< ಸಮುವೇಲನು - ಪ್ರಥಮ ಭಾಗ 18 >
1 ೧ ದಾವೀದನು ಸೌಲನೊಡನೆ ಮಾತನಾಡಿ ಮುಗಿಸಿದ ಮೇಲೆ ಯೋನಾತಾನನ ಪ್ರಾಣವು ದಾವೀದನ ಪ್ರಾಣದೊಡನೆ ಒಂದಾಯಿತು. ಅವನು ದಾವೀದನನ್ನು ತನ್ನ ಪ್ರಾಣದಂತೆಯೇ ಪ್ರೀತಿಸತೊಡಗಿದನು.
Lẹ́yìn ìgbà tí Dafidi ti parí ọ̀rọ̀ tí ó ń bá Saulu sọ, ọkàn Jonatani di ọ̀kan pẹ̀lú ti Dafidi, ó sì fẹ́ràn rẹ̀ gẹ́gẹ́ bí ara rẹ̀.
2 ೨ ಆ ದಿನದಿಂದ ಸೌಲನು ದಾವೀದನನ್ನು ಅವನ ತಂದೆಯ ಮನೆಗೆ ಹೋಗಗೊಡದೇ, ತನ್ನ ಬಳಿಯಲ್ಲೇ ಇಟ್ಟುಕೊಂಡನು.
Láti ọjọ́ náà Saulu pa Dafidi mọ́ sí ọ̀dọ̀ rẹ̀ kò sì jẹ́ kí ó padà sí ilé baba rẹ̀ mọ́.
3 ೩ ಯೋನಾತಾನನು ದಾವೀದನನ್ನು ತನ್ನ ಪ್ರಾಣದಂತೆಯೇ ಪ್ರೀತಿಸಿದ್ದರಿಂದ ಅವನೊಡನೆ ಸ್ನೇಹದ ಒಪ್ಪಂದ ಮಾಡಿಕೊಂಡನು.
Jonatani bá Dafidi dá májẹ̀mú nítorí tí ó fẹ́ràn rẹ̀ gẹ́gẹ́ bí ara rẹ̀.
4 ೪ ಇದಲ್ಲದೆ ಅವನು ತನ್ನ ಮೈಮೇಲಿದ್ದ ನಿಲುವಂಗಿಯನ್ನು ತನ್ನ ಯುದ್ಧವಸ್ತ್ರಗಳನ್ನು, ಕತ್ತಿ, ಬಿಲ್ಲು, ನಡುಕಟ್ಟುಗಳನ್ನೂ ದಾವೀದನಿಗೆ ಕೊಟ್ಟನು.
Jonatani sì bọ́ aṣọ ìgúnwà, ó sì fi fun Dafidi pẹ̀lú aṣọ àwọ̀tẹ́lẹ̀ rẹ̀ àti pẹ̀lú idà rẹ̀, ọrun rẹ̀ àti àmùrè rẹ̀.
5 ೫ ದಾವೀದನಾದರೋ ಸೌಲನು ಎಲ್ಲಿಗೆ ಕಳುಹಿಸಿದರೂ ಹೋಗಿ ಎಲ್ಲವನ್ನು ವಿವೇಕದಿಂದ ನಡೆಸುತ್ತಿದ್ದನು. ಸೌಲನು ಇವನನ್ನು ಸೇನಾಧಿಪತಿಯನ್ನಾಗಿ ನೇಮಿಸಿದನು. ಇದು ಅವನ ಸೇವಕರಿಗೂ, ಎಲ್ಲಾ ಜನರಿಗೂ ಮೆಚ್ಚಿಗೆಯಾಯಿತು.
Ohunkóhun tí Saulu bá rán an láti ṣe, Dafidi máa ṣe ní àṣeyọrí, Saulu náà sì fun un ní ipò tí ó ga jù láàrín àwọn ológun. Eléyìí sì tẹ́ gbogbo ènìyàn lọ́rùn, àti pẹ̀lú ó sì tẹ́ àwọn ìjòyè Saulu lọ́rùn pẹ̀lú.
6 ೬ ದಾವೀದನು ಫಿಲಿಷ್ಟಿಯನನ್ನು ಸಂಹರಿಸಿ, ಸರ್ವಜನರೊಡನೆ ಹಿಂದಿರುಗಿ ಬರುವಾಗ ಇಸ್ರಾಯೇಲ್ಯರ ಎಲ್ಲಾ ಪಟ್ಟಣಗಳಿಂದ ಸ್ತ್ರೀಯರೂ ಹೊರಗೆ ಬಂದು ದಮ್ಮಡಿತಾಳಗಳನ್ನು ಹಿಡಿದು, ಸಂತೋಷದಿಂದ ಹಾಡುತ್ತಾ, ಕುಣಿಯುತ್ತಾ, ಅರಸನಾದ ಸೌಲನನ್ನು ಎದುರುಗೊಂಡರು.
Nígbà tí àwọn ènìyàn padà sí ilé lẹ́yìn ìgbà tí Dafidi ti pa Filistini, gbogbo àwọn obìnrin tú jáde láti inú ìlú Israẹli wá láti pàdé ọba Saulu pẹ̀lú orin àti ijó, pẹ̀lú orin ayọ̀ àti tambori àti ohun èlò orin olókùn.
7 ೭ ಅವರು ಹಾಡುತ್ತಾ, ಕೊಂಡಾಡುತ್ತಾ, “ಸೌಲನು ಸಾವಿರ ಶತ್ರುಗಳನ್ನು ಕೊಂದನು. ದಾವೀದನು ಹತ್ತು ಸಾವಿರಾರು ಶತ್ರುಗಳನ್ನು ಕೊಂದನು” ಎಂದು ಹಾಡಿದರು.
Bí wọ́n ṣe ń jó, bẹ́ẹ̀ ni wọ́n ń kọrin pé, “Saulu pa ẹgbẹ̀rún tirẹ̀ Dafidi sì pa ẹgbẹẹgbàárún ní tirẹ̀.”
8 ೮ ಈ ಮಾತುಗಳ ದೆಸೆಯಿಂದ ಸೌಲನಿಗೆ ಬಹು ಅಸೂಯೆ ಉಂಟಾಗಿ ದಾವೀದನ ಮೇಲೆ ಕೋಪಗೊಂಡನು. ಅವನು “ದಾವೀದನು ಹತ್ತು ಸಾವಿರಾರು ಶತ್ರುಗಳನ್ನು ಕೊಂದನೆಂದೂ, ನಾನು ಸಾವಿರಾರು ಶತ್ರುಗಳನ್ನು ಕೊಂದೆನೆಂದೂ ಹಾಡುತ್ತಾರಲ್ಲಾ, ರಾಜತ್ವದ ಹೊರತು ಅವನಿಗೆ ಇನ್ನೇನು ಕಡಿಮೆಯಾಯಿತು” ಅಂದುಕೊಂಡು
Saulu sì bínú gidigidi, ọ̀rọ̀ náà sì korò létí rẹ̀ pé, “Wọ́n ti gbé ògo fún Dafidi pẹ̀lú ẹgbẹẹgbàárún,” ó sì wí pé, “ṣùgbọ́n èmi pẹ̀lú ẹgbẹ̀rún kan. Kí ni ó kù kí ó gbà bí kò ṣe ìjọba?”
9 ೯ ಅಂದಿನಿಂದ ಅವನು ದಾವೀದನನ್ನು ಸಂಶಯದಿಂದ ನೋಡುತ್ತಿದ್ದನು.
Láti ìgbà náà lọ ni Saulu ti bẹ̀rẹ̀ sí ní fi ojú ìlara wo Dafidi.
10 ೧೦ ಮರುದಿನ ದೇವರಿಂದ ಕಳುಹಿಸಲ್ಪಟ್ಟ ದುರಾತ್ಮವು ಸೌಲನ ಮೇಲೆ ಬಂದದ್ದರಿಂದ ಅವನು ಬುದ್ಧಿಗೆಟ್ಟು ಮನೆಯೊಳಗೆ ಕೂಗುತ್ತಿದ್ದನು. ಅವನ ಕೈಯಲ್ಲಿ ಒಂದು ಈಟಿ ಇತ್ತು. ದಾವೀದನು ವಾಡಿಕೆಯ ಪ್ರಕಾರ ಕಿನ್ನರಿಯನ್ನು ನುಡಿಸುತ್ತಾ ಇದ್ದನು.
Ní ọjọ́ kejì ẹ̀mí búburú láti ọ̀dọ̀ Ọlọ́run wá pẹ̀lú agbára sórí Saulu, ó sì sọ àsọtẹ́lẹ̀ ní ilé rẹ̀ nígbà tí Dafidi sì ń fọn ohun èlò orin olókùn, gẹ́gẹ́ bí ó ti máa ń ṣe láti ẹ̀yìn wá, Saulu sì ní ọ̀kọ̀ kan ní ọwọ́ rẹ̀.
11 ೧೧ ಆಗ ಸೌಲನು ದಾವೀದನನ್ನು ಗೋಡೆಗೆ ಸೇರಿಕೊಳ್ಳುವ ಹಾಗೆ ತಿವಿಯುವೆನು ಎಂದುಕೊಂಡು ಈಟಿಯನ್ನು ಎಸೆದನು. ದಾವೀದನು ಎರಡು ಸಾರಿ ತಪ್ಪಿಸಿಕೊಂಡನು.
Ó sì gbé e sókè, ó sì wí fún ara rẹ̀ pé, “Èmi yóò gún Dafidi pọ̀ mọ́ ògiri.” Ṣùgbọ́n, Dafidi yẹ̀ fún un lẹ́ẹ̀méjì.
12 ೧೨ ಯೆಹೋವನು ಸೌಲನನ್ನು ಬಿಟ್ಟು ದಾವೀದನ ಸಂಗಡ ಇದ್ದುದರಿಂದ ಸೌಲನು ದಾವೀದನಿಗೆ ಭಯಪಟ್ಟು,
Saulu sì ń bẹ̀rù Dafidi nítorí pé Olúwa wà pẹ̀lú Dafidi, ṣùgbọ́n ó ti fi Saulu sílẹ̀.
13 ೧೩ ಅವನನ್ನು ತನ್ನ ಸಾನ್ನಿಧ್ಯಸೇವೆಯಿಂದ ತಪ್ಪಿಸಿ, ಸೈನ್ಯದಲ್ಲಿ ಸಹಸ್ರಾಧಿಪತಿಯನ್ನಾಗಿ ನೇಮಿಸಿದನು. ಹೀಗೆ ದಾವೀದನು ಜನರ ಸಂಗಡ ಹೋಗುತ್ತಾ ಬರುತ್ತಾ ಇದ್ದನು.
Ó sì lé Dafidi jáde ní ọ̀dọ̀ rẹ̀, ó sì fi jẹ olórí ogun ẹgbẹ̀rún kan, Dafidi ń kó wọn lọ, ó ń kó wọn bọ̀ nínú ìgbòkègbodò ogun.
14 ೧೪ ಯೆಹೋವನು ಅವನ ಸಂಗಡ ಇದ್ದದರಿಂದ ದಾವೀದನು ಎಲ್ಲಾ ಕಾರ್ಯಗಳನ್ನು ವಿವೇಕದಿಂದ ನಡೆಸುತ್ತಿದ್ದನು.
Dafidi sì ṣe ọlọ́gbọ́n ní gbogbo ìṣe rẹ̀, nítorí tí Olúwa wà pẹ̀lú rẹ̀.
15 ೧೫ ಇದನ್ನು ನೋಡಿ ಸೌಲನು ದಾವೀದನಿಗೆ ಬಹಳವಾಗಿ ಹೆದರಿಕೊಂಡನು.
Nígbà tí Saulu rí bi àṣeyọrí rẹ̀ ti tó, ó sì bẹ̀rù rẹ̀.
16 ೧೬ ಆದರೆ ಇಸ್ರಾಯೇಲರೂ, ಯೆಹೂದ್ಯರೂ ತಮ್ಮ ಸಂಗಡ ಹೋಗುತ್ತಾ ಬರುತ್ತಾ ಇದ್ದ ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದರು.
Ṣùgbọ́n gbogbo Israẹli àti Juda ni wọ́n fẹ́ràn Dafidi, nítorí ó darí wọn lọ ní ìgbòkègbodò ogun wọn.
17 ೧೭ ಒಂದು ದಿನ ಸೌಲನು, ಇವನು ನನ್ನ ಕೈಯಿಂದಲ್ಲ ಫಿಲಿಷ್ಟಿಯರ ಕೈಯಿಂದ ಸಾಯಲಿ ಎಂದು ಆಲೋಚಿಸಿಕೊಂಡು ದಾವೀದನಿಗೆ, “ನನ್ನ ವೀರನಾಗಿ ಹೋಗಿ ಯೆಹೋವನ ಯುದ್ಧಗಳನ್ನು ನಡಿಸು. ನಾನು ನನ್ನ ಹಿರೀ ಮಗಳಾದ ಮೇರಬಳನ್ನು ನಿನಗೆ ಮದುವೆ ಮಾಡಿಕೊಡುತ್ತೇನೆ” ಅಂದನು.
Saulu wí fún Dafidi pé, “Èyí ni àgbà nínú àwọn ọmọbìnrin mi Merabu. Èmi yóò fi òun fún ọ ní aya. Kí ìwọ sìn mí bí akọni, kí o sì máa ja ogun Olúwa.” Nítorí tí Saulu wí fún ara rẹ̀ pé, “Èmi kì yóò gbé ọwọ́ mi sókè sí i. Jẹ́ kí àwọn Filistini ṣe èyí.”
18 ೧೮ ಅದಕ್ಕೆ ದಾವೀದನು “ಅರಸನ ಅಳಿಯನಾಗುವುದಕ್ಕೆ ನಾನು ಎಷ್ಟರವನು? ಇಸ್ರಾಯೇಲರಲ್ಲಿ ನನ್ನ ತಂದೆಯ ಕುಟುಂಬವೂ ಸಮಾನವೇ?” ಎಂದನು.
Ṣùgbọ́n Dafidi wí fún Saulu pé, “Ta ni mí, kí sì ni ìdílé mi tàbí ìdílé baba mi ní Israẹli, tí èmi yóò di àna ọba?”
19 ೧೯ ಸೌಲನು ತನ್ನ ಮಗಳಾದ ಮೇರಬಳನ್ನು ದಾವೀದನಿಗೆ ಕೊಡತಕ್ಕ ಕಾಲ ಬಂದಾಗ ಅವನು ಅವಳನ್ನು ಮೆಹೋಲದ ಅದ್ರೀಯೇಲ ಎಂಬವನಿಗೆ ಮದುವೆಮಾಡಿ ಕೊಟ್ಟನು.
Nígbà tí àkókò tó fún Merabu, ọmọbìnrin Saulu, láti fi fún Dafidi, ni a sì fi fún Adrieli ará Mehola ní aya.
20 ೨೦ ಸೌಲನ ಮಗಳಾದ ಮೀಕಲಳು ದಾವೀದನನ್ನು ಪ್ರೀತಿಸಿದಳು. ಇದು ಸೌಲನಿಗೆ ತಿಳಿದಾಗ ಅವನಿಗೆ ಸಂತೋಷವಾಯಿತು.
Nísinsin yìí ọmọbìnrin Saulu Mikali sì fẹ́ràn Dafidi, nígbà tí wọ́n sọ fún Saulu nípa rẹ̀, ó sì dùn mọ́ ọn.
21 ೨೧ ಅವಳು ದಾವೀದನಿಗೆ ಉರಲಾಗಿರುವಂತೆಯೂ, ಅವನು ಫಿಲಿಷ್ಟಿಯರ ಕೈಗೆ ಸಿಕ್ಕಿಬೀಳುವಂತೆಯೂ ಇವಳನ್ನು ಅವನಿಗೆ ಕೊಡುವೆನು ಅಂದುಕೊಂಡು ಅವನಿಗೆ, “ನೀನು ನನ್ನ ಅಳಿಯನಾಗುವುದಕ್ಕೆ ಈಗ ಎರಡನೆಯ ಸಂದರ್ಭವುಂಟಾಯಿತು” ಎಂದು ಹೇಳಿದನು.
Ó sọ nínú ara rẹ̀ pé, “Èmi yóò fi fún un kí òun ba à le jẹ́ ìkẹ́kùn fún un, kí ọwọ́ àwọn ará Filistini lè wà lára rẹ̀.” Nígbà náà ni Saulu wí fún Dafidi pé, “Nísinsin yìí ìwọ ní àǹfààní eléyìí láti jẹ́ àna án mi.”
22 ೨೨ ಅವನು ತನ್ನ ಸೇವಕರಿಗೆ, “ನೀವು ದಾವೀದನಿಗೆ ಗುಪ್ತವಾಗಿ, ‘ಅರಸನಿಗೆ ನಿನ್ನನ್ನು ಒಲಿಯುತ್ತಾನೆ, ಅವನ ಸೇವಕರು ನಿನ್ನನ್ನು ಪ್ರೀತಿಸುತ್ತಾರೆ. ನೀನು ಅರಸನ ಅಳಿಯನಾಗು’ ಎಂದು ಹೇಳಿರಿ” ಅಂದನು.
Saulu pàṣẹ fún àwọn ìránṣẹ́ rẹ̀ pé, “Ẹ sọ fún Dafidi ní ìkọ̀kọ̀, kí ẹ sì wí pé, ‘Wò ó, inú ọba dùn sí ọ, gbogbo àwọn ìránṣẹ́ rẹ̀ ni ó fẹ́ràn rẹ, nísinsin yìí jẹ́ àna ọba.’”
23 ೨೩ ಆ ಸೇವಕರು ದಾವೀದನಿಗೆ ಹಾಗೆಯೇ ಹೇಳಿದಾಗ ಅವನು, “ಅರಸನ ಅಳಿಯನಾಗುವುದು ಸಾಧಾರಣವಾದ ಸಂಗತಿಯೆಂದು ನೆನಸುತ್ತೀರೋ? ನಾನು ದರಿದ್ರನೂ, ಅಲ್ಪನೂ ಆಗಿರುತ್ತೆನಲ್ಲಾ” ಎಂದು ಉತ್ತರ ಕೊಟ್ಟನು.
Wọ́n tún ọ̀rọ̀ náà sọ fún Dafidi. Ṣùgbọ́n Dafidi wí pé, “Ṣé ẹ rò pé ohun kékeré ni láti jẹ́ àna ọba? Mo jẹ́ tálákà ènìyàn àti onímọ̀ kékeré.”
24 ೨೪ ಸೇವಕರು ದಾವೀದನ ಮಾತುಗಳನ್ನು ಸೌಲನಿಗೆ ತಿಳಿಸಿದರು.
Nígbà tí àwọn ìránṣẹ́ Saulu sọ fún un ohun tí Dafidi sọ,
25 ೨೫ ಆಗ ಅವನು ಅವರಿಗೆ, “ನೀವು ಹೋಗಿ ದಾವೀದನಿಗೆ, ‘ಅರಸನು ತೆರವನ್ನು ಅಪೇಕ್ಷಿಸುವುದಿಲ್ಲ. ತನ್ನ ಶತ್ರುಗಳಾದ ಫಿಲಿಷ್ಟಿಯರಿಗೆ ಮುಯ್ಯಿತೀರಿಸಿ ಅವರಲ್ಲಿನ ನೂರು ಮಂದಿಯ ಮುಂದೊಗಲನ್ನು ತಂದುಕೊಡಬೇಕು ಅನ್ನುತ್ತಾನೆ’ ಎಂದು ಹೇಳಿರಿ” ಎಂದು ಆಜ್ಞಾಪಿಸಿದನು. ದಾವೀದನನ್ನು ಫಿಲಿಷ್ಟಿಯರಿಂದ ಕೊಲ್ಲಿಸಬೇಕೆಂಬುದೇ ಅವನ ಉದ್ದೇಶವಾಗಿತ್ತು.
Saulu dáhùn pé, “Sọ fún Dafidi pé, ‘Ọba kò fẹ́ owó orí láti ọ̀dọ̀ àna rẹ̀ ju awọ iwájú orí ọgọ́rùn-ún Filistini lọ láti fi gba ẹ̀san lórí àwọn ọ̀tá rẹ̀.’” Èrò Saulu ni wí pé kí Dafidi ṣubú sí ọwọ́ àwọn ará Filistini.
26 ೨೬ ಸೇವಕರು ದಾವೀದನಿಗೆ ಈ ಮಾತುಗಳನ್ನು ತಿಳಿಸಿದಾಗ ಅವನು ಅರಸನ ಅಳಿಯನಾಗುವುದಕ್ಕೆ ಒಪ್ಪಿದನು. ನೇಮಕವಾದ ದಿನಗಳು ಮುಗಿಯುವ ಮೊದಲೇ,
Nígbà tí àwọn ìránṣẹ́ sọ àwọn nǹkan yìí fún Dafidi, inú rẹ̀ dùn láti di àna ọba kí àkókò tí ó dá tó kọjá,
27 ೨೭ ದಾವೀದನು ತನ್ನ ಸೇವಕರೊಡನೆ ಹೊರಟು, ಫಿಲಿಷ್ಟಿಯರ ದೇಶಕ್ಕೆ ಹೋಗಿ, ಅಲ್ಲಿನ ಇನ್ನೂರು ಜನರನ್ನು ಕೊಂದು, ಮುಂದೊಗಲುಗಳನ್ನು ತಂದು, ಅರಸನ ಅಳಿಯನಾಗುವುದಕ್ಕೋಸ್ಕರ ಅವುಗಳನ್ನು ಪೂರ್ಣವಾಗಿ ಅವನಿಗೆ ಒಪ್ಪಿಸಿದನು. ಆಗ ಸೌಲನು ತನ್ನ ಮಗಳಾದ ಮೀಕಲಳನ್ನು ಅವನಿಗೆ ಮದುವೆಮಾಡಿಕೊಟ್ಟನು.
Dafidi àti àwọn arákùnrin rẹ̀ jáde lọ wọ́n sì pa igba lára àwọn Filistini. Ó kó awọ iwájú orí wọn wá, ó sì pé iye tí ọba fẹ́ kí ó ba à lè jẹ́ àna ọba. Saulu sì fi ọmọ obìnrin Mikali fún un ní aya.
28 ೨೮ ಮೀಕಲಳು ಅವನನ್ನು ಬಹಳವಾಗಿ ಪ್ರೀತಿಸುವವಳಾದಳು. ಯೆಹೋವನು ದಾವೀದನ ಸಂಗಡ ಇದ್ದಾನೆಂದು,
Nígbà tí Saulu sì wá mọ̀ pé Olúwa wà pẹ̀lú Dafidi tí ọmọbìnrin rẹ̀ Mikali sì fẹ́ràn Dafidi,
29 ೨೯ ಸೌಲನು ತಿಳಿದು ಅವನಿಗೆ ಮತ್ತಷ್ಟು ಹೆದರುವವನಾಗಿ ಅವನ ನಿತ್ಯವೈರಿಯಾದನು.
Saulu sì tún wá bẹ̀rù Dafidi síwájú àti síwájú, Saulu sì wá di ọ̀tá Dafidi fún gbogbo ọjọ́ rẹ̀ tókù.
30 ೩೦ ಫಿಲಿಷ್ಟಿಯ ಪ್ರಭುಗಳು ಯುದ್ಧಕ್ಕೆ ಬಂದಾಗೆಲ್ಲಾ ಸೌಲನ ಸೇನಾಧಿಪತಿಗಳಲ್ಲಿ ದಾವೀದನೇ ಹೆಚ್ಚು ಪ್ರಭಾವಶಾಲಿಯಾಗಿ ಬರುತ್ತಿದ್ದುದರಿಂದ ಅವನ ಹೆಸರು ಬಹು ಸುಪ್ರಸಿದ್ಧವಾಯಿತು.
Àwọn ọmọ-aládé Filistini tún tẹ̀síwájú láti lọ sí ogun, ó sì ṣe lẹ́yìn ìgbà tí wọ́n lọ, Dafidi ṣe àṣeyọrí ju gbogbo àwọn ìránṣẹ́ Saulu lọ, orúkọ rẹ̀ sì gbilẹ̀.