< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 7 >

1 ಇಸ್ಸಾಕಾರನ ಮಕ್ಕಳು: ತೋಲ, ಪೂವ, ಯಾಶೂಬ್, ಶಿಮ್ರೋನ್ ಎಂಬ ನಾಲ್ಕು ಜನರು.
इस्‍साखारका चार छोराहरू तोला, पूवा, याशूब र शिम्रोन थिए ।
2 ತೋಲನ ಮಕ್ಕಳಾದ, ಉಜ್ಜೀ, ರೆಫಾಯ, ಯೆರೀಯೇಲ್, ಯಹ್ಮೈ, ಇಬ್ಸಾಮ್ ಮತ್ತು ಸಮುವೇಲ್. ಇವರು ತೋಲನ ವಂಶದ ಕುಟುಂಬಗಳಲ್ಲಿ ಪ್ರಧಾನ ಪುರುಷರೂ, ರಣವೀರರೂ ಆಗಿದ್ದರು. ತೋಲ ವಂಶದವರ ಸಂಖ್ಯೆಯು ದಾವೀದನ ಕಾಲದಲ್ಲಿ ಇಪ್ಪತ್ತೆರಡು ಸಾವಿರದ ಆರುನೂರು.
तोलाका छोराहरू उज्‍जी, रपायाह, यरीएल, यहमै, यिब्‍साम र शमूएल थिए । तोलाका सन्तानबाट तिनीहरू आ-आफ्ना पिताहरूका घरानाहरूका मुखियाहरू थिए, र आफ्ना पुस्ताका बिचमा तिनीहरू शक्तिशाली योद्धाहरूका रूपमा सूचीकृत थिए । दाऊदको समयमा तिनीहरूको संख्‍या २२,६०० थियो ।
3 ಉಜ್ಜೀಯನ ಮಗ ಇಜ್ಯಹ್ಯಾಹ. ಇಜ್ಯಹ್ಯಾಹನ ಮಕ್ಕಳು ಮಿಕಾಯೇಲ್, ಓಬದ್ಯ, ಯೋವೇಲ್, ಇಷ್ಷೀಯ. ಇವರು ಈ ಕುಟುಂಬದ ಗೋತ್ರಪ್ರಧಾನರು.
उज्‍जीका छोरा यिज्‍यहि थिए । यिज्‍यहिका छोराहरू मिखाएल, ओबदिया, योएल र यिश्‍याह थिए । यी पाँच जना सबै वंशका मुखियाहरू थिए ।
4 ಇವರ ಹೆಂಡತಿ ಮಕ್ಕಳೂ, ಇವರ ಗೋತ್ರ ಕುಟುಂಬಗಳಿಗೆ ಸೇರುವ ಯುದ್ಧಭಟರು ಮತ್ತು ಹೆಂಡತಿ, ಮಕ್ಕಳು ಒಟ್ಟು ಮೂವತ್ತಾರು ಸಾವಿರ.
तिनीहरूका साथै तिनीहरूसँग पुर्खाका वंशअनुसार युद्ध गर्नलाई छत्तिस हजार योद्धाहरू थिए, किनकी तिनीहरूका धेरै पत्‍नीहरू र छोराहरू थिए ।
5 ಇವರ ಗೋತ್ರ ಸಂಬಂಧಿಗಳಾದ ಇಸ್ಸಾಕಾರ್ಯರೆಲ್ಲರೂ ರಣವೀರರು. ಈ ಕುಟುಂಬದ ಬಹುಪಾಲು ಪುರುಷರು ಸೈನ್ಯದಲ್ಲಿ ಸೇವೆಮಾಡಲು ಯೋಗ್ಯರಾಗಿದ್ದರೆಂದು ತಮ್ಮನ್ನು ಅರ್ಪಿಸಿಕೊಂಡರು, ಪಟ್ಟಿಯಲ್ಲಿ ಲೆಕ್ಕಿಸಲ್ಪಟ್ಟವರು ಒಟ್ಟು ಎಂಭತ್ತೇಳು ಸಾವಿರ ಮಂದಿ.
इस्‍साखारका सबै वंशबाट तिनीहरूका आफन्तहरू योद्धाहरू थिए र तिनीहरूका वंशमा सूचीकृत भएअनुसार तिनीहरूका सङ्‍ख्‍या जम्‍मा सतासी हजार योद्धा थिए ।
6 ಬೆನ್ಯಾಮೀನನಿಗೆ ಬೆಳ, ಬೆಕೆರ್, ಯೆದೀಯಯೇಲ್ ಎಂಬ ಮೂರು ಮಕ್ಕಳಿದ್ದರು.
बेन्‍यामीनका तिन जना छोराहरू बेला, बेकेर र येदीएल थिए ।
7 ಬೆಳನ ಮಕ್ಕಳು ಎಚ್ಬೋನ್, ಉಜ್ಜೀ, ಉಜ್ಜೀಯೇಲ್, ಯೆರೀಮೋತ್ ಮತ್ತು ಈರೀ ಎಂಬವರು. ಈ ಐದು ಜನರು ಗೋತ್ರ ಪ್ರಧಾನರು ರಣವೀರರೂ ಆಗಿದ್ದರು. ಅವರ ವಂಶಾವಳಿಯ ಪಟ್ಟಿಯಲ್ಲಿ ಇಪ್ಪತ್ತೆರಡು ಸಾವಿರದ ಮೂವತ್ತನಾಲ್ಕು ಜನರೆಂದು ಲೆಕ್ಕಿಸಲ್ಪಟ್ಟವರು.
बेलाका पाँच छोराहरू यसम्‍बोन, उज्‍जी, उज्‍जीएल, यरीमोत र ईरी थिए । तिनीहरू सिपाहीहरू र आ-आफ्ना पिताका घरानाहरूका मुखियाहरू थिए । तिनीहरूका पुर्खाका वंशमा सूचीकृत भएअनुसार तिनीहरूका योद्धाहरूको संख्‍या २२,०३४ थियो ।
8 ಬೆಕೆರನ ಮಕ್ಕಳು ಜೆಮೀರ್, ಯೋವಾಷ್, ಎಲೀಯೆಜೆರ್, ಎಲ್ಯೋವೇನೈ, ಒಮ್ರಿ, ಯೆರೀಮೋತ್, ಅಬೀಯ, ಅನಾತೋತ್ ಮತ್ತು ಆಲೆಮೆತ್ ಎಂಬವರು.
बेकेरका छोराहरू जमीरा, योआश, एलीएजर, एल्‍योएनै, ओम्री, यरेमोत, अबिया, अनातोत र आलेमेत थिए । यी सबै तिनका छोराहरू थिए ।
9 ರಣವೀರರಾದ ಈ ಗೋತ್ರಪ್ರಧಾನರ ವಂಶಾವಳಿಯ ಪಟ್ಟಿಯಲ್ಲಿ ಲೆಕ್ಕಿಸಲ್ಪಟ್ಟ ಇಪ್ಪತ್ತು ಸಾವಿರದ ಇನ್ನೂರು ಯುದ್ಧ ಪರಾಕ್ರಮಶಾಲಿಗಳು.
तिनीहरूका पुर्खाका घरानाहरूका मुखियाहरूको वंशहरू र योद्धाहरू सङ्‍ख्‍या २०,२०० र थिए ।
10 ೧೦ ಯೆದೀಯಯೇಲನ ಮಗ ಬಿಲ್ಹಾನ್. ಬಿಲ್ಹಾನನ ಮಕ್ಕಳು: ಯೆಯೂಷ್, ಬೆನ್ಯಾಮೀನ್, ಏಹೂದ್, ಕೆನಾನ, ಜೇತಾನ್, ತಾರ್ಷೀಷ್, ಅಹೀಷೆಹರ್ ಎಂಬವರು.
येदीएलका छोरा बिल्‍हान थिए । बिल्‍हानका छोराहरू येऊश, बेन्‍यामीन, एहूद, केनाना, जेतान, तर्शीश र अहीशहर थिए ।
11 ೧೧ ಈ ಗೋತ್ರ ಪ್ರಧಾನರಿಗೆ ಸೇರಿದವರೆಲ್ಲರೂ ಯೆದೀಯಯೇಲನ ಸಂತಾನದವರು. ಇವರಲ್ಲಿ ಹದಿನೇಳು ಸಾವಿರದ ಇನ್ನೂರು ಯುದ್ಧದಲ್ಲಿ ಹೋರಾಡತಕ್ಕ ಪರಾಕ್ರಮ ಶಾಲಿಗಳು.
यी सबै येदीएलका छोराहरू थिए । तिनीहरूको वंशको सूचीमा १७,२०० घरानाका मुखियाहरू र सैनिक सेवाको निम्ति योद्धाहरू थिए ।
12 ೧೨ ಶುಪ್ಪೀಮ್ ಮತ್ತು ಹುಪ್ಪೀಮರು ಈರನ ಮಕ್ಕಳು. ಹುಶೀಮನು ಅಹೇರನ ಮಗ.
(शुप्‍पीहरू र हुप्‍पीहरू इरका छोराहरू थिए, र हुशीहरू अहेरका छोराहरू थिए ।)
13 ೧೩ ನಫ್ತಾಲಿಯ ಮಕ್ಕಳು ಯಹಚಿಯೇಲ್, ಗೂನೀ, ಯೇಚೆರ್, ಶಲ್ಲೂಮ್ ಇವರು ಬಿಲ್ಹಳ ಸಂತಾನದವರು.
नप्‍तालीका छोराहरू यहसेल, गुनी, येसेर र शिल्‍लेम थिए । यी बिल्‍हाका नातिहरू थिए ।
14 ೧೪ ಮನಸ್ಸೆಯ ಸಂತಾನದವರು: ಅರಾಮ್ಯಳಾದ ಮನಸ್ಸೆಯ ಉಪಪತ್ನಿಯಿಂದ ಅಷ್ರೀಯೇಲ ಮತ್ತು ಮಾಕೀರನನ್ನು ಮನಸ್ಸೆ ಪಡೆದನು. ಮಾಕೀರನು ಗಿಲ್ಯಾದನ ತಂದೆ.
मनश्‍शेका अस्रीएल नाम गरेका छोरा थिए, जसलाई अरामी उपपत्‍नीले जन्माएकी थिइन् । तिनले पनि गिलादका पिता माकीरलाई जन्‍माइन्‌ ।
15 ೧೫ ಮಾಕೀರನು ಹುಪ್ಪೀಮ್ ಮತ್ತು ಶುಪ್ಪೀಮ್ಯರಿಂದ ಹೆಣ್ಣನ್ನು ತೆಗೆದುಕೊಂಡನು. ಅವನ ತಂಗಿಯ ಹೆಸರು ಮಾಕ. ಅವನ ತಮ್ಮನ ಹೆಸರು ಚೆಲೋಫಾದ್. ಚೆಲೋಫಾದನಿಗೆ ಹೆಣ್ಣು ಮಕ್ಕಳು ಮಾತ್ರ ಇದ್ದರು.
माकीरले हुप्‍पीहरू र शुप्‍पीहरूबाट एउटी पत्‍नी ल्याए । माकीरकी बहिनीको नाउँ माका थियो । मनश्शेका अर्का सन्तानको नाउँ सलोफाद थियो, जसका छोरीहरू मात्र थिए ।
16 ೧೬ ಮಾಕೀರನ ಹೆಂಡತಿಯಾದ ಮಾಕಳು ಮಗನನ್ನು ಹೆತ್ತು, ಅವನಿಗೆ ಪೆರೇಷ್ ಎಂದು ಹೆಸರಿಟ್ಟಳು. ಇವನ ತಮ್ಮನ ಹೆಸರು ಶೆರೆಷ್. ಶೆರೆಷನ ಮಕ್ಕಳು ಊಲಾಮ್ ಮತ್ತು ರೆಕೆಮ್.
माकीरकी पत्‍नी माकाले एउटा छोरो जन्माइन् र तिनको नाउँ तिनले पेरेश राखिन्‌ । तिनका भाइको नाउँ शेरेश थियो, र तिनका छोराहरू ऊलाम र राकेम थिए ।
17 ೧೭ ಉಲಾಮನ ಮಗನು ಬೆದಾನ್. ಇವರು ಮನಸ್ಸೆಯ ಮೊಮ್ಮಗ ಹಾಗೂ ಮಾಕೀರನ ಮಗ. ಇವರು ಗಿಲ್ಯಾದನ ಸಂತಾನದವರು.
ऊलामका छोरा बदान थिए । मनश्‍शेका नाति माकीरका छोरा गिलादका सन्‍तानहरू यी नै थिए ।
18 ೧೮ ಗಿಲ್ಯಾದನ ತಂಗಿಯಾದ ಹಮ್ಮೋಲೆಕೆತಳು ಈಷ್ಹೋದ್, ಅಬೀಯೆಜೆರ್, ಮಹ್ಲ ಎಂಬವರನ್ನು ಹೆತ್ತಳು.
गिलादकी बहिनी हम्‍मोलेकेतले ईशोद, अबीएजेर र महलाल लाई जन्माइन् ।
19 ೧೯ ಶೆಮೀದನ ಮಕ್ಕಳು ಅಹ್ಯಾನ್, ಶೆಕೆಮ್, ಲಿಕ್ಹೀ, ಅನೀಯಾಮ್.
शमीदाका छोराहरू अहियन, शकेम, लिखी र अनीआम थिए ।
20 ೨೦ ಎಫ್ರಾಯೀಮನ ಸಂತಾನದವರು: ಎಫ್ರಾಯೀಮನ ಮಗ ಶೂತೆಲಹ, ಇವನ ಮಗ ಬೆರೆದ್. ಬೆರೆದನ ಮಗ ತಹತ್; ಇವನ ಮಗ ಎಲ್ಲಾದ್. ಎಲ್ಲಾದನ ಮಗ ತಹತ್;
एफ्राइमका सन्तानहरू यसप्रकार थिएः एफ्राइमका छोरा शूतेहल थिए । शूतेहलका छोरा बेरेद थिए । बेरेदका छोरा तहत थिए । तहतका छोरा एलादा थिए । एलदका छोरा छोरा तहत थिए ।
21 ೨೧ ತಹತನ ಮಗ ಜಾಬಾದ್, ಜಾಬಾದನ ಮಕ್ಕಳು ಶೂತೆಲಹ, ಏಜೆರ್ ಮತ್ತು ಎಲ್ಲಾದ್. ಇವರು ಗತ್ ಊರಿನವರ ದನಕುರಿಗಳನ್ನು ಸುಲಿಗೆ ಮಾಡುವುದಕ್ಕೋಸ್ಕರ ಗಟ್ಟಾ ಇಳಿದು ಅವರ ದೇಶಕ್ಕೆ ಹೋದುದರಿಂದ ಆ ದೇಶದ ಮೂಲ ನಿವಾಸಿಗಳು ಇವರನ್ನು ಕೊಂದುಹಾಕಿದರು.
तहतका छोरा जाबाद थिए । जाबादका छोरा शूतेहल थिए । (एसेर र एलादलाई चाहिं गातका मनिसहरूका गाईबस्‍तु लुट्न जाँदा त्‍यहाँका आदिवासीले मारे ।)
22 ೨೨ ಆದುದರಿಂದ ಇವರ ತಂದೆಯಾದ ಎಫ್ರಾಯೀಮನು ಬಹುದಿನಗಳವರೆಗೂ ದುಃಖಪಡುತ್ತಿದ್ದನು. ಅವನ ಸಹೋದರರು ಅವನನ್ನು ಸಂತೈಸುವುದಕ್ಕೋಸ್ಕರ ಬಂದರು.
तिनीहरूका पिता एफ्राइमले तिनीहरूको निम्ति धेरै दिनसम्म शोक गरे, र तिनका दाजुभाइ तिनलाई सान्त्वना दिन आए ।
23 ೨೩ ಅವನು ತನ್ನ ಹೆಂಡತಿಯನ್ನು ಸಂಗಮಿಸಲು, ಆಕೆಯು ಗರ್ಭಿಣಿಯಾಗಿ ಮಗನನ್ನು ಹೆತ್ತಳು. ಇದು ಅವನ ಕುಟುಂಬಕ್ಕೆ ಒದಗಿದ ಆಪತ್ತಿನಲ್ಲಿ ಸಂಭವಿಸಿದ್ದರಿಂದ ಆ ಮಗನಿಗೆ ಬೆರೀಯ ಎಂದು ಹೆಸರಿಟ್ಟನು.
तिनले आफ्‍नी पत्‍नीसित सहवास गरे । तिनी गर्भवती भइन्‌ र एउटा छोरा जन्‍माइन्‌ । त्‍यसको नाउँ एफ्राइमले बरीआ राखे, किनभने तिनको परिवारमा दुःख आएको थियो ।
24 ೨೪ ಶೇರ ಎಂಬವಳು ಅವನ ಮಗಳು. ಈಕೆಯು ಮೇಲಣ ಮತ್ತು ಕೆಳಗಣ ಬೇತ್ ಹೊರೋನ್ ಎಂಬ ಪಟ್ಟಣಗಳನ್ನು ಮತ್ತು ಉಜ್ಜೀನ್ ಶೇರ ಎಂಬ ಪಟ್ಟಣಗಳನ್ನೂ ಕಟ್ಟಿಸಿದಳು.
तिनकी छोरी शेराह थिइन्, जसले तल्‍लो र माथिल्‍लो बेथ-होरोन अनि उज्‍जेन-शेराह बनाइन्‌ ।
25 ೨೫ ಬೆರೀಯ ಮಗ ರೆಫಹ. ಇವನ ಮಗ ರೆಷೆಫ್, ಇವನ ಮಗ ತೆಲಹ, ಇವನ ಮಗ ತಹಾನ್.
तिनका छोरा रपाह थिए । रपाहका छोरा रेशेप थिए । रेपेशका छोरा तेलह थिए । तेलहका छोरा तहन थिए ।
26 ೨೬ ತಹಾನನ ಮಗ ಲದ್ದಾನ್, ಇವನ ಮಗ ಅಮ್ಮೀಹೂದ್, ಇವನ ಮಗ ಎಲೀಷಾಮ.
तहनका छोरा लादान थिए । लादानका छोरा अम्‍मीहूद थिए । अम्मीहूदका छोरा एलीशामा थिए ।
27 ೨೭ ಎಲೀಷಾಮ ಮಗ ನೋನ್, ಇವನ ಮಗ ಯೆಹೋಷುವ.
एलीशामाका छोरा नून थिए । नूनका छोरा यहोशू थिए ।
28 ೨೮ ಅವರು ವಾಸಿಸುವ ಸ್ವತ್ತಿನ ಮೇರೆಗಳು ದಕ್ಷಿಣ ದಿಕ್ಕಿನಲ್ಲಿ ಬೇತೇಲ್ ಪಟ್ಟಣ, ಅದರ ಗ್ರಾಮಗಳೂ ಪೂರ್ವ ದಿಕ್ಕಿನಲ್ಲಿ ನಾರಾನ್, ಪಶ್ಚಿಮ ದಿಕ್ಕಿನಲ್ಲಿ ಗೆಜೆರ್ ಪಟ್ಟಣವೂ ಅದರ ಗ್ರಾಮಗಳೂ; ಉತ್ತರ ದಿಕ್ಕಿನಲ್ಲಿ ಶೆಕೆಮ್ ಮತ್ತು ಆಯಾ ಪಟ್ಟಣಗಳೂ ಅವುಗಳ ಗ್ರಾಮಗಳು.
तिनीहरूका सम्पत्ति र बसोबास गरेका ठाउँहरू बेथेल र त्‍यसका वरिपरीका गाउँहरू थिए । तिनीहरू पूर्वमा नारान, पश्‍चिममा गेजेर र त्‍यसका बस्‍तीहरू, र शकेम र त्‍यसका बस्‍तीहरू अय्‍याह र त्‍यसका बस्‍तीहरूसम्‍म फैलिए ।
29 ೨೯ ಬೇತ್ಷಾನ್, ತಾನಾಕ್, ಮೆಗಿದ್ದೋ, ದೋರ್ ಎಂಬ ಪಟ್ಟಣಗಳೂ, ಅವುಗಳ ಗ್ರಾಮಗಳೂ ಮನಸ್ಸೆ ಕುಲದವರ ವಶದಲ್ಲಿದ್ದವು. ಈ ಊರುಗಳಲ್ಲಿ ಇಸ್ರಾಯೇಲನ ಮಗನಾದ ಯೋಸೇಫನ ಸಂತಾನದವರು ವಾಸಿಸುತ್ತಿದ್ದರು.
मनश्‍शेको सिमानामा बेथ-शान र त्‍यसका गाउँहरू, तानाक र त्‍यसका गाउँहरू, मगिछो र त्‍यसका गाउँहरू र दोर र त्‍यसका गाउँहरू थिए । यी नगरहरूमा इस्राएलका छोरा योसेफका सन्‍तानहरू बसोबास गरे ।
30 ೩೦ ಅಶೇರನ ಸಂತಾನದವರು: ಇಮ್ನ, ಇಷ್ವ, ಇಷ್ವೀ, ಬೆರೀಯ ಎಂಬವರೂ ಸೆರಹಳೆಂಬ ಇವರ ತಂಗಿ.
आशेरका छोराहरू यिम्‍ना, यिश्‍वा, यिश्‍वी र बरीआ थिए । तिनीहरूकी बहिनी सेरह थिइन्‌ ।
31 ೩೧ ಬೆರೀಯನ ಮಕ್ಕಳು ಹೆಬೆರ್, ಬಿರ್ಜೈತ್ ಊರಿನವರ ಮೂಲಪುರುಷನಾದ ಮಲ್ಕೀಯೇಲ್.
बरीआका छोराहरू हेबेर र बिर्जेतका पिता मल्‍कीएल थिए ।
32 ೩೨ ಹೆಬೆರನು ಯಫ್ಲೇಟ್, ಶೋಮೇರ್, ಹೋತಾಮ್ ಇವರನ್ನೂ ಇವರ ತಂಗಿಯಾದ ಶೂವಳನ್ನೂ ಪಡೆದನು.
हेबेरका छोराहरू यप्‍लेत, शोमेर र होताम थिए । तिनीहरूकी बहिनी शूअ थिइन् ।
33 ೩೩ ಪಾಸಕ್, ಬಿಮ್ಹಾಲ್, ಅಶ್ವಾತ್ ಇವರು ಯಫ್ಲೇಟನ ಮಕ್ಕಳು.
यप्‍लेतका छोराहरू पासक, बिम्‍हाल र अश्‍वात थिए । यिनीहरू यप्लेतका सन्तान थिए ।
34 ೩೪ ಅಹೀ, ರೋಹ್ಗ, ಹುಬ್ಬ, ಅರಾಮ್ ಎಂಬುವವರು ಶಮೆರನ ಮಕ್ಕಳು.
यप्लेतका भाइ शोमेरका छोराहरू अही, रोहगा, हूब्‍बा र अराम थिए ।
35 ೩೫ ಇವನ ತಮ್ಮನಾದ ಹೆಲೆಮನ ಮಕ್ಕಳು, ಚೋಫಹ, ಇಮ್ನ, ಶೇಲೆಷ್, ಆಮಾಲ್ ಇವರೇ.
शोमेरका भाइ हेलेमका छोराहरू सोपह, यिम्‍न, शेलेश र आमाल थिए ।
36 ೩೬ ಚೋಫಹನ ಮಕ್ಕಳು ಸೂಹ, ಹರ್ನೇಫೆರ್, ಶೂಗಾಲ್, ಬೇರೀ, ಇಮ್ರ,
सोपहका छोराहरू सूह, हर्नेपेर, शूआल, बरी, यिम्राह,
37 ೩೭ ಬೆಚೆರ್, ಹೋದ್, ಶಮ್ಮ, ಶಿಲ್ಷನು, ಇತ್ರಾನ್, ಬೇರ.
बेसेर, होद, शामा, शिल्‍शा, यित्रान र बीरा थिए ।
38 ೩೮ ಯೆಫುನ್ನೆ, ಪಿಸ್ಪ, ಅರಾ ಎಂಬುವವರು ಯೆತೆರನ ಮಕ್ಕಳು.
येतेरका छोराहरू यपुन्‍ने, पिस्‍पा र अरा थिए ।
39 ೩೯ ಆರಹ, ಹನ್ನಿಯೇಲ, ರಿಚ್ಯ ಇವರು ಉಲ್ಲನ ಮಕ್ಕಳು.
उल्‍लाका छोराहरू आरा, हन्‍नीएल र रिसिया थिए ।
40 ೪೦ ಇವರೆಲ್ಲರು ಆಶೇರ್ಯರಲ್ಲಿ ಗೋತ್ರಪ್ರಧಾನರೂ, ಯುದ್ಧಪ್ರವೀಣರಾದ ರಣವೀರರೂ ಮತ್ತು ಶ್ರೇಷ್ಠ ನಾಯಕರೂ ಆಗಿದ್ದರು. ಇವರ ವಂಶಾವಳಿಯ ಪಟ್ಟಿಯ ಪ್ರಕಾರ ಯುದ್ಧ ಪ್ರವೀಣರಾದ ಭಟರ ಸಂಖ್ಯೆ ಇಪ್ಪತ್ತಾರು ಸಾವಿರ.
यी सबै आशेरका सन्‍तानहरू थिए । तिनीहरू वंश पुर्खाहरू, पिताका घरानाहरूका मुखियाहरू, विशिष्‍ट मानिसहरू, योद्धाहरू, र अगुवाहरूका मुखिया थिए । तिनीहरूको वंशावलीको सूचीअनुसार सेनाको लागि योग्य मानिसहरूको संख्‍या छबिस हजार थियो ।

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 7 >