< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 27 >
1 ೧ ಇಸ್ರಾಯೇಲರ ಕುಲಪ್ರಧಾನರು, ಸಹಸ್ರಾಧಿಪತಿಗಳು, ಶತಾಧಿಪತಿಗಳೂ, ಅರಸನ ವಿಧವಿಧವಾದ ಸೇವೆಯನ್ನು ಮಾಡಬೇಕಾದ ವರ್ಗಗಳ ಅಧಿಪತಿಗಳ ವಿವರ: ವರ್ಷದ ಎಲ್ಲಾ ತಿಂಗಳುಗಳಲ್ಲಿ ತಿಂಗಳಿಗೆ ಒಂದು ವರ್ಗದಂತೆ ಸರದಿಯ ಪ್ರಕಾರ ಕೆಲಸಕ್ಕಾಗಿ ಬರುವ ಪ್ರತಿಯೊಂದು ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು ಇದ್ದರು.
Et, pendant le cours de l'année, de mois en mois, une division de vingt- quatre mille hommes, prise parmi tous les fils d'Israël, chefs de familles, commandants de mille hommes, centeniers, scribes et serviteurs, était employée à exécuter les ordres du roi; chaque division était relevée à son tour.
2 ೨ ಪೆರೆಚನ ಸಂತಾನದವನೂ, ಜಬ್ದೀಯೇಲನ ಮಗನೂ ಆದ ಯಾಷೊಬ್ಬಾಮನು ಮೊದಲನೆಯ ವರ್ಗದ ನಾಯಕನು.
A la tête de la première division employée le premier mois était Isboaz, fils de Zabdiel; il commandait vingt-quatre mille hommes.
3 ೩ ಇವನು ಮೊದಲನೆಯ ತಿಂಗಳಿನ ಸೈನ್ಯಾಧಿಪತಿಯ ಮುಖ್ಯಸ್ಥನು. ಮೊದಲನೆಯ ತಿಂಗಳಿನಲ್ಲಿ ಸೇವೆ ಮಾಡತಕ್ಕ ಅವನ ವರ್ಗದವರ ಸಂಖ್ಯೆ ಇಪ್ಪತ್ತ್ನಾಲ್ಕು ಸಾವಿರ.
Il était issu de Pharès, et comme chef de tous les chefs de l'armée, il commandait pendant le premier mois.
4 ೪ ಅಹೋಹಿಯನಾದ ದೋದೈಯು ಎರಡನೆಯ ತಿಂಗಳಿನ ವರ್ಗದ ನಾಯಕನು. ಆ ವರ್ಗದಲ್ಲಿ ಮಿಕ್ಲೋತನೆಂಬವನು ನಾಯಕನು. ಅವನ ವರ್ಗದವರ ಸಂಖ್ಯೆ ಇಪ್ಪತ್ತ್ನಾಲ್ಕು ಸಾವಿರ.
A la tête de la division du second mois était Dodia, fils d'Eccoc, et il y avait encore pour chef de cette division Maceloth; ils étaient chefs de vingt- quatre mille hommes.
5 ೫ ಯಾಜಕನಾದ ಯೆಹೋಯಾದನ ಮಗನೂ ಪ್ರಧಾನನೂ ಆದ ಬೆನಾಯನು ಮೂರನೆಯ ವರ್ಗದ ನಾಯಕನು. ಮೂರನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.
Banaïas, fils de Joad le prêtre, était le troisième chef, il commandait la division du troisième mois, pareillement vingt-quatre mille hommes.
6 ೬ ಈ ಬೆನಾಯನು ಮೂವತ್ತು ಜನರಲ್ಲಿ ಪ್ರಸಿದ್ಧನಾದ ಯುದ್ಧವೀರನೂ ಅವರ ಮುಖ್ಯಸ್ಥನೂ ಆಗಿದ್ದನು. ಅವನ ವರ್ಗದಲ್ಲಿ ಅವನ ಮಗನಾದ ಅಮ್ಮೀಜಾಬಾದನು ಇದ್ದನು.
Ce Banaïas était le plus vaillant des trente; il était à leur tête, et son fils Zabad commandait avec lui sa division.
7 ೭ ಯೋವಾಬನ ತಮ್ಮನಾದ ಅಸಾಹೇಲನು. ಅವನು ಸತ್ತ ನಂತರ ಅವನ ಮಗನಾದ ಜೆಬದ್ಯನು ನಾಲ್ಕನೆಯ ವರ್ಗದ ನಾಯಕನು. ನಾಲ್ಕನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
Le quatrième, celui du quatrième mois, était Asaël, frère de Joab, et son fils Zabadie; ses fils et ses frères partageaient son commandement sur vingt- quatre mille hommes.
8 ೮ ಇಜ್ರಾಹ್ಯನಾದ ಶಮ್ಹೂತನು ಐದನೆಯ ವರ್ಗದ ನಾಯಕನು. ಐದನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
Le cinquième chef, celui du cinquième mois, était Samaoth le Jezraïte; il commandait vingt-quatre mille hommes.
9 ೯ ತೆಕೋವಿನ ಇಕ್ಕೇಷನ ಮಗನಾದ ಈರ ಎಂಬುವನು ಆರನೆಯ ವರ್ಗದ ನಾಯಕನು. ಆರನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
Le sixième, celui du sixième mois, était Oduïas, fils d'Eccès de Thécoé; il commandait vingt-quatre mille hommes.
10 ೧೦ ಎಫ್ರಾಯೀಮ್ ಕುಲದ ಪೆಲೋನ್ಯನಾದ ಹೆಲೆಚನು ಏಳನೆಯ ವರ್ಗದ ನಾಯಕನು. ಏಳನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
Le septième, celui du septième mois, était Relies de Phallus, des fils d'Ephrahn; sa division comptait vingt-quatre mille hommes.
11 ೧೧ ಹುಷ ಊರಿನ ಜೆರಹೀಯನಾದ ಸಿಬ್ಬೆಕೈಯು ಎಂಟನೆಯ ವರ್ಗದ ನಾಯಕನು. ಎಂಟನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
Le huitième, celui du huitième mois, était Sohochaï de Husathi, issu de Zara; il commandait vingt-quatre mille hommes.
12 ೧೨ ಬೆನ್ಯಾಮೀನ್ ಕುಲದ ಅನತೋತ್ ಊರಿನವನಾದ ಅಬೀಯೆಜೆರನು ಒಂಬತ್ತನೆಯ ವರ್ಗದ ನಾಯಕನು. ಒಂಬತ್ತನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
Le neuvième, celui du neuvième mois, était Abiézer d'Anathoth, de la terre de Benjamin; il commandait vingt-quatre mille hommes.
13 ೧೩ ನೆಟೋಫ ಊರಿನವನಾದ ಜೆರಹೀಯನಾದ ಮಹರೈಯು ಹತ್ತನೆಯ ವರ್ಗದ ನಾಯಕನು. ಹತ್ತನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
Le dixième, celui du dixième mois, était Méhéra de Netophathi, issu de Zara; il commandait vingt-quatre mille hommes.
14 ೧೪ ಎಫ್ರಾಯೀಮ್ ಕುಲದ ಪಿರ್ರಾತೋನ್ಯನಾದ ಬೆನಾಯನು ಹನ್ನೊಂದನೆಯ ವರ್ಗದ ನಾಯಕನು. ಹನ್ನೊಂದನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
Le onzième, celui du onzième mois, était Baillas de Pharathon, des fils d'Ephraïm; il commandait vingt-quatre mille hommes.
15 ೧೫ ನೆಟೋಫ ಊರಿನವನಾದ ಒತ್ನೀಯೇಲನ ಸಂತಾನದವನಾದ ಹೆಲ್ದೈಯು ಹನ್ನೆರಡನೆಯ ವರ್ಗದ ನಾಯಕನು. ಹನ್ನೆರಡನೆಯ ತಿಂಗಳಿನಲ್ಲಿ ಸೇವೆಮಾಡತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ್ನಾಲ್ಕು ಸಾವಿರ.
Le douzième, celui du douzième mois, était Holdia de Netophathi, issu d'Othoniel; il commandait vingt-quatre mille hommes.
16 ೧೬ ಇಸ್ರಾಯೇಲಿನ ಕುಲ ಪ್ರಭುಗಳು: ರೂಬೇನ್ಯರಲ್ಲಿ ಜಿಕ್ರೀಯ ಮಗನಾದ ಎಲೀಯೆಜೆರನು; ಸಿಮೆಯೋನ್ಯರಲ್ಲಿ ಮಾಕನ ಮಗನಾದ ಶೆಪಟ್ಯನು;
Et il y avait des chefs à la tête de claque tribu; celui de Ruben était Eliézer, fils de Zéchri; celui de Siméon, Saphatias, fils de Maacha.
17 ೧೭ ಲೇವಿಯರಲ್ಲಿ ಕೆಮುವೇಲನ ಮಗನಾದ ಹಷಬ್ಯ; ಆರೋನ್ಯರಲ್ಲಿ ಚಾದೋಕ್;
Celui de Lévi, Asabias, fils de Camuel; Sadoc était chef de la famille d'Aaron.
18 ೧೮ ಯೆಹೂದ್ಯರಲ್ಲಿ ದಾವೀದನ ಅಣ್ಣನಾದ ಎಲೀಹು; ಇಸ್ಸಾಕಾರ್ಯರಲ್ಲಿ ಮೀಕಾಯೇಲನ ಮಗನಾದ ಒಮ್ರಿ;
Le chef de Juda était Eliab, l'un des frères de David; celui d'Issachar Ambri, fils de Michel.
19 ೧೯ ಜೆಬುಲೂನ್ಯರಲ್ಲಿ ಓಬದ್ಯನ ಮಗನಾದ ಇಷ್ಮಾಯ; ನಫ್ತಾಲ್ಯರಲ್ಲಿ ಅಜ್ರೀಯೇಲನ ಮಗನಾದ ಯೆರೀಮೋತ್;
Celui de Zabulon, Samain, fils d'Abdiu; celui de Nephthali: Jerimoth, fils d'Oziel.
20 ೨೦ ಎಫ್ರಾಯೀಮ್ಯರಲ್ಲಿ ಅಜಜ್ಯನ ಮಗನಾದ ಹೊಷೇಯ; ಮನಸ್ಸೆಯ ಅರ್ಧ ಕುಲದವರಲ್ಲಿ ಪೆದಾಯನ ಮಗನಾದ ಯೋವೇಲ್;
Celui d'Ephraïm, Osé, fils d'Oziu; celui de la demi-tribu de Manassé: Johel, fils de Phadaïa.
21 ೨೧ ಗಿಲ್ಯಾದಿನಲ್ಲಿರುವ ಮನಸ್ಸೆಯ ಅರ್ಧ ಕುಲದವರಲ್ಲಿ ಜೆಕರ್ಯಯನ ಮಗನಾದ ಇದ್ದೋ; ಬೆನ್ಯಾಮೀನ್ಯರಲ್ಲಿ ಅಬ್ನೇರನ ಮಗನಾದ ಯಗಸೀಯೇಲ್;
Celui de l'autre demi-tribu de Manassé, en Galaad, Jadaï, fils de Zadaïu; celui de Benjamin, Jasiel, fils d'Abner.
22 ೨೨ ದಾನ್ಯರಲ್ಲಿ ಯೆರೋಹಾಮನ ಮಗನಾದ ಅಜರೇಲನು ಇವರೇ.
Celui de Dan: Azariel, fils de Iroab; tels étaient les chefs de familles des tribus d'Israël.
23 ೨೩ ಇಸ್ರಾಯೇಲರನ್ನು ಆಕಾಶದ ನಕ್ಷತ್ರಗಳಂತೆ ಅಸಂಖ್ಯವಾಗಿ ಮಾಡುವೆನೆಂಬುದಾಗಿ ಯೆಹೋವನು ಕೊಟ್ಟ ಮಾತನ್ನು ದಾವೀದನು ನಂಬಿ ಇಪ್ಪತ್ತು ವರ್ಷಕ್ಕಿಂತ ಕಡಿಮೆ ವಯಸ್ಸುಳ್ಳವರನ್ನು ಪರಿಗಣಿಸಲಿಲ್ಲ.
Et David ne fit point le dénombrement de ceux de vingt ans et au-dessous, car le Seigneur lui avait dit qu'il multiplierait Israël comme les étoiles du ciel.
24 ೨೪ ಚೆರೂಯಳ ಮಗನಾದ ಯೋವಾಬನು ಅವರನ್ನು ಲೆಕ್ಕಿಸಲಾರಂಭಿಸಿದರೂ, ಇದರ ನಿಮಿತ್ತ ಇಸ್ರಾಯೇಲರ ಮೇಲೆ ದೇವರ ಕೋಪವುಂಟಾದ್ದರಿಂದ ಅದನ್ನು ಪೂರ್ತಿಗೊಳಿಸಲು ಸಾಧ್ಯವಾಗಲಿಲ್ಲ. ಈ ಜನಗಣತಿಯು ದಾವೀದನ ರಾಜ್ಯದ ವೃತ್ತಾಂತ ಗ್ರಂಥದಲ್ಲಿ ಲಿಖಿತವಾಗಲಿಲ್ಲ.
Et Joab, fils de Sarvia, avait commencé le dénombrement du peuple, mais il ne l'acheva point; et ce dénombrement causa la colère qui éclata contre Israël, et le nombre que l'on avait trouvé fut supprimé du livre des faits et gestes du roi David.
25 ೨೫ ಅರಸನಾದ ದಾವೀದನ ಸೊತ್ತಿನ ಮೇಲೆ ಮೇಲ್ವಿಚಾರಕರಾಗಿ ನೇಮಿಸಲ್ಪಟ್ಟವರು ಯಾರೆಂದರೆ: ಅರಸನ ಭಂಡಾರಗಳ ಮೇಲೆ ಅದೀಯೇಲನ ಮಗನಾದ ಅಜ್ಮಾವೆತ್, ಹೊಲಗಳಲ್ಲಿಯೂ, ಪಟ್ಟಣಗಳಲ್ಲಿಯೂ, ಹಳ್ಳಿಗಳಲ್ಲಿಯೂ, ಬುರುಜಗಳ ಮೇಲೆಯೂ ಇದ್ದ ಉಗ್ರಾಣಗಳ ಮೇಲೆ ಉಜ್ಜೀಯನ ಮಗನಾದ ಯೋನಾತಾನನು,
Asmoth, fils d'Adaël, fut trésorier du roi, et Jonathas, fils d'Ozia, trésorier de la contrée, des villes, des villages et des tours.
26 ೨೬ ಹೊಲಗಳನ್ನು ವ್ಯವಸಾಯ ಮಾಡುವ ಆಳುಗಳ ಮೇಲೆ ಕೆಲೂಬನ ಮಗನಾದ ಎಜ್ರೀ,
Esdri, fils d'Hélab, avait l'intendance des laboureurs et ouvriers travaillant à la terre.
27 ೨೭ ದ್ರಾಕ್ಷಿ ತೋಟಗಳ ಮೇಲೆ ರಾಮಾ ಊರಿನ ಶಿಮ್ಮೀ, ದ್ರಾಕ್ಷಿ ತೋಟಗಳಲ್ಲಿರುವ ದ್ರಾಕ್ಷಾರಸದ ಉಗ್ರಾಣಗಳ ಮೇಲೆ ಶಿಪ್ಮೀಯನಾದ ಜಬ್ದೀ,
Semei de Rahel, celle des champs; Zabni, fils de Jephni, celle des vignes.
28 ೨೮ ಎಣ್ಣೇ ಮರದ ತೋಪುಗಳ ಮೇಲೆಯೂ ಇಳುಕಲಿನ ಪ್ರದೇಶದಲ್ಲಿರುವ ಅತ್ತಿಮರಗಳ ತೋಪುಗಳ ಮೇಲೆಯೂ ಗೆದೇರಾ ಊರಿನವನಾದ ಬಾಳ್ಹಾನಾನ್ ಮತ್ತು ಎಣ್ಣೆಯ ಉಗ್ರಾಣಗಳ ಮೇಲೆ ಯೋವಾಷ್,
Balanan le Gedorite, celle des oliviers et des figuiers des champs; Joas, celle de l'huile.
29 ೨೯ ಶಾರೋನಿನಲ್ಲಿ ಮೇಯುವ ಹಸುಗಳ ಮೇಲೆ ಶಾರೋನ್ಯನಾದ ಶಿಟ್ರೈ, ತಗ್ಗುಗಳಲ್ಲಿ ಮೇಯುವ ಹಸುಗಳ ಮೇಲೆ ಅದ್ಲೈಯ ಮಗನಾದ ಶಾಫಾಟನು,
Satrai le Saronite, celle des bœufs qui paissaient en Saron; et Sophat, fils d'Abdi, celle des bœufs à l'étable.
30 ೩೦ ಒಂಟೆಗಳ ಮೇಲೆ ಇಷ್ಮಾಯೇಲ್ಯನಾದ ಓಬೀಲ್, ಹೆಣ್ಣುಕತ್ತೆಗಳ ಮೇಲೆ ಮೇರೊನೋತ್ಯನಾದ ಯೆಹ್ದೆಯ,
Abias, l'Ismaélite, celle des chameaux; Jadias de Merathon, celle des ânes.
31 ೩೧ ಆಡುಕುರಿಗಳ ಮೇಲೆ ಹಗ್ರೀಯನಾದ ಯಾಜೀಜ್.
Jaziz l'Agarite, celle des brebis. Tels étaient tous les intendants des domaines du roi David.
32 ೩೨ ವಿವೇಕಿಯೂ, ಶಾಸ್ತ್ರಜ್ಞನೂ ಆದ ಯೋನಾತಾನನೆಂಬ ದಾವೀದನ ಚಿಕ್ಕಪ್ಪನು, ಮಂತ್ರಿಯೂ ಹಕ್ಮೋನಿಯ ಮಗನಾದ ಯೆಹೀಯೇಲನು ರಾಜಪುತ್ರಪಾಲಕನೂ ಆಗಿದ್ದರು.
Jonathas, oncle paternel de David, était conseiller, homme intelligent; et Jehel, fils d'Achami, était avec les fils du roi.
33 ೩೩ ಅಹೀತೋಫೆಲನು ಅರಸನ ಮಂತ್ರಿಯೂ, ಅರ್ಕೀಯನಾದ ಹೂಷೈಯು ಅವನ ಮಿತ್ರನಾಗಿದ್ದನು.
Achitophel était conseiller du roi, et Chusi son principal favori.
34 ೩೪ ಬೆನಾಯನ ಮಗನಾದ ಯೆಹೋಯಾದಾವನೂ, ಎಬ್ಯಾತಾರನೂ, ಅಹೀತೋಫೆಲನ ಉತ್ತರಾಧಿಕಾರಿಗಳಾದರು. ಯೋವಾಬನು ಅರಸನ ಸೈನ್ಯಾಧಿಪತಿಯಾಗಿದ್ದನು.
Après lui venaient Achitophel, Joad, fils de Banaïas et Abiathar. Joab était le général en chef du roi.