< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 26 >
1 ೧ ದೇವಾಲಯದ ದ್ವಾರಪಾಲಕ ವರ್ಗಗಳ ವಿಷಯ: ಕೋರಹೀಯನಾದ ಮೆಷೆಲೆಮ್ಯ ಎಂಬವನು, ಕೊರೇಯನ ಮಗ ಹಾಗೂ ಆಸಾಫನ ಮೊಮ್ಮಗ.
१फिर द्वारपालों के दल ये थेः कोरहियों में से तो मशेलेम्याह, जो कोरे का पुत्र और आसाप की सन्तानों में से था।
2 ೨ ಮೆಷೆಲೆಮ್ಯನ ಮಕ್ಕಳಲ್ಲಿ ಜೆಕೆರ್ಯನು ಚೊಚ್ಚಲ ಮಗ, ಎದೀಯಯೇಲನು ಎರಡನೆಯವನು, ಜೆಬೆದ್ಯನು ಮೂರನೆಯವನು, ಯೆತ್ನಿಯೇಲನು ನಾಲ್ಕನೆಯವನು.
२और मशेलेम्याह के पुत्र हुए, अर्थात् उसका जेठा जकर्याह, दूसरा यदीएल, तीसरा जबद्याह,
3 ೩ ಏಲಾಮನು ಐದನೆಯವನು, ಯೆಹೋಹಾನಾನನು ಆರನೆಯವನು, ಎಲ್ಯೆಹೋಯೇನೈ ಏಳನೆಯವನು.
३चौथा यातनीएल, पाँचवाँ एलाम, छठवां यहोहानान और सातवाँ एल्यहोएनै।
4 ೪ ಓಬೇದೆದೋಮನ ಮಕ್ಕಳಲ್ಲಿ ಶೆಮಾಯನು ಚೊಚ್ಚಲನು, ಯೆಹೋಜಾಬಾದನು ಎರಡನೆಯವನು. ಯೋವಾಹನು ಮೂರನೆಯವನು, ಸಾಕಾರನು ನಾಲ್ಕನೆಯವನು, ನೆತನೇಲನು ಐದನೆಯವನು,
४फिर ओबेदेदोम के भी पुत्र हुए, उसका जेठा शमायाह, दूसरा यहोजाबाद, तीसरा योआह, चौथा साकार, पाँचवाँ नतनेल,
5 ೫ ಅಮ್ಮೀಯೇಲನು ಆರನೆಯವನು, ಇಸ್ಸಾಕಾರನು ಏಳನೆಯವನು, ಪೆಯುಲ್ಲೆತೈಯು ಎಂಟನೆಯವನು. ಓಬೇದೆದೋಮನು ದೇವರ ಆಶೀರ್ವಾದಕ್ಕೆ ಪಾತ್ರನಾಗಿದ್ದನಷ್ಟೆ.
५छठवाँ अम्मीएल, सातवाँ इस्साकार और आठवाँ पुल्लतै, क्योंकि परमेश्वर ने उसे आशीष दी थी।
6 ೬ ಅವನ ಮಗನಾದ ಶೆಮಾಯನ ಮಕ್ಕಳು ಗೋತ್ರಪ್ರಧಾನರೂ ಮಹಾಸಮರ್ಥರೂ ಆಗಿದ್ದರು.
६और उसके पुत्र शमायाह के भी पुत्र उत्पन्न हुए, जो शूरवीर होने के कारण अपने पिता के घराने पर प्रभुता करते थे।
7 ೭ ಅವರು ಯಾರೆಂದರೆ: ಒತ್ನೀ, ರೆಫಾಯೇಲ್, ಓಬೇದ್ ಮತ್ತು ಎಲ್ಜಾಬಾದ್. ಇವರೂ ಬಹುಸಮರ್ಥರಾದ ಎಲೀಹು, ಸೆಮಕ್ಯ ಎಂಬುವವರು ಇವರ ಸಹೋದರರು.
७शमायाह के पुत्र ये थे, अर्थात् ओतनी, रपाएल, ओबेद, एलजाबाद और उनके भाई एलीहू और समक्याह बलवान पुरुष थे।
8 ೮ ಇವರೆಲ್ಲರೂ ಓಬೇದೆದೋಮನ ಸಂತಾನದವರು. ಇವರು, ಇವರ ಮಕ್ಕಳು ಸಮರ್ಥರೂ, ಸೇವೆಯಲ್ಲಿ ಗಟ್ಟಿಗರೂ ಆಗಿದ್ದವರೂ. ಇವರೂ ಇವರ ಸಹೋದರರೂ ಕೂಡಿ ಅರವತ್ತೆರಡು ಜನರು.
८ये सब ओबेदेदोम की सन्तानों में से थे, वे और उनके पुत्र और भाई इस सेवकाई के लिये बलवान और शक्तिमान थे; ये ओबेदेदोमी बासठ थे।
9 ೯ ಮೆಷೆಲೆಮ್ಯನ ಮಕ್ಕಳೂ ಮತ್ತು ಸಹೋದರರೂ ಹದಿನೆಂಟು ಜನರು. ಇವರೂ ಸಮರ್ಥರಾಗಿದ್ದರು.
९मशेलेम्याह के पुत्र और भाई अठारह थे, जो बलवान थे।
10 ೧೦ ಮೆರಾರೀಯನಾದ ಹೋಸನಿಗೂ ಮಕ್ಕಳಿದ್ದರು; ಅವರಲ್ಲಿ ಶಿಮ್ರಿ ಎಂಬುವವನು ಪ್ರಧಾನನಾಗಿದ್ದನು. ಇವನು ಚೊಚ್ಚಲ ಮಗನಲ್ಲದಿದ್ದರೂ ಅವನ ತಂದೆಯು ಅವನನ್ನೇ ಪ್ರಧಾನನನ್ನಾಗಿ ನೇಮಿಸಿದನು.
१०फिर मरारी के वंश में से होसा के भी पुत्र थे, अर्थात् मुख्य तो शिम्री (जिसको जेठा न होने पर भी उसके पिता ने मुख्य ठहराया),
11 ೧೧ ಹಿಲ್ಕೀಯನು ಎರಡನೆಯವನು, ಟೆಬಲ್ಯನು ಮೂರನೆಯವನು, ಜೆಕರ್ಯನು ನಾಲ್ಕನೆಯವನು. ಹೋಸನ ಮಕ್ಕಳು ಸಹೋದರರೂ ಒಟ್ಟಿಗೆ ಹದಿಮೂರು ಜನರು.
११दूसरा हिल्किय्याह, तीसरा तबल्याह और चौथा जकर्याह था; होसा के सब पुत्र और भाई मिलकर तेरह थे।
12 ೧೨ ಈ ದ್ವಾರಪಾಲಕರ ವರ್ಗಗಳು ಪ್ರಧಾನಪುರುಷರು ತಮ್ಮ ಕುಲಬಂಧುಗಳಂತೆ ಯೆಹೋವನ ಆಲಯದಲ್ಲಿ ಸೇವೆಮಾಡುವವರಾಗಿದ್ದರು.
१२द्वारपालों के दल इन मुख्य पुरुषों के थे, ये अपने भाइयों के बराबर ही यहोवा के भवन में सेवा टहल करते थे।
13 ೧೩ ಅವರು ಕನಿಷ್ಠ ಕುಟುಂಬವೆಂದೂ, ಶ್ರೇಷ್ಠ ಕುಟುಂಬವೆಂದೂ ವ್ಯತ್ಯಾಸ ಮಾಡದೆ ತಮ್ಮಲ್ಲಿ ಪ್ರತಿಯೊಬ್ಬನು ಕಾಯತಕ್ಕ ಹೆಬ್ಬಾಗಿಲುಗಳನ್ನು ಚೀಟಿನಿಂದಲೇ ಗೊತ್ತುಮಾಡಿಕೊಂಡರು.
१३इन्होंने क्या छोटे, क्या बड़े, अपने-अपने पितरों के घरानों के अनुसार एक-एक फाटक के लिये चिट्ठी डाली।
14 ೧೪ ಪೂರ್ವ ದಿಕ್ಕಿನ ಕಾವಲಿಗೆ ಚೀಟು ಶೆಲೆಮ್ಯನ ಹೆಸರಿಗೆ ಬಿದ್ದಿತು. ಬಹು ವಿವೇಕವುಳ್ಳ ಸಲಹೆಗಾರನಾಗಿರುವ ಅವನ ಮಗನಾದ ಜೆಕೆರ್ಯನ ಹೆಸರಿಗೆ ಉತ್ತರ ದಿಕ್ಕಿನ ಚೀಟು ಬಿದ್ದಿತು.
१४पूर्व की ओर की चिट्ठी शेलेम्याह के नाम पर निकली। तब उन्होंने उसके पुत्र जकर्याह के नाम की चिट्ठी डाली (वह बुद्धिमान मंत्री था) और चिट्ठी उत्तर की ओर के लिये निकली।
15 ೧೫ ಓಬೇದೆದೋಮನಿಗೆ ದಕ್ಷಿಣದ ಬಾಗಿಲು, ಅವನ ಮಕ್ಕಳಿಗೆ ಉಗ್ರಾಣ ಮಂದಿರವೂ,
१५दक्षिण की ओर के लिये ओबेदेदोम के नाम पर चिट्ठी निकली, और उसके बेटों के नाम पर खजाने की कोठरी के लिये।
16 ೧೬ ಶುಪ್ಪೀಮ್ ಮತ್ತು ಹೋಸ ಎಂಬುವರಿಗೆ ಪಶ್ಚಿಮದ ಬಾಗಿಲೂ ಅದರ ಸಮೀಪದಲ್ಲಿರುವ ಶಲ್ಲೆಕೆತ್ ಎಂಬ ಬಾಗಿಲು ಚೀಟಿನಿಂದ ನೇಮಕವಾದವು. ಶೆಲ್ಲೆಕೆತ್ ಬಾಗಿಲು ಪಟ್ಟಣದಿಂದ ದೇವಾಲಯಕ್ಕೆ ಏರಿಹೋಗುವ ದಾರಿಯಲ್ಲಿದೆ.
१६फिर शुप्पीम और होसा के नामों की चिट्ठी पश्चिम की ओर के लिये निकली, कि वे शल्लेकेत नामक फाटक के पास चढ़ाई की सड़क पर आमने-सामने चौकीदारी किया करें।
17 ೧೭ ಲೇವಿಯರಲ್ಲಿ ಪ್ರತಿದಿನವೂ ಪೂರ್ವದಿಕ್ಕಿನ ಬಾಗಿಲನ್ನು ಆರು ಜನರು, ದಕ್ಷಿಣ ಬಾಗಿಲನ್ನು ನಾಲ್ಕು ಜನರು, ಉಗ್ರಾಣ ಮಂದಿರದ ಎರಡು ಬಾಗಿಲನ್ನು ಇಬ್ಬಿಬ್ಬರು,
१७पूर्व की ओर तो छः लेवीय थे, उत्तर की ओर प्रतिदिन चार, दक्षिण की ओर प्रतिदिन चार, और खजाने की कोठरी के पास दो ठहरे।
18 ೧೮ ಪರ್ಬರೆಂಬ ಕಟ್ಟಡವಿರುವ ಪಶ್ಚಿಮ ದಿಕ್ಕಿನ ದಾರಿ ಬಾಗಿಲನ್ನು ನಾಲ್ಕು ಜನರು, ಪರ್ಬರನ್ನು ಇಬ್ಬರು ಕಾಯುತ್ತಿದ್ದರು.
१८पश्चिम की ओर के पर्बार नामक स्थान पर ऊँची सड़क के पास तो चार और पर्बार के पास दो रहे।
19 ೧೯ ಕೋರಹೀಯರ ಮತ್ತು ಮೆರಾರೀಯರ ದ್ವಾರಪಾಲಕರ ವರ್ಗಗಳು ಇವೇ.
१९ये द्वारपालों के दल थे, जिनमें से कितने तो कोरह के और कुछ मरारी के वंश के थे।
20 ೨೦ ಲೇವಿಯನಾದ ಅಹೀಯನು ಮೇಲೆ ಹೇಳಿರುವವರ ಕುಲಬಂಧುಗಳೂ, ದೇವಾಲಯದ ಭಂಡಾರ, ಪರಿಶುದ್ಧ ವಸ್ತುಗಳ ಭಂಡಾರ ಇವುಗಳನ್ನು ಕಾಯುತ್ತಿದ್ದರು.
२०फिर लेवियों में से अहिय्याह परमेश्वर के भवन और पवित्र की हुई वस्तुओं, दोनों के भण्डारों का अधिकारी नियुक्त हुआ।
21 ೨೧ ಗೇರ್ಷೋಮನಿಗೆ ಹುಟ್ಟಿದ ಲದ್ದಾನ ಸಂತಾನದವರಾದ ಲದ್ದಾನ್ಯ ಕುಟುಂಬಗಳ ಪ್ರಧಾನರಲ್ಲಿ ಯೆಹೀಯೇಲೀ ಮತ್ತು ಅವನ ಮಕ್ಕಳು,
२१ये लादान की सन्तान के थे, अर्थात् गेर्शोनियों की सन्तान जो लादान के कुल के थे, अर्थात् लादान और गेर्शोनी के पितरों के घरानों के मुख्य पुरुष थे, अर्थात् यहोएली।
22 ೨೨ ಯೆಹೀಯೇಲ್ಯರಾದ ಜೇತಾಮನೂ ಮತ್ತು ಅವನ ತಮ್ಮನಾದ ಯೋವೇಲನು ಯೆಹೋವನ ಆಲಯದ ಭಂಡಾರಗಳನ್ನು ಕಾಯುವವರಾಗಿದ್ದರು.
२२यहोएली के पुत्र ये थे, अर्थात् जेताम और उसका भाई योएल जो यहोवा के भवन के खजाने के अधिकारी थे।
23 ೨೩ ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್,
२३अम्रामियों, यिसहारियों, हेब्रोनियों और उज्जीएलियों में से।
24 ೨೪ ಇವರ ಸಂತಾನದವರಲ್ಲಿ ಗೇರ್ಷೋಮನ ಮಗನೂ ಮೋಶೆಯ ಮೊಮ್ಮಗನೂ ಆಗಿರುವ ಶೆಬೂವೇಲನು ಭಂಡಾರಗಳನ್ನು ಕಾಯುವವರ ಮುಖ್ಯಸ್ಥನಾಗಿದ್ದನು.
२४शबूएल जो मूसा के पुत्र गेर्शोम के वंश का था, वह खजानों का मुख्य अधिकारी था।
25 ೨೫ ಎಲೀಯೆಜೆರನ ಮಗ ರೆಹಬ್ಯ, ರೆಹಬ್ಯನ ಮಗ ಯೆಶಾಯ ಯೆಶಾಯನ ಮಗ ಯೋರಾಮ ಯೋರಾಮನ ಮಗ ಜಿಕ್ರೀ ಜಿಕ್ರೀಯನ ಮಗ ಶೆಲೋಮೋತನು.
२५और उसके भाइयों का वृत्तान्त यह है: एलीएजेर के कुल में उसका पुत्र रहब्याह, रहब्याह का पुत्र यशायाह, यशायाह का पुत्र योराम, योराम का पुत्र जिक्री, और जिक्री का पुत्र शलोमोत था।
26 ೨೬ ಶೆಲೋಮೋತನು ಅವನ ಸಹೋದರರೂ ಪ್ರತಿಷ್ಠಿತ ವಸ್ತುಗಳ ಭಂಡಾರವನ್ನು ಕಾಯುವವರು. ಇವರು ಶೆಬೂವೇಲನ ಗೋತ್ರಬಂಧುಗಳು. ಈ ವಸ್ತುಗಳನ್ನು ಅರಸನಾದ ದಾವೀದನೂ, ಗೋತ್ರ ಪ್ರಧಾನರೂ ಸಹಸ್ರಾಧಿಪತಿಗಳೂ, ಶತಾಧಿಪತಿಗಳೂ, ಸೇನಾಧಿಪತಿಗಳೂ ಪ್ರತಿಷ್ಠಿಸಿದ್ದರು.
२६यही शलोमोत अपने भाइयों समेत उन सब पवित्र की हुई वस्तुओं के भण्डारों का अधिकारी था, जो राजा दाऊद और पितरों के घरानों के मुख्य-मुख्य पुरुषों और सहस्त्रपतियों और शतपतियों और मुख्य सेनापतियों ने पवित्र की थीं।
27 ೨೭ ಇವರು ಯೆಹೋವನ ಆಲಯದ ವೃದ್ಧಿಗೋಸ್ಕರ ತಮಗೆ ಯುದ್ಧದಲ್ಲಿ ಸಿಕ್ಕಿದ ಕೊಳ್ಳೆಯ ಒಂದು ಭಾಗವನ್ನು ಯೆಹೋವನಿಗೆಂದು ಮುಡುಪಾಗಿ ಇಟ್ಟರು.
२७जो लूट लड़ाइयों में मिलती थी, उसमें से उन्होंने यहोवा का भवन दृढ़ करने के लिये कुछ पवित्र किया।
28 ೨೮ ಇದಲ್ಲದೆ ದೇವ ದರ್ಶಿಯಾದ ಸಮುವೇಲನೂ, ಕೀಷನ ಮಗನಾದ ಸೌಲನೂ, ನೇರನ ಮಗನಾದ ಅಬ್ನೇರನೂ, ಚೆರೂಯಳ ಮಗನಾದ ಯೋವಾಬನೂ ಹಾಗೆಯೇ ಮಾಡಿದರು. ಈ ಪ್ರಕಾರ ಪ್ರತಿಷ್ಠಿತವಾದದ್ದೆಲ್ಲವೂ ಶೆಲೋಮೋತನ ಮತ್ತು ಅವನ ಸಹೋದರರ ವಶದಲ್ಲಿತ್ತು.
२८वरन् जितना शमूएल दर्शी, कीश के पुत्र शाऊल, नेर के पुत्र अब्नेर, और सरूयाह के पुत्र योआब ने पवित्र किया था, और जो कुछ जिस किसी ने पवित्र कर रखा था, वह सब शलोमोत और उसके भाइयों के अधिकार में था।
29 ೨೯ ಇಚ್ಹಾರ್ಯರಲ್ಲಿ ಕೆನನ್ಯನೂ ಅವನ ಮಕ್ಕಳು ಲೌಕೀಕೋದ್ಯೋಗದಲ್ಲಿದ್ದರು. ಅವರು ಇಸ್ರಾಯೇಲರ ಅಧಿಕಾರಿಗಳೂ ಮತ್ತು ನ್ಯಾಯಾಧಿಪತಿಗಳೂ ಆಗಿದ್ದರು.
२९यिसहारियों में से कनन्याह और उसके पुत्र, इस्राएल के देश का काम अर्थात् सरदार और न्यायी का काम करने के लिये नियुक्त हुए।
30 ೩೦ ಹೆಬ್ರೋನ್ಯರಲ್ಲಿ ಹಷಬ್ಯನೂ ಅವನ ಸಹೋದರರೂ ಯೊರ್ದನ್ ಹೊಳೆಯ ಪಶ್ಚಿಮ ಪ್ರಾಂತ್ಯಗಳಲ್ಲಿದ್ದ ಇಸ್ರಾಯೇಲ್ಯರೊಳಗೆ ಯೆಹೋವನ ಸೇವೆಯ ಎಲ್ಲಾ ಕಾರ್ಯಗಳನ್ನೂ ಮತ್ತು ರಾಜಕೀಯ ಕಾರ್ಯಗಳನ್ನೂ ನಡೆಸುತ್ತಿದ್ದರು. ಸಮರ್ಥರಾದ ಅವರು ಸಾವಿರದ ಏಳುನೂರು ಜನರು.
३०और हेब्रोनियों में से हशब्याह और उसके भाई जो सत्रह सौ बलवान पुरुष थे, वे यहोवा के सब काम और राजा की सेवा के विषय यरदन के पश्चिम ओर रहनेवाले इस्राएलियों के अधिकारी ठहरे।
31 ೩೧ ದಾವೀದನ ಆಳ್ವಿಕೆಯ ನಲವತ್ತನೆಯ ವರ್ಷದಲ್ಲಿ ಹೆಬ್ರೋನ್ಯರಿಗೆ ಸೇರಿದವರು ಯಾರಾರೆಂದು ವಿಚಾರಣೆ ನಡೆಸಿದಾಗ ಗಿಲ್ಯಾದಿನ ಯಾಜೇರಿನ ಶ್ರೀಮಂತರಿಗೆ ಅನೇಕರು ಅವರ ಗೋತ್ರದವರಾಗಿರುತ್ತಾರೆಂದು ಗೊತ್ತಾಯಿತು. ಈ ಹೆಬ್ರೋನ್ಯರಲ್ಲಿ ಯೆರೀಯನು ಪ್ರಧಾನನು.
३१हेब्रोनियों में से यरिय्याह मुख्य था, अर्थात् हेब्रोनियों की पीढ़ी-पीढ़ी के पितरों के घरानों के अनुसार दाऊद के राज्य के चालीसवें वर्ष में वे ढूँढ़े गए, और उनमें से कई शूरवीर गिलाद के याजेर में मिले।
32 ೩೨ ಶ್ರೀಮಂತರೂ ಕುಟುಂಬ ಪ್ರಧಾನರೂ ಆದ ಅವನ ಗೋತ್ರಬಂಧುಗಳು ಎರಡು ಸಾವಿರದ ಏಳುನೂರು ಜನರು. ಅರಸನಾದ ದಾವೀದನು ರೂಬೇನ್, ಗಾದ್ ಅರ್ಧಮನಸ್ಸೆ ಕುಲಗಳವರ ಮೇಲೆ ಇವರನ್ನೇ ದೈವಿಕ ಕಾರ್ಯಗಳಲ್ಲಿಯೂ, ರಾಜಕೀಯ ಕಾರ್ಯಗಳಲ್ಲಿಯೂ ಅಧಿಕಾರಿಗಳನ್ನಾಗಿ ನೇಮಿಸಿದನು.
३२उसके भाई जो वीर थे, पितरों के घरानों के दो हजार सात सौ मुख्य पुरुष थे, इनको दाऊद राजा ने परमेश्वर के सब विषयों और राजा के विषय में रूबेनियों, गादियों और मनश्शे के आधे गोत्र का अधिकारी ठहराया।