< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 28 >
1 ೧ ದಾವೀದನು ಇಸ್ರಾಯೇಲರ ಎಲ್ಲಾ ಗೋತ್ರಗಳ ಅಧಿಪತಿಗಳನ್ನು, ಅರಸನ ಸೇವೆಮಾಡುತ್ತಿರುವ ವರ್ಗನಾಯಕರು, ಸಹಸ್ರಾಧಿಪತಿಗಳು, ಶತಾಧಿಪತಿಗಳು ಅರಸನ ದನಕುರಿ ಮೊದಲಾದ ಸಂಪತ್ತಿನ ಮೇಲ್ವಿಚಾರಕರು, ರಾಜಪುತ್ರ ಪಾಲಕರು, ಕಂಚುಕಿಗಳು, ಯುದ್ಧವೀರರು ಹಾಗೂ ಎಲ್ಲಾ ಪ್ರಧಾನರನ್ನು ಯೆರೂಸಲೇಮಿಗೆ ಕರೆಯಿಸಿದನು.
Dafidi pe gbogbo àwọn oníṣẹ́ ti Israẹli láti péjọ ní Jerusalẹmu. Àwọn ìjòyè lórí àwọn ẹ̀yà, àwọn alákòóso ìpín nínú iṣẹ́ bí ọba, àwọn alákòóso ẹgbẹẹgbẹ̀rún àti àwọn alákòóso ọ̀rọ̀ọ̀rún àti àwọn oníṣẹ́ tí ó wà ní ìdí bíbojútó gbogbo àwọn ẹrù àti ohun ọ̀sìn tí ó jẹ́ ti ọba àti àwọn ọmọ rẹ̀ pẹ̀lú ààfin àwọn oníṣẹ́ ààfin, àwọn ọkùnrin alágbára àti gbogbo àwọn ògbójú jagunjagun lápapọ̀.
2 ೨ ಅವರು ಸೇರಿ ಬಂದಾಗ ಅರಸನಾದ ದಾವೀದನು ಎದ್ದು ನಿಂತು ಅವರಿಗೆ ಹೇಳಿದ್ದೇನೆಂದರೆ, “ನನ್ನ ಸಹೋದರರೇ, ನನ್ನ ಪ್ರಜೆಗಳೇ, ನನ್ನ ಮಾತನ್ನು ಕೇಳಿರಿ, ಯೆಹೋವನ ಒಡಂಬಡಿಕೆಯ ಮಂಜೂಷಕ್ಕೋಸ್ಕರ ನಮ್ಮ ದೇವರ ಪಾದಪೀಠಕ್ಕೋಸ್ಕರ ಆಲಯವನ್ನು ಕಟ್ಟಬೇಕೆಂದು ಮನಸ್ಸು ಮಾಡಿ ಅದಕ್ಕಾಗಿ ಎಲ್ಲವನ್ನೂ ಸಿದ್ಧಪಡಿಸಿದೆನು.
Ọba Dafidi dìde dúró ní ẹsẹ̀ rẹ̀, o sì wí pé, “Fetísílẹ̀ sí mi, ẹ̀yin ará mi àti ẹ̀yin ènìyàn mi. Èmi ní o ni lọ́kàn mi láti kọ́ ilé gẹ́gẹ́ bí ibi ìsinmi fún àpótí ẹ̀rí tí Olúwa fún àpótí ìtìsẹ̀ Ọlọ́run wa, èmi sì gbèrò láti kọ́ ọ.
3 ೩ ಆಗ ದೇವರು ನನಗೆ, ‘ನೀನು ಮಹಾಯುದ್ಧಗಳನ್ನು ಮಾಡಿ ಬಹಳ ರಕ್ತವನ್ನು ಸುರಿಸಿದವನು, ನನ್ನ ಹೆಸರಿಗೋಸ್ಕರ ಆಲಯವನ್ನು ಕಟ್ಟಬಾರದು’ ಎಂದು ಹೇಳಿದನು.
Ṣùgbọ́n Ọlọ́run sọ fún mi pé, ‘Ìwọ kò gbọdọ̀ kọ́ ilé fún orúkọ mi, nítorí ìwọ jẹ́ jagunjagun, ìwọ sì ti tàjẹ̀ sílẹ̀.’
4 ೪ ಇಸ್ರಾಯೇಲರ ದೇವರಾದ ಯೆಹೋವನು ತನ್ನ ತಂದೆಯ ಮನೆಯವರೆಲ್ಲರಲ್ಲಿ ನನ್ನನ್ನೇ ಸದಾ ಇಸ್ರಾಯೇಲರ ಅರಸನಾಗುವುದಕ್ಕೆ ಆರಿಸಿಕೊಂಡನು. ಆತನು ಯೆಹೂದ ಕುಲವು ರಾಜಕುಲವಾಗಬೇಕೆಂದು ನೇಮಿಸಿ, ಆ ಕುಲದಲ್ಲಿ ನನ್ನ ತಂದೆಯ ಕುಟುಂಬವನ್ನು ಆರಿಸಿಕೊಂಡನು. ನನ್ನ ತಂದೆಯ ಎಲ್ಲಾ ಮಕ್ಕಳಲ್ಲಿ ನನ್ನನ್ನೇ ಮೆಚ್ಚಿ ಇಸ್ರಾಯೇಲ್ಯರ ಅರಸನನ್ನಾಗಿ ಮಾಡಿದನು.
“Síbẹ̀ Olúwa, Ọlọ́run Israẹli yàn mí láti gbogbo ìdílé láti jẹ́ ọba lórí Israẹli, títí láé. Ó yan Juda gẹ́gẹ́ bí olórí, àti láti ilé Juda, ó yan ìdílé mi, àti láti ọ̀dọ̀ àwọn ọmọ baba à mí, ó tẹ́ Ẹ lọ́rùn láti fi mí ṣe ọba lórí gbogbo Israẹli.
5 ೫ ನನಗೆ ದಯಪಾಲಿಸಿದ ಅನೇಕ ಮಕ್ಕಳಲ್ಲಿ ನನ್ನ ಮಗನಾದ ಸೊಲೊಮೋನನನ್ನು ಯೆಹೋವನ ರಾಜ್ಯ ಸಿಂಹಾಸನವಾಗಿರುವ ಇಸ್ರಾಯೇಲ್ ಸಿಂಹಾಸನದ ಮೇಲೆ ಕುಳ್ಳಿರಿಸುವುದಕ್ಕೋಸ್ಕರ ಆರಿಸಿಕೊಂಡನು.
Nínú gbogbo àwọn ọmọ mi pẹ̀lú Olúwa ti fún mi ní púpọ̀, ó ti yan ọmọ mi Solomoni láti jókòó lórí ìtẹ́ ìjọba ti Olúwa lórí Israẹli.
6 ೬ ಆತನು ನನಗೆ, ‘ನಿನ್ನ ಮಗನಾದ ಸೊಲೊಮೋನನೇ ನನ್ನ ಆಲಯವನ್ನೂ, ಅದರ ಪ್ರಾಕಾರಗಳನ್ನೂ ಕಟ್ಟಿಸುವನು. ಅವನು ನನಗೆ ಮಗನಾಗಿರಬೇಕೆಂದು ಅವನನ್ನು ಆರಿಸಿಕೊಂಡಿದ್ದೇನೆ. ನಾನು ಅವನಿಗೆ ತಂದೆಯಾಗಿರುವೆನು.
Ó wí fún mi pé, Solomoni ọmọ rẹ ni ẹni tí yóò kọ́ ilé mi àti àwọn ààfin mi, nítorí tí èmi ti yàn án láti ṣe ọmọ mi èmi yóò sì jẹ́ baba a rẹ̀.
7 ೭ ಅವನು ಈಗಿನಂತೆ ಯಾವಾಗಲೂ ನನ್ನ ಆಜ್ಞಾವಿಧಿಗಳನ್ನು ಕೈಕೊಂಡು ನಡೆಯುವುದಾದರೆ ಅವನ ರಾಜ್ಯವನ್ನು ಸದಾಕಾಲವೂ ಸ್ಥಿರಪಡಿಸುವೆನು ಎಂದು ಹೇಳಿದ್ದಾನೆ.’
Èmi yóò fi ìdí ìjọba rẹ̀ kalẹ̀ títí láé tí kò bá kọ̀ láti gbé àṣẹ àti òfin mi jáde, gẹ́gẹ́ bí a ti ṣe é ní àsìkò yìí.
8 ೮ ಆದುದರಿಂದ ನಿಮ್ಮ ದೇವರಾದ ಯೆಹೋವನ ಎಲ್ಲಾ ಆಜ್ಞೆಗಳನ್ನು ಧ್ಯಾನಿಸಿ ಕೈಕೊಳ್ಳಬೇಕೆಂದು ಯೆಹೋವನ ಸಭೆಯಾದ ಸಮಸ್ತ ಇಸ್ರಾಯೇಲರ ಎದುರಿನಲ್ಲಿ ನಮ್ಮ ದೇವರಿಗೆ ಕೇಳಿಸುವಂತೆ ನಿಮ್ಮನ್ನು ಎಚ್ಚರಿಸುತ್ತೇನೆ. ಹಾಗೆ ಮಾಡಿದರೆ ಈ ಒಳ್ಳೆಯ ದೇಶವು ಸದಾಕಾಲ ನಿಮ್ಮ ಮತ್ತು ನಿಮ್ಮ ಸಂತಾನದವರ ಸ್ವತ್ತಾಗಿರುವುದು.
“Bẹ́ẹ̀ ni, nísinsin yìí, èmi pàṣẹ fún ọ ní ojú gbogbo Israẹli àti ní ti ìpéjọpọ̀ tí Olúwa, àti ní etí ìgbọ́ Ọlọ́run wa. Ṣọ́ra kó o sì tẹ̀lé gbogbo òfin Olúwa Ọlọ́run rẹ kí ìwọ kí ó le jogún ilẹ̀ dáradára yìí, kí o sì mú un lọ síwájú gẹ́gẹ́ bí ogún rẹ fún àwọn ìran ọmọ rẹ títí láé.
9 ೯ ನನ್ನ ಮಗನಾದ ಸೊಲೊಮೋನನೇ, ನೀನಂತೂ ನಿನ್ನ ತಂದೆಯ ದೇವರನ್ನು ಅರಿತುಕೊಂಡು ಸಂಪೂರ್ಣಹೃದಯದಿಂದಲೂ, ಮನಸ್ಸಂತೋಷದಿಂದಲೂ ಆತನನ್ನೇ ಸೇವಿಸು. ಯೆಹೋವನು ಎಲ್ಲಾ ಹೃದಯಗಳನ್ನು ವಿಚಾರಿಸುವವನೂ, ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವನೂ ಆಗಿರುತ್ತಾನಲ್ಲಾ. ನೀನು ಆತನನ್ನು ಹುಡುಕುವುದಾದರೆ ಆತನು ನಿನಗೆ ಸಿಕ್ಕುವನು. ಆತನನ್ನು ಕಡೆಗಣಿಸಿದರೆ ಆತನು ನಿನ್ನನ್ನು ಶಾಶ್ವತವಾಗಿ ತಳ್ಳಿಬಿಡುವನು.
“Àti ìwọ, ọmọ mi Solomoni, rántí Ọlọ́run baba à rẹ, kí o sì sìn ín pẹ̀lú tọkàntọkàn pẹ̀lú ìfọkànsí pẹ̀lú ọkàn tí ó pé, nítorí Olúwa ṣàwárí gbogbo ọkàn ó sì mọ gbogbo èrò. Tí ìwọ bá wá a, ìwọ yóò rí i; ṣùgbọ́n tí ìwọ bá kọ̀ ọ́ sílẹ̀, òun yóò kọ̀ ọ́ títí láé.
10 ೧೦ ಆದುದರಿಂದ ಎಚ್ಚರಿಕೆಯಿಂದಿರು, ಯೆಹೋವನು ತನಗೋಸ್ಕರ ಪವಿತ್ರಾಲಯವನ್ನು ಕಟ್ಟಬೇಕೆಂದು ನಿನ್ನನ್ನು ಆರಿಸಿಕೊಂಡಿದ್ದಾನೆ. ಧೈರ್ಯದಿಂದ ಕೆಲಸ ಮಾಡು” ಎಂಬುದೇ.
Gbèrò báyìí nítorí tí Olúwa ti yàn ọ́ láti kọ́ ilé Olúwa gẹ́gẹ́ bí ilé tí a yà sí mímọ́ fún Olúwa. Jẹ́ alágbára kí ó sì ṣe iṣẹ́ náà.”
11 ೧೧ ತರುವಾಯ ದಾವೀದನು ತನ್ನ ಮಗನಾದ ಸೊಲೊಮೋನನಿಗೆ ದೇವಾಲಯದ ಮಂಟಪ, ಕಟ್ಟಡಗಳು, ಭಂಡಾರಗಳು, ಮೇಲುಪ್ಪರಿಗೆಗಳು, ಒಳಗಣ ಕೋಣೆಗಳು, ಕೃಪಾಸನ ಮಂದಿರ ಇವುಗಳ ನಕ್ಷೆಯನ್ನು ಕೊಟ್ಟನು.
Nígbà náà ni Dafidi fi àpẹẹrẹ fún Solomoni ọmọ rẹ̀ ti ìloro àti ti ilé Olúwa náà, kíkọ́ ọ rẹ̀, àti ti ibi ìṣúra rẹ̀, àti ti iyàrá òkè rẹ̀, àti ti ìyẹ̀wù rẹ̀ àti ti ibùjókòó àánú.
12 ೧೨ ಇವನು ಯೆಹೋವನ ಆಲಯದ ಅಂಗಳಗಳು, ಸುತ್ತಣ ಕೋಣೆಗಳು, ದೇವಾಲಯದ ಭಂಡಾರಗಳು, ಪ್ರತಿಷ್ಠಿತ ವಸ್ತುಗಳು, ಭಂಡಾರಗಳು ಇವುಗಳ ವಿಷಯವಾಗಿಯೂ,
Ó fún un ní àwọn ètò gbogbo èyí tí ẹ̀mí ti fi sí ọkàn rẹ̀ fún ti ààfin ilé Olúwa àti gbogbo yàrá tí ó yíká fún ìṣúra ilé Ọlọ́run àti fún ìṣúra fún ohun yíyà sọ́tọ̀.
13 ೧೩ ಯಾಜಕರ ಮತ್ತು ಲೇವಿಯರ ವರ್ಗಗಳು, ಯೆಹೋವನ ಆಲಯದಲ್ಲಿ ನಡೆಯತಕ್ಕ ಎಲ್ಲಾ ಆರಾಧನೆ, ಆರಾಧನೆಯ ಎಲ್ಲಾ ಸಾಮಗ್ರಿಗಳು
Ó fún un ní àwọn ìlànà fún ìpín ti àwọn àlùfáà àti àwọn ará Lefi àti fún gbogbo iṣẹ́ ìsìn nínú ilé Olúwa àti fún gbogbo ohun èlò tí wọn ó lò nínú ìsìn rẹ̀.
14 ೧೪ ಇವುಗಳ ವಿಷಯವಾಗಿ ಪವಿತ್ರಾತ್ಮನು ತನ್ನ ಮನಸ್ಸಿನಲ್ಲಿ ಕೊಟ್ಟಿದ್ದ ಯೋಜನೆಗಳನ್ನು ವಿವರಿಸಿದನು.
Ó yàn ìwọ̀n wúrà fún gbogbo ohun èlò wúrà tí a ó lò níbi oríṣìí ìsìn, àti ìwọ̀n fàdákà fún gbogbo ohun èlò fàdákà tí a ó lò fún oríṣìí ìsìn,
15 ೧೫ ಇದಲ್ಲದೆ ಆರಾಧನೆಯ ಆಯಾ ಆಚಾರಗಳಲ್ಲಿ ಉಪಯೋಗವಾಗಬೇಕಾದ ಎಲ್ಲಾ ಸಾಮಾನುಗಳ ಬೆಳ್ಳಿ ಬಂಗಾರದ ತೂಕ, ಅಂದರೆ ಬಂಗಾರದ ಹಣತೆಗಳಿರುವ ಬಂಗಾರದ ಪ್ರತಿಯೊಂದು ದೀಪಸ್ತಂಭದ ತೂಕ, ಬೇರೆ ಬೇರೆ ಕೆಲಸಗಳಿಗೆ ಉಪಯೋಗವಾಗುವ ಪ್ರತಿಯೊಂದು ಬೆಳ್ಳಿಯ ದೀಪಸ್ತಂಭದ ಮತ್ತು ಅದರ ಹಣತೆಗಳ ತೂಕ,
ìwọ̀n wúrà fún ìdúró fìtílà àti fìtílà wọn, fún ìwọ̀n fún ọ̀kọ̀ọ̀kan ìdúró fìtílà àti fìtílà wọn; àti ìwọ̀n fàdákà ìdúró fìtílà fàdákà àti àwọn fìtílà rẹ̀, gẹ́gẹ́ bí ìlò ti gbogbo ìdúró fìtílà.
16 ೧೬ ಮೀಸಲು ರೊಟ್ಟಿಗಳನ್ನಿಡುವ ಬಟ್ಟಲುಗಳು ಹಾಗೂ ಪ್ರತಿಯೊಂದು ಮೇಜಿಗೆ ಉಪಯೋಗಿಸಬೇಕಾದ ಬಂಗಾರದ ತೂಕ, ಬೆಳ್ಳಿಯ ಮೇಜುಗಳ ಬೆಳ್ಳಿಯ ತೂಕ,
Ìwọ̀n ti wúrà fun tábìlì, tábìlì fún àkàrà tí a yà sọ́tọ̀; ìwọ̀n fàdákà fún àwọn tábìlì fàdákà;
17 ೧೭ ಚೊಕ್ಕ ಬಂಗಾರದ ಮುಳ್ಳು ಬೋಗುಣಿ, ಹೂಜಿಗಳ ಮತ್ತು ಬೆಳ್ಳಿ ಬಂಗಾರದ ಆಯಾ ಪಾತ್ರೆಗಳ ತೂಕ,
ìwọ̀n kìkì wúrà fún àwọn àmúga ìjẹun, àwọn ìbùwọ́n ọpọ́n àti àwọn ìkòkò ìpọnmi; ìwọ̀n wúrà fún gbogbo àwopọ̀kọ́ fàdákà;
18 ೧೮ ಧೂಪವೇದಿಗೆ ಉಪಯೋಗಿಸಬೇಕಾದ ಚೊಕ್ಕ ಬಂಗಾರದ ತೂಕ ಎಷ್ಟೆಷ್ಟಾಗಿರಬೇಕೆಂಬುದನ್ನು ವಿವರಿಸಿ, ರೆಕ್ಕೆಗಳನ್ನು ಹರಡಿಕೊಂಡು ಯೆಹೋವನ ಒಡಂಬಡಿಕೆ ಮಂಜೂಷವನ್ನು ಮರೆಮಾಡುವ ಬಂಗಾರದ ಕೆರೂಬಿವಾಹನದ ನಕ್ಷೆಯನ್ನು ಕೊಟ್ಟನು.
àti ìwọ̀n ìdá wúrà fún pẹpẹ tùràrí ó fún un ní ètò fún kẹ̀kẹ́, ìyẹn ni pé àwọn ìdúró kérúbù wúrà tí wọ́n tan iye wọn ká, wọ́n sì bo àpótí ẹ̀rí Olúwa.
19 ೧೯ ಆ ನಕ್ಷೆಯಲ್ಲಿ ಸೂಚಿಸಿದ ಎಲ್ಲಾ ಕೆಲಸಗಳ ವಿವರವಾದ ಜ್ಞಾನವು ತನಗೆ ಯೆಹೋವನು ಸೂಚಿಸಿದಂತೆ ಪ್ರಾಪ್ತವಾಯಿತೆಂದು ಹೇಳಿದನು.
“Gbogbo èyí,” ni Dafidi wí pé, “Èmi ní kíkọ sílẹ̀ láti ọwọ́ Olúwa sórí mi, ó sì fún mí ní ìmọ̀ nínú gbogbo iṣẹ́ ètò yìí.”
20 ೨೦ ಆ ಮೇಲೆ ದಾವೀದನು ತನ್ನ ಮಗನಾದ ಸೊಲೊಮೋನನಿಗೆ, “ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಕೆಲಸಕ್ಕೆ ಕೈಹಾಕು, ಅಂಜಬೇಡ, ಕಳವಳಗೊಳ್ಳಬೇಡ, ನನ್ನ ದೇವರಾದ ಯೆಹೋವ ದೇವರು ನಿನ್ನ ಸಂಗಡ ಇರುತ್ತಾನೆ. ಆತನು ತನ್ನ ಆಲಯದ ಎಲ್ಲಾ ಕೆಲಸಗಳು ತೀರುವವರೆಗೂ ನಿನ್ನನ್ನು ಕೈಬಿಡುವುದಿಲ್ಲ ತೊರೆಯುವುದಿಲ್ಲ.
Dafidi tún sọ fún Solomoni ọmọ rẹ̀ pé, “Jẹ́ alágbára kí o sì gbóyà, kí o sì ṣe iṣẹ́ náà. Má ṣe bẹ̀rù tàbí dààmú, nítorí Olúwa Ọlọ́run, Ọlọ́run mi, wà pẹ̀lú rẹ. Òun kì yóò sì já ọ kule tàbí kọ ọ sílẹ̀ títí gbogbo iṣẹ́ fún ìsìn ní ti ilé Olúwa yóò fi parí.
21 ೨೧ ಇಗೋ, ಯಾಜಕರ ಮತ್ತು ಲೇವಿಯರ ವರ್ಗಗಳವರು ದೇವಾಲಯಕ್ಕೆ ಸಂಬಂಧಪಟ್ಟ ಕೆಲಸವನ್ನು ಮಾಡುವುದಕ್ಕೆ ಸಿದ್ಧರಾಗಿದ್ದಾರೆ. ಯಾವ ಕೆಲಸವಿದ್ದರೂ ಎಲ್ಲವನ್ನು ಜಾಣತನದಿಂದ ಮಾಡುವುದಕ್ಕೆ ಸಿದ್ಧಮನಸ್ಸು ಉಳ್ಳವರು ನಿನ್ನ ಹತ್ತಿರ ಬೆಂಬಲವಾಗಿ ಇರುತ್ತಾರೆ. ಅಧಿಪತಿಗಳೂ, ಎಲ್ಲಾ ಪ್ರಜೆಗಳೂ ನಿನ್ನ ಆಜ್ಞೆಗೆ ಒಳಗಾಗುವರು” ಎಂದು ಹೇಳಿದನು.
Ìpín àwọn àlùfáà àti àwọn ará Lefi ti ṣetán fún gbogbo iṣẹ́ ilé Olúwa. Gbogbo ọkùnrin tí ó ní ìfẹ́ sí i tí ó sì ní òye oríṣìíríṣìí iṣẹ́. Yóò ràn ọ́ lọ́wọ́ nínú iṣẹ́ náà. Àwọn ìjòyè àti gbogbo àwọn ènìyàn yóò gbọ́rọ̀ sí gbogbo àṣẹ rẹ.”