< ಯೋಹಾನನು ಬರೆದ ಮೊದಲನೆಯ ಪತ್ರಿಕೆ 3 >

1 ಇಗೋ, ನಾವು ದೇವರ ಮಕ್ಕಳೆಂದು ಕರೆಯಲ್ಪಡುವುದರಲ್ಲಿ ತಂದೆಯು ಎಂಥಾ ಪ್ರೀತಿಯನ್ನು ನಮ್ಮ ಮೇಲೆ ಇಟ್ಟಿದ್ದಾನಲ್ಲಾ! ನಾವು ಆತನ ಮಕ್ಕಳಾಗಿದ್ದೇವೆ. ಲೋಕವು ಆತನನ್ನು ಅರ್ಥಮಾಡಿಕೊಳ್ಳದೆ ಇರುವುದರಿಂದ ನಮ್ಮನ್ನೂ ಅರ್ಥಮಾಡಿಕೊಳ್ಳುವುದಿಲ್ಲ.
ಪಶ್ಯತ ವಯಮ್ ಈಶ್ವರಸ್ಯ ಸನ್ತಾನಾ ಇತಿ ನಾಮ್ನಾಖ್ಯಾಮಹೇ, ಏತೇನ ಪಿತಾಸ್ಮಭ್ಯಂ ಕೀದೃಕ್ ಮಹಾಪ್ರೇಮ ಪ್ರದತ್ತವಾನ್, ಕಿನ್ತು ಸಂಸಾರಸ್ತಂ ನಾಜಾನಾತ್ ತತ್ಕಾರಣಾದಸ್ಮಾನ್ ಅಪಿ ನ ಜಾನಾತಿ|
2 ಪ್ರಿಯರೇ, ನಾವು ಈಗ ದೇವರ ಮಕ್ಕಳಾಗಿದ್ದೇವೆ. ಮುಂದೆ ನಾವು ಎಂಥವರಾಗಿರುತ್ತೆವೋ ಎಂಬುದು ಇನ್ನೂ ತಿಳಿದಿಲ್ಲ. ಆದರೆ ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಾವು ಆತನ ಹಾಗಿರುವೆವೆಂದು ಬಲ್ಲೆವು. ಏಕೆಂದರೆ ಆತನಿರುವ ಪ್ರಕಾರವೇ ಆತನನ್ನು ನೋಡುವೆವು.
ಹೇ ಪ್ರಿಯತಮಾಃ, ಇದಾನೀಂ ವಯಮ್ ಈಶ್ವರಸ್ಯ ಸನ್ತಾನಾ ಆಸ್ಮಹೇ ಪಶ್ಚಾತ್ ಕಿಂ ಭವಿಷ್ಯಾಮಸ್ತದ್ ಅದ್ಯಾಪ್ಯಪ್ರಕಾಶಿತಂ ಕಿನ್ತು ಪ್ರಕಾಶಂ ಗತೇ ವಯಂ ತಸ್ಯ ಸದೃಶಾ ಭವಿಷ್ಯಾಮಿ ಇತಿ ಜಾನೀಮಃ, ಯತಃ ಸ ಯಾದೃಶೋ ಽಸ್ತಿ ತಾದೃಶೋ ಽಸ್ಮಾಭಿರ್ದರ್ಶಿಷ್ಯತೇ|
3 ಆತನ ಮೇಲೆ ಈ ನಿರೀಕ್ಷೆಯನ್ನು ಇಟ್ಟಿರುವ ಪ್ರತಿಯೊಬ್ಬನು ಆತನು ಶುದ್ಧನಾಗಿರುವಂತೆಯೇ ತನ್ನನ್ನು ತಾನು ಶುದ್ಧಿಮಾಡಿಕೊಳ್ಳುತ್ತಾನೆ.
ತಸ್ಮಿನ್ ಏಷಾ ಪ್ರತ್ಯಾಶಾ ಯಸ್ಯ ಕಸ್ಯಚಿದ್ ಭವತಿ ಸ ಸ್ವಂ ತಥಾ ಪವಿತ್ರಂ ಕರೋತಿ ಯಥಾ ಸ ಪವಿತ್ರೋ ಽಸ್ತಿ|
4 ಪಾಪಮಾಡುವ ಪ್ರತಿಯೊಬ್ಬನೂ ಅಧರ್ಮವನ್ನು ಮಾಡುವವನಾಗಿದ್ದಾನೆ; ಪಾಪವು ಅಧರ್ಮವೇ.
ಯಃ ಕಶ್ಚಿತ್ ಪಾಪಮ್ ಆಚರತಿ ಸ ವ್ಯವಸ್ಥಾಲಙ್ಘನಂ ಕರೋತಿ ಯತಃ ಪಾಪಮೇವ ವ್ಯವಸ್ಥಾಲಙ್ಘನಂ|
5 ಪಾಪಗಳನ್ನು ನಿವಾರಣೆ ಮಾಡುವುದಕ್ಕಾಗಿ ಕ್ರಿಸ್ತನು ಪ್ರತ್ಯಕ್ಷನಾದನೆಂಬುದು ಮತ್ತು ಆತನಲ್ಲಿ ಪಾಪವಿಲ್ಲವೆಂಬುದು ನಿಮಗೆ ಗೊತ್ತು.
ಅಪರಂ ಸೋ ಽಸ್ಮಾಕಂ ಪಾಪಾನ್ಯಪಹರ್ತ್ತುಂ ಪ್ರಾಕಾಶತೈತದ್ ಯೂಯಂ ಜಾನೀಥ, ಪಾಪಞ್ಚ ತಸ್ಮಿನ್ ನ ವಿದ್ಯತೇ|
6 ಆತನಲ್ಲಿ ನೆಲೆಗೊಂಡಿರುವವನು ಪಾಪವನ್ನುಮಾಡುವುದಿಲ್ಲ; ಪಾಪಮಾಡುವವನು ಆತನನ್ನು ನೋಡಿಲ್ಲ, ತಿಳಿದೂ ಇಲ್ಲ;
ಯಃ ಕಶ್ಚಿತ್ ತಸ್ಮಿನ್ ತಿಷ್ಠತಿ ಸ ಪಾಪಾಚಾರಂ ನ ಕರೋತಿ ಯಃ ಕಶ್ಚಿತ್ ಪಾಪಾಚಾರಂ ಕರೋತಿ ಸ ತಂ ನ ದೃಷ್ಟವಾನ್ ನ ವಾವಗತವಾನ್|
7 ಪ್ರಿಯರಾದ ಮಕ್ಕಳೇ, ಯಾರೂ ನಿಮ್ಮನ್ನು ಮೋಸಗೊಳಿಸದಿರಲಿ. ಕ್ರಿಸ್ತನು ಹೇಗೆ ನೀತಿವಂತನಾಗಿದ್ದನೋ ಹಾಗೆಯೇ ನೀತಿಯನ್ನನುಸರಿಸುವವನು ನೀತಿವಂತನಾಗಿದ್ದಾನೆ.
ಹೇ ಪ್ರಿಯಬಾಲಕಾಃ, ಕಶ್ಚಿದ್ ಯುಷ್ಮಾಕಂ ಭ್ರಮಂ ನ ಜನಯೇತ್, ಯಃ ಕಶ್ಚಿದ್ ಧರ್ಮ್ಮಾಚಾರಂ ಕರೋತಿ ಸ ತಾದೃಗ್ ಧಾರ್ಮ್ಮಿಕೋ ಭವತಿ ಯಾದೃಕ್ ಸ ಧಾಮ್ಮಿಕೋ ಽಸ್ತಿ|
8 ಪಾಪಮಾಡುವವನು ಸೈತಾನನಿಗೆ ಸಂಬಂಧಪಟ್ಟವನಾಗಿದ್ದಾನೆ. ಏಕೆಂದರೆ ಆದಿಯಿಂದಲೂ ಸೈತಾನನು ಪಾಪಮಾಡುವವನಾಗಿದ್ದಾನೆ. ಆದ್ದರಿಂದ ಸೈತಾನನ ಕೆಲಸಗಳನ್ನು ನಾಶಮಾಡುವುದಕ್ಕೋಸ್ಕರ ದೇವಕುಮಾರನು ಪ್ರತ್ಯಕ್ಷನಾದನು.
ಯಃ ಪಾಪಾಚಾರಂ ಕರೋತಿ ಸ ಶಯತಾನಾತ್ ಜಾತೋ ಯತಃ ಶಯತಾನ ಆದಿತಃ ಪಾಪಾಚಾರೀ ಶಯತಾನಸ್ಯ ಕರ್ಮ್ಮಣಾಂ ಲೋಪಾರ್ಥಮೇವೇಶ್ವರಸ್ಯ ಪುತ್ರಃ ಪ್ರಾಕಾಶತ|
9 ದೇವರಿಂದ ಹುಟ್ಟಿದವನು ಪಾಪಮಾಡುವುದಿಲ್ಲ. ಏಕೆಂದರೆ ದೇವರ ಸ್ವಭಾವವು ಅವನಲ್ಲಿ ನೆಲೆಗೊಂಡಿದೆ. ಅವನು ದೇವರಿಂದ ಹುಟ್ಟಿದ ಕಾರಣ ಪಾಪಮಾಡಲಾರನು.
ಯಃ ಕಶ್ಚಿದ್ ಈಶ್ವರಾತ್ ಜಾತಃ ಸ ಪಾಪಾಚಾರಂ ನ ಕರೋತಿ ಯತಸ್ತಸ್ಯ ವೀರ್ಯ್ಯಂ ತಸ್ಮಿನ್ ತಿಷ್ಠತಿ ಪಾಪಾಚಾರಂ ಕರ್ತ್ತುಞ್ಚ ನ ಶಕ್ನೋತಿ ಯತಃ ಸ ಈಶ್ವರಾತ್ ಜಾತಃ|
10 ೧೦ ಆದ್ದರಿಂದ ದೇವರ ಮಕ್ಕಳು ಯಾರೆಂಬುದು ಹಾಗೂ ಸೈತಾನನ ಮಕ್ಕಳು ಯಾರೆಂಬುದು ಇದರಿಂದ ತಿಳಿದುಬರುತ್ತದೆ. ನೀತಿಯನ್ನು ಅನುಸರಿಸದವರೂ ತನ್ನ ಸಹೋದರನನ್ನು ಪ್ರೀತಿಸದವರೂ ದೇವರಿಗೆ ಸಂಬಂಧಪಟ್ಟವರಲ್ಲ.
ಇತ್ಯನೇನೇಶ್ವರಸ್ಯ ಸನ್ತಾನಾಃ ಶಯತಾನಸ್ಯ ಚ ಸನ್ತಾನಾ ವ್ಯಕ್ತಾ ಭವನ್ತಿ| ಯಃ ಕಶ್ಚಿದ್ ಧರ್ಮ್ಮಾಚಾರಂ ನ ಕರೋತಿ ಸ ಈಶ್ವರಾತ್ ಜಾತೋ ನಹಿ ಯಶ್ಚ ಸ್ವಭ್ರಾತರಿ ನ ಪ್ರೀಯತೇ ಸೋ ಽಪೀಶ್ವರಾತ್ ಜಾತೋ ನಹಿ|
11 ೧೧ ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನೀವು ಮೊದಲಿನಿಂದಲೂ ಕೇಳಿದ ಸಂದೇಶವಾಗಿದೆ.
ಯತಸ್ತಸ್ಯ ಯ ಆದೇಶ ಆದಿತೋ ಯುಷ್ಮಾಭಿಃ ಶ್ರುತಃ ಸ ಏಷ ಏವ ಯದ್ ಅಸ್ಮಾಭಿಃ ಪರಸ್ಪರಂ ಪ್ರೇಮ ಕರ್ತ್ತವ್ಯಂ|
12 ೧೨ ಕೆಡುಕುನಾಗಿದ್ದು ತನ್ನ ತಮ್ಮನನ್ನು ಕೊಂದುಹಾಕಿದ ಕಾಯಿನನಂತೆ ನಾವು ಇರಬಾರದು. ಅವನು ಯಾಕೆ ತಮ್ಮನನ್ನು ಕೊಂದು ಹಾಕಿದನು? ತನ್ನ ಕೃತ್ಯಗಳು ಕೆಟ್ಟದ್ದು ಮತ್ತು ತನ್ನ ತಮ್ಮನ ಕೃತ್ಯಗಳು ನೀತಿಯುಳ್ಳವುಗಳೂ ಆಗಿದ್ದುದರಿಂದಲೇ.
ಪಾಪಾತ್ಮತೋ ಜಾತೋ ಯಃ ಕಾಬಿಲ್ ಸ್ವಭ್ರಾತರಂ ಹತವಾನ್ ತತ್ಸದೃಶೈರಸ್ಮಾಭಿ ರ್ನ ಭವಿತವ್ಯಂ| ಸ ಕಸ್ಮಾತ್ ಕಾರಣಾತ್ ತಂ ಹತವಾನ್? ತಸ್ಯ ಕರ್ಮ್ಮಾಣಿ ದುಷ್ಟಾನಿ ತದ್ಭ್ರಾತುಶ್ಚ ಕರ್ಮ್ಮಾಣಿ ಧರ್ಮ್ಮಾಣ್ಯಾಸನ್ ಇತಿ ಕಾರಣಾತ್|
13 ೧೩ ನನ್ನ ಸಹೋದರರೇ, ಲೋಕವು ನಿಮ್ಮನ್ನು ದ್ವೇಷಿಸಿದರೆ ಆಶ್ಚರ್ಯಪಡಬೇಡಿರಿ.
ಹೇ ಮಮ ಭ್ರಾತರಃ, ಸಂಸಾರೋ ಯದಿ ಯುಷ್ಮಾನ್ ದ್ವೇಷ್ಟಿ ತರ್ಹಿ ತದ್ ಆಶ್ಚರ್ಯ್ಯಂ ನ ಮನ್ಯಧ್ವಂ|
14 ೧೪ ನಾವಂತೂ ಕ್ರೈಸ್ತಸಹೋದರರನ್ನು ಪ್ರೀತಿಸುವವರಾಗಿರುವುದರಿಂದ ಮರಣದಿಂದ ಪಾರಾಗಿ ನಿತ್ಯಜೀವದಲ್ಲಿ ಸೇರಿದ್ದೇವೆಂಬುದು ನಮಗೆ ಗೊತ್ತಾಗಿದೆ. ತನ್ನ ಸಹೋದರನನ್ನು ಪ್ರೀತಿಸದೆ ಇರುವವನು ಮರಣದಲ್ಲೇ ಇದ್ದಾನೆ.
ವಯಂ ಮೃತ್ಯುಮ್ ಉತ್ತೀರ್ಯ್ಯ ಜೀವನಂ ಪ್ರಾಪ್ತವನ್ತಸ್ತದ್ ಭ್ರಾತೃಷು ಪ್ರೇಮಕರಣಾತ್ ಜಾನೀಮಃ| ಭ್ರಾತರಿ ಯೋ ನ ಪ್ರೀಯತೇ ಸ ಮೃತ್ಯೌ ತಿಷ್ಠತಿ|
15 ೧೫ ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರನಾಗಿದ್ದಾನೆ. ಮತ್ತು ಯಾವ ಕೊಲೆಗಾರನಲ್ಲಿಯೂ ನಿತ್ಯಜೀವವು ಇರುವುದಿಲ್ಲವೆಂಬುದು ನಿಮಗೆ ಗೊತ್ತಾಗಿದೆ. (aiōnios g166)
ಯಃ ಕಶ್ಚಿತ್ ಸ್ವಭ್ರಾತರಂ ದ್ವೇಷ್ಟಿ ಸಂ ನರಘಾತೀ ಕಿಞ್ಚಾನನ್ತಜೀವನಂ ನರಘಾತಿನಃ ಕಸ್ಯಾಪ್ಯನ್ತರೇ ನಾವತಿಷ್ಠತೇ ತದ್ ಯೂಯಂ ಜಾನೀಥ| (aiōnios g166)
16 ೧೬ ಕ್ರಿಸ್ತನು ನಮಗೋಸ್ಕರ ತನ್ನ ಪ್ರಾಣವನ್ನು ಅರ್ಪಿಸಿದ್ದರಿಂದ ದೇವರ ಪ್ರೀತಿ ಇಂಥದ್ದೆಂದು ನಮಗೆ ತಿಳಿದು ಬಂದಿದೆ. ನಾವು ಸಹ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ.
ಅಸ್ಮಾಕಂ ಕೃತೇ ಸ ಸ್ವಪ್ರಾಣಾಂಸ್ತ್ಯಕ್ತವಾನ್ ಇತ್ಯನೇನ ವಯಂ ಪ್ರೇಮ್ನಸ್ತತ್ತ್ವಮ್ ಅವಗತಾಃ, ಅಪರಂ ಭ್ರಾತೃಣಾಂ ಕೃತೇ ಽಸ್ಮಾಭಿರಪಿ ಪ್ರಾಣಾಸ್ತ್ಯಕ್ತವ್ಯಾಃ|
17 ೧೭ ಆದರೆ ಈ ಲೋಕದ ಸಂಪತ್ತುಳ್ಳ ಯಾರಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿ ಕನಿಕರಪಡದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರಲು ಸಾಧ್ಯವೇ?
ಸಾಂಸಾರಿಕಜೀವಿಕಾಪ್ರಾಪ್ತೋ ಯೋ ಜನಃ ಸ್ವಭ್ರಾತರಂ ದೀನಂ ದೃಷ್ಟ್ವಾ ತಸ್ಮಾತ್ ಸ್ವೀಯದಯಾಂ ರುಣದ್ಧಿ ತಸ್ಯಾನ್ತರ ಈಶ್ವರಸ್ಯ ಪ್ರೇಮ ಕಥಂ ತಿಷ್ಠೇತ್?
18 ೧೮ ನನ್ನ ಪ್ರಿಯ ಮಕ್ಕಳೇ, ನೀವು ಬರೀ ಮಾತಿನಿಂದಾಗಲಿ, ಬಾಯುಪಚಾರದಿಂದಾಗಲಿ, ಪ್ರೀತಿಸುವವರಾಗಿರದೆ ಕ್ರಿಯೆಗಳಿಂದಲೂ ಮತ್ತು ನಿಜ ಪ್ರೀತಿಯಿಂದ ಪ್ರೀತಿಸುವವರಾಗಿರಬೇಕು.
ಹೇ ಮಮ ಪ್ರಿಯಬಾಲಕಾಃ, ವಾಕ್ಯೇನ ಜಿಹ್ವಯಾ ವಾಸ್ಮಾಭಿಃ ಪ್ರೇಮ ನ ಕರ್ತ್ತವ್ಯಂ ಕಿನ್ತು ಕಾರ್ಯ್ಯೇಣ ಸತ್ಯತಯಾ ಚೈವ|
19 ೧೯ ನಾವು ಸತ್ಯಕ್ಕೆ ಸೇರಿದವರೆಂಬುದು ಇದರಿಂದಲೇ ನಮಗೆ ತಿಳಿಯುತ್ತದೆ, ನಮ್ಮ ಹೃದಯವು ದೇವರ ಸಮಕ್ಷಮದಲ್ಲಿ ದೋಷರಹಿತವಾಗಿರುತ್ತದೆ.
ಏತೇನ ವಯಂ ಯತ್ ಸತ್ಯಮತಸಮ್ಬನ್ಧೀಯಾಸ್ತತ್ ಜಾನೀಮಸ್ತಸ್ಯ ಸಾಕ್ಷಾತ್ ಸ್ವಾನ್ತಃಕರಣಾನಿ ಸಾನ್ತ್ವಯಿತುಂ ಶಕ್ಷ್ಯಾಮಶ್ಚ|
20 ೨೦ ಏಕೆಂದರೆ ನಮ್ಮ ಹೃದಯವು ಯಾವ ವಿಷಯದಲ್ಲಾದರು ನಮ್ಮನ್ನು ದೋಷಿಗಳೆಂದು ನಿರ್ಣಯಿಸಿದರೆ, ದೇವರು ನಮ್ಮ ಹೃದಯವನ್ನು ಬಲ್ಲವನಾಗಿರುವುದರಿಂದ ನಮ್ಮ ಹೃದಯವನ್ನು ಆತನಲ್ಲಿ ದೃಢಪಡಿಸಬಹುದು.
ಯತೋ ಽಸ್ಮದನ್ತಃಕರಣಂ ಯದ್ಯಸ್ಮಾನ್ ದೂಷಯತಿ ತರ್ಹ್ಯಸ್ಮದನ್ತಃ ಕರಣಾದ್ ಈಶ್ವರೋ ಮಹಾನ್ ಸರ್ವ್ವಜ್ಞಶ್ಚ|
21 ೨೧ ಪ್ರಿಯರೇ, ನಮ್ಮ ಹೃದಯವು ನಮ್ಮನ್ನು ದೋಷಿಗಳೆಂದು ಖಂಡಿಸಿ ನಡೆದರೆ ದೇವರ ಸನ್ನಿಧಿಯಲ್ಲಿ ನಮಗೆ ಭರವಸೆ ದೊರೆಯುತ್ತದೆ.
ಹೇ ಪ್ರಿಯತಮಾಃ, ಅಸ್ಮದನ್ತಃಕರಣಂ ಯದ್ಯಸ್ಮಾನ್ ನ ದೂಷಯತಿ ತರ್ಹಿ ವಯಮ್ ಈಶ್ವರಸ್ಯ ಸಾಕ್ಷಾತ್ ಪ್ರತಿಭಾನ್ವಿತಾ ಭವಾಮಃ|
22 ೨೨ ಆತನ ಆಜ್ಞೆಗಳನ್ನು ಕೈಕೊಂಡು ಆತನಿಗೆ ಮೆಚ್ಚಿಕೆಯಾಗುವ ಕಾರ್ಯಗಳನ್ನು ಮಾಡುವವರಾದರೆ ನಾವು ಏನು ಬೇಡಿಕೊಂಡರೂ ಆತನಿಂದ ಹೊಂದುವೆವು.
ಯಚ್ಚ ಪ್ರಾರ್ಥಯಾಮಹೇ ತತ್ ತಸ್ಮಾತ್ ಪ್ರಾಪ್ನುಮಃ, ಯತೋ ವಯಂ ತಸ್ಯಾಜ್ಞಾಃ ಪಾಲಯಾಮಸ್ತಸ್ಯ ಸಾಕ್ಷಾತ್ ತುಷ್ಟಿಜನಕಮ್ ಆಚಾರಂ ಕುರ್ಮ್ಮಶ್ಚ|
23 ೨೩ ದೇವರ ಆಜ್ಞೆ ಯಾವುದೆಂದರೆ ನಾವು ಆತನ ಮಗನಾದ ಯೇಸು ಕ್ರಿಸ್ತನನ್ನು ನಂಬಿ ಆತನು ನಮಗೆ ಕೊಟ್ಟಿರುವ ಆಜ್ಞೆಗಳ ಪ್ರಕಾರ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ.
ಅಪರಂ ತಸ್ಯೇಯಮಾಜ್ಞಾ ಯದ್ ವಯಂ ಪುತ್ರಸ್ಯ ಯೀಶುಖ್ರೀಷ್ಟಸ್ಯ ನಾಮ್ನಿ ವಿಶ್ವಸಿಮಸ್ತಸ್ಯಾಜ್ಞಾನುಸಾರೇಣ ಚ ಪರಸ್ಪರಂ ಪ್ರೇಮ ಕುರ್ಮ್ಮಃ|
24 ೨೪ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವವನು ಆತನಲ್ಲಿ ನೆಲೆಗೊಂಡಿರುತ್ತಾನೆ ಮತ್ತು ದೇವರು ಆತನಲ್ಲಿ ನೆಲೆಗೊಂಡಿರುತ್ತಾನೆ. ಆತನು ಅವನಲ್ಲಿ ನೆಲೆಗೊಂಡಿರುತ್ತಾನೆ. ನಮ್ಮಲ್ಲಿ ನೆಲೆಗೊಂಡಿದ್ದಾನೆಂದು ಆತನು ನಮಗೆ ಅನುಗ್ರಹಿಸಿರುವ ಆತ್ಮನಿಂದ ನಾವು ಬಲ್ಲವರಾಗಿದ್ದೇವೆ.
ಯಶ್ಚ ತಸ್ಯಾಜ್ಞಾಃ ಪಾಲಯತಿ ಸ ತಸ್ಮಿನ್ ತಿಷ್ಠತಿ ತಸ್ಮಿನ್ ಸೋಽಪಿ ತಿಷ್ಠತಿ; ಸ ಚಾಸ್ಮಾನ್ ಯಮ್ ಆತ್ಮಾನಂ ದತ್ತವಾನ್ ತಸ್ಮಾತ್ ಸೋ ಽಸ್ಮಾಸು ತಿಷ್ಠತೀತಿ ಜಾನೀಮಃ|

< ಯೋಹಾನನು ಬರೆದ ಮೊದಲನೆಯ ಪತ್ರಿಕೆ 3 >