< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 6 >
1 ೧ ಲೇವಿಯ ಮಕ್ಕಳು: ಗೇರ್ಷೋನ್, ಕೆಹಾತ್ ಮತ್ತು ಮೆರಾರೀ.
filii Levi Gersom Caath Merari
2 ೨ ಕೆಹಾತನ ಮಕ್ಕಳು ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್.
filii Caath Amram Isaar Hebron et Ozihel
3 ೩ ಅಮ್ರಾಮನ ಮಕ್ಕಳು ಆರೋನ್, ಮೋಶೆ ಮತ್ತು ಮಿರ್ಯಾಮ್. ಆರೋನನ ಮಕ್ಕಳು ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್.
filii Amram Aaron Moses et Maria filii Aaron Nadab et Abiu Eleazar et Ithamar
4 ೪ ಎಲ್ಲಾಜಾರನು ಫೀನೆಹಾಸನನ್ನು ಪಡೆದನು; ಫೀನೆಹಾಸನು ಅಬೀಷೂವನನ್ನು ಪಡೆದನು;
Eleazar genuit Finees et Finees genuit Abisue
5 ೫ ಅಬೀಷೂವನು ಬುಕ್ಕೀಯನನ್ನು ಪಡೆದನು; ಬುಕ್ಕೀಯನು ಉಜ್ಜೀಯನನ್ನು ಪಡೆದನು.
Abisue vero genuit Bocci et Bocci genuit Ozi
6 ೬ ಉಜ್ಜೀಯನು ಜೆರಹ್ಯನನ್ನು ಪಡೆದನು; ಜೆರಹ್ಯನು ಮೆರಾಯೋತನನ್ನು ಪಡೆದನು.
Ozi genuit Zaraiam et Zaraias genuit Meraioth
7 ೭ ಮೆರಾಯೋತನು ಅಮರ್ಯನನ್ನು ಪಡೆದನು; ಅಮರ್ಯನು ಅಹೀಟೂಬನನ್ನು ಪಡೆದನು.
porro Meraioth genuit Amariam et Amarias genuit Ahitob
8 ೮ ಅಹೀಟೂಬನು ಚಾದೋಕನನ್ನು ಪಡೆದನು; ಚಾದೋಕನು ಅಹೀಮಾಚನನ್ನು ಪಡೆದನು.
Ahitob genuit Sadoc Sadoc genuit Achimaas
9 ೯ ಅಹೀಮಾಚನು ಅಜರ್ಯನನ್ನು ಪಡೆದನು; ಅಜರ್ಯನು ಯೋಹಾನಾನನನ್ನು ಪಡೆದನು.
Achimaas genuit Azariam Azarias genuit Iohanan
10 ೧೦ ಯೋಹಾನಾನನು ಅಜರ್ಯನನ್ನು ಪಡೆದನು. ಸೊಲೊಮೋನನು ಕಟ್ಟಿಸಿದ ಯೆರೂಸಲೇಮಿನ ದೇವಾಲಯದಲ್ಲಿ ಯಾಜಕ ಸೇವೆ ಮಾಡುತ್ತಿದ್ದವನು ಇವನೇ.
Iohanan genuit Azariam ipse est qui sacerdotio functus est in domo quam aedificavit Salomon in Hierusalem
11 ೧೧ ಅಜರ್ಯನು ಅಮರ್ಯನನ್ನು ಪಡೆದನು; ಅಮರ್ಯನು ಅಹೀಟೂಬನನ್ನು ಪಡೆದನು.
genuit autem Azarias Amariam et Amarias genuit Ahitob
12 ೧೨ ಅಹೀಟೂಬನು ಚಾದೋಕನನ್ನು ಪಡೆದನು; ಚಾದೋಕನು ಶಲ್ಲೂಮನನ್ನು ಪಡೆದನು.
Ahitob genuit Sadoc et Sadoc genuit Sellum
13 ೧೩ ಶಲ್ಲೂಮನು ಹಿಲ್ಕೀಯನನ್ನು ಪಡೆದನು; ಹಿಲ್ಕೀಯನು ಅಜರ್ಯನನ್ನು ಪಡೆದನು.
Sellum genuit Helciam et Helcias genuit Azariam
14 ೧೪ ಅಜರ್ಯನು ಸೆರಾಯನನ್ನು ಪಡೆದನು; ಸೆರಾಯನು ಯೆಹೋಚಾದಾಕನನ್ನು ಪಡೆದನು.
Azarias genuit Saraiam et Saraias genuit Iosedec
15 ೧೫ ನೆಬೂಕದ್ನೆಚ್ಚರನು ಯೆಹೋವನ ಪ್ರೇರಣೆಯಿಂದ ಯೆಹೂದ್ಯರನ್ನೂ ಯೆರೂಸಲೇಮಿನವರನ್ನೂ ಸೆರೆಯೊಯ್ದಾಗ ಯೆಹೋಚಾದಾಕನು ಅವರೊಡನೆ ಇದ್ದನು.
porro Iosedec egressus est quando transtulit Dominus Iudam et Hierusalem per manus Nabuchodonosor
16 ೧೬ ಲೇವಿಯ ಮಕ್ಕಳು ಗೇರ್ಷೋಮ್, ಕೆಹಾತ್, ಮೆರಾರೀ.
filii ergo Levi Gersom Caath et Merari
17 ೧೭ ಗೇರ್ಷೋಮನ ಮಕ್ಕಳು ಲಿಬ್ನೀ ಮತ್ತು ಶಿಮ್ಮೀ.
et haec nomina filiorum Gersom Lobeni et Semei
18 ೧೮ ಕೆಹಾತನ ಮಕ್ಕಳು ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್ ಇವರೇ.
filii Caath Amram et Isaar et Hebron et Ozihel
19 ೧೯ ಮೆರಾರಿಯ ಮಕ್ಕಳು ಮಹ್ಲೀ ಮತ್ತು ಮುಷೀ. ಇವರೆಲ್ಲರೂ ಲೇವಿ ಗೋತ್ರಗಳ ಮೂಲಪುರುಷರು.
filii Merari Mooli et Musi hae autem cognationes Levi secundum familias eorum
20 ೨೦ ಗೇರ್ಷೋಮನ ಗೋತ್ರ: ಗೇರ್ಷೋಮನ ಮಗ ಲಿಬ್ನೀ. ಇವನ ಮಗ ಯಹತ್, ಇವನ ಮಗ ಜಿಮ್ಮ. ಜಿಮ್ಮನ ಮಗ ಯೋವಾಹ,
Gersom Lobeni filius eius Iaath filius eius Zamma filius eius
21 ೨೧ ಯೋವಾಹನ ಮಗ ಇದ್ದೋ, ಇವನ ಮಗ ಜೆರಹ. ಜೆರಹನ ಮಗ ಯೆವತ್ರೈ.
Ioaa filius eius Addo filius eius Zara filius eius Iethrai filius eius
22 ೨೨ ಕೆಹಾತನ ಸಂತಾನದವರು: ಇವನ ಮಗ ಅಮ್ಮೀನಾದಾಬ್, ಇವನ ಮಗ ಕೋರಹ. ಕೋರಹನ ಮಗ ಅಸ್ಸೀರ್,
filii Caath Aminadab filius eius Core filius eius Asir filius eius
23 ೨೩ ಇವನ ಮಗ ಎಲ್ಕಾನ. ಎಲ್ಕಾನನ ಮಗ ಎಬ್ಯಾಸಾಫ್. ಇವನ ಮಗ ಅಸ್ಸೀರ್.
Helcana filius eius Abiasaph filius eius Asir filius eius
24 ೨೪ ಅಸ್ಸೀರನ ಮಗ ತಹತ್, ಇವನ ಮಗ ಊರೀಯೇಲ್. ಊರೀಯೇಲನ ಮಗ ಉಜ್ಜೀಯ, ಇವನ ಮಗ ಸೌಲ್.
Thaath filius eius Urihel filius eius Ozias filius eius Saul filius eius
25 ೨೫ ಎಲ್ಕಾನನ ಮಕ್ಕಳು; ಅಮಾಸೈ, ಅಹೀಮೋತ್ ಮತ್ತು ಎಲ್ಕಾನ್ ಎಂಬವರು.
filii Helcana Amasai et Ahimoth
26 ೨೬ ಎಲ್ಕಾನನ ಸಂತಾನದವರು. ಇವನ ಮಗನು, ಚೋಫೈ, ಇವನ ಮಗ ನಹತ್.
Helcana filii Helcana Sophai filius eius Naath filius eius
27 ೨೭ ನಹತನ ಮಗ ಎಲೀಯಾಬ್, ಇವನ ಮಗ ಯೆರೋಹಾಮ್, ಇವನ ಮಗ ಎಲ್ಕಾನ್.
Heliab filius eius Hieroam filius eius Helcana filius eius
28 ೨೮ ಸಮುವೇಲನ ಮಕ್ಕಳು ಯೋವೇಲ್ ಚೊಚ್ಚಲ ಮಗನು ಮತ್ತು ಅಬೀಯನು ಎರಡನೆಯವನು.
filii Samuhel primogenitus Vasseni et Abia
29 ೨೯ ಮೆರಾರೀಯ ಸಂತಾನದವರು. ಇವನ ಮಗ ಮಹ್ಲೀ. ಇವನ ಮಗ ಲಿಬ್ನೀ, ಇವನ ಮಗ ಶಿಮ್ಮೀ. ಶಿಮ್ಮೀಯ ಮಗನು ಉಜ್ಜ.
filii autem Merari Mooli Lobeni filius eius Semei filius eius Oza filius eius
30 ೩೦ ಇವನ ಮಗನು ಶಿಮ್ಮಾ, ಇವನ ಮಗನು ಹಗ್ಗೀಯ, ಇವನ ಮಗನು ಅಸಾಯ.
Samaa filius eius Aggia filius eius Asaia filius eius
31 ೩೧ ಮಂಜೂಷವು ವಿಶ್ರಾಂತಿಹೊಂದಿದ ಮೇಲೆ ದಾವೀದನಿಂದ ಯೆಹೋವನ ಆಲಯದಲ್ಲಿ ವಾದ್ಯ ಸೇವೆಗೆ ನೇಮಿಸಲ್ಪಟ್ಟವರ ಪಟ್ಟಿ.
isti sunt quos constituit David super cantores domus Domini ex quo conlocata est arca
32 ೩೨ ಸೊಲೊಮೋನನು ಯೆರೂಸಲೇಮಿನಲ್ಲಿ ಯೆಹೋವನ ಆಲಯವನ್ನು ಕಟ್ಟುವ ತನಕ ಅವರು ದೇವದರ್ಶನದ ಗುಡಾರವೆಂಬ ಆಲಯದ ಮುಂದೆ ತಮ್ಮ ಕ್ರಮಾನುಸಾರವಾಗಿ ವಾದ್ಯ ಸೇವೆಯನ್ನು ನಡೆಸುತ್ತಿದ್ದರು.
et ministrabant coram tabernaculo testimonii canentes donec aedificaret Salomon domum Domini in Hierusalem stabant autem iuxta ordinem suum in ministerio
33 ೩೩ ದೇವಾಲಯದ ಸೇವಕರೂ ಅವರ ವಂಶಾವಳಿಯೂ: ಕೆಹಾತ್ಯನಾದ ಹೇಮಾನನು ಮೊದಲನೆಯವನು. ಪ್ರಥಮ ಸಂಗೀತ ಮಂಡಳಿಯ ಗಾಯಕನಾದ ಇವನು ಯೋವೇಲನ ಮಗ, ಇವನು ಸಮುವೇಲನ ಮಗ.
hii vero sunt qui adsistebant cum filiis suis de filiis Caath Heman cantor filius Iohel filii Samuhel
34 ೩೪ ಸಮುವೇಲನು ಎಲ್ಕಾನನ ಮಗ. ಇವನು ಯೆರೋಹಾಮನ ಮಗ, ಯೆರೋಹಾಮನು ಎಲೀಯೇಲನ ಮಗ, ಇವನು ತೋಹನ ಮಗ.
filii Helcana filii Hieroam filii Helihel filii Thou
35 ೩೫ ತೋಹನು ಚೂಫನ ಮಗ, ಇವನು ಎಲ್ಕಾನನ ಮಗ, ಎಲ್ಕಾನನು ಮಹತನ ಮಗ, ಮಹತನನು ಅಮಾಸೈಯ ಮಗ, ಅಮಾಸೈಯನು ಎಲ್ಕಾನನ ಮಗ.
filii Suph filii Helcana filii Maath filii Amasai
36 ೩೬ ಎಲ್ಕಾನನು ಯೋವೇಲನ ಮಗ, ಇವನು ಅಜರ್ಯನ ಮಗ. ಅಜರ್ಯನು ಚೆಫನ್ಯನ ಮಗ,
filii Helcana filii Iohel filii Azariae filii Sophoniae
37 ೩೭ ಇವನು ತಹತನ ಮಗ. ತಹತನು ಅಸೀರನ ಮಗ, ಅಸ್ಸೀರನು ಎಬ್ಯಾಸಾಫನ ಮಗ, ಇವನು ಕೋರಹನ ಮಗ, ಕೋರಹನು ಇಚ್ಹಾರನ ಮಗ.
filii Thaath filii Asir filii Abiasaph filii Core
38 ೩೮ ಇಚ್ಹಾರನು ಕೆಹಾತನ ಮಗ, ಇವನು ಲೇವಿಯನ ಮಗ, ಲೇವಿಯು ಇಸ್ರಾಯೇಲನ ಮಗ.
filii Isaar filii Caath filii Levi filii Israhel
39 ೩೯ ಇವನ ಬಲಗಡೆಯಲ್ಲಿ ನಿಲ್ಲುತ್ತಿದ್ದ ಇವನ ಸಹೋದರನಾದ ಆಸಾಫನು ಎರಡನೆಯವನು. ಇವನು ಬೆರೆಕ್ಯನ ಮಗ, ಇವನು ಶಿಮ್ಮನ ಮಗ.
et fratres eius Asaph qui stabat a dextris eius Asaph filius Barachiae filii Samaa
40 ೪೦ ಶಿಮ್ಮನು ಮೀಕಾಯೇಲನ ಮಗ, ಇವನು ಬಾಸೇಯನ ಮಗ, ಬಾಸೇಯನು ಮಲ್ಕೀಯನ ಮಗ.
filii Michahel filii Basiae filii Melchiae
41 ೪೧ ಮಲ್ಕೀಯನು ಎತ್ನಿಯ ಮಗ, ಇವನು ಜೆರಹನ ಮಗ, ಜೆರಹನು ಅದಾಯನ ಮಗನು.
filii Athnai filii Zara filii Adaia
42 ೪೨ ಅದಾಯನು ಏತಾನನ ಮಗ, ಇವನು ಜಿಮ್ಮನ ಮಗ, ಜಿಮ್ಮನು ಶಿಮ್ಮೀಯ ಮಗ.
filii Ethan filii Zamma filii Semei
43 ೪೩ ಶಿಮ್ಮೀಯು ಯಹತನ ಮಗ, ಇವನು ಗೇರ್ಷೋಮನ ಮಗ, ಗೇರ್ಷೋಮನು ಲೇವಿಯ ಮಗ.
filii Ieth filii Gersom filii Levi
44 ೪೪ ಇವನ ಎಡಗಡೆಯಲ್ಲಿ ನಿಲ್ಲುತ್ತಿದ್ದ ಇವನ ಸಹೋದರನೂ, ಮೆರಾರಿಯನೂ ಆದ ಏತಾನನು ಮೂರನೆಯವನು. ಇವನು ಕೀಷೀಯ ಮಗ, ಇವನು ಅಬ್ದೀಯನ ಮಗ, ಇವನು ಮಲ್ಲೂಕನ ಮಗ.
filii autem Merari fratres eorum ad sinistram Ethan filius Cusi filii Abdi filii Maloch
45 ೪೫ ಮಲ್ಲೂಕನು ಹಷಬ್ಯನ ಮಗ, ಇವನು ಅಮಚ್ಯನ ಮಗ, ಇವನು ಹಿಲ್ಕೀಯನ ಮಗ.
filii Asabiae filii Amasiae filii Helciae
46 ೪೬ ಹಿಲ್ಕೀಯನು ಅಮ್ಚೀಯನ ಮಗ, ಇವನು ಬಾನೀಯನ ಮಗ, ಬಾನೀಯು ಶೆಮೆರನ ಮಗ.
filii Amasai filii Bonni filii Somer
47 ೪೭ ಶೆಮೆರನು ಮಹ್ಲೀಯ ಮಗ, ಇವನು ಮೂಷೀಯ ಮಗ. ಮೂಷೀಯು ಮೆರಾರಿಯ ಮಗ, ಮೆರಾರಿಯು ಲೇವಿಯ ಮಗನು.
filii Mooli filii Musi filii Merari filii Levi
48 ೪೮ ಅವರ ಸಹೋದರರಾದ ಇತರ ಲೇವಿಯರು ದೇವಾಲಯದ ಗುಡಾರದ ಸೇವೆಗಾಗಿ ನೇಮಿಸಲ್ಪಟ್ಟರು.
fratres quoque eorum Levitae qui ordinati sunt in cunctum ministerium tabernaculi domus Domini
49 ೪೯ ದೇವರ ಸೇವಕನಾದ ಮೋಶೆಯ ಎಲ್ಲಾ ಆಜ್ಞೆಗಳಿಗೆ ಅನುಸಾರವಾಗಿ ಆರೋನನೂ, ಅವನ ಮಕ್ಕಳೂ ಇಸ್ರಾಯೇಲರಿಗೋಸ್ಕರ ಯಜ್ಞವೇದಿ, ಧೂಪವೇದಿ ಇವುಗಳ ಮೇಲೆ ಹೋಮ ಮಾಡುತ್ತಾ, ಧೂಪ ಹಾಕುತ್ತಾ, ದೇವಾಲಯದ ಅತಿಪರಿಶುದ್ಧ ಸ್ಥಳದ ಎಲ್ಲಾ ಸೇವೆಯನ್ನು ಮಾಡುತ್ತಾ, ದೋಷಪರಿಹಾರ ಮಾಡುತ್ತಾ ಇದ್ದರು.
Aaron vero et filii eius adolebant incensum super altare holocausti et super altare thymiamatis in omne opus sancti sanctorum et ut precarentur pro Israhel iuxta omnia quae praecepit Moses servus Dei
50 ೫೦ ಆರೋನನ ಸಂತಾನದವರು: ಆರೋನನ ಮಗ ಎಲ್ಲಾಜಾರ್, ಇವನ ಮಗ ಫೀನೆಹಾಸ್, ಫೀನೆಹಾಸನ ಮಗ ಅಬೀಷೂವ.
hii sunt autem filii Aaron Eleazar filius eius Finees filius eius Abisue filius eius
51 ೫೧ ಅಬೀಷೂವನ ಮಗ ಬುಕ್ಕೀ, ಬುಕ್ಕೀಯ ಮಗ ಉಜ್ಜೀ, ಇವನ ಮಗ ಜೆರಹ್ಯಾಹ, ಇವನ ಮಗ ಮೆರಾಯೋತ್.
Bocci filius eius Ozi filius eius Zaraia filius eius
52 ೫೨ ಮೆರಾಯೋತನ ಮಗ ಅಮರ್ಯ, ಅಮರ್ಯನ ಮಗ ಅಹೀಟೂಬ್.
Meraioth filius eius Amaria filius eius Ahitob filius eius
53 ೫೩ ಅಹೀಟೂಬನ ಮಗ ಚಾದೋಕ್, ಇವನ ಮಗ ಅಹಿಮಾಚ್.
Sadoc filius eius Achimaas filius eius
54 ೫೪ ಲೇವಿಯರಿಗೆ ಸ್ವತ್ತಾಗಿ ದೊರಕಿದ ಪಟ್ಟಣಗಳು: ಆರೋನನ ಸಂತಾನದವರಾದ ಕೇಹಾತನ ಗೋತ್ರದವರಿಗೆ ಚೀಟು ಮೊದಲು ಬಿದ್ದಿತು.
et haec habitacula eorum per vicos atque confinia filiorum scilicet Aaron iuxta cognationes Caathitarum ipsis enim sorte contigerat
55 ೫೫ ಆದುದರಿಂದ ಇಸ್ರಾಯೇಲರು ಅವರಿಗೆ ಯೆಹೂದ ಸೀಮೆಯ ಹೆಬ್ರೋನ್ ಪಟ್ಟಣವನ್ನೂ ಮತ್ತು ಅದರ ಸುತ್ತಲಿನ ಗೋಮಾಳಗಳನ್ನು ಕೊಟ್ಟರು.
dederunt igitur eis Hebron in terra Iuda et suburbana eius per circuitum
56 ೫೬ ಆದರೆ ಅದರ ಹೊಲಗಳನ್ನೂ ಅದಕ್ಕೆ ಸೇರಿದ ಗ್ರಾಮಗಳನ್ನೂ, ಯೆಫುನ್ನೆಯನ ಮಗನಾದ ಕಾಲೇಬನಿಗೆ ಕೊಟ್ಟರು.
agros autem civitatis et villas Chaleb filio Iephonne
57 ೫೭ ಆರೋನನ ವಂಶದವರಿಗೆ ಹೆಬ್ರೋನ್ ಎಂಬ ಆಶ್ರಯ ನಗರವನ್ನು, ಲಿಬ್ನ ಮತ್ತು ಅದರ ಗೋಮಾಳಗಳು, ಯತ್ತೀರ್, ಎಷ್ಟೆಮೋವ, ಅವುಗಳ ಉಪನಗರಗಳೂ,
porro filiis Aaron dederunt civitates ad confugiendum Hebron et Lobna et suburbana eius
Iether quoque et Esthmo cum suburbanis suis sed et Helon et Dabir cum suburbanis suis
59 ೫೯ ಆಷಾನ್, ಬೇತ್‌ಷೆಮೆಷ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳನ್ನೂ,
Asan quoque et Bethsemes et suburbana eorum
60 ೬೦ ಬೆನ್ಯಾಮೀನನ ಕುಲದಿಂದ ಗೆಬ, ಅಲೆಮೆತ್, ಅನಾತೋತ್ ಎಂಬ ಗೋಮಾಳಸಹಿತವಾದ ಪಟ್ಟಣಗಳನ್ನೂ ಕೊಟ್ಟರು. ಅವರ ಕುಟುಂಬಗಳಿಗೆ ದೊರಕಿದ ಒಟ್ಟು ಪಟ್ಟಣಗಳು ಹದಿಮೂರು.
de tribu autem Beniamin Gabee et suburbana eius et Almath cum suburbanis suis Anathoth quoque cum suburbanis suis omnes civitates tredecim per cognationes suas
61 ೬೧ ಕೆಹಾತ್ಯರ ಉಳಿದ ಕುಟುಂಬಗಳಿಗೆ ಚೀಟು ಹಾಕುವುದರ ಮೂಲಕ ಮನಸ್ಸೆ ಕುಲದ ಸ್ವತ್ತಿನಿಂದ ಹತ್ತು ಪಟ್ಟಣಗಳು ದೊರಕಿದವು.
filiis autem Caath residuis de cognatione sua dederunt ex dimidia tribu Manasse in possessionem urbes decem
62 ೬೨ ಗೇರ್ಷೋಮ್ಯರ ಕುಟುಂಬಗಳಿಗೆ ಇಸ್ಸಾಕಾರ್, ಆಶೇರ್, ನಫ್ತಾಲಿ, ಬಾಷಾನಿನಲ್ಲಿರುವ ಮನಸ್ಸೆ ಕುಲಗಳ ಸ್ವತ್ತಿನಿಂದ ಹದಿಮೂರು ಪಟ್ಟಣಗಳು ದೊರಕಿದವು.
porro filiis Gersom per cognationes suas de tribu Isachar et de tribu Aser et de tribu Nepthali et de tribu Manasse in Basan urbes tredecim
63 ೬೩ ಮೆರಾರೀ ಕುಟುಂಬಗಳಿಗೆ ರೂಬೇನ್, ಗಾದ್, ಜೆಬುಲೂನ್ ಕುಲಗಳ ಸ್ವತ್ತಿನಿಂದ ಹನ್ನೆರಡು ಪಟ್ಟಣಗಳು ಚೀಟು ಹಾಕುವುದರಿಂದ ದೊರಕಿದವು.
filiis autem Merari per cognationes suas de tribu Ruben et de tribu Gad et de tribu Zabulon dederunt sorte civitates duodecim
64 ೬೪ ಇಸ್ರಾಯೇಲರು ಲೇವಿಯರಿಗೆ ಆ ಪಟ್ಟಣಗಳನ್ನಲ್ಲದೆ ಅವುಗಳಿಗೆ ಸೇರಿದ ಗೋಮಾಳುಗಳನ್ನೂ ಕೊಟ್ಟರು.
dederunt quoque filii Israhel Levitis civitates et suburbana earum
65 ೬೫ ಅವರು ಚೀಟು ಹಾಕಿ ಯೆಹೂದ, ಸಿಮೆಯೋನ್ ಮತ್ತು ಬೆನ್ಯಾಮೀನನ ಕುಲಗಳಿಂದ ಮೇಲೆ ಹೇಳಿದ ಪಟ್ಟಣಗಳನ್ನೂ ಕೊಟ್ಟರು.
dederuntque per sortem ex tribu filiorum Iuda et ex tribu filiorum Symeon et ex tribu filiorum Beniamin urbes has quas vocaverunt nominibus suis
66 ೬೬ ಕೆಹಾತ್ಯರ ಕುಟುಂಬಗಳಿಗೆ ಎಫ್ರಾಯೀಮ್ಯರ ಸ್ವತ್ತಿನಿಂದ
et his qui erant ex cognatione filiorum Caath fueruntque civitates in terminis eorum de tribu Ephraim
67 ೬೭ ಎಫ್ರಾಯೀಮ್ ಬೆಟ್ಟದಲ್ಲಿರುವ ಶೆಕೆಮ್ ಎಂಬ ಆಶ್ರಯ ನಗರ, ಗೆಜೆರ್ ಮತ್ತು ಅದರ ಉಪನಗರಗಳನ್ನೂ,
dederunt ergo eis urbes ad confugiendum Sychem cum suburbanis suis in monte Ephraim et Gazer cum suburbanis suis
68 ೬೮ ಯೊಕ್ಮೆಯಾಮ್ ಮತ್ತು ಅದರ ಗೋಮಾಳಗಳು, ಬೇತ್ ಹೋರೋನ್ ಮತ್ತು ಅದರ ಉಪನಗರಗಳು,
Hicmaam quoque cum suburbanis suis et Bethoron similiter
69 ೬೯ ಅಯ್ಯಾಲೋನ್, ಗತ್ರಿಮ್ಮೋನ್, ಎಂಬ ಗೋಮಾಳ ಸಹಿತವಾದ ಪಟ್ಟಣಗಳು ಚೀಟಿಹಾಕುವುದರ ಮೂಲಕ ದೊರಕಿದವು.
necnon et Helon cum suburbanis suis et Gethremmon in eundem modum
70 ೭೦ ಮನಸ್ಸೆ ಕುಲದ ಸ್ವತ್ತಿನ ಆನೇರ್, ಬಿಳ್ಳಾಮ್ ಎಂಬ ಹುಲ್ಲುಗಾವಲು ಸಹಿತವಾದ ಪಟ್ಟಣಗಳು ಕೆಹಾತ್ಯರ ಉಳಿದ ಕುಟುಂಬಗಳ ಪಾಲಿಗೆ ಬಂದವು.
porro ex dimidia tribu Manasse Aner et suburbana eius Balaam et suburbana eius his videlicet qui de cognatione filiorum Caath reliqui erant
71 ೭೧ ಗೇರ್ಷೊಮ್ಯರಿಗೆ ಮನಸ್ಸೆ ಕುಲದ ಸ್ವತ್ತಿನಿಂದ ಬಾಷಾನಿನ ಗೋಲಾನ್, ಅಷ್ಟಾರೋಟ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು ದೊರಕಿದವು.
filiis autem Gersom de cognatione dimidiae tribus Manasse Gaulon in Basan et suburbana eius et Astharoth cum suburbanis suis
72 ೭೨ ಇಸ್ಸಾಕಾರ್ಯರ ಸ್ವತ್ತಿನಿಂದ ಕೆದೆಷ್, ದಾಬೆರತ್,
de tribu Isachar Cedes et suburbana eius et Dabereth cum suburbanis suis
73 ೭೩ ರಾಮೋತ್, ಅನೇಮ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು ದೊರಕಿದವು.
Ramoth quoque et suburbana illius et Anem cum suburbanis suis
74 ೭೪ ಅಶೇರನ ಕುಲದ ಸ್ವತ್ತಿನಿಂದ ಮಾಷಾಲ್, ಅಬ್ದೋನ್.
de tribu vero Aser Masal cum suburbanis suis et Abdon similiter
75 ೭೫ ಹೂಕೋಕ್, ರೆಹೋಬ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು ದೊರಕಿದವು.
Acac quoque et suburbana eius et Roob cum suburbanis suis
76 ೭೬ ನಫ್ತಾಲಿ ಕುಲದ ಸ್ವತ್ತಿನಿಂದ ಗಲಿಲಾಯದ ಕೆದೆಷ್, ಹಮ್ಮೋನ್, ಕಿರ್ಯಾತಯಿಮ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು ದೊರಕಿದವು.
porro de tribu Nepthali Cedes in Galilea et suburbana eius Amon cum suburbanis suis et Cariathaim et suburbana eius
77 ೭೭ ಮಿಕ್ಕ ಲೇವಿಯರಾದ ಮೆರಾರಿಯರಿಗೆ ಜೆಬುಲೋನ್ ಕುಲದ ಸ್ವತ್ತಿನಿಂದ ರಿಮ್ಮೋನೋ, ತಾಬೋರ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳೂ,
filiis autem Merari residuis de tribu Zabulon Remmono et suburbana eius et Thabor cum suburbanis suis
78 ೭೮ ಯೆರಿಕೋವಿನ ಬಳಿಯಲ್ಲಿ ಹರಿಯುವ ಯೊರ್ದನ್ ನದಿಯ ಪೂರ್ವದಿಕ್ಕಿನಲ್ಲಿರುವ ಅರಣ್ಯದ ಬೆಚೆರ್ ಮತ್ತು ಅದರ ಗೋಮಾಳಗಳು, ಯಹಚ್ ಮತ್ತು ಅದರ ಗೋಮಾಳಗಳು ರೂಬೇನ್ ಕುಲದಿಂದ ದೊರಕಿದವು.
trans Iordanem quoque ex adverso Hiericho contra orientem Iordanis de tribu Ruben Bosor in solitudine cum suburbanis suis et Iasa cum suburbanis suis
79 ೭೯ ಕೆದೇಮೋತ್ ಮತ್ತು ಅದರ ಗೋಮಾಳಗಳು, ಮೇಫಾತ್ ಮತ್ತು ಅದರ ಗೋಮಾಳಗಳು ರೂಬೇನ್ ಕುಲದಿಂದ ದೊರಕಿದವು.
Cademoth quoque et suburbana eius et Miphaath cum suburbanis suis
80 ೮೦ ಗಾದ್ ಕುಲದ ಸ್ವತ್ತಿನಿಂದ ಗಿಲ್ಯಾದಿನ ರಾಮೋತ್ ಮತ್ತು ಅದರ ಗೋಮಾಳಗಳು ಮಹನಯಿಮ್,
necnon de tribu Gad Ramoth in Galaad et suburbana eius et Manaim cum suburbanis suis
81 ೮೧ ಹೆಷ್ಬೋನ್ ಮತ್ತು ಅದರ ಗೋಮಾಳಗಳು, ಯಗ್ಜೇರ್ ಮತ್ತು ಅದರ ಗೋಮಾಳಗಳು ಸಹಿತವಾದ ಪಟ್ಟಣಗಳು ದೊರಕಿದವು.
sed et Esbon cum suburbanis eius et Iezer cum suburbanis suis