< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 29 >
1 ೧ ಹಿಜ್ಕೀಯನು ಪಟ್ಟಕ್ಕೆ ಬಂದಾಗ ಅವನು ಇಪ್ಪತ್ತೈದು ವರ್ಷದವನಾಗಿದ್ದನು. ಅವನು ಯೆರೂಸಲೇಮಿನಲ್ಲಿ ಇಪ್ಪತ್ತೊಂಭತ್ತು ವರ್ಷ ಆಳಿದನು. ಜೆಕರ್ಯನ ಮಗಳಾದ ಅಬೀಯ ಎಂಬಾಕೆಯು ಅವನ ತಾಯಿ.
Esekias blev konge da han var fem og tyve år gammel, og regjerte ni og tyve år i Jerusalem; hans mor hette Abia, Sakarjas datter.
2 ೨ ಅವನು ಎಲ್ಲಾ ವಿಷಯಗಳಲ್ಲಿಯೂ ನೀತಿವಂತನಾಗಿ ತನ್ನ ಪೂರ್ವಿಕನಾದ ದಾವೀದನಂತೆ ಯೆಹೋವನ ಚಿತ್ತಾನುಸಾರವಾಗಿ ನಡೆದನು.
Han gjorde hvad rett var i Herrens øine, aldeles som hans far David hadde gjort.
3 ೩ ಅವನು ತನ್ನ ಆಳ್ವಿಕೆಯ ಮೊದಲನೆಯ ವರ್ಷದ ಮೊದಲನೆಯ ತಿಂಗಳಲ್ಲಿ ಯೆಹೋವನ ಆಲಯದ ಬಾಗಿಲುಗಳನ್ನು ತೆರೆಯಿಸಿ ಅವುಗಳನ್ನು ಭದ್ರಪಡಿಸಿದನು.
I sin regjerings første år, i den første måned, åpnet han igjen dørene til Herrens hus og satte dem i stand.
4 ೪ ಆಮೇಲೆ ಯಾಜಕರನ್ನೂ ಮತ್ತು ಲೇವಿಯರನ್ನೂ ದೇವಾಲಯದ ಮೂಡಣದಿಕ್ಕಿನ ಬಯಲಿನಲ್ಲಿ ಸೇರಿಸಿ
Så lot han prestene og levittene hente og samlet dem på den åpne plass mot øst.
5 ೫ ಅವರಿಗೆ, “ಲೇವಿಯರೇ, ನನ್ನ ಮಾತನ್ನು ಕೇಳಿರಿ; ಈಗ ನಿಮ್ಮನ್ನು ಶುದ್ಧೀಕರಿಸಿಕೊಂಡು ನಿಮ್ಮ ಪೂರ್ವಿಕರ ದೇವರಾದ ಯೆಹೋವನ ಪವಿತ್ರಾಲಯದಲ್ಲಿರುವ ಹೊಲಸನ್ನೆಲ್ಲಾ ಹೊರಗೆ ಹಾಕಿ ಆಲಯವನ್ನು ಶುದ್ಧೀಕರಿಸಿರಿ.
Og han sa til dem: Hør på mig, I levitter! Hellige nu eder selv og hellige Herrens, eders fedres Guds hus og få urenheten ut av helligdommen!
6 ೬ ನಮ್ಮ ಪೂರ್ವಿಕರು ನಮ್ಮ ದೇವರಾದ ಯೆಹೋವನಿಗೆ ದ್ರೋಹಮಾಡಿ, ಆತನ ಚಿತ್ತಕ್ಕೆ ವಿರುದ್ಧವಾಗಿ ನಡೆದು ಆತನನ್ನು ತೊರೆದುಬಿಟ್ಟರು. ಅವರು ಆತನ ನಿವಾಸ ಸ್ಥಳವನ್ನು ತೊರೆದು ವಿಮುಖರಾದರು.
For våre fedre har båret sig troløst at og gjort hvad ondt er i Herrens, vår Guds øine, og forlatt ham; de har vendt sitt åsyn bort fra Herrens tabernakel og vendt ham ryggen.
7 ೭ ಅದರ ಮಂಟಪದ ಬಾಗಿಲುಗಳನ್ನು ಮುಚ್ಚಿ, ದೀಪಗಳನ್ನು ನಂದಿಸಿದರು. ಇಸ್ರಾಯೇಲ್ ದೇವರ ಪವಿತ್ರ ಸ್ಥಾನದಲ್ಲಿ ಧೂಪಹಾಕುವುದನ್ನೂ, ಸರ್ವಾಂಗಹೋಮ ಸಮರ್ಪಿಸುವುದನ್ನೂ ನಿಲ್ಲಿಸಿಬಿಟ್ಟರು.
De har også stengt dørene til forhallen og slukket lampene og ikke brent røkelse og ikke ofret brennoffer i helligdommen for Israels Gud.
8 ೮ ಆದುದರಿಂದ ಯೆಹೋವನು ಯೆಹೂದ ದೇಶದ ಮೇಲೆಯೂ ಯೆರೂಸಲೇಮಿನ ಮೇಲೆಯೂ, ಕೋಪವುಳ್ಳವನಾಗಿ ಅವುಗಳನ್ನು ಭಯಭೀತಿಗೂ ನಿಂದೆಗೂ, ಪರಿಹಾಸ್ಯಗಳಿಗೂ ಗುರಿಮಾಡಿದ್ದಾನೆ; ಇದಕ್ಕೆ ನೀವೇ ಸಾಕ್ಷಿಗಳು.
Derfor er Herrens vrede kommet over Juda og Jerusalem, og han har overgitt dem til mishandling, til ødeleggelse og til spott, således som I ser det med egne øine.
9 ೯ ಅದೇ ಕಾರಣದಿಂದ ನಮ್ಮ ಹಿರಿಯರು ಕತ್ತಿಯಿಂದ ಹತರಾದರು; ನಮ್ಮ ಗಂಡು ಹೆಣ್ಣು ಮಕ್ಕಳೂ, ಹೆಂಡತಿಯರೂ ಸೆರೆಯವರಾಗಿ ಹೋಗಬೇಕಾಯಿತು.
Og derfor er våre fedre falt for sverdet, og våre sønner og døtre og hustruer er i fangenskap.
10 ೧೦ ಈಗ ನಮ್ಮ ಮೇಲಿರುವ ಆತನ ಕೋಪಾಗ್ನಿಯು ತೊಲಗಿ ಹೋಗುವಂತೆ ಇಸ್ರಾಯೇಲಿನ ದೇವರಾದ ಯೆಹೋವನೊಡನೆ ಒಡಂಬಡಿಕೆ ಮಾಡಿಕೊಳ್ಳುವುದಕ್ಕೆ ಮನಸ್ಸುಳ್ಳವನಾಗಿದ್ದೇನೆ.
Nu har jeg i sinne å gjøre en pakt med Herren, Israels Gud, så hans brennende vrede kan vende sig bort fra oss.
11 ೧೧ ಹೀಗಿರಲಾಗಿ ನನ್ನ ಮಕ್ಕಳೇ, ಉದಾಸೀನರಾಗಿರಬೇಡಿ; ಯೆಹೋವನು ತನ್ನನ್ನು ಆರಾಧಿಸುವುದಕ್ಕೂ ಧೂಪಹಾಕುವುದಕ್ಕೂ ನಿಮ್ಮನ್ನು ತನ್ನ ಸಾನ್ನಿಧ್ಯ ಸೇವಕರನ್ನಾಗಿ ಆರಿಸಿಕೊಂಡನಲ್ಲಾ” ಎಂದು ಹೇಳಿದನು.
Så la det nu ikke skorte eder på iver, mine sønner! For eder har Herren utvalgt til å stå for hans åsyn og tjene ham, til å være hans tjenere og brenne røkelse for ham.
12 ೧೨ ಕೂಡಲೆ ಲೇವಿಯರು ಮುಂದೆ ಬಂದರು: ಕೆಹಾತ್ಯರಲ್ಲಿ ಅಮಾಸೈಯ ಮಗನಾದ ಮಹತ್, ಅಜರ್ಯನ ಮಗನಾದ ಯೋವೇಲ್, ಮೆರಾರೀಯರಲ್ಲಿ ಅಬ್ದೀಯ ಮಗನಾದ ಕೀಷ್, ಯೆಹಲ್ಲೆಲೇಲನ ಮಗನಾದ ಅಜರ್ಯ, ಗೇರ್ಷೋನ್ಯರಲ್ಲಿ ಜಿಮ್ಮನ ಮಗನಾದ ಯೋವಾಹ, ಯೋವಾಹನ ಮಗನಾದ ಏದೆನ್,
Da tok levittene fatt på arbeidet - det var Mahat, Amasais sønn, og Joel, Asarjas sønn, av kahatittenes barn, og av Meraris barn Kis, Abdis sønn, og Asarja, Jehallelels sønn, og av gersonittene Joah, Simmas sønn, og Eden, Joahs sønn,
13 ೧೩ ಎಲೀಚಾಫಾನ್ಯರಲ್ಲಿ ಶಿಮ್ರಾ, ಯೆಗೀಯೇಲ್, ಆಸಾಫ್ಯರಲ್ಲಿ ಜೆಕರ್ಯ ಮತ್ತು ಮತ್ತನ್ಯ,
og av Elisafans barn Simri og Je'uel og av Asafs barn Sakarja og Mattanja,
14 ೧೪ ಹೇಮಾನ್ಯರಲ್ಲಿ ಯೆಹೀಯೇಲ್, ಶಿಮ್ಮೀ, ಯೆದೂತೂನ್ಯರಲ್ಲಿ ಶೆಮಾಯ ಹಾಗು ಉಜ್ಜೀಯೇಲ್,
og av Hemans barn Jehuel og Sime'i og av Jedutuns barn Semaja og Ussiel.
15 ೧೫ ಎಂಬ ಲೇವಿಯರು ಎದ್ದು ತಮ್ಮ ಸಹೋದರರನ್ನು ಸೇರಿಕೊಂಡರು. ಅವರು ಅರಸನ ಆಜ್ಞಾನುಸಾರವಾಗಿ ಯೆಹೋವನ ಧರ್ಮಶಾಸ್ತ್ರ ವಿಧಿಯ ಮೇರೆಗೆ ತಮ್ಮನ್ನು ಶುದ್ಧೀಕರಿಸಿಕೊಂಡು ಯೆಹೋವನ ಆಲಯವನ್ನು ಶುದ್ಧೀಕರಿಸುವುದಕ್ಕೆ ಬಂದರು.
De samlet sine brødre og helliget sig og gikk så inn for å rense Herrens hus, således som kongen hadde befalt efter Herrens ord.
16 ೧೬ ಯಾಜಕರು ಯೆಹೋವನ ಆಲಯವನ್ನು ಶುದ್ಧಮಾಡುವುದಕ್ಕಾಗಿ ಒಳಗೆ ಹೋಗಿ ಪವಿತ್ರಸ್ಥಾನದಲ್ಲಿದ್ದ ಹೊಲಸನ್ನೆಲ್ಲಾ ತಂದು ಪ್ರಾಕಾರದಲ್ಲಿ ಹಾಕಿದರು. ಲೇವಿಯರು ಅದನ್ನು ಕೂಡಿಸಿ ಹೊರಗೆ ಒಯ್ದು ಕಿದ್ರೋನ್ ಹಳ್ಳದಲ್ಲಿ ಹಾಕಿದರು.
Og prestene gikk inn i det indre av Herrens hus for å rense det, og all den urenhet som de fant i Herrens tempel, førte de ut i forgården til Herrens hus; der tok levittene imot det og bar det ut til Kidron-bekken.
17 ೧೭ ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಶುದ್ಧೀಕರಣ ಕಾರ್ಯವನ್ನು ಪ್ರಾರಂಭಿಸಿದರು. ಎಂಟನೆಯ ದಿನದಲ್ಲಿ ಯೆಹೋವನ ಆಲಯದ ಮಂಟಪಕ್ಕೆ ಕೈಹಾಕಿದರು. ಹೀಗೆ ಯೆಹೋವನ ಆಲಯವನ್ನು ಪರಿಶುದ್ಧಪಡಿಸುವುದರಲ್ಲಿ ಎಂಟು ದಿನಗಳು ಕಳೆದು ಹೋದವು. ಮೊದಲನೆಯ ತಿಂಗಳಿನ ಹದಿನಾರನೆಯ ದಿನದಲ್ಲಿ ಕೆಲಸವೆಲ್ಲಾ ಮುಗಿಯಿತು.
På den første dag i den første måned begynte de å hellige sig, og på den åttende dag i måneden gikk de inn i Herrens forhall og helliget Herrens hus i åtte dager, og på den sekstende dag i den første måned var de ferdige.
18 ೧೮ ಆಮೇಲೆ ಅವರು ಅರಮನೆಯೊಳಗೆ ಹೋಗಿ, ಅರಸನಾದ ಹಿಜ್ಕೀಯನಿಗೆ, “ನಾವು ಯೆಹೋವನ ಸಮಸ್ತಾಲಯವನ್ನೂ, ಯಜ್ಞವೇದಿಯನ್ನೂ, ಅದರ ಉಪಕರಣಗಳನ್ನೂ, ನೈವೇದ್ಯ ರೊಟ್ಟಿಗಳನ್ನಿಡತಕ್ಕ ಮೇಜನ್ನೂ ಹಾಗು ಅದರ ಸಾಮಾನುಗಳನ್ನೂ ಶುದ್ಧಿಮಾಡಿದೆವು.
Derefter gikk de inn til kong Esekias og sa: Vi har renset hele Herrens hus og brennoffer-alteret med alt som til det hører, og skuebrødsbordet med alt som hører til det.
19 ೧೯ ಅರಸನಾದ ಆಹಾಜನು ತನ್ನ ಆಳ್ವಿಕೆಯಲ್ಲಿ ದೈವದ್ರೋಹಿಯಾಗಿ ತಳ್ಳಿಬಿಟ್ಟಿದ್ದ ಪಾತ್ರೆಗಳನ್ನು ತಿರುಗಿ ತಂದಿಟ್ಟು ಪ್ರತಿಷ್ಠಿಸಿದ್ದೇವೆ; ಅವು ಈಗ ಯೆಹೋವನ ಯಜ್ಞವೇದಿಯ ಮುಂದಿರುತ್ತವೆ” ಎಂದರು.
Og alle de kar som kong Akas i sin troløshet hadde vanhelliget mens han var konge, dem har vi satt i stand og helliget, og nu står de foran Herrens alter.
20 ೨೦ ಅರಸನಾದ ಹಿಜ್ಕೀಯನು ಮರುದಿನ ಬೆಳಗಿನ ಜಾವದಲ್ಲೆದ್ದು ಪಟ್ಟಣದ ಅಧಿಕಾರಿಗಳನ್ನು ಕರೆಸಿ ಅವರೊಡನೆ ಯೆಹೋವನ ಆಲಯಕ್ಕೆ ಹೋದನು.
Tidlig den næste morgen samlet kong Esekias byens høvdinger og gikk op til Herrens hus.
21 ೨೧ ಅವರು ರಾಜ್ಯಾಡಳಿತ ದೇವಾಲಯ, ಯೆಹೂದ ಪ್ರಜೆಗಳು ಇವುಗಳಿಗೋಸ್ಕರ ದೋಷಪರಿಹಾರಕ ಯಜ್ಞಮಾಡುವುದಕ್ಕಾಗಿ ಹೋರಿ, ಟಗರು, ಕುರಿಮರಿ, ಆಡು ಇವುಗಳಲ್ಲಿ ಏಳೇಳನ್ನು ತಂದರು. ಅರಸನು ಯಾಜಕರಾದ ಆರೋನನ ಸಂತಾನದವರಿಗೆ ಯೆಹೋವನ ಯಜ್ಞವೇದಿಯ ಮೇಲೆ ಸರ್ವಾಂಗಹೋಮ ಮಾಡಬೇಕೆಂದು ಆಜ್ಞಾಪಿಸಿದನು.
Og de kom med syv okser, syv værer, syv lam og syv gjetebukker til syndoffer for riket og for helligdommen og for Juda; og han bød Arons barn, prestene, å ofre dem på Herrens alter.
22 ೨೨ ಹೋರಿಗಳನ್ನು ವಧಿಸಿದ ಮೇಲೆ ಯಾಜಕರು ಅವುಗಳ ರಕ್ತವನ್ನು ಕೂಡಿಸಿ ಯಜ್ಞವೇದಿಗೆ ಪ್ರೋಕ್ಷಿಸಿದರು. ಅನಂತರ ಟಗರುಗಳನ್ನು ವಧಿಸಿದ ಮೇಲೆ ಯಾಜಕರು, ರಕ್ತವನ್ನು ಕೂಡಿಸಿ ಯಜ್ಞವೇದಿಗೆ ಅನಂತರ ಟಗರುಗಳನ್ನು ವಧಿಸಿ ಅವುಗಳ ರಕ್ತವನ್ನು ಯಜ್ಞವೇದಿಗೆ ಪ್ರೋಕ್ಷಿಸಿದರು. ಆ ಮೇಲೆ ಕುರಿಮರಿಗಳನ್ನು ವಧಿಸಿ ಅವುಗಳ ರಕ್ತವನ್ನೂ ಯಜ್ಞವೇದಿಗೆ ಪ್ರೋಕ್ಷಿಸಿದರು.
De slaktet da oksene, og prestene tok imot blodet og sprengte det på alteret; så slaktet de værene og sprengte blodet på alteret, og så slaktet de lammene og sprengte blodet på alteret.
23 ೨೩ ಕಡೆಯಲ್ಲಿ ದೋಷಪರಿಹಾರಕ ಯಜ್ಞಕ್ಕಾಗಿ ತಂದ ಹೋತಗಳನ್ನು ಅರಸನ ಮುಂದೆಯೂ ಮತ್ತು ಸಮೂಹದವರ ಮುಂದೆಯೂ ನಿಲ್ಲಿಸಿದರು. ಅವರು ಅವುಗಳ ಮೇಲೆ ತಮ್ಮ ಕೈಗಳನ್ನಿಟ್ಟರು.
Derefter førte de syndoffer-bukkene frem foran kongen og menigheten, og de la sine hender på dem,
24 ೨೪ ನಂತರ ಯಾಜಕರು ಅವುಗಳನ್ನು ವಧಿಸಿ ಅವುಗಳ ರಕ್ತವನ್ನು ಸಮಸ್ತ ಇಸ್ರಾಯೇಲರ ದೋಷ ಪರಿಹಾರಕ್ಕಾಗಿ ಯಜ್ಞವೇದಿಯ ಮೇಲೆ ಸುರಿದರು. ಆ ಸರ್ವಾಂಗಹೋಮಗಳೂ, ದೋಷಪರಿಹಾರಕ ಯಜ್ಞಗಳೂ ಎಲ್ಲಾ ಇಸ್ರಾಯೇಲರಿಗಾಗಿ ಇರಬೇಕೆಂದು ಅರಸನು ಆಜ್ಞಾಪಿಸಿದ್ದನು.
og prestene slaktet dem og sprengte blodet av dem på alteret som syndoffer, til soning for hele Israel; for kongen hadde befalt at brennofferet og syndofferet skulde være for hele Israel.
25 ೨೫ ಇದಲ್ಲದೆ, ಅವನು ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದ ಭಜಿಸುವುದಕ್ಕೋಸ್ಕರ ಲೇವಿಯರನ್ನು, ದಾವೀದನ ರಾಜದರ್ಶಿಯಾದ ಗಾದ್ ಹಾಗು ಪ್ರವಾದಿಯಾದ ನಾತಾನ್ ಇವರ ಆಜ್ಞಾನುಸಾರವಾಗಿ ಯೆಹೋವನ ಆಲಯದಲ್ಲಿ ನಿಲ್ಲಿಸಿದನು. ಯೆಹೋವನು ತಾನೇ ಪ್ರವಾದಿಗಳ ಮುಖಾಂತರ ಹೀಗೆ ಆಜ್ಞಾಪಿಸಿದ್ದನು.
Og han lot levittene stille sig op i Herrens hus med cymbler, harper og citarer, således som David og kongens seer Gad og profeten Natan hadde foreskrevet; for det var Herren som hadde gitt denne forskrift gjennem sine profeter.
26 ೨೬ ಆ ಲೇವಿಯರು ದಾವೀದನ ವಾದ್ಯಗಳನ್ನೂ, ಯಾಜಕರೂ ತುತ್ತೂರಿಗಳನ್ನೂ ಹಿಡಿದು ನಿಂತಿದ್ದರು.
Levittene stod med Davids musikkinstrumenter og prestene med trompetene.
27 ೨೭ ಆಗ ಹಿಜ್ಕೀಯನು ಯಜ್ಞವೇದಿಯ ಮೇಲೆ ಸರ್ವಾಂಗಹೋಮವನ್ನು ಸಮರ್ಪಿಸುವುದಕ್ಕೆ ಆಜ್ಞಾಪಿಸಿದನು. ಹೀಗೆ ಸರ್ವಾಂಗಹೋಮ ಸಮರ್ಪಣೆ ಪ್ರಾರಂಭಿಸಿದೊಡನೆ ಇಸ್ರಾಯೇಲ್ ರಾಜನಾದ ದಾವೀದನ ವಾದ್ಯಗಳಿಂದ ಯೆಹೋವನನ್ನು ಭಜಿಸುವುದೂ, ತುತ್ತೂರಿ ಊದುವುದೂ ಆರಂಭವಾಯಿತು.
Så bød Esekias å ofre brennofferet på alteret; og på samme tid som ofringen begynte, begynte også sangen for Herren og trompetene å lyde, ledsaget av Davids, Israels konges instrumenter.
28 ೨೮ ಸರ್ವಾಂಗಹೋಮ ಸಮರ್ಪಣೆಯು ಮುಗಿಯುವವರೆಗೆ ಸರ್ವಸಮೂಹದವರು ಸಾಷ್ಟಾಂಗ ನಮಸ್ಕಾರ ಮಾಡುತ್ತಲೂ, ಗಾಯಕರೂ ಗಾನಮಾಡುತ್ತಲೂ, ತುತ್ತೂರಿ ಊದುವವರು ತುತ್ತೂರಿ ಊದುತ್ತಲೂ ಇದ್ದರು.
Og hele menigheten kastet sig ned mens sangen lød og trompetene klang, og alt dette varte til ofringen var til ende.
29 ೨೯ ಸರ್ವಾಂಗಹೋಮ ಸಮರ್ಪಣೆಯು ಮುಗಿದ ಮೇಲೆ ಅರಸನೂ ಅವನ ಜೊತೆಯಲ್ಲಿದ್ದವರೆಲ್ಲರೂ ಸಾಷ್ಟಾಂಗ ನಮಸ್ಕಾರ ಮಾಡಿದರು.
Da de var ferdig med ofringen, falt de på kne, både kongen og alle de som var der sammen med ham, og de tilbad.
30 ೩೦ ಅರಸನಾದ ಹಿಜ್ಕೀಯನೂ, ಪ್ರಭುಗಳೂ ದಾವೀದನ ಮತ್ತು ದರ್ಶಿಯಾದ ಆಸಾಫನ ಕೀರ್ತನೆಗಳಿಂದ ಯೆಹೋವನನ್ನು ಸ್ತುತಿಸಬೇಕೆಂದು ಲೇವಿಯರಿಗೆ ಆಜ್ಞಾಪಿಸಲು, ಅವರು ಉತ್ಸಾಹದಿಂದ ಸ್ತುತಿಸುತ್ತಾ ತಲೆಬಾಗಿ ನಮಸ್ಕರಿಸಿದರು.
Så bød kong Esekias og høvdingene at levittene skulde love Herren med Davids og seeren Asafs ord; og de lovet ham med fryd og bøide sig ned og tilbad.
31 ೩೧ ಆಮೇಲೆ ಹಿಜ್ಕೀಯನು ಸಮೂಹದವರಿಗೆ, “ನೀವು ಈಗ ಯೆಹೋವನಿಗೋಸ್ಕರ ನಿಮ್ಮನ್ನು ಪ್ರತಿಷ್ಠಿಸಿಕೊಂಡಿರುವಿಯಲ್ಲಾ; ಹತ್ತಿರ ಬಂದು ಯೆಹೋವನಿಗೆ ಸ್ತೋತ್ರಮಾಡಿ ಆತನ ಆಲಯಕ್ಕೋಸ್ಕರ ಸಮಾಧಾನ ಯಜ್ಞಗಳನ್ನೂ ಕೃತಜ್ಞತಾಯಜ್ಞಗಳನ್ನೂ ಸಮರ್ಪಿಸಿರಿ” ಎನ್ನಲು ಸಮೂಹದವರು ಸಮಾಧಾನಯಜ್ಞಗಳನ್ನೂ ಕೃತಜ್ಞತಾಯಜ್ಞಗಳನ್ನೂ ಸಮರ್ಪಿಸಿದ್ದಲ್ಲದೆ, ಅನೇಕರು ಸ್ವ ಇಚ್ಛೆಯಿಂದ ಸರ್ವಾಂಗಹೋಮಗಳನ್ನೂ ಸಮರ್ಪಿಸಿದರು.
Og Esekias tok til orde og sa: I har nu fylt eders hånd for Herren; kom nu hit og før frem slaktoffere og takkoffere til Herrens hus! Da kom menigheten med slaktoffere og takkoffere, og enhver hvis hjerte drev ham til det, kom med brennoffere.
32 ೩೨ ಸಮೂಹದವರು ಸರ್ವಾಂಗಹೋಮಕ್ಕೋಸ್ಕರ ತಂದೊಪ್ಪಿಸಿದ ಹೋರಿಗಳು ಎಪ್ಪತ್ತು, ಟಗರುಗಳು ನೂರು, ಕುರಿಮರಿಗಳು ಇನ್ನೂರು. ಇವೆಲ್ಲವು ಯೆಹೋವನಿಗೆ ಸರ್ವಾಂಗಹೋಮ ಸಮರ್ಪಣೆಗಾಗಿಯೇ ಮೀಸಲಾದವು.
Og tallet på de brennoffer som menigheten førte frem, var sytti okser, hundre værer og to hundre lam; alt dette var til brennoffer for Herren.
33 ೩೩ ದೇವರಿಗೆ ಕಾಣಿಕೆಯಾಗಿ ಕೊಡಲ್ಪಟ್ಟ ಹಿಂಡುಗಳಲ್ಲಿ ಹೋರಿಗಳು ಆರುನೂರು, ಕುರಿಗಳು ಮೂರು ಸಾವಿರ.
De andre offer som blev frembåret, var seks hundre stykker storfe og tre tusen stykker småfe.
34 ೩೪ ಯಾಜಕರು ಕೆಲವು ಮಂದಿಯಾದುದ್ದರಿಂದ ಸರ್ವಾಂಗಹೋಮದ ಪ್ರಾಣಿಗಳ ಚರ್ಮವನ್ನು ಸುಲಿಯುವುದು ಅವರಿಂದ ಆಗದೆ ಹೋಯಿತು. ಆದುದರಿಂದ ಮಿಕ್ಕ ಯಾಜಕರೂ ತಮ್ಮನ್ನು ಶುದ್ಧಿಪಡಿಸಿಕೊಳ್ಳುವವರೆಗೂ ಆ ಕೆಲಸವು ಮುಗಿಯುವ ತನಕ, ಅವರ ಬಂಧುಗಳಾದ ಲೇವಿಯರು ಅವರಿಗೆ ಸಹಾಯಮಾಡುತ್ತಿದ್ದರು. ತಮ್ಮನ್ನು ಶುದ್ಧಿಪಡಿಸಿಕೊಳ್ಳುವುದರಲ್ಲಿ ಯಾಜಕರಿಗಿಂತ ಲೇವಿಯರೇ ಹೆಚ್ಚು ಶ್ರದ್ಧೆಯುಳ್ಳವರಾಗಿದ್ದರು.
Men det var ikke prester nok til å flå alle brennofferne, derfor fikk de hjelp av sine brødre levittene til arbeidet var ferdig, og til de andre prester hadde helliget sig; for levittene hadde vist en redeligere vilje til å hellige sig enn prestene.
35 ೩೫ ಇದಲ್ಲದೆ ಯಾಜಕರೂ ಯೆಹೋವನಿಗೆ ಸಮರ್ಪಿಸಬೇಕಾಗಿದ್ದ ಸರ್ವಾಂಗಹೋಮ, ಸಮಾಧಾನ ಯಜ್ಞಗಳ ಕೊಬ್ಬು ಹಾಗು ಸರ್ವಾಂಗಹೋಮ ಸಂಬಂಧವಾದ ಪಾನದ್ರವ್ಯ ಇವು ಅಪಾರವಾಗಿದ್ದವು.
Det var også en mengde brennoffer, og dertil kom fettstykkene av takkofferne og de drikkoffer som hørte til brennofferne. Således kom tjenesten i Herrens hus i sin rette skikk.
36 ೩೬ ಹೀಗೆ ಯೆಹೋವನ ಆಲಯದ ಸೇವಾಕ್ರಮವು ಪುನಃ ಸ್ಥಾಪಿತವಾಯಿತು. ದೇವರು ತಾನೇ ತನ್ನ ಪ್ರಜೆಗಳಿಗಾಗಿ ಈ ಕಾರ್ಯವನ್ನು ನೆರವೇರಿಸಿದ್ದರಿಂದ, ಹಿಜ್ಕೀಯನೂ ಮತ್ತು ಎಲ್ಲಾ ಜನರೂ ಸಂತೋಷಿಸಿದರು.
Og Esekias og hele folket gledet sig over det som Gud hadde gjort for folket; for alt dette var skjedd med én gang.