< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 17 >
1 ೧ ಆಸನ ನಂತರ ಅವನ ಮಗನಾದ ಯೆಹೋಷಾಫಾಟನು ಅರಸನಾದನು. ಅವನು ಇಸ್ರಾಯೇಲರೆದುರು ಪ್ರಬಲನಾಗಿದ್ದನು.
आसाका छोरा यहोशापात तिनको ठाउँमा राजा भए । यहोशापातले इस्राएलको विरूद्ध आफैलाई मजबुत बनाए ।
2 ೨ ಅವನು ಯೆಹೂದದ ಕೋಟೆಕೊತ್ತಲುಗಳುಳ್ಳ ಎಲ್ಲಾ ಪಟ್ಟಣಗಳಲ್ಲೂ ಸೈನ್ಯವನ್ನಿರಿಸಿದನು. ಯೆಹೂದ ದೇಶದಲ್ಲಿಯೂ ತನ್ನ ತಂದೆಯಾದ ಆಸನು ವಶಪಡಿಸಿಕೊಂಡಿದ್ದ ಎಫ್ರಾಯೀಮ್ ರ ಪಟ್ಟಣಗಳಲ್ಲಿಯೂ ಅಧಿಕಾರಿಗಳನ್ನು ನೇಮಿಸಿದನು.
तिनले यहूदाका किल्ला भएका सबै सहरमा फौज राखे, र यहूदाभरि र तिनका पिता आसाले कब्जा गरेका एफ्राइमका सहरहरूमा रक्षाको निम्ति छाउनीहरू राखे ।
3 ೩ ಇವನು ಬಾಳ್ ದೇವರುಗಳನ್ನು ಅವಲಂಬಿಸದೆ, ತನ್ನ ಪೂರ್ವಿಕನಾದ ದಾವೀದನ ಮೊದಲಿನ ನಡತೆಯ ಪ್ರಕಾರ ನಡೆಯುತ್ತಿದ್ದದರಿಂದ ಯೆಹೋವನು ಯೆಹೋಷಾಫಾಟನ ಸಂಗಡ ಇದ್ದನು.
परमप्रभु यहोशापातसँग हुनुहुन्थ्यो किनकि तिनी आफ्ना पिता दाऊदले देखाएका उदाहरणअनुसार सुरु-सुरुमा हिंडे, र बालको खोजी गरेनन् ।
4 ೪ ಇವನು ಇಸ್ರಾಯೇಲರಂತೆ ನಡೆಯದೆ, ತನ್ನ ತಂದೆಯ ದೇವರ ಭಕ್ತನಾಗಿ ಆತನ ಆಜ್ಞೆಗಳನ್ನು ಅನುಸರಿಸಿದನು.
बरू, तिनले आफ्ना पिताका परमेश्वरमा भरोसा गरे, र तिनका आज्ञाहरूमा चले, इस्राएलका व्यवहारअनुसार होइन ।
5 ೫ ಆದುದರಿಂದ ಯೆಹೋವನು ಇವನ ರಾಜ್ಯಾಧಿಕಾರವನ್ನು ಸ್ಥಿರಪಡಿಸಿದನು; ಯೆಹೂದ್ಯರೆಲ್ಲರೂ ಯೆಹೋಷಾಫಾಟನಿಗೆ ಕಾಣಿಕೆ ಕೊಡುತ್ತಿದ್ದುದರಿಂದ ಇವನ ಧನ ಘನತೆಗಳು ಹೆಚ್ಚಾದವು.
यसरी परमप्रभुले तिनको हातमा शासन स्थापित गर्नुभयो । सारा यहूदाले यहोशापातलाई कर तिरे । तिनीसित धन-सम्पत्ति र ख्याति प्रशस्त थियो ।
6 ೬ ಇವನು ಯೆಹೋವನ ಮಾರ್ಗದಲ್ಲಿ ನಡೆದು ಧೈರ್ಯಗೊಂಡನು; ಇದಲ್ಲದೆ ಯೆಹೂದ ದೇಶದಲ್ಲಿದ್ದ ಪೂಜಾಸ್ಥಳಗಳನ್ನೂ, ಅಶೇರ ವಿಗ್ರಹ ಸ್ತಂಭಗಳನ್ನೂ ತೆಗೆದು ಹಾಕಿಸಿದನು.
तिनको हृदय परमप्रभुका मार्गमा समर्पित थिए । तिनले यहूदाबाट डाँडाका थानहरू र अशेरा देवीका मूर्तिहरू हटाउने काम पनि गरे ।
7 ೭ ಇವನು ತನ್ನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ತನ್ನ ಅಧಿಕಾರಿಗಳಾದ ಬೆನ್ಹೈಲ್, ಓಬದ್ಯ, ಜೆಕರ್ಯ ನೆತನೇಲ್, ಮಿಕಾಯ ಎಂಬ ಯಾಜಕರನ್ನೂ ಧರ್ಮೋಪದೇಶ ಮಾಡುವುದಕ್ಕೋಸ್ಕರ ಯೆಹೂದ ದೇಶದ ಪಟ್ಟಣಗಳಿಗೆ ಕಳುಹಿಸಿದನು.
आफ्नो राजकालको तेस्रो वर्षमा तिनले आफ्ना अधिकारीहरू बेन-हेल, ओबदिया, जकरिया, नतनेल र मीकायालाई यहूदाका सहरहरूमा शिक्षा दिनलाई पठाए ।
8 ೮ ಇವರ ಜೊತೆಯಲ್ಲಿ ಶೆಮಾಯ, ನೆತನ್ಯ, ಜೆಬದ್ಯ, ಅಸಾಹೇಲ್, ಶೆಮೀರಾಮೋತ್, ಯೆಹೋನಾತಾನ್, ಅದೋನೀಯ, ಟೋಬೀಯ, ಟೋಬದೋನೀಯ ಎಂಬ ಲೇವಿಯರು ಇದ್ದರು. ಎಲೀಷಾಮಾ, ಯೆಹೋರಾಮ್,
तिनीहरूसँग लेवीहरू शमायाह, नतन्याह, जबदियाह, असाहेल, शमीरामोत, यहोनातान, अदोनियाह, तोबियाह र तोब-अदोनियाह, र तिनीहरूसँग पुजारी एलीशामा र यहोराम थिए ।
9 ೯ ಇವರು ಯೆಹೋವನ ಧರ್ಮಶಾಸ್ತ್ರವನ್ನು ತೆಗೆದುಕೊಂಡು ಯೆಹೂದ ದೇಶದ ಪಟ್ಟಣದಲ್ಲೆಲ್ಲಾ ಸಂಚಾರ ಮಾಡಿ ಜನರಿಗೆ ಬೋಧಿಸಿದರು.
तिनीहरूले आफूसित परमप्रभुका व्यवस्थाको पुस्तक लिएर यहूदामा सिकाए । तिनीहरू यहूदाका सबै सहरमा गए र मानिसहरूका माझमा सिकाए ।
10 ೧೦ ಯೆಹೂದದ ಸುತ್ತಣ ದೇಶಗಳ ರಾಜ್ಯಗಳವರೆಗೆ ಯೆಹೋವನ ಭಯವಿದ್ದುದರಿಂದ ಅವರು ಯೆಹೋಷಾಫಾಟನೊಡನೆ ಯುದ್ಧಕ್ಕೆ ಬರಲಿಲ್ಲ.
यहूदाको वरिपरि भएका सबै राज्यहरूमा परमप्रभुको भय पर्यो, जसले गर्दा उनीहरूले यहोशापातको विरुद्धमा युद्ध गरेनन् ।
11 ೧೧ ಫಿಲಿಷ್ಟಿಯರಲ್ಲಿ ಕೆಲವರು ಯೆಹೋಷಾಫಾಟನಿಗೆ ಕಾಣಿಕೆಯನ್ನೂ, ಕಪ್ಪವನ್ನಾಗಿ ಬೆಳ್ಳಿಯನ್ನೂ ತಂದುಕೊಡುತ್ತಿದ್ದರು. ಅರಬಿಯರು ತಮ್ಮ ಪಶುಪ್ರಾಣಿಗಳ ಹಿಂಡುಗಳಿಂದ ಏಳು ಸಾವಿರದ ಏಳು ನೂರು ಟಗರುಗಳನ್ನೂ, ಏಳು ಸಾವಿರದ ಏಳು ನೂರು ಆಡುಗಳನ್ನೂ ಕೊಡುತ್ತಿದ್ದರು.
पलिश्तीमध्ये कसैले यहोशापातकहाँ करको रूपमा उपहारहरू र चाँदीको ल्याए । अरबीहरूले तिनका निम्ति पनि सात हजार सात सय भेडा र सात हजार सात सय बोकाहरू ल्याए ।
12 ೧೨ ಹೀಗೆ ಯೆಹೋಷಾಫಾಟನು ಅತ್ಯಧಿಕವಾಗಿ ಅಭಿವೃದ್ಧಿಹೊಂದಿ ಯೆಹೂದ ದೇಶದಲ್ಲಿ ಕೋಟೆಗಳನ್ನೂ ಮತ್ತು ಉಗ್ರಾಣದ ಪಟ್ಟಣಗಳನ್ನೂ ಕಟ್ಟಿಸಿದನು.
यहोशापात धेरै शक्तिशाली भए । तिनले यहूदामा किल्लाहरू र भण्डार राख्ने सहरहरू बनाए ।
13 ೧೩ ಯೆಹೂದದ ಪಟ್ಟಣಗಳಲ್ಲಿ ದವಸಧಾನ್ಯಗಳ ದೊಡ್ಡ ಮಳಿಗೆಗಳಿದ್ದವು. ಯೆರೂಸಲೇಮಿನಲ್ಲಿ ಯುದ್ಧವೀರರಾದ ಭಟರೂ ಇದ್ದರು.
यहूदाका सहरहरूमा तिनीसँग प्रशस्त खानेकुरा बलिया, र यरूशलेममा बलिया र शक्तिशाली मानिस सिपाहीहरू थिए ।
14 ೧೪ ಪೂರ್ವಿಕರ ಗೋತ್ರಗಳ ಪ್ರಕಾರ ಲೆಕ್ಕಿಸಲ್ಪಟ್ಟ ಗೋತ್ರ ಪ್ರಧಾನರು ಯಾರೆಂದರೆ: ಯೆಹೂದ್ಯರಲ್ಲಿ ಮೂರು ಲಕ್ಷ ಮಂದಿ ಯುದ್ಧವೀರರ ಅಧಿಪತಿಯಾದ ಅದ್ನ;
तिनीहरू आआफ्नो पिताका घरानाअनुसार सूचिकृत गरिएका दलहरू यी नै थिएः यहूदाबाट हजारका फौज पतिहरू, फौज पति अदनाह र तिनका साथमा तीन लाख योद्धाहरू ।
15 ೧೫ ಇವನ ತರುವಾಯ ಎರಡು ಲಕ್ಷದ ಎಂಭತ್ತು ಸಾವಿರ ಮಂದಿ ಯುದ್ಧವೀರರ ಅಧಿಪತಿಯಾದ ಯೆಹೋಹಾನಾನ್;
तिनीपछि फौज पति येहोहानान र तिनका साथमा दुई लाख असी हजार मानिसहरू।
16 ೧೬ ತರುವಾಯ ಎರಡು ಲಕ್ಷ ಮಂದಿ ಯುದ್ಧವೀರರೊಡನೆ ಸ್ವಇಚ್ಛೆಯಿಂದ ತನ್ನನ್ನೇ ಯೆಹೋವನಿಗೆ ಪ್ರತಿಷ್ಠಿಸಿಕೊಂಡ ಜಿಕ್ರಿಯನ ಮಗನಾದ ಅಮಸ್ಯ;
तिनीपछि जिक्रीका छोरा अमसिया, जसले स्वेच्छाले परमप्रभुका सेवाको निम्ति आफूलाई समर्पित गरे । अनि तिनीसँग दुई लाखको योद्धाहरू ।
17 ೧೭ ಬೆನ್ಯಾಮೀನ್ಯರಲ್ಲಿ ಬಿಲ್ಲುಗುರಾಣಿಗಳನ್ನು ಹಿಡಿದುಕೊಂಡ ಎರಡು ಲಕ್ಷ ಯುದ್ಧವೀರರ ಅಧಿಪತಿಯಾದ ಎಲ್ಯಾದ;
बेन्यामीनबाटः एक जना शक्तिशाली व्यक्ति एल्यादा, र तिनका साथमा धनु र ढालले सुसज्जित भएका दुई लाखको फौज ।
18 ೧೮ ಒಂದು ಲಕ್ಷದ ಎಂಭತ್ತುಸಾವಿರ ಮಂದಿ ಯುದ್ಧಸನ್ನದ್ಧ ಸೈನಿಕರ ನಾಯಕನಾದ ಯೆಹೋಜಾಬಾದ್ ಎಂಬುವವರು.
तिनीपछि यहोजाबाद, र तिनका साथमा युद्धको निम्ति तयार भएका एक लाख असी हजारको फौज ।
19 ೧೯ ಅರಸನಿಗೆ ತನ್ನ ಸನ್ನಿಧಿಯಲ್ಲಿ ಸೇವೆ ಮಾಡುತ್ತಿದ್ದ ಈ ಯೋಧರಲ್ಲದೆ, ಕೋಟೆ ಕೊತ್ತಲಗಳುಳ್ಳ ಯೆಹೂದ ಪಟ್ಟಣಗಳಲ್ಲಿಯೂ ಸೈನಿಕರಿದ್ದರು.
यिनीहरू यहूदाका किल्ला भएका सहरहरूमा राजाले राखेकाबाहेकका थिए ।