< ಅರಸುಗಳು - ಪ್ರಥಮ ಭಾಗ 21 >
1 ೧ ಅನಂತರ ಸಂಭವಿಸಿದ್ದೇನೆಂದರೆ, ಇಜ್ರೇಲಿನಲ್ಲಿ ಸಮಾರ್ಯದ ಅರಸನಾದ ಅಹಾಬನ ಅರಮನೆಯ ಹತ್ತಿರ ಇಜ್ರೇಲಿನವನಾದ ನಾಬೋತನೆಂಬ ಮನುಷ್ಯನ ದ್ರಾಕ್ಷಿತೋಟವಿತ್ತು.
Un pēc tam notikās, ka Nābatam, tam Jezreēlietim, bija vīna dārzs Jezreēlē, sānis Ahaba, Samarijas ķēniņa, pilij.
2 ೨ ಅಹಾಬನು ನಾಬೋತನಿಗೆ, “ನಿನ್ನ ದ್ರಾಕ್ಷಿತೋಟವನ್ನು ನನಗೆ ಕೊಡು, ಅದು ನನ್ನ ಅರಮನೆಯ ಹತ್ತಿರವಿರುವುದರಿಂದ ಅದನ್ನು ಕಾಯಿಪಲ್ಯದ ತೋಟವನ್ನಾಗಿ ಮಾಡಿಕೊಳ್ಳುವೆನು. ಅದಕ್ಕೆ ಬದಲಾಗಿ ನಿನಗೆ ಅದಕ್ಕಿಂತ ಉತ್ತಮವಾದ ತೋಟವನ್ನು ಕೊಡುತ್ತೇನೆ. ಅದು ಬೇಡವಾದರೆ ಕ್ರಯವನ್ನು ಕೊಡುತ್ತೇನೆ” ಎಂದು ಹೇಳಿದನು.
Un Ahabs runāja ar Nābatu sacīdams: dod man savu vīna dārzu, man par sakņu dārzu, jo tas ir tuvu pie mana nama, un es tev viņa vietā došu labāku vīna dārzu, nekā tas ir; vai ja tev patīk, es tev to aizmaksāšu ar naudu.
3 ೩ ಅದಕ್ಕೆ ನಾಬೋತನು ಅಹಾಬನಿಗೆ, “ನಾನು ಪಿತ್ರಾರ್ಜಿತ ಸ್ವತ್ತನ್ನು ಮಾರದಂತೆ ಯೆಹೋವನು ನನ್ನನ್ನು ತಡೆಯಲಿ” ಎಂದು ಉತ್ತರಕೊಟ್ಟನು.
Bet Nābats sacīja uz Ahabu: lai Tas Kungs mani pasargā, ka es tev atdotu savu tēvu mantojumu.
4 ೪ “ನನ್ನ ಪಿತ್ರಾರ್ಜಿತ ಸ್ವತ್ತನ್ನು ನಿನಗೆ ಕೊಡುವುದಿಲ್ಲ” ಎಂದು ಇಜ್ರೇಲಿನವನಾದ ನಾಬೋತನು ಹೇಳಿದ್ದರಿಂದ ಅಹಾಬನು ಸಿಟ್ಟಿನಿಂದ ಗಂಟುಮುಖ ಮಾಡಿಕೊಂಡು ಮನೆಗೆ ಹೋಗಿ ಊಟಮಾಡಲೊಲ್ಲದೆ, ಮಂಚದ ಮೇಲೆ ಮಲಗಿ ಗೋಡೆಯ ಕಡೆಗೆ ಮುಖ ತಿರುಗಿಸಿಕೊಂಡನು.
Tad Ahabs saīdzis un dusmīgs nāca mājās tā vārda dēļ, ko Nābats, tas Jezreēlietis, uz viņu bija runājis sacīdams: es tev nedošu savu tēvu mantojumu. Un viņš metās gultā, apgriezās uz otru pusi un neēda maizes.
5 ೫ ಆಗ ಅವನ ಹೆಂಡತಿಯಾದ ಈಜೆಬೆಲಳು ಅವನ ಬಳಿಗೆ ಬಂದು ಅವನನ್ನು, “ನೀನು ಯಾಕೆ ಊಟಮಾಡುವುದಿಲ್ಲ? ನಿನಗೆ ಯಾವ ಚಿಂತೆ ಇರುತ್ತದೆ?” ಎಂದು ಕೇಳಿದಳು.
Tad Izebele, viņa sieva, pie tā nāca un ar to runāja: par ko tavs prāts tāds saīdzis un tu maizes neēdi?
6 ೬ ಅವನು, “ನಾನು ಇಜ್ರೇಲಿನವನಾದ ನಾಬೋತನಿಗೆ ‘ನಿನ್ನ ದ್ರಾಕ್ಷಿತೋಟವನ್ನು ನನಗೆ ಮಾರಿಬಿಡು, ಹಣ ಬೇಡವಾದರೆ ನಿನಗೆ ಬೇರೊಂದು ದ್ರಾಕ್ಷಿತೋಟವನ್ನು ಕೊಡುತ್ತೇನೆ’ ಎಂಬುದಾಗಿ ಹೇಳಿದೆನು. ಆದರೆ ಅವನು ಕೊಡುವುದಿಲ್ಲ ಎಂದನು” ಎಂದು ಉತ್ತರಕೊಟ್ಟನು.
Un viņš uz to sacīja: es runāju ar Nābatu, to Jezreēlieti, un uz to sacīju: dod man savu vīna dārzu par naudu, vai ja tu gribi, es tev došu citu vīna dārzu tai vietā. Bet tas sacīja: es tev nedošu savu vīna dārzu.
7 ೭ ಆಗ ಅವನ ಹೆಂಡತಿಯಾದ ಈಜೆಬೆಲಳು ಅವನಿಗೆ, “ಇಸ್ರಾಯೇಲರ ಅರಸನಾದ ನೀನು ಹೀಗೆ ಮಾಡುವುದು ಸರಿಯೇ? ಎದ್ದು ಊಟ ಮಾಡಿ ಸಂತೋಷದಿಂದಿರು. ನಾನು ನಿನಗೆ ಇಜ್ರೇಲಿನವನಾದ ನಾಬೋತನ ದ್ರಾಕ್ಷಿತೋಟವನ್ನು ಕೊಡಿಸುತ್ತೇನೆ” ಎಂದು ಹೇಳಿದಳು.
Tad Izebele, viņa sieva, uz to sacīja: “Tu, vai tāda tava valdīšana pār Israēli? Celies, ēd maizi, un lai tava sirds ir mierā! Es tev dabūšu Nābata, tā Jezreēlieša, vīna dārzu.”
8 ೮ ಆಮೇಲೆ ಈಜೆಬೆಲಳು ಅಹಾಬನ ಹೆಸರಿನಲ್ಲಿ ಒಂದು ಪತ್ರ ಬರೆದು, ಅದಕ್ಕೆ ಅವನ ಮುದ್ರೆ ಹಾಕಿ, ಅದನ್ನು ನಾಬೋತನ ಊರಿನಲ್ಲಿದ್ದ ಎಲ್ಲಾ ಪ್ರಧಾನ ಪುರುಷರಿಗೂ ಹಿರಿಯರಿಗೂ ಕಳುಹಿಸಿದಳು.
Un tā rakstīja grāmatas Ahaba vārdā un tās aizzieģelēja ar viņa gredzenu, un sūtīja tās grāmatas pie tiem vecajiem un pie tiem cienīgiem viņa pilsētā, kas pie Nābata dzīvoja.
9 ೯ ಅದರಲ್ಲಿ, “ಎಲ್ಲರೂ ಉಪವಾಸಮಾಡಬೇಕೆಂದು ಪ್ರಕಟಿಸಿ, ನಾಬೋತನನ್ನು ನೆರೆದ ಸಭೆಯ ಮುಂದೆ ನಿಲ್ಲಿಸಿ,
Un tā rakstīja tais grāmatās šos vārdus: izsauciet gavēni un sēdinājiet Nābatu augstā vietā ļaužu priekšā.
10 ೧೦ ಅವನು ದೇವರನ್ನೂ ಮತ್ತು ಅರಸನನ್ನೂ ಶಪಿಸಿದನು ಎಂಬುದಾಗಿ ಇಬ್ಬರ ಸಾಕ್ಷಿ ಹೇಳಿಸಿ, ಅವನನ್ನು ಹೊರಗೆ ಒಯ್ದು ಕಲ್ಲೆಸೆದು ಕೊಲ್ಲಿರಿ” ಎಂದು ಬರೆದಿದ್ದಳು.
Un stādiet tam pretim divus netiklus vīrus, kas pret viņu dod liecību un saka: tu Dievu un ķēniņu esi zaimojis, un izvediet to un nomētājiet to akmeņiem, ka tas mirst.
11 ೧೧ ಆಗ ಊರಿನ ಹಿರಿಯರು ಪ್ರಧಾನ ಪುರುಷರೂ ಈಜೆಬೆಲಳು ಕಳುಹಿಸಿದ ಪತ್ರದಲ್ಲಿ ಬರೆದಿದ್ದಂತೆಯೇ ಮಾಡಿದರು.
Un viņa pilsētas vīri, tie vecaji un cienīgie, kas viņa pilsētā dzīvoja, darīja, kā Izebele tiem bija sacījusi, kā tanīs grāmatās bija rakstīts, ko viņa tiem bija sūtījusi.
12 ೧೨ ಅವರು ಉಪವಾಸವನ್ನು ಪ್ರಕಟಿಸಿ, ನೆರೆದ ಸಭೆಯ ಮುಂದೆ ನಾಬೋತನನ್ನು ನಿಲ್ಲಿಸಿದರು.
Un tie izsauca gavēni un sēdināja Nābatu ļaužu priekšā.
13 ೧೩ ತರುವಾಯ ಇಬ್ಬರು ದುಷ್ಟರು ಬಂದು ಅವನ ಮುಂದೆ ಕುಳಿತು ಇವನು ದೇವರನ್ನೂ ಅರಸನನ್ನೂ ಶಪಿಸಿದ್ದಾನೆ ಎಂಬುದಾಗಿ ಜನರ ಎದುರಿನಲ್ಲಿ ಅವನಿಗೆ ವಿರುದ್ಧವಾಗಿ ಸಾಕ್ಷಿ ಹೇಳಿದರು. ಜನರು ಅವನನ್ನು ಊರಿನ ಹೊರಗೆ ಒಯ್ದು ಕಲ್ಲೆಸೆದು ಕೊಂದರು.
Tad divi netikli vīri nāca un stājās viņa priekšā, un tie netiklie vīri deva liecību pret Nābatu ļaužu priekšā un sacīja: “Nābats Dievu un ķēniņu zaimojis.” Un tie to izveda no pilsētas ārā un to nomētāja akmeņiem, ka tas mira.
14 ೧೪ ನಾಬೋತನು ಕಲ್ಲೆಸೆಯಲ್ಪಟ್ಟು ಸತ್ತ ವರ್ತಮಾನವನ್ನು ಹಿರಿಯರು ಈಜೆಬೆಲಳಿಗೆ ತಿಳಿಸಿದರು.
Tad tie sūtīja pie Izebeles un lika sacīt: Nābats akmeņiem nomētāts un miris.
15 ೧೫ ಆಕೆಯು ಇದನ್ನು ಕೇಳಿ ಅಹಾಬನಿಗೆ, “ನೀನು ಹೋಗಿ ನಾಬೋತನು ಮಾರುವುದಿಲ್ಲವೆಂದು ಹೇಳಿದ ದ್ರಾಕ್ಷಿ ತೋಟವನ್ನು ಸ್ವಾಧೀನ ಮಾಡಿಕೋ, ಅವನು ಜೀವದಿಂದಿಲ್ಲ ಸತ್ತನು” ಎಂದು ಹೇಳಿದಳು.
Kad nu Izebele dzirdēja, ka Nābats akmeņiem bija nomētāts un miris, tad Izebele sacīja uz Ahabu: “Celies, ņem Nābata, tā Jezreēlieša, vīna dārzu, ko viņš tev liedzies dot par naudu, jo Nābats nav vairs dzīvs, bet miris.”
16 ೧೬ ಇಜ್ರೇಲಿನವನಾದ ನಾಬೋತನ ಮರಣವಾರ್ತೆಯನ್ನು ಅಹಾಬನು ಕೇಳಿ ದ್ರಾಕ್ಷಿ ತೋಟವನ್ನು ಸ್ವಾಧೀನಮಾಡಿಕೊಳ್ಳುವುದಕ್ಕೋಸ್ಕರ ಇಳಿದು ಹೋದನು.
Kad nu Ahabs dzirdēja, ka Nābats bija miris, tad Ahabs cēlās, noiet uz Nābata, tā Jezreēlieša, vīna dārzu, to paņemt.
17 ೧೭ ಆಗ ತಿಷ್ಬೀಯನಾದ ಎಲೀಯನಿಗೆ ಯೆಹೋವನ ವಾಕ್ಯವುಂಟಾಯಿತು.
Tad Tā Kunga vārds notika uz Eliju no Tizbes tā:
18 ೧೮ ಆತನು ಅವನಿಗೆ, “ನೀನು ಹೋಗಿ ಸಮಾರ್ಯದಲ್ಲಿ ವಾಸಿಸುವ ಇಸ್ರಾಯೇಲ್ ರಾಜನನ್ನು ಕಾಣು. ಅವನು ಈಗ ನಾಬೋತನ ದ್ರಾಕ್ಷಿ ತೋಟವನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕೋಸ್ಕರ ಅಲ್ಲಿಗೆ ಹೋಗಿದ್ದಾನೆ.
“Celies, ej Ahabam, Israēla ķēniņam, pretī, kas ir Samarijā, redzi, viņš ir Nābata vīna dārzā, turp viņš ir nogājis, to paņemt.
19 ೧೯ ಅವನಿಗೆ ನೀನು ಕೊಲೆ ಮಾಡಿ ಸ್ವತ್ತನ್ನು ಸಂಪಾದಿಸಿಕೊಂಡಿಯಲ್ಲವೋ? ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲೇ ನಿನ್ನ ರಕ್ತವನ್ನೂ ನೆಕ್ಕುವವು ಎಂಬುದಾಗಿ ಯೆಹೋವನು ಅನ್ನುತ್ತಾನೆ ಎಂದು ಅವನಿಗೆ ಹೇಳು” ಎಂಬುದೇ.
Un runā uz viņu un saki: tā saka Tas Kungs: vai tu neesi nokāvis un arī paņēmis? Tad tev uz viņu tā būs runāt un sacīt: tā saka Tas Kungs: tai vietā, kur suņi laizījuši Nābata asinis, tur suņi arī laizīs tavas asinis, tiešām tavas.”
20 ೨೦ ಅಹಾಬನು ಎಲೀಯನನ್ನು ಕಂಡು ಅವನನ್ನು, “ನನ್ನ ವೈರಿಯೇ, ನೀನು ನನ್ನನ್ನು ಕಂಡುಹಿಡಿದೆಯಾ” ಎಂದು ಕೇಳಲು ಅವನು, “ಹೌದು ಕಂಡುಹಿಡಿದ್ದೆನು. ನೀನು ನಿನ್ನನ್ನು ಪಾಪಕ್ಕೆ ಮಾರಿಕೊಂಡು ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದಿಯಲ್ಲಾ.
Tad Ahabs sacīja uz Eliju: “Vai tu, mans ienaidnieks, mani esi atradis? Un tas sacīja: “Es tevi esmu atradis, tāpēc ka tu sevi esi pārdevies, ļaunu darīt priekš Tā Kunga acīm.
21 ೨೧ ಯೆಹೋವನು ನಿನ್ನನ್ನು ಕುರಿತು, ‘ನಾನು ನಿನ್ನ ಮೇಲೆ ಕೇಡನ್ನು ಬರಮಾಡಿ ನಿನ್ನನ್ನು ಕಸವನ್ನೋ ಎಂಬಂತೆ ತೆಗೆದುಹಾಕುವೆನು. ನಿನ್ನ ಸಂತಾನದ ಗಂಡಸರಲ್ಲಿ ಸ್ವತಂತ್ರರಾಗಲಿ, ದಾಸರಾಗಲಿ ಎಲ್ಲರನ್ನೂ ಇಸ್ರಾಯೇಲರೊಳಗಿಂದ ಕಡಿದುಬಿಡುವೆನು.
Redzi, Es vedīšu nelaimi pār tevi un atmetīšu tavus pēcnākamos un izdeldēšu no Ahaba ikvienu, kas pie sienas mīž, to mazo un to lielo iekš Israēla.
22 ೨೨ ನೀನು ಇಸ್ರಾಯೇಲ್ಯರನ್ನು ಪಾಪಕ್ಕೆ ಪ್ರೇರೇಪಿಸಿ ನನಗೆ ಕೋಪವನ್ನೆಬಿಸಿದ್ದರಿಂದ ನೆಬಾಟನ ಮಗನಾದ ಯಾರೊಬ್ಬಾಮನ ಮನೆಗೂ ಅಹೀಯನ ಮಗನಾದ ಬಾಷನ ಮನೆಗೂ ಆದ ಗತಿ ನಿನ್ನ ಮನೆಗೂ ಆಗುವುದು’ ಅನ್ನುತ್ತಾನೆ
Un Es darīšu tavu namu tāpat kā Jerobeama, Nebata dēla, namu, un kā Baešas, Ahijas dēla, namu, tās kaitināšanas dēļ, ar ko tu Mani esi kaitinājis un ka tu Israēli esi pavedis uz grēkiem.
23 ೨೩ ಇದಲ್ಲದೆ ಆತನು ಈಜೆಬೆಲಳನ್ನು ಕುರಿತು, ‘ನಾಯಿಗಳು ಇಜ್ರೇಲ್ ಪಟ್ಟಣದ ಗೋಡೆಯ ಬಳಿಯಲ್ಲಿ ಆಕೆಯ ಶವವನ್ನು ತಿನ್ನುವವು.
Un par Izebeli Tas Kungs arī runāja un sacīja: “Suņiem Izebeli būs ēst pie Jezreēles mūriem.”
24 ೨೪ ಅಹಾಬನ ಮನೆಯವರಲ್ಲಿ ಊರೊಳಗೆ ಸಾಯುವಂಥವರನ್ನು ನಾಯಿಗಳೂ, ಅಡವಿಯಲ್ಲಿ ಸಾಯುವಂಥವರನ್ನು ಪಕ್ಷಿಗಳೂ ತಿಂದು ಬಿಡುವವು’ ಎಂದು ಹೇಳುತ್ತಾನೆ” ಅಂದನು.
Kas no Ahaba mirst pilsētā, to ēdīs suņi, un kas mirst laukā, to ēdīs putni apakš debess.”
25 ೨೫ ಹೆಂಡತಿಯಾದ ಈಜೆಬೆಲಳಿಂದ ಪ್ರೇರೇಪಿತನಾಗಿ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವುದನ್ನು ಮಾಡುವುದಕ್ಕೆ ತನ್ನನ್ನೇ ಮಾರಿಬಿಟ್ಟ ಅಹಾಬನಂಥ ದುಷ್ಟನು ಇನ್ನೊಬ್ಬನಿರಲಿಲ್ಲ.
(Tāds kā Ahabs neviens nav bijis, kas sevi bija pārdevies, ļaunu darīt Tā Kunga acīs, jo viņa sieva viņu tā paveda.
26 ೨೬ ಯೆಹೋವನು ಇಸ್ರಾಯೇಲರ ಎದುರಿನಿಂದ ಓಡಿಸಿಬಿಟ್ಟ ಅಮೋರಿಯರಂತೆ ವಿಗ್ರಹಗಳನ್ನು ಪೂಜಿಸಿದ ಅಹಾಬನ ನಡತೆಯು ಕೇವಲ ಅಸಹ್ಯವಾಗಿತ್ತು.
Un viņš darīja daudz negantības, staigādams pakaļ elkadieviem, tā kā bija darījuši Amorieši, ko Tas Kungs bija izdzinis Israēla bērnu priekšā.)
27 ೨೭ ಅಹಾಬನು ಎಲೀಯನ ಮಾತುಗಳನ್ನು ಕೇಳಿ ತನ್ನ ಬಟ್ಟೆಗಳನ್ನು ಹರಿದುಕೊಂಡು, ಹಗಲಿರುಳು ಮೈಮೇಲೆ ಗೋಣಿತಟ್ಟನ್ನು ಹಾಕಿಕೊಂಡು, ಉಪವಾಸಮಾಡುತ್ತಾ ದೀನಮನಸ್ಸಿನಿಂದ ಪ್ರವರ್ತಿಸಿದನು.
Kad nu Ahabs šos vārdus dzirdēja, tad viņš saplēsa savas drēbes un uzvilka maisus uz savu miesu un gavēja un gulēja maisā un staigāja apkārt klusu.
28 ೨೮ ಆದುದರಿಂದ ಯೆಹೋವನು ತಿಷ್ಬೀಯನಾದ ಎಲೀಯನಿಗೆ, “ಅಹಾಬನು ನನ್ನ ಮುಂದೆ ತಗ್ಗಿಸಿಕೊಂಡಿದ್ದನ್ನು ಕಂಡಿಯಾ?
Un Tā Kunga vārds notika uz Eliju no Tizbes un sacīja:
29 ೨೯ ಅವನು ನನ್ನ ಮುಂದೆ ತಗ್ಗಿಸಿಕೊಂಡಿದ್ದರಿಂದ ನಾನು ಮುಂತಿಳಿಸಿದ ಕೇಡನ್ನು ಅವನ ಜೀವಮಾನದಲ್ಲಿ ಬರಗೊಡದೆ ಅವನ ಮಗನ ಕಾಲದಲ್ಲಿ ಅವನ ಮನೆಯವರ ಮೇಲೆ ಅದನ್ನು ಬರಮಾಡುವೆನು” ಎಂದು ಹೇಳಿದನು.
“Vai tu neesi redzējis, kā Ahabs Manā priekšā pazemojies? Tāpēc nu, ka tas Manā priekšā pazemojies, tad Es to nelaimi nevedīšu pār to viņa dienās; viņa dēla dienās Es vedīšu to nelaimi pār viņa namu.”