< ಅರಸುಗಳು - ಪ್ರಥಮ ಭಾಗ 7 >
1 ೧ ಸೊಲೊಮೋನನು ತನ್ನ ಅರಮನೆಯನ್ನು ಹದಿಮೂರು ವರ್ಷಗಳಲ್ಲಿ ಕಟ್ಟಿಸಿ ಮುಗಿಸಿದನು.
ଏଥିଉତ୍ତାରେ ଶଲୋମନ ତେର ବର୍ଷ ଆପଣା ଗୃହ ନିର୍ମାଣ କରିବାରେ ଲାଗି ଆପଣାର ସମୁଦାୟ ଗୃହ ସମାପ୍ତ କଲେ।
2 ೨ ಅವನು ಕಟ್ಟಿಸಿದ ಲೆಬನೋನಿನ ತೋಪು ಎನ್ನಿಸಿಕೊಳ್ಳುವ ಮಂದಿರವು ನೂರು ಮೊಳ ಉದ್ದ, ಐವತ್ತು ಮೊಳ ಅಗಲ ಮತ್ತು ಮೂವತ್ತು ಮೊಳ ಎತ್ತರವಾಗಿತ್ತು. ಅದರ ಮಾಳಿಗೆಗೆ ದೇವದಾರಿನ ಮೂರು ಸಾಲು ಕಂಬಗಳೂ, ಅವುಗಳ ಮೇಲೆ ಇಡಲ್ಪಟ್ಟ ದೇವದಾರಿನ ತೊಲೆಗಳೂ ಅದಕ್ಕೆ ಆಧಾರವಾಗಿದ್ದವು.
କାରଣ, ସେ ଲିବାନୋନ-ଅରଣ୍ୟ ନାମକ ଗୃହ ନିର୍ମାଣ କଲେ; ତହିଁର ଦୀର୍ଘତା ଏକ ଶହ ହାତ, ତହିଁର ପ୍ରସ୍ଥ ପଚାଶ ହାତ ଓ ତହିଁର ଉଚ୍ଚତା ତିରିଶ ହାତ, ଚାରି ଧାଡ଼ି ଏରସ କାଷ୍ଠର ସ୍ତମ୍ଭ ଉପରେ ଏରସ କାଷ୍ଠର କଡ଼ି ଦେଇ ତାହା ନିର୍ମାଣ କଲେ।
3 ೩ ಸ್ತಂಭಗಳ ಮೇಲಿರುವ ತೊಲೆಗಳ ಮೇಲೆ ದೇವದಾರಿನ ಹಲಿಗೆಗಳಿಂದ ಮಾಡಿದ ಮಾಳಿಗೆಯಿತ್ತು. ಸ್ತಂಭಗಳು ಪ್ರತಿಯೊಂದು ಸಾಲಿನಲ್ಲಿ ಹದಿನೈದರಂತೆ ಒಟ್ಟು ನಲ್ವತ್ತೈದು ಇದ್ದವು.
ଆଉ, ସ୍ତମ୍ଭମାନର ଉପରିସ୍ଥିତ ପଞ୍ଚଚାଳିଶ କଡ଼ି ଉପରେ ଏରସ କାଷ୍ଠର ଛାତ କଲେ; ଧାଡ଼ିକେ ପନ୍ଦର ଲେଖାଏଁ।
4 ೪ ಬೆಳಕು ಎದುರೆದುರಾಗಿ ಬೀಳುವಂತೆ ಎರಡು ಗೋಡೆಗಳಿಗೆ ಮೂರು ಮೂರು ಸಾಲು ಬೆಳಕಿನ ಕಿಟಕಿಗಳಿದ್ದವು
ପୁଣି, ତିନି ଧାଡ଼ି ଖିଡ଼ିକି ଥିଲା ଓ ତିନି ଧାଡ଼ିର ଆଲୁଅ ସମ୍ମୁଖାସମ୍ମୁଖୀ ଥିଲା।
5 ೫ ಎಲ್ಲಾ ದ್ವಾರಗಳೂ, ಬೆಳಕಿನ ಕಿಟಕಿಗಳೂ ಚತುಷ್ಕೋಣದ ಆಕಾರವುಳ್ಳವುಗಳಾಗಿದ್ದವು. ಮೂರು ಮೂರು ಸಾಲು ಬೆಳಕಿನ ಕಿಟಕಿಗಳು ಎದುರುಬದುರಾಗಿದ್ದವು.
ଖିଡ଼ିକିର ସମସ୍ତ ଦ୍ୱାର ଓ ଚୌକାଠ ଚାରି ଚୌରସ ଥିଲା ଓ ତିନି ଧାଡ଼ିର ଆଲୁଅ ସମ୍ମୁଖାସମ୍ମୁଖୀ ଥିଲା।
6 ೬ ಇದಲ್ಲದೆ ಸೊಲೊಮೋನನು ಒಂದು ಕಂಬ ಮಂಟಪವನ್ನು ಕಟ್ಟಿಸಿದನು. ಅದರ ಉದ್ದ ಐವತ್ತು ಮೊಳ, ಅಗಲ ಮೂವತ್ತು ಮೊಳ. ಅದರ ಮುಂದುಗಡೆಯಲ್ಲಿ ಒಂದು ಪಡಸಾಲೆಯಿತ್ತು. ಆ ಪಡಸಾಲೆಗೆ ಕಂಬಗಳೂ ಮೆಟ್ಟಲುಗಳೂ ಇದ್ದವು.
ଆହୁରି ସେ ସ୍ତମ୍ଭଶ୍ରେଣୀର ବାରଣ୍ଡା କଲେ; ତହିଁର ଦୀର୍ଘତା ପଚାଶ ହାତ, ପ୍ରସ୍ଥ ତିରିଶ ହାତ; ତହିଁ ସମ୍ମୁଖରେ ଆଉ ଏକ ବାରଣ୍ଡା କଲେ ଓ ତହିଁ ସମ୍ମୁଖରେ ସ୍ତମ୍ଭ ଓ ମୋଟ କଡ଼ିମାନ ଦେଲେ।
7 ೭ ಇದಲ್ಲದೆ ಅವನು ಸಿಂಹಾಸನ ಮಂದಿರವನ್ನು ಕಟ್ಟಿಸಿದನು. ಅವನು ಅಲ್ಲಿ ನ್ಯಾಯತೀರ್ಮಾನ ಮಾಡುತ್ತಿದ್ದರಿಂದ ಅದಕ್ಕೆ ನ್ಯಾಯಮಂದಿರವೆಂತಲೂ ಹೆಸರಾಯಿತು. ಇದರ ಎಲ್ಲಾ ಗೋಡೆಗಳೂ ನೆಲದಿಂದ ಮಾಳಿಗೆಯ ವರೆಗೆ ದೇವದಾರು ಮರದ ಹಲಿಗೆಗಳಿಂದ ಹೊದಿಸಲ್ಪಟ್ಟಿದ್ದವು.
ପୁଣି, ସେ ବିଚାରାର୍ଥେ ସିଂହାସନର ବାରଣ୍ଡା, ଅର୍ଥାତ୍, ବିଚାର-ବାରଣ୍ଡା କଲେ; ଆଉ ଚଟାଣକୁ ଚଟାଣ ଏରସ କାଷ୍ଠରେ ଆଚ୍ଛାଦିତ କଲେ।
8 ೮ ನ್ಯಾಯಮಂದಿರದ ಹಿಂದಿನ ಪ್ರಾಕಾರದಲ್ಲಿ ತನ್ನ ವಾಸಕ್ಕಾಗಿ ಅರಮನೆಯನ್ನೂ, ತನ್ನ ಹೆಂಡತಿಯಾದ ಫರೋಹನ ಮಗಳಿಗೋಸ್ಕರ ಇನ್ನೊಂದು ಮನೆಯನ್ನು ಕಟ್ಟಿಸಿದನು. ಅದನ್ನು ನ್ಯಾಯಮಂದಿರದ ಹಾಗೆಯೇ ಇವುಗಳನ್ನು ಕಟ್ಟಿಸಿದನು.
ଆଉ, ତାଙ୍କର ବାସଗୃହ, ବାରଣ୍ଡା ଭିତର ଅନ୍ୟ ପ୍ରାଙ୍ଗଣର କାର୍ଯ୍ୟ ପରି ଥିଲା। ଆଉ, ଶଲୋମନ ଆପଣା ଭାର୍ଯ୍ୟା ଫାରୋର କନ୍ୟା ନିମନ୍ତେ ସେହି ବାରଣ୍ଡା ପରି ଏକ ଗୃହ ମଧ୍ୟ ନିର୍ମାଣ କଲେ।
9 ೯ ಈ ಎಲ್ಲಾ ಮಂದಿರಗಳನ್ನೂ ಅವುಗಳ ಸುತ್ತು ಗೋಡೆಯನ್ನೂ, ದೊಡ್ಡ ಪ್ರಾಕಾರದ ಸುತ್ತು ಗೋಡೆಯನ್ನೂ, ಅಸ್ತಿವಾರದ ಮೇಲಣಿಂದ ಕಡೇ ವರಸೆಯವರೆಗೆ ಅಳತೆಯ ಮೇರೆಗೆ ಕೆತ್ತಲ್ಪಟ್ಟ ಎರಡು ಮಗ್ಗುಲಿಗೂ ಗರಗಸದಿಂದ ಕೊಯ್ಯಲ್ಪಟ್ಟಂಥ ಶ್ರೇಷ್ಠವಾದ ಕಲ್ಲುಗಳಿಂದ ಕಟ್ಟಿಸಿದನು.
ଏହିସବୁ ଭିତ୍ତିମୂଳ ଠାରୁ ଛାତ ପର୍ଯ୍ୟନ୍ତ ଭିତରେ ଓ ବାହାରେ ଖୋଦିତ ପ୍ରସ୍ତରର ପରିମାଣାନୁସାରେ କରତରେ ଚିରା ବହୁମୂଲ୍ୟ ପ୍ରସ୍ତର ଦ୍ୱାରା ନିର୍ମିତ ହେଲା। ପୁଣି, ବାହାରେ ବୃହତ ପ୍ରାଙ୍ଗଣ ପର୍ଯ୍ୟନ୍ତ ସେହିରୂପ ହେଲା।
10 ೧೦ ಅಸ್ತಿವಾರಕ್ಕೆ ಹಾಕಿದ ಶ್ರೇಷ್ಠವಾದ ದೊಡ್ಡ ಕಲ್ಲುಗಳು ಎಂಟು ಮೊಳ ಹಾಗೂ ಹತ್ತು ಮೊಳ ಉದ್ದವಾಗಿದ್ದವು.
ଆଉ ଦଶ ହାତ ଓ ଆଠ ହାତର ବଡ଼ ବଡ଼ ଓ ବହୁମୂଲ୍ୟ ପ୍ରସ୍ତରରେ ଭିତ୍ତିମୂଳ ହେଲା।
11 ೧೧ ಅಸ್ತಿವಾರದ ಮೇಲಣ ಭಾಗಕ್ಕೆ ಅಳತೆಯ ಮೇರೆಗೆ ಕೆತ್ತಿದ ಶ್ರೇಷ್ಠವಾದ ಕಲ್ಲುಗಳನ್ನೂ, ದೇವದಾರಿನ ಮರವನ್ನೂ ಉಪಯೋಗಿಸಿದನು.
ପୁଣି, ଉପରେ ପରିମାଣାନୁସାରେ ବହୁମୂଲ୍ୟ ଓ ଖୋଦିତ ପ୍ରସ୍ତର ଓ ଏରସ କାଷ୍ଠ ଥିଲା।
12 ೧೨ ಒಳಗಿನ ಪ್ರಾಕಾರವೆನ್ನಿಸಿಕೊಳ್ಳುವ ಯೆಹೋವನ ಆಲಯದ ಪ್ರಾಕಾರಕ್ಕೂ ಅರಮನೆಯ ಪ್ರಾಕಾರಕ್ಕೂ ಹೇಗೋ ಹಾಗೆಯೇ ಎಲ್ಲಾ ಮಂದಿರಗಳ ಸುತ್ತಲಿರುವ ದೊಡ್ಡ ಪ್ರಾಕಾರಕ್ಕೆ ಮೂರು ಸಾಲು ಕಲ್ಲಿನ ಕಂಬಗಳೂ, ಒಂದು ಸಾಲು ದೇವದಾರಿನ ಮರದ ಕಂಬಗಳೂ ಇದ್ದವು.
ଆଉ ଯେପରି ସଦାପ୍ରଭୁଙ୍କ ଗୃହର ଭିତର ପ୍ରାଙ୍ଗଣ ଓ ଗୃହ-ବାରଣ୍ଡାରେ, ସେପରି ବୃହତ ପ୍ରାଙ୍ଗଣର ଚତୁର୍ଦ୍ଦିଗରେ ତିନି ଧାଡ଼ି ଖୋଦିତ ପ୍ରସ୍ତର ଓ ଏକ ଧାଡ଼ି ଏରସ-କଡ଼ି ଥିଲା।
13 ೧೩ ಅರಸನಾದ ಸೊಲೊಮೋನನು ತೂರ್ ಪಟ್ಟಣದಿಂದ ಹೀರಾಮ್ ಎಂಬುವನನ್ನು ಕರೆಯಿಸಿದನು.
ଏଥିଉତ୍ତାରେ ଶଲୋମନ ରାଜା ଲୋକ ପଠାଇ ହୂରମ୍କୁ ସୋରରୁ ଅଣାଇଲେ।
14 ೧೪ ಅವನು ನಫ್ತಾಲಿ ಕುಲದ ಒಬ್ಬ ವಿಧವೆಯಲ್ಲಿ ತೂರ್ ಪಟ್ಟಣದ ಒಬ್ಬ ಕಂಚುಗಾರನಿಗೆ ಹುಟ್ಟಿದವನು. ಜಾಣನೂ, ತಾಮ್ರದ ಕೆಲಸದಲ್ಲಿ ನಿಪುಣನೂ, ಅನುಭವಶಾಲಿಯೂ ಆಗಿದ್ದ ಅವನು ಅರಸನ ಬಳಿಗೆ ಬಂದು ಅರಸನು ಆಜ್ಞಾಪಿಸಿದ ಎಲ್ಲಾ ಕಾರ್ಯಗಳನ್ನು ಮಾಡಿ ಮುಗಿಸಿದನು.
ସେ ନପ୍ତାଲି-ବଂଶୀୟ ଏକ ବିଧବା ସ୍ତ୍ରୀର ପୁତ୍ର, ତାହାର ପିତା ସୋର ନଗରସ୍ଥ ଏକ କାଂସ୍ୟକାର ଥିଲା; ପୁଣି, ସେ ପିତ୍ତଳର ସମସ୍ତ କାର୍ଯ୍ୟ କରିବାକୁ ଜ୍ଞାନ ଓ ବୁଦ୍ଧି ଓ ବିଦ୍ୟାରେ ପରିପୂର୍ଣ୍ଣ ଥିଲା। ପୁଣି, ସେ ଶଲୋମନ ରାଜାଙ୍କ ନିକଟକୁ ଆସି ତାଙ୍କର ସମସ୍ତ କାର୍ଯ୍ୟ କଲା।
15 ೧೫ ಅವನು ಎರಡು ತಾಮ್ರದ ಕಂಬಗಳನ್ನು ಮಾಡಿದನು. ಅವು ಹದಿನೆಂಟು ಮೊಳ ಎತ್ತರವಿದ್ದವು. ಅವುಗಳ ಸುತ್ತಳತೆಯು ಹನ್ನೆರಡು ಮೊಳ.
ଆଉ ସେ ଅଠର ହାତ ଉଚ୍ଚ ଓ ବାର ହାତ ପରିଧିରେ ଦୁଇ ପିତ୍ତଳ ସ୍ତମ୍ଭ ନିର୍ମାଣ କଲା।
16 ೧೬ ಇದಲ್ಲದೆ ಅವನು ತಾಮ್ರವನ್ನು ಎರಕ ಹೊಯ್ದು ಕಂಬಗಳ ಮೇಲೆ ಇಡುವುದಕ್ಕೊಸ್ಕರ ಐದೈದು ಮೊಳ ಎತ್ತರವಾದ ಎರಡು ಕುಂಭಗಳನ್ನೂ,
ପୁଣି, ସେ ଦୁଇ ସ୍ତମ୍ଭର ମଥାନରେ ଦେବା ପାଇଁ ଢଳା ପିତ୍ତଳର ଦୁଇ ମୁଣ୍ଡାଳି କଲା; ଏକ ମୁଣ୍ଡାଳିର ଉଚ୍ଚତା ପାଞ୍ଚ ହାତ ଓ ଅନ୍ୟ ମୁଣ୍ଡାଳିର ଉଚ୍ଚତା ପାଞ୍ଚ ହାତ ଥିଲା।
17 ೧೭ ಒಂದೊಂದಕ್ಕೆ ಏಳೇಳರಂತೆ ಕುಂಭಗಳ ಮೇಲೆ ಹಾಕುವುದಕ್ಕೋಸ್ಕರ ತಾಮ್ರದ ಸರಿಗೆಯ ಜಾಲರಿಗಳನ್ನೂ ಮಾಡಿದನು.
ସ୍ତମ୍ଭ-ମଥାନର ସେହି ମୁଣ୍ଡାଳି ନିମନ୍ତେ ଜାଲିକାର୍ଯ୍ୟର ଜାଲି ଓ ଜଞ୍ଜିର କାର୍ଯ୍ୟର ମାଳା ଥିଲା, ଏକ ମୁଣ୍ଡାଳି ପାଇଁ ସାତ ଓ ଅନ୍ୟ ମୁଣ୍ଡାଳି ପାଇଁ ସାତ।
18 ೧೮ ಇದಲ್ಲದೆ ಅವನು ತಾಮ್ರದ ದಾಳಿಂಬೆಹಣ್ಣುಗಳನ್ನು ಮಾಡಿ, ಅವುಗಳನ್ನು ಕಂಬಗಳ ಮೇಲಣ ಪ್ರತಿಯೊಂದು ಕುಂಭದ ಜಾಲರಿಯ ಸುತ್ತಲೂ ಎರಡೆರಡು ಸಾಲಾಗಿ ಸಿಕ್ಕಿಸಿದನು.
ଏହିପରି ସେ ସ୍ତମ୍ଭ ନିର୍ମାଣ କଲା; ସ୍ତମ୍ଭ-ମଥାନରେ ଥିବା ମୁଣ୍ଡାଳିର ଆଚ୍ଛାଦନାର୍ଥକ ପ୍ରତ୍ୟେକ ଜାଲିକାର୍ଯ୍ୟ ଉପରେ ଚତୁର୍ଦ୍ଦିଗରେ ଦୁଇ ଧାଡ଼ି ଡାଳିମ୍ବ ଥିଲା ଓ ସେ ଅନ୍ୟ ମୁଣ୍ଡାଳି ନିମନ୍ତେ ତଦ୍ରୂପ କଲା।
19 ೧೯ ಕಂಬಗಳ ಮೇಲಿರುವ ಕುಂಭಗಳ ಒಡಲು ನಾಲ್ಕು ಮೊಳಗಳವರೆಗೆ ಕಮಲದ ಆಕಾರ ಉಳ್ಳದ್ದಾಗಿತ್ತು.
ପୁଣି, ବାରଣ୍ଡା ଭିତର ସ୍ତମ୍ଭ-ମଥାନର ମୁଣ୍ଡାଳି ଚାରି ହାତ କଇଁଫୁଲ-କର୍ମବିଶିଷ୍ଟ ଥିଲା।
20 ೨೦ ಆ ಕುಂಭಗಳ ಮೇಲಿರುವ ಭಾಗದಲ್ಲಿ ಒಡಲಿನ ಸುತ್ತಲೂ ಜಾಲರಿಯ ಹೊರಗೆ ದಾಳಿಂಬೆ ಹಣ್ಣಿನ ಆಕಾರವುಳ್ಳ ಗುಂಡುಗಳಿದ್ದವು. ಪ್ರತಿಯೊಂದು ಕುಂಭದ ಸುತ್ತಲೂ ಇನ್ನೂರು ಗುಂಡುಗಳನ್ನು ಸಾಲಾಗಿ ಸಿಕ್ಕಿಸಿದನು.
ଆଉ, ଦୁଇ ସ୍ତମ୍ଭର ଉପରି ଭାଗରେ ମଧ୍ୟ ମୁଣ୍ଡାଳି ଥିଲା, ତାହା ଜାଲିକର୍ମ ସନ୍ନିକଟ ଗର୍ଭ ପାଖରେ ଥିଲା; ପୁଣି, ଅନ୍ୟ ମୁଣ୍ଡାଳି ଉପରେ ଚତୁର୍ଦ୍ଦିଗରେ ଧାଡ଼ି ଧାଡ଼ି ହୋଇ ଦୁଇ ଶହ ଡାଳିମ୍ବ ଥିଲା।
21 ೨೧ ತರುವಾಯ ಅವನು ಆ ಎರಡು ಕಂಬಗಳನ್ನೂ ದೇವಾಲಯದ ಮಂಟಪದ ಬಳಿಯಲ್ಲಿ ನಿಲ್ಲಿಸಿ, ಬಲಗಡೆಯ ಕಂಬಕ್ಕೆ ಯಾಕೀನ್ ಎಂದೂ, ಎಡಗಡೆಯ ಕಂಬಕ್ಕೆ ಬೋವಜ್ ಎಂದು ಹೆಸರಿಟ್ಟನು.
ଆହୁରି ସେ ମନ୍ଦିରର ବାରଣ୍ଡାରେ ସେହି ସ୍ତମ୍ଭମାନ ସ୍ଥାପନ କଲା; ଆଉ ସେ ଦକ୍ଷିଣ ସ୍ତମ୍ଭ ସ୍ଥାପନ କରି ତହିଁର ନାମ ଯାଖୀନ୍ (ସେ ସ୍ଥିର କରିବେ) ଦେଲା ଓ ସେ ବାମ ସ୍ତମ୍ଭ ସ୍ଥାପନ କରି ତହିଁର ନାମ ବୋୟସ୍ (ତହିଁରେ ବଳ) ଦେଲା।
22 ೨೨ ಅವನು ಕಂಬಗಳ ಮೇಲೆ ಕಮಲಾಕಾರವನ್ನು ಮಾಡಿ ಅವುಗಳ ಕೆಲಸವನ್ನು ತೀರಿಸಿದನು.
ପୁଣି, ସେହି ସ୍ତମ୍ଭ-ମଥାନ ଉପରେ କଇଁଫୁଲ-କର୍ମ ଥିଲା; ଏହିରୂପେ ସ୍ତମ୍ଭ କାର୍ଯ୍ୟ ସମାପ୍ତ ହେଲା।
23 ೨೩ ಅನಂತರ ಹೀರಾಮನು ಸಮುದ್ರ ಎನಿಸಿಕೊಳ್ಳುವ ಒಂದು ಎರಕದ ಪಾತ್ರೆಯನ್ನು ಮಾಡಿದನು. ಅದರ ಬಾಯಿ ಚಂದ್ರಾಕಾರವಾಗಿಯೂ, ಅಂಚಿನಿಂದ ಅಂಚಿಗೆ ಹತ್ತು ಮೊಳವಾಗಿಯೂ ಇತ್ತು. ಅದರ ಎತ್ತರ ಐದು ಮೊಳ ಮತ್ತು ಸುತ್ತಳತೆ ಮೂವತ್ತು ಮೊಳ.
ଏଥିଉତ୍ତାରେ ସେ ଛାଞ୍ଚରେ ଢଳା ଗୋଲାକାର ସମୁଦ୍ରରୂପ ପାତ୍ର ନିର୍ମାଣ କଲା, ତାହା ଏକ ଫନ୍ଦରୁ ଅନ୍ୟ ଫନ୍ଦ ଯାଏ ଦଶ ହାତ ଓ ତହିଁର ଉଚ୍ଚତା ପାଞ୍ଚ ହାତ ଓ ତହିଁର ପରିଧି ତିରିଶ ହାତ ପରିମିତ ଥିଲା।
24 ೨೪ ಅದನ್ನು ಎರಕ ಹೊಯ್ಯುವಾಗ ಅದರ ಅಂಚಿನ ಕೆಳಗೆ ಸುತ್ತಲೂ ಹತ್ತತ್ತು ಮೊಳ ಉದ್ದವಾದ ಬಳ್ಳಿಗಳನ್ನು ಎರಡು ಸಾಲಾಗಿ ಎರಕ ಹೊಯ್ದಿದ್ದನು.
ଆଉ ଫନ୍ଦ ତଳେ ଚତୁର୍ଦ୍ଦିଗରେ କଳିକାମାନ ପରିବେଷ୍ଟିତ ଥିଲା, ତାହା ହାତକେ ଦଶ ଲେଖାଏଁ ସମୁଦ୍ରରୂପ ପାତ୍ରକୁ ବେଷ୍ଟନ କରି ରହିଲା; ପାତ୍ର ଢଳା ହେବା ବେଳେ ଏହି କଳିକାମାନ ଦୁଇ ଧାଡ଼ିରେ ଢଳା ଯାଇଥିଲା।
25 ೨೫ ಹನ್ನೆರಡು ಎರಕದ ಹೋರಿಗಳು ಅದನ್ನು ಹೊತ್ತಿದ್ದವು. ಅವುಗಳಲ್ಲಿ ಮೂರು ಉತ್ತರ ದಿಕ್ಕಿಗೂ, ಮೂರು ಪಶ್ಚಿಮ ದಿಕ್ಕಿಗೂ, ಮೂರು ದಕ್ಷಿಣ ದಿಕ್ಕಿಗೂ ಮತ್ತು ಮೂರು ಪೂರ್ವದಿಕ್ಕಿಗೂ ಮುಖಮಾಡಿಕೊಂಡಿದ್ದವು. ಸಮುದ್ರವು ಅವುಗಳ ಬೆನ್ನಿನ ಮೇಲೆ ಇತ್ತು. ಅವುಗಳ ಹಿಂಭಾಗವು ಒಳಗಡೆ ಇತ್ತು.
ଏହି ପାତ୍ର ଦ୍ୱାଦଶ ଗୋରୁ ଉପରେ ସ୍ଥାପିତ ଥିଲା, ସେମାନଙ୍କ ତିନିର ମୁଖ ଉତ୍ତରକୁ ଓ ତିନିର ମୁଖ ପଶ୍ଚିମକୁ ଓ ତିନିର ମୁଖ ଦକ୍ଷିଣକୁ ଓ ତିନିର ମୁଖ ପୂର୍ବକୁ ଥିଲା; ସେମାନଙ୍କ ଉପରେ ସମୁଦ୍ରରୂପ ପାତ୍ର ସ୍ଥାପିତ ଥିଲା ଓ ସେସମସ୍ତର ପଶ୍ଚାତ୍ଭାଗ ଭିତରକୁ ଥିଲା।
26 ೨೬ ಪಾತ್ರೆಯು ನಾಲ್ಕು ಬೆರಳು ದಪ್ಪವಾಗಿತ್ತು. ಅದರ ಅಂಚು ಕಮಲದ ಆಕಾರದ ಬಟ್ಟಲನ್ನು ಹೋಲುತ್ತಿತ್ತು. ಅದು ಎರಡು ಸಾವಿರ ಬಾನೆಗಳಷ್ಟು ನೀರು ಹಿಡಿಯುತ್ತಿತ್ತು.
ସେହି ପାତ୍ର ଚାରି ଅଙ୍ଗୁଳି ମୋଟ, ତହିଁର ଫନ୍ଦ ତାଟିଆର ଫନ୍ଦ ପରି ନିର୍ମିତ, କଇଁଫୁଲ ତୁଲ୍ୟ ଥିଲା; ତହିଁରେ ଦୁଇ ହଜାର ମହଣ ଧରିଲା।
27 ೨೭ ಇದಲ್ಲದೆ ಅವನು ಹತ್ತು ತಾಮ್ರದ ಪೀಠಗಳನ್ನು ಮಾಡಿದನು. ಪ್ರತಿಯೊಂದು ನಾಲ್ಕು ಮೊಳ ಉದ್ದ, ನಾಲ್ಕು ಮೊಳ ಅಗಲ, ಮೂರು ಮೊಳ ಎತ್ತರ ಇತ್ತು.
ପୁଣି, ସେ ଦଶ ପିତ୍ତଳ ବଇଠି କଲା; ପ୍ରତ୍ୟେକ ବଇଠିର ଦୈର୍ଘ୍ୟ ଚାରି ହାତ, ପ୍ରସ୍ଥ ଚାରି ହାତ ଓ ଉଚ୍ଚତା ତିନି ହାତ ଥିଲା।
28 ೨೮ ಅವುಗಳನ್ನು ಮಾಡಿದ ವಿಧಾನ ಹೇಗೆಂದರೆ, ಅವುಗಳಲ್ಲಿ ನಿಲುವು ಪಟ್ಟಿಗಳಿಂದ ಕೂಡಿದ ಅಡ್ಡಪಟ್ಟಿಗಳಿದ್ದವು.
ସେସବୁ ବଇଠିର ଗଠନ ଏହିରୂପ, ଯଥା, ସେସବୁର ମଧ୍ୟଦେଶ ଥିଲା; ସେହି ସବୁ ମଧ୍ୟଦେଶ ବିଟମାନର ମଧ୍ୟରେ ଥିଲା;
29 ೨೯ ಆ ಅಡ್ಡಪಟ್ಟಿಗಳ ಮೇಲೆ ಸಿಂಹ, ಹೋರಿ ಮತ್ತು ಕೆರೂಬಿ ಇವುಗಳ ಚಿತ್ರಗಳಿದ್ದವು. ನಿಲುವುಪಟ್ಟಿಗಳಿಗೂ ಇದೇ ಅಲಂಕಾರವಿತ್ತು. ಸಿಂಹ, ಹೋರಿ ಇವುಗಳ ಮೇಲೂ ಕೆಳಗೂ ತೋರಣ ಚಿತ್ರಗಳಿದ್ದವು.
ପୁଣି, ବିଟର ମଧ୍ୟବର୍ତ୍ତା ସେହି ସବୁ ମଧ୍ୟଦେଶରେ ସିଂହ, ଗୋରୁ ଓ କିରୂବମାନେ ଥିଲେ; ଆଉ ବିଟ ଉପରେ ଏକ ବଇଠି ଥିଲା; ପୁଣି, ସିଂହ ଓ ଗୋରୁମାନଙ୍କ ତଳେ ସୂକ୍ଷ୍ମ କାର୍ଯ୍ୟର ମାଳା ଥିଲା।
30 ೩೦ ಪ್ರತಿಯೊಂದು ಪೀಠಕ್ಕೆ ನಾಲ್ಕು ತಾಮ್ರದ ಗಾಲಿಗಳೂ ಅಚ್ಚುಗಳೂ ಇದ್ದವು. ಪ್ರತಿಯೊಂದು ನಿಲುವುಪಟ್ಟಿಯ ಮೇಲಣ ತುದಿಯಲ್ಲಿ ಎರಕ ಹೊಯ್ದ ತಾಮ್ರದ ಹಿಡಿಗಳಿದ್ದವು. ಅವು ಪೀಠದ ಮೇಲಣ ಗಂಗಾಳವನ್ನು ಹಿಡಿಯುತ್ತಿದ್ದವು. ಅವುಗಳ ಹೊರಮೈಗೆ ತೋರಣ ಚಿತ್ರಗಳಿದ್ದವು.
ଆହୁରି ପ୍ରତ୍ୟେକ ବଇଠିର ପିତ୍ତଳମୟ ଚାରି ଚକ୍ର, ପିତ୍ତଳର ଅଖ ଥିଲା ଓ ଚାରି କୋଣରେ ସ୍ଥାପିତ ଅବଲମ୍ବନ ଥିଲା; ସେହି ସବୁ ଢଳାକର୍ମର ଅବଲମ୍ବନ ପ୍ରକ୍ଷାଳନ-ପାତ୍ର ତଳେ ଥିଲା ଓ ପ୍ରତ୍ୟେକର ପାର୍ଶ୍ୱରେ ମାଳା ଥିଲା।
31 ೩೧ ಗಂಗಾಳವನ್ನು ಇಡುವುದಕ್ಕೋಸ್ಕರ ಪೀಠದ ಮೇಲಣ ಭಾಗದಲ್ಲಿ ಒಂದು ಅಥವಾ ಒಂದುವರೆ ಮೊಳ ಎತ್ತರವಾದ ಬಾಯಿತ್ತು. ಚಕ್ರಾಕಾರವಾಗಿರುವ ಈ ಬಾಯಿಯು ಒಂದುವರೆ ಮೊಳ ಅಗಲವಾಗಿತ್ತು. ಇದರ ಮೇಲೆಯೂ ಚಿತ್ರಗಳಿದ್ದವು. ಇದಕ್ಕೆ ಆಧಾರವಾದ ಅಡ್ಡಪಟ್ಟಿಗಳು ಚಕ್ರಾಕಾರವಾಗಿರದೆ ಚೌಕಾಕಾರವಾಗಿದ್ದವು.
ପୁଣି, ତହିଁର ମୁଣ୍ଡାଳି ମଧ୍ୟରେ ଓ ତାହା ଉପରେ ତହିଁର ମୁଖ ଏକ ହସ୍ତ, ଆଉ ତହିଁର ମୁଖ ବଇଠିର କର୍ମାନୁସାରେ ଗୋଲାକାର ଓ ଦେଢ଼ ହସ୍ତ ପରିମିତ; ମଧ୍ୟ ତହିଁର ମୁଖ ଉପରେ ଶିଳ୍ପକାର୍ଯ୍ୟ ଓ ତହିଁର ମଧ୍ୟଦେଶସବୁ ଗୋଲାକାର ନ ହୋଇ ଚତୁଷ୍କୋଣ ଥିଲା।
32 ೩೨ ಮೇಲೆ ಕಂಡ ನಾಲ್ಕು ಗಾಲಿಗಳು ಅಡ್ಡಪಟ್ಟಿಗಳ ಕೆಳಗಿದ್ದವು. ತಿರುಗೋಲು ಮತ್ತು ಪೀಠವು ಅಖಂಡವಾಗಿದ್ದವು. ಪ್ರತಿಯೊಂದು ಗಾಲಿಯು ಒಂದುವರೆ ಮೊಳ ಎತ್ತರವಿತ್ತು.
ପୁଣି, ମଧ୍ୟଦେଶ ତଳେ ଚାରି ଚକ୍ର ଓ ଚକ୍ରର ଅଖ ବଇଠିକିରେ ସଂଯୁକ୍ତ ଥିଲା; ଆଉ ପ୍ରତ୍ୟେକ ଚକ୍ର ଦେଢ଼ ହସ୍ତ ଉଚ୍ଚ ଥିଲା।
33 ೩೩ ಅವು ಸಾಧಾರಣವಾದ ಬಂಡಿಗಳ ಗಾಲಿಗಳಂತೆಯೇ ಇದ್ದವು. ಆದರೆ ಅವುಗಳ ಕಟ್ಟು, ಅರ, ಕುಂಭ ಇವುಗಳಿಗೆ ಸಂಬಂಧಪಟ್ಟ ತಿರುಗೋಲು ತಾಮ್ರದವುಗಳು.
ଆଉ ସେହି ସବୁ ଚକ୍ରର କର୍ମ ରଥଚକ୍ରର କର୍ମ ତୁଲ୍ୟ ଥିଲା; ତହିଁର ଅଖ, ନେମୀ, ନାଭି ଓ ଅରସବୁ ଢଳାକର୍ମର ଥିଲା।
34 ೩೪ ಪ್ರತಿಯೊಂದು ಪೀಠದ ತುದಿಯಲ್ಲಿದ್ದ ನಾಲ್ಕು ಹಿಡಿಗಳು ಪೀಠದೊಡನೆ ಅಖಂಡವಾಗಿದ್ದವು.
ପୁଣି, ପ୍ରତ୍ୟେକ ବଇଠିକିର ଚାରି କୋଣରେ ଚାରି ଅବଲମ୍ବନ ଥିଲା, ସେହି ଅବଲମ୍ବନ ବଇଠିକି ଦେହରେ ନିର୍ମିତ ଥିଲା।
35 ೩೫ ಪೀಠದ ಮೇಲಣ ಭಾಗದಲ್ಲಿದ್ದ ಚಕ್ರಾಕಾರವಾದ ಬಾಯಿಯು ಅರ್ಧ ಮೊಳ ಎತ್ತರವಾಗಿತ್ತು. ಪೀಠದ ಮೇಲಿನ ಭಾಗದಲ್ಲಿದ್ದ ಹಿಡಿಗಳೂ ಅಡ್ಡ ಪಟ್ಟಿಗಳೂ ಅದರೊಡನೆ ಅಖಂಡವಾಗಿದ್ದವು.
ଆଉ ବଇଠିକି ମୁଣ୍ଡରେ ଅର୍ଦ୍ଧ ହସ୍ତ ଉଚ୍ଚ ଏକ ଗୋଲାକାର ବନ୍ଧନୀ ଥିଲା; ପୁଣି, ବଇଠିକି ଉପରିସ୍ଥ ଅବଲମ୍ବନ ଓ ମଧ୍ୟଦେଶ ତହିଁ ସଙ୍ଗେ ନିର୍ମିତ ଥିଲା।
36 ೩೬ ಅಡ್ಡಪಟ್ಟಿಗಳಿಗೂ ಹಿಡಿಗಳ ಹೊರಮೈಗೂ ಸ್ಥಳವಿದ್ದ ಕಡೆಗೆ ಕೆರೂಬಿ, ಸಿಂಹ, ಖರ್ಜೂರವೃಕ್ಷ ಇವುಗಳ ಚಿತ್ರಗಳನ್ನೂ ಈ ಚಿತ್ರಗಳ ಸುತ್ತಲೂ ತೋರಣ ಚಿತ್ರಗಳನ್ನೂ ಮಾಡಿಸಿದನು.
ପୁଣି, ସେ ତହିଁର ଅବଲମ୍ବନ ପ୍ରଦେଶରେ ଓ ତହିଁର ମଧ୍ୟଦେଶରେ ପ୍ରତ୍ୟେକର ପରିମାଣାନୁଯାୟୀ କିରୂବ, ସିଂହ ଓ ଖର୍ଜ୍ଜୁର ବୃକ୍ଷ ଖୋଦନ କରି ଚତୁର୍ଦ୍ଦିଗରେ ମାଳା ଦେଲା।
37 ೩೭ ಲೋಹಗಳನ್ನು ಒಂದೇ ಸಾರಿ ಕರಗಿಸಿ ಆ ಹತ್ತು ಪೀಠಗಳನ್ನು ಮಾಡಿದನು. ಅವುಗಳ ಆಕಾರವು ಅಳತೆಯೂ ಒಂದೇಯಾಗಿತ್ತು.
ଏହିରୂପେ ସେ ଏକ ଛାଞ୍ଚ, ଏକ ପରିମାଣ ଓ ଏକ ଆକାରରେ ସେହି ଦଶ ବଇଠିକିଯାକ ନିର୍ମାଣ କଲା।
38 ೩೮ ಇದಲ್ಲದೆ ಅವನು ನಲ್ವತ್ತು ಬತ್ ನೀರು ಹಿಡಿಯುವ ನಾಲ್ಕು ಮೊಳ ಅಗಲವಾದ ಹತ್ತು ಗಂಗಾಳಗಳನ್ನು ಮಾಡಿ, ಪ್ರತಿಯೊಂದು ಪೀಠದ ಮೇಲೆ ಒಂದೊಂದನ್ನು ಇಟ್ಟನು.
ଏଉତ୍ତାରେ ସେ ପିତ୍ତଳର ଦଶ ପ୍ରକ୍ଷାଳନ-ପାତ୍ର ନିର୍ମାଣ କଲା; ଏକ ଏକ ପାତ୍ର ଚାଳିଶ ମହଣ ଧରେ; ପ୍ରତ୍ୟେକ ପାତ୍ର ଚାରି ହସ୍ତ ପରିମିତ; ପୁଣି, ଦଶ ବଇଠିକିର ପ୍ରତ୍ୟେକର ଉପରେ ଏକ ଏକ ପ୍ରକ୍ଷାଳନ-ପାତ୍ର ରହିଲା।
39 ೩೯ ಐದು ಪೀಠಗಳನ್ನು ದೇವಾಲಯದ ಬಲಗಡೆಯಲ್ಲಿಯೂ, ಐದು ಪೀಠಗಳನ್ನು ಎಡಗಡೆಯಲ್ಲಿಯೂ ಇಟ್ಟನು. ಸಮುದ್ರವೆನಿಸಿಕೊಳ್ಳುವ ಪಾತ್ರೆಯನ್ನು ದೇವಾಲಯದ ಬಲಗಡೆಯಲ್ಲಿ ಅಂದರೆ ಪ್ರಾಕಾರದ ಆಗ್ನೇಯ ದಿಕ್ಕಿನಲ್ಲಿರಿಸಿದನು.
ପୁଣି, ସେ ଗୃହର ଦକ୍ଷିଣ ପାର୍ଶ୍ୱରେ ପାଞ୍ଚ ଓ ଗୃହର ବାମ ପାର୍ଶ୍ୱରେ ପାଞ୍ଚ ବଇଠିକି ରଖିଲା; ଆଉ ଗୃହର ଦକ୍ଷିଣ ପାର୍ଶ୍ୱରେ ପୂର୍ବ ଦିଗରେ ଦକ୍ଷିଣ ଆଡ଼କୁ ସମୁଦ୍ରରୂପ ପାତ୍ର ସ୍ଥାପନ କଲା।
40 ೪೦ ಇದಲ್ಲದೆ ಹೀರಾಮನು ಬಟ್ಟಲುಗಳನ್ನೂ, ಸಲಿಕೆಗಳನ್ನೂ, ಬೋಗುಣಿಗಳನ್ನೂ ಮಾಡಿದನು. ಅವನು ಸೊಲೊಮೋನನ ಅಪ್ಪಣೆಯಂತೆ ದೇವಾಲಯಕ್ಕೋಸ್ಕರ ಹೀರಾಮನು ಮಾಡಿಸಿದ ಒಟ್ಟು ಸಾಮಾನುಗಳ ಪಟ್ಟಿ.
ପୁଣି, ହୂରମ୍ ଏହିସବୁ ପ୍ରକ୍ଷାଳନ-ପାତ୍ର ଓ କରଚୁଲି ଓ କୁଣ୍ଡ ନିର୍ମାଣ କଲା। ଏହିରୂପେ ସଦାପ୍ରଭୁଙ୍କ ଗୃହରେ ଶଲୋମନ ରାଜାଙ୍କ ନିମନ୍ତେ ହୂରମ୍ ଯେ ଯେ କର୍ମରେ ପ୍ରବୃତ୍ତ ହୋଇଥିଲା, ସେସକଳ ସମାପ୍ତ କଲା;
41 ೪೧ ಎರಡು ಕಂಬಗಳು ಅವುಗಳ ಮೇಲಿನ ಎರಡು ಕುಂಭಗಳು, ಕುಂಭಗಳ ಮೇಲೆ ಹಾಕುವುದಕ್ಕೋಸ್ಕರ ಎರಡು ಜಾಲರಿಗಳು
ଦୁଇ ସ୍ତମ୍ଭ ଓ ସେହି ସ୍ତମ୍ଭ ଉପରିସ୍ଥ ମୁଣ୍ଡାଳିର ଦୁଇ ଗୋଲାକାର ଓ ସ୍ତମ୍ଭ ଉପରିସ୍ଥ ମୁଣ୍ଡାଳିର ଦୁଇ ଗୋଲାକାର ଆଚ୍ଛାଦନାର୍ଥେ ଦୁଇ ଜାଲିକର୍ମ;
42 ೪೨ ಜಾಲರಿಗಳ ಮೇಲೆ ಎರಡೆರಡು ಸಾಲಾಗಿ ಸಿಕ್ಕಿಸುವುದಕ್ಕೋಸ್ಕರ ತಾಮ್ರದ ನಾನೂರು ದಾಳಿಂಬಹಣ್ಣುಗಳು,
ଆଉ, ସେହି ଦୁଇ ଜାଲିକର୍ମ ନିମନ୍ତେ ଚାରି ଶହ ଡାଳିମ୍ବ; ଅର୍ଥାତ୍, ସ୍ତମ୍ଭ ଉପରିସ୍ଥ ମୁଣ୍ଡାଳିର ଦୁଇ ଗୋଲାକାର ଆଚ୍ଛାଦନାର୍ଥେ ପ୍ରତ୍ୟେକ ଜାଲିକର୍ମ ପାଇଁ ଦୁଇ ଦୁଇ ଧାଡ଼ି ଡାଳିମ୍ବ;
43 ೪೩ ಹತ್ತು ಪೀಠಗಳು, ಅವುಗಳ ಮೇಲಿದ್ದ ಹತ್ತು ಗಂಗಾಳಗಳು,
ଆଉ, ଦଶ ବଇଠିକି ଓ ସେହି ସବୁ ବଇଠିକି ଉପରେ ଦଶ ପ୍ରକ୍ଷାଳନ-ପାତ୍ର,
44 ೪೪ ಸಮುದ್ರವೆನಿಸಿಕೊಳ್ಳುವ ಪಾತ್ರೆಯೂ, ಅದನ್ನು ಹೊರುವ ಹನ್ನೆರಡು ಎರಕದ ಹೋರಿಗಳು,
ଏକ ସମୁଦ୍ରରୂପ ପାତ୍ର, ସେହି ସମୁଦ୍ରପାତ୍ର ତଳେ ବାର ଗୋରୁ,
45 ೪೫ ಹಂಡೆ, ಸಲಿಕೆ ಬೋಗುಣಿಗಳು ಇವೇ. ಹೀರಾಮನು ಅರಸನಾದ ಸೊಲೊಮೋನನ ಅಪ್ಪಣೆಯಂತೆ ಯೆಹೋವನ ಆಲಯಕ್ಕೋಸ್ಕರ ಈ ಎಲ್ಲಾ ಸಾಮಾನುಗಳನ್ನು ರುಜುವಾತು ಪಡಿಸಿ ತಾಮ್ರದಿಂದ ಮಾಡಿಸಿದನು.
ହାଣ୍ଡି, କରଚୁଲି ଓ କୁଣ୍ଡ, ଏହି ଯେସକଳ ପାତ୍ର ହୂରମ୍ ଶଲୋମନ ରାଜାଙ୍କ ପାଇଁ ସଦାପ୍ରଭୁଙ୍କ ଗୃହରେ ନିର୍ମାଣ କଲା, ତାହାସବୁ ଉଜ୍ଜ୍ୱଳ ପିତ୍ତଳର ଥିଲା।
46 ೪೬ ಅರಸನು ಯೊರ್ದನಿನ ತಗ್ಗಿನಲ್ಲಿ ಸುಕ್ಕೋತಿಗೂ ಮತ್ತು ಚಾರೆತಾನಿಗೂ ಮಧ್ಯದಲ್ಲಿರುವ ಜೇಡಿ ಮಣ್ಣು ಇರುವ ನೆಲದಲ್ಲಿ ಎರಕ ಹೊಯ್ಯಿಸಿದನು.
ରାଜା ଯର୍ଦ୍ଦନ-ପଦାରେ ସୁକ୍କୋତ ଓ ସର୍ତ୍ତନ ମଧ୍ୟସ୍ଥିତ ଚିକ୍କଣ ଭୂମିରେ ତାହାସବୁ ଢଳାଇଲେ।
47 ೪೭ ಸೊಲೊಮೋನನು ತಾನು ಮಾಡಿಸಿದ ಸಾಮಾನುಗಳು ಅನೇಕವಾಗಿದ್ದರಿಂದ ಅವುಗಳ ತಾಮ್ರದ ತೂಕವು ಎಷ್ಟೆಂಬುದನ್ನು ಗೊತ್ತುಮಾಡಲಾಗಲ್ಲಿಲ್ಲ.
ଆଉ, ଅତ୍ୟନ୍ତ ବାହୁଲ୍ୟ ହେତୁ ଶଲୋମନ ସେହି ସବୁ ପାତ୍ର ତୌଲ କଲେ ନାହିଁ; ପିତ୍ତଳର ଓଜନ ଜଣାଗଲା ନାହିଁ।
48 ೪೮ ಸೊಲೊಮೋನನು ಯೆಹೋವನ ಆಲಯಕ್ಕೋಸ್ಕರ ಮಾಡಿಸಿದ ಒಳಗಿನ ಸಾಮಾನುಗಳು ಯಾವುವೆಂದರೆ - ಬಂಗಾರದ ಧೂಪವೇದಿಯು ನೈವೇದ್ಯವಾದ ರೊಟ್ಟಿಗಳನ್ನಿಡುವುದಕ್ಕಾಗಿ ಬಂಗಾರದ ಮೇಜು,
ଆହୁରି ଶଲୋମନ ସଦାପ୍ରଭୁଙ୍କ ଗୃହସ୍ଥିତ ସମସ୍ତ ସାମଗ୍ରୀ ନିର୍ମାଣ କରାଇଲେ; ଅର୍ଥାତ୍, ସ୍ୱର୍ଣ୍ଣ-ବେଦି ଓ ଦର୍ଶନୀୟ ରୁଟି ସ୍ଥାପନାର୍ଥେ ସ୍ୱର୍ଣ୍ଣର ମେଜ;
49 ೪೯ ಮಹಾಪರಿಶುದ್ಧಸ್ಥಳದ ಎದುರಿಗೆ ಎಡಗಡೆಯಲ್ಲಿಯೂ, ಬಲಗಡೆಯಲ್ಲಿಯೂ ಇಡುವುದಕ್ಕಾಗಿ ಐದೈದರಂತೆ ಇಡುವುದಕ್ಕೋಸ್ಕರ ಚೊಕ್ಕ ಬಂಗಾರದಿಂದ ಮಾಡಿದ ಪುಷ್ಪಾಲಂಕಾರವುಳ್ಳ ಹತ್ತು ದೀಪಸ್ತಂಭಗಳು, ಬಂಗಾರದ ಹಣತೆ, ಇಕ್ಕಳಗಳು, ಚೊಕ್ಕ ಬಂಗಾರದ ಬಟ್ಟಲುಗಳು,
ପୁଣି, ମହାପବିତ୍ର ସ୍ଥାନ ସମ୍ମୁଖର ଦକ୍ଷିଣରେ ପାଞ୍ଚ, ବାମରେ ପାଞ୍ଚ ନିର୍ମଳ ସୁବର୍ଣ୍ଣର ଦୀପବୃକ୍ଷ, ସୁବର୍ଣ୍ଣର ପୁଷ୍ପ, ପ୍ରଦୀପ, ଚିମୁଟା,
50 ೫೦ ಕತ್ತರಿಗಳು, ಬೋಗುಣಿಗಳು, ಧೂಪಾರತಿಗಳು ಅಗ್ಗಿಷ್ಟಿಕೆಗಳು, ದೇವಾಲಯದ ಮಹಾಪರಿಶುದ್ಧ ಸ್ಥಳವೆನಿಸಿಕೊಳ್ಳುವ ಗರ್ಭಗೃಹದ ಬಾಗಿಲುಗಳಿಗೂ
ନିର୍ମଳ ସୁବର୍ଣ୍ଣର ପାତ୍ର, କତୁରୀ, କୁଣ୍ଡ, ଚାମର ଓ ଅଙ୍ଗାରଧାନୀ; ପୁଣି, ଅନ୍ତରାଗାରର, ଅର୍ଥାତ୍, ମହାପବିତ୍ର ସ୍ଥାନର କବାଟ ପାଇଁ ଓ ଗୃହର, ଅର୍ଥାତ୍, ମନ୍ଦିରର କବାଟ ପାଇଁ ସୁବର୍ଣ୍ଣର କବ୍ଜା କଲେ।
51 ೫೧ ಪರಿಶುದ್ಧಸ್ಥಳದ ಬಾಗಿಲುಗಳಿಗೂ ಇರುವ ಬಂಗಾರದ ತಿರುಗುಣಿಗಳು ಇವುಗಳೇ. ಅರಸನಾದ ಸೊಲೊಮೋನನು ಯೆಹೋವನ ಆಲಯಕ್ಕೋಸ್ಕರ ಬೇಕಾದ ಎಲ್ಲಾ ಸಾಮಾನುಗಳನ್ನು ಸಿದ್ಧಪಡಿಸಿದ ನಂತರ ತನ್ನ ತಂದೆಯಾದ ದಾವೀದನು ಯೆಹೋವನಿಗೆ ಹರಕೆಹೊತ್ತು ಪ್ರತಿಷ್ಠಿಸಿದ ಬೆಳ್ಳಿ ಬಂಗಾರವನ್ನೂ ಮತ್ತು ಸಾಮಾನುಗಳನ್ನೂ ದೇವಾಲಯದ ಭಂಡಾರಕ್ಕೆ ಸೇರಿಸಿದನು.
ଏହିରୂପେ ସଦାପ୍ରଭୁଙ୍କ ଗୃହରେ ଶଲୋମନ ରାଜା ଯେସକଳ କାର୍ଯ୍ୟରେ ପ୍ରବୃତ୍ତ ହେଲେ, ତାହା ସମାପ୍ତ କଲେ। ପୁଣି, ଶଲୋମନ ଆପଣା ପିତା ଦାଉଦଙ୍କର ପବିତ୍ରୀକୃତ ସାମଗ୍ରୀ, ଅର୍ଥାତ୍, ରୂପା, ସୁନା ଓ ପାତ୍ରସବୁ ଆଣି ସଦାପ୍ରଭୁଙ୍କ ଗୃହସ୍ଥିତ ଭଣ୍ଡାରରେ ରଖିଲେ।