< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 4 >
1 ೧ ಯೆಹೂದನ ಸಂತಾನದವರು: ಪೆರೆಚ್, ಹೆಚ್ರೋನ್, ಕರ್ಮೀ, ಹೂರ್ ಮತ್ತು ಶೋಬಾಲ್.
၁ယုဒသားကားဖာရက်၊ ဟေဇရုံ၊ ကာမိ၊ ဟုရ၊ ရှောဗာလတည်း။
2 ೨ ಶೋಬಾಲನ ಮಗನಾದ ರೆವಾಯನು ಯಹತನನ್ನು ಪಡೆದನು. ಯಹತನು ಅಹೂಮೈ ಮತ್ತು ಲಹದ್ ಇವರನ್ನು ಪಡೆದನು. ಇವರು ಚೊರ್ರದ ಕುಟುಂಬದವರು.
၂ရှောဗာလသားကား ရာယ၊ ရာယသားယာဟတ်၊ ယာဟတ်သား အဟုမဲနှင့်လာဟဒ်၊ ဤရွေ့ကား ဇောရသိ အမျိုးအနွယ်တည်း။
3 ೩ ಇಜ್ರೆಯೇಲ್, ಇಷ್ಮ ಮತ್ತು ಇಬ್ಬಾಷ್ ಇವರು ಎಟಾಮಿನವರ ಮೂಲಪುರುಷರು. ಹಚೆಲೆಲ್‌ಪೋನೀ ಎಂಬವಳು ಇವರ ತಂಗಿ.
၃ဧကံအမျိုးအဘ၏ သားကား ယေဇရေလ၊ ဣရှမ၊ ဣဒဗတ်၊ နှမဟာဇလေလပေါနိ၊
4 ೪ ಗೆದೋರಿನ ಮೂಲಪುರುಷನು ಪೆನೂವೇಲನು. ಹೂಷಾಹ್ಯರ ಮೂಲಪುರುಷನು ಏಜೆರ್. ಇವರು ಎಫ್ರಾತಾಹಳ ಚೊಚ್ಚಲ ಮಗನಾದ ಹೂರನ ಮಕ್ಕಳು. ಈ ಹೂರನೇ ಬೇತ್ಲೆಹೇಮ್ಯರ ಮೂಲಪುರುಷನು.
၄ဂေဒေါ်အဘပေနွေလ၊ ဟုရှအဘ ဧဇာတည်း။ ဤသူတို့သည် ဗက်လင်အဘ၊ ဧဖရတ်သားဦး ဟုရအမျိုး အနွှယ်တည်း။
5 ೫ ತೆಕೋವದವರ ಮೂಲಪುರುಷನಾದ ಅಷ್ಹೂರನಿಗೆ ಹೆಲಾಹ ಮತ್ತು ನಾರ ಎಂಬ ಇಬ್ಬರು ಹೆಂಡತಿಯರಿದ್ದರು.
၅တေကော အဘ အာရှုရသည် ဟေလနှင့် နာရ အမည်ရှိသော မယားနှစ်ယောက်ရှိ၏။
6 ೬ ಅಹುಜ್ಜಾಮ್, ಹೇಫೆರ್ ತೇಮಾನ್ಯರೂ ಮತ್ತು ಅಹಷ್ಟಾರ್ಯರೂ ಎಂಬುವವರು ನಾರಳ ಸಂತಾನದವರು.
၆နာရဘွားမြင်သော သားကား အဟုဇံ၊ ဟေဖာ၊ တေမနိ၊ ဟာဟရှတာရိတည်း။
7 ೭ ಹೆಲಾಹಳ ಮಕ್ಕಳು: ಚೆರೆತ್ ಇಚ್ಹಾರ್ ಮತ್ತು ಎತ್ನಾನ್ ಎಂಬುವವರು.
၇ဟေလဘွားမြင်သော သားကား ဇေရက်၊ ယေဇော်၊ ဧသနန်၊ ကောဇတည်း။
8 ೮ ಕೋಚನಿಂದ ಅನೂಬ್ ಮತ್ತು ಚೊಬೇಬ್ ಹುಟ್ಟಿದರು. ಅಹರ‍್ಹೇಲನು ಹಾರುಮನ ಮಗನು. ಕೋಚನು ಇವರ ವಂಶದ ಮೂಲ ಪುರುಷ.
၈ကောဇသားကား အာနုပ်နှင့် ဇောဗေဒ အစရှိ သော ဟာရုံသား အဟာရေလ အဆွေအမျိုးတည်း။
9 ೯ ಯಾಬೇಚನು ತನ್ನ ಅಣ್ಣತಮ್ಮಂದಿರಲ್ಲಿ ಗೌರವವುಳ್ಳವನಾಗಿದ್ದನು. ಇವನನ್ನು ಬಹು ವೇದನೆಯಿಂದ ಹೆತ್ತೆನೆಂದು ಇವನ ತಾಯಿ ಇವನಿಗೆ ಯಾಬೇಚನೆಂದು ಹೆಸರಿಟ್ಟಳು.
၉ထိုအဆွေအမျိုး၌ ယာဗက်သည် ထူးဆန်းသော သူဖြစ်၏။ သူ၏အမိက၊ ငါသည်ပြင်းစွာသော ဝေဒနာကို ခံ၍ ဤသားကို မြင်ရပြီဟုဆိုလျက်၊ ယာဗက်အမည်ဖြင့် မှည့်၏။
10 ೧೦ ಯಾಬೇಚನು ಇಸ್ರಾಯೇಲಿನ ದೇವರಿಗೆ, “ನೀನು ನನ್ನನ್ನು ವಿಶೇಷವಾಗಿ ಆಶೀರ್ವದಿಸಿ, ನನ್ನ ಪ್ರಾಂತ್ಯವನ್ನು ವಿಸ್ತರಿಸಿ, ನಿನ್ನ ಕೃಪಾಹಸ್ತದಲ್ಲಿ ನನ್ನನ್ನು ಇರಿಸಿ ಯಾವ ವೇದನೆಯೂ ಉಂಟಾಗದಂತೆ ನನ್ನನ್ನು ಕೇಡಿನಿಂದ ರಕ್ಷಿಸಬಾರದೇ?” ಎಂದು ಮೊರೆಯಿಡಲು ದೇವರು ಅವನ ಮೊರೆಯನ್ನು ಲಾಲಿಸಿದನು.
၁၀ယာဗက်ကလည်း၊ ကိုယ်တော်သည် အကျွန်ုပ်ကို အစဉ်ကောင်းကြီးပေး၍၊ အကျွန်ုပ်နေရာကို ကျယ်ဝန်း စေတော်မူပါ။ အကျွန်ုပ်သည် ဘေးဥပဒ်အနှောင့် အရှက်နှင့်ကင်းလွတ်ပါမည်အကြောင်း၊ လက်တော်သည် အကျွန်ုပ်ဘက်၌နေ၍ ကွယ်ကာစောင့်မတော်မူပါဟု ဣသရေလအမျိုး၏ ဘုရားသခင်အား ဆုတောင်းတတ်၍၊ တောင်းသောဆုကို ဘုရားသခင်ပေးသနားတော်မူ၏။
11 ೧೧ ಶೂಹನ ಸಹೋದರನಾದ ಕೆಲೂಬನು ಮೆಹೀರನನ್ನು ಪಡೆದನು. ಮೆಹೀರನು ಎಷ್ಟೋನನ ತಂದೆ.
၁၁ရှုအာမောင် ကာလက်သားကား မဟိရ၊ မဟိရ သား ဧရှတုန်တည်း။
12 ೧೨ ಎಷ್ಟೋನನಿಂದ ಬೇತ್ರಾಫ, ಪಾಸೇಹ, ತೆಹಿನ್ನ ಎಂಬ ಮೂರು ಗಂಡು ಮಕ್ಕಳಿದ್ದರು. ಇವರು ರೇಕಾಹ್ಯರು. ತೆಹಿನ್ನನು ನಾಹಷ್ ಪಟ್ಟಣದವರ ಮೂಲಪುರುಷನು.
၁၂ဧရှတုန်သားကား ဗက်ရာဖ၊ ပါသာ၊ တေဟိန္န တည်း။ တေဟိန္နသားကား ဣရနာဟတ်တည်း။ ဤသူတို့ သည် ရေခါအမျိုးသားဖြစ်ကြ၏။
13 ೧೩ ಕೆನಜನ ಮಕ್ಕಳು ಒತ್ನೀಯೇಲ್ ಮತ್ತು ಸೆರಾಯ ಎಂಬುವವರು. ಒತ್ನೀಯೇಲನ ಮಕ್ಕಳು ಹತತ್ ಮತ್ತು ಮೆಯೋನೋತೈ.
၁၃ကေနတ်သားကား ဩသံယေလနှင့်စရာယ တည်း။ ဩသံယေလသားကား ဟာသတ်နှင့်မောနောသဲ တည်း။
14 ೧೪ ಮೆಯೋನೊತೈಯು ಒಫ್ರಾಹನನ್ನು ಪಡೆದನು. ಸೆರಾಯನು ಶಿಲ್ಪಿಗಳಾದ ಗೇಹರಾಷೀಮ್ಯರ ಮೂಲಪುರುಷನಾದ ಯೋವಾಬನನ್ನು ಪಡೆದನು.
၁၄မောနောသဲသားကား ဩဖရာတည်း။ စရာယ သားကား ယွာဘ၊ ယွာဘ၏သားတို့သည် ဆရာသမား ဖြစ်၍ ဆရာသမားချိုင့်၌ နေသောသူတည်း။
15 ೧೫ ಯೆಫುನ್ನೆಯ ಮಗನಾದ ಕಾಲೇಬನ ಸಂತಾನದವರು ಈರು, ಏಲಹ್ ಮತ್ತು ನಾಮ್. ಏಲನ ಮಗನಾದ ಕೆನಜ್.
၁၅ယေဖုန္နသားဖြစ်သောကာလက်၏ သားကား ဣရု၊ ဧလာ၊ နာမတည်း။ ဧလာသားကားကေနတ်တည်း။
16 ೧೬ ಯೆಹಲ್ಲೆಲೇಲನ ಮಕ್ಕಳು: ಜೀಫ್, ಜೀಫಾ, ತೀರ್ಯ ಮತ್ತು ಅಸರೇಲ್ ಎಂಬುವವರು.
၁၆ယေဟလလေလသားကား ဇိဖ၊ ဇိဖာ၊ တိရိ၊ အာသရေလတည်း။
17 ೧೭ ಎಜ್ರನ ಮಕ್ಕಳು: ಯೆತೆರ್, ಮೆರೆದ್, ಏಫೆರ್ ಮತ್ತು ಯಾಲೋನ್ ಎಂಬುವವರು. ಮೆರೆದನು ಫರೋಹನ ಮಗಳಾದ ಬಿತ್ಯೆಳನ್ನು ಮದುವೆಮಾಡಿಕೊಂಡನು. ಈಕೆಯು ಅವನಿಂದ ಗರ್ಭಿಣಿಯಾಗಿ ಮಿರ್ಯಾಮ್, ಶಮ್ಮೈ, ಎಷ್ಟೆಮೋವದವರ ಮೂಲಪುರುಷನಾದ ಇಷ್ಬಹ ಇವರನ್ನು ಹೆತ್ತಳು.
၁၇ဧဇရသားကားယေသာ၊ မေရက်၊ ဧဖာ၊ ယာလုန်တည်း။ မေရက်နှင့် စုံဘက်သောဖာရောသမီး ဗိသဟာသည် မိရိ၊ ရှမ္မဲ၊ ဧရှတမောအဘ ဣရှဘကို ဘွားမြင်၏။
18 ೧೮ ಯೆಹೂದ್ಯಳಾದ ಅವನ ಇನ್ನೊಬ್ಬ ಹೆಂಡತಿಯು ಗೆದೋರ್ಯರ ಮೂಲಪುರುಷನಾದ ಯೆರೆದ್, ಸೋಕೋವಿನವರ ಮೂಲಪುರುಷನಾದ ಹೆಬೆರ್ ಮತ್ತು ಜಾನೋಹದವರ ಮೂಲಪುರುಷನಾದ ಯೆಕೂತೀಯೇಲ್ ಇವರನ್ನು ಹೆತ್ತಳು.
၁၈မယား ယေဟုဒိယသည် ဂေဒေါ်အဘယေရက်၊ စောခေါအဘ ဟေဗာ၊ ဇာနော်အဘ ယေကုသေလကို ဘွားမြင်၏။
19 ೧೯ ನಹಮನ ತಂಗಿಯೂ, ಹೋದೀಯನ ಹೆಂಡತಿಯ ಇಬ್ಬರು ಮಕ್ಕಳಲ್ಲಿ ಒಬ್ಬನು ಗರ್ಮ್ಯದ ಕೆಯೀಲದವರ ಮೂಲಪುರುಷನಾದನು, ಮತ್ತೊಬ್ಬನು ಎಷ್ಟೆಮೋವದವರ ಮಾಕಾತ್ಯ ಸಂತಾನದ ಮೂಲಪುರುಷನಾದನು.
၁၉ယေဟုဒိယသည် နာဟံနှမဖြစ်၏။ နာဟံသည် ဂါမိရွာသား ကိလ၊ မာခမြို့သား ဧရှတမော၏အဘ ဖြစ်သတည်း။
20 ೨೦ ಶೀಮೋನನ ಮಕ್ಕಳು: ಅಮ್ನೋನ್, ರಿನ್ನ, ಬೆನ್ಹಾನಾನ್ ಮತ್ತು ತೀಲೋನ್. ಇಷ್ಷೀಯನ ಮಕ್ಕಳು: ಜೋಹೇತ್ ಮತ್ತು ಬೆನ್ಜೊಹೇತ್.
၂၀ရှိမုန်သားကား အာမနုန်၊ ရိန္န၊ ဗင်္ဟာနန်၊ တိလုန် တည်း။ ဣရှိသားကား ဇောဟက်၊ ဗဇောဟက်တည်း။
21 ೨೧ ಯೆಹೂದನ ಮಗನಾದ ಶೇಲಹನ ಸಂತಾನದವರು: ಲೇಕಾಹ್ಯರ ಮೂಲಪುರುಷನಾದ ಏರ್, ಮರೇಷದವರ ಮೂಲಪುರುಷನಾದ ಲದ್ದ, ಬೇತಷ್ಬೇಯದಲ್ಲಿರುವ ನೇಯಿಗಾರರ ಕುಟುಂಬಗಳವರು,
၂၁ယုဒသားဖြစ်သော ရှေလ၏သားကား လေက အဘဧရ၊ မရေရှအဘ လာဒအစရှိသော ပိတ်ချောကို ရက်တတ်သော အာရှဗာအဆွေအမျိုး၊
22 ೨೨ ಯೊಕೀಮನು ಕೋಜೇಬದವರು ಮೋವಾಬ್ ದೇಶದಲ್ಲಿ ದೊರೆತನ ನಡಿಸಿ ಬೇತ್ಲೆಹೇಮಿಗೆ ತಿರುಗಿ ಬಂದ ಯೋವಾಷ್ ಮತ್ತು ಸಾರಾಫ್ ಇವರೇ. (ಇವು ಪೂರ್ವಕಾಲದಲ್ಲಿ ನಡೆದ ಸಂಗತಿಗಳು.)
၂၂ယောယကိမ်အစရှိသော ခေါဇေဘလူ၊ မောဘ ပြည်၌ အစိုးရသော ယောရှ၊ သာရပ်၊ ယာရှုဗိလင်တည်း။ ထိုသို့ဆိုသော် ရှေးစကားဖြစ်၏။
23 ೨೩ ಮೇಲೆ ಕಂಡ ಜನರು ಕುಂಬಾರರು. ಅವರು ನೆಟಾಯಿಮ್ ಮತ್ತು ಗೆದೇರ ಎಂಬ ಊರುಗಳಲ್ಲಿ ವಾಸಿಸುತ್ತಾ ಅರಸನ ಸೇವೆಯನ್ನು ಮಾಡುತ್ತಿದ್ದರು.
၂၃ထိုသူတို့သည် အိုးထိန်း သမား၊ လယ်ယာလုပ်သမားဖြစ်၍၊ ရှင်ဘုရင်အနားမှာ နေလျက် အမှုတော်ကို ဆောင်ရွက်ရကြ၏။
24 ೨೪ ಸಿಮೆಯೋನನ ಮಕ್ಕಳು: ನೆಮೂವೇಲ್, ಯಾಮೀನ್, ಯಾರೀಬ್, ಜೆರಹ ಮತ್ತು ಸೌಲ.
၂၄ရှိမောင်သားကား ယေမွေလ၊ ယာမိန်၊ ယာရိပ်၊ ဇေရ၊ ရှောလတည်း။
25 ೨೫ ಸೌಲನ ಮಗ ಶಲ್ಲುಮ್. ಇವನ ಮಗ ಮಿಬ್ಸಾಮ್. ಮಿಬ್ಸಾಮನ ಮಗ ಮಿಷ್ಮ.
၂၅ရှောလသား ရှလ္လုံ၊ ရှလ္လုံသားမိဘသံ၊ မိဘသံသား မိရှမ၊
26 ೨೬ ಮಿಷ್ಮಾನ ಸಂತಾನದವರು: ಇವನ ಮಗ ಹಮ್ಮೂವೇಲ್, ಇವನ ಮೊಮ್ಮಗ ಜಕ್ಕೂರ್. ಜಕ್ಕೂರನ ಮಗನು ಶಿಮ್ಮೀ.
၂၆မိရှမသား ဟမွေလ၊ ဟမွေလသား ဇက္ကုရ၊ ဇက္ကုရသား ရှိမိတည်း။
27 ೨೭ ಶಿಮ್ಮೀಗೆ ಹದಿನಾರು ಜನರು ಗಂಡು ಮಕ್ಕಳೂ ಮತ್ತು ಆರು ಜನರು ಹೆಣ್ಣು ಮಕ್ಕಳೂ ಇದ್ದರು. ಅವನ ಸಹೋದರರಿಗೆ ಹೆಚ್ಚು ಮಕ್ಕಳಿರಲಿಲ್ಲ. ಆದುದರಿಂದ ಅವರ ಕುಲವು ಯೆಹೂದ ಕುಲದಷ್ಟು ಅಭಿವೃದ್ಧಿಯಾಗಲಿಲ್ಲ.
၂၇ရှိမိသည် သားတဆယ်ခြောက်ယောက်နှင့် သမီး ခြောက်ယောက်တို့ကို မြင်၏။ သို့ရာတွင် သူ၏ညီအစ်ကို တို့၌ သားမများ။ ရှိမောင်အမျိုးသားတို့သည် ယုဒ အမျိုးသားကဲ့သို့ မပွါးမများတတ်။
28 ೨೮ ದಾವೀದನ ಆಳ್ವಿಕೆಯ ತನಕ ಅವರು ವಾಸವಾಗಿದ್ದ ಪಟ್ಟಣಗಳು ಇವು: ಬೇರ್ಷೆಬ, ಮೋಲಾದ್, ಹಚರ್ ಷೂವಾಲ,
၂၈ရှိမောင်အမျိုးတို့သည် ဒါဝိဒ်မင်းကြီးလက်ထက် တိုင်အောင် ဗေရရှေဘမြို့၊ မောလဒါမြို့၊ ဟာဇရွာလမြို့၊
29 ೨೯ ಬಿಲ್ಹ, ಎಚೆಮ್, ತೋಲಾದ್,
၂၉ဗိလဟာမြို့၊ ဧဇင်မြို့၊ ဗတာလဒ်မြို့၊
30 ೩೦ ಬೆತೂವೇಲ್, ಹೊರ್ಮ, ಚಿಕ್ಲಗ್,
၃၀ဗေသွေလမြို့၊ ဟော်မာမြို့၊ ဇိကလတ်မြို့၊
31 ೩೧ ಬೇತ್ ಮರ್ಕಾಬೋತ್, ಹಚರ್ ಸೂಸೀಮ್, ಬೆತ್ ಬಿರೀ ಮತ್ತು ಶಾರಯಿಮ್.
၃၁ဗက်မာကဗုတ်မြို့၊ ဟာဇသုသိမ်မြို့၊ ဗက်ဗိရိမြို့၊ ရှာရိမ်မြို့ တို့၌ နေကြ၏။
32 ೩೨ ಇವುಗಳಲ್ಲಿ ಸೇರಿದ ಐದು ಗ್ರಾಮಗಳು ಏಟಾಮ್, ಅಯಿನ್, ರಿಮ್ಮೋನ್, ತೋಕೆನ್ ಮತ್ತು ಆಷಾನ್.
၃၂ထိုမှတပါး၊ တောမြို့ဧတံ၊ အင်ရိမ္မုန်၊ တောခင်၊ ဧသာ၊ အာရှန်တည်းဟူသော မြို့ငါးမြို့နှင့်တကွ၊
33 ೩೩ ಅವುಗಳ ಸುತ್ತಣ ಪ್ರದೇಶದಲ್ಲಿ ಬಾಲ್ ಊರಿನ ವರೆಗಿರುವ ಗ್ರಾಮಗಳೂ ಅವರ ನಿವಾಸಸ್ಥಾನಗಳಾಗಿದ್ದವು. ಅವರು ವಂಶಾವಳಿಯ ದಾಖಲೆಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು.
၃၃ပတ်လည်၌ရှိသော ရွာအပေါင်းတို့ကို ဗာလမြို့ တိုင်အောင် ပိုင်ကြ၏။ ဤရွေ့ကား၊ ရှိမောင်အမျိုးသား နေရာနှင့် ဆွေစဉ်မျိုးဆက်ဖြစ်သတည်း။
34 ೩೪ ಮೆಷೋಬಾಬ್, ಯಮ್ಲೇಕ್, ಅಮಚ್ಯನ ಮಗನಾದ ಯೋಷ,
၃၄မေရှောဗပ်၊ ယာမလက်၊ အာမဇိသားယောရှ၊
35 ೩೫ ಯೋವೇಲ್, ಯೊಷಿಬ್ಯನ ಮಗನೂ, ಸೆರಾಯನ ಮೊಮ್ಮಗನೂ, ಅಸಿಯೇಲನ ಮರಿಮಗನೂ ಆಗಿರುವ ಯೇಹೂ,
၃၅ယောလ၊ အာသေလသား စရာယ၏ သား ယောရှိဘိ၏သား ယေဟု၊
36 ೩೬ ಎಲ್ಯೋವೇನೈ, ಯಾಕೋಬ, ಯೆಷೋಹಾಯ, ಅಸಾಯ, ಅದೀಯೇಲ್, ಯೆಸೀಮಿಯೇಲ್, ಬೆನಾಯ ಮತ್ತು
၃၆ဧလျောနဲ၊ ယာကောဘ၊ ယေရှောဟာယ၊ အသာယ၊ အဒျေလ၊ ယေသိမျေလ၊ ဗေနာယနှင့်တကွ၊
37 ೩೭ ಶೆಮಾಯನ ಮಗನಾದ ಶಿಮ್ರಿಯಿಂದ ಹುಟ್ಟಿದ ಯೆದಾಯನ ಮರಿಮಗನೂ, ಅಲ್ಲೋನನ ಮೊಮ್ಮಗನೂ, ಶಿಪ್ಫಿಯ ಮಗನು ಆದ ಜೀಜ ಎಂಬ ಹೆಸರುಳ್ಳವರು ತಮ್ಮ ತಮ್ಮ ಗೋತ್ರಗಳಲ್ಲಿ ಪ್ರಮುಖರಾಗಿದ್ದರು.
၃၇ရှေမာယ၊ ရှိမရိ၊ ယေဒါယ၊ အလ္လုန်၊ ရှိဖိတို့မှ ဆင်းသက်သော ဇိဇတည်းဟူသော၊
38 ೩೮ ಅವರ ಕುಟುಂಬಗಳು ಬೆಳೆಯುತ್ತಾ ಅಭಿವೃದ್ಧಿಯಾದವು.
၃၈နာမအားဖြင့် မှတ်သော သူတို့သည် အဆွေ အမျိုးသူကြီးဖြစ်၍၊ သူတို့အမျိုးသည် အလွန်ပွားများ သတည်း။
39 ೩೯ ಅವರು ತಮ್ಮ ಆಡು, ಕುರಿಗಳಿಗೋಸ್ಕರ ಹುಲ್ಲುಗಾವಲುಗಳನ್ನು ಹುಡುಕುತ್ತಾ ಗೆದೋರಿಗೆ ಹೋಗುವ ಕಣಿವೆಯನ್ನು ದಾಟಿ, ಆಚೆಯ ತಗ್ಗಿನ ಪೂರ್ವದಿಕ್ಕಿಗೆ ಹೋದಾಗ ಅಲ್ಲಿ ಶ್ರೇಷ್ಠವಾದ ಹಸಿರು ಹುಲ್ಲುಗಾವಲುಗಳನ್ನು ಕಂಡರು.
၃၉ထိုသူတို့သည် သိုးကျက်စားရာအရပ်ကို ရှာ၍ ချိုင့်အရှေ့ဘက်၊ ဂေဒေါ်မြို့ဝတိုင်အောင် သွားသော အခါ၊
40 ೪೦ ದೇಶವು ಎಲ್ಲಾ ಕಡೆಗಳಲ್ಲಿ ವಿಸ್ತಾರವಾಗಿದ್ದು ಸುಖ ಸಮಾಧಾನಗಳಿಂದ ಕೂಡಿತ್ತು. ಅಲ್ಲಿ ಮೊದಲಿನಿಂದಲೂ ವಾಸವಾಗಿದ್ದವರು ಹಾಮ್ಯರೇ.
၄၀မြက်ပင်ပေါများ၍ ကောင်းသောကျက်စားရာ ကျယ်ဝန်းငြိမ်ဝပ်သော အရပ်ကို တွေ့ကြ၏။ ရှေးကာလ တွင်၊ ဟာမအမျိုးသားတို့သည် ထိုအရပ်၌ နေကြ၏။
41 ೪೧ ಮೇಲೆ ಹೇಳಿದ ಪ್ರಭುಗಳು ಯೆಹೂದ ರಾಜನಾದ ಹಿಜ್ಕೀಯನ ಕಾಲದಲ್ಲಿ ಅಲ್ಲಿಗೆ ಹೋಗಿ ಆ ಹಾಮ್ಯರ ಪಾಳೆಯಗಳನ್ನೂ, ಅಲ್ಲಿ ಸಿಕ್ಕಿದ ಮೆಗೂನ್ಯರನ್ನೂ ಗೆದ್ದು, ಎಲ್ಲರನ್ನೂ ನಿರ್ನಾಮಮಾಡಿದರು. ಅವರು ತಮ್ಮ ಆಡುಕುರಿಗಳಿಗೆ ಅಲ್ಲಿ ಮೇವು ಸಿಕ್ಕಿದ್ದರಿಂದ ಅಲ್ಲೇ ವಾಸಿಸಿದರು. ಅಲ್ಲಿನ ಮೂಲನಿವಾಸಿಗಳು ಯಾರೂ ಉಳಿಯಲಿಲ್ಲ.
၄၁အထက်ဆိုခဲ့ပြီးသော သူတို့သည် ယုဒရှင်ဘုရင် ဟေဇကိ လက်ထက်၌သွား၍၊ သိုးကျက်စားစရာ ကောင်းသောအရပ်ကို တွေ့သောကြောင့်၊ အရပ်သား နေရာရွာတို့ကို လုပ်ကြံ၍၊ ရှင်းရှင်းဖျက်ဆီးပြီးမှ ယနေ့ တိုင်အောင်နေကြ၏။
42 ೪೨ ಇದಲ್ಲದೆ ಸಿಮೆಯೋನನ ಕುಲದ ಐನೂರು ಜನರು ಸೇಯೀರ್ ಪರ್ವತಕ್ಕೆ ಹೋದರು. ಇಷ್ಷೀಯ ಮಕ್ಕಳಾದ ಪೆಲಟ್ಯ, ನೆಗರ್ಯ, ರೆಫಾಯ ಮತ್ತು ಉಜ್ಜೀಯೇಲ್ ಎಂಬುವವರು ಅವರ ಮುಖ್ಯಸ್ಥರು.
၄၂တဖန် ရှိမောင်အမျိုးသားယောက်ျားငါးရာတို့ သည် ဣရှိသား၊ ဗိုလ်ပေလတိ၊ နာရိ၊ ရေဖာယ၊ ဩဇေလ နှင့်တကွ၊ စိရတောင်သို့ ချီသွား၍၊
43 ೪೩ ಅವರು ಅಮಾಲೇಕ್ಯರಲ್ಲಿ ಉಳಿದವರನ್ನು ಸಂಹರಿಸಿ ಅಲ್ಲೇ ನೆಲೆಸಿದರು.
၄၃အရင်လွတ်သော အာမလက်အမျိုးသားအကျန် အကြွင်းကို လုပ်ကြံ၍ ထိုအရပ်၌ ယနေ့တိုင်အောင် နေကြ၏။