< ಸಮುವೇಲನು - ಪ್ರಥಮ ಭಾಗ 31 >
1 ೧ ಫಿಲಿಷ್ಟಿಯರು ಇಸ್ರಾಯೇಲರೊಡನೆ ಯುದ್ಧಮಾಡಿದರು. ಇಸ್ರಾಯೇಲರು ಅವರಿಂದ ಅಪಜಯಹೊಂದಿ ಗಿಲ್ಬೋವ ಬೆಟ್ಟದಲ್ಲಿ ಹತರಾದರು.
Afei, Filistifo no ko tiaa Israel. Israelfo no guanee wɔ wɔn anim, na wokunkum pii wɔ Gilboa bepɔw so.
2 ೨ ಫಿಲಿಷ್ಟಿಯರು ಸೌಲನನ್ನೂ ಅವನ ಮಕ್ಕಳನ್ನೂ ಬಿಡದೆ ಹಿಂದಟ್ಟಿ, ಅವನ ಮಕ್ಕಳಾದ ಯೋನಾತಾನನನ್ನೂ ಅಬೀನಾದಾಬನನ್ನೂ ಮಲ್ಕೀಷೂವನನ್ನೂ ಕೊಂದರು.
Filistifo no kɔɔ Saulo ne ne mmabarima so, kunkum wɔn mu baasa a ɛyɛ Yonatan, Abinadab ne Malki-Sua.
3 ೩ ಸೌಲನಿದ್ದ ಕಡೆಯಲ್ಲಿ ಯುದ್ಧವು ಬಹು ಘೋರವಾಗಿತ್ತು. ಬಿಲ್ಲುಗಾರನು ಅವನಿಗೆ ಗುರಿಯಿಟ್ಟನು.
Ɔko no mu yɛɛ den wɔ baabi a na Saulo wɔ hɔ. Filistifo agyantowfo no bɛn no, na wopiraa no kɛse pa ara.
4 ೪ ಆದುದರಿಂದ ಸೌಲನು ಬಹು ಭೀತನಾಗಿ ತನ್ನ ಆಯುಧವಾಹಕನಿಗೆ “ನಿನ್ನ ಕತ್ತಿಯನ್ನು ಹಿರಿದು ನನ್ನನ್ನು ತಿವಿದು ಕೊಲ್ಲು. ಇಲ್ಲವಾದರೆ ಸುನ್ನತಿಯಿಲ್ಲದ ಈ ಜನರು ಬಂದು ನನ್ನನ್ನು ತಿವಿದು, ಅಪಕೀರ್ತಿಯನ್ನು ಉಂಟುಮಾಡಾರು” ಎಂದು ಹೇಳಲು ಅವನು ಹೆದರಿ, “ನಾನು ಕೊಲ್ಲಲಾರೆ” ಎಂದನು. ಆದುದರಿಂದ ಸೌಲನು ತಾನೇ ಕತ್ತಿಯನ್ನು ಹಿರಿದು ಅದರ ಮೇಲೆ ಬಿದ್ದನು.
Saulo fi yaw mu ka kyerɛɛ nʼakodekurafo no se, “Twe wʼafoa no, na fa wɔ me, na wɔn a wontwaa twetia no amfa wɔn afoa ammɛwɔ me, angu mʼanim ase.” Na nʼakodekurafo no suroo sɛ ɔbɛyɛ saa. Enti Saulo twee ɔno ankasa afoa sinaa ne ho wɔ so.
5 ೫ ಸೌಲನು ಮರಣ ಹೊಂದಿರುವುದನ್ನು ಅವನ ಆಯುಧವಾಹಕನು ಕಂಡು ತಾನೂ ತನ್ನ ಕತ್ತಿಯ ಮೇಲೆ ಬಿದ್ದು ಅಲ್ಲಿಯೇ ಸತ್ತನು.
Bere a nʼakodekurafo no huu sɛ wawu no, ɔno nso sinaa ne ho wɔ nʼankasa afoa no so, na owu kaa ne ho.
6 ೬ ಹೀಗೆ ಸೌಲನೂ ಅವನ ಮೂರು ಮಂದಿ ಮಕ್ಕಳೂ, ಅವನ ಆಯುಧವಾಹಕನು, ಎಲ್ಲಾ ಆಳುಗಳೂ ಅದೇ ದಿನದಲ್ಲಿ ಸತ್ತರು.
Enti Saulo ne ne mma mmarima baasa, nʼakodekurafo ne nʼakofo nyinaa totɔɔ saa da no.
7 ೭ ಇಸ್ರಾಯೇಲರ ಭಟರು ಸೋತುಹೋದರು. ಸೌಲನೂ ಅವನ ಮಕ್ಕಳೂ ಸತ್ತರು ಎಂಬ ವರ್ತಮಾನವನ್ನು ತಗ್ಗಿನ ಆಚೆಯಲ್ಲಿಯೂ ಯೊರ್ದನಿನ ಆಚೆಯಲ್ಲಿಯೂ ವಾಸವಾಗಿದ್ದ ಇಸ್ರಾಯೇಲರು ಕೇಳಿ ತಮ್ಮ ಪಟ್ಟಣಗಳನ್ನು ಬಿಟ್ಟು ಓಡಿಹೋದರು. ಫಿಲಿಷ್ಟಿಯರು ಬಂದು ಅವುಗಳಲ್ಲಿ ವಾಸಮಾಡಿದರು.
Bere a Israelfo a wɔwɔ Yesreel bon no fa baabi ne Yordan agya no huu sɛ Israel asraafo no adi nkogu, na Saulo nso ne ne mmabarima no nso atotɔ no, wogyaw wɔn nkurow hɔ guanee. Na Filistifo no bɛtenaa hɔ.
8 ೮ ಮರುದಿನ ಬೆಳಿಗ್ಗೆ ಫಿಲಿಷ್ಟಿಯರು ಸತ್ತವರ ಒಡವೆಗಳನ್ನು ಸುಲಿದುಕೊಳ್ಳುವುದಕ್ಕೆ ಬಂದಾಗ, ಸೌಲನೂ ಅವನ ಮೂರು ಮಂದಿ ಮಕ್ಕಳೂ ಗಿಲ್ಬೋವ ಬೆಟ್ಟದಲ್ಲಿ ಸತ್ತುಬಿದ್ದಿರುವುದನ್ನು ಕಂಡು
Ade kyee a Filistifo koyiyii atɔfo no ho no, wohuu Saulo ne ne mmabarima baasa no amu wɔ Gilboa bepɔw so.
9 ೯ ಸೌಲನ ತಲೆಯನ್ನು ಕಡಿದು ಅವನ ಆಯುಧಗಳನ್ನು ತೆಗೆದುಕೊಂಡನು. ಅವುಗಳನ್ನು ತಮ್ಮ ದೇಶದ ಎಲ್ಲಾ ಕಡೆಗೂ ಕಳುಹಿಸಿ, ತಮ್ಮ ಎಲ್ಲ ಜನರಿಗೂ ದೇವಸ್ಥಾನಗಳಿಗೂ ಜಯವಾರ್ತೆಯನ್ನು ಮುಟ್ಟಿಸಿದರು.
Enti wotwaa Saulo ti, yiyii nʼakode nyinaa. Afei, wɔbɔɔ Saulo wu no dawuru wɔ wɔn abosomfi, ne ɔman no mu nyinaa.
10 ೧೦ ಅವನ ಆಯುಧಗಳನ್ನು ಅಷ್ಟೋರೆತ್ ದೇವತೆಯ ಗುಡಿಯಲ್ಲಿಟ್ಟರು. ಅವನ ಶವವನ್ನು ಬೇತ್ಷೆಯಾನಿನ ಕೋಟೆ ಗೋಡೆಗೆ ನೇತುಹಾಕಿದರು.
Wɔde nʼakode no koguu Astoret nsɔree so, na wɔkyekyeree nʼamu no fam kuropɔn Bet-San fasu ho.
11 ೧೧ ಫಿಲಿಷ್ಟಿಯರು ಸೌಲನಿಗೆ ಏನೇನು ಮಾಡಿದರೆಂಬ ವರ್ತಮಾನ ಯಾಬೆಷ್ ಗಿಲ್ಯಾದಿನವರಿಗೆ ಮುಟ್ಟಿದಾಗ
Na Yabes Gileadfo tee nea Filistifo ayɛ Saulo no,
12 ೧೨ ಅವರಲ್ಲಿದ್ದ ಶೂರರೆಲ್ಲರೂ ಹೊರಟು, ರಾತ್ರಿಯೆಲ್ಲಾ ನಡೆದುಹೋಗಿ, ಸೌಲನ ಮತ್ತು ಅವನ ಮಕ್ಕಳ ಶವಗಳನ್ನು ಬೇತ್ಷೆಯಾನಿನ ಗೋಡೆಯಿಂದ ಇಳಿಸಿ, ಯಾಬೇಷಿಗೆ ತೆಗೆದುಕೊಂಡು ಬಂದು ಅಲ್ಲಿ ಅವುಗಳನ್ನು ಸುಟ್ಟುಬಿಟ್ಟರು.
wɔn akofo twaa kwan anadwo mu no nyinaa kɔɔ Bet-San kɔfaa Saulo ne ne mmabarima baasa no amu fii ɔfasu no ho. Wɔde kɔɔ Yabes bɛhyew wɔn.
13 ೧೩ ಅವರ ಎಲುಬುಗಳನ್ನು ಯಾಬೇಷಿನಲ್ಲಿದ್ದ ಪಿಚುಲ ವೃಕ್ಷದ ಕೆಳಗೆ ಸಮಾಧಿಮಾಡಿ, ಏಳು ದಿನ ಉಪವಾಸ ಮಾಡಿದರು.
Afei, wɔfaa wɔn nnompe kɔkoraa no odum dua no ase wɔ Yabes, na wodii mmuada nnanson.