< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 4 >
1 ೧ ಇದಲ್ಲದೆ ಸೊಲೊಮೋನನು ತಾಮ್ರದ ಯಜ್ಞವೇದಿಯನ್ನು ಮಾಡಿಸಿದನು. ಅದರ ಉದ್ದ ಇಪ್ಪತ್ತು ಮೊಳ, ಅಗಲ ಇಪ್ಪತ್ತು ಮೊಳ, ಎತ್ತರ ಹತ್ತು ಮೊಳವು ಆಗಿತ್ತು.
И сделал медный жертвенник: двадцать локтей длина его и двадцать локтей ширина его и десять локтей вышина его.
2 ೨ ಸೊಲೊಮೋನನು ಒಂದು ಕಂಚಿನ ಕಡಲು ಎಂಬ ಪಾತ್ರೆಯನ್ನು ಮಾಡಿಸಿದನು. ಅದು ಚಕ್ರಾಕಾರವಾಗಿ ಅಂಚಿನಿಂದ ಅಂಚಿಗೆ ಹತ್ತು ಮೊಳವಾಗಿಯೂ ಇತ್ತು. ಅದರ ಎತ್ತರವು ಐದು ಮೊಳವಾಗಿಯೂ, ಸುತ್ತಳತೆ ಮೂವತ್ತು ಮೊಳ ನೂಲಳತೆಯಾಗಿತ್ತು.
И сделал море литое, от края его до края его десять локтей, - все круглое, вышиною в пять локтей; и снурок в тридцать локтей обнимал его кругом;
3 ೩ ಅದರ ಕೆಳಭಾಗದಲ್ಲಿ ಅದರ ಸುತ್ತಲೂ ಎತ್ತುಗಳ ರೂಪಗಳಿದ್ದವು. ಅವು ಒಂದೊಂದು ಮೊಳಕ್ಕೆ ಹತ್ತರಂತೆ ಆ ಕೊಳದ ಪಾತ್ರೆಯ ಸುತ್ತಲೂ ಇದ್ದವು. ಇದು ಎರಕ ಹೊಯ್ಯಲ್ಪಡುವಾಗ ಎತ್ತುಗಳ ರೂಪ ಎರಡು ಸಾಲಾಗಿ ಎರಕ ಹೊಯ್ಯಲ್ಪಟ್ಟಿದ್ದವು.
и литые подобия волов стояли под ним кругом со всех сторон; на десять локтей окружали море кругом два ряда волов, вылитых одним литьем с ним.
4 ೪ ಅದು ಹನ್ನೆರಡು ಎರಕದ ಎತ್ತುಗಳ ಮೇಲೆ ನಿಂತಿತ್ತು. ಮೂರು ಉತ್ತರ ದಿಕ್ಕಿಗೂ, ಮೂರು ಪಶ್ಚಿಮ ದಿಕ್ಕಿಗೂ, ಮೂರು ದಕ್ಷಿಣ ದಿಕ್ಕಿಗೂ, ಮೂರು ಪೂರ್ವ ದಿಕ್ಕಿಗೂ ಮುಖ ಮಾಡಿಕೊಂಡಿದ್ದವು. ಆ ಕಂಚಿನ ಕಡಲು ಪಾತ್ರೆ ಅವುಗಳ ಬೆನ್ನಿನ ಮೇಲೆ ಇತ್ತು. ಅವುಗಳ ಹಿಂಭಾಗಗಳೆಲ್ಲಾ ಒಳಭಾಗದಲ್ಲಿತ್ತು.
Стояло оно на двенадцати волах: три глядели к северу и три глядели к западу, и три глядели к югу, и три глядели к востоку, - и море на них сверху; зады же их были обращены внутрь под него.
5 ೫ ಕಡಲಿನ ಪಾತ್ರೆಯು ನಾಲ್ಕು ಬೆರಳಿನಷ್ಟು ದಪ್ಪವಾಗಿತ್ತು. ಅದರ ಅಂಚುಪಾತ್ರೆಯ ಅಂಚಿನ ಹಾಗೆಯೂ ಅರಳಿದ ಕಮಲಪುಷ್ಪದ ಹಾಗೆ ಇತ್ತು. ಅದರೊಳಗೆ ಮೂರು ಸಾವಿರ ಕೊಳಗ ನೀರು ಹಿಡಿಯುತ್ತಿತ್ತು.
Толщиною оно было в ладонь; и края его, сделанные, как края чаши, походили на распустившуюся лилию. Оно вмещало до трех тысяч батов.
6 ೬ ಇದಲ್ಲದೆ ಅವನು ಹತ್ತು ಬೋಗುಣಿಗಳನ್ನು ಮಾಡಿಸಿ, ಅವುಗಳಲ್ಲಿ ಸರ್ವಾಂಗಹೋಮ ಸಮರ್ಪಣೆಯ ಸಾಮಾನುಗಳನ್ನು ತೊಳೆದು ಶುದ್ಧ ಮಾಡುವುದಕ್ಕಾಗಿ ಐದನ್ನು ಬಲಗಡೆಯಲ್ಲಿಯೂ, ಐದನ್ನು ಎಡಗಡೆಯಲ್ಲಿಯೂ ಇರಿಸಿದನು. ಆದರೆ ಆ ಕಡಲಿನೊಳಗಿನ ನೀರು ಯಾಜಕರ ಸ್ನಾನಮಾಡಿ ತಮ್ಮನ್ನು ಶುದ್ಧಮಾಡಿಕೊಳ್ಳುವುದಕ್ಕಾಗಿ ಇತ್ತು.
И сделал десять омывальниц, и поставил пять по правую сторону и пять по левую, чтоб омывать в них, приготовляемое ко всесожжению омывали в них; море же - для священников, чтоб они омывались в нем.
7 ೭ ಅವನು ಬಂಗಾರದ ಹತ್ತು ದೀಪಸ್ತಂಭಗಳನ್ನು ಮಾಡಿಸಿ ಐದನ್ನು ದೇವಾಲಯದೊಳಗೆ ಬಲಗಡೆಯಲ್ಲಿ, ಐದನ್ನು, ಎಡಗಡೆಯಲ್ಲಿಯೂ ಇರಿಸಿದನು.
И сделал десять золотых светильников, как им быть надлежало, и поставил в храме, пять по правую сторону и пять по левую.
8 ೮ ಹತ್ತು ಮೇಜುಗಳನ್ನು ಮಾಡಿಸಿ, ದೇವಾಲಯದೊಳಗೆ ಬಲಗಡೆಯಲ್ಲಿ ಐದನ್ನೂ, ಎಡಗಡೆಯಲ್ಲಿ ಐದನ್ನೂ ಇರಿಸಿ ನೂರು ಬಂಗಾರದ ಬೋಗುಣಿಗಳನ್ನು ಮಾಡಿಸಿದನು.
И сделал десять столов и поставил в храме, пять по правую сторону и пять по левую, и сделал сто золотых чаш.
9 ೯ ಇದಲ್ಲದೆ ಯಾಜಕರ ಪ್ರಾಕಾರವನ್ನೂ, ಮಹಾಪ್ರಾಕಾರವನ್ನೂ, ಮಹಾಪ್ರಾಕಾರಕ್ಕೆ ಬಾಗಿಲುಗಳನ್ನೂ ಮಾಡಿಸಿದನು; ಅವುಗಳ ಬಾಗಿಲುಗಳನ್ನು ತಾಮ್ರದ ತಗಡಿನಿಂದ ಹೊದಿಸಿದನು.
И сделал священнический двор и большой двор и двери к двору, и вереи их обложил медью.
10 ೧೦ ಕಡಲು ಎನಿಸಿಕೊಳ್ಳುವ ಪಾತ್ರೆಯನ್ನು ದೇವಾಲಯದ ಬಲಗಡೆಯಲ್ಲಿ ಅಂದರೆ ಪೂರ್ವಭಾಗದ ಬಲಗಡೆಯಲ್ಲಿ ದಕ್ಷಿಣಕ್ಕೆ ಎದುರಾಗಿ ಇರಿಸಿದನು.
Море поставил на правой стороне, к юго-востоку.
11 ೧೧ ಇದಲ್ಲದೆ ಹೂರಾಮನು ಹಂಡೆಗಳನ್ನೂ, ಸಲಿಕೆಗಳನ್ನೂ ಬೋಗುಣಿಗಳನ್ನೂ ಮಾಡಿದನು. ಹೀಗೆಯೇ ಹೂರಾಮನು ದೇವಾಲಯಕ್ಕೋಸ್ಕರ ಅರಸನಾದ ಸೊಲೊಮೋನನ ಅಪ್ಪಣೆಯಂತೆ ದೇವಾಲಯ ಕಾರ್ಯಕ್ಕಾಗಿ ಮಾಡಿ ಮುಗಿಸಿದನು.
И сделал Хирам тазы, и лопатки, и чаши и кадильницы, и все жертвенные сосуды. И кончил Хирам работу, которую производил для царя Соломона в доме Божием:
12 ೧೨ ಎರಡು ಸ್ತಂಭಗಳು ಅವುಗಳ ಮೇಲಿರುವ ಕುಂಭಾಕಾರದ ಎರಡು ತಲೆಗಳು, ಕುಂಭಗಳ ಮೇಲೆ ಹಾಕುವುದಕ್ಕೋಸ್ಕರ ಎರಡು ಜಾಲರಿಗಳು,
два столба и две опояски венцов на верху столбов, и две сетки для покрытия двух опоясок венцов, которые на главе столбов,
13 ೧೩ ಸ್ತಂಭಗಳ ತುದಿಯಲ್ಲಿರುವ ಕುಂಭಗಳ ಜಾಲರಿಗಳ ಮೇಲೆ ಎರಡೆರಡನ್ನು ಸಾಲಾಗಿ ಸಿಕ್ಕಿಸುವುದಕ್ಕೋಸ್ಕರ ತಾಮ್ರದ ನಾನೂರು ದಾಳಿಂಬೆ ಹಣ್ಣುಗಳು, ಪೀಠಗಳು,
и четыреста гранатовых яблок на двух сетках, два ряда гранатовых яблок для каждой сетки, для покрытия двух опоясок венцов, которые на столбах.
14 ೧೪ ಅವುಗಳ ಮೇಲಣ ಬೋಗುಣಿಗಳು, ಕಡಲು ಎನಿಸಿಕೊಳ್ಳುವ ಎರಕದ ಪಾತ್ರೆ,
И подставы сделал он, и омывальницы сделал на подставах;
15 ೧೫ ಅದನ್ನು ಹೊರುವ ಹನ್ನೆರಡು ಎರಕದ ಹೋರಿಗಳು,
одно море, и двенадцать волов под ним,
16 ೧೬ ಹಂಡೆ, ಸಲಿಕೆ, ಮುಳ್ಳುಸೌಟುಗಳು ಹೀಗೆ ಹೂರಾಮಾಬೀವನು ಅರಸನಾದ ಸೊಲೊಮೋನನ ಅಪ್ಪಣೆಯ ಮೇರೆಗೆ ಯೆಹೋವನ ಆಲಯಕ್ಕಾಗಿ ಅದರ ಎಲ್ಲಾ ಸಾಮಾನುಗಳನ್ನು ಒಪ್ಪ ಹಾಕಿದ ತಾಮ್ರದಿಂದ ಮಾಡಿ ಮುಗಿಸಿದನು.
и тазы, и лопатки, и вилки, и весь прибор их сделал Хирам-Авий царю Соломону для дома Господня из полированной меди.
17 ೧೭ ಅರಸನು ಯೊರ್ದನ್ ತಗ್ಗಿನಲ್ಲಿ ಸುಕ್ಕೋತಿಗೂ ಚೆರೇದಕ್ಕೂ ಮಧ್ಯದಲ್ಲಿರುವ ಕುಲುಮೆಯ ಜೇಡಿಮಣ್ಣಿನ ಸ್ಥಳದಲ್ಲಿ ಎರಕ ಹೊಯ್ಯಿಸಿದನು.
В окрестности Иордана выливал их царь, в глинистой земле, между Сокхофом и Цередою.
18 ೧೮ ಹೀಗೆ ಸೊಲೊಮೋನನು ಮಾಡಿಸಿದ ಸಾಮಾನುಗಳು ಅನೇಕವಾಗಿದ್ದುದರಿಂದ ಅವುಗಳ ತಾಮ್ರದ ತೂಕ ಎಷ್ಟೆಂಬುದು ಗೊತ್ತಾಗದೆ ಹೋಯಿತು.
И сделал Соломон все вещи сии в великом множестве, так что не знали веса меди.
19 ೧೯ ಸೊಲೊಮೋನನು ಯೆಹೋವನ ದೇವಾಲಯಕ್ಕಾಗಿ ಮಾಡಿಸಿದ ಒಳಗಿನ ಸಾಮಾನುಗಳು ಯಾವುದೆಂದರೆ: ಬಂಗಾರದ ಧೂಪವೇದಿ, ನೈವೇದ್ಯ ರೊಟ್ಟಿಗಳನ್ನಿಡುವ ಮೇಜುಗಳು,
Также сделал Соломон все вещи для дома Божия и золотой жертвенник, и столы, на которых хлебы предложения,
20 ೨೦ ನಿಯಮದ ಪ್ರಕಾರ ಮಹಾಪರಿಶುದ್ಧ ಸ್ಥಳದ ಮುಂದೆ ಉರಿಯುತ್ತಿರುವುದಕ್ಕಾಗಿ ಪುಷ್ಟಾಲಂಕಾರವುಳ್ಳ ಬಂಗಾರದ ದೀಪ ಸ್ತಂಭಗಳು,
и светильники и лампады их, чтобы возжигать их по уставу пред давиром, из чистого золота;
21 ೨೧ ಅವುಗಳ ದೀಪಗಳು, ಹೂವುಗಳು, ಹಣತೆಗಳು, ಇಕ್ಕಳಗಳು ಇವು ಸ್ವಚ್ಛ ಬಂಗಾರದಿಂದ ಮಾಡಿದವುಗಳಾಗಿದ್ದವು.
и цветы, и лампады, и щипцы из золота, из самого чистого золота,
22 ೨೨ ಹಾಗೆಯೇ ಕತ್ತರಿಗಳನ್ನೂ, ಬೋಗುಣಿಗಳನ್ನೂ ಧೂಪಾರತಿಗಳನ್ನೂ, ಅಗ್ಗಿಷ್ಟಿಕೆಗಳನ್ನು, ದೇವಾಲಯದ ಮಹಾಪರಿಶುದ್ಧ ಸ್ಥಳಕ್ಕಾಗಿರುವ ಬಂಗಾರದ ಕದಗಳು, ಪರಿಶುದ್ಧ ಸ್ಥಳದ ಬಂಗಾರದ ಕದಗಳು ಇವುಗಳೇ.
и ножи, и кропильницы, и чаши, и лотки из золота самого чистого, и двери храма, - двери его внутренние во Святое Святых, и двери храма во святилище, - из золота.