ಶನವನ್ನು ಬಯಸುವುದಾದರೆ, ನಾನು ಪರಲೋಕದಿಂದ ಆಲಿಸಿ, ಅವರ ಪಾಪಗಳನ್ನು ಕ್ಷಮಿಸಿ, ಅವರ ದೇಶಕ್ಕೆ ಆರೋಗ್ಯವನ್ನು ದಯಪಾಲಿಸುವೆನು.
if my people upon whom my Name is called shall humble themselves, and pray and seek my face, and turn from their wicked ways, then will, I myself, hear out of the heavens, and forgive their sin, and heal their land.
15 ೧೫ ಇನ್ನು ಮುಂದೆ ಈ ಸ್ಥಳದಲ್ಲಿ ಪ್ರಾರ್ಥಿಸುವವರನ್ನು ಕಟಾಕ್ಷಿಸಿ ಅವರ ವಿಜ್ಞಾಪನೆಗಳಿಗೆ ಕಿವಿಗೊಡುವೆನು.
Now, mine eyes, shall be open, and, mine ears, attent, —to the prayer of this place.
16 ೧೬ ನನ್ನ ನಾಮ ಮಹತ್ತು ಈ ಆಲಯದಲ್ಲಿ ಶಾಶ್ವತವಾಗಿರುವಂತೆ ಇದನ್ನು ನನಗೋಸ್ಕರ ಆರಿಸಿ ಪ್ರತಿಷ್ಠಿಸಿಕೊಂಡಿದ್ದೇನೆ; ನನ್ನ ದೃಷ್ಠಿಯೂ, ಮನಸ್ಸೂ ಸದಾ ಇಲ್ಲೇ ಇರುತ್ತದೆ.
Now, therefore, have I chosen and hallowed this house, that my Name may be there, unto times age-abiding, —and mine eyes and my heart shall he there, all the days.
17 ೧೭ ನೀನು ನಿನ್ನ ತಂದೆಯಾದ ದಾವೀದನಂತೆ ನನಗೆ ವಿಧೇಯನಾಗಿ ನಡೆದುಕೊಂಡು ನನ್ನ ಆಜ್ಞಾವಿಧಿನ್ಯಾಯಗಳನ್ನು ಕೈಕೊಳ್ಳುವುದಾದರೆ,
Thou, therefore, if thou wilt walk before me, as David thy father walked, even to do according to all that I have commanded thee, —and, my statutes and regulations, thou wilt observe,
18 ೧೮ ನಿನ್ನ ರಾಜ್ಯಸಿಂಹಾಸನವನ್ನು ಸ್ಥಿರಪಡಿಸುವೆನು; ಅಲ್ಲದೆ ಇಸ್ರಾಯೇಲರಲ್ಲಿ ನಿನ್ನ ಸಂತಾನದವರು ತಪ್ಪದೆ ಸದಾಕಾಲ ರಾಜ್ಯಾಭಾರ ನಡಿಸುವರು ಎಂಬುದಾಗಿ ನಿನ್ನ ತಂದೆಯಾದ ದಾವೀದನಿಗೆ ನಾನು ಮಾಡಿದ ವಾಗ್ದಾನವನ್ನು ನೆರವೇರಿಸುವೆನು.
then will I establish the throne of thy kingdom, —according as I covenanted to David thy father, saying—There shall not fail thee a man, to rule over Israel.
19 ೧೯ ಆದರೆ ನೀವು ದ್ರೋಹಿಗಳಾಗಿ ಯೆಹೋವನ ಆಜ್ಞಾವಿಧಿಗಳನ್ನು ಉಲ್ಲಂಘಿಸಿ, ಅನ್ಯದೇವತೆಗಳನ್ನು ಆರಾಧಿಸಿ,
But, if, ye yourselves, shall turn away, and forsake my statutes and my commandments, which I have set before you, —and shall go and serve other gods, and bow down to them,
20 ೨೦ ಅವುಗಳಿಗೆ ಕೈಮುಗಿಯುವುದಾದರೆ ನಾನು ಇಸ್ರಾಯೇಲ್ಯರಿಗೆ ಕೊಟ್ಟ ನನ್ನ ದೇಶದಿಂದ ಅವರನ್ನು ಹೊರಗೆ ಹಾಕಿ ನನ್ನ ಹೆಸರಿಗೋಸ್ಕರ ಪ್ರತಿಷ್ಠಿಸಿಕೊಂಡ ಈ ಆಲಯವನ್ನು ನಿರಾಕರಿಸಿ ಅದು ಎಲ್ಲಾ ಜನಾಂಗಗಳವರಿಗೂ ಶಾಪದ ಮಾದರಿ ಮಾತಾಗಿಯೂ ನಿಂದೆಗೆ ಆಸ್ಪದವಾಗುವಂತೆಯೂ ಮಾಡುವೆನು.
then will I root you out from off the soil, which I have given to you, and, this house, which I have hallowed for my Name, will I cast off from before my face, —and will appoint it for a by-word and a mockery, among all the peoples;
21 ೨೧ ಉನ್ನತವಾದ ಮಂದಿರದ ಈ ಮಾರ್ಗವಾಗಿ ಹೋಗುವವರು ಅದನ್ನು ನೋಡಿ ಬೆರಗಾಗಿ, ‘ಯೆಹೋವನು ಈ ದೇಶವನ್ನೂ ಆಲಯವನ್ನೂ ಹೀಗೇಕೆ ಮಾಡಿದನು?’ ಎಂದು ಕೇಳುವರು.
and, this house which hath been renowned, all that pass by near it, shall be astonished, —and say, Wherefore hath Yahweh done, thus and thus, to this land, and to this house?
22 ೨೨ ಆಗ ಅವರಿಗೆ, ‘ಈ ದೇಶದವರು ತಮ್ಮನ್ನು ಐಗುಪ್ತ ದೇಶದಿಂದ ಬರಮಾಡಿದ ತಮ್ಮ ಪೂರ್ವಿಕರ ದೇವರಾದ ಯೆಹೋವನನ್ನು ಕಡೆಗಣಿಸಿ, ಅನ್ಯ ದೇವತೆಗಳನ್ನು ಅವಲಂಬಿಸಿ ಅವುಗಳಿಗೆ ಅಡ್ಡಬಿದ್ದು ಆರಾಧಿಸಿದ್ದರಿಂದಲೇ ಆತನು ಈ ಎಲ್ಲಾ ಆಪತ್ತನ್ನು ಅವರಿಗೆ ಬರಮಾಡಿದ್ದಾನೆ.’” ಎಂದು ಉತ್ತರ ಕೊಡುವರು ಎಂದನು.
And men shall say, Because they forsook Yahweh the God of their fathers, who brought them up out of the land of Egypt, and laid hold of other gods, and bowed down to them, and served them, for this cause, hath he brought upon them, all this calamity.