< ಅರಸುಗಳು - ಪ್ರಥಮ ಭಾಗ 12 >
1 ೧ ರೆಹಬ್ಬಾಮನು ಶೆಕೆಮಿಗೆ ಹೋದನು. ಅಲ್ಲಿ ಎಲ್ಲಾ ಇಸ್ರಾಯೇಲರೂ ಅವನನ್ನು ಅರಸನನ್ನಾಗಿ ಮಾಡುವುದಕ್ಕೆ ಸೇರಿಬಂದಿದ್ದರು.
रहबाम शकेममा गए किनकि सारा इस्राएल तिनलाई राजा बनाउन शकेममा आउँदै थिए ।
2 ೨ ಇದಲ್ಲದೆ ಅರಸನಾದ ಸೊಲೊಮೋನನಿಗೆ ತಪ್ಪಿಸಿಕೊಂಡು ಐಗುಪ್ತಕ್ಕೆ ಓಡಿಹೋಗಿದ್ದ ನೆಬಾಟನ ಮಗನಾದ ಯಾರೊಬ್ಬಾಮನನ್ನು ಇದನ್ನು ಕೇಳಿ ಕರೆಯಿಸಿಕೊಂಡಿದ್ದರು.
नबातका छोरा यारोबामले यो कुरा सुन्दा (तिनी अझैसम्म मिश्रमा नै थिए जहाँ तिनी सोलोमन राजाको उपस्थितिबाट भागेर गएका थिए) तिनी मिश्रमा नै बसेका थिए ।
3 ೩ ಯಾರೊಬ್ಬಾಮನು ನಡೆದ ಸಂಗತಿಗಳ ವರ್ತಮಾನವನ್ನು ಕೇಳಿ ಎಲ್ಲಾ ಇಸ್ರಾಯೇಲರೊಡನೆ ರೆಹಬ್ಬಾಮನ ಬಳಿಗೆ ಹೋಗಿ,
त्यसैले, तिनीहरूले यारोबामलाई बोलाइपठाए, अनि यारोबाम र इस्राएलका सारा समुदाय रहबामकहाँ आएर भने,
4 ೪ ಅವನಿಗೆ, “ನಿನ್ನ ತಂದೆಯು ನಮ್ಮ ಮೇಲೆ ಭಾರವಾದ ನೊಗವನ್ನು ಹೇರಿದನು. ನಿನ್ನ ತಂದೆಯು ನೇಮಿಸಿದ ಬಿಟ್ಟೀಕೆಲಸವನ್ನು ನೀನು ಕಡಿಮೆ ಮಾಡಿ ನಮ್ಮ ಮೇಲಿರುವ ಭಾರವಾದ ನೊಗವನ್ನು ಹಗುರ ಮಾಡುವುದಾದರೆ ನಾವು ನಿನಗೆ ಸೇವೆಮಾಡುತ್ತೇವೆ” ಎಂದು ಹೇಳಿದರು.
“तपाईंका पिताले हाम्रो जुवा गरुङ्गो बनाइदिनुभयो । अब तपाईंका पिताले हामीमाथि राखिदिनुभएको भारी र जुवा हलुङ्गो बनाइदिनुहोस्, अनि हामी तपाईंको सेवा गर्ने छौँ ।
5 ೫ ಅದಕ್ಕೆ ಅವನು, “ನೀವು ಈಗ ಹೋಗಿ ಮೂರು ದಿನಗಳಾದ ನಂತರ ಪುನಃ ಬನ್ನಿರಿ” ಎಂದು ಉತ್ತರಕೊಟ್ಟನು. ಜನರು ಹಿಂದಿರುಗಿ ಹೋದರು.
रहबामले तिनीहरूलाई भने, “तपाईंहरू जानुहोस् र तिनदिनपछि फर्केर आउनुहोस् ।” त्यसैले मानिसहरू प्रस्थान गरे ।
6 ೬ ಆಗ ಅರಸನಾದ ರೆಹಬ್ಬಾಮನು ತನ್ನ ತಂದೆಯಾದ ಸೊಲೊಮೋನನ ಕಾಲದಲ್ಲಿ ಮಂತ್ರಿಗಳಾಗಿದ್ದ ಹಿರಿಯರನ್ನು ಕರೆಯಿಸಿ ತಾನು ಜನರಿಗೆ ಕೊಡತಕ್ಕ ಉತ್ತರದ ವಿಷಯದಲ್ಲಿ ಅವರ ಆಲೋಚನೆಯನ್ನು ಕೇಳಿದನು.
रहबाम राजाले आफ्ना पिता सोलोमन जीवित छँदा तिनको सामु खडा हुने पाका मानिसहरूसित सरसल्लाह लिए र भने, “यी मानिसहरूलाई जवाफ दिन तपाईंहरू मलाई के सल्लाह दिनुहुन्छ?”
7 ೭ ಅವರು ಅವನಿಗೆ, “ನೀನು ಈ ಹೊತ್ತು ಈ ಜನರ ಮಾತನ್ನು ಕೇಳಿ, ಅವರಿಗೆ ವಿನಯವಾಗಿ ಒಳ್ಳೆಯ ಉತ್ತರ ಕೊಡುವುದಾದರೆ ಅವರು ಯಾವಾಗಲೂ ನಿನ್ನ ಸೇವಕರಾಗಿರುವರು” ಎಂದರು.
तिनीहरूले तिनलाई जवाफ दिए, “आज तपाईं तिनीहरूका सेवक बनी तिनीहरूको सेवा गर्नुभयो र तिनीहरूलाई असल जवाफ दिनुभयो भने तिनीहरू सधैँ तपाईंका सेवकहरू हुने छन् ।”
8 ೮ ಆದರೆ ಅವನು ಹಿರಿಯರ ಆಲೋಚನೆಯನ್ನು ನಿರಾಕರಿಸಿ ತನ್ನ ಸಂಗಡ ಬೆಳೆದ ತನ್ನ ಮಂತ್ರಿಗಳಾದ ಯೌವನಸ್ಥರನ್ನು ಕರೆಯಿಸಿ,
तर रहबामले यी पाका मानिसहरूले दिएको सल्लाहलाई बेवास्ता गरे, र आफूसँगै हुर्केर आफ्नो सामु खडा हुने युवाहरूसित सल्लाह लिए ।
9 ೯ “ನನ್ನ ತಂದೆಯು ಹೇರಿದ ನೊಗವನ್ನು ಹಗುರಮಾಡಬೇಕೆಂದು ಬೇಡಿಕೊಳ್ಳುವ ಈ ಜನರಿಗೆ ಯಾವ ಉತ್ತರವನ್ನು ಕೊಡಬೇಕು, ಈ ವಿಷಯದಲ್ಲಿ ನಿಮ್ಮ ಆಲೋಚನೆ ಏನು?” ಎಂದು ಕೇಳಿದನು.
तिनले तिनीहरूलाई भने, “'तपाईंका पिताले हामीमाथि राखिदिनुभएको जुवा हलुको पारिदिनुहोस्' भनी बताउने मानिसहरूलाई मैले कस्तो जवाफ दिनुपर्छ भनी तिमीहरू मलाई के सल्लाह दिन्छौ?”
10 ೧೦ ಅವರು ಅವನಿಗೆ, “ನಿನ್ನ ತಂದೆಯು ನಮ್ಮ ಮೇಲೆ ಹೇರಿರುವ ನೊಗವನ್ನು ಹಗುರಮಾಡು ಎಂಬುದಾಗಿ ನಿನ್ನನ್ನು ಬೇಡಿಕೊಂಡ ಜನರಿಗೆ ನೀನು, ‘ನನ್ನ ತಂದೆಯ ನಡುವಿಗಿಂತ ನನ್ನ ಕಿರಿಬೆರಳು ದಪ್ಪವಾಗಿದೆ.
आफूसँगै हुर्केका युवाहरूले रहबामलाई यसो भने, “तपाईंका पिता सोलोमनले तिनीहरूको जुवा गरुङ्गो बनाइदिनुभयो र अब तपाईंले यसलाई हलुको बनाइदिनुपर्छ भनी बताउने मानिसहरूलाई गएर यसो भन्नुहोस्, ‘मेरो कान्छी औँला मेरा पिताको कम्मरभन्दा मोटो छ ।
11 ೧೧ ನನ್ನ ತಂದೆಯು ನಿಮ್ಮ ಮೇಲೆ ಭಾರವಾದ ನೊಗವನ್ನು ಹಾಕಿರುವುದು ನಿಜ. ಆದರೆ ನಾನು ಅದಕ್ಕೆ ಇನ್ನೂ ಹೆಚ್ಚಿನ ಭಾರವನ್ನು ಕೂಡಿಸುತ್ತೇನೆ ಅವನು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ. ನಾನಾದರೋ ನಿಮ್ಮನ್ನು ಮುಳ್ಳುಕೊರಡೆಗಳಿಂದ ದಂಡಿಸುವೆನು’ ಎಂಬುದಾಗಿ ಹೇಳಬೇಕು” ಎಂದು ಉತ್ತರಕೊಟ್ಟನು.
त्यसैले अब मेरा पिताले तिमीहरूमाथि गरुङ्गो जुवा बोकाउनुभएको थियो । म त्यो अझै गरुङ्गो पारिदिने छु । मेरा पिताले तिमीहरूलाई कोर्रा लगाउनुभएको थियो, तर म तिमीहरूलाई बिच्छीहरूले डस्न लगाउने छु' ।”
12 ೧೨ ಯಾರೊಬ್ಬಾಮನೂ ಮತ್ತು ಎಲ್ಲಾ ಜನರೂ ಅರಸನಾದ ರೆಹಬ್ಬಾಮನ ಅಪ್ಪಣೆಯಂತೆ ಮೂರನೆಯ ದಿನದಲ್ಲಿ ತಿರುಗಿ ಅವನ ಬಳಿಗೆ ಬಂದರು.
त्यसैले तेस्रो दिनमा यारोबाम र सारा मानिस रहबामकहाँ आए । किनकि राजाले यसो भनी निर्देशन दिएका थिए, “तेस्रो दिनमा मकहाँ फर्केर आओ ।”
13 ೧೩ ಅರಸನು ಅವರಿಗೆ ಕಠಿಣವಾದ ಉತ್ತರವನ್ನು ಕೊಟ್ಟನು. ಅವನು ಹಿರಿಯರ ಆಲೋಚನೆಯನ್ನು ನಿರಾಕರಿಸಿ ಯೌವನಸ್ಥರ ಆಲೋಚನೆಗನುಸಾರವಾಗಿ ಜನರಿಗೆ,
राजाले मानिसहरूलाई कडा तवरले जवाफ दिए, र तिनले पाका मानिसहरूले तिनलाई दिएको सल्लाहको बेवास्ता गरे ।
14 ೧೪ “ನನ್ನ ತಂದೆಯು ನಿಮ್ಮ ಮೇಲೆ ಭಾರವಾದ ನೊಗವನ್ನು ಹಾಕಿರುವುದು ನಿಜ. ಆದರೆ ನಾನು ಅದಕ್ಕೆ ಇನ್ನೂ ಹೆಚ್ಚಿನ ಭಾರವನ್ನು ಕೂಡಿಸುತ್ತೇನೆ, ಅವನು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ. ನಾನಾದರೋ ನಿಮ್ಮನ್ನು ಮುಳ್ಳು ಕೊರಡೆಗಳಿಂದ ದಂಡಿಸುವೆನು” ಎಂದು ನುಡಿದನು.
तिनले युवाहरूको सल्लाह मानी तिनीहरूलाई भने, “मेरा पिताले तिमीहरूमाथि गरुङ्गो जुवा बोकाउनुभएको थियो । म त्यो अझै गरुङ्गो पारिदिने छु । मेरा पिताले तिमीहरूलाई कोर्रा लगाउनुभएको थियो, तर म तिमीहरूलाई बिच्छीहरूले डस्न लगाउने छु ।”
15 ೧೫ ಅವನು ಜನರ ಮಾತನ್ನು ಕೇಳದೇ ಹೋದದ್ದು ಯೆಹೋವನಿಂದಲೇ. ಈ ಪ್ರಕಾರ ಯೆಹೋವನು ಶಿಲೋವಿನವನಾದ ಅಹೀಯನ ಮುಖಾಂತರವಾಗಿ ನೆಬಾಟನ ಮಗನಾದ ಯಾರೊಬ್ಬಾಮನಿಗೆ ಹೇಳಿಸಿದ ಮಾತು ನೆರವೇರಿತು.
यसरी राजाले मानिसहरूको कुरा सुनेनन् किनकि शीलोका अहियाहद्वारा नबातका छोरा यारोबामलाई उहाँले भन्नुभएको वचन पुरा होस् भनेर परमप्रभुले यस्तो परिस्थिति ल्याउनुभएको थियो ।
16 ೧೬ ಅರಸನು ತಮ್ಮ ಮಾತನ್ನು ಲಕ್ಷಿಸಲಿಲ್ಲವೆಂದೂ ತಿಳಿದು ಇಸ್ರಾಯೇಲರೆಲ್ಲರೂ ಅವನಿಗೆ, “ದಾವೀದನಲ್ಲಿ ನಮಗೇನು ಪಾಲು? ಇಷಯನ ಮಗನಲ್ಲಿ ನಮಗೇನು ಬಾಧ್ಯತೆ? ಇಸ್ರಾಯೇಲರೇ, ನಿಮ್ಮ ನಿಮ್ಮ ನಿವಾಸಗಳಿಗೆ ಹೋಗಿರಿ, ದಾವೀದನವರೇ ನಿಮ್ಮ ಕುಲವನ್ನು ನೀವೇ ನೋಡಿಕೊಳ್ಳಿರಿ” ಎಂದು ಹೇಳಿ ತಮ್ಮ ತಮ್ಮ ನಿವಾಸಗಳಿಗೆ ಹೋದರು.
जब सारा इस्राएलको कुरा राजाले नसुनेको तिनीहरूले देखे तब मानिसहरूले तिनलाई जवाफ दिए, “दाऊदमा हाम्रो के हिस्सा छ र? यिशैका छोरामा हाम्रो कुनै उत्तराधिकार छैन! हे इस्राएली हो, आ-आफ्ना पालमा जाओ । हे दाऊद, तिमी आफ्नै घर सम्हाल ।” यसरी इस्राएलीहरू आ-आफ्ना पालमा फर्केर गए ।
17 ೧೭ ಯೆಹೂದ್ಯ ಪ್ರಾಂತ್ಯದಲ್ಲಿದ್ದ ಇಸ್ರಾಯೇಲರಾದರೋ ರೆಹಬ್ಬಾಮನ ಅಧೀನದಲ್ಲಿದ್ದರು.
तर रहबाम यहूदाका सहरहरूमा बस्ने इस्राएलीहरूका राजा बने ।
18 ೧೮ ರೆಹಬ್ಬಾಮನು ಬಿಟ್ಟೀ ಕೆಲಸದವರ ಮೇಲ್ವಿಚಾರಕನಾದ ಅದೋರಾಮನನ್ನು ಇಸ್ರಾಯೇಲರ ಬಳಿಗೆ ಕಳುಹಿಸಲು ಅವರು ಅವನನ್ನು ಕಲ್ಲೆಸೆದು ಕೊಂದರು. ಅರಸನಾದ ರೆಹಬ್ಬಾಮನು ಬೇಗನೆ ರಥವನ್ನೇರಿ ಯೆರೂಸಲೇಮಿಗೆ ಓಡಿಹೋದನು.
तब रहबाम राजाले बेगार काममा लगाउने मानिसहरूका जिम्मावाल अदोनीरामलाई पठाए, तर सारा इस्राएलले तिनलाई ढुङ्गाले हानेर मारे । रहबाम राजा आफ्नो रथमा चढेर झट्टै यरूशलेममा भागे ।
19 ೧೯ ಇಸ್ರಾಯೇಲರು ಅಂದಿನಿಂದ ಇಂದಿನವರೆಗೂ ದಾವೀದನ ಕುಟುಂಬದವರೊಡನೆ ಸಮಾಧಾನವಾಗಲೇ ಇಲ್ಲ.
त्यसैले आजको दिनसम्म इस्राएल दाऊदको घरानाको विरुद्धमा बागी बनेको छ ।
20 ೨೦ ಯಾರೊಬ್ಬಾಮನು ಹಿಂತಿರುಗಿ ಬಂದಿದ್ದಾನೆಂಬ ವರ್ತಮಾನವು ಇಸ್ರಾಯೇಲರಿಗೆ ತಿಳಿದಾಗ ಅವರೆಲ್ಲರೂ ಅವನನ್ನು ನೆರೆದ ಸಭೆಯ ಮುಂದೆ ಕರೆಯಿಸಿ ತಮ್ಮ ಅರಸನನ್ನಾಗಿ ನೇಮಿಸಿಕೊಂಡರು. ದಾವೀದನ ಕುಟುಂಬದವರನ್ನು ಯೆಹೂದ ಕುಲವೇ ಹೊರತು ಬೇರೆ ಯಾವ ಕುಲವೂ ಹಿಂಬಾಲಿಸಲಿಲ್ಲ.
यारोबाम फर्के भनी जब सारा इस्राएलले सुने तिनीहरूको आफ्नो सभामा तिनलाई बोलाउनपठाइ तिनलाई सारा इस्राएलमाथि राजा बनाए । यहूदाको कुलबाहेक दाऊदको परिवारलाई पछ्याउने कोही भएन ।
21 ೨೧ ಸೊಲೊಮೋನನ ಮಗನಾದ ರೆಹಬ್ಬಾಮನು ಯೆರೂಸಲೇಮನ್ನು ತಲುಪಿದ ನಂತರ ಇಸ್ರಾಯೇಲರಿಗೆ ವಿರೋಧವಾಗಿ ಯುದ್ಧಮಾಡುವುದಕ್ಕೂ ರಾಜ್ಯವನ್ನು ತಿರುಗಿ ತನಗೆ ವಶಪಡಿಸಿಕೊಳ್ಳುವುದಕ್ಕೂ ಯೆಹೂದ ಬೆನ್ಯಾಮೀನ್ ಕುಲಗಳಿಂದ ಲಕ್ಷದ ಎಂಬತ್ತು ಸಾವಿರ ಶ್ರೇಷ್ಠ ಸೈನಿಕರನ್ನು ಕೂಡಿಸಿದನು.
जब रहबाम यरूशलेममा आए तिनले यहूदाको सबै घराना र बेन्यामीन कुललाई भेला गरे । इस्राएलको घरानाको विरुद्धमा लडी सोलोमनका छोरा रहबामको राज्यलाई पुनर्स्थापित गर्न त्यहाँ १,८०,००० चुनिएका योद्धा जम्मा भएका थिए ।
22 ೨೨ ಆಗ ದೇವರ ಮನುಷ್ಯನಾದ ಶೆಮಾಯನಿಗೆ ದೈವೋತ್ತರವುಂಟಾಯಿತು.
तर परमेश्वरका जन शमायाहकहाँ परमेश्वरको वचन आयो,
23 ೨೩ “ನೀನು ಹೋಗಿ, ಸೊಲೊಮೋನನ ಮಗನೂ ಯೆಹೂದದ ಅರಸನೂ ಆದ ರೆಹಬ್ಬಾಮನಿಗೂ, ಯೆಹೂದ ಬೆನ್ಯಾಮೀನ್ ಕುಲಗಳವರಿಗೂ ಮತ್ತು ಉಳಿದ ಜನರಿಗೂ
“सोलोमनका छोरा यहूदाका राजा रहबाम अनि यहूदा र बेन्यामीनका सम्पूर्ण घरानासाथै बाँकी सबै मानिसलाई भन्,
24 ೨೪ ‘ಯೆಹೋವನ ಮಾತನ್ನು ಕೇಳಿರಿ, ನೀವು ನಿಮ್ಮ ಸಹೋದರರಾದ ಇಸ್ರಾಯೇಲರೊಡನೆ ಯುದ್ಧಮಾಡುವುದಕ್ಕೆ ಹೋಗಬಾರದು. ಎಲ್ಲರೂ ಹಿಂತಿರುಗಿ ಹೋಗಿರಿ. ಈ ಕಾರ್ಯವು ಯೆಹೋವನಿಂದಾಗಿದೆ’ ಎಂದು ಹೇಳಬೇಕು” ಎಂಬ ಯೆಹೋವನ ಮಾತನ್ನು ಜನರಿಗೆ ಹೇಳಿದನು. ಆಗ ಅವರು ಯೆಹೋವನ ಮಾತನ್ನು ಕೇಳಿ ವಿಧೇಯರಾಗಿ ಹಿಂದಿರುಗಿ ಹೋದರು.
'परमप्रभु यसो भन्नुहुन्छः आफ्ना दाजुभाइ इस्राएलका मानिसहरूलाई तिमीहरूले आक्रमण नगर्नू वा तिनीहरूसित लडाइँ नगर्नू । हरेक मानिस आ-आफ्नो घरमा फर्केर जाओस् किनकि यो काम मैले गरेको हुँ' ।” त्यसैले तिनीहरूले परमप्रभुको वचन सुने र तिनीहरू फर्केर आ-आफ्नो बाटो लागे । यसरी तिनीहरूले उहाँको वचन पालन गरे ।
25 ೨೫ ಯಾರೊಬ್ಬಾಮನು ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿನ ಶೆಕೆಮ್ ಪಟ್ಟಣವನ್ನು ಭದ್ರಪಡಿಸಿ ಅಲ್ಲಿ ವಾಸಿಸಿದನು. ಅಲ್ಲಿಂದ ಪೆನೂವೇಲಿಗೆ ಹೋಗಿ ಅದನ್ನೂ ಭದ್ರಪಡಿಸಿದನು.
तब यारोबामले एफ्राइमको पहाडी देशमा शकेमलाई मजबुत पारी तिनी त्यहीँ बसे । तिनी त्यहाँबाट गएर तिनले पनीएल सहर बनाए ।
26 ೨೬ ಅವನು ತನ್ನ ಮನಸ್ಸಿನಲ್ಲಿ, “ರಾಜ್ಯವು ಪುನಃ ದಾವೀದನ ಕುಟುಂಬದವರಿಗೆ ಆಗುವುದೋ ಏನೋ,
यारोबामले आफ्नो ह्रदयमा सोचे, “अब यो राज्य दाऊदको घरानामा फर्कने छ ।
27 ೨೭ ಜನರು ಯೆರೂಸಲೇಮಿನಲ್ಲಿರುವ ಯೆಹೋವನ ಆಲಯಕ್ಕೆ ಯಜ್ಞಸಮರ್ಪಣೆಗಾಗಿ ಹೋಗುವುದಾದರೆ, ಅವರ ಮನಸ್ಸು ಅವರ ಒಡೆಯನೂ ಯೆಹೂದದ ಅರಸನೂ ಆದ ರೆಹಬ್ಬಾಮನ ಕಡೆಗೆ ತಿರುಗಿತು. ಅವರು ನನ್ನನ್ನು ಕೊಂದು ಅವನ ಬಳಿಗೆ ಹೋದಾರು” ಅಂದುಕೊಂಡನು.
यी मानिसहरू यरूशलेमस्थित परमप्रभुको मन्दिरमा बलिदान चढाउन गए भने यी मानिसहरूका ह्रदय तिनीहरूका मालिक अर्थात् यहूदाका राजा रहबामकहाँ फर्कने छन् । मलाई मारेर तिनीहरू यहूदाका राजा रहबामकहाँ फर्केने छन् ।”
28 ೨೮ ಅವನು ಬಹಳವಾಗಿ ಆಲೋಚಿಸಿ, ಕಡೆಯಲ್ಲಿ ಬಂಗಾರದ ಎರಡು ಬಸವನ ಮೂರ್ತಿಗಳನ್ನು ಮಾಡಿಸಿ ಇಸ್ರಾಯೇಲರಿಗೆ, “ನೀವು ಜಾತ್ರೆಗಾಗಿ ಯೆರೂಸಲೇಮಿಗೆ ಹೋದದ್ದು ಸಾಕಾಯಿತು, ಇಗೋ, ನಿಮ್ಮನ್ನು ಐಗುಪ್ತದಿಂದ ಕರೆತಂದ ದೇವರುಗಳು ಇಲ್ಲಿರುತ್ತವೆ” ಎಂದು ಹೇಳಿದನು.
यसैले राजा यारोबामले सरसल्लाह लिई सुनका दुईवटा बाछा बनाए । तिनले मानिसहरूलाई भने, “तिमीहरूलाई यरूशलेमसम्म जान निकै टाढा हुन्छ । हे इस्राएली हो, तिमीहरूलाई मिश्र देशबाट ल्याउने देवताहरू यी नै हुन् ।”
29 ೨೯ ನಂತರ ಅವನು ಅವುಗಳಲ್ಲಿ ಒಂದನ್ನು ಬೇತೇಲಿನಲ್ಲಿರಿಸಿ, ಇನ್ನೊಂದನ್ನು ದಾನಿಗೆ ಕಳುಹಿಸಿದನು.
तिनले एउटालाई बेथेलमा र अर्कोलाई दानमा राखे ।
30 ೩೦ ಇದು ಪಾಪಕ್ಕೆ ಕಾರಣವಾಯಿತು. ಜನರು ಈ ಎರಡನೆಯ ವಿಗ್ರಹವನ್ನು ಮೆರವಣಿಗೆಯಾಗಿ ದಾನಿಗೆ ಒಯ್ದರು.
यसरी यही कार्य नै पाप बन्यो । मानिसहरू एक ठाउँदेखि अर्को ठाउँमा र दानसम्मै पुजा गर्न गए ।
31 ೩೧ ಇದಲ್ಲದೆ ಅವನು ಪೂಜಾಗಿರಿಗಳ ಮೇಲೆ ಗುಡಿಗಳನ್ನು ಕಟ್ಟಿಸಿ, ಲೇವಿಯರಲ್ಲದ ಸಾಮಾನ್ಯ ಜನರನ್ನು ಯಾಜಕರನ್ನಾಗಿ ನೇಮಿಸಿದನು.
यारोबामले डाँडामा पुजा गर्ने ठाउँहरू बनाए, र तिनले सबै मानिसका बिचबाट पुजारीहरू नियुक्त गरे जो लेवीका छोराहरूमध्येका थिएनन् ।
32 ೩೨ ಅವನು ಎಂಟನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ, “ಬೇತೇಲಿನಲ್ಲಿ ಯೆಹೂದ ದೇಶದ ಜಾತ್ರೆಗೆ ಸರಿಯಾದ ಜಾತ್ರೆಯು ನಡೆಯಬೇಕು” ಎಂದು ಅಪ್ಪಣೆ ಮಾಡಿ, ತಾನು ಅಲ್ಲಿಗೆ ಹೋಗಿ ಅಲ್ಲಿ ನಿಲ್ಲಿಸಿದ ಬಸವನ ಮೂರ್ತಿಗಳಿಗೋಸ್ಕರ ಯಜ್ಞವೇದಿಯ ಮೇಲೆ ಯಜ್ಞ ಮಾಡಿದನು. ತಾನು ಏರ್ಪಡಿಸಿದ ಪೂಜಾಸ್ಥಳಗಳ ಯಾಜಕರನ್ನು ಬೇತೇಲಿನ ದೇವಸ್ಥಾನದ ಸೇವೆಗೆ ನೇಮಿಸಿದನು.
आठौँ महिनाको पन्ध्रौँ दिनमा यहूदामा जस्तै यारोबामले एउटा चाड ठहराए, र तिनी वेदीमा गए । तिनले बेथेलमा आफूले बनाएका बाछाहरूका निम्ति बलिदान चढाए, र तिनले बेथेलमा आफूले बनाएका डाँडाका ठाउँहरूमा पुजारीहरू नियुक्त गरे ।
33 ೩೩ ಇಸ್ರಾಯೇಲರು ಎಂಟನೆಯ ತಿಂಗಳ ಹದಿನೈದನೆಯ ದಿನದಲ್ಲಿ ಹಬ್ಬವನ್ನಾಚರಿಸಬೇಕೆಂದು ಯಾರೊಬ್ಬಾಮನು ಸ್ವ ಇಚ್ಛೆಯಿಂದ ಗೊತ್ತುಮಾಡಿ ಆ ಸಮಯಕ್ಕೆ ತಾನೂ ಬೇತೇಲಿನ ಯಜ್ಞವೇದಿಯ ಬಳಿಗೆ ಹೋಗಿ ಧೂಪಹಾಕುವುದಕ್ಕಾಗಿ ಅದರ ಮೆಟ್ಟಲುಗಳನ್ನು ಹತ್ತುತ್ತಿದ್ದನು.
आफ्नो मनमा योजना बनाएअनुसार आठौँ महिनाको पन्ध्रौँ दिनमा बेथेलमा आफूले निर्माण गरेको वेदीमा तिनले बलिदान चढाए । यसरी तिनले इस्राएलीहरूका निम्ति चाड ठहराए, र धूप बाल्न आफै वेदीमा उक्लेर जाने गरे ।