< ಅರಸುಗಳು - ಪ್ರಥಮ ಭಾಗ 1 >
1 ೧ ಅರಸನಾದ ದಾವೀದನು ವಯೋವೃದ್ಧನಾಗಿದ್ದನು. ಸೇವಕರು ಎಷ್ಟು ಕಂಬಳಿ ಹೊದಿಸಿದರೂ ಅವನಿಗೆ ಬೆಚ್ಚಗಾಗುತ್ತಿರಲಿಲ್ಲ.
जब राजा दाऊद वृद्ध भए र तिनको उमेर ढल्किसकेको थियो, तिनीहरूले तिनलाई कम्बल ओढाइदिँदा पनि तिनलाई न्यानो हुँदैनथ्यो ।
2 ೨ ಆದುದರಿಂದ ಅವನ ಸೇವಕರು ಅವನಿಗೆ, “ನಮ್ಮ ಒಡೆಯನಾದ ಅರಸನಿಗೋಸ್ಕರ ಒಬ್ಬ ಕನ್ಯೆಯನ್ನು ಹುಡುಕಿತರುವೆವು. ಆಕೆಯು ಅರಸನ ಸನ್ನಿಧಿಯಲ್ಲಿದ್ದುಕೊಂಡು ನಿನ್ನನ್ನು ಪರಾಂಬರಿಸಬೇಕು. ಆಕೆಯು ನಮ್ಮ ಒಡೆಯನಾದ ಅರಸನ ಪಕ್ಕದಲ್ಲಿ ಮಲಗುವುದರಿಂದ ನಿಮಗೆ ಬೆಚ್ಚಗಾಗುವುದು” ಎಂದು ಹೇಳಿದರು.
त्यसैले तिनका सेवकहरूले तिनलाई भने, “हाम्रा मालिक राजाको लागि एउटी कन्या केटी खोजौँ । त्यसले राजाको सेवा गरोस् र उहाँको वास्ता गरोस् । त्यसले हाम्रा मालिक राजालाई न्यायो पार्न त्यो उहाँसित सुतोस् ।”
3 ೩ ಆನಂತರ ಅವರು ಇಸ್ರಾಯೇಲರ ಎಲ್ಲಾ ಪ್ರಾಂತ್ಯಗಳಲ್ಲಿ ಅತಿ ಸುಂದರಿಯಾದ ಹುಡುಗಿಯನ್ನು ಹುಡುಕುವುದಕ್ಕೆ ಹೋಗಿ ಶೂನೇಮ್ ಊರಿನ ಅಬೀಷಗ್ ಎಂಬಾಕೆಯನ್ನು ಕಂಡು ಆಕೆಯನ್ನು ಅರಸನ ಬಳಿಗೆ ಕರೆದುಕೊಂಡು ಬಂದರು.
त्यसैले तिनीहरूले इस्राएलका सारा सिमानाभित्र एउटी सुन्दरी स्त्रीको खोजी गरे । तिनीहरूले शूनम्मी अबीशगलाई फेला पारी राजाकहाँ ल्याए ।
4 ೪ ಬಹು ಸುಂದರಿಯಾದ ಈಕೆಯು ಅರಸನನ್ನು ಶುಶ್ರೂಷೆ ಮಾಡುವ ಸೇವಕಿಯಾದಳು. ಆದರೆ ಅರಸನು ಈಕೆಯನ್ನು ಸಂಗಮಿಸಲಿಲ್ಲ.
केटी अत्यन्तै सुन्दरी थिइन् । उनले राजाको सेवा गरिन् र तिनको वास्ता गरिन्, तर राजाले उनीसित सहवास गरेनन् ।
5 ೫ ಆನಂತರ ಹಗ್ಗೀತಳ ಮಗನಾದ ಅದೋನೀಯನು, “ನಾನೇ ಅರಸನಾಗತಕ್ಕವನು” ಎಂಬುದಾಗಿ ಹೇಳಿ ಉಬ್ಬಿಕೊಂಡು, ತನಗೋಸ್ಕರ ರಥರಥಾಶ್ವಗಳನ್ನೂ, ಮುಂದೆ ಓಡುವುದಕ್ಕಾಗಿ ಐವತ್ತು ಸಿಪಾಯಿಗಳನ್ನೂ ನೇಮಿಸಿಕೊಂಡನು.
त्यस बेला हग्गीतका छोरा अदोनियाहले “म राजा हुने छु” भन्दै आफैलाई उचाले । त्यसैले तिनले पचास जना मानिससँगै रथहरू र घोडचढीहरू आफ्नो अगि दगुर्न तयार पारे ।
6 ೬ ಅವನ ತಂದೆಯಾದ ದಾವೀದನು, “ನೀನು ಹೀಗೆ ಮಾಡಿದ್ದೇಕೆ” ಎಂದು ಅವನನ್ನು ಒಂದು ಸಾರಿಯಾದರೂ ಗದರಿಸಿ ಬೇಸರಪಡಿಸಿರಲಿಲ್ಲ. ಅವನು ಬಹು ಸುಂದರವಾಗಿದ್ದನು. ಅಬ್ಷಾಲೋಮನ ತರುವಾಯ ಅವನೇ ಹಿರಿಯನಾಗಿದ್ದನು.
“तैँले किन यस्तो व्यवहार गरेको?” भनी तिनका पिताले तिनलाई कहिल्यै सोधेनन् । अदोनियाह आफै पनि अत्यन्तै सुन्दर मानिस थिए र तिनी अब्शालोमभन्दा पछि जन्मेका थिए ।
7 ೭ ಅವನು ಚೆರೂಯಳ ಮಗನಾದ ಯೋವಾಬನನ್ನು ಮತ್ತು ಯಾಜಕನಾದ ಎಬ್ಯಾತಾರನನ್ನೂ ತನ್ನ ಕಡೆಗೆ ಒಲಿಸಿಕೊಂಡನು. ಇವರು ಅವನನ್ನು ಹಿಂಬಾಲಿಸಿ ಅವನಿಗೆ ಸಹಾಯಕರಾದರು.
अदोनियाहले सरूयाहका छोरा योआब र पुजारी अबियाथारसित सरसल्लाह लिए । तिनीहरूले अदोनियाहलाई पछ्याएर तिनको मदत गरे ।
8 ೮ ಆದರೆ ಯಾಜಕನಾದ ಚಾದೋಕ್, ಯೆಹೋಯಾದಾವನ ಮಗನಾದ ಬೆನಾಯ, ಪ್ರವಾದಿಯಾದ ನಾತಾನ್, ಶಿಮ್ಮೀ, ರೇಗೀ ಮತ್ತು ದಾವೀದನ ವಿಶೇಷ ಕಾವಲಿನವರು ಅದೋನೀಯನನ್ನು ಬೆಂಬಲಿಸಲಿಲ್ಲ.
तर पुजारी सादोक, यहोयादाका छोरा बनायाह, नातान अगमवक्ता, शिमी, रेई र दाऊदका शक्तिशाली मानिसहरूचाहिँ अदोनियाहतर्फ लागेनन् ।
9 ೯ ಅದೋನೀಯನು ರೋಗೆಲ್ ಬುಗ್ಗೆಯ ಬಳಿಯಲ್ಲಿರುವ ಚೋಹೆಲೆತ್ ಬಂಡೆಯ ಮೇಲೆ ಕುರಿ, ಹೋರಿ ಮೊದಲಾದ ಕೊಬ್ಬಿದ ಪಶುಗಳನ್ನು ಯಜ್ಞಮಾಡಿಸಿ, ರಾಜಪುತ್ರರಾದ ತನ್ನ ಉಳಿದ ಸಹೋದರರನ್ನೂ ಅರಸನ ಅಧಿಕಾರಿಗಳಾದ ಎಲ್ಲಾ ಯೆಹೂದ್ಯರನ್ನೂ ಔತಣಕ್ಕೆ ಆಮಂತ್ರಿಸಿದನು.
अदोनियाले एन-रोगेलको छेउमा अवस्थित जोहेलेत भन्ने ढुङ्गानेर भेडा, गोरु र पोसिएका बाछाहरू बलिदान चढाए । तिनले आफ्ना सबै दाजुभाइ, राजा छोराहरू र यहूदाका सबै मानिसलगायत राजाका सेवकहरूलाई निमन्त्रणा दिए ।
10 ೧೦ ಆದರೆ ಪ್ರವಾದಿಯಾದ ನಾತಾನ್, ಬೆನಾಯ, ದಾವೀದನ ವಿಶೇಷ ಕಾವಲಿನವರು ತಮ್ಮನಾದ ಸೊಲೊಮೋನ್ ಇವರನ್ನು ಮಾತ್ರ ಆಮಂತ್ರಿಸಿರಲಿಲ್ಲ.
तर तिनले नातान अगमवक्ता, बनायाह, शक्तिशाली मानिसहरू र आफ्ना भाइ सोलोमनलाई निमन्त्रणा दिएनन् ।
11 ೧೧ ಆಗ ನಾತಾನನು ಸೊಲೊಮೋನನ ತಾಯಿಯಾದ ಬತ್ಷೆಬೆಗೆ, “ಹಗ್ಗೀತಳ ಮಗನಾದ ಅದೋನೀಯನು ನಮ್ಮ ಒಡೆಯನಾದ ದಾವೀದನಿಗೆ ತಿಳಿಯದೇ ಅರಸನಾದನೆಂಬುದನ್ನು ನೀನು ಕೇಳಿದಿಯಲ್ಲವೋ?
तब नातानले सोलोमनकी आमा बतशेबालाई यसो भन्दै सोधे, “हाम्रा मालिक दाऊदलाई थाहै नदिई हग्गीतका छोरा अदोनियाह राजा भएका छन् भन्ने कुरा के तपाईंले सुन्नुभएको छैन?”
12 ೧೨ ಈಗ ನನ್ನ ಆಲೋಚನೆಯನ್ನು ಲಾಲಿಸಿ ನಿನ್ನ ಮತ್ತು ನಿನ್ನ ಮಗನಾದ ಸೊಲೊಮೋನನ ಜೀವವನ್ನು ಉಳಿಸಿಕೋ.
त्यसकारण, तपाईंले आफ्नै जीवन र तपाईंका छोरा सोलोमनको जीवन बचाउन सक्नुभएको होस् भनेर म अब तपाईंलाई सल्लाह दिन चाहन्छु ।
13 ೧೩ ನೀನು ಅರಸನಾದ ದಾವೀದನ ಬಳಿಗೆ ಹೋಗಿ ಅವನಿಗೆ, ‘ನನ್ನ ಒಡೆಯನಾದ ಅರಸನು ತನ್ನ ತರುವಾಯ ನನ್ನ ಮಗನಾದ ಸೊಲೊಮೋನನೇ ಆಳಬೇಕು. ಅವನೇ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳಬೇಕು ಎಂದು ತಮ್ಮ ದಾಸಿಯಾದ ನನಗೆ ಪ್ರಮಾಣ ಮಾಡಿ ಹೇಳಿದ್ದನಲ್ಲಾ. ಹೀಗಿದ್ದ ಮೇಲೆ ಅದೋನೀಯನು ಆಳುವುದೇಕೆ’ ಎಂದು ಕೇಳು.
राजा दाऊदकहाँ गएर भन्नहोस्, ‘मेरा मालिक राजा, के तपाईंले आफ्नो सेवकलाई “निश्चय नै मपछि तिम्रो छोराले शासन गर्ने छ र त्यो नै मेरो सिंहासनमा बस्ने छ” भनी तपाईंले मसित शपथ खानुभएको होइन र? त्यसो भए, किन अदोनियाहले शासन गर्दै छन् त?’
14 ೧೪ ನೀನು ಅರಸನೊಡನೆ ಮಾತನಾಡುತ್ತಿರುವಾಗ ನಾನು ಬಂದು ನಿನ್ನ ಮಾತನ್ನು ದೃಢಪಡಿಸುವೆನು” ಎಂದನು.
तपाईंले राजासित बोलिरहनुहुँदा म तपाईंको पछिपछि भित्र आउने छु र तपाईंको कुरा पुष्टि गरिदिने छु ।”
15 ೧೫ ಅರಸನು ಬಹು ವೃದ್ಧನಾಗಿದುದರಿಂದ ಶೂನೇಮ್ಯಳಾದ ಅಬೀಷಗ್ ಎಂಬಾಕೆಯಿಂದ ಪರಾಂಬರಿಕೆಯನ್ನು ಹೊಂದುತ್ತಾ ಒಳಗಿನ ಕೋಣೆಯಲ್ಲಿಯೇ ಇರುತ್ತಿದ್ದನು.
त्यसैले बतशेबा राजाको कोठामा गइन् । राजा अत्यन्तै वृद्ध भइसकेका थिए, र शूनम्मी अबीशगले राजाको सेवा गर्दै थिइन् ।
16 ೧೬ ಬತ್ಷೆಬೆಯು ಅಲ್ಲಿಗೆ ಹೋಗಿ ಅರಸನಿಗೆ ಬಾಗಿ ನಮಸ್ಕರಿಸಿದಳು. ಅರಸನು, “ನಿನಗೇನು ಬೇಕು?” ಎಂದು ಆಕೆಯನ್ನು ಕೇಳಿದನು.
बतशेबाले शिर झुकाई राजाको सामु शाष्टाङ्ग दण्डवत् गरिन् । तब राजाले सोधे, “तिमी के चाहन्छ्यौ?”
17 ೧೭ ಆಗ ಆಕೆಯು, “ನನ್ನ ಒಡೆಯನು ತನ್ನ ದೇವರಾದ ಯೆಹೋವನ ಮೇಲೆ ಆಣೆಯಿಟ್ಟು ತಮ್ಮ ದಾಸಿಯಾದ ನನಗೆ ನನ್ನ ತರುವಾಯ ನನ್ನ ಮಗನಾದ ಸೊಲೊಮೋನನು ಅರಸನಾಗಬೇಕು. ನಿಜವಾಗಿ ಅವನೇ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳಬೇಕು ಎಂಬುದಾಗಿ ಹೇಳಿದ್ದೆಯಲ್ಲಾ.
उनले राजालाई भनिन्, “हे मेरा मालिक, परमप्रभु तपाईंका परमेश्वरको नाउँमा तपाईंले आफ्नी दासीसित यसो भन्दै शपथ खानुभएको थियो, ‘निश्चय नै मपछि तिम्रो छोराले शासन गर्ने छ र त्यो नै मेरो सिंहासनमा बस्ने छ ।”
18 ೧೮ ಆದರೆ ಈಗ ಅದೋನೀಯನು ನನ್ನ ಒಡೆಯನೂ ಅರಸನೂ ಆದ ನಿಮಗೆ ತಿಳಿಯದೇ ಅರಸನಾಗಿದ್ದಾನೆ.
अब हेर्नुहोस्, अदोनियाह राजा भएको छ, र मेरा मालिक हजुरलाई यो कुरा थाहै छैन ।
19 ೧೯ ಆತನು ಹೋರಿ, ಕುರಿ ಮೊದಲಾದ ಹಲವು ಕೊಬ್ಬಿದ ಪಶುಗಳನ್ನು ಯಜ್ಞಮಾಡಿಸಿ ನಿನ್ನ ಸೇವಕನಾದ ಸೊಲೊಮೋನನ ಹೊರತಾಗಿ ಎಲ್ಲಾ ರಾಜಪುತ್ರರನ್ನೂ, ಯಾಜಕನಾದ ಎಬ್ಯಾತಾರನನ್ನೂ, ಸೇನಾಧಿಪತಿಯಾದ ಯೋವಾಬನನ್ನೂ ಔತಣಕ್ಕೆ ಕರೆದಿದ್ದಾನೆ.
तिनले ठुलो सङ्ख्यामा गोरुहरू, पोसिएका बाछाहरू र भेडा बलिदान चढाएका छन्, अनि राजाका सबै छोरा, पुजारी अबियाथार, र सेनापति योआबलाई निमन्त्रणा दिएका छन्, तर तपाईंका दास सोलोमनलाई भने निमन्त्रणा दिएका छैनन् ।
20 ೨೦ ನನ್ನ ಒಡೆಯನೂ ಅರಸನೂ ಆದ ನಿಮ್ಮ ತರುವಾಯ ಸಿಂಹಾಸನದ ಮೇಲೆ ಕುಳಿತುಕೊಳ್ಳತಕ್ಕವರು ಯಾರೆಂಬುದನ್ನು ನೀವೇ ಗೊತ್ತುಮಾಡಬೇಕೆಂದು ಇಸ್ರಾಯೇಲರೆಲ್ಲರೂ ಕಾದುಕೊಂಡಿದ್ದಾರೆ.
हे मेरा मालिक राजा, हजुरपछि को सिंहासनमा बस्ने छ भनी हजुरबाट थाहा पाउनलाई सारा इस्राएलले हजुरकै प्रतीक्षा गरिरहेका छन् ।
21 ೨೧ ನನ್ನ ಒಡೆಯನೂ, ಅರಸನೂ ಆದ ನೀವೂ ಹಾಗೆ ಮಾಡದೆ ಪೂರ್ವಿಕರ ಬಳಿಗೆ ಸೇರುವುದಾದರೆ ನಾನೂ ಮತ್ತು ನನ್ನ ಮಗನೂ ದೋಷಾರೋಪಣೆಗೆ ಗುರಿಯಾಗುವೆವು” ಎಂದು ಹೇಳಿದಳು.
नत्रता जब हजुर आफ्ना पिता-पुर्खाहरूसित सुतिजानुहुने छ तब म र मेरो छोरो सोलोमनलाई अपराधीजस्तै ठानिने छ ।”
22 ೨೨ ಆಕೆಯು ಹೀಗೆ ಅರಸನ ಸಂಗಡ ಮಾತನಾಡುವಷ್ಟರಲ್ಲಿ ಪ್ರವಾದಿಯಾದ ನಾತಾನನು ಬಂದನು.
उनी राजासित बोलिरहँदा नातान अगमवक्ता भित्र आए ।
23 ೨೩ ಸೇವಕರು ನಾತಾನನು ಬಂದಿರುವ ಸಂಗತಿಯನ್ನು ಅರಸನಿಗೆ ತಿಳಿಸಿದರು. ಪ್ರವಾದಿಯಾದ ನಾತಾನನು ಅರಸನ ಮುಂದೆ ಹೋಗಿ ಸಾಷ್ಟಾಂಗನಮಸ್ಕಾರಮಾಡಿದನು.
सेवकहरूले राजालाई भने, “नातान अगवमक्ता आएका छन् ।” तिनी भित्र प्रवेश गरेपछि तिनले भुइँसम्मे निहुरेर राजालाई दण्डवत् गरे ।
24 ೨೪ ನಾತಾನನು, “ನನ್ನ ಒಡೆಯನೂ, ಅರಸನೂ ಆದ ನೀನು ಅದೋನೀಯನಿಗೆ ಅರಸನಾಗುವುದಕ್ಕೆ ನಿನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದಕ್ಕೂ ಅಪ್ಪಣೆಕೊಟ್ಟಿರುವಂತೆ ಕಾಣುತ್ತದೆ.
नातानले भने, “हे मेरा मालिक राजा, “के हजुरपछि अदोनियाह राजा हुने छन् र तिनी नै हजुरको सिंहासनमा बस्ने छन् भनी हजुरले भन्नुभएको छ र?’
25 ೨೫ ಅವನು ಗಟ್ಟಾ ಇಳಿದು ಹೋಗಿ ಹೋರಿ, ಕುರಿ ಮುಂತಾದ ಹಲವು ಕೊಬ್ಬಿದ ಪಶುಗಳನ್ನು ಯಜ್ಞಮಾಡಿಸಿ, ಎಲ್ಲಾ ರಾಜಪುತ್ರರನ್ನೂ, ಸೇನಾಧಿಪತಿಗಳನ್ನೂ, ಯಾಜಕನಾದ ಎಬ್ಯಾತಾರನನ್ನೂ ಔತಣಕ್ಕೆ ಕರೆದಿದ್ದಾನೆ. ಅವರು ಅವನ ಪಂಕ್ತಿಯಲ್ಲಿ ಅನ್ನಪಾನಗಳನ್ನು ತೆಗೆದುಕೊಂಡು, ‘ಅರಸನಾದ ಅದೋನೀಯನು ಚಿರಂಜೀವಿಯಾಗಿರಲಿ’ ಎಂದು ಕೂಗುತ್ತಿದ್ದಾರೆ.
किनकि तिनी आज तल गएका छन्, र तिनले ठुलो सङ्ख्यामा गोरुहरू, पोसिएका बाछाहरू र भेडाहरू बलिदान चढाएका छन्, अनि तिनले राजाका सबै छोरा, सेनापतिहरू र पुजारी अबियाथारलाई निमन्त्रणा दिएका छन् । तिनीहरू तिनकै सामु खाँदै र पिउँदै यसो भन्दै छन्, ‘राजा अदोनियाह दीर्घायु होऊन्!’
26 ೨೬ ಆದರೆ ಅವನು ನಿನ್ನ ಸೇವಕನಾದ ನನ್ನನ್ನೂ, ಯಾಜಕನಾದ ಚಾದೋಕ್, ಯೆಹೋಯಾದಾವನ ಮಗನಾದ ಬೆನಾಯ ಎಂಬುವರನ್ನೂ ನಿನ್ನ ಮಗನೂ, ಸೇವಕನೂ ಸೊಲೊಮೋನನನ್ನೂ ಔತಣಕ್ಕೆ ಕರೆಯಲಿಲ್ಲ.
तर तिनले तपाईंका दास मलाई, पुजारी सादोक, यहोयादाका छोरा बनायाह र हजुरको दास सोलोमनलाई निमन्त्रणा दिएका छैनन् ।
27 ೨೭ ಈ ಕಾರ್ಯವು ನನ್ನ ಒಡೆಯನೂ ಅರಸನೂ ಆದ ನಿನ್ನಿಂದಲೇ ನಡೆದಿರುವ ಪಕ್ಷದಲ್ಲಿ ನಿನ್ನ ತರುವಾಯ ಸಿಂಹಾಸನದ ಮೇಲೆ ಕುಳಿತುಕೊಳ್ಳತಕ್ಕವರು ಯಾರು ಎಂಬುವುದನ್ನು ನಿನ್ನ ಸೇವಕನಾದ ನನಗೆ ತಿಳಿಸಬಾರದಾಗಿತ್ತೇ” ಎಂದು ಹೇಳಿದನು.
हे मेरा मालिक राजा, के हजुरपछि हजुरको सिंहासनमा को बस्ने भनेर हजुरले हामी हजुरका दासहरूलाई जानकारी नै नदिई यसो गर्नुभएको हो र?”
28 ೨೮ ಅರಸನಾದ ದಾವೀದನು ಬತ್ಷೆಬೆಯನ್ನು ಕರೆಯಬೇಕೆಂದು ಆಜ್ಞಾಪಿಸಿದನು. ಆಕೆಯು ಬಂದು ಅರಸನ ಮುಂದೆ ನಿಂತಳು.
तब राजा दाऊदले जवाफ दिए, “बतशेबालाई फेरि मकहाँ बोलाऊ ।” उनी राजाको उपस्थितिमा आएर राजाको सामु खडा भइन् ।
29 ೨೯ ಅರಸನು ಆಕೆಗೆ, “ನನ್ನ ಪ್ರಾಣವನ್ನು ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸಿ ಕಾಪಾಡಿದ ಯೆಹೋವನಾಣೆ,
राजाले शपथ खाएर भने, “मेरा सबै सङ्कष्टमा मलाई छुटकारा दिनुहुने परमप्रभुको नाउँमा शपथ खाएर म भन्दछु,
30 ೩೦ ನನ್ನ ತರುವಾಯ ನಿನ್ನ ಮಗನಾದ ಸೊಲೊಮೋನನು ಅರಸನಾದ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳಬೇಕೆಂದು ನಾನು ನಿನಗೆ ಇಸ್ರಾಯೇಲ್ ದೇವರಾದ ಯೆಹೋವನ ಹೆಸರಿನಲ್ಲಿ ಪ್ರಮಾಣಮಾಡಿದ್ದನ್ನು ಈಹೊತ್ತೇ ನೆರವೇರಿಸುವೆನು” ಎಂದನು.
कि इस्राएलका परमेश्वर परमप्रभुको नाउँमा मैले यसो भनी शपथ खाएको थिएँ, “मपछि तिम्रो छोरा सोलोमनले शासन गर्ने छ र त्यो नै मेरो सिंहासनमा बस्ने छ ।' आज म यो पुरा गर्ने छु ।”
31 ೩೧ ಆಗ ಬತ್ಷೆಬೆಯು ಅರಸನಿಗೆ ಸಾಷ್ಟಾಂಗನಮಸ್ಕಾರ ಮಾಡಿ, “ನನ್ನ ಒಡೆಯನೂ ಅರಸನೂ ಆದ ದಾವೀದನು ಸದಾಕಾಲವೂ ಬಾಳಲಿ” ಎಂದಳು.
तब बतशेबाले भुइँमा शिर झुकाई राजाको सामु घुँडा टेकेर भनिन्, “मेरा मालिक राजा दाऊद सदासर्वदा दीर्घायु होऊन्!”
32 ೩೨ ಅನಂತರ ಅರಸನಾದ ದಾವೀದನು ತನ್ನ ಸೇವಕರಿಗೆ, “ಯಾಜಕನಾದ ಚಾದೋಕ್, ಪ್ರವಾದಿಯಾದ ನಾತಾನ, ಯೆಹೋಯಾದಾವನ ಮಗನಾದ ಬೆನಾಯ ಎಂಬುವರನ್ನು ಕರೆಯಿರಿ” ಎಂದು ಆಜ್ಞಾಪಿಸಿದನು. ಅವರು ಅರಸನ ಸನ್ನಿಧಿಗೆ ಬಂದರು.
राजा दाऊदले भने, “पुजारी सादोक, नातान अगमवक्ता र यहोयादाका छोरा बनायाहलाई मकहाँ बोलाएर ल्याऊ ।” त्यसैले तिनीहरू राजाको सामु हाजिर भए ।
33 ೩೩ ಅರಸನು ಅವರಿಗೆ, “ನೀವು ನನ್ನ ಸೇವಕರನ್ನು ಕರೆದುಕೊಂಡು ನನ್ನ ಮಗನಾದ ಸೊಲೊಮೋನನನ್ನು ನನ್ನ ಹೇಸರಗತ್ತೆಯ ಮೇಲೆ ಕುಳ್ಳಿರಿಸಿಕೊಂಡು ಗೀಹೋನ್ ಬುಗ್ಗೆಗೆ ಹೋಗಿರಿ.
राजाले तिनीहरूलाई भने, “तिमीहरूका मालिकका सेवकहरूलाई तिमीहरूसँगै लैजाओ, र मेरो पछि सोलोमनलाई राजाको खच्चरमा सवारा गराएर गीहोनसम्म सँगसँगै लैजाओ ।
34 ೩೪ ಅಲ್ಲಿ ಯಾಜಕನಾದ ಚಾದೋಕನೂ ಮತ್ತು ಪ್ರವಾದಿಯಾದ ನಾತಾನನೂ ಅವನನ್ನು ಇಸ್ರಾಯೇಲರ ಅರಸನನ್ನಾಗಿ ಅಭಿಷೇಕಿಸಲಿ. ಅನಂತರ ಕೊಂಬನ್ನೂದಿರಿ. ಎಲ್ಲರೂ, ‘ಅರಸನಾದ ಸೊಲೊಮೋನನು ಚಿರಂಜೀವಿಯಾಗಿರಲಿ’ ಎಂದು ಜಯಘೋಷ ಮಾಡಲಿ.
पुजारी सादोक र नातान अगमवक्ताले तिनलाई इस्राएलमाथि राजा अभिषेक गरून्, अनि तुरही फुकी यसो भनून्, ‘राजा सोलोमन दीर्घायु होऊन्!’
35 ೩೫ ಆಮೇಲೆ ನೀವು ಅವನ ಹಿಂದೆ ಬನ್ನಿರಿ. ಅವನು ಅರಮನೆಯನ್ನು ಪ್ರವೇಶಿಸಿ ನನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ನನಗೆ ಬದಲಾಗಿ ಆಳಬೇಕು. ನಾನು ಇಸ್ರಾಯೇಲರ ಮತ್ತು ಯೆಹೂದ್ಯರನ್ನು ಆಳಲು ಅವನನ್ನೇ ಪ್ರಭುವನ್ನಾಗಿ ನೇಮಿಸಿದ್ದೇನೆ” ಎಂದನು.
त्यसपछि तिमीहरू तिनको पछिपछि आओ र तिनी आएर मेरो सिंहासनमा बस्ने छन् । किनकि तिनी मेरो ठाउँमा राजा हुने छन् । मैले तिनलाई इस्राएल र यहूदामाथि शासक नियुक्त गरेको छु ।”
36 ೩೬ ಯೆಹೋಯಾದಾವನ ಮಗನಾದ ಬೆನಾಯನು ಅರಸನಿಗೆ, “ಹಾಗೆಯೇ ಆಗಲಿ. ನನ್ನ ಒಡೆಯನಾದ ಅರಸನ ದೇವರಾದ ಯೆಹೋವನು ಅದನ್ನು ಸ್ಥಿರಪಡಿಸಲಿ.
यहोयादाका छोरा बनायाहले राजालाई जवाफ दिए, “यस्तै होस्! मेरा मालिक राजाका परमेश्वर परमप्रभुले यसको पुष्टि गरून् ।
37 ೩೭ ಆತನು ನನ್ನ ಒಡೆಯನಾದ ಅರಸನ ಸಂಗಡ ಇದ್ದ ಪ್ರಕಾರ ಸೊಲೊಮೋನನ ಸಂಗಡಲೂ ಇದ್ದು ರಾಜ್ಯವನ್ನು ನನ್ನ ಒಡೆಯನೂ, ಅರಸನೂ ಆದ ನಿನ್ನ ಕಾಲದಲ್ಲಿದ್ದದಕ್ಕಿಂತ ಹೆಚ್ಚಾಗಿ ಅಭಿವೃದ್ಧಿಮಾಡಲಿ” ಎಂದು ನುಡಿದನು.
जसरी परमप्रभु मेरा मालिक राजासित हुनुभएको छ, त्यसै गरी सोलोमनसित हुनुभएको होस्, र उहाँले मेरा मालिक राजा दाऊदको सिंहासनभन्दा सोलोमनको सिंहासन उच्च पार्नुभएको होस् ।”
38 ೩೮ ಆಗ ಯಾಜಕನಾದ ಚಾದೋಕ್, ಪ್ರವಾದಿಯಾದ ನಾತಾನ್, ಯೆಹೋಯಾದಾವನ ಮಗನಾದ ಬೆನಾಯ ಎಂಬುವರು ಕೆರೇತ್ಯ ಮತ್ತು ಪೆಲೇತ್ಯ ಎಂಬ ಕಾವಲುದಂಡುಗಳನ್ನು ತೆಗೆದುಕೊಂಡು ಸೊಲೊಮೋನನನ್ನು ಅರಸನಾದ ದಾವೀದನ ಹೇಸರಗತ್ತೆಯ ಮೇಲೆ ಕುಳ್ಳಿರಿಸಿ, ಗೀಹೋನಿಗೆ ಕರೆದುಕೊಂಡು ಹೋದರು.
त्यसैले, पुजारी सादोक, नातान अगमवक्ता, यहोयादाका छोरा बनायाह र करेतीहरूसाथै पेलेथीहरू तल झरे अनि सोलोमनलाई राजा दाऊदको खच्चरमा सवार गराएर गीहोनमा ल्याए ।
39 ೩೯ ಯಾಜಕನಾದ ಚಾದೋಕನು ದೇವದರ್ಶನದ ಗುಡಾರದಲ್ಲಿ ಎಣ್ಣೆಯ ಕೊಂಬನ್ನು ತೆಗೆದುಕೊಂಡು ಸೊಲೊಮೋನನನ್ನು ಅಭಿಷೇಕಿಸಿದನು. ಕೂಡಲೇ ಕೊಂಬನ್ನೂದಿ ಎಲ್ಲಾ ಜನರು “ಅರಸನಾದ ಸೊಲೊಮೋನನು ಚಿರಂಜೀವಿಯಾಗಿರಲಿ” ಎಂದು ಆರ್ಭಟಿಸಿದರು.
पुजारी सादोकले पालबाट तेल राख्ने सिङ लिई सोलोमनलाई तेलले अभिषेक गरे । त्यसपछि तिनीहरूले तुरही फुके, अनि सबै मानिसले भने, “राजा सोलोमन दीर्घायु होऊन्!”
40 ೪೦ ತರುವಾಯ ಅವರೆಲ್ಲರೂ ಅವನನ್ನು ಹಿಂಬಾಲಿಸಿ ಕೊಳಲೂದುತ್ತಾ, ಬಹುಸಂತೋಷದಿಂದ ಜಯಘೋಷಮಾಡುತ್ತಾ ಹಿಂತಿರುಗಿ ಬಂದರು. ಅವರ ಕೂಗಿನಿಂದ ಭೂಮಿಯು ನಡುಗಿತೋ ಎಂಬಂತೆ ಆಯಿತು.
तब सबै मानिस तिनको पछिपछि लागे, अनि मानिसहरूले बाँसुरी बजाउँदै बडो आनन्द मनाए । तिनीहरूको हल्लाले जमिनै थर्क्यो ।
41 ೪೧ ಅದೋನೀಯನು ಅವನ ಸಂಗಡ ಇದ್ದ ಅತಿಥಿಗಳೂ ಭೋಜನವನ್ನು ಮುಗಿಸುವಷ್ಟರಲ್ಲೇ ಅವರಿಗೆ ಈ ಕೂಗು ಕೇಳಿಸಿತು. ಯೋವಾಬನು ಕೊಂಬಿನ ಧ್ವನಿಯನ್ನು ಕೇಳಿದಾಗ, “ಪಟ್ಟಣದಲ್ಲಿ ಇಂಥ ಗದ್ದಲವೇಕೆ?” ಎಂದು ವಿಚಾರಿಸಿದನು.
अदोनियाह र तिनीसित भएका सबै पाहुनाले खाइसक्ने बित्तिकै यो खबर सुने । योआबले तुरहीको आवाज सुनेपछि तिनले भने, “सहरमा किन हल्ला हुँदै छ?”
42 ೪೨ ಆಗ ಯಾಜಕನಾದ ಎಬ್ಯಾತಾರನ ಮಗನಾದ ಯೋನಾತಾನನು ಅಲ್ಲಿಗೆ ಬಂದನು. ಅದೋನೀಯನು ಅವನಿಗೆ, “ಬಾ ನೀನು ಯೋಗ್ಯ ಪುರುಷನೂ, ಶುಭವರ್ತಮಾನವನ್ನು ತರುವವನೂ ಆಗಿರುತ್ತೀ” ಎಂದನು.
तिनी बोलिरहँदा पुजारी अबियाथार का छोरा जोनाथन आइपुगे । अदोनियाहले भने, “भित्र आऊ, किनकि तिमी योग्य मानिस हौ र तिमीले शुभ खबर ल्याउँछौ ।”
43 ೪೩ ಯೋನಾತಾನನು ಅವನಿಗೆ, “ಶುಭವಾರ್ತೆ ಎಲ್ಲಿ? ನಮ್ಮೊಡೆಯನೂ, ಅರಸನೂ ಆದ ದಾವೀದನು ಸೊಲೊಮೋನನನ್ನು ಅರಸನನ್ನಾಗಿ ಮಾಡಿದ್ದಾನೆ.
जोनाथनले अदोनियाहलाई जवाफ दिए, “हाम्रा मालिक राजा दाऊदले सोलोमनलाई राजा बनाउनुभएको छ,
44 ೪೪ ಅರಸನು ಯಾಜಕನಾದ ಚಾದೋಕ್, ಪ್ರವಾದಿಯಾದ ನಾತಾನ್ ಯೆಹೋಯಾದಾವನ ಮಗನಾದ ಬೆನಾಯ ಎಂಬುವರನ್ನೂ, ಕೆರೇತ್ಯ ಮತ್ತು ಪೆಲೇತ್ಯರನ್ನೂ ಅವನ ಜೊತೆಯಲ್ಲಿ ಕಳುಹಿಸಿದ್ದಾನೆ. ಅವರು ಅವನನ್ನು ಅರಸನ ಹೇಸರಗತ್ತೆಯ ಮೇಲೆ ಕುಳ್ಳಿರಿಸಿದ್ದಾರೆ.
र राजाले तिनीसितै पुजारी सादोक, नातान अगमवक्ता, यहोयादाका छोरा बनायाह र करेतीहरूसाथै पेलेथीहरूलाई पठाउनुभएको छ । तिनीहरूले सोलोमनलाई राजाको खच्चरमा सवार गराएका छन् ।
45 ೪೫ ಯಾಜಕನಾದ ಚಾದೋಕನೂ, ಪ್ರವಾದಿಯಾದ ನಾತಾನನೂ ಗೀಹೋನಿನ ಬಳಿಯಲ್ಲಿ ಅವನಿಗೆ ರಾಜ್ಯಾಭಿಷೇಕ ಮಾಡಿದರು. ಅಲ್ಲಿಂದ ಅವರು ಮಹಾ ಸಂತೋಷದಿಂದ ಜಯಘೋಷ ಮಾಡುತ್ತಾ ಪಟ್ಟಣಕ್ಕೆ ಬಂದಿದ್ದಾರೆ. ಇದರಿಂದಲೇ ಪಟ್ಟಣದಲ್ಲಿ ಗದ್ದಲವುಂಟಾಗಿದೆ. ನೀವು ಕೇಳಿದ ಶಬ್ದವು ಇದೇ.
पुजारी सादोक र नातान अगमवक्ताले गीहोनमा सोलोमनलाई राजा अभिषेक गरेका छन्, अनि तिनीहरू त्यहाँबाट रमाउँदै आएका छन् । सहरमा त्यसैको हल्ला हो । तपाईंले सुन्नुभएको आवाज त्यही नै हो ।
46 ೪೬ ಇದಲ್ಲದೆ ಸೊಲೊಮೋನನು ರಾಜಸಿಂಹಾಸನದ ಮೇಲೆ ಕುಳಿತುಕೊಂಡಿದ್ದಾನೆ.
साथै, सोलोमन राज्यको सिंहासनमा बसिरहेका छन् ।
47 ೪೭ ಅರಸನಾದ ದಾವೀದನ ಸೇವಕರು ನಮ್ಮ ಒಡೆಯನೂ, ಅರಸನೂ ಆದ ದಾವೀದನ ಮುಂದೆ ಬಂದು, ‘ನಿನ್ನ ದೇವರು ನಿನ್ನ ಹೆಸರಿಗಿಂತಲೂ ಸೊಲೊಮೋನನ ಹೆಸರನ್ನು ಪ್ರಸಿದ್ಧಿಗೆ ತರಲಿ. ರಾಜ್ಯವನ್ನು ನಿನ್ನ ಕಾಲದಲ್ಲಿ ಇದ್ದದ್ದಕ್ಕಿಂತ ಅವನ ಕಾಲದಲ್ಲಿ ಹೆಚ್ಚು ಬಲಪಡಿಸಲಿ’ ಎಂದು ಅವನನ್ನು ಹರಿಸಿದ್ದಾರೆ.
यसबाहेक, राजाका सेवकहरू हाम्रा मालिक राजा दाऊदलाई यसो भन्दै आशिष् दिन आए, 'हजुरका परमेश्वरले सोलोमनको नाउँ हजुरको भन्दा उत्तम बनाऊन् र हजुरको भन्दा तिनको सिंहासन महान् बनाऊन् ।' त्यसपछि राजाले पलङ्गमा नै दण्डवत् गरे ।
48 ೪೮ ಅರಸನು ತನ್ನ ಹಾಸಿಗೆಯ ಮೇಲೆ ಬಾಗಿಕೊಂಡು, ‘ನಾನು ಕಣ್ಣಾರೆ ಕಾಣುವಂತೆ ಇಂದು ನನ್ನ ಸಿಂಹಾಸನಕ್ಕೆ ಒಬ್ಬ ಉತ್ತರಾಧಿಕಾರಿಯನ್ನು ದಯಪಾಲಿಸಿದ ಇಸ್ರಾಯೇಲರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ’ ಎಂದು ಹೇಳಿದ್ದಾನೆ” ಅಂದರು.
राजाले यसो पनि भने, 'इस्राएलका परमेश्वर परमप्रभु धन्यका होऊन् जसले आजको दिन मेरो सिंहासनमा एक जना व्यक्तिलाई राख्नुभएको छ जुन मेरै आँखाले देखेका छन्' ।”
49 ೪೯ ಆಗ ಅದೋನೀಯನಿಂದ ಔತಣಕ್ಕೆ ಕರೆಯಲ್ಪಟ್ಟವರೆಲ್ಲರೂ ಭಯಪಟ್ಟು ತಮ್ಮ ತಮ್ಮ ಮನೆಗಳಿಗೆ ಹೊರಟುಹೋದರು.
त्यसपछि अदोनियाहका सबै पाहुना अत्यन्तै डराए । तिनीहरू उठेर आ-आफ्नो बाटो लागे ।
50 ೫೦ ಅದೋನೀಯನು ಸೊಲೊಮೋನನಿಗೆ ಹೆದರಿ ಹೊರಟುಹೋಗಿ ಯಜ್ಞವೇದಿಯ ಕೊಂಬುಗಳನ್ನು ಹಿಡಿದನು.
अदोनियाह सोलोमनदेखि डराएर उठे अनि गएर वेदीका सिङहरू समाते ।
51 ೫೧ ದೂತರು ಬಂದು ಸೊಲೊಮೋನನಿಗೆ, “ಅದೋನೀಯನು ನಿನಗೆ ಹೆದರಿ ಯಜ್ಞವೇದಿಯ ಕೊಂಬುಗಳನ್ನು ಹಿಡಿದು, ‘ಅರಸನಾದ ಸೊಲೊಮೋನನು ನನ್ನನ್ನು ಕತ್ತಿಯಿಂದ ಸಂಹರಿಸುವುದಿಲ್ಲವೆಂಬುದಾಗಿ ಈ ಹೊತ್ತು ನನಗೆ ಪ್ರಮಾಣಮಾಡಬೇಕೆಂದು ಬೇಡಿಕೊಳ್ಳುತ್ತೇನೆ’” ಎಂಬುದಾಗಿ ತಿಳಿಸಿದನು.
त्यसपछि सोलोमनलाई यसो भनियो, “हेर्नुहोस्, अदोनियाह राजा सोलोमनदेखि डराएका छन्, किनकि तिनले यसो भन्दै वेदीका सिङहरू समातेका छन्, ‘राजा सोलोमनले आफ्ना दासलाई तरवारले नमारून् भनी उहाँले पहिले मसित शपथ खानुभएको होस्' ।”
52 ೫೨ ಅವನು, “ಅದೋನೀಯನು ಯೋಗ್ಯತೆಯುಳ್ಳವನಾಗಿ ನಡೆಯುವುದಾದರೆ ಅವನ ಕೂದಲುಗಳಲ್ಲಿ ಒಂದನ್ನೂ ನೆಲಕ್ಕೆ ಬೀಳಗೊಡಿಸುವುದಿಲ್ಲ. ಆದರೆ ಅವನಲ್ಲಿ ಕೆಟ್ಟತನವು ಕಂಡುಬರುವುದಾದರೆ ಅವನು ಸಾಯುವನು” ಎಂದು ಹೇಳಿ ಆಳುಗಳನ್ನು ಕಳುಹಿಸಿ ಅವನನ್ನು ಯಜ್ಞವೇದಿಯ ಬಳಿಯಿಂದ ಕರೆಯಿಸಿದನು.
सोलोमनले भने, “तिनले आफैलाई योग्य मानिस साबित गरे भने तिनको इच्छाविना एउटा रौँ पनि भुइँमा झर्ने छैन, तर तिनमा दुष्टता पाइयो भने तिनी मर्ने छन् ।”
53 ೫೩ ಅವನು ಬಂದಾಗ ಅರಸನಾದ ಸೊಲೊಮೋನನಿಗೆ ಸಾಷ್ಟಾಂಗನಮಸ್ಕಾರ ಮಾಡಿದನು. ಸೊಲೊಮೋನನು ಅವನಿಗೆ ಅವನ ಮನೆಗೆ ಹೋಗಲು ಅಪ್ಪಣೆಕೊಟ್ಟನು.
त्यसैले राजा सोलोमनले मानिसहरू पठाए जसले अदोनियाहलाई वेदीबाट लिएर आए । तिनी आएर राजा सोलोमनलाई दण्डवत् गरे, र सोलोमनले तिनलाई भने, “तिम्रो घरमा जाऊ ।”