< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 29 >
1 ೧ ತರುವಾಯ ಅರಸನಾದ ದಾವೀದನು, “ದೇವರು ನನ್ನ ಮಗನಾದ ಸೊಲೊಮೋನನನ್ನೇ ದೇವಾಲಯ ಕಟ್ಟಲು ಆರಿಸಿಕೊಂಡಿದ್ದಾನೆ. ಆದರೆ ಅವನು ಇನ್ನೂ ಎಳೇ ಪ್ರಾಯದವನು. ಮಾಡತಕ್ಕ ಕೆಲಸವೋ ವಿಶೇಷವಾದದ್ದು. ಕಟ್ಟತಕ್ಕ ಮಂದಿರವು ದೇವರಾದ ಯೆಹೋವನಿಗಾಗಿಯೇ ಹೊರತು ಮನುಷ್ಯನಿಗಾಗಿಯಲ್ಲ.
Ningĩ Mũthamaki Daudi akĩĩra kĩũngano kĩu gĩothe atĩrĩ: “Mũriũ wakwa Solomoni, ũrĩa Ngai athuurĩte, nĩ mwĩthĩ na ndarĩ na ũmenyo wa kũigana. Wĩra ũyũ nĩ mũnene, tondũ nyũmba ĩno ĩhaana ta ya ũthamaki ti ya mũndũ no nĩ ya Jehova Ngai.
2 ೨ ನಾನು ನನ್ನಿಂದಾಗುವಷ್ಟು ಪ್ರಯಾಸಪಟ್ಟು ಬಂಗಾರದ ಕೆಲಸಕ್ಕಾಗಿ ಬೇಕಾಗುವ ಬಂಗಾರ, ಬೆಳ್ಳಿಯ ಕೆಲಸಕ್ಕಾಗಿ ಬೇಕಾಗುವ ಬೆಳ್ಳಿ, ತಾಮ್ರದ ಕೆಲಸಕ್ಕಾಗಿ ಬೇಕಾಗುವ ತಾಮ್ರ, ಕಬ್ಬಿಣದ ಕೆಲಸಕ್ಕಾಗಿ ಬೇಕಾಗುವ ಕಬ್ಬಿಣ, ಮರದ ಕೆಲಸಕ್ಕಾಗಿ ಬೇಕಾಗುವ ಮರ ಇವುಗಳನ್ನೂ, ಗೋಮೇಧಿಕ ರತ್ನ, ಕೆತ್ತುವುದಕ್ಕೆ ಬೇಕಾಗುವ ರತ್ನ, ಕೆಂಪು ಹರಳು, ವಿಚಿತ್ರ ವರ್ಣದ ಕಲ್ಲು, ಎಲ್ಲಾ ತರದ ಮಣಿ, ಚಂದ್ರಕಾಂತಶಿಲೆ ಇವುಗಳನ್ನೂ ನನ್ನ ದೇವರ ಮಂದಿರಕ್ಕೋಸ್ಕರ ರಾಶಿ ರಾಶಿಯಾಗಿ ಸಂಗ್ರಹಿಸಿದ್ದೇನೆ.
Nĩnjigithĩtie indo na ũhoti wakwa wothe nĩ ũndũ wa hekarũ ya Ngai wakwa, ngaiga thahabu nĩ ũndũ wa gũthondeka indo cia thahabu, na betha nĩ ũndũ wa gũthondeka indo cia betha, na gĩcango nĩ ũndũ wa gũthondeka indo cia gĩcango, na kĩgera nĩ ũndũ wa gũthondeka indo cia kĩgera, na mbaũ nĩ ũndũ wa gũthondeka indo cia mbaũ, o na tũhiga tũrĩa twĩtagwo onigithi tũrĩa tũtheecagĩrĩrwo indo-inĩ, na tũhiga tũrĩa tũhenagia twa kũgemia nyũmba, na tũhiga twa rangi wa mĩthemba mĩingĩ, na tũhiga twa goro twa mĩthemba mĩingĩ, na mahiga ma nyaigĩ ma mũthemba ũrĩa mwega, indo icio ciothe ngaigithia irĩ nyingĩ mũno.
3 ೩ ನಾನು ಪವಿತ್ರಾಲಯಕ್ಕೆ ಇವುಗಳನ್ನೆಲ್ಲಾ ಸಂಗ್ರಹಿಸಿದ್ದಲ್ಲದೆ ನನ್ನ ದೇವರ ಆಲಯದ ಮೇಲಣ ಅನುರಾಗದಿಂದ ಅದಕ್ಕೊಸ್ಕರ ನನ್ನ ಸ್ವಂತ ಸೊತ್ತಿನಿಂದ
Makĩria ma ũguo, harĩ kwĩrutĩra gwakwa igũrũ rĩa hekarũ ya Ngai wakwa nĩngũheana kĩgĩĩna gĩakwa mwene gĩa thahabu na betha nĩ ũndũ wa hekarũ ya Ngai wakwa, na icio ngũciheana nyongerere kĩrĩa kĩngĩ njigithĩtie nĩ ũndũ wa hekarũ ĩno theru:
4 ೪ ಮೂರು ಸಾವಿರ ತಲಾಂತು ಓಫೀರ್ ದೇಶದ ಬಂಗಾರವನ್ನೂ, ಏಳು ಸಾವಿರ ತಲಾಂತು ಚೊಕ್ಕ ಬೆಳ್ಳಿಯನ್ನೂ ಕೊಡುತ್ತೇನೆ. ಈ ಬೆಳ್ಳಿ ಬಂಗಾರದಿಂದ ಆಲಯದ ಗೋಡೆಗಳನ್ನು ಹೊದಿಸಬೇಕು.
ngũheana taranda ngiri ithatũ cia thahabu, o thahabu ĩrĩa ya Ofiri, na taranda ngiri mũgwanja cia betha ĩrĩa therie nĩ ũndũ wa kũgemia thingo cia nyũmba,
5 ೫ ಅಕ್ಕಸಾಲಿಗರು ಮಾಡಬಹುದಾದ ಎಲ್ಲಾ ತರದ ಬೆಳ್ಳಿ ಬಂಗಾರದ ಸಾಮಾನುಗಳನ್ನು ಮಾಡಿಸಬೇಕು. ಈ ಹೊತ್ತು ಉದಾರಹಸ್ತದಿಂದ ಯೆಹೋವನಿಗೋಸ್ಕರ ಕಾಣಿಕೆಯನ್ನರ್ಪಿಸುವುದಕ್ಕೆ ಯಾರಿಗೆ ಮನಸ್ಸಿದೆಯೋ ಅವರು ಮುಂದೆ ಬರಲಿ” ಎಂದು ನೆರೆದ ಸಭೆಗೆ ಹೇಳಿದನು.
o na nĩ ũndũ wa wĩra wa thahabu na indo cia wĩra wa betha ũrĩa wothe ũkaarutwo nĩ mabundi. Na rĩrĩ, nũũ ũkwĩĩamũrĩra Jehova ũmũthĩ na kwĩyendera?”
6 ೬ ಆಗ ಇಸ್ರಾಯೇಲ್ ಗೋತ್ರಕುಟುಂಬಗಳ ಪ್ರಧಾನರೂ, ಸಹಸ್ರಾಧಿಪತಿಗಳೂ, ಅರಸನ ಕೆಲಸದವರ ಮುಖ್ಯಸ್ಥರೂ, ದೇವಾಲಯದ ಕೆಲಸಕ್ಕೋಸ್ಕರ ಸ್ವ ಇಚ್ಛೆಯಿಂದ
Hĩndĩ ĩyo atongoria a nyũmba, na anene a mĩhĩrĩga ya Isiraeli, na anene a ikundi cia ngiri ngiri na anene a ikundi cia igana igana na anene arĩa maarũgamagĩrĩra wĩra wa mũthamaki makĩheana indo na kwĩyendera.
7 ೭ ಐದು ಸಾವಿರ ತಲಾಂತು, ಹತ್ತು ಸಾವಿರ ಪವನು ಬಂಗಾರವನ್ನೂ, ಹತ್ತು ಸಾವಿರ ತಲಾಂತು ಬೆಳ್ಳಿಯನ್ನೂ, ಹದಿನೆಂಟು ಸಾವಿರ ತಲಾಂತು ತಾಮ್ರವನ್ನೂ, ಒಂದು ಲಕ್ಷ ತಲಾಂತು ಕಬ್ಬಿಣವನ್ನೂ ಕೊಟ್ಟರು.
Nĩ ũndũ wa wĩra wa hekarũ ya Ngai nĩmaheanire taranda ngiri ithano, na dariki ngiri ikũmi cia thahabu, na taranda ngiri ikũmi cia betha, na taranda ngiri ikũmi na inyanya cia gĩcango, na taranda ngiri igana rĩmwe cia kĩgera.
8 ೮ ರತ್ನಗಳನ್ನು ಹೊಂದಿದ್ದವರು ಅವುಗಳನ್ನು ಯೆಹೋವನ ಆಲಯದ ಭಂಡಾರಕ್ಕೋಸ್ಕರ ಗೇರ್ಷೋನ್ಯನಾದ ಯೆಹೀಯೇಲನ ವಶಕ್ಕೆ ಕೊಟ್ಟರು.
Mũndũ o wothe warĩ na tũhiga twa goro nĩatũheanire thĩinĩ wa kĩgĩĩna kĩa hekarũ ya Jehova kĩrĩa kĩamenyagĩrĩrwo nĩ Jehieli ũrĩa Mũgerishoni.
9 ೯ ಅವರು ಪೂರ್ಣಮನಸ್ಸಿನಿಂದಲೂ, ಸ್ವ ಇಚ್ಛೆಯಿಂದಲೂ ಯೆಹೋವನಿಗೆ ಕಾಣಿಕೆ ನೀಡಿದ್ದನ್ನು ನೋಡಿ ಜನರೆಲ್ಲರೂ ಸಂತೋಷಪಟ್ಟರು. ಅರಸನಾದ ದಾವೀದನಿಗೂ ಬಹಳ ಸಂತೋಷವಾಯಿತು.
Andũ nĩmakenirio nĩ ũrĩa atongoria ao maamũkĩire ũhoro ũcio na kwĩyendera, tondũ nĩmarutĩire Jehova indo na ngoro yao yothe matekũringĩrĩrio. Mũthamaki Daudi o nake nĩakenire mũno.
10 ೧೦ ಅನಂತರ ದಾವೀದನು ನೆರೆದ ಸಭೆಯ ಮುಂದೆ ಯೆಹೋವನನ್ನು ಸ್ತುತಿಸಿ ಹೇಳಿದ್ದೇನೆಂದರೆ, “ನಮ್ಮ ಪಿತೃವಾದ ಇಸ್ರಾಯೇಲಿನ ದೇವರೇ. ಯೆಹೋವನೇ, ಯುಗಯುಗಾಂತರಗಳಲ್ಲಿ ನಿನಗೆ ಕೊಂಡಾಟವಾಗಲಿ.
Daudi nĩagoocire Jehova arĩ mbere ya kĩũngano kĩu gĩothe, akiuga atĩrĩ, “Ũrogoocwo wee, o Wee Jehova, Ngai wa ithe witũ Isiraeli, kuuma tene nginya tene.
11 ೧೧ ಯೆಹೋವನೇ, ಎಲ್ಲಾ ಮಹಿಮೆ, ವೈಭವ, ಪರಾಕ್ರಮ, ಪ್ರಭಾವ, ಪ್ರತಾಪ, ಪ್ರತಿಭೆ ಎಲ್ಲವೂ ನಿನ್ನವೆ. ಭೂಮ್ಯಾಕಾಶಗಳಲ್ಲಿ ಇರುವದೆಲ್ಲಾ ನಿನ್ನದೇ. ಯೆಹೋವನೇ ರಾಜ್ಯವು ನಿನ್ನದು. ನೀನು ಮಹೋನ್ನತನಾಗಿ ಸರ್ವವನ್ನು ಆಳುವವನಾಗಿರುತ್ತೀ.
Wee Jehova-rĩ, ũnene, na hinya, na riiri, na wathani, na ũkengi nĩ ciaku, nĩgũkorwo kĩndũ o gĩothe kĩrĩ igũrũ na thĩ nĩ gĩaku. Wee Jehova, ũthamaki nĩ waku; nĩũtũũgĩrĩtio, ũkanenehio gũkĩra indo ciothe.
12 ೧೨ ಪ್ರಭಾವ ಐಶ್ವರ್ಯಗಳು ನಿನ್ನ ಸನ್ನಿಧಿಯಿಂದ ಬರುತ್ತವೆ. ನೀನು ಸರ್ವಾಧಿಕಾರಿಯು. ಬಲಪರಾಕ್ರಮಗಳು ನಿನ್ನ ಹಸ್ತದಲ್ಲಿರುತ್ತವೆ. ಎಲ್ಲಾ ಮಹಿಮೆಗೂ, ಶಕ್ತಿಗೂ ನೀನೇ ಮೂಲನು.
Ũtonga na gĩtĩĩo ciumaga kũrĩ we; Wee nĩwe wathaga indo ciothe. Hinya na ũhoti wa gũtũũgĩria o na kũhe andũ othe hinya irĩ moko-inĩ maku.
13 ೧೩ ಆದುದರಿಂದ ನಮ್ಮ ದೇವರೇ ನಾವು ನಿನಗೆ ಕೃತಜ್ಞತಾಸ್ತುತಿಮಾಡುತ್ತಾ, ನಿನ್ನ ಪ್ರಭಾವವುಳ್ಳ ನಾಮವನ್ನು ಕೀರ್ತಿಸುತ್ತೇವೆ.
Na rĩrĩ, Ngai witũ, nĩtũgũgũcookeria ngaatho, na tũkagooca rĩĩtwa rĩaku rĩrĩ riiri.
14 ೧೪ ನಾವು ಸ್ವ ಇಚ್ಛೆಯಿಂದ ನಿನಗೆ ಕಾಣಿಕೆಗಳನ್ನು ಸಮರ್ಪಿಸಲು ನಾನಾಗಲಿ, ನನ್ನ ಪ್ರಜೆಗಳಾಗಲಿ ಸಮರ್ಥರಲ್ಲ. ಸಮಸ್ತವೂ ನಿನ್ನಿಂದಲೇ ಸಾಧ್ಯವಾಯಿತು, ನೀನು ಕೊಟ್ಟದ್ದನ್ನೇ ನಿನಗೆ ಕೊಟ್ಟೆವು.
“No niĩ ngĩrĩ ũ, nao andũ akwa-rĩ, makĩrĩ a, atĩ no tũhote kũheana na ũtaana ta ũyũ? Indo ciothe ciumaga kũrĩ we, na kĩrĩa twakũhe no kĩrĩa kiumĩte moko-inĩ maku.
15 ೧೫ ನಾವು ನಿನ್ನ ದೃಷ್ಟಿಯಲ್ಲಿ ಪರದೇಶಿಗಳೂ, ನಮ್ಮ ಪೂರ್ವಿಕರೆಲ್ಲರಂತೆ ಪ್ರವಾಸಿಗಳೂ ಆಗಿದ್ದೇವೆ. ನಮ್ಮ ಆಯುಷ್ಕಾಲವು ನೆರಳಿನಂತಿದೆ. ನಮಗೆ ಯಾವ ನಿರೀಕ್ಷೆಯೂ ಇಲ್ಲ.
Ithuĩ tũrĩ ageni na agendi maitho-inĩ maku, o ta ũrĩa maithe maitũ ma tene othe maatariĩ. Matukũ maitũ gũkũ thĩ matariĩ o ta kĩĩruru, na gũtirĩ mwĩhoko wa gũtũũra.
16 ೧೬ ನಮ್ಮ ದೇವರಾದ ಯೆಹೋವನೇ, ನಿನ್ನ ಪರಿಶುದ್ಧ ನಾಮಕ್ಕೋಸ್ಕರ ಆಲಯ ಕಟ್ಟಿಸಬೇಕೆಂದು ಸಂಗ್ರಹಿಸಿಟ್ಟಿರುವ ಈ ಎಲ್ಲಾ ವಸ್ತುಗಳು ನಿನ್ನಿಂದಲೇ ನಮಗೆ ದೊರಕಿದವು. ಇವೆಲ್ಲಾ ನಿನ್ನವೇ.
Wee Jehova Ngai witũ, ũingĩ wa indo ici twaruta cia gũgwakĩra hekarũ nĩ ũndũ wa Rĩĩtwa rĩaku Itheru ciumĩte guoko-inĩ gwaku, na ciothe no ciaku.
17 ೧೭ ನನ್ನ ದೇವರೇ, ನೀನು ಹೃದಯವನ್ನು ಶೋಧಿಸುವವನೂ, ಯಥಾರ್ಥಚಿತ್ತರನ್ನು ಮೆಚ್ಚುವವನೂ ಆಗಿದ್ದಿ ಎಂಬುದನ್ನು ಬಲ್ಲೆನು. ನಾನಂತೂ ಯಥಾರ್ಥಮನಸ್ಸಿನಿಂದಲೂ, ಸ್ವ ಇಚ್ಛೆಯಿಂದಲೂ ಇದನ್ನೆಲ್ಲಾ ಕೊಟ್ಟಿದ್ದೇನೆ. ಇಲ್ಲಿ ಕೂಡಿರುವ ನಿನ್ನ ಪ್ರಜೆಗಳೂ ಸ್ವ ಇಚ್ಛೆಯಿಂದಲೇ ಕಾಣಿಕೆಯನ್ನು ಅರ್ಪಿಸಿದ್ದಾರೆ ಎಂದು ನೋಡಿ ಸಂತೋಷಿಸುತ್ತೇನೆ.
Niĩ nĩnjũũĩ atĩ Wee Ngai wakwa nĩũtuĩragia ngoro, na nĩũkenagio nĩ ũrũngĩrĩru wa ngoro. Indo ici ciothe ndĩciheanĩte na kwĩyendera na wĩhokeku. Na rĩu ndĩ na gĩkeno nĩ ũndũ wa kwĩonera ũrĩa andũ aya aku marĩ haha makũrutĩire indo na wendo.
18 ೧೮ ನಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್ ಮತ್ತು ಇಸ್ರಾಯೇಲರ ದೇವರೇ, ಯೆಹೋವನೇ, ನಿನ್ನ ಪ್ರಜೆಗಳಲ್ಲಿ ಇಂಥಾ ಮನಸ್ಸು ಯಾವಾಗಲೂ ಇರುವಂತೆ ಮಾಡು. ನಿನ್ನಲ್ಲಿ ಭಯಭಕ್ತಿ ಉಳ್ಳವರಾಗಿರುವುದಕ್ಕೆ ಅವರಿಗೆ ಸ್ಥಿರಚಿತ್ತವನ್ನು ಅನುಗ್ರಹಿಸು.
Wee Jehova, Ngai wa maithe maitũ Iburahĩmu, na Isaaka na Isiraeli, tũũria wendo ũyũ ũrĩ ngoro-inĩ cia andũ aku nginya tene na ũtũme matũũre magwathĩkagĩra.
19 ೧೯ ನನ್ನ ಮಗನಾದ ಸೊಲೊಮೋನನು ನಿನ್ನ ಆಜ್ಞಾವಿಧಿಗಳನ್ನು ಕೈಕೊಳ್ಳುತ್ತಿರುವಂತೆಯೂ, ನಾನು ಯಾವ ಮಂದಿರಕ್ಕೋಸ್ಕರ ಇಷ್ಟನ್ನೆಲ್ಲಾ ಸಿದ್ಧಪಡಿಸಿರುತ್ತೇನೋ ಆ ನಿನ್ನ ಮಂದಿರವನ್ನು ಅವನು ಯಥಾರ್ಥಮನಸ್ಸಿನಿಂದ ಕಟ್ಟಿಸಿ ತೀರಿಸುವಂತೆಯೂ ದಯಪಾಲಿಸು” ಎಂದು ಪ್ರಾರ್ಥಿಸಿದನು.
Na ũhotithie mũriũ wakwa Solomoni kwĩrutĩra na ngoro yake yothe, kũmenyagĩrĩra maathani maku, na maũndũ marĩa wee wendaga o na kĩrĩra gĩaku kĩa watho wa kũrũmĩrĩrwo, na ekage maũndũ mothe nĩguo aake mwako wa nyũmba ĩno ĩhaana ta nyũmba ya ũthamaki, ĩrĩa niĩ njigithĩirie indo ciayo.”
20 ೨೦ ತರುವಾಯ ದಾವೀದನು ನೆರೆದ ಸಭೆಯವರಿಗೆಲ್ಲಾ, “ನಿಮ್ಮ ದೇವರಾದ ಯೆಹೋವನನ್ನು ಸ್ತುತಿಸಿರಿ” ಎಂದು ಹೇಳಲು ಸಮೂಹದವರೆಲ್ಲರೂ ತಮ್ಮ ಪೂರ್ವಿಕರ ದೇವರಾದ ಯೆಹೋವನನ್ನು ಸ್ತುತಿಸುತ್ತಾ ತಲೆಬಾಗಿ ದೇವರಿಗೂ ಮತ್ತು ಅರಸನಿಗೂ ನಮಸ್ಕರಿಸಿದರು.
Ningĩ Daudi akĩĩra kĩũngano gĩothe atĩrĩ, “Goocai Jehova Ngai wanyu.” Nĩ ũndũ ũcio andũ othe makĩgooca Jehova Ngai wa maithe mao; makĩinamĩrĩra, na makĩĩgũithia thĩ mbere ya Jehova na mbere ya mũthamaki.
21 ೨೧ ಮರುದಿನ ಅವರು ಯೆಹೋವನಿಗೆ ಯಜ್ಞಗಳನ್ನೂ, ಸರ್ವಾಂಗಹೋಮಗಳನ್ನೂ ಸಮರ್ಪಿಸಿದರು. ಅವರು ಆ ದಿನದ ಯಜ್ಞಕ್ಕಾಗಿ ಸಾವಿರ ಹೋರಿಗಳನ್ನೂ, ಸಾವಿರ ಟಗರುಗಳನ್ನೂ, ಸಾವಿರ ಕುರಿಮರಿಗಳನ್ನೂ ವಧಿಸಿದರು. ಇವುಗಳೊಡನೆ ಅರ್ಪಿಸತಕ್ಕ ಪಾನದ್ರವ್ಯಗಳನ್ನೂ ಇಸ್ರಾಯೇಲರೆಲ್ಲರಿಗೆ ಸಾಕಾಗುವಷ್ಟು ಸಮಾಧಾನಯಜ್ಞಗಳನ್ನೂ ಸಮರ್ಪಿಸಿ, ಯೆಹೋವನ ಸನ್ನಿಧಿಯಲ್ಲಿ ಮಹಾ ಸಂತೋಷದಿಂದ ಅನ್ನಪಾನಗಳನ್ನು ತೆಗೆದುಕೊಂಡರು.
Mũthenya ũyũ ũngĩ makĩrutĩra Jehova magongona na makĩmũrutĩra maruta ma njino, ta ũũ: ndegwa ngiri ĩmwe, na ndũrũme ngiri ĩmwe na tũtũrũme ngiri ĩmwe, o hamwe na maruta mao ma indo cia kũnyuuo na magongona mangĩ maingĩ nĩ ũndũ wa andũ a Isiraeli othe.
22 ೨೨ ಜನರು ದಾವೀದನ ಮಗನಾದ ಸೊಲೊಮೋನನನ್ನು ಪುನಃ ಅರಸನನ್ನಾಗಿ ಆರಿಸಿಕೊಂಡು ಅವನನ್ನು ರಾಜನನ್ನಾಗಿಸಿವುದಕ್ಕೂ, ಚಾದೋಕನನ್ನು ಯಾಜಕನಾಗುವುದಕ್ಕೂ ಅಭಿಷೇಕಿಸಿ ಯೆಹೋವನಿಗೋಸ್ಕರ ಪ್ರತಿಷ್ಠಿಸಿದರು.
Makĩrĩa na makĩnyua marĩ na gĩkeno kĩnene mũthenya ũcio marĩ hau mbere ya Jehova. Ningĩ makĩamũkĩra Solomoni mũrũ wa Daudi arĩ mũthamaki hĩndĩ ya keerĩ, na makĩmũitĩrĩria maguta mbere ya Jehova atuĩke wa kũmathamakĩra, nake Zadoku atuĩke mũthĩnjĩri-Ngai.
23 ೨೩ ಅಂದಿನಿಂದ ಸೊಲೊಮೋನನು ತನ್ನ ತಂದೆಯಾದ ದಾವೀದನಿಗೆ ಬದಲು ಅರಸನಾಗಿ ಯೆಹೋವನ ಸಿಂಹಾಸನದಲ್ಲಿ ಕುಳಿತುಕೊಂಡು ವೃದ್ಧಿಯಾಗುತ್ತಾ ಬಂದನು. ಅರಸನಾದ ಸೊಲೊಮೋನನಿಗೆ ಇಸ್ರಾಯೇಲರೆಲ್ಲರೂ ವಿಧೇಯರಾಗಿ ನಡೆಯುವವರಾದರು.
Nĩ ũndũ ũcio Solomoni agĩikarĩra gĩtĩ gĩa ũthamaki kĩa Jehova, na agĩtuĩka mũthamaki ithenya rĩa ithe Daudi. Nake akĩgaacĩra na agĩathĩkĩrwo Isiraeli guothe.
24 ೨೪ ಎಲ್ಲಾ ಅಧಿಪತಿಗಳೂ ದಂಡಿನವರೂ ಅರಸನಾದ ದಾವೀದನ ಎಲ್ಲಾ ಮಕ್ಕಳೂ ಅವನಿಗೆ ಅಧೀನರಾದರು.
Anene othe, na andũ arĩa maarĩ njamba, hamwe na ariũ a Mũthamaki Daudi othe magĩtĩkĩra Mũthamaki Solomoni amaathage.
25 ೨೫ ಯೆಹೋವನು ಇಸ್ರಾಯೇಲರೆಲ್ಲರಿಗೆ ಗೊತ್ತಾಗುವಂತೆ ಸೊಲೊಮೋನನನ್ನು ಅಭಿವೃದ್ಧಿಪಡಿಸಿ ಅವನಿಗಿಂತ ಮೊದಲು ಇಸ್ರಾಯೇಲರನ್ನು ಆಳಿದ ಎಲ್ಲಾ ಅರಸರ ವೈಭವಕ್ಕಿಂತಲೂ ಹೆಚ್ಚಿನ ವೈಭವವನ್ನು ಅವನಿಗೆ ಅನುಗ್ರಹಿಸಿದನು.
Jehova agĩtũũgĩria Solomoni mũno maitho-inĩ ma andũ a Isiraeli othe, na akĩmũhe ũthamaki ũrĩ na riiri ũtaahetwo mũthamaki ũngĩ wa Isiraeli mbere ĩyo.
26 ೨೬ ಹೀಗೆ ಇಷಯನ ಮಗನಾದ ದಾವೀದನು ಇಸ್ರಾಯೇಲರೆಲ್ಲರ ಅರಸನಾಗಿ ಆಳ್ವಿಕೆ ಮಾಡಿದನು.
Daudi mũrũ wa Jesii aarĩ mũthamaki wa Isiraeli guothe.
27 ೨೭ ಅವನು ಹೆಬ್ರೋನಿನಲ್ಲಿ ಏಳು ವರ್ಷವೂ, ಯೆರೂಸಲೇಮಿನಲ್ಲಿ ಮೂವತ್ತಮೂರು ವರ್ಷವೂ ಒಟ್ಟಿಗೆ ನಲ್ವತ್ತು ವರ್ಷ ಆಳಿದನು.
Aathamakĩire Isiraeli mĩaka mĩrongo ĩna, mĩaka mũgwanja yayo agĩthamaka arĩ Hebironi, nayo mĩaka mĩrongo ĩtatũ na ĩtatũ agĩthamaka arĩ Jerusalemu.
28 ೨೮ ಅವನು ಐಶ್ವರ್ಯ, ಮಾನ, ದೀರ್ಘಾಯುಷ್ಯ ಇವುಗಳನ್ನು ಅನುಭವಿಸಿದ ನಂತರ ತುಂಬಾ ವೃದ್ಧನಾಗಿ ಮರಣ ಹೊಂದಿದನು. ಅವನಿಗೆ ಬದಲಾಗಿ ಅವನ ಮಗನಾದ ಸೊಲೊಮೋನನು ಅರಸನಾದನು.
Aakuire arĩ mũkũrũ mũno, arĩkĩtie gũkenera gũtũũra gwake matukũ maingĩ, na arĩ mũtongu, na agatĩĩo. Mũriũ Solomoni nĩwe wathamakire ithenya rĩake.
29 ೨೯ ದಾವೀದನ ಪೂರ್ವೋತ್ತರಚರಿತ್ರೆ ಅವನ ಆಳ್ವಿಕೆ, ಪರಾಕ್ರಮ ಅವನಿಗೂ ಇಸ್ರಾಯೇಲರಿಗೂ, ಸುತ್ತಣ ರಾಜ್ಯಗಳಿಗೂ ಸಂಭವಿಸಿದ ಸುಖದುಃಖ ಇವುಗಳ ವೃತ್ತಾಂತ.
Naho ha maũndũ marĩa makoniĩ wathani wa Mũthamaki Daudi kuuma kĩambĩrĩria nginya mũthia, nĩmandĩkĩtwo thĩinĩ wa maandĩko ma Samũeli ũrĩa warĩ muoni-maũndũ, na maandĩko-inĩ ma Nathani ũrĩa mũnabii na maandĩko-inĩ ma Gadi ũrĩa muoni-maũndũ,
30 ೩೦ ದೇವದರ್ಶಿಯಾದ ಸಮುವೇಲ, ಪ್ರವಾದಿಯಾದ ನಾತಾನ, ದೇವದರ್ಶಿಯಾದ ಗಾದ ಇವರ ಚರಿತ್ರೆಗಳಲ್ಲಿಯೂ ಬರೆದಿರುತ್ತದೆ.
hamwe na maũndũ mothe marĩa maakoniĩ ũthamaki wake na ũhoti ũrĩa aarĩ naguo, na ũrĩa maũndũ marĩa maamũthiũrũrũkĩirie maatariĩ na ma Isiraeli na mothamaki ma mabũrũri marĩa mangĩ mothe.