< ಅರಸುಗಳು - ಪ್ರಥಮ ಭಾಗ 3 >
1 ೧ ಸೊಲೊಮೋನನು ಐಗುಪ್ತದ ಅರಸನಾದ ಫರೋಹನ ಅಳಿಯನಾದನು. ಅವನು ಫರೋಹನ ಮಗಳನ್ನು ಮದುವೆಮಾಡಿಕೊಂಡು ತನ್ನ ಅರಮನೆಯನ್ನೂ, ಯೆಹೋವನ ಆಲಯವನ್ನೂ ಮತ್ತು ಯೆರೂಸಲೇಮಿನ ಸುತ್ತಣ ಗೋಡೆಯನ್ನೂ ಕಟ್ಟಿ ಮುಗಿಸುವ ತನಕ ಆಕೆಯನ್ನು ದಾವೀದನಗರದಲ್ಲಿ ಇರಿಸಿದನು.
Сулайман Мисирниң падишаси Пирәвн билән иттипақ түзүп Пирәвнниң қизини хотунлуққа алди. Өз ордиси, Пәрвәрдигарниң өйи вә Йерусалимниң чөрисидики сепилни ясап пүткүзгичилик у уни «Давутниң шәһири»гә апирип турғузди.
2 ೨ ಆ ವರೆಗೂ ಯೆಹೋವನ ನಾಮಕ್ಕೋಸ್ಕರ ಆಲಯವಿರಲಿಲ್ಲವಾದುದರಿಂದ ಜನರು ಪೂಜಾಸ್ಥಳಗಳಲ್ಲಿ ಯಜ್ಞವನ್ನು ಆರ್ಪಿಸುತ್ತಿದ್ದರು.
Шу вақитларда Пәрвәрдигарниң нами үчүн бир ибадәтхана ясалмиғини үчүн хәлиқ «жуқури җайлар»да қурбанлиқлирини қилатти.
3 ೩ ಸೊಲೊಮೋನನು ಯೆಹೋವನನ್ನು ಪ್ರೀತಿಸಿ, ತನ್ನ ತಂದೆಯಾದ ದಾವೀದನ ವಿಧಿಗಳನ್ನು ಕೈಕೊಳ್ಳುವವನಾಗಿದ್ದರೂ ಆ ಪೂಜಾಸ್ಥಳಗಳಲ್ಲಿಯೇ ಯಜ್ಞವನ್ನರ್ಪಿಸುತ್ತಿದ್ದನು. ಅಲ್ಲಿಯೇ ಧೂಪಹಾಕುತ್ತಿದ್ದನು.
Сулайман Пәрвәрдигарни сөйүп, атиси Давутниң бәлгүлигәнлиридә маңатти. Пәқәт «жуқури җайлар»да қурбанлиқ қилип хушбуй яқатти.
4 ೪ ಒಮ್ಮೆ ಅರಸನಾದ ಸೊಲೊಮೋನನು ಯಜ್ಞಮಾಡುವುದಕ್ಕಾಗಿ ಪೂಜಾಸ್ಥಳಗಳಲ್ಲಿ ಪ್ರಧಾನವಾಗಿದ್ದ ಗಿಬ್ಯೋನಿಗೆ ಹೋಗಿ ಅಲ್ಲಿನ ಯಜ್ಞವೇದಿಯ ಮೇಲೆ ಸಹಸ್ರ ಯಜ್ಞಗಳನ್ನು ಸಮರ್ಪಿಸಿದನು.
Падиша қурбанлиқ қилғили Гибеонға барди; чүнки у йәр «улуқ жуқури җай» еди. Сулайман у йәрдики қурбангаһда бир миң көйдүрмә қурбанлиқ сунди.
5 ೫ ದೇವರಾದ ಯೆಹೋವನು ಆ ರಾತ್ರಿ ಕನಸ್ಸಿನಲ್ಲಿ ಅವನಿಗೆ ಗಿಬ್ಯೋನಿನಲ್ಲಿ ಕಾಣಿಸಿಕೊಂಡು, “ನಿನಗೆ ಯಾವ ವರ ಬೇಕು ಕೇಳಿಕೋ” ಎಂದು ಹೇಳಲು ಸೊಲೊಮೋನನು,
Пәрвәрдигар Гибеонда Сулайманға кечиси чүшидә көрүнди. Худа униңға: — Мениң саңа немә беришимни лайиқ тапсаң, шуни тилигин, деди.
6 ೬ “ನಿನಗೆ ನಂಬಿಗಸ್ತನಾಗಿಯೂ, ನೀತಿಯಿಂದಲೂ ಯಥಾರ್ಥಚಿತ್ತದಿಂದಲೂ ನಡೆದುಕೊಂಡ ನಿನ್ನ ಸೇವಕನೂ, ನನ್ನ ತಂದೆಯೂ ಆದ ದಾವೀದನಿಗೆ ನೀನು ಮಹಾ ಕೃಪೆಯನ್ನು ತೋರಿಸಿದ್ದೀ. ಅವನ ಮೇಲೆ ಬಹಳವಾಗಿ ಕೃಪೆಯಿಟ್ಟು ಈಹೊತ್ತು ಅವನ ಸಿಂಹಾಸನಕ್ಕೆ ಒಬ್ಬ ಮಗನನ್ನು ಅನುಗ್ರಹಿಸಿದ್ದರಲ್ಲಿ ಅದನ್ನು ಸಂಪೂರ್ಣಗೊಳಿಸಿರುವೆ.
Сулайман җававән мундақ деди: — Қулуң атам Давут Сениң алдиңда һәқиқәт, һәққанийлиқ вә көңлиниң сәмимийлиги билән маңғанлиғи билән Сән униңға зор меһриванлиқни көрсәткән едиң; вә Сән шу зор меһриванлиқни давам қилип, бүгүнки күндикидәк өз тәхтидә олтарғили униңға бир оғул бәрдиң.
7 ೭ ನನ್ನ ದೇವರಾದ ಯೆಹೋವನೇ, ನನ್ನ ತಂದೆಗೆ ಬದಲಾಗಿ ನಿನ್ನಿಂದ ಅರಸನಾಗಿ ನೇಮಿಸಲ್ಪಟ್ಟ ನಿನ್ನ ಸೇವಕನಾದ ನಾನು ಇನ್ನೂ ಚಿಕ್ಕವನು. ವ್ಯವಹಾರ ಜ್ಞಾನವಿಲ್ಲದವನು.
Әнди и Пәрвәрдигар Худайим, қулуңни атам Давутниң орнида падиша қилдиң. Амма мән пәқәт бир гөдәк бала халас, чиқиш-киришниму билмәймән.
8 ೮ ನಿನ್ನ ಸೇವಕನಾದ ನಾನು ಲೆಕ್ಕಿಸಲಾಗದಂಥ ಮಹಾ ಜನಾಂಗವಾಗಿರುವ ನಿನ್ನ ಸ್ವಕೀಯ ಪ್ರಜೆಯ ಮಧ್ಯದಲ್ಲಿದ್ದೇನೆ.
Өз қулуң Сән таллиған хәлқиң, көплүгидин санап болмайдиған һесапсиз улуқ бир хәлиқ арисида туриду.
9 ೯ ಆದುದರಿಂದ ಅವರನ್ನು ಆಳುವುದಕ್ಕೂ, ನ್ಯಾಯ ಅನ್ಯಾಯಗಳನ್ನು ಕಂಡುಹಿಡಿಯುವುದಕ್ಕೂ ನನಗೆ ವಿವೇಕವನ್ನು ದಯಪಾಲಿಸು. ಈ ಮಹಾ ಜನಾಂಗವನ್ನು ಆಳಬಲ್ಲ ಸಮರ್ಥರು ಯಾರಿದ್ದಾರೆ?” ಎಂದು ಬೇಡಿಕೊಂಡನು.
Шуңа Өз қулуңға хәлқиңниң үстидә һөкүм қилишқа яхши-яманни пәриқ етидиған ойғақ бир қәлбни бәргәйсән; болмиса, ким бу улуқ хәлқиң үстигә һөкүм қилалисун? — деди.
10 ೧೦ ಸೊಲೊಮೋನನ ಈ ಬಿನ್ನಹವನ್ನು ಕರ್ತನಾದ ದೇವರು ಮೆಚ್ಚಿದನು.
Сулайманниң шуни тилигини Рәбни хуш қилди.
11 ೧೧ ಆಗ ದೇವರು ಅವನಿಗೆ, “ನೀನು ನಿನಗೋಸ್ಕರ ದೀರ್ಘಾಯುಷ್ಯವನ್ನಾಗಲೀ, ಐಶ್ವರ್ಯವನ್ನಾಗಲಿ ವೈರಿಗಳ ಪ್ರಾಣವನ್ನಾಗಲಿ ಕೇಳಿಕೊಳ್ಳದೆ ನ್ಯಾಯನಿರ್ಣಯಿಸುವುದಕ್ಕಾಗಿ ವಿವೇಕವನ್ನು ಬೇಡಿಕೊಂಡದ್ದರಿಂದ ನಿನ್ನ ಬಿನ್ನಹವನ್ನು ನೆರವೇರಿಸಿದ್ದೇನೆ.
Худа униңға: — Сән шуни тилигиниң үчүн — Я өзүң үчүн узун өмүр тилимәй, я өзүң үчүн дөләт-байлиқ тилимәй, я дүшмәнлириңниң җанлирини тилимәй, бәлки тоғра һөкүм қилғили ойғақ болушқа өзүң үчүн әқил-парасәтни тилигиниң үчүн,
12 ೧೨ ನೋಡು, ನಿನಗೆ ಜ್ಞಾನವನ್ನು ಮತ್ತು ವಿವೇಕವನ್ನು ಅನುಗ್ರಹಿಸಿದ್ದೇನೆ. ನಿನ್ನಂಥ ಜ್ಞಾನಿಯು ಹಿಂದೆಯೂ ಇರಲಿಲ್ಲ, ಮುಂದೆಯೂ ಇರುವುದಿಲ್ಲ.
мана, сөзүң бойичә шундақ қилдим. Мана саңа шундақ дана вә йорутулған қәлбни бәрдимки, сәндин илгири саңа охшайдиғини болмиған, сәндин кейинму саңа охшайдиғини болмайду.
13 ೧೩ ಇದಲ್ಲದೆ ನೀನು ಕೇಳಿದಂಥದ್ದನ್ನೂ ನಿನಗೆ ಅನುಗ್ರಹಿಸಿದ್ದೇನೆ. ನಿನ್ನ ಜೀವಮಾನದಲ್ಲೆಲ್ಲಾ ಐಶ್ವರ್ಯದಲ್ಲಿಯೂ, ಗೌರವ ಘನತೆಗಳಲ್ಲಿಯೂ ನಿನಗೆ ಸಮಾನನಾದ ಅರಸನು ಇನ್ನೊಬ್ಬನಿರುವುದಿಲ್ಲ.
Мән сән тилимигән нәрсиниму, йәни дөләт-байлиқ вә шан-шөһрәтни саңа бәрдим. Шуниң билән барлиқ күнлириңдә падишаларниң арисида саңа охшаш болидиғини чиқмайду.
14 ೧೪ ನೀನು ನಿನ್ನ ತಂದೆಯಾದ ದಾವೀದನಂತೆ ನನ್ನ ಮಾರ್ಗದಲ್ಲಿ ನಡೆದು, ನನ್ನ ಆಜ್ಞಾವಿಧಿಗಳನ್ನು ಕೈಕೊಳ್ಳುವುದಾದರೆ ನಿನ್ನ ಆಯುಷ್ಯವನ್ನು ಹೆಚ್ಚಿಸುವೆನು” ಎಂದನು.
Әгәр атаң Давут маңғандәк Мениң йоллиримда меңип, бәлгүлимилирим вә әмирлиримни тутсаң күнлириңни узартимән, деди.
15 ೧೫ ಸೊಲೊಮೋನನು ನಿದ್ರೆಯಿಂದ ಎಚ್ಚತ್ತಾಗ ಅದು ಕನಸೆಂದು ತಿಳಿದುಕೊಂಡನು. ಅವನು ಯೆರೂಸಲೇಮಿಗೆ ಬಂದ ನಂತರ ಯೆಹೋವನ ಒಡಂಬಡಿಕೆಯ ಮಂಜೂಷದ ಮುಂದೆ ನಿಂತು ಸರ್ವಾಂಗಹೋಮಗಳನ್ನು ಸಮಾಧಾನ ಯಜ್ಞಗಳನ್ನು ಸಮರ್ಪಿಸಿ, ತನ್ನ ಎಲ್ಲಾ ಸೇವಕರಿಗಾಗಿ ಔತಣಮಾಡಿಸಿದನು.
Сулайман ойғанғанда, мана бу бир чүш еди. У Йерусалимға келип Пәрвәрдигарниң әһдә сандуғиниң алдиға келип, өрә туруп көйдүрмә қурбанлиқларни қилип, тәшәккүр қурбанлиқлирини өткүзүп, һәммә хизмәткарлириға зияпәт қилип бәрди.
16 ೧೬ ಅದೇ ಕಾಲದಲ್ಲಿ ಇಬ್ಬರು ವೇಶ್ಯೆಯರು ಅರಸನ ಸನ್ನಿಧಿಗೆ ಬಂದರು.
Шуниңдин кейин икки паһишә аял падишаниң қешиға келип униң алдида турди.
17 ೧೭ ಅವರಲ್ಲಿ ಒಬ್ಬಳು ಅರಸನಿಗೆ, “ನನ್ನ ಒಡೆಯಾ ಕೇಳು, ನಾನು ಮತ್ತು ಈ ಹೆಂಗಸು ಒಂದೇ ಮನೆಯಲ್ಲಿ ವಾಸಮಾಡುತ್ತಿದ್ದೇವೆ. ಇವಳು ಮನೆಯಲ್ಲಿದ್ದಾಗಲೇ ನಾನು ಮಗುವನ್ನು ಹೆತ್ತೆನು.
Биринчи аял: — И ғоҗам! Мән вә бу хотун бир өйдә олтиримиз; у мән билән өйдә турғинида бир балини туғдум.
18 ೧೮ ಮೂರನೆಯ ದಿನದಲ್ಲಿ ಇವಳೂ ಹೆತ್ತಳು. ನಾವಿಬ್ಬರೂ ಒಟ್ಟಿಗೆ ಇದ್ದೆವು. ನಮ್ಮಿಬ್ಬರ ಹೊರತು ಆ ಮನೆಯಲ್ಲಿ ಯಾರೂ ಇರಲಿಲ್ಲ
Мән балини туғуп үч күндин кейин у хотунму бир бала туғди. Биз иккилән у йәрдә олтардуқ; өйдә биздин башқа һеч ят адәм йоқ еди, ялғуз биз иккилән өйдә едуқ.
19 ೧೯ ಇವಳು ರಾತ್ರಿಯಲ್ಲಿ ತನ್ನ ಕೂಸಿನ ಮೇಲೆ ಹೊರಳಿದ್ದರಿಂದ ಅದು ಸತ್ತಿತು.
Шу кечидә бу хотунниң балиси өлди; чүнки у балисини бесип өлтүрүп қойған еди.
20 ೨೦ ಮಧ್ಯರಾತ್ರಿಯಲ್ಲಿಯೇ ಇವಳೆದ್ದು ನಿಮ್ಮ ಸೇವಕಳಾದ ನಾನು ಗಾಢನಿದ್ರೆಯಲ್ಲಿದ್ದಾಗ ನನ್ನ ಮಗುವನ್ನು ನನ್ನ ಬಳಿಯಿಂದ ತೆಗೆದು ತನ್ನ ಪಕ್ಕದಲ್ಲಿಟ್ಟುಕೊಂಡಳು. ಸತ್ತು ಹೋದ ತನ್ನ ಮಗುವನ್ನು ನನ್ನ ಪಕ್ಕದಲ್ಲಿರಿಸಿದಳು.
У йерим кечидә қопуп дедәклири ухлап қалғанда, йенимдин оғлумни елип өз қучиғиға селип, өзиниң өлгән оғлини мениң қучиғимға селип қоюпту.
21 ೨೧ ನಾನು ಹೊತ್ತಾರೆ ಎದ್ದು ಮಗುವಿಗೆ ಮೊಲೆಕುಡಿಸಬೇಕೆಂದಿರುವಾಗ ಅದು ಸತ್ತಿತ್ತು. ಆದರೆ ಅದನ್ನು ಬೆಳಕಿನಲ್ಲಿ ನೋಡಿದಾಗ ಅದು ನಾನು ಹೆತ್ತ ಕೂಸಾಗಿರಲಿಲ್ಲ” ಎಂದು ಹೇಳಿದಳು.
Әтиси қопуп баламни емитәй десәм мана өлүк туриду. Лекин әтигәндә қарисам, у мән туққан бала әмәс еди, деди.
22 ೨೨ ಆಗ ಎರಡನೆಯವಳು, “ಹಾಗಲ್ಲ, ಬದುಕಿರುವವನು ನನ್ನ ಮಗನು ಸತ್ತಿರುವವನು ನಿನ್ನ ಮಗನು” ಎಂದು ನುಡಿದಳು. ಮೊದಲನೆಯವಳು ತಿರುಗಿ, “ಅಲ್ಲ, ಸತ್ತಿರುವವನು ನಿನ್ನ ಮಗನು, ಬದುಕಿರುವವನು ನನ್ನ ಮಗನು” ಎಂದಳು. ಹೀಗೆ ಅವರು ಅರಸನ ಮುಂದೆ ವಾದಿಸುತ್ತಾ ಇದ್ದರು.
Иккинчи аял: — Яқ, ундақ әмәс. Тирик қалғини мениң оғлум, өлгини сениң оғлуң, деди. Лекин биринчи аял: — Яқ, өлгини сениң оғлуң, тирик қалғини мениң оғлум, деди. Улар шу һаләттә падишаниң алдида талишип туратти.
23 ೨೩ ಆಗ ಅರಸನು, “ಜೀವದಿಂದಿರುವ ಕೂಸು ನನ್ನದು. ಸತ್ತಿರುವುದು ನಿನ್ನದು ಎಂದು ಒಬ್ಬಳು ಹೇಳುತ್ತಾಳೆ. ಇನ್ನೊಬ್ಬಳು ಅಲ್ಲ ಸತ್ತಿರುವುದು ನಿನ್ನದು, ಜೀವದಿಂದಿರುವುದು ನನ್ನದು ಅನ್ನುತ್ತಾಳೆ.
Падишаһ: — Бири: «Тирик қалғини мениң оғлум, өлгини сениң оғлуң» дәйду. Амма йәнә бири: «Яқ, өлгини сениң оғлуң, тирик қалғини мениң оғлум» дәйду, деди.
24 ೨೪ ನನಗೊಂದು ಕತ್ತಿಯನ್ನು ತಂದು ಕೊಡಿರಿ” ಎಂದು ಸೇವಕರಿಗೆ ಹೇಳಿದನು.
Падишаһ: Маңа бир қилич елип келиңлар, деди. Улар қилични падишаға елип кәлгәндә
25 ೨೫ ಅವರು ಕತ್ತಿಯನ್ನು ತರಲು ಅರಸನು ಅವರಿಗೆ, “ಜೀವದಿಂದಿರುವ ಕೂಸನ್ನು ಕಡಿದು ಎರಡು ಭಾಗ ಮಾಡಿ ಅರ್ಧವನ್ನು ಇವಳಿಗೂ ಅರ್ಧವನ್ನು ಅವಳಿಗೂ ಕೊಡಿರಿ” ಎಂದು ಅಪ್ಪಣೆ ಮಾಡಿದನು.
падиша: Тирик балини оттуридин кесип икки парчә қилип йеримини биригә, йәнә бир йеримни иккинчисигә бериңлар, деди.
26 ೨೬ ಆಗ ಜೀವದಿಂದಿದ್ದ ಕೂಸಿನ ನಿಜವಾದ ತಾಯಿ ಕೂಸಿನ ವಿಷಯದಲ್ಲಿ ಕರಳು ಮರುಗಿ ಅರಸನಿಗೆ, “ನನ್ನ ಒಡೆಯಾ ಬೇಡ, ಬದುಕಿರುವ ಕೂಸನ್ನು ಅವಳಿಗೆ ಕೊಟ್ಟುಬಿಡು. ಅದನ್ನು ಕೊಲ್ಲಿಸಬೇಡ” ಎಂದು ಬೇಡಿಕೊಳ್ಳುವಲ್ಲಿ ಎರಡನೆಯವಳು, “ಅದು ನನಗೂ ಬೇಡ, ನಿನಗೂ ಬೇಡ ಕತ್ತರಿಸಲಿ” ಎಂದು ಕೂಗಿದಳು.
У вақитта тирик балиниң аниси өз балисиға ичини ағритип падишаға: — Аһ ғоҗам! Тирик балини униңға бәрсилә, һәргиз уни өлтүрмигәйлә! — дәп ялвурди. Лекин иккинчиси: — Уни нә мениңки нә сениңки қилмай, оттуридин кесиңлар, деди.
27 ೨೭ ಕೂಡಲೇ ಅರಸನು, “ಬದುಕಿರುವ ಕೂಸನ್ನು ಕೊಲ್ಲಬೇಡಿರಿ. ಆ ಸ್ತ್ರೀಗೆ ಕೊಡಿರಿ. ಅವಳೇ ಅದರ ತಾಯಿ” ಎಂದು ಆಜ್ಞಾಪಿಸಿದನು.
Падиша җававән: — Тирик балини униңға бериңлар, уни һеч өлтүрмәңлар; чүнки бу балиниң аниси шудур, деди.
28 ೨೮ ಇಸ್ರಾಯೇಲರೆಲ್ಲರೂ ಈ ತೀರ್ಪನ್ನು ಕೇಳಿ ನ್ಯಾಯ ನಿರ್ಣಯಿಸುವುದಕ್ಕೆ ಈತನಲ್ಲಿ ದೈವಜ್ಞಾನವಿದೆ ಎಂದು ತಿಳಿದು ಅವನಿಗೆ ಬಹಳವಾಗಿ ಭಯಪಟ್ಟರು.
Пүткүл Исраил падишаниң қилған һөкүми тоғрисида аңлиди вә улар падишадин қорқти, чүнки улар Худаниң адил һөкүмләрни чиқириш даналиқиниң униңда барлиғини көрди.