< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 17 >
1 ೧ ದಾವೀದನು ತನ್ನ ಅರಮನೆಯಲ್ಲಿ ವಾಸಿಸುತ್ತಿದ್ದಾಗ ಒಂದು ದಿನ ಅವನು ಪ್ರವಾದಿಯಾದ ನಾತಾನನನ್ನು ಬರಲು ಹೇಳಿ, “ನೋಡು, ನಾನು ದೇವದಾರುಮರದ ಅರಮನೆಯಲ್ಲಿ ವಾಸವಾಗಿದ್ದೇನೆ. ಯೆಹೋವನ ಒಡಂಬಡಿಕೆ ಮಂಜೂಷವಾದರೋ ಬಟ್ಟೆಯ ಮನೆಯಲ್ಲಿ ಇರುತ್ತದೆ” ಎಂದು ಹೇಳಿದನು.
Bayan Dawuda ya zauna a fadansa, sai ya ce wa annabi Natan, “Ga ni, ina zama a fadar da aka yi da al’ul, yayinda akwatin alkawarin Ubangiji yana a ƙarƙashin tenti.”
2 ೨ ನಾತಾನನು ದಾವೀದನಿಗೆ, “ನಿನಗೆ ಮನಸ್ಸಿದ್ದಂತೆ ಮಾಡು, ದೇವರು ನಿನ್ನ ಸಂಗಡ ಇರುತ್ತಾನೆ” ಎಂದನು.
Natan ya amsa wa Dawuda ya ce, “Duk abin da kake tunani a zuciya, ka yi, gama Allah yana tare da kai.”
3 ೩ ಅದೇ ರಾತ್ರಿಯಲ್ಲಿ ದೇವರು ನಾತಾನನಿಗೆ ಆಜ್ಞಾಪಿಸಿದ್ದೇನೆಂದರೆ,
A daren nan maganar Allah ta zo wa Natan cewa,
4 ೪ “ಹೋಗಿ ನನ್ನ ಸೇವಕನಾದ ದಾವೀದನಿಗೆ, ‘ನೀನು ನನಗೆ ಆಲಯವನ್ನು ಕಟ್ಟಬಾರದು.
“Ka tafi ka faɗa wa bawana Dawuda, ‘Ga abin da Ubangiji ya ce ba kai ba ne za ka gida mini gidan da zan zauna a ciki.
5 ೫ ನಾನು ಇಸ್ರಾಯೇಲರನ್ನು ಐಗುಪ್ತದೇಶದಿಂದ ಬರಮಾಡಿದಂದಿನಿಂದ ಇಂದಿನ ವರೆಗೂ ಮನೆಯಲ್ಲಿ ವಾಸಮಾಡಲಿಲ್ಲ. ಗುಡಾರಗಳಲ್ಲಿ ವಾಸಿಸುತ್ತಾ ಇದ್ದೆನು.
Ban taɓa zama a gida daga ranar da na fito da Isra’ila daga Masar ba har wa yau. Na yi ta yawo daga gefen da aka kafa tenti zuwa wani, daga wannan wuri zuwa wancan.
6 ೬ ನಾನು ಇಸ್ರಾಯೇಲರ ಮಧ್ಯದಲ್ಲಿ ಸಂಚರಿಸುತ್ತಿದ್ದಾಗೆಲ್ಲಾ ನನ್ನ ಜನರಾದ ಇಸ್ರಾಯೇಲರನ್ನು ಪಾಲಿಸುವುದಕ್ಕೋಸ್ಕರ ನನ್ನಿಂದ ನೇಮಿಸಲ್ಪಟ್ಟ ಯಾವ ನ್ಯಾಯಸ್ಥಾಪಕನ್ನಾದರೂ ನೀವು ನನಗೋಸ್ಕರ ದೇವದಾರುಮರದ ಮನೆಯನ್ನು ಏಕೆ ಕಟ್ಟಲಿಲ್ಲ ಎಂದು ಕೇಳಿದೆನೋ ಎಂಬುದಾಗಿ ಯೆಹೋವನು ಅನ್ನುತ್ತಾನೆ’” ಎಂದು ಹೇಳು ಎಂದನು.
Duk inda na tafi tare da Isra’ilawa, na taɓa ce wa wani daga cikin shugabanninsu waɗanda na umarta su yi kiwon mutanena, “Don me ba ku gida mini gidan al’ul ba?”’
7 ೭ ಇದಲ್ಲದೆ ನೀನು ನನ್ನ ಸೇವಕನಾದ ದಾವೀದನಿಗೆ ಹೇಳಬೇಕಾದದ್ದೇನೆಂದರೆ, “ಸೇನಾಧೀಶ್ವರನಾದ ಯೆಹೋವನು ಹೀಗೆನ್ನುತ್ತಾನೆ, ಕುರಿಗಳ ಹಿಂದೆ ಹೋಗುತ್ತಿದ್ದ ನಿನ್ನನ್ನು ಅಡವಿಯಿಂದ ಕರೆದುಕೊಂಡು ಬಂದು ನನ್ನ ಪ್ರಜೆಗಳಾದ ಇಸ್ರಾಯೇಲರಿಗೆ ನಾಯಕನನ್ನಾಗಿ ನೇಮಿಸಿದೆನು.
“Yanzu, ka faɗa wa bawana Dawuda, ‘Ga abin da Ubangiji Maɗaukaki ya ce, na ɗauke ka daga makiyaya da kuma daga bin garke, don ka zama mai mulki a bisa mutanena Isra’ila.
8 ೮ ನೀನು ಹೋದಲ್ಲೆಲ್ಲಾ ನಾನು ನಿನ್ನ ಸಂಗಡ ಇದ್ದೆನು. ನಿನ್ನ ಶತ್ರುಗಳನ್ನೆಲ್ಲಾ ನಿನ್ನೆದುರಿನಲ್ಲಿಯೇ ಸಂಹರಿಸಿಬಿಟ್ಟೆನು. ಲೋಕದ ಮಹಾಪುರುಷರ ಹೆಸರಿನಂತೆ ನಿನ್ನ ಹೆಸರನ್ನೂ ಪ್ರಸಿದ್ಧಪಡಿಸುವೆನು.
Na kasance tare da kai ko’ina ka tafi, na kuma yanke dukan abokan gābanka a gabanka. Yanzu zan sa sunanka kamar sunayen mutane mafi girma na duniya.
9 ೯ ನನ್ನ ಪ್ರಜೆಗಳಾದ ಇಸ್ರಾಯೇಲರಿಗೆ ಒಂದು ಸ್ಥಳವನ್ನು ಕೊಟ್ಟು ಅದರಲ್ಲಿ ಅವರನ್ನು ನೆಲೆಗೊಳಿಸುವೆನು. ಅವರು ಇನ್ನು ಮೇಲೆ ಯಾವ ಭಯವೂ ಇಲ್ಲದೆ ಅಲ್ಲಿ ವಾಸಮಾಡುವರು.
Zan kuma tanada wuri domin mutanena Isra’ila, zan kuma kafa su saboda za su kasance da gidan kansu ba kuwa za a ƙara damunsu ba. Mugayen mutane ba za su ƙara zaluntar su ba, yadda suka yi da farko
10 ೧೦ ಪೂರ್ವಕಾಲದಲ್ಲೂ, ನಾನು ನನ್ನ ಜನರಾದ ಇಸ್ರಾಯೇಲರಿಗಾಗಿ ನೇಮಿಸಿದ ನ್ಯಾಯಸ್ಥಾಪಕರ ಕಾಲದಿಂದೀಚೆಗೆ ದುಷ್ಟರು ಅವರನ್ನು ಕುಗ್ಗಿಸಿದಂತೆ ಇನ್ನು ಕುಗ್ಗಿಸುವುದಿಲ್ಲ. ನಿನ್ನ ಶತ್ರುಗಳನ್ನು ನಿನಗೆ ಅಧೀನಮಾಡುವೆನು. ಇದಲ್ಲದೆ ಯೆಹೋವನಾದ ನಾನು ನಿನಗೋಸ್ಕರ ಒಂದು ಮನೆಯನ್ನು ಕಟ್ಟುವೆನು ಎಂದು ಮಾತುಕೊಡುತ್ತೇನೆ.
da kuma suka yi tun lokacin da na sa shugabanni a bisa mutanen Isra’ila. Zan rinjaye dukan abokan gābanka. “‘Na furta maka cewa Ubangiji zai gina maka gida,
11 ೧೧ ನಿನ್ನ ಆಯುಷ್ಕಾಲವು ಮುಗಿದು ನೀನು ಪೂರ್ವಿಕರ ಬಳಿಗೆ ಸೇರಿದ ಮೇಲೆ, ನಿನ್ನ ಮಕ್ಕಳಲ್ಲಿ ಒಬ್ಬನನ್ನು ಅಭಿವೃದ್ಧಿಪಡಿಸಿ, ಅವನ ರಾಜ್ಯವನ್ನು ಸ್ಥಿರಪಡಿಸುವೆನು.
sa’ad da kwanakinka suka ƙare ka kuma tafi don ka kasance da kakanninka, zan tā da ɗaya cikin’ya’yanka maza, daga zuriyarka yă gāje ka, zan kuma kafa mulkinka.
12 ೧೨ ಅವನು ನನಗಾಗಿ ಒಂದು ಮನೆಯನ್ನು ಕಟ್ಟುವನು. ನಾನು ಅವನ ಸಿಂಹಾಸನವನ್ನು ನಿರಂತರವಾಗಿ ಸ್ಥಿರಪಡಿಸುವೆನು.
Shi ne zai gina gida domina, zan kuma kafa sarautarsa har abada.
13 ೧೩ ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ನನ್ನ ಕೃಪೆಯನ್ನು ನಿನಗಿಂತ ಮುಂಚೆ ಇದ್ದವನಿಂದ ತೆಗೆದು ಹಾಕಿದ ಹಾಗೆ ಅವನಿಂದ ತೆಗೆಯುವುದಿಲ್ಲ.
Zan zama Ubansa, zai kuma zama ɗana. Ba zan taɓa ɗauke ƙaunata daga gare shi, kamar yadda na ɗauke ta daga wanda ya riga ka ba.
14 ೧೪ ಅವನನ್ನು ನನ್ನ ಮನೆಯಲ್ಲಿಯೂ, ನನ್ನ ರಾಜ್ಯದಲ್ಲಿಯೂ ಸದಾ ಸ್ಥಿರಗೊಳಿಸುವೆನು. ಅವನ ಸಿಂಹಾಸನವು ಶಾಶ್ವತವಾಗಿರುವುದು” ಎಂಬುದೇ.
Zan sa shi a bisa gidana da mulkina har abada; kujerar sarautarsa za tă kahu har abada.’”
15 ೧೫ ನಾತಾನನು ತನಗುಂಟಾದ ದರ್ಶನದ ಈ ಎಲ್ಲಾ ಮಾತುಗಳನ್ನು ದಾವೀದನಿಗೆ ಹೇಳಿದನು.
Natan ya faɗa wa Dawuda dukan kalmomin wahayin nan.
16 ೧೬ ಆಗ ಅರಸನಾದ ದಾವೀದನು ಹೋಗಿ ಯೆಹೋವನ ಸನ್ನಿಧಿಯಲ್ಲಿ ಕುಳಿತುಕೊಂಡು ಹೇಳಿದ್ದೇನೆಂದರೆ, “ದೇವರೇ, ಯೆಹೋವನೇ, ನನ್ನಂಥವನಿಗೆ ಈ ಪದವಿಯನ್ನು ಅನುಗ್ರಹಿಸಿದ್ದಿ, ನಾನೆಷ್ಟರವನು? ನನ್ನ ಮನೆ ಎಷ್ಟರದು?
Sai Sarki Dawuda ya shiga ya zauna a gaban Ubangiji ya ce, “Wane ne ni, ya Ubangiji Allah, kuma wane ne iyalina, da ka kawo ni har zuwa nan?
17 ೧೭ ದೇವರೇ, ಇದು ಸಾಲದೆಂದೆಣಿಸಿ, ನಿನ್ನ ಸೇವಕನ ಮುಂಬರುವ ಸಂತಾನದ ವಿಷಯವಾಗಿಯೂ ನನಗೆ ವಾಗ್ದಾನಮಾಡಿರುವೆ. ದೇವರೇ, ಯೆಹೋವನೇ, ನಾನು ನಿನ್ನ ದೃಷ್ಟಿಯಲ್ಲಿ ಅಲ್ಪನಾಗಿದ್ದರೂ ನೀನು ನನ್ನನ್ನು ಕಟಾಕ್ಷಿಸಿದ್ದೀ.
Kuma sai ka ce wannan bai isa ba a idonka, ya Allah, ka yi magana game da nan gaba na gidan bawanka. Ka dube ni sai ka ce ni ne mafi ɗaukaka cikin mutane, ya Ubangiji Allah.
18 ೧೮ ನೀನು ನಿನ್ನ ಸೇವಕನಾದ ದಾವೀದನನ್ನು ಬಲ್ಲೆ. ಅವನು ತನಗುಂಟಾದ ಘನತೆಯನ್ನು ಕುರಿತು ಇನ್ನೇನು ಹೇಳಾನು.
“Me kuma Dawuda zai ce maka saboda girmamawar da ka yi wa bawanka? Gama ka san bawanka,
19 ೧೯ ಯೆಹೋವನೇ, ನಿನ್ನ ಸೇವಕನ ಮೇಲಿಗಾಗಿಯೂ, ನಿನ್ನ ಚಿತ್ತಾನುಸಾರವಾಗಿಯೂ ಈ ಎಲ್ಲಾ ಮಹತ್ಕಾರ್ಯಗಳನ್ನು ನಡೆಸಿ, ನಿನ್ನ ಸತ್ಯ ಮಹತ್ವವನ್ನು ತೋರ್ಪಡಿಸಿರುವೆ.
Ya Ubangiji. Gama saboda bawanka da kuma bisa ga nufinka, ka yi wannan babban abu, ka kuma sanar da dukan manyan alkawura.
20 ೨೦ ಯೆಹೋವನೇ, ನಿನಗೆ ಸಮಾನರು ಯಾರೂ ಇಲ್ಲ. ನಾವು ಕೇಳಿದವುಗಳನ್ನೆಲ್ಲಾ ಆಲೋಚಿಸಿ ನೋಡಿದರೆ ನಿನ್ನ ಹೊರತು ಬೇರೆ ದೇವರೇ ಇಲ್ಲವೆಂಬುದು ನಿಶ್ಚಯ.
“Babu wani kamar ka, ya Ubangiji, babu kuma Allah sai kai, kamar yadda muka ji da kunnuwanmu.
21 ೨೧ ನಿನ್ನ ಇಸ್ರಾಯೇಲ್ ಪ್ರಜೆಗೆ ಸಮಾನವಾದ ಜನಾಂಗವು ಭೂಲೋಕದಲ್ಲಿ ಯಾವುದಿರುತ್ತದೆ? ದೇವರಾದ ನೀನೇ ಚಿತ್ತೈಯಿಸಿ, ಅದನ್ನು ವಿಮೋಚಿಸಿ, ಸ್ವಪ್ರಜೆಯಾಗಿ ಮಾಡಿಕೊಂಡಿ. ಭಯಂಕರವಾದ ಮಹತ್ಕಾರ್ಯಗಳಿಂದ ನಿನ್ನ ಹೆಸರನ್ನು ಪ್ರಸಿದ್ಧಿಪಡಿಸಿದಿ. ನೀನು ಐಗುಪ್ತರ ಕೈಯೊಳಗಿಂದ ತಪ್ಪಿಸಿ ರಕ್ಷಿಸಿದ ನಿನ್ನ ಪ್ರಜೆಯ ಎದುರಿನಿಂದ ಅನ್ಯಜನಾಂಗಗಳನ್ನು ಹೊರಡಿಸಿಬಿಟ್ಟಿ.
Wane ne kuma yake kamar mutanenka Isra’ila, al’umma guda a duniya wadda Allahnta ya fita don yă fanshi mutane wa kansa, ya kuma yi suna wa kansa, ya kuma aikata manyan abubuwa masu banmamaki masu banrazana ta wurin korin al’ummai daga gaban mutanenka, waɗanda ka fansa daga Masar?
22 ೨೨ ಇಸ್ರಾಯೇಲರು ಸದಾಕಾಲವು ನಿನ್ನ ಪ್ರಜೆಗಳಾಗಿರಬೇಕೆಂದು ನಿರ್ಣಯಿಸಿದ್ದೀ. ಯೆಹೋವನೇ, ನೀನು ಅವರಿಗೆ ದೇವರಾಗಿದ್ದಿ.
Ka mai da mutanenka Isra’ila na kanka har abada, kuma kai, ya Ubangiji, ka zama Allahnsu.
23 ೨೩ ಯೆಹೋವನೇ, ನೀನು ನಿನ್ನ ಸೇವಕನನ್ನೂ ಅವನ ಮನೆಯನ್ನೂ ಕುರಿತು ಮಾಡಿದ ವಾಗ್ದಾನವನ್ನು ಶಾಶ್ವತಪಡಿಸಿ ನೆರವೇರಿಸು. ಅದು ಸದಾ ಸ್ಥಿರವಾಗಿರಲಿ.
“Yanzu kuwa, Ubangiji, bari alkawarin da ka yi game da bawanka da gidansa yă kahu har abada. Yi kamar yadda ka yi alkawari,
24 ೨೪ ಜನರು ‘ಸೇನಾಧೀಶ್ವರನಾದ ಯೆಹೋವನು ಇಸ್ರಾಯೇಲ್ ದೇವರೂ, ಶರಣನೂ ಆಗಿದ್ದಾನೆ. ತನ್ನ ಸೇವಕನಾದ ದಾವೀದನ ಮನೆಯನ್ನು ತನ್ನ ಸನ್ನಿಧಿಯಲ್ಲಿ ಸ್ಥಿರವಾಗಿ ಇಟ್ಟುಕೊಳ್ಳುತ್ತಾನೆ’ ಎಂದು ನಿನ್ನ ನಾಮವನ್ನು ಕೊಂಡಾಡಲಿ.
saboda zai kahu kuma sunanka zai zama mai girma har abada. Sa’an nan mutane za su ce, ‘Ubangiji Maɗaukaki, Allah a bisa Isra’ila, Allahn Isra’ila ne!’ Kuma gidan bawanka Dawuda zai kahu a gabanka.
25 ೨೫ ನನ್ನ ದೇವರೇ, ನೀನು ನಿನ್ನ ಸೇವಕನಿಗೆ, ‘ನಾನು ನಿನಗೊಂದು ಮನೆಯನ್ನು ಕಟ್ಟುವೆನು’ ಎಂದು ವಾಗ್ದಾನ ಮಾಡಿದ್ದರಿಂದ ಅವನು ನಿನ್ನನ್ನು ಪ್ರಾರ್ಥಿಸುವುದಕ್ಕೆ ಧೈರ್ಯಗೊಂಡನು.
“Kai, Allahna, ka bayyana ga bawanka cewa za ka gina gida dominsa. Ta haka bawanka ya sami ƙarfin gwiwa ya yi addu’a gare ka.
26 ೨೬ ಯೆಹೋವನೇ, ನಿನ್ನ ಸೇವಕನಿಗೆ ಈ ಶ್ರೇಷ್ಠ ವಾಗ್ದಾನಗಳನ್ನು ಮಾಡಿದ ನೀನು ನನ್ನ ದೇವರಾಗಿರುತ್ತೀ.
Ya Ubangiji, kai ne Allah! Ka yi alkawari abubuwa masu kyau wa bawanka.
27 ೨೭ ಈಗ ನೀನು ನಿನ್ನ ಸೇವಕನ ಮನೆಯನ್ನು ಆಶೀರ್ವದಿಸಿ, ಅದನ್ನು ಸದಾಕಾಲವೂ ನಿನ್ನ ಆಶ್ರಯದಲ್ಲಿಟ್ಟುಕೊಳ್ಳಬೇಕೆಂದು ಮನಸ್ಸು ಮಾಡಿದ್ದೀ. ಯೆಹೋವನೇ, ನೀನು ಅದನ್ನು ಆಶೀರ್ವದಿಸಿದ್ದೀ. ಅದು ನಿತ್ಯವೂ ಸೌಭಾಗ್ಯದಿಂದಿರುವುದು” ಎಂದು ಪ್ರಾರ್ಥಿಸಿದನು.
Yanzu ka ji daɗi don ka albarkace gidan bawanka, don yă ci gaba har abada a gabanka; gama kai, ya Ubangiji, ka albarkace shi, ya kuma sami albarka ke nan har abada.”