< ಯೋಹಾನನು ಬರೆದ ಮೊದಲನೆಯ ಪತ್ರಿಕೆ 2 >
1 ೧ ನನ್ನ ಪ್ರಿಯಮಕ್ಕಳೇ, ನೀವು ಪಾಪಮಾಡದಂತೆ ಇರಲು ಇವುಗಳನ್ನು ನಿಮಗೆ ಬರೆಯುತ್ತಿದ್ದೇನೆ. ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ.
Queridos hijos míos, les escribo esto para que no pequen. Pero si alguno peca, tenemos a alguien que nos defiende ante el Padre, a Jesucristo, que es verdaderamente justo.
2 ೨ ಆತನು ನಮ್ಮ ಪಾಪಗಳಿಗಾಗಿ ಪ್ರಾಯಶ್ಚಿತ್ತ ಯಜ್ಞವಾಗಿದ್ದಾನೆ. ನಮ್ಮ ಪಾಪಗಳಿಗೆ ಮಾತ್ರವಲ್ಲದೆ ಸಮಸ್ತ ಲೋಕದ ಪಾಪಗಳಿಗೂ ಪ್ರಾಯಶ್ಚಿತ್ತವಾಗಿದ್ದಾನೆ.
Por él son perdonados nuestros pecados, y no solo los nuestros, sino los de todo el mundo.
3 ೩ ನಾವು ಆತನ ಆಜ್ಞೆಗಳನ್ನು ಅರಿತು ನಡೆಯುವುದರಿಂದಲೇ ಆತನನ್ನು ನಾವು ಬಲ್ಲವರಾಗಿದ್ದೇವೆಂದು ತಿಳಿದುಕೊಳ್ಳುತ್ತೇವೆ.
Podemos estar seguros de que lo conocemos si seguimos sus mandamientos.
4 ೪ ಒಬ್ಬನು, “ನಾನು ಆತನನ್ನು ಬಲ್ಲೆನು” ಎಂದು ಹೇಳಿ ಆತನ ಆಜ್ಞೆಗಳಂತೆ ನಡೆಯದಿದ್ದರೆ ಅವನು ಸುಳ್ಳುಗಾರನಾಗಿದ್ದಾನೆ. ಸತ್ಯವೆಂಬುದು ಅವನಲ್ಲಿ ಇಲ್ಲ.
Todo el que dice: “Yo conozco a Dios”, pero no hace su voluntad, es mentiroso, y no tiene la verdad.
5 ೫ ಯಾರಾದರೂ ಆತನ ವಾಕ್ಯವನ್ನು ಅನುಸರಿಸಿ ನಡೆದರೆ ಅವನಲ್ಲಿ ನಿಜವಾಗಿ ದೇವರ ಮೇಲಣ ಪ್ರೀತಿಯು ಪರಿಪೂರ್ಣವಾಗಿದೆ. ಇಂತಹ ಕಾರ್ಯದಿಂದ ನಾವು ಆತನಲ್ಲಿ ಇದ್ದೇವೆಂಬುದನ್ನು ತಿಳಿದುಕೊಳ್ಳುತ್ತೇವೆ.
Pero los que siguen la palabra de Dios permiten que su amor llene sus corazones por completo. Así es como sabemos que vivimos en él.
6 ೬ ಆತನಲ್ಲಿ ನೆಲೆಗೊಂಡವನಾಗಿದ್ದೇನೆಂದು ಹೇಳುವವನು ಕ್ರಿಸ್ತನು ನಡೆದಂತೆಯೇ ತಾನೂ ನಡೆಯುವುದಕ್ಕೆ ಬದ್ಧನಾಗಿದ್ದಾನೆ.
Todo el que dice vivir en él, debe vivir como Jesús vivió.
7 ೭ ಪ್ರಿಯರೇ, ನಾನು ನಿಮಗೆ ಬರೆಯುವುದು ಹೊಸ ಆಜ್ಞೆಯಲ್ಲ, ಮೊದಲಿನಿಂದಲೂ ನಿಮಗಿದ್ದ ಹಳೆಯ ಆಜ್ಞೆಯಾಗಿದೆ. ಈ ಹಳೆಯ ಆಜ್ಞೆಯು ನೀವು ಕೇಳಿದ ವಾಕ್ಯವೇ.
Amigos, no les escribo para darles un nuevo mandamiento, sino un mandamiento antiguo que ya teníamos desde el principio. Este mandamiento antiguo ya lo han escuchado.
8 ೮ ಆದರೂ ನಾನು ನಿಮಗೆ ಬರೆಯುವುದು ಹೊಸ ಆಜ್ಞೆಯಂತೆಯೇ ಇರುವುದು. ಇದು ಆತನಲ್ಲಿಯೂ ನಿಮ್ಮಲ್ಲಿಯೂ ಸತ್ಯವಾಗಿದೆ. ಏಕೆಂದರೆ ಕತ್ತಲೆಯು ಕಳೆದುಹೋಗುತ್ತದೆ. ನಿಜವಾದ ಬೆಳಕು ಈಗ ಪ್ರಕಾಶಿಸುತ್ತಲಿದೆ.
Pero en cierto sentido les estoy dando un nuevo mandamiento. Su verdad se revela en Jesús y en ustedes, pues viene el fin de la oscuridad y la luz verdadera ya está brillando.
9 ೯ ಬೆಳಕಿನಲ್ಲಿದ್ದೇನೆಂದು ಹೇಳಿಕೊಂಡು ತನ್ನ ಸಹೋದರನನ್ನು ದ್ವೇಷಿಸುವವನು ಈವರೆಗೂ ಕತ್ತಲೆಯಲ್ಲಿದ್ದಾನೆ.
Los que dicen que viven en la luz pero aborrecen a un hermano cristiano todavía tienen tinieblas dentro de sí.
10 ೧೦ ತನ್ನ ಸಹೋದರನನ್ನು ಪ್ರೀತಿಸುವವನು ಬೆಳಕಿನಲ್ಲಿ ನೆಲೆಗೊಂಡಿದ್ದಾನೆ ಮತ್ತು ಪಾಪದಲ್ಲಿ ಎಡವಿಬೀಳುವಂಥದ್ದು ಯಾವುದೂ ಅವನಲ್ಲಿ ಇಲ್ಲ.
Los que aman a sus hermanos cristianos viven en la luz, y no hacen pecar a otros.
11 ೧೧ ಆದರೆ ತನ್ನ ಸಹೋದರನನ್ನು ದ್ವೇಷಿಸುವವನು ಕತ್ತಲೆಯಲ್ಲಿದ್ದಾನೆ ಮತ್ತು ಕತ್ತಲೆಯಲ್ಲಿ ನಡೆಯುತ್ತಿದ್ದಾನೆ. ಕತ್ತಲೆಯು ಅವನ ಕಣ್ಣುಗಳನ್ನು ಕುರುಡುಮಾಡಿರುವುದರಿಂದ ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂದು ಅವನಿಗೆ ತಿಳಿಯದು.
Los que aborrecen a un hermano cristiano están en oscuridad. Tropiezan en la oscuridad, sin saber hacia dónde van porque la oscuridad los ha cegado.
12 ೧೨ ಪ್ರಿಯ ಮಕ್ಕಳೇ, ಕ್ರಿಸ್ತನ ಹೆಸರಿನ ನಿಮಿತ್ತ ನಿಮ್ಮ ಪಾಪಗಳು ಕ್ಷಮಿಸಲ್ಪಟ್ಟಿರುವುದರಿಂದ ನಾನು ನಿಮಗೆ ಬರೆಯುತ್ತಿದ್ದೇನೆ.
Queridos amigos, les escribo a ustedes, hijos, porque sus pecados han sido perdonados por el nombre de Jesús.
13 ೧೩ ತಂದೆಗಳಿರಾ, ಆದಿಯಿಂದಿರುವಾತನನ್ನು ನೀವು ಬಲ್ಲವರಾಗಿರುವುದರಿಂದ ನಾನು ನಿಮಗೆ ಬರೆಯುತ್ತಿದ್ದೇನೆ. ಯೌವನಸ್ಥರೇ, ನೀವು ಕೆಡುಕನನ್ನು ಜಯಿಸಿರುವುದರಿಂದ ನಿಮಗೆ ಬರೆಯುತ್ತಿದ್ದೇನೆ. ಮಕ್ಕಳೇ, ನೀವು ತಂದೆಯನ್ನು ಬಲ್ಲವರಾಗಿರುವುದರಿಂದ ನಿಮಗೆ ಬರೆಯುತ್ತಿದ್ದೇನೆ.
Les escribo a ustedes, padres, porque ustedes lo conocen a él, que ha existido desde el principio. Les escribo a ustedes, jóvenes, porque han vencido el mal.
14 ೧೪ ತಂದೆಗಳಿರಾ, ಆದಿಯಿಂದಿರುವಾತನನ್ನು ನೀವು ಬಲ್ಲವರಾಗಿರುವುದರಿಂದ ನಿಮಗೆ ಬರೆದಿದ್ದೇನೆ. ಯೌವನಸ್ಥರೇ, ನೀವು ಶಕ್ತರಾಗಿರುವುದರಿಂದಲೂ ದೇವರ ವಾಕ್ಯವು ನಿಮ್ಮಲ್ಲಿ ನೆಲೆಗೊಂಡಿರುವುದರಿಂದಲೂ ನೀವು ಕೆಡುಕನನ್ನು ಜಯಿಸಿರುವುದರಿಂದಲೂ ನಾನು ನಿಮಗೆ ಬರೆದಿದ್ದೇನೆ.
Les escribo a ustedes, pequeñitos, porque ustedes conocen al Padre. Les escribo a ustedes, Padres, porque conocen al que ha existido desde el principio. Les escribo a ustedes, jóvenes, porque son fuertes. Porque la palabra de Dios vive en ustedes, y han vencido al maligno.
15 ೧೫ ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಿನ ಪ್ರೀತಿಯು ಅವನಲ್ಲಿಲ್ಲ.
No amen al mundo, ni anhelen las cosas que hay en él. Si aman al mundo, no tendrán el amor del Padre en ustedes.
16 ೧೬ ಲೋಕದಲ್ಲಿರುವ ಶರೀರದಾಶೆ, ಕಣ್ಣಿನಾಶೆ, ಬದುಕುಬಾಳಿನ ಗರ್ವ, ಇವು ತಂದೆಗೆ ಸಂಬಂಧಪಟ್ಟವುಗಳಲ್ಲ. ಲೋಕಕ್ಕೆ ಸಂಬಂಧಪಟ್ಟವುಗಳಾಗಿವೆ.
Porque todas las cosas de este mundo, nuestros deseos pecaminosos, nuestro deseo por todo lo que vemos, nuestra jactancia por lo que hemos logrado en la vida, ninguna de esas cosas viene del Padre, sino del mundo.
17 ೧೭ ಲೋಕವೂ ಅದರ ಆಸೆಯೂ ಗತಿಸಿಹೋಗುತ್ತವೆ. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಸದಾಕಾಲಕ್ಕೂ ಇರುವನು. (aiōn )
El mundo y sus malos deseos acabarán, pero los que hacen la voluntad de Dios vivirán para siempre. (aiōn )
18 ೧೮ ಪ್ರಿಯ ಮಕ್ಕಳೇ, ಇದು ಅಂತ್ಯ ಕಾಲವಾಗಿದೆ. ಕ್ರಿಸ್ತವಿರೋಧಿಯು ಬರುತ್ತಾನೆಂದು ನೀವು ಕೇಳಿದ್ದೀರಿ. ಈಗಾಗಲೇ ಕ್ರಿಸ್ತವಿರೋಧಿಗಳು ಅನೇಕರಿದ್ದಾರೆ. ಆದ್ದರಿಂದ ಇದು ಅಂತ್ಯ ಕಾಲವಾಗಿದೆ ಎಂದು ನಾವು ಬಲ್ಲವರಾಗಿದ್ದೇವೆ.
Queridos amigos, esta es la última hora. Como han escuchado, el anticristo viene. Y ya han venido muchos anticristos. Así es como sabemos que esta es la última hora.
19 ೧೯ ಅವರು ನಮ್ಮಿಂದ ಹೊರಟುಹೋದವರು. ಏಕೆಂದರೆ ಅವರು ನಮ್ಮವರಾಗಿರಲಿಲ್ಲ. ಅವರು ನಮ್ಮವರಾಗಿದ್ದರೆ, ನಮ್ಮ ಜೊತೆಯಲ್ಲೇ ಇರುತ್ತಿದ್ದರು. ಆದರೆ ಅವರು ನಮ್ಮಿಂದ ಹೊರಟುಹೋದುದರಿಂದ ಅವರೆಲ್ಲರೂ ನಮ್ಮವರಲ್ಲವೆಂಬುದು ಸ್ಪಷ್ಟವಾಗಿ ತೋರಿಬಂದಿದೆ.
Ellos se fueron, pero no eran parte de nosotros, porque si así hubiera sido, habrían permanecido aquí. Pero cuando se fueron demostraron que ninguno de ellos hacía parte de nosotros.
20 ೨೦ ಆದರೆ ನೀವು ಪವಿತ್ರನಾಗಿರುವಾತನಿಂದ ಅಭಿಷೇಕವನ್ನು ಹೊಂದಿದವರಾಗಿದ್ದೀರಿ ಎಂಬ ಸತ್ಯವನ್ನೂ ತಿಳಿದವರಾಗಿದ್ದೀರಿ.
Pero ustedes han sido ungidos con la bendición del Espíritu Santo, y todos ustedes saben lo que es verdad.
21 ೨೧ ನೀವು ಸತ್ಯವನ್ನು ತಿಳಿಯದವರಲ್ಲ. ನೀವು ಸತ್ಯವನ್ನು ತಿಳಿದಿರುವುದರಿಂದಲೂ ಯಾವ ಸುಳ್ಳೂ ಸತ್ಯದಿಂದ ಹುಟ್ಟಿ ಬರುವುದಿಲ್ಲವೆಂಬುದನ್ನು ನೀವು ತಿಳಿದವರಾಗಿರುವುದರಿಂದಲೂ ನಾನು ನಿಮಗೆ ಬರೆದೆನು.
No les escribo porque no conozcan la verdad, sino precisamente porque la conocen, y porque no hay engaño en ella.
22 ೨೨ ಸುಳ್ಳುಗಾರನು ಯಾರು? ಯೇಸುವನ್ನು ಕ್ರಿಸ್ತನಲ್ಲ ಎಂದು ಅಲ್ಲಗಳೆಯುವವನು ಸುಳ್ಳುಗಾರನಾಗಿದ್ದಾಯೇ ಹೊರತು ಮತ್ತಾರು ಆಗಿರಲು ಸಾಧ್ಯ? ತಂದೆಯನ್ನೂ ಮಗನನ್ನೂ ಅಲ್ಲಗಳೆಯುವವನು ಕ್ರಿಸ್ತವಿರೋಧಿಯಾಗಿದ್ದಾನೆ.
¿Quién es el mentiroso? Todo aquél que niega que Jesús es el Cristo. El anticristo es todo aquél que niega al Padre y al Hijo.
23 ೨೩ ಯಾರು ದೇವರ ಮಗನನ್ನು ಅಲ್ಲಗಳೆಯುವನೋ ಅವನು ದೇವರಿಗೆ ಸೇರಿದವನಲ್ಲ. ಯಾರು ಮಗನನ್ನು ಒಪ್ಪಿಕೊಳ್ಳುವನೋ ಅವನು ತಂದೆಯಾದ ದೇವರಿಗೆ ಸೇರಿದವನಾಗಿದ್ದಾನೆ.
Todo aquél que niega al Hijo, tampoco tiene al Padre; y todo el que reconoce al Hijo, tiene al Padre también.
24 ೨೪ ನೀವಂತೂ ಯಾವ ಬೋಧನೆಯನ್ನು ಮೊದಲಿನಿಂದ ಕೇಳಿದ್ದೀರೋ ಅದು ನಿಮ್ಮಲ್ಲಿ ನೆಲೆಗೊಂಡಿರಲಿ. ಮೊದಲಿನಿಂದ ನೀವು ಕೇಳಿದ್ದು ನಿಮ್ಮಲ್ಲಿ ನೆಲೆಗೊಂಡಿದ್ದರೆ ನೀವು ಸಹ ಮಗನಲ್ಲಿಯೂ ತಂದೆಯಾದ ದೇವರಲ್ಲಿಯೂ ನೆಲೆಗೊಂಡಿರುತ್ತೀರಿ.
En cuanto a ustedes, asegúrense de que lo que oyeron desde el principio siga vivo en ustedes. Si lo que oyeron desde el principio vive en ustedes, también vivirán en el Hijo y en el Padre.
25 ೨೫ ಆತನು ನಮಗೆ ಮಾಡಿರುವ ವಾಗ್ದಾನವು ಅದೇನೆಂದರೆ ನಿತ್ಯಜೀವವೇ ಆಗಿದೆ. (aiōnios )
La vida eterna. ¡Eso es lo que nos ha prometido! (aiōnios )
26 ೨೬ ನಿಮ್ಮನ್ನು ಸನ್ಮಾರ್ಗದಿಂದ ತಪ್ಪಿಸಿ ತಪ್ಪುದಾರಿಗೆ ಎಳೆಯುವವರ ಕುರಿತಾಗಿ ಇವುಗಳನ್ನು ನಾನು ನಿಮಗೆ ಬರೆದಿದ್ದೇನೆ.
Escribo esto para advertirles contra las cosas que quieren descarriarlos.
27 ೨೭ ಆದರೆ ಆತನಿಂದ ನೀವು ಹೊಂದಿದ ಅಭಿಷೇಕವು ನಿಮ್ಮಲ್ಲಿ ನೆಲೆಗೊಂಡಿರುವುದರಿಂದ ಯಾರೂ ನಿಮಗೆ ಬೋಧನೆ ಮಾಡುವುದು ಅಗತ್ಯವಿಲ್ಲ. ಆತನು ನಿಮಗೆ ಮಾಡಿರುವ ಅಭಿಷೇಕವೇ ನಿಮ್ಮನ್ನು ಎಲ್ಲಾ ವಿಷಯಗಳಲ್ಲಿ ಬೋಧನೆ ಮಾಡುವಂಥದ್ದಾಗಿದೆ ಅದು ಸುಳ್ಳಲ್ಲ ಸತ್ಯವಾಗಿದೆ. ಅದು ನಿಮಗೆ ಬೋಧನೆ ಮಾಡಿದ ಪ್ರಕಾರವೇ ಆತನಲ್ಲಿ ನೆಲೆಗೊಂಡಿರುವಿರಿ.
Pero el ungimiento que recibieron de él por medio del Espíritu vive en ustedes, y no necesitan que nadie los enseñe. El ungimiento del Espíritu les enseña todas las cosas. Esa es la verdad. No es una mentira. Así que vivan en Cristo, como se les ha enseñado.
28 ೨೮ ಪ್ರಿಯ ಮಕ್ಕಳೇ, ಆತನು ಪ್ರತ್ಯಕ್ಷನಾಗುವಾಗ ನಾವು ಆತನ ಆಗಮನದಲ್ಲಿ ಆತನ ಮುಂದೆ ನಿಲ್ಲಲು ನಾಚಿಕೆಪಡದೆ ಧೈರ್ಯದಿಂದಿರುವಂತೆ ಆತನಲ್ಲಿ ನೆಲೆಗೊಂಡಿರೋಣ.
Ahora, mis queridos amigos, sigan viviendo en Cristo, para que cuando aparezca, podamos estar seguros y no tengamos vergüenza delante él en su venida.
29 ೨೯ ಆತನು ನೀತಿವಂತನಾಗಿದ್ದಾನೆಂಬುದು ನಿಮಗೆ ತಿಳಿದಿದ್ದರೆ ನೀತಿಯನ್ನು ಅನುಸರಿಸುವ ಪ್ರತಿಯೊಬ್ಬನು ಆತನಿಂದ ಹುಟ್ಟಿದವನೆಂದು ನೀವು ಬಲ್ಲವರಾಗಿರುತ್ತೀರಿ.
Si ustedes saben que él es bueno y justo, entonces también deben saber que todo el que hace lo justo ha nacido de Dios.