< ಅರಸುಗಳು - ಪ್ರಥಮ ಭಾಗ 15 >

1 ನೆಬಾಟನ ಮಗನಾದ ಯಾರೊಬ್ಬಾಮನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಅಬೀಯಾಮನು ಯೆಹೂದದ ಅರಸನಾದನು.
နေဗတ်၏သား ယေရောဗောင်မင်းကြီး နန်းစံ တဆယ်ရှစ်နှစ်တွင်၊ အဘိယသည် ယေရုရှလင်မြို့၌ မင်းပြု၍၊ ယုဒပြည်ကို သုံးနှစ်စိုးစံ၏။ မယ်တော်ကား၊ အဘရှလုံ၏ သမီးမာခါ အမည်ရှိ၏။
2 ಅವನು ಯೆರೂಸಲೇಮಿನಲ್ಲಿ ಮೂರು ವರ್ಷ ಆಳ್ವಿಕೆ ಮಾಡಿದನು. ಅಬೀಷಾಲೋಮನ ಮಗಳಾದ ಮಾಕಾ ಎಂಬಾಕೆಯು ಅವನ ತಾಯಿ.
3 ತನ್ನ ತಂದೆಯು ಮಾಡಿದ ಎಲ್ಲಾ ಪಾಪಕೃತ್ಯಗಳನ್ನು ಅವನೂ ಮಾಡಿದನು. ಅವನ ಪೂರ್ವಿಕನಾದ ದಾವೀದನು ದೇವರಾದ ಯೆಹೋವನನ್ನು ಯಥಾರ್ಥಮನಸ್ಸಿನಿಂದ ಸೇವಿಸಿದಂತೆ ಅವನು ಸೇವಿಸಲಿಲ್ಲ.
ခမည်းတော်ပြုသော ဒုစရိုက်ကို ပြုမြဲပြု၍၊ ဘေးတော်ဒါဝိဒ်ကဲ့သို့ မိမိဘုရားသခင် ထာဝရဘုရား ရှေ့တော်၌ စိတ်နှလုံးစုံလင်သည်မဟုတ်။
4 ಆದರೂ ಹಿತ್ತಿಯನಾದ ಊರೀಯನ ವಿಷಯದ ಹೊರತಾಗಿ ಬೇರೆ ಯಾವ ವಿಷಯದಲ್ಲಿಯೂ ತನ್ನ ಆಜ್ಞೆಗಳನ್ನು ಮೀರದೆ ಜೀವದಿಂದಿರುವವರೆಗೂ ತನ್ನ ಚಿತ್ತಕ್ಕನುಸಾರವಾಗಿ ನಡೆದ ದಾವೀದನ ನಿಮಿತ್ತವಾಗಿ ಯೆಹೋವನು ಯೆರೂಸಲೇಮಿನಲ್ಲಿರುವ ಅವನ ದೀಪವನ್ನು ಆರಿಸಲಿಲ್ಲ.
သို့သော်လည်း ဒါဝိဒ်၏မျက်နှာကိုထောက်၍၊ သူ၏ဘုရားသခင် ထာဝရဘုရားသည် ဆွေတော်မျိုးတော် ကို ချီးမြှောက်၍၊ ယေရုရှလင်မြို့ကို တည်စေသဖြင့်၊ ထိုမြို့ ၌ ဒါဝိဒ်၏မီးခွက်ကို ထွန်းလင်းစေတော်မူ၏။
5 ಯೆರೂಸಲೇಮನ್ನೂ ಅವನ ಸಂತಾನವನ್ನೂ ಉಳಿಸಿದನು.
အကြောင်းမူကား၊ ဒါဝိဒ်သည် ဟိတ္တိအမျိုး ဥရိယအမှုကိုထားလျှင်၊ တသက်လုံးထာဝရဘုရားမှာ ထားတော်မူသော အမှုတစုံတခုကိုမျှ မရှောင်၊ ရှေ့တော်၌ တရားသဖြင့် ကျင့်သောအကြောင်းတည်း။
6 ರೆಹಬ್ಬಾಮನಿಗೂ ಮತ್ತು ಯಾರೊಬ್ಬಾಮನಿಗೂ ಯಾವಾಗಲೂ ಯುದ್ಧನಡೆಯುತ್ತಿತ್ತು.
ရောဗောင်သား အဘိယနှင့် ယေရောဗောင်တို့သည် အသက်ရှည်သမျှ ကာလပတ်လုံး ရန်ဘက်ပြုကြ၏။
7 ಅಬೀಯಾಮನ ಉಳಿದ ಚರಿತ್ರೆಯೂ ಮತ್ತು ಅವನ ಎಲ್ಲಾ ಕೃತ್ಯಗಳೂ ಯೆಹೂದ್ಯರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ. ಅಬೀಯಾಮನಿಗೂ ಮತ್ತು ಯಾರೊಬ್ಬಾಮನಿಗೂ ಯುದ್ಧ ನಡೆಯುತ್ತಿತ್ತು.
အဘိယပြုမူသောအမှုအရာ ကြွင်းသမျှတို့သည် ယုဒရာဇဝင် ၌ ရေးထားလျက်ရှိ၏။
8 ಅಬೀಯಾಮನು ತನ್ನ ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ದಾವೀದನಗರದಲ್ಲಿ ಸಮಾಧಿ ಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಆಸನು ಅರಸನಾದನು.
အဘိယသည်ဘိုးဘေးတို့နှင့် အိပ်ပျော်၍ ဒါဝိဒ် မြို့၌ သင်္ဂြိုဟ်ခြင်းကို ခံလေ၏။ သားတော်အာသသည် ခမည်းတော်အရာ၌ နန်းထိုင်၏။
9 ಇಸ್ರಾಯೇಲರ ಅರಸನಾದ ಯಾರೊಬ್ಬಾಮನ ಆಳ್ವಿಕೆಯ ಇಪ್ಪತ್ತನೆಯ ವರ್ಷದಲ್ಲಿ ಆಸನು ಯೆಹೂದದ ಅರಸನಾದನು.
ဣသရေလရှင်ဘုရင် ယေရောဗောင် နန်းစံ နှစ်ဆယ်တွင်၊ အာသသည် ယေရုရှလင်မြို့၌ လေးဆယ် တနှစ်မင်းပြု၍ ယုဒပြည်ကို စိုးစံလေ၏။
10 ೧೦ ಅವನು ಯೆರೂಸಲೇಮನ್ನು ನಲ್ವತ್ತೊಂದು ವರ್ಷ ಆಳ್ವಿಕೆ ಮಾಡಿದನು. ಅಬೀಷಾಲೋಮನ ಮಗಳಾದ ಮಾಕಾ ಎಂಬಾಕೆಯು ಅವನ ತಾಯಿ.
၁၀အဘွားတော်ကား၊ အဘရှလုံ၏သမီး မာခါ ဖြစ်၏။
11 ೧೧ ಅವನು ತನ್ನ ಪೂರ್ವಿಕನಾದ ದಾವೀದನಂತೆ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದನು.
၁၁အာသသည် အဘိတော်ဒါဝိဒ်ပြုသကဲ့သို့ ထာဝရဘုရားရှေ့တော်၌ တရားသဖြင့်ပြု၏။
12 ೧೨ ಅವನು ವಿಟರನ್ನು ದೇಶದಿಂದ ಹೊರಡಿಸಿ, ತನ್ನ ಹಿರಿಯರು ಮಾಡಿಸಿಟ್ಟ ವಿಗ್ರಹಗಳನ್ನೆಲ್ಲಾ ತೆಗೆದುಹಾಕಿದನು.
၁၂ယောက်ျားအလိုသို့ လိုက်တတ်သောမိန်းမလျှာ တို့ကို၎င်း၊ ဘိုးတော်ဘေးတော်လုပ်သော ရုပ်တုရှိသမျှ တို့ကို၎င်း၊ ပြည်တော်ထဲက ပယ်ရှားတော်မူ၏။
13 ೧೩ ಅವನ ತಾಯಿಯಾದ ಮಾಕಳೂ ಅಶೇರ ದೇವತೆಯ ಒಂದು ಅಸಹ್ಯವಾದ ಮೂರ್ತಿಯನ್ನು ಮಾಡಿಸಿದ್ದರಿಂದ ಆಸನು ಆಕೆಯನ್ನು ಗದ್ದುಗೆಯಿಂದ ತಳ್ಳಿ, ಆ ಮೂರ್ತಿಯನ್ನು ಕಡಿದು, ಕಿದ್ರೋನ್ ಹಳ್ಳದ ಹತ್ತಿರ ಸುಟ್ಟು ಹಾಕಿದನು.
၁၃အဘွားတော်မာခါသည် အာရှရပင်အဘို့ ရုပ်တုကိုလုပ်သောကြောင့်၊ မိဖုရားအရာကိုနှုတ်၍၊ ရုပ်တုကို ဖျက်ဆီးပြီးလျှင်၊ ကေဒြုန်ချောင်းနားမှာ မီးရှို့တော်မူ၏။
14 ೧೪ ಅವನು ದೇಶದಲ್ಲಿದ್ದ ಪೂಜಾಸ್ಥಳಗಳನ್ನು ಹಾಳುಮಾಡದಿದ್ದರೂ ತನ್ನ ಜೀವಮಾನದಲ್ಲೆಲ್ಲಾ ಪ್ರಾಮಾಣಿಕವಾದ ಮನಸ್ಸಿನಿಂದ ಸತ್ಯಮಾರ್ಗದಲ್ಲಿ ಯೆಹೋವನಿಗೆ ನಡೆದುಕೊಂಡನು.
၁၄မြင့်သောအရပ်တို့ကို မပယ်ရှားသော်လည်း၊ လက်ထက်တော် ကာလပတ်လုံး၊ အာသစိတ်နှလုံးသည် ထာဝရဘုရားရှေ့တော်၌ စုံလင်ခြင်းရှိ၏။
15 ೧೫ ಇದಲ್ಲದೆ ತನ್ನ ತಂದೆಯೂ ತಾನೂ ಪ್ರತಿಷ್ಠಿಸಿದ ಬೆಳ್ಳಿ ಬಂಗಾರವನ್ನು ಪಾತ್ರೆಗಳನ್ನೂ ಯೆಹೋವನ ಆಲಯದಲ್ಲಿ ತಂದಿಟ್ಟನು.
၁၅ခမည်းတော်လှူသောဥစ္စာ၊ ကိုယ်တိုင်လှူသော ဥစ္စာ၊ ရွှေ၊ ငွေတန်ဆာများကို ဗိမာန်တော်ထဲသို့ သွင်းတော်မူ၏။
16 ೧೬ ಅವನಿಗೂ ಇಸ್ರಾಯೇಲರ ಅರಸನಾದ ಬಾಷನಿಗೂ ಯಾವಾಗಲೂ ಯುದ್ಧ ನಡೆಯುತ್ತಿತ್ತು
၁၆အာသနှင့် ဣသရေလရှင်ဘုရင် ဗာရှာတို့သည် အသက်ရှည်သမျှ ကာလပတ်လုံး ရန်ဘက်ပြုကြ၏။
17 ೧೭ ಇಸ್ರಾಯೇಲರ ಅರಸನಾದ ಬಾಷನು ಯೆಹೂದ್ಯರಿಗೆ ವಿರುದ್ಧವಾಗಿ ಯುದ್ಧಮಾಡಿ ಯಾರೂ ಯೆಹೂದ್ಯರ ಅರಸನಾದ ಆಸನ ಬಳಿಗೆ ಹೋಗಿ ಬರುವುದಕ್ಕಾಗದಂತೆ ರಾಮ ಎಂಬ ಕೋಟೆಯನ್ನು ಕಟ್ಟಿಸಿದನು.
၁၇ဣသရေလရှင်ဘုရင် ဗာရှာသည် ယုဒပြည်သို့ စစ်ချီ၍၊ ယုဒရှင်ဘုရင်အာသထံသို့ အဘယ်သူမျှ မထွက် မဝင်စေခြင်းငှါ ရာမမြို့ကို တည်၏။
18 ೧೮ ಆಗ ಆಸನು ಯೆಹೋವನ ಆಲಯದ ಮತ್ತು ಅರಮನೆಯ ಭಂಡಾರಗಳಲ್ಲಿ ಉಳಿದಿದ್ದ ಬೆಳ್ಳಿ ಮತ್ತು ಬಂಗಾರವನ್ನು ತೆಗೆದುಕೊಂಡು, ಅದನ್ನು ದೂತರ ಮುಖಾಂತರವಾಗಿ ದಮಸ್ಕದಲ್ಲಿದ್ದ ಅರಾಮ್ಯರ ಅರಸನೂ, ಹೆಜ್ಯೋನನ ಮೊಮ್ಮಗನೂ, ಟಬ್ರಿಮ್ಮೋನನ ಮಗನೂ ಆದ ಬೆನ್ಹದದನಿಗೆ ಕೊಟ್ಟು ಕಳುಹಿಸಿದನು.
၁၈ထိုအခါ ကျန်ကြွင်းသော ဗိမာန်တော်ဘဏ္ဍာနှင့် နန်းတော်ဘဏ္ဍာတည်းဟူသော ရွှေငွေရှိသမျှကို အာသ သည်ယူ၍ မိမိကျွန်တို့၌ အပ်သဖြင့်၊ ဒမာသက်မြို့မှာ နေသောရှုရိရှင်ဘုရင် ရေဇုန်သား တာဗရိမုန်၏သား ဗင်္ဟာဒဒ်ထံသို့ပေးလိုက်၍၊
19 ೧೯ ಆತನು ಅವನಿಗೆ “ನನಗೂ ನಿನಗೂ, ನನ್ನ ತಂದೆಗೂ ನಿನ್ನ ತಂದೆಗೂ ಒಡಂಬಡಿಕೆಯಾದಂತೆ, ಇಗೋ ನಿನಗೆ ಬೆಳ್ಳಿ ಮತ್ತು ಬಂಗಾರವನ್ನು ಕಾಣಿಕೆಯಾಗಿ ಕಳುಹಿಸಿದ್ದೇನೆ. ಇಸ್ರಾಯೇಲರ ಅರಸನಾದ ಬಾಷನು ನನ್ನನ್ನು ಬಿಟ್ಟು ಹೋಗುವಂತೆ ಅವನ ಸಂಗಡ ನೀನು ಮಾಡಿಕೊಂಡಿರುವ ಒಡಂಬಡಿಕೆಯನ್ನು ಮುರಿದುಬಿಡು” ಎಂದು ಹೇಳಿದನು.
၁၉ငါသည်သင်နှင့်၎င်း၊ ငါ့ခမည်းတော်သည် သင့် ခမည်းတော်နှင့်၎င်း၊ မိဿဟာယဖွဲ့ခြင်းရှိသည်ဖြစ်၍၊ ရွှေငွေကို ငါလက်ဆောင်ပေးလိုက်၏။ ဣသရေလ ရှင်ဘုရင် ဗာရှာသည် ငါ့ထံမှ ထွက်သွားစေခြင်းငှါ၊ သူနှင့် ဖွဲ့သော မိဿဟာယကို ဖျက်၍လာပါဟု မှာလိုက်လေ၏။
20 ೨೦ ಬೆನ್ಹದದನು ಅರಸನಾದ ಆಸನ ಮಾತನ್ನು ಕೇಳಿ ತನ್ನ ಸೈನ್ಯಾಧಿಪತಿಗಳನ್ನು ಯುದ್ಧಕ್ಕಾಗಿ ಇಸ್ರಾಯೇಲರ ಪಟ್ಟಣಗಳಿಗೆ ಕಳುಹಿಸಿದನು. ಇವರು ಇಯ್ಯೋನ್, ದಾನ್, ಆಬೇಲ್ಬೇತ್ಮಾಕಾ, ಕಿನ್ನೆರೋತ್ ಪ್ರದೇಶ, ನಫ್ತಾಲ್ಯರ ಎಲ್ಲಾ ಪ್ರಾಂತ್ಯ ಇವುಗಳನ್ನು ಹಾಳುಮಾಡಿದರು.
၂၀အာသမင်းကြီး၏ စကားကို ဗင်္ဟာဒဒ်သည် နားထောင်၍၊ ဣသရေလမြို့ရွာတို့ကို စစ်ချီစေခြင်းငှါ မိမိဗိုလ်များကို စေလွှတ်သဖြင့်၊ သူတို့သည် ဣယုန်မြို့၊ ဒန်မြို့၊ အာဗေလဗက်မာခါမြို့မှစ၍ဂင်္နေသရက်ပြည်လုံး၊ နဿလိပြည်လုံးကို လုပ်ကြံကြ၏။
21 ೨೧ ಬಾಷನು ಈ ಸುದ್ದಿಯನ್ನು ಕೇಳಿದಾಗ ರಾಮಕೋಟೆಯನ್ನು ಕಟ್ಟಿಸುವುದನ್ನು ಬಿಟ್ಟು ತಿರ್ಚಕ್ಕೆ ಹೋಗಿ ಅಲ್ಲಿಯೇ ವಾಸಮಾಡಲು ತೊಡಗಿದನು.
၂၁ထိုသိတင်းကို ဗာရှာသည် ကြားသောအခါ၊ ရာမမြို့ကို လက်စမသတ်ဘဲ တိရဇမြို့၌ နေရ၏။
22 ೨೨ ಅನಂತರ ಅರಸನಾದ ಆಸನು ಯೆಹೂದ್ಯರಲ್ಲಿ ಒಬ್ಬನನ್ನೂ ಬಿಡದೆ ಎಲ್ಲರನ್ನೂ ಕರೆಯಿಸಿ, ಬಾಷನು ರಾಮಕೋಟೆಗಾಗಿ ತರಿಸಿದ್ದ ಕಲ್ಲು, ಮರಗಳನ್ನು ಅವರ ಮುಖಾಂತರವಾಗಿ ತೆಗೆದುಕೊಂಡು ಹೋಗಿ ಬೆನ್ಯಾಮೀನ್ಯರ ಗೆಬ, ಮಿಚ್ಪೆ ಎಂಬ ಪಟ್ಟಣಗಳನ್ನು ಭದ್ರಪಡಿಸಿದನು.
၂၂ထိုအခါ အာသမင်းကြီးသည် ယုဒပြည် တရှောက်လုံးတွင် အမိန့်တော်ကို ကြော်ငြာစေသဖြင့်၊ ပြည်သားတယောက်မျှ မလွတ်၊ ရှိသမျှတို့သည် ရာမမြို့၌ ဗာရှာမင်းသွင်းသော ကျောက်နှင့် သစ်သားကိုယူသွား ကြ၍၊ အာသမင်းကြီးသည် ဗင်္ယာမိန်ခရိုင်၌ ဂေဘမြို့နှင့် မိဇပါမြို့ကို တည်၏။
23 ೨೩ ಆಸನ ಉಳಿದ ಚರಿತ್ರೆ, ಅವನ ಎಲ್ಲಾ ಪರಾಕ್ರಮಕೃತ್ಯಗಳು, ಅವನು ಪಟ್ಟಣಗಳನ್ನು ಕಟ್ಟಿಸಿದ ಸಂಗತಿಗಳೂ, ಅವನ ಇತರ ಕಾರ್ಯಗಳು ಯೆಹೂದ್ಯರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ. ಮುಪ್ಪಿನಲ್ಲಿ ಅವನ ಕಾಲುಗಳಿಗೆ ರೋಗವುಂಟಾಯಿತು.
၂၃အာသမင်းပြုမူသောအမှုအရာကြွင်းသမျှနှင့် တန်ခိုးကြီးခြင်း၊ မြို့များကိုတည်ခြင်းအရာတို့သည် ယုဒ ရာဇဝင်၌ ရေးထားလျက်ရှိ၏။ သို့ရာတွင် အသက်ကြီး သောအခါ ခြေတော်၌ အနာရောဂါစွဲသဖြင့်၊
24 ೨೪ ಅವನು ತನ್ನ ಪೂರ್ವಿಕರ ಬಳಿಗೆ ಸೇರಿದನು. ಅವನ ಶವವನ್ನು ಅವನ ಪೂರ್ವಿಕನಾದ ದಾವೀದನ ಪಟ್ಟಣದೊಳಗೆ ಕುಟುಂಬ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಯೆಹೋಷಾಫಾಟನು ಅರಸನಾದನು.
၂၄ဘိုးဘေးတို့နှင့်အိပ်ပျော်၍ အဘိတော်ဒါဝိဒ်မြို့၌ သင်္ဂြိုဟ်ခြင်းကိုခံလေ၏။ သားတော်ယောရှဖတ်သည် ခမည်းတော်အရာ၌ နန်းထိုင်၏။
25 ೨೫ ಯೆಹೂದ್ಯರ ಅರಸನಾದ ಆಸನ ಆಳ್ವಿಕೆಯ ಎರಡನೆಯ ವರ್ಷದಲ್ಲಿ ಯಾರೊಬ್ಬಾಮನ ಮಗನಾದ ನಾದಾಬನು ಇಸ್ರಾಯೇಲರ ಅರಸನಾಗಿ ಎರಡು ವರ್ಷ ಆಳ್ವಿಕೆ ಮಾಡಿದನು.
၂၅ယုဒရှင်ဘုရင် အာသနန်းစံနှစ်နှစ်တွင်၊ ယေရောဗောင်သား နာဒဒ်သည် ဣသရေလနိုင်ငံ၌ မင်းပြု၍ နှစ်နှစ်စိုးစံ၏။
26 ೨೬ ಅವನು ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿ ತನ್ನ ತಂದೆಯ ಮಾರ್ಗದಲ್ಲಿ ನಡೆದು ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.
၂၆ထိုမင်းသည် ထာဝရဘုရားရှေ့တော်၌ ဒုစရိုက်ကိုပြု၍၊ ခမည်းတော်လိုက်သောလမ်း၊ ဣသရေလ အမျိုးကို ပြစ်မှားစေသော လမ်းသို့ လိုက်လေ၏။
27 ೨೭ ಅವನು ಇಸ್ರಾಯೇಲರೊಡನೆ ಫಿಲಿಷ್ಟಿಯರ ವಶದಲ್ಲಿದ್ದ ಗಿಬ್ಬೆತೋನ್ ಎಂಬ ಪಟ್ಟಣಕ್ಕೆ ಮುತ್ತಿಗೆ ಹಾಕಿದಾಗ ಇಸ್ಸಾಕಾರನ ಕುಲದವನೂ, ಅಹೀಯನ ಮಗನೂ ಆದ ಬಾಷನೆಂಬುವವನು ಅವನಿಗೆ ವಿರುದ್ಧವಾಗಿ ಒಳಸಂಚು ಮಾಡಿ ಅವನನ್ನು ಕೊಂದನು.
၂၇ဣသခါအမျိုး၊ အဟိယသားဗာရှာသည် သင်းဖွဲ့၍၊ နာဒဒ်မင်းနှင့် ဣသရေလအမျိုးသားအပေါင်း တို့သည် ဖိလိတ္တိပြည် ဂိဗေသုန်မြို့ကို ဝိုင်းထားကြစဉ်၊
28 ೨೮ ಬಾಷನು ಯೆಹೂದ ಅರಸನಾದ ಆಸನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಅವನನ್ನು ಕೊಂದು ಅವನಿಗೆ ಬದಲಾಗಿ ತಾನು ಅರಸನಾದನು.
၂၈ယုဒရှင်ဘုရင်အာသ နန်းစံသုံးနှစ်တွင်၊ ဗာရှာသည် နာဒဒ်မင်းကို လုပ်ကြံ၍ နန်းထိုင်လေ၏။
29 ೨೯ ಅರಸನಾದ ಕೂಡಲೆ ಯಾರೊಬ್ಬಾಮನ ಮನೆಯಲ್ಲಿ ಒಬ್ಬನನ್ನೂ ಜೀವದಿಂದುಳಿಸದೆ ಎಲ್ಲರನ್ನೂ ಸಂಹರಿಸಿದನು. ಹೀಗೆ ಯೆಹೋವನು ಶೀಲೋವಿನ ಪ್ರವಾದಿಯಾದ ಅಹೀಯನ ಮುಖಾಂತರವಾಗಿ ಹೇಳಿಸಿದ ಮಾತು ನೆರವೇರಿತು.
၂၉နန်းထိုင်သောအခါ ယေရောဗောင်အမျိုးရှိသမျှကိုလည်း လုပ်ကြံ၏။ ထာဝရဘုရားသည် မိမိကျွန်၊ ရှိလောမြို့သား အဟိယအားဖြင့် မိန့်တော်မူသည် အတိုင်း၊ ယေရောဗောင်အမျိုးကို မဖျက်မှီတိုင်အောင်၊ အသက်ရှူသောသူတယောက်ကိုမျှ မချန်မထား။
30 ೩೦ ಯಾರೊಬ್ಬಾಮನು ತಾನು ಪಾಪಮಾಡಿದ್ದಲ್ಲದೆ ಇಸ್ರಾಯೇಲರನ್ನೂ ಪಾಪಕ್ಕೆ ಪ್ರೇರೇಪಿಸಿ, ಇಸ್ರಾಯೇಲ್ ದೇವರಾದ ಯೆಹೋವನಿಗೆ ಕೋಪಬರುವಂತೆ ಮಾಡಿದ್ದರಿಂದ ಹೀಗಾಯಿತು.
၃၀အကြောင်းမူကား၊ ယေရောဗောင်သည် ကိုယ်တိုင်ပြစ်မှားသော အပြစ်နှင့်ဣသရေလအမျိုးကို လည်းပြစ်မှား စေသော အပြစ်အားဖြင့်၊ ဣသရေလအမျိုး ၏ ဘုရားသခင်ထာဝရဘုရား၏အမျက်တော်ကို နှိုးဆော် သောအကြောင်းတည်း။
31 ೩೧ ನಾದಾಬನ ಉಳಿದ ಚರಿತ್ರೆಯೂ ಅವನ ಎಲ್ಲಾ ಕೃತ್ಯಗಳೂ ಇಸ್ರಾಯೇಲರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ.
၃၁နာဒဒ်မင်းပြုမူသော အမှုအရာကြွင်းသမျှတို့ သည် ဣသရေလရာဇဝင်၌ရေးထားလျက် ရှိ၏။
32 ೩೨ ಆಸನಿಗೂ ಇಸ್ರಾಯೇಲರ ಅರಸನಾದ ಬಾಷನಿಗೂ ಯಾವಾಗಲೂ ಯುದ್ಧನಡೆಯುತ್ತಿತ್ತು.
၃၂အာသနှင့်ဣသရေလရှင်ဘုရင်ဗာရှာတို့သည် အသက်ရှည်သမျှ ကာလပတ်လုံး ရန်ဘက်ပြုကြ၏။
33 ೩೩ ಯೆಹೂದದ ಅರಸನಾದ ಆಸನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಅಹೀಯನ ಮಗನಾದ ಬಾಷನು ಇಸ್ರಾಯೇಲರ ಅರಸನಾಗಿ ತಿರ್ಚದಲ್ಲಿದ್ದು, ಇಪ್ಪತ್ತನಾಲ್ಕು ವರ್ಷ ಆಳ್ವಿಕೆ ಮಾಡಿದನು.
၃၃ယုဒရှင်ဘုရင် အာသနန်းစံသုံးနှစ်တွင်၊ အဟိယသားဗာရှာသည် တိရဇမြို့မှာမင်းပြု၍၊ ဣသရေလနိုင်ငံ ကို နှစ်ဆယ်လေးနှစ်စိုးစံ၏။
34 ೩೪ ಅವನು ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿ ಯಾರೊಬ್ಬಾಮನ ಮಾರ್ಗದಲ್ಲಿ ನಡೆದು ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.
၃၄ထိုမင်းသည် ထာဝရဘုရားရှေ့တော်၌ ဒုစရိုက်ကိုပြု၍၊ ယေရောဗောင်လိုက်သောလမ်း၊ ဣသရေလ အမျိုးကိုပြစ်မှားစေသောလမ်းသို့ လိုက်လေ၏။

< ಅರಸುಗಳು - ಪ್ರಥಮ ಭಾಗ 15 >