< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 21 >
1 ೧ ಸೈತಾನನು ಇಸ್ರಾಯೇಲರಿಗೆ ವಿರುದ್ಧ ಎದ್ದು, ಇಸ್ರಾಯೇಲರ ಜನಗಣತಿ ಮಾಡುವುದಕ್ಕೆ ದಾವೀದನನ್ನು ಪ್ರೇರೇಪಿಸಿದನು.
၁စာတန်သည်ဣသရေလပြည်သားတို့ကို ဒုက္ခပေးလိုသဖြင့် ဒါဝိဒ်အားသန်းခေါင် စာရင်းကောက်ယူရန်ဆုံးဖြတ်စေ၏။-
2 ೨ ದಾವೀದನು ಯೋವಾಬನನ್ನೂ ಮತ್ತು ಜನಾಧಿಪತಿಗಳನ್ನೂ ಕರೆದು, “ನನಗೆ ಜನರ ಲೆಕ್ಕ ಗೊತ್ತಾಗುವ ಹಾಗೆ ನೀವು ಬೇರ್ಷೆಬದಿಂದ ದಾನ್ ಊರಿನವರೆಗೂ ಸಂಚರಿಸಿ, ಇಸ್ರಾಯೇಲರನ್ನು ಲೆಕ್ಕ ಮಾಡಿಕೊಂಡು ಬನ್ನಿರಿ” ಎಂದು ಆಜ್ಞಾಪಿಸಿದನು.
၂ဒါဝိဒ်သည်ယွာဘနှင့်အခြားတပ်မှူးများ အား``သင်တို့သည်တိုင်းပြည်တစ်စွန်းမှ အခြားတစ်စွန်းသို့တိုင်အောင် ဣသရေလ နိုင်ငံတစ်လျှောက်လုံးကိုသွားရောက်၍လူဦး ရေစာရင်းကောက်ယူကြလော့။ လူဦးရေ မည်မျှရှိသည်ကိုငါသိလိုသည်'' ဟု မိန့်တော်မူ၏။
3 ೩ ಆಗ ಯೋವಾಬನು, “ನನ್ನ ಒಡೆಯನಾದ ಅರಸನೇ, ಯೆಹೋವನು ತನ್ನ ಪ್ರಜೆಗಳನ್ನು ನೂರರಷ್ಟು ಹೆಚ್ಚಿಸಲಿ. ಅವರೆಲ್ಲರೂ ನನ್ನ ಒಡೆಯನ ದಾಸರಷ್ಟೆ. ಒಡೆಯನು ಇಂಥದ್ದನ್ನು ಅಪೇಕ್ಷಿಸುವುದೇನು? ಇಸ್ರಾಯೇಲರನ್ನು ಅಪರಾಧಕ್ಕೆ ಗುರಿಮಾಡುವುದೇಕೆ” ಎಂದನು.
၃ယွာဘက``ထာဝရဘုရားသည်ဣသရေလ ပြည်သားတို့အား ယခုထက်အဆတစ်ရာ ပိုမိုတိုးပွားအောင်ပြုတော်မူပါစေသော။ အရှင်မင်းကြီး၊ သူတို့အပေါင်းသည်ကိုယ် တော်ရှင်၏အစေခံများဖြစ်ကြပါ၏။ ဣသရေလအမျိုးသားတစ်ရပ်လုံးအပြစ် ရကြစေရန် အဘယ်ကြောင့်ဤအမှုကို ပြုတော်မူပါသနည်း'' ဟုလျှောက်ထား၏။-
4 ೪ ಆದರೆ ಅರಸನು ಯೋವಾಬನಿಗೆ ಕಿವಿಗೊಡದೆ ತನ್ನ ಮಾತನ್ನೇ ನಡೆಸಿದ್ದರಿಂದ ಅವನು ಹೊರಟುಹೋಗಿ ಇಸ್ರಾಯೇಲರ ಎಲ್ಲಾ ಪ್ರಾಂತ್ಯಗಳಲ್ಲಿ ಸಂಚರಿಸಿ ಯೆರೂಸಲೇಮಿಗೆ ಹಿಂದಿರುಗಿದನು.
၄သို့ရာတွင်မင်းကြီးသည်မိမိ၏အမိန့် အတိုင်းလိုက်နာစေတော်မူ၏။ ယွာဘသည် ထွက်ခွာသွားပြီးလျှင် ဣသရေလနိုင်ငံ တစ်ခုလုံးသို့လှည့်လည်ကာယေရုရှလင် မြို့သို့ပြန်လာ၏။-
5 ೫ ಯೋವಾಬನು ದಾವೀದನಿಗೆ ಒಪ್ಪಿಸಿದ ಜನಗಣತಿಯ ಸಂಖ್ಯೆಯು ಇಸ್ರಾಯೇಲರಲ್ಲಿ ಯುದ್ಧಕ್ಕೆ ಹೋಗತಕ್ಕ ಸೈನಿಕರು ಹನ್ನೊಂದು ಲಕ್ಷ ಮತ್ತು ಯೆಹೂದ್ಯರಲ್ಲಿ ನಾಲ್ಕು ಲಕ್ಷದ ಎಪ್ಪತ್ತು ಸಾವಿರ.
၅သူသည်စစ်မှုထမ်းနိုင်သူလူပေါင်းဣသ ရေလပြည်မှ တစ်သန်းတစ်သိန်းနှင့်ယုဒ ပြည်မှလေးသိန်းခုနစ်သောင်းရှိကြောင်း ဒါဝိဒ်မင်းအားအစီရင်ခံလေသည်။-
6 ೬ ಅರಸನ ಅಪ್ಪಣೆಯು ಯೋವಾಬನಿಗೆ ಅಸಹ್ಯವಾಗಿದ್ದುದರಿಂದ ಅವನು ಲೇವಿ ಮತ್ತು ಬೆನ್ಯಾಮೀನ್ ಕುಲಗಳವರ ಜನಗಣತಿಯನ್ನು ಮಾಡಲಿಲ್ಲ.
၆ယွာဘသည်ဘုရင်၏အမိန့်ကိုမနှစ်သက် သဖြင့် လေဝိနှင့်ဗင်္ယာမိန်အနွယ်တို့တွင် သန်းခေါင်စာရင်းမကောက်ယူခဲ့ပေ။
7 ೭ ಜನಗಣತಿ ಮಾಡಿದ್ದು ದೇವರಿಗೆ ಕೆಟ್ಟದ್ದೆಂದು ಕಂಡದ್ದರಿಂದ ಆತನು ಇಸ್ರಾಯೇಲರನ್ನು ಬಾಧಿಸಿದನು.
၇ဒါဝိဒ်ပြုသောအမှုကိုဘုရားသခင်သည် နှစ်သက်တော်မမူသဖြင့် ဣသရေလ အမျိုးသားတို့အားဒဏ်ခတ်တော်မူ၏။-
8 ೮ ಆಗ ದಾವೀದನು, “ನಾನು ಬುದ್ಧಿಹೀನ ಕಾರ್ಯವನ್ನು ಮಾಡಿ ಪಾಪಿಯಾಗಿದ್ದೇನೆ. ದಯವಿಟ್ಟು ನಿನ್ನ ಸೇವಕನ ಅಪರಾಧವನ್ನು ಕ್ಷಮಿಸು” ಎಂದು ದೇವರನ್ನು ಪ್ರಾರ್ಥಿಸಿದನು.
၈ဒါဝိဒ်က``ကျွန်တော်မျိုးသည် ဤကြောက်မက် ဖွယ်ကောင်းသောအပြစ်ကိုကူးလွန်မိပါပြီ။ ကျွန်တော်မျိုးအား အပြစ်ဖြေလွှတ်တော် မူပါ။ ကျွန်တော်မျိုးသည် မိုက်မဲစွာပြုမိ ပါပြီ'' ဟုဘုရားသခင်အားလျှောက် ထား၏။
9 ೯ ಯೆಹೋವನು ದಾವೀದನ ದರ್ಶಿಯಾದ ಗಾದನಿಗೆ ಹೇಳಿದ್ದೇನೆಂದರೆ,
၉ထိုအခါထာဝရဘုရားသည် ဒါဝိဒ်၏ ပရောဖက်ဖြစ်သူဂဒ်အား၊-
10 ೧೦ ಯೆಹೋವನು ಇಂತೆನ್ನುತ್ತಾನೆ, “ನಾನು ಮೂರು ವಿಧವಾದ ಶಿಕ್ಷೆಯನ್ನು ನಿನ್ನ ಮುಂದೆ ಇಡುತ್ತೇನೆ. ಅವುಗಳಲ್ಲಿ ಯಾವುದನ್ನು ನಿನ್ನ ಮೇಲೆ ಬರಮಾಡಬೇಕೋ ಆರಿಸಿಕೋ ಎಂಬುದಾಗಿ ದಾವೀದನಿಗೆ ಹೇಳು” ಎಂದನು.
၁၀သင်သည်ဒါဝိဒ်ထံသို့သွားလော့။ ငါပြုရန် ရှိသည့်အမှုသုံးခုအနက် သူသည်မိမိ ကြိုက်နှစ်သက်ရာတစ်ခုကို ရွေးချယ်နိုင် ကြောင်းပြောကြားလော့။ သူရွေးချယ်ရာ ကိုငါပြုမည်'' ဟုမိန့်တော်မူ၏။
11 ೧೧ ಆಗ ಗಾದನು ದಾವೀದನ ಬಳಿಗೆ ಹೋಗಿ ಅವನಿಗೆ, “ಯೆಹೋವನು ಹೇಳುವುದೇನೆಂದರೆ,
၁၁ဂဒ်သည်ဒါဝိဒ်ထံသို့သွား၍ ထာဝရဘုရား မိန့်တော်မူသည်အတိုင်းတင်ပြပြီးလျှင်၊-
12 ೧೨ ‘ಮೂರು ವರ್ಷಗಳ ವರೆಗೆ ಬರಗಾಲ ಉಂಟಾಗಬೇಕೋ, ಇಲ್ಲವೆ ನೀನು ಮೂರು ತಿಂಗಳು ನಿನ್ನ ಶತ್ರುಗಳ ಚಿತ್ರಹಿಂಸೆಗೆ ಬಲಿಯಾಗುವುದು ಬೇಕೋ, ಇಲ್ಲವೆ ಇಸ್ರಾಯೇಲರ ಸಮಸ್ತ ಪ್ರಾಂತ್ಯಗಳಲ್ಲಿ ಯೆಹೋವನು ಕಳುಹಿಸಿದ ಸಂಹಾರದೂತನಿಂದ ಉಂಟಾಗುವ ಮೂರು ದಿನಗಳ ಘೋರವ್ಯಾಧಿಯ ರೂಪವಾದ ಯೆಹೋವನ ಶಿಕ್ಷೆ ಬೇಕೋ, ಈ ಮೂರರಲ್ಲಿ ಒಂದನ್ನು ಆರಿಸಿಕೊ’ ಎಂಬುದೇ. ನನ್ನನ್ನು ಕಳುಹಿಸಿದವನಿಗೆ ಯಾವ ಉತ್ತರವನ್ನು ತೆಗೆದುಕೊಂಡು ಹೋಗಬೇಕು ಆಲೋಚಿಸಿ ಹೇಳು” ಎಂದು ಹೇಳಿದನು.
၁၂``အရှင်မင်းကြီး၊ သုံးနှစ်ပတ်လုံးအစာ ငတ်မွတ်ခေါင်းပါးသည့်ဘေး၊ သုံးလပတ် လုံးသင့်ကိုရန်သူလိုက်မီ၍ထားဖြင့် လုပ်ကြံသောဘေး၊ သုံးရက်ပတ်လုံးကပ် ရောဂါတည်းဟူသောထာဝရဘုရား ၏ဋ္ဌားဖြင့် ကောင်းကင်တမန်ကိုစေလွှတ် ကာ ဣသရေလနိုင်ငံတစ်လျှောက်လုံး တွင်သတ်ဖြတ်မည့်ဘေးတို့အနက် အဘယ်ကိုရွေးချယ်တော်မူပါမည်နည်း။ ထာဝရဘုရားအားအကျွန်ုပ်ပြန်ကြား လျှောက်ထားရပါမည်'' ဟုလျှောက်လေ၏။
13 ೧೩ ಅದಕ್ಕೆ ದಾವೀದನು ಗಾದನಿಗೆ, “ನಾನು ಬಲು ಇಕ್ಕಟ್ಟಿನಲ್ಲಿರುತ್ತೇನೆ. ಮನುಷ್ಯರ ಕೈಯಲ್ಲಿ ಬೀಳುವುದಕ್ಕಿಂತ ಯೆಹೋವನ ಹಸ್ತದಲ್ಲಿ ಬೀಳುವುದು ಮೇಲು. ಆತನು ಕೃಪಾಪೂರ್ಣನು” ಎಂದು ಹೇಳಿದನು.
၁၃ဒါဝိဒ်သည်ဂဒ်အား``ငါသည်အလွန်ဆိုးဝါး သောအခြေအနေသို့ရောက်၍နေလေပြီ။ သို့ရာတွင်လူတို့အပြစ်ပေးသည်ကိုငါ မခံလို။ ထာဝရဘုရားအပြစ်ပေးတော် မူပါစေ။ ကိုယ်တော်သည်ကရုဏာထား တော်မူတတ်သောအရှင်ဖြစ်ပါ၏'' ဟု ဆို၏။
14 ೧೪ ಆಗ ಯೆಹೋವನು ಇಸ್ರಾಯೇಲರ ಮೇಲೆ ವ್ಯಾಧಿಯನ್ನು ಬರಮಾಡಿದನು. ಅವರಲ್ಲಿ ಎಪ್ಪತ್ತು ಸಾವಿರ ಜನರು ಸತ್ತರು.
၁၄သို့ဖြစ်၍ထာဝရဘုရားသည်ဣသရေလ ပြည်သားတို့အပေါ်သို့ ကပ်ရောဂါသက် ရောက်စေတော်မူသဖြင့်လူခုနစ်သောင်း သေလေ၏။-
15 ೧೫ ದೇವರು ಯೆರೂಸಲೇಮನ್ನು ನಾಶಪಡಿಸುವುದಕ್ಕೆ ದೂತರನ್ನು ಕಳುಹಿಸಿದನು. ಆದರೆ ಆ ದೂತನು ನಾಶಪಡಿಸುವುದಕ್ಕಿದ್ದಾಗ ಯೆಹೋವನು ಅದನ್ನು ಕಂಡು ಆ ಕೇಡಿನ ವಿಷಯದಲ್ಲಿ ಪಶ್ಚಾತ್ತಾಪಪಟ್ಟು ಸಂಹಾರ ದೂತನಿಗೆ, “ಸಾಕು ನಿನ್ನ ಕೈಯನ್ನು ಹಿಂದೆಗೆ” ಎಂದು ಆಜ್ಞಾಪಿಸಿದನು. ಆಗ ಯೆಹೋವನ ದೂತನು ಯೆಬೂಸಿಯನಾದ ಒರ್ನಾನನ ಕಣದಲ್ಲಿ ನಿಂತನು.
၁၅ဘုရားသခင်သည်ယေရုရှလင်မြို့ကို ဖျက်ဆီးတော်မူရန် ကောင်းကင်တမန်တစ် ပါးစေလွှတ်တော်မူပြီးမှစိတ်ပြောင်းလဲ တော်မူ၍``ဤမျှနှင့်တော်လောက်ပြီ။ ရပ် တန့်လော့။ ဆက်၍မဖျက်ဆီးနှင့်'' ဟု ထို ကောင်းကင်တမန်အားမိန့်တော်မူ၏။ ကောင်းကင်တမန်သည်ယေဗုသိအမျိုး သားအရောန၏ကောက်နယ်တလင်း အနီးတွင်ရပ်လျက်နေသတည်း။
16 ೧೬ ದಾವೀದನು ಕಣ್ಣೆತ್ತಿ ನೋಡಿ ಯೆಹೋವನ ದೂತನು ಭೂಮ್ಯಾಕಾಶಗಳ ನಡುವೆ ನಿಂತಿರುವುದನ್ನೂ, ಚಾಚಿದ ಕೈಯಲ್ಲಿ ಯೆರೂಸಲೇಮಿಗೆ ವಿರುದ್ಧವಾಗಿ ಹಿರಿದ ಕತ್ತಿಯಿರುವುದನ್ನೂ ಕಂಡಾಗ ಅವನೂ, ಹಿರಿಯರೂ ಗೋಣಿತಟ್ಟನ್ನು ಹೊದ್ದುಕೊಂಡು ಬೋರಲು ಬಿದ್ದರು.
၁၆ကောင်းကင်တမန်သည်ယေရုရှလင်မြို့ကို ဖျက်ဆီးပစ်ရန် ဋ္ဌားကိုကိုင်ကာလေထဲတွင် ရပ်နေသည်ကိုဒါဝိဒ်မြင်လေ၏။ ထိုအခါ သူသည်ဣသရေလပြည်သားခေါင်းဆောင် များနှင့်အတူ မြေသို့တိုင်အောင်ဦးညွှတ် ပျပ်ဝပ်လိုက်၏။ သူတို့အားလုံးပင်လျှင် လျှော်တေအဝတ်ကိုဝတ်ဆင်ထားသတည်း။-
17 ೧೭ ಮತ್ತು ದಾವೀದನು ದೇವರಿಗೆ, “ಜನರನ್ನು ಲೆಕ್ಕಿಸಬೇಕೆಂದು ಆಜ್ಞಾಪಿಸಿದವನು ನಾನಲ್ಲವೋ. ಮಹಾಪಾಪಮಾಡಿದವನು ನಾನೇ. ಕುರಿಗಳಂತಿರುವ ಈ ಜನರು ಏನು ಮಾಡಿದ್ದಾರೆ? ಯೆಹೋವನೇ, ನನ್ನ ದೇವರೇ, ನಿನ್ನ ಹಸ್ತವು ನಿನ್ನ ಜನರನ್ನು ಬಾಧಿಸುವುದಕ್ಕೆ ಅವರಿಗೆ ವಿರುದ್ಧವಾಗಿರದೆ ನನಗೂ ನನ್ನ ಮನೆಯವರಿಗೂ ವಿರುದ್ಧವಾಗಿರಲಿ” ಎಂದು ಬೇಡಿಕೊಂಡನು.
၁၇ဒါဝိဒ်က``အို ဘုရားသခင်၊ အမှားကိုပြု သူမှာကျွန်တော်မျိုးဖြစ်ပါ၏။ သန်းခေါင် စာရင်းကောက်ယူရန်အမိန့်ပေးသူမှာ ကျွန်တော်မျိုးဖြစ်ပါ၏။ ဤသနားစရာ ကောင်းသောသူတို့သည်အဘယ်အမှုကို ပြုမိကြပါသနည်း။ အို ထာဝရဘုရား၊ ကျွန်တော်မျိုး၏ဘုရား၊ ကျွန်တော်မျိုးနှင့် ကျွန်တော်မျိုး၏အိမ်ထောင်စုကိုဒဏ်ခတ် တော်မူ၍ကိုယ်တော်ရှင်၏လူစုတော်အား ချမ်းသာပေးတော်မူပါ'' ဟုဆုတောင်း ပတ္ထနာပြု၏။
18 ೧೮ ಆಗ ಯೆಹೋವನ ದೂತನು ಗಾದನಿಗೆ, “ಯೆಬೂಸಿಯನಾದ ಒರ್ನಾನನ ಕಣದಲ್ಲಿ ಯೆಹೋವನಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿಸುವುದಕ್ಕೆ ಹೋಗಬೇಕು ಎಂದು ದಾವೀದನಿಗೆ ಹೇಳು” ಎಂದು ಆಜ್ಞಾಪಿಸಿದನು.
၁၈ထာဝရဘုရား၏ကောင်းကင်တမန်က ဂဒ်အား``သင်သည်ဒါဝိဒ်ထံသို့သွား၍သူ့ အားယေဗုသိအမျိုးသားအရောနကောက် တလင်းတွင် ထာဝရဘုရားအဖို့ယဇ်ပလ္လင် ကိုတည်ရန်ပြောကြားလော့'' ဟုဆို၏။-
19 ೧೯ ದಾವೀದನು ಗಾದನ ಮುಖಾಂತರವಾಗಿ ತನಗಾದ ಯೆಹೋವನ ಅಪ್ಪಣೆಯಂತೆ ಹೊರಟನು.
၁၉ဒါဝိဒ်သည်ထာဝရဘုရား၏အမိန့်တော် ကိုနာခံလျက် ဂဒ်စေခိုင်းသည်အတိုင်းသွား လေသည်။-
20 ೨೦ ಅಷ್ಟರಲ್ಲಿ ಗೋದಿಯನ್ನು ತುಳಿಸುತ್ತಿದ್ದ ಒರ್ನಾನನು ತಿರುಗಿಕೊಂಡು ದೂತನನ್ನು ನೋಡಿದ್ದನು. ಅವನ ಜೊತೆಯಲ್ಲಿದ್ದ ಅವನ ನಾಲ್ಕು ಮಕ್ಕಳು ಅಡಗಿಕೊಂಡಿದ್ದರು.
၂၀အရောနနှင့်သူ၏သားလေးယောက်တို့သည် ဂျုံစပါးများကိုနယ်၍နေကြ၏။ သူတို့ သည်ကောင်းကင်တမန်ကိုမြင်သောအခါ အရောန၏သားတို့သည်ထွက်ပြေးပုန်း ရှောင်ကြ၏။-
21 ೨೧ ದಾವೀದನು ತನ್ನ ಬಳಿಗೆ ಬರುವುದನ್ನು ಒರ್ನಾನನು ಕಂಡು ಕಣವನ್ನು ಬಿಟ್ಟು ಹೋಗಿ ಅವನಿಗೆ ಅಡ್ಡ ಬಿದ್ದನು.
၂၁အရောနသည်ချဉ်းလာသောဒါဝိဒ်မင်း ကိုမြင်လျှင် ကောက်နယ်ရာမှထွက်လာ၍ မြေသို့တိုင်အောင်ဦးညွှတ်ပျပ်ဝပ်လေ၏။-
22 ೨೨ ದಾವೀದನು ಅವನಿಗೆ, “ನಿನ್ನ ಕಣವನ್ನೂ ಮತ್ತು ಭೂಮಿಯನ್ನು ನನಗೆ ಕೊಡು, ವ್ಯಾಧಿಯು ಜನರನ್ನು ಬಿಟ್ಟು ಹೋಗುವಂತೆ ನಾನು ಅದರಲ್ಲಿ ಯೆಹೋವನಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿಸುತ್ತೇನೆ. ಪೂರ್ಣಕ್ರಯ ತೆಗೆದುಕೊಂಡು ಅದನ್ನು ಕೊಡು” ಎಂದು ಹೇಳಿದನು.
၂၂ဒါဝိဒ်က``ကပ်ရောဂါဘေးမှငြိမ်းစေရန် ထာဝရဘုရားအဖို့ယဇ်ပလ္လင်ကိုတည် နိုင်ရန်သင်၏ကောက်နယ်တလင်းကိုငါ့ အားရောင်းလော့။ တန်ဖိုးအပြည့်အဝ ငါပေးမည်'' ဟုအရောနအားဆို၏။
23 ೨೩ ಆಗ ಒರ್ನಾನನು ದಾವೀದನಿಗೆ, “ನನ್ನ ಒಡೆಯನಾದ ಅರಸನು ತನಗೆ ಇಷ್ಟವಾದದ್ದನ್ನು ತೆಗೆದುಕೊಂಡು ಯಜ್ಞಮಾಡೋಣವಾಗಲಿ. ಇಲ್ಲಿ ಯಜ್ಞಕ್ಕೆ ಹೋರಿಗಳೂ, ಸೌದೆಗೆ ಹಂತೀಕುಂಟೆಗಳೂ, ನೈವೇದ್ಯಕ್ಕೋಸ್ಕರ ಗೋದಿಯೂ ಇರುತ್ತವೆ. ಇವೆಲ್ಲವನ್ನೂ ಕೊಡುತ್ತೇನೆ” ಎಂದು ಹೇಳಿದನು.
၂၃အရောနက``အရှင်မင်းကြီး၊ ဤကောက်နယ် တလင်းကိုယူတော်မူပါ။ အလိုရှိသည် အတိုင်းပြုတော်မူပါ။ ယဇ်ပလ္လင်ပေါ်တွင် တင်၍ မီးရှို့ပူဇော်ရန်နွားများဤတွင် ရှိပါ၏။ ထင်းအဖြစ်အသုံးပြုရန်ကောက် နယ်တန်ဆာများသည်လည်းကောင်း၊ ပူဇော် သကာအဖြစ်ဆက်သရန်ဂျုံစပါးများ သည်လည်းကောင်း ဤတွင်ရှိပါ၏။ ဤအရာ အားလုံးကိုအရှင့်အား ကျွန်တော်မျိုး ဆက်သပါ၏'' ဟုလျှောက်လေ၏။
24 ೨೪ ಅರಸನಾದ ದಾವೀದನು ಒರ್ನಾನನಿಗೆ “ಹಾಗಲ್ಲ ನಾನು ನಿನ್ನಿಂದ ಪೂರ್ಣ ಕ್ರಯಕ್ಕೆ ತೆಗೆದುಕೊಳ್ಳುತ್ತೇನೆ ನಿನಗೆ ಸೇರಿದ್ದನ್ನು ಕ್ರಯವಿಲ್ಲದೆ ತೆಗೆದುಕೊಂಡು ಯೆಹೋವನಿಗೆ ಯಜ್ಞವಾಗಿ ಅರ್ಪಿಸುವುದಿಲ್ಲ” ಎಂದು ಹೇಳಿದನು.
၂၄သို့ရာတွင်မင်းကြီးက``ဤသို့မယူလို။ တန်ဖိုးအပြည့်အဝငါပေးမည်။ သင်ပိုင် သည့်ပစ္စည်းတစ်စုံတစ်ရာနှင့်၊ ငါတန်ဖိုး မပေးဘဲရရှိသည့်အရာတစ်စုံတစ်ခု ကို ထာဝရဘုရားအားပူဇော်သကာ အဖြစ်ဖြင့်ငါမဆက်လို'' ဟုမိန့်တော် မူ၏။-
25 ೨೫ ದಾವೀದನು ಆ ಭೂಮಿಗೋಸ್ಕರ ಅವನಿಗೆ ಆರುನೂರು ಶೆಕಲ್ ಬಂಗಾರವನ್ನು ಕೊಟ್ಟನು.
၂၅ထိုနောက်မင်းကြီးသည်အရောနအား ရွှေဒင်္ဂါးခြောက်ရာကိုပေးတော်မူ၍၊-
26 ೨೬ ಅಲ್ಲಿ ದಾವೀದನು ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಕಟ್ಟಿಸಿ, ಅದರ ಮೇಲೆ ಆತನಿಗೆ ಸರ್ವಾಂಗಹೋಮಗಳನ್ನೂ, ಸಮಾಧಾನಯಜ್ಞಗಳನ್ನೂ ಅರ್ಪಿಸಿ, ಯೆಹೋವನನ್ನು ಪ್ರಾರ್ಥಿಸಿದನು. ಯೆಹೋವನು ಅವನ ಮೊರೆಯನ್ನು ಲಾಲಿಸಿ, ಆಕಾಶದಿಂದ ಯಜ್ಞವೇದಿಯ ಮೇಲೆ ಬೆಂಕಿಯನ್ನು ಸುರಿಸಿ,
၂၆ထာဝရဘုရားအဖို့ယဇ်ပလ္လင်ကိုတည် တော်မူပြီးလျှင် မီးရှို့ရာယဇ်နှင့်မိတ်သဟာ ယယဇ်တို့ကိုပူဇော်တော်မူ၏။ မင်းကြီး ဆုတောင်းပတ္ထနာပြုသောအခါထာဝရ ဘုရားသည်ပလ္လင်ပေါ်ရှိယဇ်ကောင်များ ကိုမီးရှို့ရန်အတွက် ကောင်းကင်မှမီးကို ချပေးတော်မူ၏။ ဤနည်းအားဖြင့်မင်း ကြီး၏ဆုတောင်းပတ္ထနာကိုနားညောင်း တော်မူသတည်း။
27 ೨೭ ಕತ್ತಿಯನ್ನು ಒರೆಯಲ್ಲಿ ಹಾಕಬೇಕೆಂದು ದೂತನಿಗೆ ಆಜ್ಞಾಪಿಸಿದನು. ಅವನು ಹಾಗೆಯೇ ಮಾಡಿದನು.
၂၇ထာဝရဘုရားသည်ကောင်းကင်တမန်အား မိမိ၏ဋ္ဌားကိုဖယ်ရှားလိုက်ရန်အမိန့်ပေး တော်မူသည်အတိုင်း ကောင်းကင်တမန်သည် လည်းဖယ်ရှားလိုက်၏။-
28 ೨೮ ಮೋಶೆಯು ಅರಣ್ಯದಲ್ಲಿ ಮಾಡಿಸಿದ ಯೆಹೋವನ ಗುಡಾರ ಮತ್ತು ಯಜ್ಞವೇದಿಯು ಆ ಕಾಲದಲ್ಲಿ ಗಿಬ್ಯೋನಿನ ಪೂಜಾಸ್ಥಳದಲ್ಲಿದ್ದವು.
၂၈ဤအချင်းအရာကိုဒါဝိဒ်မင်းမြင်သော် မိမိ၏ဆုတောင်းပတ္ထနာကို ထာဝရဘုရား နားညောင်းတော်မူပြီဖြစ်ကြောင်းသိလေ၏။ သို့ဖြစ်၍သူသည်အရောန၏ကောက်နယ် တလင်းရှိယဇ်ပလ္လင်ပေါ်တွင်ယဇ်များကို ပူဇော်ခြင်းဖြစ်သတည်း။-
29 ೨೯ ಆದರೂ ದಾವೀದನು ಯೆಹೋವನ ದೂತನ ಕತ್ತಿಗೆ ಹೆದರಿ ದೇವದರ್ಶನಕ್ಕಾಗಿ ಅಲ್ಲಿಗೆ ಹೋಗಲಾರದೆ, ಯೆಬೂಸಿಯನಾದ ಒರ್ನಾನನ ಕಣದಲ್ಲಿಯೇ ಯಜ್ಞವನ್ನು ಅರ್ಪಿಸಿದನು.
၂၉ထိုအချိန်ကာလ၌တောကန္တာရတွင် မောရှေတည်ဆောက်ခဲ့သောထာဝရဘုရား ၏တဲတော်နှင့် ယဇ်များပူဇော်ရာယဇ်ပလ္လင် သည်ဂိဗောင်မြို့ကိုးကွယ်ရာဌာန၌တည် ရှိလျက်နေသေး၏။-
30 ೩೦ ಆ ಕಾಲದಲ್ಲಿ ದಾವೀದನಿಗೆ ಯೆಹೋವನಿಂದ ಸದುತ್ತರ ದೊರಕಿತು.
၃၀သို့ရာတွင်ဒါဝိဒ်သည်ဘုရားသခင်အား ကိုးကွယ်ဝတ်ပြုရန် ထိုအရပ်သို့မသွားဝံ့။ အဘယ်ကြောင့်ဆိုသော်သူသည်ထာဝရ ဘုရား၏ကောင်းကင်တမန်ဋ္ဌားကိုကြောက် သောကြောင့်ဖြစ်၏။