< ಸಮುವೇಲನು - ಪ್ರಥಮ ಭಾಗ 20 >
1 ೧ ದಾವೀದನು ರಾಮದ ನಯೋತಿನಿಂದ ತಪ್ಪಿಸಿಕೊಂಡು ಯೋನಾತಾನನ ಬಳಿಗೆ ಬಂದು ಅವನಿಗೆ, “ನಿನ್ನ ತಂದೆಯು ನನ್ನ ಪ್ರಾಣವನ್ನು ತೆಗೆಯಬೇಕೆಂದಿರುತ್ತಾನಲ್ಲ, ನಾನೇನು ಮಾಡಿದೆನು? ನನ್ನ ಅಪರಾಧವೇನು? ನಾನು ಅವನಿಗೆ ಮಾಡಿದ ದ್ರೋಹವು ಯಾವುದು?” ಎನ್ನಲು,
大卫从拉玛的拿约逃跑,来到约拿单那里,对他说:“我做了什么?有什么罪孽呢?在你父亲面前犯了什么罪,他竟寻索我的性命呢?”
2 ೨ ಯೋನಾತಾನನು ಅವನಿಗೆ, “ಇದು ಆಗಲೇಬಾರದು, ನಿನಗೆ ಮರಣವಾಗಕೂಡದು. ನನ್ನ ತಂದೆಯು ಅಲ್ಪಕಾರ್ಯವನ್ನಾಗಲಿ, ಮಹಾಕಾರ್ಯವನ್ನಾಗಲಿ ನನಗೆ ತಿಳಿಸದೇ ಮಾಡುವುದಿಲ್ಲ. ಈ ಕಾರ್ಯವನ್ನು ನನಗೆ ಹೇಗೆ ಮರೆಮಾಡಲು ಸಾಧ್ಯ?” ಎಂದು ಹೇಳಿದನು.
约拿单回答说:“断然不是!你必不致死。我父做事,无论大小,没有不叫我知道的。怎么独有这事隐瞒我呢?决不如此。”
3 ೩ ಅದಕ್ಕೆ ದಾವೀದನು, “ನಿನ್ನ ಕಣ್ಣುಮುಂದೆ ನನಗೆ ದಯೆ ದೊರಕುತ್ತದೆಂಬುದನ್ನು ನಿನ್ನ ತಂದೆಯು ಬಲ್ಲನು. ಆದ್ದರಿಂದ ಇದನ್ನು ಯೋನಾತಾನನಿಗೆ ತಿಳಿಸಿದರೆ ಅವನಿಗೆ ದುಃಖವಾಗುವುದೆಂದು ಮರೆಮಾಡುತ್ತಾನೆ. ನಿನ್ನ ಜೀವದಾಣೆ, ಯೆಹೋವನ ಆಣೆ, ನನಗೂ ಮರಣಕ್ಕೂ ಒಂದು ಗೇಣು ಅಂತರವಿದೆ” ಎಂದು ಖಂಡಿತವಾಗಿ ಹೇಳಿದನು.
大卫又起誓说:“你父亲准知我在你眼前蒙恩。他心里说,不如不叫约拿单知道,恐怕他愁烦。我指着永生的耶和华,又敢在你面前起誓,我离死不过一步。”
4 ೪ ಆಗ ಯೋನಾತಾನನು ದಾವೀದನಿಗೆ, “ನಾನು ನಿನಗೋಸ್ಕರ ಮಾಡಬೇಕಾದದ್ದನ್ನು ಹೇಳು ಮಾಡುತ್ತೇನೆ” ಅಂದನು.
约拿单对大卫说:“你心里所求的,我必为你成就。”
5 ೫ ಅದಕ್ಕೆ ದಾವೀದನು, “ನಾಳೆ ಅಮಾವಾಸ್ಯೆ. ನಾನು ಅರಸನ ಪಂಕ್ತಿಯಲ್ಲಿ ಊಟಮಾಡಬೇಕಾಗಿರುವುದು. ನೀನು ಅಪ್ಪಣೆಕೊಟ್ಟರೆ ನಾನು ಈಗಲೇ ಹೋಗಿ ಮೂರನೆಯ ದಿನ ಸಾಯಂಕಾಲದವರೆಗೆ ಹೊಲದಲ್ಲಿ ಅಡಗಿಕೊಂಡಿರುವೆನು.
大卫对约拿单说:“明日是初一,我当与王同席,求你容我去藏在田野,直到第三日晚上。
6 ೬ ನಿನ್ನ ತಂದೆಯು ನನ್ನನ್ನು ಕುರಿತು ವಿಚಾರ ಮಾಡಿದರೆ, ನೀನು, ‘ದಾವೀದನು ತನ್ನ ಊರಾದ ಬೇತ್ಲೆಹೇಮಿಗೆ ಹೋಗಿ ಬರುವುದಕ್ಕೆ ಅಪ್ಪಣೆಯಾಗಬೇಕೆಂದು ನನ್ನನ್ನು ಬಹಳವಾಗಿ ಬೇಡಿಕೊಂಡನು. ಅವನ ಗೋತ್ರದವರು ಅಲ್ಲಿ ವಾರ್ಷಿಕ ಯಜ್ಞಮಾಡುತ್ತಾರೆ’ ಎಂದು ಹೇಳು.
你父亲若见我不在席上,你就说:‘大卫切求我许他回本城伯利恒去,因为他全家在那里献年祭。’
7 ೭ ಅವನು ಆಗಲಿ ಅಂದರೆ ನಿನ್ನ ಸೇವಕನಾದ ನಾನು ಸುರಕ್ಷಿತನಾಗಿರುವೆನು. ಸಿಟ್ಟುಮಾಡಿದರೆ ಅವನಿಂದ ನನಗೆ ಕೇಡು ಸಿದ್ಧವಾಗಿದೆ ಎಂದು ತಿಳಿದುಕೋ, ಸೇವಕನ ಮೇಲೆ ದಯೆಯಿರಲಿ.
你父亲若说好,仆人就平安了;他若发怒,你就知道他决意要害我。
8 ೮ ನೀನು ಯೆಹೋವನ ಸನ್ನಿಧಿಯಲ್ಲಿ ನನ್ನೊಡನೆ ಒಡಂಬಡಿಕೆ ಮಾಡಿಕೊಂಡಿಯಲ್ಲಾ, ನಾನು ಅಪರಾಧಿಯಾಗಿದ್ದರೆ ನನ್ನನ್ನು ನಿನ್ನ ತಂದೆಗೆ ಒಪ್ಪಿಸುವುದೇಕೆ? ನೀನೇ ನನ್ನನ್ನು ಕೊಂದುಹಾಕು” ಎಂದು ಹೇಳಿದನು.
求你施恩与仆人,因你在耶和华面前曾与仆人结盟。我若有罪,不如你自己杀我,何必将我交给你父亲呢?”
9 ೯ ಯೋನಾತಾನನು ಅವನಿಗೆ, “ಇದು ಆಗಲೇ ಬಾರದು, ನಿನಗೆ ನನ್ನ ತಂದೆಯಿಂದ ಕೇಡು ಸಿದ್ಧವಾಗಿದ್ದರೆ ಅದನ್ನು ನಿನಗೆ ತಿಳಿಸದಿರುತ್ತೇನೆಯೇ?” ಅಂದನು.
约拿单说:“断无此事!我若知道我父亲决意害你,我岂不告诉你呢?”
10 ೧೦ ದಾವೀದನು, “ನಿನ್ನ ತಂದೆಯು ಬಿರುನುಡಿಯಿಂದ ಉತ್ತರಕೊಟ್ಟರೆ ಅದನ್ನು ಯಾರ ಮುಖಾಂತರವಾಗಿ ತಿಳಿಸುವಿ?” ಎಂದು ಅವನನ್ನು ಕೇಳಲು
大卫对约拿单说:“你父亲若用厉言回答你,谁来告诉我呢?”
11 ೧೧ ಯೋನಾತಾನನು ಅವನಿಗೆ, “ನಾವು ಹೊಲಕ್ಕೆ ಹೋಗೋಣ ಬಾ” ಎಂದು ಹೇಳಿದನು.
约拿单对大卫说:“你我且往田野去。”二人就往田野去了。
12 ೧೨ ಅವರಿಬ್ಬರೂ ಹೊಲಕ್ಕೆ ಹೋದ ಮೇಲೆ ಯೋನಾತಾನನು ದಾವೀದನಿಗೆ, “ಇಸ್ರಾಯೇಲರ ದೇವರಾದ ಯೆಹೋವನೇ ಸಾಕ್ಷಿ, ನಾನು ನಾಳೆ ಇಲ್ಲವೆ ನಾಡಿದ್ದು ನಿನ್ನ ವಿಷಯದಲ್ಲಿ ನನ್ನ ತಂದೆಯೊಡನೆ ಮಾತನಾಡಿ, ನಿನ್ನ ಮೇಲೆ ಅವನಿಗೆ ದಯೆ ಉಂಟೆಂದು ಗೊತ್ತಾದರೆ ಕೂಡಲೆ ನಿನಗೆ ತಿಳಿಸುವೆನು.
约拿单对大卫说:“愿耶和华—以色列的 神为证。明日约在这时候,或第三日,我探我父亲的意思,若向你有好意,我岂不打发人告诉你吗?
13 ೧೩ ನನ್ನ ತಂದೆಯು ನಿನಗೆ ಕೇಡುಮಾಡುವ ಮನಸ್ಸುಳ್ಳವನಾಗಿದ್ದಾನೆಂದು ಗೊತ್ತಾದರೆ, ಅದನ್ನೂ ನಿನಗೆ ತಿಳಿಸಿ, ನೀನು ತಪ್ಪಿಸಿಕೊಂಡು ಸುರಕ್ಷಿತವಾಗುವ ಹಾಗೆ ನಿನ್ನನ್ನು ಕಳುಹಿಸಿಬಿಡುವೆನು. ಹಾಗೆ ಮಾಡದಿದ್ದರೆ ಯೆಹೋವನು ನನಗೆ ಬೇಕಾದದ್ದನ್ನು ಮಾಡಲಿ, ಆತನು ನನ್ನ ತಂದೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡಲೂ ಇರಲಿ.
我父亲若有意害你,我不告诉你使你平平安安地走,愿耶和华重重地降罚与我。愿耶和华与你同在,如同从前与我父亲同在一样。
14 ೧೪ ನೀನು ಯೆಹೋವನನ್ನು ನೆನಸಿ ನನ್ನ ಜೀವಮಾನದಲ್ಲೆಲ್ಲಾ ನನಗೆ ಕೃಪೆತೋರಿಸು.
你要照耶和华的慈爱恩待我,不但我活着的时候免我死亡,
15 ೧೫ ನಾನು ಸತ್ತನಂತರ ನನ್ನ ಮನೆಯ ಮೇಲೆಯೂ ಶಾಶ್ವತವಾದ ನಿನ್ನ ದಯೆಯಿರಲಿ. ಯೆಹೋವನು ನಿನ್ನ ಎಲ್ಲಾ ಶತ್ರುಗಳನ್ನು ಭೂಮಿಯಿಂದ ತೆಗೆದು ಹಾಕಿದರೂ ಅದು ನನ್ನ ಮನೆಯಿಂದ ಅಗಲದಿರಲಿ.
就是我死后,耶和华从地上剪除你仇敌的时候,你也永不可向我家绝了恩惠。”
16 ೧೬ ಅಗಲಿದರೆ ಯೆಹೋವನೇ ಶತ್ರುಗಳ ಕೈಯಿಂದ ದಾವೀದನಿಗೆ ಮುಯ್ಯಿ ತೀರಿಸಲಿ” ಎಂದು ಹೇಳಿ ಅವರ ಮನೆಯವರೊಡನೆ ಒಡಂಬಡಿಕೆ ಮಾಡಿಕೊಂಡು,
于是约拿单与大卫家结盟,说:“愿耶和华借大卫的仇敌追讨背约的罪。”
17 ೧೭ ತಾನು ದಾವೀದನನ್ನು ಸ್ವಂತ ಪ್ರಾಣದಂತೆ ಪ್ರೀತಿಸುತ್ತಿದ್ದುದರಿಂದ ಆ ಪ್ರೀತಿಸಾಕ್ಷಿಯಾಗಿ ಅವನಿಂದ ಪ್ರಮಾಣಮಾಡಿಸಿದನು.
约拿单因爱大卫如同爱自己的性命,就使他再起誓。
18 ೧೮ ಯೋನಾತಾನನು ದಾವೀದನಿಗೆ, “ನಾಳೆ ಅಮಾವಾಸ್ಯೆ, ನಿನ್ನ ಸ್ಥಳವು ಬರಿದಾಗಿರುವುದನ್ನು ಅರಸನು ಕಂಡು ನಿನ್ನ ವಿಷಯವಾಗಿ ವಿಚಾರಿಸುವನು.
约拿单对他说:“明日是初一,你的座位空设,人必理会你不在那里。
19 ೧೯ ನೀನು ಮೂರನೆಯ ದಿನದಲ್ಲಿ ಮೊದಲು ಅಡಗಿಕೊಂಡಿದ್ದ ಸ್ಥಳಕ್ಕೆ ಬೇಗ ಬಂದು ಅಲ್ಲಿನ ಕಲ್ಲುಕುಪ್ಪೆಯ ಬಳಿಯಲ್ಲಿ ಕುಳಿತುಕೊಂಡಿರು.
你等三日,就要速速下去,到你从前遇事所藏的地方,在以色磐石那里等候。
20 ೨೦ ನಾನು ಗುರಿಯಿಟ್ಟವನೋ ಎಂಬಂತೆ ಅದರ ಕಡೆಗೆ ಮೂರು ಬಾಣಗಳನ್ನು ಎಸೆದು ಕೂಡಲೇ ಅವುಗಳನ್ನು
我要向磐石旁边射三箭,如同射箭靶一样。
21 ೨೧ ತರುವುದಕ್ಕಾಗಿ ನನ್ನ ಆಳುಗಳನ್ನು ಕಳುಹಿಸುವೆನು. ನಾನು ಅವನಿಗೆ, ‘ಬಾಣಗಳು ಈಚೆ ಬಿದ್ದಿರುತ್ತವೆ ಅವುಗಳನ್ನು ತೆಗೆದುಕೊಂಡು ಬಾ’ ಎಂದು ಹೇಳಿದರೆ ನೀನು ಬಾ ಯೆಹೋವನ ಆಣೆ ಯಾವ ಕೇಡು ಸಂಭವಿಸದೆ ಸುರಕ್ಷಿತನಾಗಿರುವಿ.
我要打发童子,说:‘去把箭找来。’我若对童子说:‘箭在后头,把箭拿来’,你就可以回来;我指着永生的耶和华起誓,你必平安无事。
22 ೨೨ ಆದರೆ, ‘ಬಾಣಗಳು ಆಚೆ ಬಿದ್ದಿರುತ್ತವೆ’ ಎಂದು ಹೇಳಿದರೆ ಹೊರಟುಹೋಗು, ನೀನು ಹೋಗುವುದೇ ಯೆಹೋವನ ಚಿತ್ತವಾಗಿದೆ.
我若对童子说:‘箭在前头’,你就要去,因为是耶和华打发你去的。
23 ೨೩ ನಮ್ಮಿಬ್ಬರ ಒಡಂಬಡಿಕೆಗೆ ಯೆಹೋವನೇ ನಿತ್ಯ ಸಾಕ್ಷಿಯಾಗಿರುವನು” ಅಂದನು.
至于你我今日所说的话,有耶和华在你我中间为证,直到永远。”
24 ೨೪ ದಾವೀದನು ಹೊಲದಲ್ಲಿ ಅಡಗಿಕೊಂಡನು.
大卫就去藏在田野。到了初一日,王坐席要吃饭。
25 ೨೫ ಅರಸನು ಅಮಾವಾಸ್ಯೆ ದಿನ, ಪದ್ದತಿಯ ಪ್ರಕಾರ ಗೋಡೆಯ ಬಳಿಯಲ್ಲಿರುವ ತನ್ನ ಆಸನದ ಮೇಲೆ ಭೋಜನಕ್ಕೆ ಕುಳಿತುಕೊಂಡನು. ಅರಸನ ಎದುರಾಗಿ ಯೋನಾತಾನನೂ, ಅರಸನ ಪಕ್ಕದಲ್ಲಿ ಅಬ್ನೇರನೂ ಕುಳಿತುಕೊಂಡನು. ಸೌಲನು ದಾವೀದನ ಸ್ಥಳವು ಬರಿದಾಗಿರುವುದನ್ನು ಕಂಡರೂ,
王照常坐在靠墙的位上,约拿单侍立,押尼珥坐在扫罗旁边,大卫的座位空设。
26 ೨೬ ಆ ದಿನ ಅವನ ವಿಷಯ ಏನೂ ಹೇಳಲಿಲ್ಲ. ಅವನಿಗೆ ಏನಾದರೂ ಸಂಭವಿಸಿರಬೇಕು. ಅವನು ಹೊಲೆಯಾಗಿದ್ದಾನು, ತನ್ನನ್ನು ಇನ್ನು ಶುದ್ಧಪಡಿಸಿಕೊಳ್ಳದೆ ಇರಬಹುದು ಅಂದುಕೊಂಡನು.
然而这日扫罗没有说什么,他想大卫遇事,偶染不洁,他必定是不洁。
27 ೨೭ ಮರುದಿನದಲ್ಲಿಯೂ, ಅಂದರೆ ತಿಂಗಳಿನ ಎರಡನೆಯ ದಿನದಲ್ಲಿಯೂ ದಾವೀದನ ಸ್ಥಾನ ಬರಿದಾಗಿದ್ದರಿಂದ ಸೌಲನು, “ಇಷಯನ ಮಗನು ನಿನ್ನೆಯೂ, ಈ ಹೊತ್ತೂ ಭೋಜನಕ್ಕೆ ಯಾಕೆ ಬರಲಿಲ್ಲ?” ಎಂದು ತನ್ನ ಮಗನಾದ ಯೋನಾತಾನನನ್ನು ಕೇಳಿದನು.
初二日大卫的座位还空设。扫罗问他儿子约拿单说:“耶西的儿子为何昨日、今日没有来吃饭呢?”
28 ೨೮ ಅದಕ್ಕೆ ಯೋನಾತಾನನು, “ದಾವೀದನು ‘ಬೇತ್ಲೆಹೇಮಿನಲ್ಲಿ ನಮ್ಮ ಗೋತ್ರದವರು ಯಜ್ಞಮಾಡುತ್ತಾರೆ
约拿单回答扫罗说:“大卫切求我容他往伯利恒去。
29 ೨೯ ನನ್ನ ಅಣ್ಣನು ಅದಕ್ಕಾಗಿ ನನ್ನನ್ನು ಕರೆದಿದ್ದಾನೆ. ದಯವಿಟ್ಟು ನನಗೆ ಅಪ್ಪಣೆಕೊಡು ನಾನು ಹೋಗಿ ನನ್ನ ಅಣ್ಣಂದಿರನ್ನು ನೋಡಿ ಬರುತ್ತೇನೆ’ ಎಂದು ನನ್ನನ್ನು ಬಹಳವಾಗಿ ಬೇಡಿಕೊಂಡು ಹೋದನು. ಆದ್ದರಿಂದ ಅವನು ಅರಸನ ಪಂಕ್ತಿಗೆ ಬರಲಿಲ್ಲ” ಎಂದು ಉತ್ತರಕೊಟ್ಟನು.
他说:‘求你容我去,因为我家在城里有献祭的事;我长兄吩咐我去。如今我若在你眼前蒙恩,求你容我去见我的弟兄’;所以大卫没有赴王的席。”
30 ೩೦ ಆಗ ಸೌಲನು ಬಹಳವಾಗಿ ಕೋಪಗೊಂಡು ಯೋನಾತಾನನಿಗೆ, “ಎಲೈ ದುಷ್ಟ ದಾಸಿಯ ಮಗನೇ, ನೀನು ಇಷಯನ ಮಗನೊಡನೆ ಸ್ನೇಹದಿಂದಿರುವುದು ನನಗೆ ಗೊತ್ತಿಲ್ಲವೋ? ಇದರಿಂದ ನಿನಗೂ, ನಿನ್ನನ್ನು ಹೆತ್ತವಳಿಗೂ ಮಾನಭಂಗವಾಗುವುದು.
扫罗向约拿单发怒,对他说:“你这顽梗背逆之妇人所生的,我岂不知道你喜悦耶西的儿子,自取羞辱,以致你母亲露体蒙羞吗?
31 ೩೧ ಆ ಇಷಯನ ಮಗನು ಭೂಲೋಕದಲ್ಲಿರುವವರೆಗೆ ನಿನಗಾದರೂ, ನಿನ್ನ ರಾಜ್ಯಕ್ಕಾದರೂ ನೆಲೆಯಿಲ್ಲ. ಆದುದರಿಂದ ಅವನನ್ನು ಕರಿಸಿ ನನ್ನ ಬಳಿಗೆ ತೆಗೆದುಕೊಂಡು ಬಾ. ಅವನು ಸಾಯಬೇಕು” ಅಂದನು.
耶西的儿子若在世间活着,你和你的国位必站立不住。现在你要打发人去,将他捉拿交给我;他是该死的。”
32 ೩೨ ಅದಕ್ಕೆ ಯೋನಾತಾನನು, “ಅವನು ಯಾಕೆ ಸಾಯಬೇಕು? ಅವನು ಏನು ಮಾಡಿದನು?” ಎಂದು ತನ್ನ ತಂದೆಯನ್ನು ಕೇಳಿದನು.
约拿单对父亲扫罗说:“他为什么该死呢?他做了什么呢?”
33 ೩೩ ಕೂಡಲೆ ಸೌಲನು ಅವನನ್ನು ತಿವಿಯಬೇಕೆಂದು ಈಟಿಯನ್ನೆಸೆದನು. ತನ್ನ ತಂದೆಯು ದಾವೀದನನ್ನು ಕೊಲ್ಲುವುದಕ್ಕೆ ನಿಶ್ಚಯಿಸಿದ್ದಾನೆಂಬುದು ಯೋನಾತಾನಾನಿಗೆ ಗೊತ್ತಾಗಲು
扫罗向约拿单抡枪要刺他,约拿单就知道他父亲决意要杀大卫。
34 ೩೪ ಅವನು ಬಲು ಸಿಟ್ಟುಗೊಂಡು ಪಂಕ್ತಿಯಿಂದೆದ್ದು ಹೋದನು. ತನ್ನ ತಂದೆಯು ದಾವೀದನನ್ನು ಅಪಮಾನಪಡಿಸಿದ್ದರಿಂದ ಯೋನಾತಾನನಿಗೆ ಬಹಳ ದುಃಖವುಂಟಾಗಿ ಅವನು ಆ ದಿನ ಊಟಮಾಡಲೇ ಇಲ್ಲ.
于是约拿单气忿忿地从席上起来,在这初二日没有吃饭。他因见父亲羞辱大卫,就为大卫愁烦。
35 ೩೫ ಅವನು ಮರುದಿನ ಬೆಳಿಗ್ಗೆ ಒಬ್ಬ ಹುಡುಗನನ್ನು ಕರೆದುಕೊಂಡು ದಾವೀದನನ್ನು ನೋಡುವುದಕ್ಕಾಗಿ ಹೊಲಕ್ಕೆ ಹೋಗಿ,
次日早晨,约拿单按着与大卫约会的时候出到田野,有一个童子跟随。
36 ೩೬ ಹುಡುಗನಿಗೆ, “ಬೇಗ ಹೋಗಿ ನಾನು ಎಸೆದ ಬಾಣಗಳನ್ನು ಕೂಡಿಸಿಕೊಂಡು ಬಾ” ಎಂದು ಹೇಳಿದನು. ಆ ಹುಡುಗನು ಹೋಗುತ್ತಿರುವಾಗ ಯೋನಾತಾನನು ಬಾಣವನ್ನು ಅವನ ಆಚೆಗೆ ಎಸೆದನು.
约拿单对童子说:“你跑去,把我所射的箭找来。”童子跑去,约拿单就把箭射在童子前头。
37 ೩೭ ಹುಡುಗನು ಬಾಣ ಬಿದ್ದ ಸ್ಥಳಕ್ಕೆ ಬಂದಾಗ ಯೋನಾತಾನನು ಅವನಿಗೆ, “ಬಾಣವು ನಿನ್ನ ಆಚೆ ಬಿದ್ದಿತಲ್ಲಾ
童子到了约拿单落箭之地,约拿单呼叫童子说:“箭不是在你前头吗?”
38 ೩೮ ಬೇಗ ಹೋಗು ನಿಲ್ಲಬೇಡ” ಎಂದು ಕೂಗಿ ಹೇಳಿದನು. ಹುಡುಗನು ಬಾಣಗಳನ್ನು ಕೂಡಿಸಿಕೊಂಡು ಯಜಮಾನನ ಬಳಿಗೆ ಬಂದನು.
约拿单又呼叫童子说:“速速地去,不要迟延!”童子就拾起箭来,回到主人那里。
39 ೩೯ ಇದರ ರಹಸ್ಯವು ಯೋನಾತಾನ ದಾವೀದರಿಗೆ ತಿಳಿದಿತ್ತೇ ಹೊರತು ಆ ಹುಡುಗನಿಗೆ ಗೊತ್ತಿರಲಿಲ್ಲ.
童子却不知道这是什么意思,只有约拿单和大卫知道。
40 ೪೦ ಯೋನಾತಾನನು ತನ್ನ ಆಯುಧಗಳನ್ನು ಹುಡುಗನ ಕೈಯಲ್ಲಿ ಕೊಟ್ಟು ಅವನಿಗೆ, “ಅವುಗಳನ್ನು ಊರಿಗೆ ತೆಗೆದುಕೊಂಡು ಹೋಗು” ಎಂದು ಹೇಳಿದನು.
约拿单将弓箭交给童子,吩咐说:“你拿到城里去。”
41 ೪೧ ಹುಡುಗನು ಹೋಗುತ್ತಲೇ ದಾವೀದನು ಕಲ್ಲುಕುಪ್ಪೆಯ ಬಳಿಯಿಂದ ಎದ್ದುಬಂದು ಮೂರು ಸಾರಿ ಸಾಷ್ಟಾಂಗವಾಗಿ ಯೋನಾತಾನನನ್ನು ವಂದಿಸಿದನು. ಅವರು ಒಬ್ಬರಿಗೊಬ್ಬರು ಮುದ್ದಿಟ್ಟುಕೊಂಡು ಅತ್ತರು. ದಾವೀದನು ಬಹಳವಾಗಿ ಅತ್ತನು.
童子一去,大卫就从磐石的南边出来,俯伏在地,拜了三拜;二人亲嘴,彼此哭泣,大卫哭得更恸。
42 ೪೨ ಅನಂತರ ಯೋನಾತಾನನು ದಾವೀದನಿಗೆ, “ಸಮಾಧಾನದಿಂದ ಹೋಗು. ನಾವು ಯೆಹೋವನ ಹೆಸರಿನಲ್ಲಿ ಆಣೆಯಿಟ್ಟು ಒಡಂಬಡಿಕೆಯನ್ನು ಮಾಡಿಕೊಂಡಿದ್ದೇವಲ್ಲಾ. ಆತನೇ ನನಗೂ ನಿನಗೂ, ನನ್ನ ಸಂತಾನಕ್ಕೂ ನಿನ್ನ ಸಂತಾನಕ್ಕೂ ಸದಾ ಸಾಕ್ಷಿಯಾಗಿರಲಿ” ಎಂದು ಹೇಳಿದನು. ತರುವಾಯ ದಾವೀದನು ಹೊರಟುಹೋದನು. ಯೋನಾತಾನನು ಊರೊಳಕ್ಕೆ ಹೋದನು.
约拿单对大卫说:“我们二人曾指着耶和华的名起誓说:‘愿耶和华在你我中间,并你我后裔中间为证,直到永远。’如今你平平安安地去吧!”大卫就起身走了;约拿单也回城里去了。