< ಸಮುವೇಲನು - ಪ್ರಥಮ ಭಾಗ 17 >

1 ಫಿಲಿಷ್ಟಿಯರು ಯುದ್ಧ ಮಾಡುವುದಕ್ಕೋಸ್ಕರ ಯೆಹೂದ ದೇಶದ ಸೋಕೋವಿನಲ್ಲಿ ಸೈನ್ಯವನ್ನು ಕೂಡಿಸಿಕೊಂಡು ಬಂದು ಸೋಕೋವಿಗೂ ಅಜೇಕಕ್ಕೂ ಮಧ್ಯದಲ್ಲಿರುವ ಎಫೆಸ್ದಮ್ಮೀಮಿನಲ್ಲಿ ಪಾಳೆಯಮಾಡಿಕೊಂಡರು.
ဖိလိတ္တိ လူတို့သည် ဗိုလ်ခြေများကို နှိုးဆော်၍ ယုဒခရိုင် ရှောခေါမြို့၌ စုဝေးသဖြင့်၊ ရှောခေါမြို့နှင့် အဇေကာမြို့စပ်ကြား ဒမိမ်အရပ်မှာ တပ်ချကြ၏။
2 ಸೌಲನೂ, ಇಸ್ರಾಯೇಲ್ಯರೂ ಫಿಲಿಷ್ಟಿಯರೊಡನೆ ಯುದ್ಧಮಾಡುವುದಕ್ಕಾಗಿ ಸೈನ್ಯವನ್ನು ಕೂಡಿಸಿ ಏಲಾ ತಗ್ಗಿನಲ್ಲಿ ಪಾಳೆಯಮಾಡಿಕೊಂಡು ವ್ಯೂಹಕಟ್ಟಿದರು.
ရှောလုနှင့်ဣသရေလ လူတို့သည် စုဝေး၍ ဧလာချိုင့်နားမှာ တပ်ချ၍ ဖိလိတ္တိလူတို့ကို တိုက်မည်ဟု စစ်ခင်းကျင်းကြ၏။
3 ಫಿಲಿಷ್ಟಿಯರು ಒಂದು ಗುಡ್ಡದ ಪಕ್ಕದಲ್ಲಿ, ಇಸ್ರಾಯೇಲರು ಇನ್ನೊಂದು ಗುಡ್ಡದ ಪಕ್ಕದಲ್ಲಿಯೂ ನಿಂತರು. ಅವರ ಮಧ್ಯದಲ್ಲಿ ಒಂದು ಕಣಿವೆ ಇತ್ತು.
ဖိလိတ္တိလူအချို့တို့သည် ချိုင့်တဘက်၌ တောင်ပေါ်မှာရပ်လျက်၊ ဣသရေလလူအချို့တို့သည် ချိုင့်တဘက်၌ တောင်ပေါ်မှာ ရပ်လျက်ရှိကြ၏။
4 ಫಿಲಿಷ್ಟಿಯರ ಪಾಳೆಯದಿಂದ ಗತ್ ಊರಿನವನಾದ ಗೊಲ್ಯಾತನೆಂಬ ಒಬ್ಬ ರಣಶೂರನು ಹೊರಟುಬಂದನು. ಅವನು ಆರುವರೆ ಮೊಳ ಎತ್ತರವಾಗಿದ್ದನು.
ခြောက်တောင်နှင့်တထွာ အရပ်မြင့်သော ဂါသမြို့သားဂေါလျတ် အမည်ရှိသော သူရဲသည် ဖိလိတ္တိ တပ်ထဲက ထွက်လာ၏။
5 ಅವನ ಶಿರಸ್ತ್ರಾಣವು ತಾಮ್ರದ್ದು. ತಾಮ್ರ ಲೋಹದ ಬಿಲ್ಲೆಗಳಿಂದ ಪರೆಪರೆಯಾಗಿ ಜೋಡಿಸಲ್ಪಟ್ಟ ಅವನ ಕವಚವು (ಐದು ಸಾವಿರ ಶೆಕೆಲಿನ ತಾಮ್ರದ ನಾಣ್ಯಗಳಷ್ಟು ತೂಕವಾಗಿತ್ತು.)
သူသည် ခေါင်းပေါ်မှာ ကြေးဝါခမောက်လုံးကို ဆောင်း၍ အခွက်ငါးဆယ် အချိန်ရှိသော ကြေးဝါ ချပ်အင်္ကျီကို ဝတ်၏။
6 ಅವನ ಪಾದರಕ್ಷೆಗಳು, ಹೆಗಲ ಮೇಲಣ ಈಟಿಯೂ ತಾಮ್ರದವು.
ကြေးဝါခြေစွပ်ကို စွပ်လျက် ပခုံးကြားမှာ ကြေးဝါကိဒုန် လက်နက်ကို ဆွဲလျက်ရှိ၏။
7 ಅವನ ಬರ್ಜಿಯ ಹಿಡಿಕೆಯು ನೇಯಿಗಾರ ಕುಂಟೆಯಷ್ಟು ಗಾತ್ರವಾಗಿತ್ತು. ಅದರ ಅಲಗು ಆರುನೂರು ತೊಲೆ ಕಬ್ಬಿಣದಿಂದ ಮಾಡಿದ್ದು. ಅವನ ಗುರಾಣಿಯನ್ನು ಹೊರುವವನು ಅವನ ಮುಂದೆ ಹೋಗುತ್ತಿದ್ದನು.
လှံရိုးကား ရက်ကန်းလက်လိပ်နှင့် အမျှကြီး၏။ လှံကိုယ်ကား သံခြောက်ပိဿာ အချိန်ရှိ၏။ သူ့ရှေ့ မှာ ဒိုင်းလွှားကို ဆောင်သောသူတယောက်သည် သွားရ၏။
8 ಅವನು ನಿಂತು ಇಸ್ರಾಯೇಲ ಸೈನ್ಯದವರನ್ನು ಕೂಗಿ ಅವರಿಗೆ, “ನೀವು ಯುದ್ಧಮಾಡಲು ಬಂದದ್ದೇಕೆ? ನಾನು ಫಿಲಿಷ್ಟಿಯನು. ನೀವು ಸೌಲನ ಸೇವಕರು. ನಿಮ್ಮಲ್ಲಿ ಒಬ್ಬನನ್ನು ಆರಿಸಿಕೊಂಡು ನನ್ನ ಬಳಿಗೆ ಕಳುಹಿಸಿರಿ.
ထိုသူရဲသည် ရပ်လျက် သင်တို့သည် စစ်ပြိုင်ခြင်းငှါ အဘယ်ကြောင့် ထွက်လာကြသနည်း။ ငါသည် ဖိလိတ္တိလူ၊ သင်တို့သည် ရှောလု၏ ကျွန်ဖြစ်ကြသည် မဟုတ်လော။ လူတယောက်ကို ရွေးကောက် ၍ ငါနှင့်တိုက်ခြင်းငှါ လာပါစေ။
9 ಅವನು ನನ್ನೊಡನೆ ಯುದ್ಧಮಾಡಿ ನನ್ನನ್ನು ಕೊಂದರೆ ನಾವು ನಿಮಗೇ ದಾಸರಾಗಿರುವೆವು. ಆದರೆ ನಾನು ಅವನನ್ನು ಸೋಲಿಸಿ ಕೊಂದರೆ ಆಗ ನೀವು ನಮ್ಮ ಗುಲಾಮರಾಗಿ ನಮ್ಮನ್ನು ಸೇವೆಮಾಡುವವರಾಗುವಿರಿ” ಎಂದು ಹೇಳಿದನು.
သူသည် ငါ့ကို တိုက်၍ သတ်နိုင်လျှင် ငါတို့သည် သင်တို့၏ ကျွန်ခံမည်။ သို့မဟုတ် ထိုသူကို ငါနိုင် ၍ သတ်လျှင်၊ သင်တို့သည် ငါတို့၏ ကျွန်ခံ၍ ငါတို့အမှုကို ဆောင်ရွက်ရကြမည်ဟု ဣသရေလ ဗိုလ်ခြေတို့ကို ဟစ်၍ ပြောဆို၏။
10 ೧೦ ಮತ್ತು ಅವನು, “ಈಹೊತ್ತು ಇಸ್ರಾಯೇಲ ಸೈನ್ಯದವರನ್ನು ಕುರಿತು. ನನ್ನೊಡನೆ ಕಾಳಗಕ್ಕೆ ನಿಮ್ಮಲ್ಲಿಂದ ಒಬ್ಬ ಮನುಷ್ಯನನ್ನು ಕಳುಹಿಸಿರಿ ನೋಡೋಣ” ಎಂದು ಸವಾಲು ಹಾಕಿದನು.
၁၀တဖန် ထိုဖိလိတ္တိလူက၊ ဣသရေလဗိုလ်ခြေတို့ကို ယနေ့ ငါကြိမ်းပ၏။ လူချင်းတိုက်စေခြင်းငှါ လူတယောက်ကို ပေးကြလော့ဟု ဆို၏။
11 ೧೧ ಸೌಲನೂ ಎಲ್ಲಾ ಇಸ್ರಾಯೇಲರೂ ಆ ಫಿಲಿಷ್ಟಿಯನ ಮಾತುಗಳನ್ನು ಕೇಳಿ ಎದೆಗುಂದಿದವರಾಗಿ ಬಹಳ ಭಯಪಟ್ಟರು.
၁၁ဖိလိတ္တိလူပြောသော ထိုစကားကို ရှောလုနှင့် ဣသရေလလူအပေါင်းတို့သည် ကြားလျှင် စိတ်ပျက်၍ အလွန်ကြောက်ရွံ့ကြ၏။
12 ೧೨ ಸೌಲನ ಕಾಲದಲ್ಲಿ ಯೆಹೂದ ಬೇತ್ಲೆಹೇಮ್ ಎಂಬ ಊರಿನ ಎಫ್ರಾತ್ಯನಾದ ಇಷಯನೆಂಬ ಒಬ್ಬ ವೃದ್ಧನಿದ್ದನು. ಇವನ ಎಂಟು ಮಂದಿ ಮಕ್ಕಳಲ್ಲಿ ದಾವೀದನು ಒಬ್ಬನು.
၁၂ယုဒပြည်၊ ဗက်လင်မြို့၊ ဧဖရတ်အရပ်သားဖြစ်သော ဒါဝိဒ်၏ အဘယေရှဲသည် သားရှစ်ယောက် ရှိ၏။ ရှောလုလက်ထက်၌ ထိုသူသည် အသက်ကြီးသော သူ၏ အရာရှိ၏။
13 ೧೩ ಇವನ ಮೂರು ಹಿರಿಯ ಮಕ್ಕಳು ಸೌಲನ ಜೊತೆಯಲ್ಲಿ ಯುದ್ಧಕ್ಕೆ ಹೋಗಿದ್ದರು. ಅವರಲ್ಲಿ ಚೊಚ್ಚಲ ಮಗನ ಹೆಸರು ಎಲೀಯಾಬ, ಎರಡನೆಯ ಮಗನ ಹೆಸರು ಅಬೀನಾದಾಬ, ಮೂರನೆಯವನ ಹೆಸರು ಶಮ್ಮ,
၁၃ယေရှဲ၏သားတို့တွင် အသက် အကြီးဆုံးသောသူ သုံးယောက်တို့သည် စစ်မှုကို ထမ်း၍ ရှောလုနောက် သို့ လိုက်ကြ၏။ သူတို့အမည်ကား သားဦးဧလျာဘ၊ ဒုတိယသားအဘိနဒပ်၊ တတိယသားရှိမာတည်း။
14 ೧೪ ದಾವೀದನೇ ಎಲ್ಲರಿಗಿಂತಲೂ ಕಿರಿಯನು. ಮೂರು ಮಂದಿ ಹಿರಿ ಮಕ್ಕಳು ಸೌಲನ ಜೊತೆಯಲ್ಲಿ ಯುದ್ಧಕ್ಕೆ ಹೋದ್ದರಿಂದ
၁၄ဒါဝိဒ်သည် အငယ်ဆုံးသော သားဖြစ်၏။ သားကြီးသုံးယောက်တို့သည် ရှောလုနောက်တော်သို့ လိုက်ကြသော်လည်း၊ -
15 ೧೫ ದಾವೀದನು ಸೌಲನನ್ನು ಬಿಟ್ಟು ತನ್ನ ತಂದೆಯ ಕುರಿಗಳನ್ನು ಮೇಯಿಸುವುದಕ್ಕೋಸ್ಕರ ಬೇತ್ಲೆಹೇಮಿಗೆ ಹೋದನು.
၁၅ဒါဝိဒ်သည် မလိုက်၊ ဗက်လင်မြို့မှာ မိမိအဘ၏ သိုးတို့ကို ထိန်းကျောင်းခြင်းငှါ ပြန်သွားလေ၏။
16 ೧೬ ಆ ಫಿಲಿಷ್ಟಿಯನು ನಲ್ವತ್ತು ದಿನ ಉದಯದಲ್ಲಿಯೂ, ಸಾಯಂಕಾಲದಲ್ಲಿಯೂ, ಬಂದು ಅದೇ ಪ್ರಕಾರ ಕೂಗುತ್ತಾ ಸವಾಲು ಹಾಕುತ್ತಾ ಯುದ್ಧಕ್ಕೆ ನಿಲ್ಲುತ್ತಿದ್ದನು.
၁၆ဖိလိတ္တိလူသည် အရက်လေးဆယ်ပတ်လုံး၊ နံနက်တခါ၊ ညဦးတခါ ချဉ်းကပ်၍ ကိုယ်ကို ပြ၏။
17 ೧೭ ಒಂದು ದಿನ ಇಷಯನು ತನ್ನ ಮಗನಾದ ದಾವೀದನಿಗೆ, “ಇಗೋ ಇಲ್ಲಿ ಮೂವತ್ತು ಸೇರು ಹುರಿದ ಧಾನ್ಯ, ಹತ್ತು ರೊಟ್ಟಿಗಳೂ ಇರುತ್ತವೆ. ಇವುಗಳನ್ನು ತೆಗೆದುಕೊಂಡು ಶೀಘ್ರವಾಗಿ ಪಾಳೆಯಕ್ಕೆ ಹೋಗಿ ನಿನ್ನ ಅಣ್ಣಂದಿರಿಗೆ ಕೊಡು.
၁၇ထိုအခါ ယေရှဲသည် မိမိသား ဒါဝိဒ်ကို ခေါ်၍၊ သင့်အစ်ကိုတို့အဘို့ ဤပေါက်ပေါက် တဧဖာနှင့် ဤမုန့်ဆယ်လုံးတို့ကို ယူ၍ အစ်ကိုတို့ရှိရာ တပ်တော်သို့ ပြေးသွားလော့။
18 ೧೮ ಇದಲ್ಲದೆ ಇಲ್ಲಿ ಹತ್ತು ಗಿಣ್ಣದ ಉಂಡೆಗಳಿವೆ, ಇವುಗಳನ್ನು ಅವರ ಸಹಸ್ರಾಧಿಪತಿಗೆ ಕೊಡು. ಬರುವಾಗ ನಿನ್ನ ಅಣ್ಣಂದಿರ ಕ್ಷೇಮಸಮಾಚಾರವನ್ನು ವಿಚಾರಿಸಿಕೊಂಡು ಅವರಿಂದ ಒಂದು ಗುರುತನ್ನು ತೆಗೆದುಕೊಂಡು ಬಾ.
၁၈ဤဒိန်ခဲဆယ်လုံးကိုလည်း ယူ၍ သူတို့တပ်မှူးအား ဆက်လော့။ သင့်အစ်ကိုတို့သည် ကျန်းမာခြင်း ရှိသည် မရှိသည်ကို ကြည့်ရှုပြီးမှ၊ သူတို့ထံမှာ သက်သေတစုံတခုကို ခံယူလော့ဟုမှာလိုက်လေ၏။
19 ೧೯ ಸೌಲನೂ, ಇಸ್ರಾಯೇಲರೂ ಏಲಾ ತಗ್ಗಿನಲ್ಲಿ ಫಿಲಿಷ್ಟಿಯರೊಡನೆ ಯುದ್ಧಮಾಡುತ್ತಿದ್ದಾರಲ್ಲಾ” ಎಂದು ಹೇಳಿದನು.
၁၉ထိုကာလ၌ ရှောလုမှစ၍ ဒါဝိဒ်အစ်ကိုတို့နှင့် ဣသရေလလူအပေါင်းတို့သည် ဧလာချိုင့်မှာ ဖိလိတ္တိ လူတို့ကို စစ်တိုက်လျက် ရှိကြ၏။
20 ೨೦ ದಾವೀದನು ಮರುದಿನ ಬೆಳಿಗ್ಗೆ ಎದ್ದು ಕುರಿ ಕಾಯುವವನಿಗೆ ಕುರಿಗಳನ್ನು ಒಪ್ಪಿಸಿ, ತನ್ನ ತಂದೆಯಾದ ಇಷಯನು ಹೇಳಿದವುಗಳನ್ನು ತೆಗೆದುಕೊಂಡು ಸೈನ್ಯವು ಹೊರಟು ಯುದ್ಧಕ್ಕಾಗಿ ಅರ್ಭಟಿಸುವ ಹೊತ್ತಿನಲ್ಲಿ ಪಾಳೆಯದ ರಥಗಳು ನಿಂತಿದ್ದ ಸ್ಥಳಕ್ಕೆ ಬಂದನು.
၂၀ဒါဝိဒ်သည် နံနက်စောစောထ၍ သိုးတို့ကို သိုးထိန်း၌ အပ်ပြီးလျှင်၊ အဘမှာလိုက်သည် အတိုင်း စားစရာကို ယူသွား၍၊ ရိက္ခာလှည်းထားရာသို့ ရောက်သောအခါ၊ -
21 ೨೧ ಇಸ್ರಾಯೇಲರು, ಫಿಲಿಷ್ಟಿಯರೂ ಎದುರೆದುರು ವ್ಯೂಹಕಟ್ಟುವಷ್ಟರಲ್ಲಿ
၂၁ဣသရေလ တပ်သားတို့နှင့် ဖိလိတ္တိတပ်သားတို့သည် စစ်ခင်းကျင်း၍ စစ်တလင်းသို့ ချီလျက်၊ စစ် တိုက်မည်အသံနှင့် ကြွေးကြော်ကြ၏။
22 ೨೨ ದಾವೀದನು ತಾನು ತಂದವುಗಳನ್ನು ಸಾಮಾನು ಕಾಯುವವನ ಬಳಿಯಲ್ಲಿಟ್ಟು ರಣರಂಗಕ್ಕೆ ಓಡಿಹೋಗಿ ತನ್ನ ಸಹೋದರರ ಕ್ಷೇಮಸಮಾಚಾರವನ್ನು ವಿಚಾರಿಸುತ್ತಾ ಅವರೊಡನೆ ಮಾತನಾಡುತ್ತಿದ್ದನು.
၂၂ဒါဝိဒ်သည် မိမိ၌ပါသောအရာတို့ကို ရိက္ခာစောင့်လက်၌ အပ်ထားပြီးလျှင်၊ တပ်သားစုထဲသို့ ပြေး၍ မိမိအစ်ကိုတို့ကို နှုတ်ဆက်၏။
23 ೨೩ ಅಷ್ಟರಲ್ಲಿ ಗತ್ ಊರಿನ ಯುದ್ಧವೀರನಾದ ಗೊಲ್ಯಾತನೆಂಬ ಆ ಫಿಲಿಷ್ಟಿಯನು ತನ್ನ ಸೈನ್ಯದಿಂದ ಹೊರಗೆ ಬಂದು ಮುಂಚಿನಂತೆಯೇ ಕೂಗಿದನು. ದಾವೀದನು ಅವನ ಮಾತುಗಳನ್ನು ಕೇಳಿದನು.
၂၃သူတို့နှင့် ပြောစဉ်တွင်၊ ဖိလိတ္တိလူ၊ ဂါသမြို့သား ဂေါလျတ်အမည်ရှိသော သူရဲသည် ဖိလိတ္တိတပ်ထဲ က ထွက်လာ၍ ယမန်ကဲ့သို့ ပြောဆိုသည်ကို ဒါဝိဒ်သည် ကြားလေ၏။
24 ೨೪ ಇಸ್ರಾಯೇಲರು ಅವನನ್ನು ನೋಡಿ ಬಹಳವಾಗಿ ಭಯಪಟ್ಟು ಅಲ್ಲಿಂದ ಓಡಿಹೋದರು.
၂၄ဣသရေလလူအပေါင်းတို့သည် ထိုသူကို မြင်သောအခါ အလွန်ကြောက်ရွံ့၍ ပြေးကြ၏။
25 ೨೫ ಅವರು, “ಇಸ್ರಾಯೇಲ್ಯರಾದ ನಮ್ಮನ್ನು ಹೀಯಾಳಿಸುವುದಕ್ಕೋಸ್ಕರ ಬಂದಿರುವ ಈ ಮನುಷ್ಯನನ್ನು ಕಂಡಿರಾ? ಯಾವನು ಇವನನ್ನು ಕೊಲ್ಲುವನೋ ಅಂಥವನಿಗೆ ಅರಸನು ಅಪಾರದ್ರವ್ಯದೊಡನೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡುವನು. ಇದಲ್ಲದೆ ಅವನ ತಂದೆಯ ಕುಟುಂಬವನ್ನು ಎಲ್ಲಾ ತೆರಿಗೆಯಿಂದ ವಿಮೋಚಿಸುವನು” ಎಂದು ಮಾತನಾಡಿಕೊಳ್ಳುತ್ತಿದ್ದರು.
၂၅အချို့တို့ကလည်း၊ ထိုလူထွက်လာသည်ကို မြင်သလော။ ဣသရေလအမျိုးကို ကြိမ်းပလျက်ထွက်လာ ပါသည်တကား။ သူ့ကို သတ်သောသူအား ရှင်ဘုရင်သည် ကြီးသော စည်းစိမ်နှင့် ချီးမြှောက်၍ သမီးတော်ကိုလည်း ပေးစားတော်မူမည်။ ထိုသူ၏ အဆွေအမျိုးကိုလည်း ဣသရေလနိုင်ငံတွင် မင်းမှု လွှတ်တော်မူမည်ဟု ပြောဆိုကြ၏။
26 ೨೬ ದಾವೀದನು, “ಜೀವಸ್ವರೂಪನಾದ ದೇವರ ಸೈನ್ಯವನ್ನು ಹೀಯಾಳಿಸುವುದಕ್ಕೆ ಸುನ್ನತಿಯಿಲ್ಲದ ಈ ಫಿಲಿಷ್ಟಿಯನು ಎಷ್ಟರವನು? ಇವನನ್ನು ಕೊಂದು ಇಸ್ರಾಯೇಲ್ಯರಿಗೆ ಬಂದಿರುವ ನಿಂದೆಯನ್ನು ತೆಗೆದುಹಾಕುವವನಿಗೆ ಏನು ಸಿಕ್ಕುವುದು ಹೇಳಿರಿ” ಎಂದು ತನ್ನ ಬಳಿಯಲ್ಲಿ ನಿಂತಿದ್ದ ಮನುಷ್ಯರನ್ನು ಕೇಳಿದನು,
၂၆ဒါဝိဒ်ကလည်း၊ ထိုဖိလိတ္တိလူကို သတ်၍ ဣသရေလအမျိုးခံသော အရှက်ကွဲခြင်းကို ပယ်ရှင်းသော သူသည် အဘယ်အကျိုးကို ရလိမ့်မည်နည်း။ အသက်ရှင်တော်မူသော ဘုရားသခင်၏ ဗိုလ်ခြေ တို့ကို ကြိမ်းပရမည်အကြောင်း၊ အရေဖျားလှီးခြင်းကို မခံသော ထိုဖိလိတ္တိလူသည် အဘယ်သို့သော သူဖြစ်သနည်းဟု မိမိအနားမှာရှိသော သူတို့အား မေးမြန်းလျှင်၊-
27 ೨೭ ಅದಕ್ಕೆ ಅವರು ಮುಂಚಿನಂತೆ ಇಂಥಿಂಥದು ದೊರಕುವುದೆಂದು ಉತ್ತರಕೊಟ್ಟರು.
၂၇သူတို့က၊ ထိုလူကို သတ်သောသူသည် ဤမည်သော အကျိုးကို ရလိမ့်မည်ဟု ယမန်ကဲ့သို့ ပြန်ပြောကြ၏။
28 ೨೮ ದಾವೀದನು ಜನರ ಸಂಗಡ ಹೀಗೆ ಮಾತನಾಡುತ್ತಿರುವುದನ್ನು ಅವನ ಹಿರಿಯ ಅಣ್ಣನಾದ ಎಲೀಯಾಬನು ಕೇಳಿ ಕೋಪಗೊಂಡು, “ನೀನು ಇಲ್ಲಿಗೆ ಬಂದದ್ದೇಕೆ? ಅಡವಿಯಲ್ಲಿರುವ ನಾಲ್ಕಾರು ಕುರಿಗಳನ್ನು ಯಾರಿಗೊಪ್ಪಿಸಿ ಬಂದಿರುವೆ. ನಿನ್ನ ಸೊಕ್ಕು, ತುಂಟತನವು ನನಗೆ ಗೊತ್ತಿದೆ. ನೀನು ಯುದ್ಧವನ್ನು ನೋಡುವುದಕ್ಕೆ ಬಂದಿದ್ದೀ” ಎಂದು ಅವನನ್ನು ಗದರಿಸಿದನು.
၂၈ထိုသူတို့နှင့် ဒါဝိဒ်ပြောသည်ကို အစ်ကိုအကြီး ဧလျာဘကြားလျှင် ဒါဝိဒ်ကို အမျက်ထွက်၍၊ သင်သည် အဘယ်ကြောင့် ဤအရပ်သို့ လာသနည်း။ ထိုနည်းသော သိုးတို့ကို တောတွင် အဘယ်သူလက်၌ အပ်ခဲ့သနည်း။ သင့်မာနကြီးခြင်း၊ သင့်စိတ်နှလုံးဆိုးညစ်ခြင်းကို ငါသိ၏။ စစ်ပွဲကို ကြည့်ရှုခြင်းငှါ သာလာပြီဟု ဆို၏။
29 ೨೯ ಆಗ ದಾವೀದನು, “ನಾನೇನು ತಪ್ಪು ಮಾಡಿದೆನು? ಸುಮ್ಮನೆ ಮಾತನಾಡಿದೆನಷ್ಟೆ” ಎಂದು ಹೇಳಿ
၂၉ဒါဝိဒ်ကလည်း၊ အကျွန်ုပ်သည် အဘယ်အမှုကို ပြုမိသနည်း။ ယခုပြောစရာ အကြောင်းမရှိလောဟု ဆိုသောနောက်၊
30 ೩೦ ಅವನನ್ನು ಬಿಟ್ಟು ಬೇರೆ ಕಡೆಗೆ ಹೋಗಿ ಹಾಗೆಯೇ ವಿಚಾರಿಸಲು ಜನರು ಮುಂಚಿನಂತೆಯೇ ಉತ್ತರಕೊಟ್ಟರು.
၃၀အခြားသောသူတို့ထံသို့ လှည့်၍ ယမန်ကဲ့သို့ မေးမြန်းလျှင်၊ သူတို့သည် ရှေ့အတူ ပြန်ပြောကြ၏။
31 ೩೧ ದಾವೀದನು ಈ ಪ್ರಕಾರ ವಿಚಾರಿಸುತ್ತಿರುವುದನ್ನು ಕೇಳಿದವರು ಸೌಲನಿಗೆ ತಿಳಿಸಿದರು. ಅವನು ದಾವೀದನನ್ನು ಕರೆದುಕೊಂಡು ಬರಲು ಹೇಳಿದನು.
၃၁ထိုသို့ ဒါဝိဒ်ပြောသော စကားကို ကြားသော သူတို့သည် ရှောလုထံတော်၌ ကြားလျှောက်သော်၊ ဒါဝိဒ်ကို ခေါ်တော်မူ၏။
32 ೩೨ ದಾವೀದನು ಸೌಲನಿಗೆ, “ಆ ಫಿಲಿಷ್ಟಿಯನ ನಿಮಿತ್ತವಾಗಿ ಯಾವನೂ ಧೈರ್ಯಗೆಡಬಾರದು ನಿನ್ನ ಸೇವಕನಾದ ನಾನು ಹೋಗಿ ಅವನೊಡನೆ ಯುದ್ಧಮಾಡುವೆನು” ಅನ್ನಲು,
၃၂ဒါဝိဒ်ကလည်း ထိုလူကြောင့် အဘယ်သူမျှ စိတ်မပျက်ပါစေနှင့်။ ကိုယ်တော်ကျွန်သွား၍ ထိုဖိလိတ္တိ လူကို တိုက်ပါမည်ဟု ရှောလုအား လျှောက်လျှင်၊-
33 ೩೩ ಸೌಲನು ಅವನಿಗೆ, “ಅವನೊಡನೆ ಕಾದಾಡಲಾರೆ, ನೀನು ಇನ್ನೂ ಹುಡುಗನು ಅವನಾದರೋ ಚಿಕ್ಕಂದಿನಿಂದಲೇ ಯುದ್ಧವೀರನು” ಎಂದು ಹೇಳಿದನು.
၃၃ရှောလုက၊ သင်သည် ထိုဖိလိတ္တိလူကို သွား၍ မတိုက်နိုင်။ သင်သည် နုပျိုသောသူဖြစ်၏။ ထိုသူသည် ပျိုသောအရွယ်မှစ၍ စစ်သူရဲဖြစ်ခဲ့ပြီဟု ဒါဝိဒ်အား ဆိုသော်၊-
34 ೩೪ ಆಗ ದಾವೀದನು ಅವನಿಗೆ, “ನಿನ್ನ ಸೇವಕನಾದ ನಾನು ನನ್ನ ತಂದೆಯ ಕುರಿಗಳನ್ನು ಕಾಯುತ್ತಿರುವಾಗ ಸಿಂಹವಾಗಲಿ, ಕರಡಿಯಾಗಲಿ ಹಿಂಡಿನಲ್ಲಿನ ಕುರಿಮರಿಯನ್ನು ಹಿಡಿದುಕೊಂಡು ಹೋಗಲು ಬಂದರೆ
၃၄ဒါဝိဒ်က၊ ကိုယ်တော်ကျွန်သည် အဘ၏ သိုးတို့ကို ထိန်းကျောင်းစဉ်အခါ၊ ခြင်္သေ့နှင့်ဝံသည်လာ၍ သိုးသငယ်ကို သိုးစုထဲက ကိုက်ချီပါ၏။
35 ೩೫ ನಾನು ಒಡನೇ ಬೆನ್ನಟ್ಟಿ, ಅದನ್ನು ಹೊಡೆದು, ಕುರಿಮರಿಯನ್ನು ಕಿತ್ತುಕೊಳ್ಳುತ್ತಿದ್ದೆನು. ಅದು ಹಿಂದಿರುಗಿ ನನ್ನ ಮೇಲೆ ಬೀಳಲು ಬಂದಾಗ ಅದರ ಗದ್ದಹಿಡಿದು ಬಡಿದು ಕೊಂದುಹಾಕುತ್ತಿದ್ದೆನು.
၃၅ကျွန်တော်လိုက်၍ သတ်သဖြင့် သိုးသငယ်ကို သူ့ပစပ်ထဲက နှုတ်ပါ၏။ ဝံသည် ကျွန်တော်ကို ပြန်၍ ကိုက်သောအခါ၊ ဝံ၏မုတ်ဆိတ်ကို ကိုင်၍ ရိုက်သတ်ပါ၏။
36 ೩೬ ನಿನ್ನ ಸೇವಕನಿಂದ ಕೊಲ್ಲಲ್ಪಟ್ಟ ಸಿಂಹಕ್ಕೂ, ಕರಡಿಗೂ ಆದ ಗತಿಯೇ ಜೀವಸ್ವರೂಪನಾದ ದೇವರ ಸೈನ್ಯವನ್ನು ನಿಂದಿಸುವಂಥ ಈ ಸುನ್ನತಿಯಿಲ್ಲದ ಫಿಲಿಷ್ಟಿಯನಿಗೂ ಆಗಬೇಕು.
၃၆ကိုယ်တော် ကျွန်သည် ခြင်္သေ့နှင့်ဝံနှစ်ကောင်လုံးကို သတ်ပါ၏။ အရေဖျားလှီးခြင်းကို မခံသော ထိုဖိလိတ္တိလူသည် အသက်ရှင်တော်မူသော ဘုရားသခင်၏ ဗိုလ်ခြေတို့ကို ကြိမ်းပသောကြောင့်၊ ထိုအကောင် တကောင်ကဲ့သို့ ဖြစ်ပါလိမ့်မည်။
37 ೩೭ ನನ್ನನ್ನು ಅಂಥ ಸಿಂಹದ ಮತ್ತು ಕರಡಿಯ ಉಗುರುಗಳಿಗೆ ತಪ್ಪಿಸಿದ ಯೆಹೋವನು ಈ ಫಿಲಿಷ್ಟಿಯನ ಕೈಯಿಂದಲೂ ತಪ್ಪಿಸುವನು” ಎಂದನು. ಆಗ ಸೌಲನು ದಾವೀದನಿಗೆ “ಹೋಗು ಯೆಹೋವನು ನಿನ್ನ ಸಂಗಡ ಇರಲಿ” ಎಂದು ಹೇಳಿ,
၃၇ခြင်္သေ့လက်၊ ဝံလက်မှ ကျွန်တော်ကို ကယ်နှုတ်တော်မူသော ထာဝရဘုရားသည်၊ ထိုဖိလိတ္တိလူလက်မှ ကယ်နှုတ်တော်မူလိမ့်မည်ဟု ရှောလုအား လျှောက်လေသော်၊ ရှောလုကသွားလော့။ ထာဝရဘုရား သည် သင်နှင့်အတူ ရှိတော်မူပါစေသောဟု ဒါဝိဒ်အား ဆိုလေ၏။
38 ೩೮ ಅವನಿಗೆ ತನ್ನ ಯುದ್ಧ ವಸ್ತ್ರಗಳನ್ನು, ಕವಚವನ್ನೂ ತೊಣಿಸಿ, ತಲೆಗೊಂದು ತಾಮ್ರದ ಶಿರಸ್ತ್ರಾಣವನ್ನಿಟ್ಟನು.
၃၈ရှောလုသည်လည်း ဒါဝိဒ်ကို မိမိအဝတ်နှင့်ဝတ်စေသဖြင့်၊ သူ၏ခေါင်းပေါ်မှာ ကြေးဝါခလောက်လုံး ကိုတင်၍၊ သံချပ်အင်္ကျီကိုလည်း ဝတ်စေ၏။
39 ೩೯ ದಾವೀದನು ಯುದ್ಧ ವಸ್ತ್ರದ ಮೇಲೆ ಕತ್ತಿಯನ್ನೂ ಬಿಗಿದುಕೊಂಡ ನಂತರ ನಡೆಯಲು ಸಾಧ್ಯವಾಗುತ್ತದೆಯೇ ಎಂದು ಪರೀಕ್ಷಿಸಿದ ಮೇಲೆ ಸೌಲನಿಗೆ, “ನನಗೆ ಅಭ್ಯಾಸವಿಲ್ಲದೆ ಇರುವುದರಿಂದ ಇವುಗಳನ್ನು ಧರಿಸಿಕೊಂಡು ನಡೆಯಲಾರೆ” ಎಂದು ಹೇಳಿ ಅವುಗಳನ್ನು ತೆಗೆದಿಟ್ಟು
၃၉ဒါဝိဒ်သည် ထားတော်ကို အဝတ်ပေါ်မှာ စည်း၍ သွားမည်ဟု အားထုတ်သော်လည်း၊ ထိုလက်နက် များကို မစုံစမ်းသေး။ သို့ဖြစ်၍ ဒါဝိဒ်က ဤလက်နက်တို့နှင့် ကျွန်တော် မသွားနိုင်ပါ၊ မစုံစမ်းပါသေး ဟု ရှောလုအား လျှောက်၍ ချွတ်ပြန်လေ၏။
40 ೪೦ ತನ್ನ ಕೋಲನ್ನು ತೆಗೆದುಕೊಂಡು ಹೊರಟು, ಹಳ್ಳದಲ್ಲಿನ ಐದು ನುಣುಪುಕಲ್ಲುಗಳನ್ನು ಆರಿಸಿಕೊಂಡು, ಅವುಗಳನ್ನು ಕುರುಬರ ಪದ್ಧತಿಯಂತೆ ತನಗಿರುವ ಸೊಂಟದ ಚೀಲದಲ್ಲಿ ಹಾಕಿ ಕೈಯಲ್ಲಿ ಕವಣೆಯನ್ನು ಹಿಡಿದು ಫಿಲಿಷ್ಟಿಯನ ಬಳಿಗೆ ಹೋದನು.
၄၀တဖန် မိမိတောင်ဝေးကို ကိုင်လျက်၊ ချောသောကျောက်ငါးလုံးကို ချောင်းထဲက ရွေး၍၊ သိုးထိန်း တန်ဆာတည်းဟူသော လွယ်အိတ်၌ ထည့်ပြီးမှ၊ လောက်လွှဲကိုလည်းကိုင်၍ ဖိလိတ္တိလူရှိရာသို့ ချဉ်းလေ၏။
41 ೪೧ ಇತ್ತ ಫಿಲಿಷ್ಟಿಯನೂ ದಾವೀದನ ಸಮೀಪಕ್ಕೆ ಬಂದನು. ಗುರಾಣಿ ಹೊರುವವರು ಅವನ ಮುಂದೆ ಇದ್ದರು.
၄၁ဖိလိတ္တိလူသည်လည်း ဒါဝိဒ်ရှိရာသို့ ချဉ်း၍ သူ့ရှေ့မှာ ဒိုင်းလွှားကို ဆောင်သောသူလည်း သွား၏။
42 ೪೨ ಫಿಲಿಷ್ಟಿಯನು ಕೆಂಬಣ್ಣದವನೂ, ಸುಂದರನೂ, ಯೌವನಸ್ಥನೂ ಆದ ದಾವೀದನನ್ನು ನೋಡಿ ತಿರಸ್ಕಾರದಿಂದ ಅವನಿಗೆ,
၄၂ဖိလိတ္တိလူသည် ကြည့်၍ ဒါဝိဒ်ကို မြင်သောအခါ မထီမဲ့မြင်ပြု၏။ အကြောင်းမူကား၊ သူသည် နုပျိုသောသူ၊ ဆံပင်နီ၍ မျက်နှာလှသောသူ ဖြစ်၏။
43 ೪೩ “ನೀನು ಕೋಲುಹಿಡಿದು ನನ್ನ ಬಳಿಗೆ ಬರುವುದೇನು? ನಾನು ನಾಯಿಯೋ” ಎಂದು ಹೇಳಿ ಅವನನ್ನು ತನ್ನ ದೇವರ ಹೆಸರಿನಲ್ಲಿ ಶಪಿಸಿ,
၄၃ဖိလိတ္တိလူက၊ သင်သည် တောင်ဝေးနှင့် ငါ့ထံသို့ လာရမည်အကြောင်း၊ ငါသည် ခွေးဖြစ်သလောဟု မေးလျက်၊ မိမိဘုရားတို့ကို တိုင်တည်၍ ဒါဝိဒ်ကို ကျိန်ဆဲလေ၏။
44 ೪೪ “ಇಲ್ಲಿ ಬಾ, ನಿನ್ನ ಮಾಂಸವನ್ನು ಮೃಗ ಪಕ್ಷಿಗಳಿಗೆ ಹಂಚಿಕೊಡುತ್ತೇನೆ” ಅಂದನು.
၄၄တဖန် ဖိလိတ္တိလူက လာခဲ့။ သင့်အသားကို မိုဃ်းကောင်းကင် ငှက်နှင့်တောသားရဲတို့အား ငါပေးမည်ဟု ဒါဝိဒ်ကိုဆို၏။
45 ೪೫ ಆಗ ದಾವೀದನು ಅವನಿಗೆ, “ನೀನು ಈಟಿ, ಕತ್ತಿ, ಬರ್ಜಿಗಳೊಡನೆ ನನ್ನ ಬಳಿಗೆ ಬರುತ್ತೀ. ನಾನಾದರೋ ನೀನು ಹೀಯಾಳಿಸಿದಂಥ ಸೇನಾಧೀಶ್ವರನೂ, ಇಸ್ರಾಯೇಲ್ಯರ ಯುದ್ಧಭಟರ ದೇವರೂ ಆಗಿರುವ ಯೆಹೋವನ ನಾಮದೊಡನೆ ನಿನ್ನ ಬಳಿಗೆ ಬಂದಿದ್ದೇನೆ.
၄၅ဒါဝိဒ်ကသင်သည် ထား၊ လှံ၊ ကိဒုန်ပါလျက် ငါ့ထံသို့ လာ၏။ ငါသည် သင် ကြိမ်းပသော ဣသရေလ ဗိုလ်ခြေတို့၏ ဘုရားသခင်၊ ကောင်းကင်ဗိုလ်ခြေ အရှင်ထာဝရဘုရား၏ နာမတော်ပါလျက် သင်ရှိ ရာသို့လာ၏။
46 ೪೬ ಆತನು ಈ ಹೊತ್ತು ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಡುವನು. ನಾನು ನಿನ್ನನ್ನು ಕೊಂದು ನಿನ್ನ ತಲೆಯನ್ನು ಕಡಿದು ಹಾಕಿ ಫಿಲಿಷ್ಟಿಯ ಸೈನ್ಯದ ಶವಗಳನ್ನು ಮೃಗ ಪಕ್ಷಿಗಳಿಗೆ ಹಂಚಿಕೊಡುವೆನು. ಇದರಿಂದ ಇಸ್ರಾಯೇಲರೊಳಗೆ ದೇವರಿದ್ದಾನೆಂಬುದು ಭೂಲೋಕದವರಿಗೆಲ್ಲಾ ತಿಳಿದುಬರುವುದು.
၄၆ထာဝရဘုရားသည် သင့်ကို ငါ့လက်၌ ယနေ့ အပ်တော်မူသဖြင့်၊ သင့်ကို ငါသတ်၍ လည်ပင်းကို ဖြတ်မည်။ ဖိလိတ္တိဗိုလ်ခြေ အသေကောင်များကို မိုဃ်းကောင်းကင်ငှက်နှင့် တောသားရဲတို့အား ယနေ့ ငါပေးမည်။ ဣသရေလအမျိုး၌ ဘုရားသခင် ရှိတော်မူသည်ကို မြေကြီးသားအပေါင်းတို့ သည်သိရကြလိမ့်မည်။
47 ೪೭ ಯೆಹೋವನು ಈಟಿಕತ್ತಿಗಳಿಲ್ಲದೇ ರಕ್ಷಿಸಬಲ್ಲನೆಂಬುದು ಇಲ್ಲಿ ಕೂಡಿರುವವರಿಗೆಲ್ಲಾ ತಿಳಿದುಬರುವುದು. ಯಾಕೆಂದರೆ ಯುದ್ಧಫಲವು ಯೆಹೋವನ ಕೈಯಲ್ಲಿದೆ. ಆತನು ನಿಮ್ಮನ್ನು ನಮ್ಮ ಕೈಗೆ ಒಪ್ಪಿಸಿಕೊಡುವನು” ಅಂದನು.
၄၇ထာဝရဘုရားသည် ထားလှံအားဖြင့် ကယ်တင်တော်မမူကြောင်းကို၊ ဤပရိသတ်အပေါင်းတို့သည် သိရကြလိမ့်မည်။ အကြောင်းမူကား၊ ထာဝရဘုရားသည် စစ်မှုကို ပိုင်၍၊ ငါတို့လက်သို့ အပ်နှံတော် မူမည်ဟု ဖိလိတ္တိလူအား ဆို၏။
48 ೪೮ ಕೂಡಲೇ ಆ ಫಿಲಿಷ್ಟಿಯನು ಹೊರಟು ದಾವೀದನೊಡನೆ ಯುದ್ಧಮಾಡುವುದಕ್ಕೆ ಸಮೀಪಿಸಿದಾಗ ದಾವೀದನು ಫಿಲಿಷ್ಟಿಯರ ಸೈನ್ಯದ ಕಡೆಗೆ ಓಡಿಹೋಗಿ ಆ ಫಿಲಿಷ್ಟಿಯನನ್ನು ಸಂಧಿಸಿ,
၄၈ဖိလိတ္တိလူသည် ထ၍ ဒါဝိဒ်နှင့်တွေ့ခြင်းငှါ ချဉ်းလာသောအခါ၊ ဒါဝိဒ်သည်လည်း ဖိလိတ္တိလူနှင့် တွေ့ခြင်းငှါ ဗိုလ်ခြေရှိရာသို့ အလျင်အမြန် ပြေးပြီးမှ၊-
49 ೪೯ ಚೀಲದಲ್ಲಿ ಕೈ ಹಾಕಿ, ಒಂದು ಕಲ್ಲನ್ನು ತೆಗೆದು ಅವನ ಹಣೆಗೆ ಗುರಿಯಿಟ್ಟು ಕವಣೆಯನ್ನು ಬೀಸಿ ಹೊಡೆಯಲು ಕಲ್ಲು ಅವನ ಹಣೆಯೊಳಗೆ ಹೊಕ್ಕಿತು. ಅವನು ಬೋರಲುಬಿದ್ದನು
၄၉လွယ်အိတ်ထဲက ကျောက်တလုံးကို နှိုက်ယူ၍ လွှဲပစ်၏။ ဖိလိတ္တိလူ၏ နဖူးကို မှန်၍ နဖူးပေါက် သဖြင့် သူသည် မြေပေါ်မှာ ငိုက်စိုက်လဲလေ၏။
50 ೫೦ ಕೂಡಲೇ ಅವನು ಓಡಿಹೋಗಿ ಆ ಫಿಲಿಷ್ಟಿಯನ ಮೇಲೆ ನಿಂತು ಅವನ ಕತ್ತಿಯನ್ನು ತೆಗೆದುಕೊಂಡು, ಅದರಿಂದಲೇ ಅವನ ತಲೆಯನ್ನು ಕತ್ತರಿಸಿ, ಅವನನ್ನು ಸಾಯಿಸಿದನು.
၅၀ထိုသို့ ဒါဝိဒ်သည် လောက်လွှဲနှင့် ကျောက်တလုံးအားဖြင့် နိုင်လျက် ထိခိုက်၍ သတ်လေ၏။
51 ೫೧ ಈ ಪ್ರಕಾರ ದಾವೀದನು ಕತ್ತಿಯಿಂದಲ್ಲ ಬರೀ ಒಂದು ಕವಣೆಯ ಕಲ್ಲಿನಿಂದ ಫಿಲಿಷ್ಟಿಯನನ್ನು ಸೋಲಿಸಿ, ಕೊಂದು ಹಾಕಿದನು ಫಿಲಿಷ್ಟಿಯರು ತಮ್ಮ ರಣವೀರನು ಸತ್ತುಹೋದದ್ದನ್ನು ಕಂಡು ಓಡಿಹೋದರು.
၅၁ထိုအခါ ဒါဝိဒ်သည် ထားမပါသောကြောင့် ပြေး၍ ဖိလိတ္တိလူကို နင်းလျက်၊ သူ၏ ထားကို ထားအိမ်မှ နှုတ်ဆွဲပြီးလျှင် လည်ပင်းကို ဖြတ်၍ အပြီးသတ်လေ၏။ ဖိလိတ္တိလူတို့သည် သူတို့၏ သူရဲသေကြောင်းကို မြင်သောအခါ ပြေးကြ၏။
52 ೫೨ ಇಸ್ರಾಯೇಲರು ಯೆಹೂದ್ಯರು ಎದ್ದು ಆರ್ಭಟಿಸಿ ಫಿಲಿಷ್ಟಿಯರನ್ನು ತಗ್ಗಿನ ದಾರಿಯವರೆಗೂ ಎಕ್ರೋನಿನ ಬಾಗಿಲುಗಳವರೆಗೂ ಹಿಂದಟ್ಟಿದರು. ಫಿಲಿಷ್ಟಿಯರ ಹೆಣಗಳು ಶಾರಯಿಮಿನಿಂದ ಗತ್ ಎಕ್ರೋನ್ ಪಟ್ಟಣಗಳವರೆಗೂ ಬಿದ್ದಿದ್ದವು.
၅၂ထိုအခါ ဣသရေလအမျိုး၊ ယုဒအမျိုးသားတို့သည် ထ၍ ကြွေးကြော်လျက် ချိုင့်တိုင်အောင်၎င်း၊ ဧကြုန်မြို့ တံခါးတိုင်အောင်၎င်း၊ ဖိလိတ္တိလူတို့ကို လိုက်ကြ၏။ ထိခိုက်သော ဖိလိတ္တိလူတို့သည် ရှာရိမ်မြို့ လမ်းနားမှစ၍ ဂါသမြို့၊ ဧကြုန်မြို့တိုင်အောင် လဲကြ၏။
53 ೫೩ ಅನಂತರ ಇಸ್ರಾಯೇಲರು ಹಿಂತಿರುಗಿ ಬಂದು ಫಿಲಿಷ್ಟಿಯರ ಪಾಳೆಯವನ್ನು ಸೂರೆಮಾಡಿದರು.
၅၃ဣသရေလ အမျိုးသားတို့သည် ဖိလိတ္တိလူတို့ကို လိုက်ရာမှ ပြန်လာ၍ သူတို့တဲများကို လုယူကြ၏။
54 ೫೪ ದಾವೀದನು ಆ ಫಿಲಿಷ್ಟಿಯನ ತಲೆಯನ್ನು ಯೆರೂಸಲೇಮಿಗೆ ಒಯ್ದನು. ಅವನ ಆಯುಧಗಳನ್ನು ತನ್ನ ಗುಡಾರದಲ್ಲಿಟ್ಟುಕೊಂಡನು.
၅၄ဒါဝိဒ်သည် ဖိလိတ္တိလူ၏ ဦးခေါင်းကို ယူ၍ ယေရုရှလင်မြို့သို့ ဆောင်သွား၏။ သူ၏လက်နက်များ ကို မိမိတဲ၌ ထား၏။
55 ೫೫ ದಾವೀದನು ಫಿಲಿಷ್ಟಿಯರೊಡನೆ ಯುದ್ಧಮಾಡುವುದಕ್ಕೆ ಹೊರಟದ್ದನ್ನು ಸೌಲನು ಕಂಡು ತನ್ನ ಸೇನಾಪತಿಯಾದ ಅಬ್ನೇರನನ್ನು, “ಅಬ್ನೇರನೇ ಈ ಹುಡುಗನು ಯಾರ ಮಗನು?” ಎಂದು ಕೇಳಿದ್ದಕ್ಕೆ ಅವನು ಸೌಲನಿಗೆ, “ಅರಸನೇ ನಿನ್ನ ಜೀವದಾಣೆ ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟನು.
၅၅ဒါဝိဒ်သည် ဖိလိတ္တိလူကို တိုက်ခြင်းငှါ ထွက်သွားသည်ကို ရှောလုသည်မြင်လျှင်၊ ထိုလုလင်ကား အဘယ်သူ၏ သာဖြစ်သနည်းဟု ဗိုလ်ချုပ်မင်းအာဗနာကို မေး၏။ အာဗနာကလည်း၊ အရှင်မင်းကြီး အသက်တော် ရှင်သည်အတိုင်း ကျွန်တော် မသိပါဟု လျှောက်လျှင်၊-
56 ೫೬ ಆಗ ಅರಸನು ಅವನಿಗೆ, “ಆ ಪ್ರಾಯಸ್ಥನು ಯಾರ ಮಗನೆಂದು ವಿಚಾರಿಸು” ಎಂದು ಆಜ್ಞಾಪಿಸಿದನು.
၅၆ရှင်ဘုရင်က၊ ထိုလုလင်သည် အဘယ်သူ၏ သားဖြစ်လိမ့်မည်ကို မေးစစ်လော့ဟု မိန့်တော်မူ၏။
57 ೫೭ ದಾವೀದನು ಫಿಲಿಷ್ಟಿಯನನ್ನು ಕೊಂದು ಅವನ ತಲೆಯನ್ನು ಹಿಡಿದುಕೊಂಡು ಹಿಂದಿರುಗಿ ಬರುವಾಗ ಅಬ್ನೇರನು ಅವನನ್ನು ಕರೆದು ಸೌಲನ ಮುಂದೆ ನಿಲ್ಲಿಸಿದನು.
၅၇ဒါဝိဒ်သည် ဖိလိတ္တိလူကို သတ်ပြီးမှ၊ သူ၏ ဦးခေါင်းကို ကိုင်လျက် ပြန်လာသောအခါ၊ အာဗနာသည် ခေါ်၍ ရှောလုထံသို့ ဆောင်သွားပြီးလျှင်၊-
58 ೫೮ ಸೌಲನು ಅವನನ್ನು, “ಹುಡುಗನೇ ನೀನು ಯಾರ ಮಗನು?” ಎಂದು ಕೇಳಿದ್ದಕ್ಕೆ ಅವನು, “ನಾನು ಬೇತ್ಲೆಹೇಮಿನವನೂ ನಿನ್ನ ಸೇವಕನೂ ಆದ ಇಷಯನ ಮಗನು” ಎಂದು ಉತ್ತರಕೊಟ್ಟನು.
၅၈ရှောလုက၊ အချင်း လုလင်၊ သင်သည် အဘယ်သူ၏ သားဖြစ်သနည်းဟု မေးတော်မူ၏။ ဒါဝိဒ်ကလည်း ကျွန်တော်သည် ကိုယ်တော်ကျွန်၊ ဗက်လင်မြို့သား ယေရှဲ၏သား ဖြစ်ပါသည်ဟု လျှောက်လေ၏။

< ಸಮುವೇಲನು - ಪ್ರಥಮ ಭಾಗ 17 >