< ಸಮುವೇಲನು - ಪ್ರಥಮ ಭಾಗ 22 >
1 ೧ ದಾವೀದನು ಅಕೀಷ ರಾಜನಿಂದ ತಪ್ಪಿಸಿಕೊಂಡು ಅದುಲ್ಲಾಮ್ ಎಂಬ ಗವಿಗೆ ಹೋದನು. ಈ ವರ್ತಮಾನವು ಅವನ ಅಣ್ಣಂದಿರಿಗೂ, ಬೇರೆ ಎಲ್ಲಾ ಸಂಬಂಧಿಕರಿಗೂ ಮುಟ್ಟಲಾಗಿ, ಅವರೂ ಬಂದು ಅವನನ್ನು ಸೇರಿಕೊಂಡರು.
HELE o Davida mai laila aku, a holo aku la ma ke ana o Adulama: a lohe ae la kona mau hoahanau a me na mea a pau o ka hale o kona makuakane, hele lakou io na la ilaila.
2 ೨ ಇದಲ್ಲದೆ ಕುಗ್ಗಿದವರೂ, ಸಾಲಗಾರರೂ, ಮನನೊಂದವರೂ, ಆಗಿರುವ ಸರ್ವಜನರೂ ಬಂದು ಅವನನ್ನು ಆಶ್ರಯಿಸಿಕೊಳ್ಳಲು, ಅವನು ಸುಮಾರು ನಾನೂರು ಜನರಿಗೆ ನಾಯಕನಾದನು.
O na kanaka a pau i popilikia, a me na kanaka aie a pau, a me na kanaka a pau i eha ma ka naau, hoakoakoa ae la lakou io na la: a lilo ia i luna no lakou: eha haneri kanaka paha me ia.
3 ೩ ಅನಂತರ ದಾವೀದನು ತನ್ನ ತಂದೆತಾಯಿಗಳನ್ನು ಮೋವಾಬ್ ದೇಶದ ಮಿಚ್ಪೆ ಎಂಬಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿಯ ಅರಸನಿಗೆ, “ದೇವರು ನನಗೆ ಮಾರ್ಗತೋರಿಸುವವರೆಗೆ ನನ್ನ ತಂದೆತಾಯಿಗಳು ನಿನ್ನ ಬಳಿಯಲ್ಲಿರುವುದಕ್ಕೆ ಅಪ್ಪಣೆಯಾಗಬೇಕು” ಎಂದು ಬೇಡಿಕೊಂಡು, ಅವರನ್ನು ಅವನ ಬಳಿಯಲ್ಲಿ ಬಿಟ್ಟನು.
A hele o Davida mai laila aku a Mizepa ma Moaba: i aku la ia i ke alii o Moaba, Ke noi aku nei au, e ae mai oe i ko'u makuakane a me ko'u makuwahine e hele mai e noho me oe, a ike au i ka mea a ke Akua e hana mai ai no'u.
4 ೪ ದಾವೀದನು ದುರ್ಗದಲ್ಲಿದ್ದ ಕಾಲವೆಲ್ಲಾ ಅವನ ತಂದೆತಾಯಿಗಳು ಈ ಅರಸನ ಬಳಿಯಲ್ಲಿ ವಾಸವಾಗಿದ್ದರು.
A lawe mai oia ia laua i ke alii o Moaba, a noho laua me ia i na la a pau a Davida i noho ai maluna o ka puukaua.
5 ೫ ಗಾದ್ ಪ್ರವಾದಿಯು ದಾವೀದನಿಗೆ, “ನೀನು ಈ ದುರ್ಗದಲ್ಲಿರಬಾರದು, ಇದನ್ನು ಬಿಟ್ಟು ಯೆಹೂದ ದೇಶಕ್ಕೆ ಹೋಗು” ಎಂದು ಹೇಳಿದ್ದರಿಂದ ಅವನು ಹೆರೆತ್ ಅರಣ್ಯಕ್ಕೆ ಹೋದನು.
Olelo aku la ke kaula a Gada ia Davida, Mai noho oe ma ka puukaua; e hele aku, a hiki oe ma ka aina o ka Iuda. A hele aku la o Davida a hiki ma ka ululaau o Hareta.
6 ೬ ಒಂದು ದಿನ ಸೌಲನು ತನ್ನ ಎಲ್ಲಾ ಪರಿವಾರದವರ ನಡುವೆ ಕೈಯಲ್ಲಿ ಬರ್ಜಿಯನ್ನು ಹಿಡಿದುಕೊಂಡು, ಗಿಬೆಯ ಗುಡ್ಡದ ಪಿಚುಲ ವೃಕ್ಷದ ಕೆಳಗೆ ಕುಳಿತುಕೊಂಡಿರಲು ದಾವೀದನೂ ಅವನ ಜನರೂ ಅಡಗಿಕೊಂಡಿರುವ ಸ್ಥಳವು ತಿಳಿದುಬಂದಿದೆ ಎಂಬ ಸುದ್ದಿಯು ಅವನಿಗೆ ಮುಟ್ಟಿತು.
A lohe ae la o Saula, ua ikeia o Davida, a me na kanaka me ia, (e noho ana o Saula ma Gibea malalo o ka laau ma kahi kiekie, a ma kona lima kana ihe, a ua hoonohoia kana mau kauwa a puni ona; )
7 ೭ ಆಗ ಅವನು ತನ್ನ ಸುತ್ತಲೂ ನಿಂತಿದ್ದ ಪರಿವಾರದವರಿಗೆ, “ಬೆನ್ಯಾಮೀನನ ಮಕ್ಕಳೇ ಕೇಳಿರಿ. ನೀವೆಲ್ಲರೂ ನನಗೆ ಒಳಸಂಚು ಮಾಡುವುದೇಕೆ? ಇಷಯನ ಮಗನು ನಿಮ್ಮೆಲ್ಲರಿಗೂ ಹೊಲಗಳನ್ನು, ದ್ರಾಕ್ಷಿತೋಟಗಳನ್ನು ಕೊಡುವನೋ? ಎಲ್ಲರನ್ನು ಸಹಸ್ರಾಧಿಪತಿಗಳನ್ನಾಗಲಿ, ಶತಾಧಿಪತಿಗಳನ್ನಾಗಲಿ ಮಾಡುವನೋ?
Olelo aku la o Saula i kana poe kauwa e ku ana a puni ona, E hoolohe ano, e na Beniamina; e haawi anei ke keiki a Iese i na mahinaai, a me na pawaina na oukou a pau, a e hoolilo ia oukou a pau i luna tausani, a i luna haneri;
8 ೮ ನನ್ನ ಮಗನು ಇಷಯನ ಮಗನೊಡನೆ ಒಡಂಬಡಿಕೆ ಮಾಡಿಕೊಂಡದ್ದನ್ನು ನಿಮ್ಮಲ್ಲಿ ಒಬ್ಬನಾದರೂ ನನಗೆ ತಿಳಿಸಲಿಲ್ಲವಲ್ಲಾ. ನನ್ನ ಸೇವಕನು ನನಗೆ ವಿರೋಧವಾಗಿ ಒಳಸಂಚುಮಾಡುವ ಹಾಗೆ ನನ್ನ ಮಗನೇ, ಅವನನ್ನು ಎಬ್ಬಿಸಿದ್ದಾನೆಂಬುದನ್ನು ಒಬ್ಬನಾದರೂ ನನಗೆ ಯಾಕೆ ತಿಳಿಸಲಿಲ್ಲ? ನೀವು ನನ್ನ ಚಿಂತೆಯನ್ನೇ ಬಿಟ್ಟಿದ್ದೀರಿ” ಅಂದನು
I kipi ai oukou a pau ia'u, aohe mea e hoike mai ia'u, ua hana ka'u keiki me ke keiki a Iese i kuikahi, aole kekahi o oukou e manao mai ia'u, aole hoi e hoike mai ia'u, ua hoala ka'u keiki i ka'u kauwa e ku e ia'u, e hoohalua, e like me ia i keia la?
9 ೯ ಆಗ ಸೌಲನ ಸೇವಕರ ಬಳಿಯಲ್ಲಿ ನಿಂತಿದ್ದ ಎದೋಮ್ಯನಾದ ದೋಯೇಗನು, “ಇಷಯನ ಮಗನು ನೋಬದಲ್ಲಿರುವ ಅಹೀಟೂಬನ ಮಗನಾದ ಅಹೀಮೆಲೆಕನ ಬಳಿಗೆ ಬಂದದ್ದನ್ನು ಕಂಡೆನು.
Alaila olelo mai o Doega no Edoma, oia ka luna o na kauwa a Saula, i mai la, Ua ike au i ke keiki a Iese e hele ana ma Noba io Ahimeleka la ke keiki a Ahituba.
10 ೧೦ ಅವನು ಇವನಿಗೆ ಯೆಹೋವನ ಚಿತ್ತವನ್ನು ತಿಳಿಸಿ, ಆಹಾರವನ್ನೂ, ಫಿಲಿಷ್ಟಿಯನಾದ ಗೊಲ್ಯಾತನ ಕತ್ತಿಯನ್ನೂ ಕೊಟ್ಟನು” ಎಂದು ಹೇಳಿದನು.
A ua ninau aku oia ia Iehova nona, a haawi aku i ka ai nana, a haawi aku hoi ia ia i ka pahikaua a Golia ke kanaka no ko Pilisetia.
11 ೧೧ ಕೂಡಲೆ ಸೌಲನು ಅಹೀಟೂಬನ ಮಗನೂ ಯಾಜಕನೂ ಆಗಿದ್ದ ಅಹೀಮೆಲೆಕನನ್ನೂ, ಅವನ ಕುಟುಂಬಕ್ಕೆ ಸೇರಿದ ನೋಬದ ಬೇರೆ ಎಲ್ಲಾ ಯಾಜಕರೊಡನೆ ಕರೆದುಕೊಂಡು ಬರುವಂತೆ ಕಳುಹಿಸಿದನು. ಅವರೆಲ್ಲರೂ ಅರಸನ ಸನ್ನಿಧಿಗೆ ಬರಲು,
Alaila hoouna aku ke alii e hea ia Ahimeleka, ke kahuna, ke keiki a Ahituba, a me ko ka hale a pau o kona makuakane, na kahuna ma Noba; a hele mai lakou a pau i ke alii.
12 ೧೨ ಸೌಲನು, “ಅಹೀಟೂಬನ ಮಗನೇ ಕೇಳು” ಅಂದನು. ಅದಕ್ಕೆ ಅವನು, “ಒಡೆಯಾ ಅಪ್ಪಣೆಯಾಗಲಿ” ಎಂದು ಉತ್ತರಕೊಟ್ಟನು.
I aku la o Saula, Ano e hoolohe mai oe, e ke keiki a Ahituba. I mai la kela, Eia wau, e kuu haku.
13 ೧೩ ಆಗ ಸೌಲನು ಅವನಿಗೆ, “ನೀನು ನನಗೆ ವಿರೋಧವಾಗಿ ಇಷಯನ ಮಗನೊಡನೆ ಒಳಸಂಚುಮಾಡಿದ್ದೇಕೆ? ಅವನು ನನಗೆ ವಿರೋಧವಾಗಿ ಎದ್ದು ನನ್ನ ಜೀವಕ್ಕಾಗಿ ಹೊಂಚುಹಾಕುವಂತೆ ನೀನು ಅವನಿಗೆ ರೊಟ್ಟಿಕತ್ತಿಗಳನ್ನು ಕೊಟ್ಟು, ದೈವೋತ್ತರವನ್ನು ತಿಳಿಸಿದ್ದೇಕೆ?” ಎಂದು ಕೇಳಿದನು
I aku la o Saula ia ia, No ke aha la i kipi ai olua ia'u o oe a me ke keiki a Iese, i kou haawi ana ia ia i ka berena, a me ka pahikaua, a ua ninau oe i ke Akua nona, i ku e mai ia ia'u e halua, e like me ia i keia la.
14 ೧೪ ಅವನು, “ನಿನ್ನ ಎಲ್ಲಾ ಸೇವಕರಲ್ಲಿ ಅರಸನ ಅಳಿಯನಾಗಿರುವ ದಾವೀದನಂತೆ ನಂಬಿಗಸ್ತನಾದವನು ಯಾವನಿದ್ದಾನೆ? ಅವನು ನಿನ್ನ ಆಲೋಚಕರಲ್ಲೊಬ್ಬನು, ನಿನ್ನ ಮನೆಯಲ್ಲಿ ಗೌರವಸ್ಥನೂ ಆಗಿದ್ದನಲ್ಲವೇ?
Olelo mai la o Ahimeleka i ke alii, i mai la, Owai la ka mea o kau poe kauwa i malama pono e like me Davida, ka hunonakane a ke alii, a ua hele ia i kau i ana aku, a ua manao nui ia ma kou hale?
15 ೧೫ ನಾನು ಅವನಿಗೋಸ್ಕರ ದೇವರ ಸನ್ನಿಧಿಯಲ್ಲಿ ವಿಚಾರಮಾಡಿದ್ದು ಇದೇ ಮೊದಲನೆಯ ಸಾರಿಯೋ? ಇದು ನನಗೆ ದೂರವಾಗಿರಲಿ. ಅರಸನು ತನ್ನ ಸೇವಕರ ಮೇಲೆ ಅವನ ಮನೆಯವರ ಮೇಲೆ ಇಂಥ ಮಾತನ್ನು ಹೊರಿಸಬಾರದು. ಈ ವಿಷಯದಲ್ಲಿ ನಿನ್ನ ಸೇವಕನಿಗೆ ಸ್ವಲ್ಪವೂ ಗೊತ್ತಿರಲಿಲ್ಲ” ಎಂದು ಉತ್ತರ ಕೊಟ್ಟನು.
O kuu hoomaka no anei ia e ninau aku i ke Akua nona? Aole ia'u ia mea: mai hooili ke alii ia mea maluna o kana kauwa, maluna hoi o ko ka hale a pau o ko'u makuakane; no ka mea, aole i ike kau kauwa i ka mea uuku, aole hoi i ka mea nui o keia mea.
16 ೧೬ ಆಗ ಅರಸನು ಅವನಿಗೆ, “ಅಹೀಮೆಲೆಕನೇ ನೀನೂ ನಿನ್ನ ಮನೆಯವರೂ ಸಾಯಲೇ ಬೇಕು” ಎಂದು ಹೇಳಿ ತನ್ನ ಬಳಿಯಲ್ಲಿದ್ದ
I aku la ke alii, E make io auanei oe, e Ahimeleka, o oe a me ko ka hale a pau o kou makuakane.
17 ೧೭ ಸಿಪಾಯಿಗಳಿಗೆ, “ನೀವು ಯೆಹೋವನ ಈ ಯಾಜಕರನ್ನು ಕೊಲ್ಲಿರಿ. ದಾವೀದನು ಓಡಿಹೋದದ್ದು ಗೊತ್ತಿದ್ದರೂ ನನಗೆ ತಿಳಿಸದೇ ಅವನಿಗೆ ಸಹಾಯ ಮಾಡಿದ್ದಾರೆ” ಎಂದು ಹೇಳಿ ಅವರನ್ನು ಕೊಲ್ಲಲು ಆಜ್ಞಾಪಿಸಿದನು. ಆದರೆ ಅರಸನ ಸಿಪಾಯಿಗಳು ಯಾಜಕರ ಮೇಲೆ ಕೈಹಾಕುವುದಕ್ಕೆ ಮನಸ್ಸು ಮಾಡಲಿಲ್ಲ.
Olelo aku la ke alii i ka poe kiai e ku ana a puni ona, E huli ae oukou a e pepehi i na kahuna no Iehova; no ka mea, ua hui pu ko lakou lima me Davida, a ua ike lakou i kona mahuka ana, aole hoi i hoike mai ia'u Aka, aole makemake na kauwa a ke alii e kau aku i ko lakou lima e lele maluna o na kahuna no Iehova.
18 ೧೮ ಆದ್ದರಿಂದ ಸೌಲನು ಎದೋಮ್ಯನಾದ ದೋಯೇಗನಿಗೆ, “ನೀನು ಹೋಗಿ ಅವರನ್ನು ಕೊಲ್ಲು” ಎಂದು ಆಜ್ಞಾಪಿಸಲು, ಅವನು ನಾರು ಬಟ್ಟೆಯ ಎಪೋದನ್ನು ಧರಿಸಿಕೊಂಡಿದ್ದ ಎಂಭತ್ತೈದು ಯಾಜಕರನ್ನು ಆ ದಿನ ಕೊಂದುಹಾಕಿದನು.
I aku la ke alii ia Doega, E huli ae oe, a lele maluna o ua kahuna. A huli ae la o Doega, ka Edoma, a lele maluna o na kahuna, a pepehi iho la ia la i na kanaka he kanawalukumamalima i pulikiia i ka epoda olona.
19 ೧೯ ಅನಂತರ ಅವನು ಯಾಜಕರ ಪಟ್ಟಣವಾದ ನೋಬಕ್ಕೆ ಹೋಗಿ ಅಲ್ಲಿನ ಸ್ತ್ರೀಪುರುಷರನ್ನೂ, ಶಿಶುಬಾಲಕರನ್ನೂ ದನ, ಕುರಿ, ಕತ್ತೆಗಳನ್ನು, ಕತ್ತಿಯಿಂದ ಸಂಹರಿಸಿದನು.
A luku aku la oia ia Noba ke kulanakauhale o na kahuna me ka maka o ka pahikaua; o na kanaka, o na wahine, o na kamalii, o na mea omo waiu, o na bipi, o na hoki, a me na hipa, me ka maka o ka pahikaua.
20 ೨೦ ಅಹೀಟೂಬನ ಮಗನಾದ ಅಹೀಮೆಲೆಕನ ಮಕ್ಕಳಲ್ಲೊಬ್ಬನಾದ ಎಬ್ಯಾತಾರನೆಂಬುವನು ತಪ್ಪಿಸಿಕೊಂಡು ದಾವೀದನ ಬಳಿಗೆ ಓಡಿಬಂದು,
A o kekahi o na keiki a Ahimeleka, ke keiki a Ahituba, o Abiatara kona inoa, pakele aku la ia, a holo aku mahope o Davida.
21 ೨೧ ಸೌಲನು ಯೆಹೋವನ ಯಾಜಕರನ್ನು ಕೊಲ್ಲಿಸಿದ ಸಂಗತಿಯನ್ನು ಅವನಿಗೆ ತಿಳಿಸಿದನು.
A hoike aku la o Abiatara ia Davida i ka Saula pepehi ana i na kahuna o Iehova.
22 ೨೨ ದಾವೀದನು ಎದೋಮ್ಯನಾದ ದೋಯೇಗನನ್ನು, “ನಾನು ಅಲ್ಲಿ ಕಂಡಾಗಲೇ ಇವನು ಸೌಲನಿಗೆ ಹೇಗೂ ಈ ಸಂಗತಿಯನ್ನು ತಿಳಿಸುವನೆಂದು ತಿಳಿದುಕೊಂಡೆನು. ನಿನ್ನ ಸಂಬಂಧಿಕರ ಸಾವಿಗೆ ನಾನೇ ಕಾರಣನಾದೆನಲ್ಲಾ.
I mai la o Davida i Abiatara, Ia la, i ka noho ana o Doega ka Edoma malaila, ike no wau, e hai aku ia ia Saula: owau no ka mea i make ai o na mea a pau o ka hale o kou makuakane.
23 ೨೩ ನೀನಾದರೋ ಹೆದರದೆ ನನ್ನ ಸಂಗಡ ಇರು. ನನ್ನ ಪ್ರಾಣವನ್ನು ತೆಗೆಯಬೇಕೆಂದಿರುವವನೇ ನಿನ್ನ ಪ್ರಾಣವನ್ನೂ ತೆಗೆಯಬೇಕೆಂದಿರುತ್ತಾನೆ. ನೀನು ನನ್ನ ಜೊತೆಯಲ್ಲಿರುವುದಾದರೆ ಸುರಕ್ಷಿತನಾಗಿರುವಿ” ಎಂದನು.
E noho pu oe me au, mai makau: no ka mea, o ka mea nana e imi mai i kuu ola, oia ke imi mai i kou ola: aka, me a'u e maluhia oe.