< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 9 >

1 ಎಲ್ಲಾ ಇಸ್ರಾಯೇಲರನ್ನು ಅವರ ಕುಟುಂಬಗಳಿಗೆ ಅನುಗುಣವಾಗಿ ವಂಶಾವಳಿಯಲ್ಲಿ ಉಲ್ಲೇಖಿಸಲಾಗಿದೆ. ಅವರ ಹೆಸರುಗಳು ಇಸ್ರಾಯೇಲರ ಅರಸರ ಪುಸ್ತಕದಲ್ಲಿ ದಾಖಲಾಗಿದೆ. ಯೆಹೂದ್ಯರು ದೇವದ್ರೋಹಿಗಳಾದುದರಿಂದ ಬಾಬಿಲೋನಿಗೆ ಸೆರೆಯವರಾಗಿ ಹೋಗಬೇಕಾಯಿತು.
ଏହି ପ୍ରକାରେ ସମଗ୍ର ଇସ୍ରାଏଲ ବଂଶାବଳୀ କ୍ରମେ ଲିଖିତ ହେଲେ; ଦେଖ, ତାହା ଇସ୍ରାଏଲ ରାଜାମାନଙ୍କ ପୁସ୍ତକରେ ଲିଖିତ ଅଛି; ଏଥିଉତ୍ତାରେ ଯିହୁଦା ଆପଣାମାନଙ୍କ ଅବିଶ୍ଵସ୍ତତା ସକାଶୁ ବନ୍ଦୀ ହୋଇ ବାବିଲକୁ ନୀତ ହେଲେ।
2 ಆಗ ಅವರ ಪಟ್ಟಣಗಳನ್ನೂ, ಸ್ವಾಸ್ತ್ಯವನ್ನೂ ಮೊದಲು ಸ್ವಾಧೀನಮಾಡಿಕೊಂಡವರು ಇಸ್ರಾಯೇಲ್ಯರು, ಯಾಜಕರು ಲೇವಿಯರು ಮತ್ತು ದೇವಾಲಯದ ಸೇವಕರು ಇವರೇ.
ପୁଣି, ଇସ୍ରାଏଲ, ଯାଜକଗଣ, ଲେବୀୟମାନେ ଓ ନଥୀନୀୟମାନେ ସେମାନଙ୍କ ଅଧିକାରସ୍ଥ ନଗରସମୂହରେ ପ୍ରଥମେ ବସତି କଲେ।
3 ಯೆಹೂದ್ಯರು, ಬೆನ್ಯಾಮೀನ್ಯರು ಎಫ್ರಾಯೀಮ್ಯರು, ಮನಸ್ಸೆಯರು ಯೆರೂಸಲೇಮಿನಲ್ಲಿ ವಾಸವಾಗಿದ್ದವರು.
ପୁଣି, ଯିହୁଦା-ସନ୍ତାନଗଣ ମଧ୍ୟରୁ, ବିନ୍ୟାମୀନ୍-ସନ୍ତାନଗଣ ମଧ୍ୟରୁ, ଇଫ୍ରୟିମ ଓ ମନଃଶି-ସନ୍ତାନଗଣ ମଧ୍ୟରୁ ଏମାନେ ଯିରୂଶାଲମରେ ବାସ କଲେ; ଯଥା,
4 ಯೆಹೂದ ಕುಲದ ಊತೈ ಅಮ್ಮೀಹೂದನ ಮಗ. ಅಮ್ಮಿಹೂದನು ಒಮ್ರಿಯ ಮಗ. ಇವನು ಇಮ್ರಿಯ, ಮಗ. ಇವನು ಬಾನಿಯ ಮಗ. ಇವನು ಯೆಹೂದನ ಮಗನಾದ ಪೆರೆಚನ ಸಂತಾನದವನು.
ଯିହୁଦାର ପୁତ୍ର ପେରସର ସନ୍ତାନଗଣ ମଧ୍ୟରୁ ବାନିର ବୃଦ୍ଧ ପ୍ରପୌତ୍ର ଇମ୍ରିର ପ୍ରପୌତ୍ର ଅମ୍ରିଙ୍କର ପୌତ୍ର ଅମ୍ମୀହୂଦର ପୁତ୍ର ଊଥୟ;
5 ಶೇಲಾಹನ ಸಂತಾನದ ಚೊಚ್ಚಲು ಮಗನಾದ ಅಸಾಯ ಮತ್ತು ಅವನ ಮಕ್ಕಳು.
ଆଉ ଶୀଲୋନୀୟମାନଙ୍କ ମଧ୍ୟରୁ ପ୍ରଥମଜାତ ଅସାୟ ଓ ତାହାର ସନ୍ତାନଗଣ।
6 ಯೆಯೂವೇಲ್ ಜೆರಹನ ಸಂತಾನದವನು. ಇವನೂ ಇವನ ಸಹೋದರರೂ ಒಟ್ಟು ಆರುನೂರ ತೊಂಬತ್ತು ಜನರು.
ଆଉ ସେରହର ସନ୍ତାନମାନଙ୍କ ମଧ୍ୟରୁ ଯୁୟେଲ ଓ ସେମାନଙ୍କ ଭ୍ରାତୃଗଣ, ଏମାନେ ଛଅ ଶହ ନବେ ଜଣ।
7 ಬೆನ್ಯಾಮೀನ್ಯ ಕುಲದವರಲ್ಲಿ ಮೆಷುಲ್ಲಾಮನ ಮಗನೂ, ಹೋದವ್ಯನ ಮೊಮ್ಮಗನೂ, ಹಸ್ಸೆನುವಾಹನ ಮರಿಮಗನೂ ಆಗಿರುವ ಸಲ್ಲು ಪ್ರಮುಖನಾದವನು.
ବିନ୍ୟାମୀନ୍-ସନ୍ତାନଗଣ ମଧ୍ୟରୁ ହସନୁୟେଲର ପ୍ରପୌତ୍ର ହୋଦବୀୟର ପୌତ୍ର ମଶୁଲ୍ଲମ୍‍ର ପୁତ୍ର ସଲ୍ଲୁ;
8 ಯೆರೋಹಾಮನ ಮಗನಾದ ಇಬ್ನೆಯಾಹ; ಉಜ್ಜಿಯನ ಮಗನೂ ಮಿಕ್ರೀರಿಯ ಮೊಮ್ಮಗನೂ ಆದ ಏಲಾ, ಶೆಫಟ್ಯನ ಮಗನೂ ರೆಯೂವೇಲನ ಮೊಮ್ಮಗನೂ ಇಬ್ನಿಯನ ಮರಿಮಗನೂ ಆದ ಮೆಷುಲ್ಲಾಮ್ ಇವರೂ ಮತ್ತು ಇವರ ಸಹೋದರರೂ,
ଆଉ ଯିରୋହମର ପୁତ୍ର ଯିବ୍‍ନୀୟ ଓ ମିଖ୍ରିର ପୌତ୍ର ଉଷିର ପୁତ୍ର ଏଲା, ଆଉ ଇଦ୍‍ନୀୟର ପ୍ରପୌତ୍ର ରୁୟେଲର ପୌତ୍ର ଶଫଟୀୟର ପୁତ୍ର ମଶୁଲ୍ଲମ୍‍;
9 ಒಟ್ಟಿಗೆ ಒಂಬೈನೂರ ಐವತ್ತಾರು ಜನರು. ಇವರೆಲ್ಲರೂ ತಮ್ಮ ಗೋತ್ರಗಳಲ್ಲಿ ಪ್ರಧಾನಪುರುಷರು.
ଏମାନେ ଓ ଏମାନଙ୍କ ଭ୍ରାତୃଗଣ ଆପଣା ଆପଣା ବଂଶାବଳୀ ଅନୁସାରେ ନଅ ଶହ ଛପନ ଜଣ ଥିଲେ। ଏସମସ୍ତେ ଆପଣା ଆପଣା ପିତୃବଂଶାନୁସାରେ ପିତୃବଂଶର ପ୍ରଧାନ ଲୋକ ଥିଲେ।
10 ೧೦ ಯಾಜಕರಲ್ಲಿ ಯೆದಾಯ, ಯೆಹೋಯಾರೀಬ್, ಯಾಕೀನ್;
ଆଉ ଯାଜକମାନଙ୍କ ମଧ୍ୟରେ ଯିଦୟୀୟ, ଯିହୋୟାରୀବ୍‍, ଯାଖୀନ୍‍
11 ೧೧ ಅಹೀಟೂಬನ ಸಂತಾನದವನಾದ ಮೆರಾಯೋತನಿಂದ ಹುಟ್ಟಿದ ಚಾದೋಕನ ಮರಿಮಗನೂ ಮೆಷುಲ್ಲಾಮನ ಮೊಮ್ಮಗನೂ, ಹಿಲ್ಕೀಯನ ಮಗನೂ ದೇವಾಲಯದ ಅಧಿಪತಿಯಾಗಿದ್ದವನೂ ಆಗಿದ್ದ ಅಜರ್ಯ.
ଓ ପରମେଶ୍ୱରଙ୍କ ଗୃହର ଅଧ୍ୟକ୍ଷ ଅହୀଟୂବ୍‍ର ଅତି ବୃଦ୍ଧ ପ୍ରପୌତ୍ର ମରାୟୋତ୍‍ର ବୃଦ୍ଧ ପ୍ରପୌତ୍ର ସାଦୋକର ପ୍ରପୌତ୍ର ମଶୁଲ୍ଲମ୍‍ର ପୌତ୍ର ହିଲ୍‍କୀୟର ପୁତ୍ର ଅସରୀୟ,
12 ೧೨ ಯೆರೋಹಾಮನ ಮಗನಾದ ಅದಾಯ ಇವನೂ ಮತ್ತು ಇವನ ಸಹೋದರರೂ ಯೆರೋಹಾಮನು, ಪಶ್ಹೂರನ ಮಗ; ಇವನು ಮಲ್ಕೀಯನ ಮಗ, ಇವನು ಮಾಸೈಯನ ಮಗ. ಇವನು ಅದೀಯೇಲನ ಮಗ. ಇವನು ಯಹ್ಜೇರನ ಮಗ. ಇವನು ಮೆಷುಲ್ಲಾಮನ ಮಗ. ಇವನು ಮೆಷಿಲ್ಲೋಮೋತನ ಮಗ. ಇವನು ಇಮ್ಮೇರನ ಮಗ.
ଆଉ ମଲ୍‍କୀୟର ପ୍ରପୌତ୍ର ପଶ୍‍ହୂରର ପୌତ୍ର ଯିରୋହମର ପୁତ୍ର ଅଦାୟା, ପୁଣି, ଇମ୍ମେରର ଅତି ବୃଦ୍ଧ ପ୍ରପୌତ୍ର ମଶିଲ୍ଲମୋରର ବୃଦ୍ଧ ପ୍ରପୌତ୍ର ମଶୁଲ୍ଲମ୍‍ର ପ୍ରପୌତ୍ର ଯହସେରାର ପୌତ୍ର ଅଦୀୟେଲର ପୁତ୍ର ମାସୟ;
13 ೧೩ ಗೋತ್ರ ಪ್ರಧಾನರು ದೇವಾಲಯ ಸೇವೆಯಲ್ಲಿ ಗಟ್ಟಿಗರೂ ಆಗಿದ್ದ ಇವರೂ, ಇವರ ಸಹೋದರರೂ ಒಟ್ಟು ಸಾವಿರದ ಏಳು ನೂರ ಅರವತ್ತು ಜನರು.
ଏମାନେ ଓ ଏମାନଙ୍କ ଭ୍ରାତୃଗଣ ଏକ ହଜାର ସାତ ଶହ ଷାଠିଏ ଜଣ; ଏମାନେ ଆପଣା ଆପଣା ପିତୃବଂଶର ପ୍ରଧାନ ଓ ପରମେଶ୍ୱରଙ୍କ ଗୃହର ସେବାକର୍ମରେ ଅତି ଦକ୍ଷ ଥିଲେ।
14 ೧೪ ಲೇವಿಯರಲ್ಲಿ ಹಷಬ್ಯನ ಮಗನೂ, ಅಜ್ರೀಕಾಮನ ಮೊಮ್ಮಗನೂ, ಹಷಬ್ಯನ ಮರಿಮಗನೂ, ಮೆರಾರೀ ಗೋತ್ರದವನೂ ಆದ ಶೆಮಾಯ
ଆଉ ଲେବୀୟମାନଙ୍କ ମଧ୍ୟରେ ମରାରି-ବଂଶଜାତ ହଶବୀୟର ପ୍ରପୌତ୍ର ଅସ୍ରୀକାମର ପୌତ୍ର ହଶୂବର ପୁତ୍ର ଶମୟୀୟ;
15 ೧೫ ಬಕ್ಬಕ್ಕರ್, ಹೆರೆಷ್, ಗಾಲಾಲ್, ಮೀಕನ ಮಗನೂ ಜಿಕ್ರೀಯ ಮೊಮ್ಮಗನೂ ಆಸಾಫನ ಮರಿಮಗನೂ ಆದ ಮತ್ತನ್ಯನು.
ଆଉ ବକ୍‍ବକର, ହେରଶ୍‍, ଗାଲଲ୍‍ ଓ ଆସଫର ପ୍ରପୌତ୍ର ସିଖ୍ରିର ପୌତ୍ର ମୀକାର ପୁତ୍ର ମତ୍ତନୀୟ
16 ೧೬ ಶೆಮಾಯನ ಮಗನೂ ಯೆದೂತೂನನ ಮರಿಮಗನೂ ಆದ ಓಬದ್ಯ. ನೆಟೋಫಾತ್ಯರ ಗ್ರಾಮಗಳಲ್ಲಿ ವಾಸವಾಗಿದ್ದ ಎಲ್ಕಾನನ ಮೊಮ್ಮಗನೂ ಆಸನ ಮಗನೂ ಆದ ಬೆರೆಕ್ಯ ಇವರೇ.
ଓ ଯିଦୂଥୂନ୍‍‍ର ପ୍ରପୌତ୍ର ଗାଲଲ୍‍ର ପୌତ୍ର ଶମୟୀୟର ପୁତ୍ର ଓବଦୀୟ; ଆଉ ନଟୋଫାତୀୟମାନଙ୍କ ଗ୍ରାମବାସୀ ଇଲ୍‍କାନାର ପୌତ୍ର ଆସାର ପୁତ୍ର ବେରିଖୀୟ।
17 ೧೭ ದ್ವಾರಪಾಲಕರಲ್ಲಿ ಶಲ್ಲೂಮ್, ಅಕ್ಕೂಬ್, ಟಲ್ಮೋನ್, ಅಹೀಮಾನ್, ಇವರೂ ಮತ್ತು ಇವರ ಸಹೋದರರು. ಇವರಲ್ಲಿ ಶಲ್ಲೂಮನು ಪ್ರಮುಖನಾಗಿದ್ದನು.
ଆଉ ଦ୍ୱାରପାଳ, ଶଲ୍ଲୁମ୍‍, ଅକ୍କୂବ, ଟଲ୍‍ମୋନ, ଅହୀମାନ୍‍ ଓ ଏମାନଙ୍କ ଭ୍ରାତୃଗଣ; ଶଲ୍ଲୁମ୍‍ ପ୍ରଧାନ ଥିଲା।
18 ೧೮ ಶಲ್ಲೂಮರು ಇಂದಿನವರೆಗೂ ಪೂರ್ವದಿಕ್ಕಿನಲ್ಲಿರುವ ಅರಸನ ಬಾಗಿಲನ್ನು ಕಾಯುತ್ತಿರುತ್ತಾರೆ. ಇವರು ಲೇವಿಯರ ಪಾಳೆಯಗಳ ದ್ವಾರಪಾಲಕರು.
ଏମାନେ ଏପର୍ଯ୍ୟନ୍ତ ପୂର୍ବଦିଗସ୍ଥିତ ରାଜଦ୍ୱାରରେ ରହିଲେ; ଏମାନେ ଲେବୀ-ସନ୍ତାନମାନଙ୍କ ଛାଉଣିର ଦ୍ୱାରପାଳ।
19 ೧೯ ಕೋರೇಯನ ಮಗನೂ ಎಬ್ಯಾಸಾಫನ ಮೊಮ್ಮಗನೂ ಕೋರಹನ ಮರಿಮಗನೂ ಆದ ಶಲ್ಲೂಮನೂ, ಅವನ ಗೋತ್ರ ಬಂಧುಗಳಾದ ಮಿಕ್ಕ ಕೋರಹಿಯರೂ ಗುಡಾರದ ದ್ವಾರಪಾಲಕ ಸೇವೆಗೆ ನೇಮಿಸಲ್ಪಟ್ಟರು. ಇವರ ಪೂರ್ವಿಕರು ಯೆಹೋವನ ಪಾಳೆಯದ ಪ್ರವೇಶ ದ್ವಾರವನ್ನು ಕಾಯುವವರಾಗಿದ್ದರು.
ଏହି ଶଲ୍ଲୁମ୍‍ କୋରହର ପ୍ରପୌତ୍ର ଅବୀୟାସଫର ପୌତ୍ର କୋରିର ପୁତ୍ର; ଏ ଓ ଏହାର ପିତୃବଂଶଜ କୋରହୀୟ ଭ୍ରାତୃଗଣ ସେବାକର୍ମରେ ନିଯୁକ୍ତ ଓ ତମ୍ବୁଦ୍ୱାରସବୁର ରକ୍ଷକ ଥିଲେ। ଏମାନଙ୍କ ପିତୃଲୋକମାନେ ସଦାପ୍ରଭୁଙ୍କ ଛାଉଣିରେ ନିଯୁକ୍ତ ଓ ପ୍ରବେଶ ସ୍ଥାନର ରକ୍ଷକ ଥିଲେ।
20 ೨೦ ಆಗ ಎಲ್ಲಾಜಾರನ ಮಗನಾದ ಫೀನೆಹಾಸನು ಅವರ ನಾಯಕನಾಗಿದ್ದನು. ಯೆಹೋವನು ಇವನ ಸಂಗಡ ಇದ್ದನು.
ପୂର୍ବକାଳରେ ଇଲୀୟାସରର ପୁତ୍ର ପୀନହସ୍‍ ସେମାନଙ୍କର ଅଧ୍ୟକ୍ଷ ଥିଲା, ଆଉ ସଦାପ୍ରଭୁ ତାହାର ସହବର୍ତ୍ତୀ ଥିଲେ।
21 ೨೧ ಮೆಷೆಲೆಮ್ಯನ ಮಗನಾದ ಜೆಕರೀಯನು ದೇವದರ್ಶನದ ಗುಡಾರ ದ್ವಾರಪಾಲಕನಾಗಿದ್ದನು.
ମଶେଲିମୀୟର ପୁତ୍ର ଜିଖରୀୟ ସମାଗମ-ତମ୍ବୁର ଦ୍ୱାରପାଳ।
22 ೨೨ ದ್ವಾರಪಾಲಕ ಸೇವೆಗೆ ಪ್ರತ್ಯೇಕಿಸಲ್ಪಟ್ಟವರು ಒಟ್ಟಿಗೆ ಇನ್ನೂರ ಹನ್ನೆರಡು ಜನರು. ಅವರ ಹೆಸರುಗಳು ಅವರವರ ಗ್ರಾಮಗಳ ಪಟ್ಟಿಯಲ್ಲಿ ದಾಖಲಾಗಿದ್ದವು. ದಾವೀದನೂ, ದರ್ಶಿಯಾದ ಸಮುವೇಲನೂ ಅವರನ್ನು ಈ ಉದ್ಯೊಗಕ್ಕೆ ನೇಮಿಸಿದರು.
ଦ୍ୱାରପାଳର କାର୍ଯ୍ୟାର୍ଥେ ମନୋନୀତ ଏହି ଲୋକମାନେ ସର୍ବସୁଦ୍ଧା ଦୁଇ ଶହ ବାର ଜଣ; ଏମାନଙ୍କ ଗ୍ରାମ ସମୂହରେ ଏମାନଙ୍କ ବଂଶାବଳୀ ଲିଖିତ ହୋଇଥିଲା, ଦାଉଦ ଓ ଶାମୁୟେଲ ଦର୍ଶକ ଏମାନଙ୍କୁ ଏମାନଙ୍କ ନିରୂପିତ କର୍ମରେ ନିଯୁକ୍ତ କରିଥିଲେ।
23 ೨೩ ಅವರೂ ಅವರ ಮಕ್ಕಳೂ ಯೆಹೋವನ ಆಲಯದ, ಗುಡಾರದ ಬಾಗಿಲುಗಳನ್ನು ಕಾಯುತ್ತಿದ್ದರು.
ଏହେତୁ ଏମାନେ ଓ ଏମାନଙ୍କ ସନ୍ତାନଗଣ ସଦାପ୍ରଭୁଙ୍କ ଗୃହର, ଅର୍ଥାତ୍‍, ତମ୍ବୁଗୃହର ଦ୍ୱାରପାଳ-କର୍ମରେ ପ୍ରହରକୁ ପ୍ରହର ନିଯୁକ୍ତ ହେଲେ।
24 ೨೪ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಈ ದಿಕ್ಕುಗಳಲ್ಲಿರುವ ದೇವಾಲಯದ ಬಾಗಿಲುಗಳನ್ನು ಕಾಯುವವರಾಗಿದ್ದರು.
ଏହି ଦ୍ୱାରପାଳମାନେ ପୂର୍ବ, ପଶ୍ଚିମ, ଉତ୍ତର ଓ ଦକ୍ଷିଣ ଚାରି ଦିଗରେ ରହିଲେ।
25 ೨೫ ಗ್ರಾಮಗಳಲ್ಲಿ ಇದ್ದ ಅವರ ಗೋತ್ರ ಬಂಧುಗಳು ಅವರ ಸಂಗಡ ಕೆಲಸ ಮಾಡುವುದಕ್ಕೊಸ್ಕರ ಸರದಿಯಂತೆ ಕ್ರಮದ ಪ್ರಕಾರವಾಗಿ ಮೇಲೆ ಏಳೇಳು ದಿನಗಳು ಬರಬೇಕಾಯಿತು.
ଆଉ ଏମାନଙ୍କ ଗ୍ରାମସ୍ଥ ଭ୍ରାତୃଗଣକୁ ପ୍ରତି ସପ୍ତାହରେ ସେମାନଙ୍କ ସଙ୍ଗେ ରହିବା ପାଇଁ ସମୟକୁ ସମୟ ଆସିବାକୁ ହେଲା;
26 ೨೬ ಲೇವಿಯರಾದ ಮೇಲ್ಕಂಡ ನಾಲ್ಕು ಜನರು ದ್ವಾರಪಾಲಕರ ಮುಖ್ಯಸ್ಥರಾಗಿ ದೇವಾಲಯದ ಕೋಣೆಗಳನ್ನೂ ಮತ್ತು ಭಂಡಾರಗಳನ್ನೂ ನೋಡಿಕೊಳ್ಳುವ ಜವಾಬ್ದಾರರಾಗಿದ್ದರು.
କାରଣ ଏହି ଲେବୀୟ ଚାରି ପ୍ରଧାନ ଦ୍ୱାରପାଳ ନିରୂପିତ କାର୍ଯ୍ୟରେ ନିଯୁକ୍ତ ଓ ପରମେଶ୍ୱରଙ୍କ ଗୃହର କୋଠରି ଓ ଭଣ୍ଡାରସମୂହର ଅଧ୍ୟକ୍ଷ ଥିଲେ।
27 ೨೭ ಅವರು ರಾತ್ರಿಯಲ್ಲಿ ದೇವಾಲಯದ ಸುತ್ತಲೂ ಕಾವಲು ಕಾಯುತ್ತಿದ್ದರು. ಪ್ರತಿದಿನ ಬೆಳಿಗ್ಗೆ ದೇವಾಲಯದ ಬಾಗಿಲು ತೆರೆಯುತ್ತಿದ್ದರು.
ଆଉ ସେମାନେ ପରମେଶ୍ୱରଙ୍କ ଗୃହର ଚତୁର୍ଦ୍ଦିଗରେ ରାତ୍ରି କ୍ଷେପଣ କଲେ, କାରଣ ସେମାନଙ୍କ ଉପରେ ତହିଁର ରକ୍ଷାର ଭାର ଓ ପ୍ରତି ପ୍ରଭାତରେ ଦ୍ୱାର ଫିଟାଇବାର କାର୍ଯ୍ୟ ଥିଲା।
28 ೨೮ ಇದಲ್ಲದೆ ಅವರಲ್ಲಿ ಕೆಲವರು ಪೂಜಾ ಸಾಮಗ್ರಿಗಳನ್ನು ನೋಡಿಕೊಳ್ಳುವವರಾಗಿದ್ದರು. ಅವುಗಳನ್ನು ಕೊಡುವಾಗಲೂ ತಿರುಗಿ ತೆಗೆದುಕೊಳ್ಳುವಾಗಲೂ ಲೆಕ್ಕವಿರಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು.
ଆଉ ସେମାନଙ୍କର କେତେକ ଲୋକ ସେବାର୍ଥକ ପାତ୍ରସବୁ ରକ୍ଷା କରିବାକୁ ନିଯୁକ୍ତ ଥିଲେ; କାରଣ ସେହି ପାତ୍ରସବୁ ସଂଖ୍ୟାନୁସାରେ ଭିତରକୁ ଅଣାଗଲା ଓ ବାହାରକୁ ନିଆଗଲା।
29 ೨೯ ಇನ್ನು ಕೆಲವರು ದೇವಾಲಯದ ಎಲ್ಲಾ ವಸ್ತುಗಳ ಮೇಲ್ವಿಚಾರಕರೂ, ಗೋದಿಹಿಟ್ಟು, ದ್ರಾಕ್ಷಾರಸ, ಎಣ್ಣೆ, ಧೂಪ, ಪರಿಮಳದ್ರವ್ಯ ಇವುಗಳ ಪಾರುಪತ್ಯಗಾರರು ಆಗಿದ್ದರು.
ମଧ୍ୟ ସେମାନଙ୍କର କେତେକ ଲୋକ ଆବାସର ସାମଗ୍ରୀ, ସକଳ ପାତ୍ର, ସରୁ ମଇଦା, ଦ୍ରାକ୍ଷାରସ, ତୈଳ, କୁନ୍ଦୁରୁ ଓ ଗନ୍ଧଦ୍ରବ୍ୟ ରକ୍ଷା କାର୍ଯ୍ୟରେ ନିଯୁକ୍ତ ଥିଲେ।
30 ೩೦ ಯಾಜಕ ಸಂತಾನದವರಲ್ಲಿ ಕೆಲವರು ಪರಿಮಳದ್ರವ್ಯಗಳಿಂದ ತೈಲವನ್ನು ಮಾಡುತ್ತಿದ್ದರು.
ଆଉ ଯାଜକମାନଙ୍କ ସନ୍ତାନଗଣ ମଧ୍ୟରୁ କେତେକ ଜଣ ସୁଗନ୍ଧିଦ୍ରବ୍ୟର ତୈଳ ପ୍ରସ୍ତୁତ କଲେ।
31 ೩೧ ಲೇವಿಯರಲ್ಲಿ ಕೋರಹಿಯನಾದ ಶಲ್ಲೂಮನ ಚೊಚ್ಚಲ ಮಗನಾದ ಮತ್ತಿತ್ಯನು ರೊಟ್ಟಿ ಸುಡುವ ಕೆಲಸದ ಮೇಲ್ವಿಚಾರಕನು.
ଆଉ ଲେବୀୟମାନଙ୍କ ମଧ୍ୟରୁ କୋରହୀୟ ଶଲ୍ଲୁମ୍‍ର ଜ୍ୟେଷ୍ଠ ପୁତ୍ର ମତ୍ତଥୀୟ ପକ୍ୱାନ୍ନ-ତତ୍ତ୍ୱାବଧାରଣର ନିରୂପିତ କର୍ମରେ ନିଯୁକ୍ତ ଥିଲା।
32 ೩೨ ಅವನ ಸಹೋದರರಾದ ಮಿಕ್ಕ ಕೆಹಾತ್ಯರಲ್ಲಿ ಕೆಲವರು ಪ್ರತಿ ಸಬ್ಬತ್ತಿನಲ್ಲಿ ನೈವೇದ್ಯದ ರೊಟ್ಟಿಗಳನ್ನು ತಯಾರಿಸುವ ಕೆಲಸವಿತ್ತು.
ଆଉ ସେମାନଙ୍କ ଭ୍ରାତୃଗଣ କହାତୀୟ ସନ୍ତାନଗଣ ମଧ୍ୟରୁ କେତେକ ଜଣ ପ୍ରତି ବିଶ୍ରାମବାର ଦର୍ଶନୀୟ ରୁଟି ପ୍ରସ୍ତୁତ କରିବା ପାଇଁ ନିଯୁକ୍ତ ଥିଲେ।
33 ೩೩ ಇನ್ನೂ ಕೆಲವರು ವಾದ್ಯಗಾರರಾಗಿ ಸಂಗೀತ ಸೇವೆಮಾಡುವ ಜವಾಬ್ದಾರಿಯಿತ್ತು. ಇವರು ಲೇವಿಯ ಗೋತ್ರಗಳಲ್ಲಿ ಪ್ರಧಾನರೂ ದೇವಾಲಯದ ಕೋಣೆಗಳಲ್ಲಿ ವಾಸಿಸುವವರೂ ಆಗಿದ್ದರು. ಅವರು ಹಗಲಿರುಳು ಕೆಲಸದಲ್ಲಿ ಇರುತ್ತಿದ್ದರಿಂದ ಇತರ ಸೇವೆಯಿಂದ ಬಿಡುಗಡೆ ಹೊಂದಿದ್ದರು.
ପୁଣି, ଲେବୀୟମାନଙ୍କ ପିତୃବଂଶର ପ୍ରଧାନ ଯେଉଁ ଗାୟକମାନେ, ସେମାନେ କୋଠରିରେ ବାସ କଲେ ଓ ଅନ୍ୟ ସେବାରୁ ମୁକ୍ତ ଥିଲେ; କାରଣ ସେମାନଙ୍କୁ ଦିବାରାତ୍ରି ଆପଣା ଆପଣା କାର୍ଯ୍ୟରେ ନିଯୁକ୍ତ ରହିବାକୁ ହେଲା।
34 ೩೪ ಇವರು ವಂಶಾವಳಿಯ ಪ್ರಕಾರ ಲೇವಿಗೋತ್ರ ಪ್ರಧಾನರೂ, ಯೆರೂಸಲೇಮಿನಲ್ಲಿ ವಾಸಿಸುವವರೂ ಆಗಿದ್ದರು.
ଏମାନେ ପ୍ରଧାନ ଲୋକ, ଆପଣା ଆପଣାର ସମୁଦାୟ ବଂଶାବଳୀରେ ଲେବୀୟମାନଙ୍କର ପିତୃବଂଶର ପ୍ରଧାନ ଥିଲେ; ଏମାନେ ଯିରୂଶାଲମରେ ବାସ କଲେ।
35 ೩೫ ಗಿಬ್ಯೋನಿನಲ್ಲಿ ಗಿಬ್ಯೋನ್ಯರ ಮೂಲಪುರುಷನಾದ ಯೆಯೂವೇಲನು ವಾಸಿಸುತ್ತಿದ್ದನು. ಅವನ ಹೆಂಡತಿಯ ಹೆಸರು ಮಾಕ.
ଆଉ ଗିବୀୟୋନ୍‍ର ପିତା ଯିୟୀୟେଲ୍‍ ଗିବୀୟୋନ୍‍ରେ ବାସ କଲା, ତାହାର ଭାର୍ଯ୍ୟାର ନାମ ମାଖା;
36 ೩೬ ಅವನ ಚೊಚ್ಚಲ ಮಗ ಅಬ್ದೋನನು. ತರುವಾಯ ಹುಟ್ಟಿದವರು ಚೂರ್, ಕೀಷ್, ಬಾಳ್, ನೇರ್, ನಾದಾಬ್,
ତାହାର ପ୍ରଥମଜାତ ପୁତ୍ର ଅବ୍‍ଦୋନ୍‍, ତହୁଁ ସୂର୍‍, କୀଶ୍‍, ବାଲ୍‍, ନେର୍‍, ନାଦବ୍‍,
37 ೩೭ ಗೆದೋರ್, ಅಹ್ಯೋ, ಜೆಕರ್ಯ ಮತ್ತು ಮಿಕ್ಲೋತ್.
ଗଦୋର, ଅହୀୟୋ, ଜିଖରୀୟ ଓ ମିକ୍ଲୋତ୍‍।
38 ೩೮ ಮಿಕ್ಲೋತನು ಶಿಮಾಮನನ್ನು ಪಡೆದನು. ಇವರು ತಮ್ಮ ಸಹೋದರರಿಂದ ಬೇರೆಯಾಗಿ ಯೆರೂಸಲೇಮಿನಲ್ಲಿರುವ ತಮ್ಮ ಕುಲಸಂಬಂಧಿಕರ ಜೊತೆಯಲ್ಲಿ ವಾಸಿಸುತ್ತಿದ್ದರು.
ମିକ୍ଲୋତ୍‍ ଶିମୀୟାମକୁ ଜାତ କଲା। ଏମାନେ ମଧ୍ୟ ଆପଣା ଭ୍ରାତୃଗଣ ସମ୍ମୁଖରେ ଯିରୂଶାଲମରେ ଆପଣା ଭ୍ରାତୃଗଣ ସହିତ ବାସ କଲେ।
39 ೩೯ ನೇರನು ಕೀಷನನ್ನು ಪಡೆದನು; ಕೀಷನು ಸೌಲನನ್ನು ಪಡೆದನು; ಸೌಲನು ಯೋನಾತಾನನನ್ನೂ, ಮಲ್ಕೀಷೂವನನ್ನೂ, ಅಬೀನಾದಾಬನನ್ನೂ, ಎಷ್ಬಾಳನನ್ನು ಪಡೆದನು.
ନେର୍‍ କୀଶ୍‍କୁ ଜାତ କଲା, କୀଶ୍‍ ଶାଉଲଙ୍କୁ ଜାତ କଲା, ଶାଉଲ ଯୋନାଥନ, ମଲ୍‍କୀଶୂୟ, ଅବୀନାଦବ ଓ ଇଶ୍‍ବାଲକୁ ଜାତ କଲେ।
40 ೪೦ ಯೋನಾತಾನನು ಮೆರೀಬ್ಬಾಳನನ್ನು ಪಡೆದನು. ಮೆರೀಬ್ಬಾಳನು ಮೀಕನನ್ನು ಪಡೆದನು.
ପୁଣି, ମରୀବ୍ବାଲ୍‍ ଯୋନାଥନର ପୁତ୍ର ଥିଲା ଓ ମରୀବ୍ବାଲ୍‍ ମୀଖାକୁ ଜାତ କଲା।
41 ೪೧ ಮೀಕನ ಮಕ್ಕಳು ಪೀತೋನ್, ಮೆಲೆಕ್, ತಹ್ರೇಯ ಮತ್ತು ಅಹಾಜ ಇವರೇ.
ମୀଖାର ପୁତ୍ର ପିଥୋନ୍‍, ମେଲକ୍‍, ତହରେୟ ଓ ଆହସ୍‌।
42 ೪೨ ಆಹಾಜನು ಯಗ್ರಾಹನನ್ನು ಪಡೆದನು; ಯಗ್ರಾಹನು ಆಲೆಮೆತ್, ಅಜ್ಮಾವೆತ್, ಜಿಮ್ರಿ ಇವರನ್ನು ಪಡೆದನು; ಜಿಮ್ರಿಯು ಮೋಚನನ್ನು ಪಡೆದನು.
ଆହସ୍‌ ଯାରହକୁ ଜାତ କଲା, ଯାରହ ଆଲେମତ୍‍, ଅସ୍ମାବତ୍‍ ଓ ସିମ୍ରିକୁ ଜାତ କଲା; ସିମ୍ରି ମୋତ୍ସାକୁ ଜାତ କଲା
43 ೪೩ ಮೋಚನು ಬಿನ್ನನನ್ನು ಪಡೆದನು; ಇವನ ಮಗನು ರೆಫಾಯ; ಇವನ ಮಗ ಎಲ್ಲಾಸ; ಇವನ ಮಗ ಅಚೇಲ.
ଓ ମୋତ୍ସା ବିନୀୟାକୁ ଜାତ କଲା; ବିନୀୟାର ପୁତ୍ର ରଫାୟ, ତାହାର ପୁତ୍ର ଇଲୀୟାସା, ତାହାର ପୁତ୍ର ଆତ୍ସେଲ।
44 ೪೪ ಅಚೇಲನಿಗೆ ಆರು ಮಕ್ಕಳಿದ್ದರು. ಅವರ ಹೆಸರುಗಳು ಅಜ್ರೀಕಾಮ್, ಬೋಕೆರೂ, ಇಷ್ಮಾಯೇಲ್, ಶೆಯರ್ಯ, ಓಬದ್ಯ ಮತ್ತು ಹಾನಾನ್.
ଆଉ ଆତ୍ସେଲର ଛଅ ପୁତ୍ର ଥିଲେ, ସେମାନଙ୍କ ନାମ ଏହି, ଅସ୍ରୀକାମ, ବୋଖରୁ, ଇଶ୍ମାୟେଲ, ଶିୟରୀୟ, ଓବଦୀୟ ଓ ହାନନ୍‍; ଏସମସ୍ତେ ଆତ୍ସେଲର ସନ୍ତାନ।

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 9 >