< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 22 >
1 ೧ ಆಗ ದಾವೀದನು, “ಇದೇ ದೇವರಾದ ಯೆಹೋವನ ಆಲಯ. ಇದೇ ಇಸ್ರಾಯೇಲರು ಯಜ್ಞವನ್ನು ಅರ್ಪಿಸತಕ್ಕ ಯಜ್ಞವೇದಿ” ಎಂದು ಹೇಳಿದನು.
१मग दावीद म्हणाला, “हेच ते परमेश्वर देवाचे मंदिर आहे. इस्राएलांची होमार्पणाची वेदीही इथेच केली जाईल.”
2 ೨ ಅನಂತರ ದಾವೀದನು ಇಸ್ರಾಯೇಲ್ ದೇಶದಲ್ಲಿದ್ದ ಅನ್ಯಜನಗಳನ್ನು ಒಟ್ಟುಗೂಡಿಸುವುದಕ್ಕೆ ಆಜ್ಞಾಪಿಸಿ, ಅವರಲ್ಲಿದ್ದ ಕಲ್ಲುಕುಟಿಗರನ್ನು ದೇವಾಲಯದ ಕಟ್ಟಡಕ್ಕಾಗಿ ಕಲ್ಲುಗಳನ್ನು ಕೆತ್ತುವುದಕ್ಕೆ ನೇಮಿಸಿದನು.
२इस्राएलमध्ये जे परदेशी लोक राहत होते त्या सर्वांना दावीदाने त्याच्या सेवकांना आज्ञा देऊन एकत्र बोलवून घेतले. देवाचे मंदिर बांधण्यासाठी दगडाचे चिरे घडवण्याचे काम त्यांच्यावर सोपवले.
3 ೩ ಇದಲ್ಲದೆ ದಾವೀದನು ದ್ವಾರಗಳ ಮೂಲಕ ಹೋಗುವ ಬಾಗಿಲುಗಳಿಗೆ ಬೇಕಾದ ಮೊಳೆಗಳನ್ನೂ, ಪಟ್ಟಿಗಳನ್ನೂ ಮಾಡುವುದಕ್ಕೆ ಬಹಳ ಕಬ್ಬಿಣಗಳನ್ನೂ,
३दावीदाने दरवाजांसाठी खिळे आणि बिजागऱ्यासाठी लागणारे लोखंड पुरवले व त्याने वजन करता येणार नाही इतके पितळ,
4 ೪ ಲೆಕ್ಕವಿಲ್ಲದ್ದಷ್ಟು ತಾಮ್ರವನ್ನೂ, ಎಣಿಸಲಾರದಷ್ಟು ದೇವದಾರುಮರಗಳನ್ನೂ ಸಿದ್ಧಪಡಿಸಿದನು. ಚೀದೋನ್ಯರು ಮತ್ತು ತೂರ್ಯರೂ ಅವನಿಗೆ ದೇವದಾರುಮರಗಳನ್ನು ತಂದುಕೊಟ್ಟರು.
४सीदोन आणि सोर या नगरांतील लोकांनी गंधसरूचे पुष्कळ लाकूड दावीदाकडे आणले आणि ते लाकूड तर एवढे आले की त्यांची मोजदाद करणे कठीण होते.
5 ೫ ದಾವೀದನು ತನ್ನ ಮನಸ್ಸಿನಲ್ಲಿ ತನ್ನ ಮಗನಾದ ಸೊಲೊಮೋನನು ಎಳೆ ಪ್ರಾಯದವನಾಗಿದ್ದಾನೆ. ಯೆಹೋವನಿಗೋಸ್ಕರ ಕಟ್ಟಿಸತಕ್ಕ ಆಲಯದ ಕೀರ್ತಿಯು ಎಲ್ಲಾ ದೇಶಗಳಲ್ಲಿ ಘನತೆಯನ್ನು ಹೊಂದಬೇಕಾದರೆ ಅದು ಅಧಿಕ ಶೋಭಾಯಮಾನವಾಗಿರಬೇಕು. ಆದುದರಿಂದ ಅದಕ್ಕೆ ಬೇಕಾಗುವುದನ್ನೆಲ್ಲಾ ಸಿದ್ಧಪಡಿಸುವೆನು ಅಂದುಕೊಂಡು ಸಾಯುವುದಕ್ಕೆ ಮೊದಲೇ ಎಲ್ಲಾ ಸಿದ್ಧತೆಗಳನ್ನು ಮಾಡಿದನು.
५दावीद म्हणाला, “माझा पुत्र शलमोन अजून तरुण व अननुभवी आहे आणि परमेश्वराचे मंदिर मात्र विशेषतः उत्कृष्ट बांधले गेले पाहिजे, याकरिता की सर्व इतर देशात सुप्रसिध्द आणि वैभवशाली असे झाले पाहिजे. म्हणून मी त्याच्या बांधण्याची तयारी करीन.” असे म्हणून दावीदाने आपल्या मृत्यूपूर्वी बरीच तयारी केली.
6 ೬ ಆ ಮೇಲೆ ಅವನು ತನ್ನ ಮಗನಾದ ಸೊಲೊಮೋನನನ್ನು ಕರೆಯಿಸಿ ಇಸ್ರಾಯೇಲ್ ದೇವರಾದ ಯೆಹೋವನಿಗೋಸ್ಕರ ಆಲಯವನ್ನು ಕಟ್ಟಬೇಕೆಂದು ಅವನಿಗೆ ಆಜ್ಞಾಪಿಸಿದನು.
६मग त्याने आपला पुत्र शलमोन याला बोलावले. इस्राएलचा देव परमेश्वर याच्यासाठी मंदिर बांधण्याची त्याने त्यास आज्ञा दिली.
7 ೭ ದಾವೀದನು ಸೊಲೊಮೋನನಿಗೆ, “ನಾನು ನನ್ನ ದೇವರಾದ ಯೆಹೋವನ ಹೆಸರಿಗೋಸ್ಕರ ಅಲಯವನ್ನು ಕಟ್ಟಬೇಕೆಂದು ಮನಸ್ಸು ಮಾಡಿದ್ದೆನು.
७दावीद शलमोनाला म्हणाला, “माझ्या मुला, माझा देव परमेश्वर याच्या नावासाठी मंदिर बांधण्याची माझी इच्छा होती.
8 ೮ ಆದರೆ ಯೆಹೋವನು ನನಗೆ, ‘ನೀನು ಬಹಳ ರಕ್ತವನ್ನು ಸುರಿಸಿದವನೂ, ಮಹಾ ಯುದ್ಧಗಳನ್ನು ನಡಿಸಿದವನೂ ಆಗಿರುತ್ತೀ. ನೀನು ನನ್ನೆದುರಿನಲ್ಲಿ ಬಹಳ ರಕ್ತವನ್ನು ಸುರಿಸಿದ್ದರಿಂದ ನನ್ನ ಹೆಸರಿಗಾಗಿ ಆಲಯವನ್ನು ಕಟ್ಟಬಾರದು.
८पण परमेश्वर माझ्याकडे आला व म्हणाला, तू बऱ्याच लढाया केल्यास आणि त्यामध्ये पुष्कळ रक्त पाडले. तेव्हा तुला माझ्यासाठी मंदिर बांधता येणार नाही. कारण तू माझ्यापुढे भूमीवर पुष्कळ रक्त पाडले आहे.
9 ೯ ನಿನಗೆ ಒಬ್ಬ ಮಗನು ಹುಟ್ಟುವನು, ಅವನು ಸಮಾಧಾನ ಪುರುಷನಾಗಿರುವನು. ನಾನು ಅವನ ಸುತ್ತಣ ಎಲ್ಲಾ ವಿರೋಧಿಗಳನ್ನು ಅಡಗಿಸಿ, ಅವನಿಗೆ ಸಮಾಧಾನವನ್ನು ಅನುಗ್ರಹಿಸುವೆನು. ಅವನಿಗೆ ಸೊಲೊಮೋನನೆಂಬ ಹೆಸರಿರುವುದು. ಅವನ ಕಾಲದಲ್ಲಿ ಇಸ್ರಾಯೇಲರಿಗೆ ಸಮಾಧಾನವನ್ನೂ ಮತ್ತು ಸೌಭಾಗ್ಯವನ್ನೂ ದಯಪಾಲಿಸುವೆನು.
९मात्र तुला पुत्र होईल तो शांतीप्रिय मनुष्य असेल. मी त्यास त्याच्या सर्व शत्रूपासून प्रत्येक बाजूने विसावा देईन. कारण त्याचे नाव शलमोन असे होईल आणि इस्राएलांस त्याच्या दिवसात मी शांतता आणि स्वस्थता देईन.
10 ೧೦ ಅವನೇ ನನ್ನ ಹೆಸರಿಗಾಗಿ ಒಂದು ಮನೆಯನ್ನು ಕಟ್ಟುವನು. ಅವನು ನನಗೆ ಮಗನಾಗಿರುವನು. ನಾನು ಅವನಿಗೆ ತಂದೆಯಾಗಿರುವೆನು. ಇಸ್ರಾಯೇಲರಲ್ಲಿ ಅವನ ರಾಜ್ಯಸಿಂಹಾಸನವನ್ನು ನಿರಂತರವಾಗಿ ಸ್ಥಿರಪಡಿಸುವೆನು ಎಂಬುದಾಗಿ ಹೇಳಿದನು’.
१०तो माझ्याप्रीत्यर्थ मंदिर बांधील. तो माझा पुत्र आणि मी त्याचा पिता होईन. त्याचे राजासन मी इस्राएलावर सर्वकाळापर्यंत स्थापित करील.”
11 ೧೧ ನನ್ನ ಮಗನೇ, ನೀನು ಸಫಲನಾಗಿರುವಂತೆಯೂ, ನಿನ್ನ ದೇವರಾದ ಯೆಹೋವನು ನಿನ್ನ ವಿಷಯದಲ್ಲಿ ಮಾಡಿದ ವಾಗ್ದಾನದ ಪ್ರಕಾರ ನೀನು ದೇವಾಲಯವನ್ನು ಕಟ್ಟುವಂತೆಯೂ ಆತನು ನಿನ್ನ ಸಂಗಡ ಇರಲಿ.
११“आता माझ्या मुला, परमेश्वर तुझ्याबरोबर असो व तुला यशस्वी करो. त्याने तुला सांगितल्याप्रमाणे तू परमेश्वर देवाचे मंदिर बांध.
12 ೧೨ ನೀನು ನಿನ್ನ ದೇವರಾದ ಯೆಹೋವನ ಧರ್ಮಶಾಸ್ತ್ರವನ್ನು ಕೈಕೊಳ್ಳುವಂತೆ ಆತನು ನಿನಗೆ ಜ್ಞಾನವಿವೇಕಗಳನ್ನು ದಯಪಾಲಿಸಿ, ಇಸ್ರಾಯೇಲರನ್ನು ಆಳುವುದಕ್ಕೆ ನಿನ್ನನ್ನು ನೇಮಿಸಲಿ.
१२जेव्हा इस्राएलावर तो तुला अधिकार देईल तेव्हा परमेश्वर देवाचे नियम पाळायला फक्त परमेश्वरच तुला अंर्तज्ञान आणि समजूतदारपणा देवो.
13 ೧೩ ಯೆಹೋವನು ಮೋಶೆಯ ಮುಖಾಂತರವಾಗಿ ಇಸ್ರಾಯೇಲರಿಗೆ ಕೊಟ್ಟ ವಿಧಿನ್ಯಾಯಗಳನ್ನು ನೀನು ಕೈಕೊಳ್ಳುವುದಾದರೆ ಸಫಲನಾಗುವಿ. ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಅಂಜಬೇಡ, ಕಳವಳಗೊಳ್ಳಬೇಡ.
१३इस्राएलसाठी परमेश्वराने मोशेला जे नियमशास्त्र सांगितले ते तू न विसरता पाळ म्हणजे तू यशस्वी होशील. बलवान हो व धैर्य धर. घाबरु नको किंवा नाउमेद होऊ नको.
14 ೧೪ ಇಗೋ, ನಾನು ಬಹು ಪ್ರಯಾಸಪಟ್ಟು ಯೆಹೋವನ ಆಲಯಕ್ಕೋಸ್ಕರ ಒಂದು ಲಕ್ಷ ತಲಾಂತು ಬಂಗಾರವನ್ನೂ, ಹತ್ತು ಲಕ್ಷ ತಲಾಂತು ಬೆಳ್ಳಿಯನ್ನೂ, ಲೆಕ್ಕವಿಲ್ಲದಷ್ಟು ತಾಮ್ರ, ಕಬ್ಬಿಣ ಇವುಗಳನ್ನೂ ಕಲ್ಲು ಮತ್ತು ಮರಗಳನ್ನೂ ಕೂಡಿಸಿದ್ದೇನೆ. ನೀನು ಇದಕ್ಕೆ ಇನ್ನೂ ಹೆಚ್ಚು ಕೂಡಿಸಬೇಕು.
१४पाहा, परमेश्वराच्या मंदिरासाठी मी खूप कष्टाने एक लक्ष किक्कार सोने आणि दहा लक्ष किक्कार रुपे आणि पितळ व लोखंड यांचा मोठ्या प्रमाणात साठा करून तयारी केली आहे. मी दगड, लाकूडसुध्दा पुरवले आहे. तू या सर्वात अधिक भर घाल.
15 ೧೫ ಇದಲ್ಲದೆ ಕಟ್ಟುವ ಕೆಲಸಕ್ಕಾಗಿ ಬೇಕಾದಷ್ಟು ಕಲ್ಲುಕುಟಿಗರೂ, ಶಿಲ್ಪಿಗಳೂ,
१५तुझ्याजवळ पुष्कळ कामगार आहेत. पाथरवट, गवंडी आणि सुतार, आणि सर्व प्रकारच्या कामामध्ये कुशल असे हुशार लोक आहेत.
16 ೧೬ ಬಡಗಿಗಳೂ, ಬಂಗಾರ, ಬೆಳ್ಳಿ, ತಾಮ್ರ, ಕಬ್ಬಿಣಗಳ ಎಲ್ಲಾ ತರಹದ ಕೆಲಸವನ್ನು ಮಾಡುವುದರಲ್ಲಿ ಜಾಣರು ನಿನ್ನೊಂದಿಗಿರುತ್ತಾರೆ. ಅವರನ್ನು ಎಣಿಸಲು ಸಾಧ್ಯವಿಲ್ಲ. ಎದ್ದು ಸಿದ್ಧನಾಗಿ ಕೆಲಸಕ್ಕೆ ಕೈ ಹಾಕು, ಯೆಹೋವನು ನಿನ್ನ ಸಂಗಡ ಇರಲಿ” ಎಂದು ಹೇಳಿದನು.
१६जे कोणी सोने, रुपे, पितळ, लोखंड यावर काम करू शकतात, अशी असंख्य माणसे तुझ्याबरोबर आहेत. तेव्हा आता कामाला सुरवात कर. परमेश्वर तुझ्याबरोबर आहे.”
17 ೧೭ ಆಮೇಲೆ ತನ್ನ ಮಗನಾದ ಸೊಲೊಮೋನನಿಗೆ ನೆರವಾಗಬೇಕೆಂದು ದಾವೀದನು ಇಸ್ರಾಯೇಲರ ಎಲ್ಲಾ ಅಧಿಪತಿಗಳಿಗೂ ಆಜ್ಞಾಪಿಸಿದನು.
१७दावीदाने इस्राएलामधील सर्व पुढाऱ्यांनासुध्दा आपला पुत्र शलमोन याला सहकार्य करण्याची आज्ञा केली. तो म्हणाला,
18 ೧೮ ಆತನು ಅವರಿಗೆ, “ನಿಮ್ಮ ದೇವರಾದ ಯೆಹೋವನು ನಿಮ್ಮ ಸಂಗಡ ಇದ್ದು ಎಲ್ಲಾ ಕಡೆಗಳಲ್ಲಿಯೂ ನಿಮಗೆ ವಿಶ್ರಾಂತಿಯನ್ನು ಅನುಗ್ರಹಿಸಿದ್ದಾನಲ್ಲಾ. ಆತನು ಈ ದೇಶದ ಮೂಲನಿವಾಸಿಗಳನ್ನು ನನ್ನ ಕೈಗೆ ಒಪ್ಪಿಸಿದ್ದಾನೆ. ದೇಶವು ಯೆಹೋವನಿಗೂ ಆತನ ಪ್ರಜೆಗಳಿಗೂ ಸ್ವಾಧೀನವಾಯಿತು ನೋಡಿರಿ.
१८“तुमचा देव परमेश्वर तुम्हासोबत आहे. आणि प्रत्येक बाजूने त्याने तुम्हास शांतता दिली आहे. कारण त्याने देशातले राहणारे माझ्या हाती दिले आहेत, परमेश्वराच्यापुढे आणि त्याच्या लोकांच्या आता हा देश ताब्यात आला आहे.
19 ೧೯ ಆದುದರಿಂದ ನೀವು ಪೂರ್ಣಮನಸ್ಸಿನಿಂದಲೂ, ಪೂರ್ಣಪ್ರಾಣದಿಂದಲೂ ನಿಮ್ಮ ದೇವರಾದ ಯೆಹೋವನ ದರ್ಶನವನ್ನು ಬಯಸಿರಿ. ಏಳಿರಿ, ನಿಮ್ಮ ದೇವರಾದ ಯೆಹೋವನ ಪವಿತ್ರಾಲಯವನ್ನು ಕಟ್ಟಿರಿ. ಯೆಹೋವನ ಒಡಂಬಡಿಕೆ ಮಂಜೂಷವನ್ನೂ, ದೇವಾರಾಧನೆಯ ಪವಿತ್ರ ಸಾಮಗ್ರಿಗಳನ್ನೂ ಯೆಹೋವನ ಹೆಸರಿಗೋಸ್ಕರ ಕಟ್ಟಲ್ಪಡುವ ಮಂದಿರದಲ್ಲಿ ಇಡಿರಿ” ಎಂದು ಹೇಳಿದನು.
१९तेव्हा आता अंत: करणपूर्वक तुम्ही परमेश्वर तुमचा देव याचा शोध करा. उठा व परमेश्वर देवाचे पवित्र मंदिर बांधा. कारण परमेश्वराच्या नावासाठी जे मंदिर बांधायचे आहे त्यामध्ये मग परमेश्वराच्या कराराचा कोश आणि देवाची इतर पवित्र वस्तू आणून ठेवा.”