< ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ 8 >

1 ವಿಗ್ರಹಕ್ಕೆ ಅರ್ಪಿಸಿದ ಆಹಾರಪದಾರ್ಥಗಳ ವಿಷಯವನ್ನು ಕುರಿತಾದರೋ. “ನಮ್ಮೆಲ್ಲರಿಗೆ ಜ್ಞಾನವುಂಟೆಂದು” ನಾವು ಬಲ್ಲೆವು. ತಿಳಿವಳಿಕೆಯು ಉಬ್ಬಿಸುತ್ತದೆ, ಆದರೆ ಪ್ರೀತಿಯು ಭಕ್ತಿಯನ್ನು ಬೆಳೆಸುತ್ತದೆ.
dēvaprasādē sarvvēṣām asmākaṁ jñānamāstē tadvayaṁ vidmaḥ| tathāpi jñānaṁ garvvaṁ janayati kintu prēmatō niṣṭhā jāyatē|
2 ಒಬ್ಬನು ತಾನು ಏನಾದರೂ ತಿಳಿದುಕೊಂಡಿದ್ದೇನೆಂದು ಭಾವಿಸುವುದಾದರೆ ಅವನು ತಿಳಿಯಬೇಕಾದ ರೀತಿಯಿಂದ ಇನ್ನೂ ತಿಳಿದುಕೊಂಡಿರುವುದಿಲ್ಲ.
ataḥ kaścana yadi manyatē mama jñānamāsta iti tarhi tēna yādr̥śaṁ jñānaṁ cēṣṭitavyaṁ tādr̥śaṁ kimapi jñānamadyāpi na labdhaṁ|
3 ಆದರೆ ಯಾವನು ದೇವರನ್ನು ಪ್ರೀತಿಸುತ್ತಾನೋ ದೇವರು ಅವನನ್ನು ತಿಳಿದುಕೊಂಡಿದ್ದಾನೆ.
kintu ya īśvarē prīyatē sa īśvarēṇāpi jñāyatē|
4 ಆದ್ದರಿಂದ ವಿಗ್ರಹಗಳಿಗೆ ಅರ್ಪಿಸಿದ ಆಹಾರಪದಾರ್ಥಗಳನ್ನು ತಿನ್ನುವುದರ ವಿಷಯದಲ್ಲಿ, “ಜಗತ್ತಿನಲ್ಲಿ ವಿಗ್ರಹವು ಏನೂ ಅಲ್ಲವೆಂದು” ನಮಗೆ ತಿಳಿದಿದೆ ಮತ್ತು “ಒಬ್ಬ ದೇವರಿದ್ದಾನೆ ಹೊರತು ಬೇರೆ ದೇವರಿಲ್ಲವೆಂದೂ” ಬಲ್ಲೆವು.
dēvatābaliprasādabhakṣaṇē vayamidaṁ vidmō yat jaganmadhyē kō'pi dēvō na vidyatē, ēkaścēśvarō dvitīyō nāstīti|
5 ಆಕಾಶದಲ್ಲಿಯಾಗಲಿ ಭೂಮಿಯ ಮೇಲಾಗಲಿ ದೇವರುಗಳೆನಿಸಿಕೊಳ್ಳುವಂಥವುಗಳು ಅನೇಕವಿದ್ದರೂ, “ದೇವರುಗಳೆಂದೂ ಕರ್ತರೆಂದೂ ಪೂಜಿಸುವಂಥವುಗಳು” ಬಹಳವಿದ್ದರೂ,
svargē pr̥thivyāṁ vā yadyapi kēṣucid īśvara iti nāmārōpyatē tādr̥śāśca bahava īśvarā bahavaśca prabhavō vidyantē
6 “ನಮಗಾದರೋ ಒಬ್ಬನೇ ತಂದೆಯಾದ ದೇವರು; ಆತನೇ ಸಮಸ್ತಕ್ಕೂ ಮೂಲಕಾರಣನು; ನಾವು ಜೀವಿಸುವುದು ಆತನಿಗಾಗಿಯೇ, ಮತ್ತು ಒಬ್ಬನೇ ಕರ್ತನಾದ ಯೇಸು ಕ್ರಿಸ್ತನೆಂಬ ಏಕ ಕರ್ತನು ನಮಗಿದ್ದಾನೆ. ಆತನ ಮುಖಾಂತರವೇ ಸಮಸ್ತವೂ ಉಂಟಾಯಿತು. ನಾವೂ ಆತನ ಮುಖಾಂತರ ಉಂಟಾದೆವು.”
tathāpyasmākamadvitīya īśvaraḥ sa pitā yasmāt sarvvēṣāṁ yadarthañcāsmākaṁ sr̥ṣṭi rjātā, asmākañcādvitīyaḥ prabhuḥ sa yīśuḥ khrīṣṭō yēna sarvvavastūnāṁ yēnāsmākamapi sr̥ṣṭiḥ kr̥tā|
7 ಆದಾಗ್ಯೂ, ಈ ತಿಳಿವಳಿಕೆಯು ಎಲ್ಲರಲ್ಲಿಯೂ ಇಲ್ಲ. ಪ್ರತಿಯಾಗಿ, ಕೆಲವರು ಈ ವರೆಗೂ ವಿಗ್ರಹಗಳ ಬಳಿಗೆ ಹೋಗುವ ರೂಢಿಯಲ್ಲಿದರಿಂದ ತಾವು ತಿನ್ನುವ ಈ ಆಹಾರವು ವಿಗ್ರಹಕ್ಕೆ ಅರ್ಪಿಸಿದ್ದೆಂದು ತಿನ್ನುತ್ತಾರೆ; ಅವರ ಮನಸ್ಸಾಕ್ಷಿಯು ಬಲಹೀನವಾದ್ದದರಿಂದ ಕಲುಷಿತವಾಗಿ ಹೋಗಿದೆ.
adhikantu jñānaṁ sarvvēṣāṁ nāsti yataḥ kēcidadyāpi dēvatāṁ sammanya dēvaprasādamiva tad bhakṣyaṁ bhuñjatē tēna durbbalatayā tēṣāṁ svāntāni malīmasāni bhavanti|
8 ಆದರೆ ನಾವು ತಿನ್ನುವ ಆಹಾರವು ದೇವರನ್ನು ಮೆಚ್ಚಿಸುವುದಿಲ್ಲ. ತಿನ್ನದಿರುವುದರಿಂದ ನಷ್ಟವೂ ಇಲ್ಲ, ತಿನ್ನುವುದರಿಂದ ಲಾಭವೂ ಇಲ್ಲ.
kintu bhakṣyadravyād vayam īśvarēṇa grāhyā bhavāmastannahi yatō bhuṅktvā vayamutkr̥ṣṭā na bhavāmastadvadabhuṅktvāpyapakr̥ṣṭā na bhavāmaḥ|
9 ಆದರೆ ಈ ನಿಮ್ಮ ಸ್ವಾತಂತ್ರ್ಯವು ನಂಬಿಕೆಯಲ್ಲಿ ಬಲಹೀನನಾದವನಿಗೆ ಅಡ್ಡಿಯಾಗದಂತೆ ಎಚ್ಚರವಾಗಿರಿ.
atō yuṣmākaṁ yā kṣamatā sā durbbalānām unmāthasvarūpā yanna bhavēt tadarthaṁ sāvadhānā bhavata|
10 ೧೦ ಜ್ಞಾನಿಯಾದ ನೀನೇ ವಿಗ್ರಹಾಲಯದಲ್ಲಿ ಊಟಕ್ಕೆ ಕುಳಿತಿರುವುದನ್ನು ದುರ್ಬಲವಾದ ಮನಸ್ಸಾಕ್ಷಿಯುಳ್ಳ ಸಹೋದರನು ಕಂಡರೆ ಅವನೂ ಕೂಡ ವಿಗ್ರಹಕ್ಕೆ ಅರ್ಪಿಸಿದ ಆಹಾರಪದಾರ್ಥಗಳನ್ನು ತಿನ್ನುವುದಕ್ಕೆ ಧೈರ್ಯಗೊಂಡನಲ್ಲವೇ.
yatō jñānaviśiṣṭastvaṁ yadi dēvālayē upaviṣṭaḥ kēnāpi dr̥śyasē tarhi tasya durbbalasya manasi kiṁ prasādabhakṣaṇa utsāhō na janiṣyatē?
11 ೧೧ ಹೀಗೆ ಈ ನಿನ್ನ ಜ್ಞಾನದಿಂದ ಆ ಬಲಹೀನ ಸಹೋದರನು ನಾಶವಾಗುತ್ತಾನೆ. ಅವನಿಗಾಗಿಯೂ ಕ್ರಿಸ್ತನು ತನ್ನ ಪ್ರಾಣ ಕೊಟ್ಟನಲ್ಲವೇ.
tathā sati yasya kr̥tē khrīṣṭō mamāra tava sa durbbalō bhrātā tava jñānāt kiṁ na vinaṁkṣyati?
12 ೧೨ ಹೀಗಿರಲಾಗಿ ನೀವು ಸಹೋದರರ ವಿರುದ್ಧ ಪಾಪ ಮಾಡಿ ಅವರ ದುರ್ಬಲವಾದ ಮನಸ್ಸಾಕ್ಷಿಯನ್ನು ನೋಯಿಸಿದರೆ ನೀವು ಕ್ರಿಸ್ತನ ವಿರುದ್ಧ ಪಾಪಮಾಡುವವರಾಗುತ್ತೀರಿ.
ityanēna prakārēṇa bhrātr̥ṇāṁ viruddham aparādhyadbhistēṣāṁ durbbalāni manāṁsi vyāghātayadbhiśca yuṣmābhiḥ khrīṣṭasya vaiparītyēnāparādhyatē|
13 ೧೩ ಆದ್ದರಿಂದ ಆಹಾರಪದಾರ್ಥವು ನನ್ನ ಸಹೋದರನಿಗೆ ಅಡ್ಡಿಯಾಗುವುದಾದರೆ ನಾನು ಎಂದಿಗೂ ಮಾಂಸವನ್ನು ತಿನ್ನುವುದಿಲ್ಲ; ನಾನು ನನ್ನ ಸಹೋದರನಿಗೆ ಅಡ್ಡಿಯನ್ನುಂಟುಮಾಡುವುದಿಲ್ಲಾ. (aiōn g165)
atō hētōḥ piśitāśanaṁ yadi mama bhrātu rvighnasvarūpaṁ bhavēt tarhyahaṁ yat svabhrātu rvighnajanakō na bhavēyaṁ tadarthaṁ yāvajjīvanaṁ piśitaṁ na bhōkṣyē| (aiōn g165)

< ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ 8 >