< ಸಮುವೇಲನು - ಪ್ರಥಮ ಭಾಗ 9 >
1 ೧ ಬೆನ್ಯಾಮೀನ್ ಕುಲದಲ್ಲಿ ಕೀಷನೆಂಬ ಒಬ್ಬ ಐಶ್ವರ್ಯವಂತ ಮತ್ತು ಪ್ರಭಾವಶಾಲಿಯಾದ ಮನುಷ್ಯನಿದ್ದನು. ಕೀಷನು ಅಬೀಯೇಲನ ಮಗ, ಅಬೀಯೇಲನು ಚೆರೋರನ ಮಗ, ಬೆಕೋರತನ ಮೊಮ್ಮಗ ಹಾಗೂ ಅಫೀಹನ ಮರಿಮಗನು.
१बन्यामीन वंशातील एक पुरुष होता त्याचे नांव कीश; तो अबीएलाचा मुलगा, तो सरोराचा मुलगा, तो बखोराचा मुलगा, तो अफियाचा मुलगा होता. तो बन्यामिनी पुरुष मोठा पराक्रमी होता.
2 ೨ ಕೀಷನಿಗೆ ಸೌಲನೆಂಬ ಹೆಸರುಳ್ಳ ಒಬ್ಬ ಮಗನಿದ್ದನು. ಈ ಸೌಲನು ಯೌವನಸ್ಥನೂ, ಎಲ್ಲಾ ಇಸ್ರಾಯೇಲ್ಯರಲ್ಲಿ ಅತಿಸುಂದರನೂ ಆಗಿದ್ದನು. ಜನರ ಗುಂಪಿನಲ್ಲಿ ಅವನ ಹೆಗಲೂ ತಲೆಯೂ ಕಾಣುವಷ್ಟು ಎತ್ತರವಾಗಿದ್ದನು.
२आणि त्याचा शौल नावाचा मुलगा तरुण व सुंदर होता. इस्राएलाच्या संतानामध्ये त्याच्याहून कोणी सुंदर नव्हता. सर्व लोक त्याच्या खांद्यास लागत इतका तो उंच होता.
3 ೩ ಒಂದು ದಿನ ಸೌಲನ ತಂದೆಯಾದ ಕೀಷನ ಕತ್ತೆಗಳು ತಪ್ಪಿಸಿಕೊಂಡು ಹೋದುದರಿಂದ ಅವನು ತನ್ನ ಮಗನಾದ ಸೌಲನಿಗೆ, “ನೀನೆದ್ದು ಆಳುಗಳಲ್ಲಿ ಒಬ್ಬನನ್ನು ಕರೆದುಕೊಂಡು ಕತ್ತೆಗಳನ್ನು ಹುಡುಕುವುದಕ್ಕೆ ಹೋಗು” ಎಂದು ಹೇಳಿದನು.
३आणि शौलाचा बाप कीश, याची गाढवे हरवली. तेव्हा कीश आपला मुलगा शौल याला म्हणाला, “आता तू ऊठ व चाकरांपैकी एकाला आपणाबरोबर घे; आणि जाऊन गाढवांचा शोध कर.”
4 ೪ ಅದರಂತೆಯೇ ಅವನು ಹೊರಟು ಎಫ್ರಾಯೀಮ್ ಪರ್ವತಪ್ರಾಂತ್ಯ, ಶಾಲಿಷಾ ದೇಶ ಇವುಗಳಲ್ಲಿ ಸಂಚರಿಸಿ ಹುಡುಕಿದರೂ ಅವು ಸಿಕ್ಕಲಿಲ್ಲ. ಶಾಲೀಮ್, ಬೆನ್ಯಾಮೀನ್ ಈ ಪ್ರಾಂತ್ಯಗಳಲ್ಲಿಯೂ ಸಿಕ್ಕಲಿಲ್ಲ.
४मग तो एफ्राईमाच्या डोंगराळ प्रदेशातून जाऊन शलीशा प्रांतातून गेला, परंतु ती सापडली नाहीत. मग ते शालीम प्रातांतून गेले, परंतु येथे ती त्यांना सापडली नाहीत. नंतर ते बन्यामीन्यांच्या प्रांतातून गेले परंतु त्यांना ती सापडली नाहीत.
5 ೫ ಕಡೆಗೆ ಅವರು ಚೂಫ್ ದೇಶಕ್ಕೆ ಬಂದಾಗ ಸೌಲನು ತನ್ನ ಆಳಿಗೆ, “ಹಿಂದಿರುಗಿ ಹೋಗೋಣ ನಡಿ; ನಮ್ಮ ತಂದೆಯು ಈಗ ಕತ್ತೆಗಳ ಚಿಂತೆ ಬಿಟ್ಟು ನಮ್ಮ ಚಿಂತೆಯಲ್ಲಿರಬಹುದು” ಅಂದನು
५ते सूफ प्रांतातून आल्यावर शौल आपल्या बरोबरच्या चाकराला म्हणाला, “चला आपण माघारे जाऊ, नाहीतर माझा बाप गाढवांची काळजी सोडून आमचीच काळजी करायला लागेल.”
6 ೬ ಆದರೆ ಆ ಆಳು, “ಇಗೋ, ಈ ಪಟ್ಟಣದಲ್ಲಿ ಗೌರವಸ್ಥನಾದ ಒಬ್ಬ ದೇವರ ಮನುಷ್ಯನಿರುತ್ತಾನೆ. ಅವನು ನುಡಿಯುವುದೆಲ್ಲಾ ನೆರವೇರುತ್ತದೆ; ಅಲ್ಲಿಗೆ ಹೋಗೋಣ; ಒಂದು ವೇಳೆ ಅವನು ನಾವು ಹೋಗತಕ್ಕ ಮಾರ್ಗವನ್ನು ತಿಳಿಸುವನು” ಎಂದನು.
६तेव्हा तो चाकर त्यास म्हणाला, “आता पाहा या नगरात देवाचा पुरुष आहे. तो पुरुष खूपच सन्मान्य आहे; जे तो सांगतो ते सर्व पूर्ण होतेच. तर आता आपण तेथे जाऊ; म्हणजे आपण कोणत्या मार्गाने पुढे जावे हे कदाचित तो आपल्याला सांगेल.”
7 ೭ ಅದಕ್ಕೆ ಸೌಲನು, “ನಾವು ಅವನ ಬಳಿಗೆ ಹೋಗಬೇಕಾದರೆ ಏನಾದರೂ ತೆಗೆದುಕೊಂಡು ಹೋಗಬೇಕು; ನಾವು ತಂದಿದ್ದ ಆಹಾರಸಾಮಗ್ರಿಯು ಮುಗಿದುಹೋಯಿತು. ಆ ದೇವರ ಮನುಷ್ಯನಿಗೆ ಕೊಡತಕ್ಕ ಕಾಣಿಕೆ ನಮ್ಮಲ್ಲಿಲ್ಲವಲ್ಲಾ; ಏನು ಕೊಡಬೇಕು?” ಎನ್ನಲು
७मग शौल आपल्या चाकराला म्हणाला, “पण पाहा आपण जर जाऊ तर त्या मनुष्यास आपण काय घेऊन जावे? कारण आपल्या झोळीतल्या भाकरी संपल्या आहेत आणि परमेश्वराच्या मनुष्यास भेट देण्यासाठी काही राहिले नाही. आपल्याजवळ काय आहे?”
8 ೮ ಆಳು, “ಇಗೋ, ನನ್ನ ಕೈಯಲ್ಲಿ ಒಂದು ಪಾವಲಿಯಿದೆ; ಇದನ್ನು ಅವನಿಗೆ ಕೊಡೋಣ; ಅವನು ನಮಗೆ ಮಾರ್ಗ ತೋರಿಸುವನು” ಎಂದು ಉತ್ತರಕೊಟ್ಟನು.
८तेव्हा चाकराने शौलाला उत्तर देऊन म्हटले, “पाहा माझ्या हातात पाव शेकेल रुपे आहे; ते मी परमेश्वराच्या मनुष्यास देईन, म्हणजे तो आमची वाट आम्हास सांगेल.”
9 ೯ (ಪೂರ್ವ ಕಾಲದಲ್ಲಿ ಇಸ್ರಾಯೇಲ್ಯರಲ್ಲಿ ಯಾವನಾದರೂ ದೈವೋತ್ತರ ಕೇಳಬೇಕಾದರೆ “ದೇವ ದರ್ಶಿಯ ಬಳಿಗೆ ಹೋಗೋಣ ಬನ್ನಿರಿ” ಎನ್ನುವರು. ಈ ಕಾಲದಲ್ಲಿ ಪ್ರವಾದಿಗಳೆನಿಸಿಕೊಳ್ಳುವವರನ್ನು, ಆ ಕಾಲದಲ್ಲಿ ದೇವದರ್ಶಿಗಳೆಂದು ಕರೆಯುತ್ತಿದ್ದರು.)
९(पूर्वी इस्राएलात कोणी परमेश्वराजवळ विचारायला जात असताना असे म्हणत, “चला आपण द्रष्ट्याकडे जाऊ.” कारण ज्याला आता भविष्यवादी म्हणतात त्यास पूर्वी द्रष्टा असे म्हणत.)
10 ೧೦ ಆಗ ಸೌಲನು ಆಳಿಗೆ, “ನೀನು ಹೇಳುವುದು ಒಳ್ಳೆಯದು; ಹೋಗೋಣ ನಡಿ” ಅಂದನು.
१०मग शौल चाकराला म्हणाला, “तुझे बोलणे ठीक आहे चल आपण जाऊ.” तेव्हा ज्या नगरात देवाचा पुरुष होता तेथे ते गेले.
11 ೧೧ ಅವರಿಬ್ಬರೂ ಗುಡ್ಡವನ್ನು ಹತ್ತಿ ದೇವರ ಮನುಷ್ಯನಿದ್ದ ಪಟ್ಟಣವನ್ನು ಸಮೀಪಿಸಲು ನೀರು ಸೇದುವುದಕ್ಕೋಸ್ಕರ ಊರ ಹೊರಗೆ ಬಂದಿದ್ದ ಸ್ತ್ರೀಯರನ್ನು ಕಂಡು, “ದರ್ಶಿಯು ಊರಲ್ಲಿದ್ದಾನೋ” ಎಂದು ಕೇಳಿದರು. ಅವರು, “ಇದ್ದಾನೆ;
११ते टेकडीवर नगराकडल्या चढणीवर जात होते तेव्हा मुली पाणी भरायला बाहेर जाताना त्यांना भेटल्या. ते त्यांना म्हणाले, “द्रष्टा (पाहणारा) येथे आहे काय?”
12 ೧೨ ಈ ಹೊತ್ತು ನಮ್ಮ ಊರಿನವರು ಗುಡ್ಡದ ಮೇಲೆ ಯಜ್ಞವನ್ನು ಅರ್ಪಿಸುತ್ತಿರುವುದರಿಂದ ಅವನು ಈಗಲೇ ಇಲ್ಲಿಗೆ ಬಂದಿರುವನು; ಬೇಗನೆ ಹೋಗಿರಿ.
१२त्यांनी त्यांना उत्तर देऊन म्हटले, “तो आहे; पाहा तुमच्या पुढेच तो निघाला आहे. लवकर जा. तो नगरात आला आहे कारण आज लोकांस उंचस्थानी यज्ञ करायचा आहे.
13 ೧೩ ಅವನು ಯಜ್ಞಭೋಜನಕ್ಕೋಸ್ಕರ ಗುಡ್ಡಕ್ಕೆ ಹೋಗುವ ಮೊದಲು ನೀವು ಊರೊಳಕ್ಕೆ ಹೋದರೆ ಸಿಕ್ಕುವನು. ಅವನು ಅಲ್ಲಿಗೆ ಹೋಗುವ ವರೆಗೆ ಜನರು ಊಟಮಾಡುವುದಿಲ್ಲ. ಅವನು ಹೋಗಿ ಯಜ್ಞಾಹಾರವನ್ನು ಆಶೀರ್ವದಿಸುತ್ತಾನೆ. ಅನಂತರ ಕರೆಯಲ್ಪಟ್ಟವರು ಊಟಮಾಡುತ್ತಾರೆ. ಈಗಲೇ ಹೋಗಿರಿ. ಅವನು ಸಿಕ್ಕುವ ಸಮಯ ಇದೇ” ಅಂದರು.
१३तुम्ही तो जेवायला उंचस्थानी चढून जाण्याच्या आधी, नगरात जातानाच तुमची आणि त्याची भेट होईल. तो येण्याच्या अगोदर लोक जेवणार नाहीत, कारण तो यज्ञाला आशीर्वाद देतो मग बोलावलेले जेवतात. तर आता तुम्ही वर जा, कारण या वेळेस त्याची भेट होईल.”
14 ೧೪ ಅವರು ಮೇಲೆ ಹತ್ತಿ ಊರಿಗೆ ಬಂದಾಗ ಸಮುವೇಲನು ಗುಡ್ಡಕ್ಕೆ ಹೋಗುವುದಕ್ಕೋಸ್ಕರ ಹೊರಟು ಅವರೆದುರಿಗೆ ಬಂದನು.
१४मग ते नगराकडे चढून गेले आणि ते नगरात जाऊन पोहचतात, तो त्यांनी पाहीले की, शमुवेल उंचस्थानी चढून जायला निघताना त्याच्याकडे येत आहे.
15 ೧೫ ಸೌಲನು ಬರುವುದಕ್ಕೆ ಒಂದು ದಿನ ಮುಂದಾಗಿ ಯೆಹೋವನು ಸಮುವೇಲನಿಗೆ,
१५शौलाच्या येण्यापूर्वी एक दिवस अगोदर, परमेश्वराने शमुवेलाला प्रकट केले होते की:
16 ೧೬ “ನಾಳೆ ಇಷ್ಟು ಹೊತ್ತಿಗೆ ಬೆನ್ಯಾಮೀನ್ ದೇಶದ ಒಬ್ಬನನ್ನು ನಿನ್ನ ಬಳಿಗೆ ಬರಮಾಡುವೆನು. ನೀನು ಅವನನ್ನು ಇಸ್ರಾಯೇಲರ ನಾಯಕನನ್ನಾಗಿ ಅಭಿಷೇಕಿಸಬೇಕು. ಅವನು ನನ್ನ ಜನರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಿ ಕಾಪಾಡುವನು. ಅವರ ಕೂಗು ನನಗೆ ಮುಟ್ಟಿತು; ಅವರನ್ನು ಕಟಾಕ್ಷಿಸಿದ್ದೇನೆ” ಎಂದು ತಿಳಿಸಿದ್ದನು.
१६“उद्या सुमारे या वेळेस बन्यामिनी प्रांतातून एक पुरुष मी तुझ्याकडे पाठवीन, आणि माझे लोक इस्राएल यांचा राजा होण्यास त्यास तू अभिषेक कर. तो पलिष्ट्यांच्या हातून माझ्या लोकांस सोडवील; कारण मी आपल्या लोकांकडे पाहिले आहे आणि त्यांची आरोळी माझ्याकडे आली आहे.”
17 ೧೭ ಸಮುವೇಲನು ಸೌಲನನ್ನು ಕಂಡಾಗ ಯೆಹೋವನು ಅವನಿಗೆ, “ನಾನು ತಿಳಿಸಿದ್ದ ಮನುಷ್ಯನು ಇವನೇ; ಇವನೇ ನನ್ನ ಪ್ರಜೆಯನ್ನು ಆಳತಕ್ಕವನು” ಎಂದು ಸೂಚಿಸಿದನು.
१७शमुवेलाने शौलाला पाहिले, तेव्हा परमेश्वर त्यास म्हणाला, “पाहा ज्या मनुष्याविषयी मी तुला सांगितले तो हाच आहे! हा माझ्या लोकांवर राज्य करील.”
18 ೧೮ ಊರಬಾಗಿಲಿಗೆ ಬಂದ ಸೌಲನು ತನ್ನ ಎದುರಿನಲ್ಲಿ ಸಮುವೇಲನನ್ನು ನೋಡಿ, “ದರ್ಶಿಯ ಮನೆ ಎಲ್ಲಿದೆ ಎಂಬುದನ್ನು ದಯವಿಟ್ಟು ತಿಳಿಸುವಿಯೋ?” ಎನ್ನಲು ಸಮುವೇಲನು, “ನಾನೇ ಆ ದರ್ಶಿ.
१८मग शौल शमुवेलाजवळ वेशीत येऊन म्हणाला, “मी तुम्हास विनंती करतो द्रष्याचे (पाहणाऱ्याचे) घर कोठे आहे ते मला सांगा.”
19 ೧೯ ನೀನು ನನ್ನ ಜೊತೆಯಲ್ಲಿ ಗುಡ್ಡಕ್ಕೆ ಬಾ; ನೀವು ಈ ಹೊತ್ತು ನನ್ನ ಸಂಗಡ ಊಟಮಾಡಬೇಕು. ನಿನ್ನ ಚಿಂತೆಯನ್ನೆಲ್ಲಾ ಪರಿಹರಿಸಿ ನಾಳೆ ಬೆಳಿಗ್ಗೆ ನಿನ್ನನ್ನು ಕಳುಹಿಸಿಕೊಡುವೆನು.
१९तेव्हा शमुवेलाने शौलाला उत्तर देऊन म्हटले, “द्रष्टा (पाहणारा) मीच आहे. माझ्या पुढे उंचस्थानी वर चला, म्हणजे आज तुम्ही माझ्याबरोबर जेवाल. तुझ्या मनात जे आहे ते सर्व सांगून सकाळी मी तुला जाऊ देईन.
20 ೨೦ ಮೂರು ದಿನಗಳ ಹಿಂದೆ ತಪ್ಪಿಸಿಕೊಂಡ ನಿನ್ನ ಕತ್ತೆಗಳಿಗೋಸ್ಕರ ಚಿಂತೆಮಾಡಬೇಡ; ಅವು ಸಿಕ್ಕಿವೆ. ಇಸ್ರಾಯೇಲರ ಅಭಿಲಾಷೆಯೆಲ್ಲಾ ಯಾರ ಮೇಲೆ ಇರುವುದು, ನಿನ್ನ ಮತ್ತು ನಿನ್ನ ತಂದೆಯ ಕುಟುಂಬದವರಿಗೂ ಸಲ್ಲುವುದು” ಎಂದು ಹೇಳಿದನು.
२०आणि तुझी जी गाढवे तीन दिवसांपूर्वी हरवली होती त्यांची तू काळजी करू नको, कारण ती सांपडली आहेत. आणि इस्राएलाच्या सर्व अभिलाषा कोणाकडे आहेत? तुझ्याकडे व तुझ्या वडिलाच्या सर्व घराण्याकडे की नाही?”
21 ೨೧ ಅದಕ್ಕೆ ಸೌಲನು, “ನಾನು ಇಸ್ರಾಯೇಲ್ ಕುಲಗಳಲ್ಲಿ ಅಲ್ಪವಾಗಿರುವ ಬೆನ್ಯಾಮೀನ್ ಕುಲದವನಲ್ಲವೋ? ಬೆನ್ಯಾಮೀನ್ಯರ ಎಲ್ಲಾ ಕುಟುಂಬಗಳಲ್ಲಿ ನನ್ನದು ಕನಿಷ್ಠವಾದದ್ದು; ನನಗೆ ಇಂಥ ದೊಡ್ಡ ಮಾತನ್ನು ಯಾಕೆ ಹೇಳುತ್ತೀ?” ಎಂದನು.
२१तेव्हा शौलाने उत्तर देऊन म्हटले, “मी बन्यामीनी, इस्राएलाच्या वंशामध्ये सर्वाहून धाकट्या वंशातला नाही काय? आणि बन्यामिनाच्या वंशामध्ये सर्व घराण्यांपेक्षां माझे घराणे लहान आहे की नाही? तर तुम्ही माझ्याशी असे कसे बोलता?”
22 ೨೨ ಸಮುವೇಲನು ಸೌಲನನ್ನೂ ಅವನ ಸೇವಕನನ್ನೂ ಮಂಟಪಕ್ಕೆ ಕರೆದುಕೊಂಡು ಹೋದನು; ಭೋಜನಕ್ಕೆ ಬಂದಿದ್ದ ಸುಮಾರು ಮೂವತ್ತು ಜನರಲ್ಲಿ ಅವರಿಬ್ಬರಿಗೂ ಮುಖ್ಯಸ್ಥಾನವನ್ನು ಕೊಟ್ಟನು. ಅನಂತರ ಸಮುವೇಲನು ಅಡಿಗೆಯವನಿಗೆ,
२२मग शमुवेलाने शौलाला व त्याच्या चाकराला बरोबर घेऊन भोजनशाळेत आणले. आणि आमंत्रितांमध्ये त्यांना मुख्य ठिकाणी बसवले; ते सुमारे तीसजण होते.
23 ೨೩ “ನಾನು ನಿನಗೆ ಹೇಳಿ ಪ್ರತ್ಯೇಕವಾಗಿ ಇಡಿಸಿದ್ದ ಮಾಂಸಭಾಗವನ್ನು ತಂದಿಡು” ಅಂದನು.
२३तेव्हा शमुवेल आचाऱ्याला म्हणाला, “जो वाटा मी तुला दिला होता व ज्याविषयी मी तुला म्हटले होते की, हा तू आपल्याजवळ वेगळा ठेव, तो आण.”
24 ೨೪ ಅವನು ಒಂದು ತೊಡೆಯ ಮಾಂಸವನ್ನೂ ಅದರ ಸಂಗಡ ಇದ್ದದ್ದನ್ನೂ ತಂದು ಸೌಲನ ಮುಂದಿಟ್ಟನು. ಆಗ ಸಮುವೇಲನು, “ಇಗೋ, ಇದು ನಿನಗೋಸ್ಕರ ಪ್ರತ್ಯೇಕಿಸಿದ್ದು; ಇದನ್ನು ತಿನ್ನು, ಯಾಕೆಂದರೆ ಜನರನ್ನು ಭೋಜನಕ್ಕೆ ಕರೆದಾಗಿನಿಂದ ಇದು ನಿನಗೋಸ್ಕರವಾಗಿಯೇ ಇಡಲ್ಪಟ್ಟಿತ್ತು” ಎಂದು ಸೌಲನಿಗೆ ಹೇಳಿದನು. ಸೌಲನು ಆ ದಿನ ಸಮುವೇಲನ ಸಂಗಡ ಊಟಮಾಡಿದನು.
२४तेव्हा स्वयंपाक्याने फरा व त्यावर जे होते ते घेऊन शौलापुढे ठेवले. मग शमुवेल म्हणाला, “पाहा जे राखून ठेवले होते! ते खा, कारण नेमलेल्या वेळेपर्यंत ते तुझ्यासाठी राखून ठेवलेले आहे.” कारण आता तू म्हणू शकतोस की, मी लोकांस बोलावले आहे. अशा रीतीने, त्या दिवशी शौल शमुवेलाबरोबर जेवला.
25 ೨೫ ಅವರು ಗುಡ್ಡದಿಂದಿಳಿದು ಪಟ್ಟಣಕ್ಕೆ ಬಂದನಂತರ ಸಮುವೇಲನು ಸೌಲನನ್ನು ತನ್ನ ಮನೆಯ ಮಾಳಿಗೆಯ ಮೇಲೆ ಕರೆದುಕೊಂಡು ಹೋಗಿ ಅವನೊಡನೆ ಮಾತನಾಡಿದನು.
२५ते उंचस्थानावरून खाली नगरात आल्यावर त्याने घराच्या धाब्यावर शौलाशी संभाषण केले.
26 ೨೬ ಮರುದಿನ ಬೆಳಿಗ್ಗೆ ಸಮುವೇಲನು ಮಾಳಿಗೆಯ ಮೇಲೆ ಮಲಗಿದ್ದ ಸೌಲನನ್ನು, “ಏಳು, ನಿನ್ನನ್ನು ಕಳುಹಿಸಿ ಕೊಡುತ್ತೇನೆ” ಎಂದು ಎಬ್ಬಿಸಲು ಅವನು ಎದ್ದನು. ತರುವಾಯ ಅವರಿಬ್ಬರೂ ಹೊರಟು ಊರ ಹೊರಗೆ ಬಂದಾಗ
२६ते पहाटेस उठले व उजाडण्याच्या वेळेस असे झाले की, शमुवेलाने शौलाला घराच्या धाब्यावर बोलावून म्हटले, “मी तुला पाठवून द्यावे म्हणून ऊठ. तेव्हा शौल ऊठला, मग तो व शमुवेल असे दोघेजण बाहेर गेले.”
27 ೨೭ ಸಮುವೇಲನು ಸೌಲನಿಗೆ, “ನಿನ್ನ ಸೇವಕನನ್ನು ಮುಂದೆ ಕಳುಹಿಸಿ ನೀನು ಇಲ್ಲಿ ಸ್ವಲ್ಪ ನಿಲ್ಲು; ನಿನಗೆ ತಿಳಿಸಬೇಕಾದ ದೈವೋಕ್ತಿ ಒಂದುಂಟು” ಎಂದನು.
२७ते खाली नगराच्या शेवटास जात असता, शमुवेल शौलाला म्हणाला, “चाकराला आपल्यापुढे चालायला सांग, परंतु मी तुला देवाचे वचन ऐकावावे म्हणून तू येथे थोडा थांब. आणि चाकर पुढे गेला.”