< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 11 >
1 ೧ ಅನಂತರ ಇಸ್ರಾಯೇಲರೆಲ್ಲರೂ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು ಅವನಿಗೆ, “ನಾವು ನಿನಗೆ ರಕ್ತಸಂಬಂಧಿಗಳಾಗಿದ್ದೇವೆ.
Un viss Israēls sapulcinājās pie Dāvida Hebronē un sacīja: redzi, mēs esam tavi kauli un tava miesa.
2 ೨ ಸೌಲನ ಆಳ್ವಿಕೆಯಲ್ಲಿ ಇಸ್ರಾಯೇಲರ ದಳಾಧಿಪತಿಯಾಗಿ ಇದ್ದವನು ನೀನೇ. ನಿನ್ನ ಕುರಿತು ನಿನ್ನ ದೇವರಾದ ಯೆಹೋವನು, ‘ನೀನು ನನ್ನ ಪ್ರಜೆಗಳಾದ ಇಸ್ರಾಯೇಲರ ನಾಯಕನೂ, ಪಾಲಕನೂ ಆಗಿರುವಿ’ ಎಂದು ವಾಗ್ದಾನ ಮಾಡಿದ್ದಾನೆ.” ಎಂದು ಹೇಳಿದರು.
Jau sen, kamēr Sauls bija par ķēniņu, tu Israēli esi izvadījis un ievadījis, un Tas Kungs, tavs Dievs, uz tevi sacījis: tev būs manus Israēla ļaudis ganīt un tapt par valdnieku pār maniem Israēla ļaudīm.
3 ೩ ಆಗ ಅರಸನಾದ ದಾವೀದನು ತನ್ನ ಜೊತೆಯಲ್ಲಿ ಹೆಬ್ರೋನಿಗೆ ಬಂದಿದ್ದ ಇಸ್ರಾಯೇಲರ ಹಿರಿಯರೆಲ್ಲರೊಡನೆ ಅಲ್ಲೇ ಯೆಹೋವನ ಸನ್ನಿಧಿಯಲ್ಲಿ ಒಡಂಬಡಿಕೆಮಾಡಿಕೊಂಡನು. ಅವರು ಸಮುವೇಲನಿಗೆ ಯೆಹೋವನ ವಾಕ್ಯಾನುಸಾರವಾಗಿ ದಾವೀದನನ್ನು ಅಭಿಷೇಕಿಸಿ, ಇಸ್ರಾಯೇಲರ ಅರಸನನ್ನಾಗಿ ಮಾಡಿದರು.
Un visi Israēla vecaji nāca pie ķēniņa Hebronē, un Dāvids ar tiem derēja derību Hebronē Tā Kunga priekšā. Un tie svaidīja Dāvidu par ķēniņu pār Israēli, pēc Tā Kunga vārda caur Samuēli.
4 ೪ ದಾವೀದನು ಇಸ್ರಾಯೇಲರನ್ನು ಕರೆದುಕೊಂಡು ಅಂದಿನಕಾಲದಲ್ಲಿ ಯೆಬೂಸೆನಿಸಿಕೊಂಡಿದ್ದ ಯೆರೂಸಲೇಮಿಗೆ ಮುತ್ತಿಗೆ ಹಾಕಲು ಹೊರಟನು. ಆ ಪ್ರಾಂತ್ಯದ ಮೂಲನಿವಾಸಿಗಳು ಯೆಬೂಸಿಯರು.
Tad Dāvids un viss Israēls nogāja uz Jeruzālemi (šī ir Jebuza), un tur Jebusieši bija tās zemes iedzīvotāji.
5 ೫ ಯೆಬೂಸಿಯರು ದಾವೀದನಿಗೆ, “ನೀನು ಒಳಗೆ ಬರಲು ಸಾಧ್ಯವಿಲ್ಲ” ಎಂದು ಹೇಳಿದರು. ಆದರೂ ಅವನು ದಾವೀದನಗರವೆನಿಸಿಕೊಳ್ಳುವ ಚೀಯೋನ್ ಕೋಟೆಯನ್ನು ಸ್ವಾಧೀನಮಾಡಿಕೊಂಡನು.
Un Jebuzas iedzīvotāji sacīja uz Dāvidu: te tu netiksi iekšā. Bet Dāvids uzņēma Ciānas pili, - šī ir Dāvida pilsēta.
6 ೬ ಆ ದಿನ ದಾವೀದನು ತನ್ನೊಂದಿಗೆ ಬಂದಿದ್ದ ಇಸ್ರಾಯೇಲರನ್ನು ಕುರಿತು “ಯಾರು ಯೆಬೂಸಿಯರನ್ನು ಮೊದಲು ಸೋಲಿಸುವನೋ ಅವನು ದಳಾಧಿಪತಿ ಆಗುವನು” ಎಂದು ಹೇಳಿದನು. ಚೆರೂಯಳ ಮಗನಾದ ಯೋವಾಬನು ಮೊದಲು ದಾಳಿ ಮಾಡಿದ್ದರಿಂದ ಅವನೇ ದಳಾಧಿಪತಿ ಆದನು.
Tad Dāvids sacīja: kas pirmais Jebusiešus kaus, tas būs par virsnieku un lielkungu. Tad Joabs, Cerujas dēls, visupirmais tika augšā un palika par virsnieku.
7 ೭ ದಾವೀದನು ಆ ಕೋಟೆಯನ್ನು ತನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದರಿಂದ ಅದಕ್ಕೆ ದಾವೀದನಗರ ಎಂದು ಹೆಸರಾಯಿತು.
Un Dāvids dzīvoja tai pilī, tāpēc to sauca par Dāvida pilsētu.
8 ೮ ಅವನು ಮಿಲ್ಲೋವಿನಿಂದ ಪ್ರಾರಂಭಿಸಿ ಸುತ್ತಲೂ ಪಟ್ಟಣವನ್ನು ಭದ್ರಪಡಿಸಿದನು. ಯೋವಾಬನು ಪಟ್ಟಣದ ಉಳಿದ ಭಾಗವನ್ನು ಭದ್ರಪಡಿಸಿದನು.
Un viņš uztaisīja to pilsētu visapkārt, no Millus iesākot visapkārt; bet Joabs pameta dzīvus, kas pilsētā atlikās.
9 ೯ ಸೇನಾಧೀಶ್ವರನಾದ ಯೆಹೋವನು ದಾವೀದನ ಸಂಗಡ ಇದ್ದುದರಿಂದ ಅವನು ಅಭಿವೃದ್ಧಿಯಾಗುತ್ತಾ ಹೋದನು.
Un Dāvids auga augumā un Tas Kungs Cebaot bija ar viņu.
10 ೧೦ ರಾಜ್ಯಸಂಬಂಧವಾಗಿ ದಾವೀದನಿಗೆ ವಿಶೇಷ ಸಹಾಯಕರಾಗಿದ್ದು, ಯೆಹೋವನ ವಾಕ್ಯಾನುಸಾರವಾಗಿ ಇಸ್ರಾಯೇಲರೆಲ್ಲರೊಡನೆ ಅವನನ್ನು ಅರಸನನ್ನಾಗಿ ಮಾಡಿದ ಮುಖ್ಯಸ್ಥರನ್ನು ಕುರಿತದ್ದು.
Un šie ir Dāvida varoņu virsnieki, kas viņa valstībā stipri pie viņa turējās ar visu Israēli, viņu celt par ķēniņu pēc Tā Kunga vārda uz Israēli.
11 ೧೧ ದಾವೀದನ ಯುದ್ಧವೀರರ ಪಟ್ಟಿ: ಹಕ್ಮೋನಿಯನಾದ ಯಾಷೊಬ್ಬಾಮನು ಮೂವತ್ತು ಶೂರರಲ್ಲಿ ಮುಖ್ಯಸ್ಥನು. ಇವನು ತನ್ನ ಬರ್ಜಿಯನ್ನು ಬೀಸುತ್ತಾ ಹೋಗಿ ಒಂದೇ ಸಾರಿ ಮುನ್ನೂರು ಜನರನ್ನು ಕೊಂದನು.
Un šis ir Dāvida varoņu skaits: Jazabeams, Akmona dēls, tas augstākais no tiem trīsdesmit; viņš pacēla savu šķēpu pret trīs simtiem, kamēr tos nokāva vienā reizē.
12 ೧೨ ಎರಡನೆಯವನು ಅಹೋಹ್ಯನಾದ ದೋದೋ ಎಂಬುವವನ ಮಗನಾಗಿರುವ ಎಲ್ಲಾಜಾರನು. ಇವನೂ ಆ ಮೂವರು ಶೂರರಲ್ಲಿ ಒಬ್ಬನು.
Un pēc viņa bija Eleazars, Dodus dēls, Aoka dēla dēls, tas bija viens no tiem trim varoņiem.
13 ೧೩ ಫಿಲಿಷ್ಟಿಯರು ಪಸ್ದಮ್ಮೀಮಿನಲ್ಲಿ ಯುದ್ಧಕ್ಕೆ ಬಂದಾಗ ಇವನು ದಾವೀದನ ಜೊತೆಯಲ್ಲಿದ್ದನು. ಅಲ್ಲಿ ಒಂದು ಜವೆಗೋದಿಯ ಹೊಲವಿತ್ತು. ಇಸ್ರಾಯೇಲರು ಫಿಲಿಷ್ಟಿಯರಿಗೆ ಹೆದರಿ ಓಡಿಹೋಗಲು ಪ್ರಯತ್ನಿಸಿದಾಗ,
Viņš bija pie Dāvida PasDamimā, kad Fīlisti tur bija sapulcējušies karā; un tur bija druvas gabals ar miežiem, un tie ļaudis bēga no Fīlistiem.
14 ೧೪ ಆ ವೀರರು ಹೊಲದ ಮಧ್ಯದಲ್ಲೇ ನಿಂತುಕೊಂಡು, ಫಿಲಿಷ್ಟಿಯರನ್ನು ಕೊಂದು, ಹೊಲವನ್ನು ಕಾಪಾಡಿದರು. ಹೀಗೆ ಯೆಹೋವನು ಅವನಿಗೆ ಮಹಾ ಜಯವನ್ನುಂಟುಮಾಡಿದನು.
Tad tie nostājās pašā tīruma vidū un to aizstāvēja un kāva Fīlistus, un Tas Kungs deva lielu pestīšanu.
15 ೧೫ ದಾವೀದನು ಅದುಲ್ಲಾಮ್ ಗಿರಿಯ ಗವಿಯಲ್ಲಿದ್ದಾಗ ಅವನ ಮೂವತ್ತು ಜನ ಪ್ರಸಿದ್ಧಶೂರರಲ್ಲಿ ಮೂವರು ಅವನ ಬಳಿಗೆ ಬಂದರು. ಫಿಲಿಷ್ಟಿಯರು ದಂಡೆತ್ತಿ ಬಂದು ರೆಫಾಯೀಮ್ ತಗ್ಗಿನಲ್ಲಿ ಪಾಳೆಯಮಾಡಿಕೊಂಡಿರುವುದನ್ನು ಕಂಡರು.
Un trīs no tiem trīsdesmit virsniekiem nogāja pie Dāvida uz to akmens kalnu Adulama alā. Un Fīlistu karaspēks bija apmeties Refaīm ielejā.
16 ೧೬ ಫಿಲಿಷ್ಟಿಯರು ಬೇತ್ಲೆಹೇಮಿನಲ್ಲಿ ಒಂದು ಕಾವಲು ದಂಡನ್ನು ಇಟ್ಟಿದ್ದರು. ಆಗ ದಾವೀದನು ದುರ್ಗದಲ್ಲಿದ್ದನು.
Un Dāvids bija to brīdi pils kalnā, un Fīlisti bija karavīrus ielikuši Bētlemē.
17 ೧೭ ದಾವೀದನು ಲವಲವಿಕೆಯಿಂದ, “ಬೇತ್ಲೆಹೇಮ್ ಊರಿನ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ಯಾರಾದರೂ ನನಗೆ ತಂದು ಕೊಡುವುದಾದರೆ ಎಷ್ಟೋ ಒಳ್ಳೆಯದು” ಎಂದು ಹೇಳಿದನು.
Un Dāvidam iekārojās un viņš sacīja: kas man dos ūdeni dzert no akas pie Bētlemes vārtiem?
18 ೧೮ ಕೂಡಲೆ ಆ ಮೂವರು ವೀರರು ಫಿಲಿಷ್ಟಿಯರ ದಂಡಿನೊಳಗೆ ನುಗ್ಗಿ ಹೋಗಿ, ಬೇತ್ಲೆಹೇಮ್ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ, ದಾವೀದನಿಗೆ ತಂದು ಕೊಟ್ಟರು.
Tad tie trīs izlauzās caur Fīlistu lēģeri un smēla ūdeni no akas pie Bētlemes vārtiem, un ņēma un atnesa to pie Dāvida. Bet Dāvids to negribēja dzert, bet to izlēja Tam Kungam
19 ೧೯ ಆದರೆ ದಾವೀದನು “ತಮ್ಮ ಜೀವವನ್ನು ಪರಿಗಣಿಸದೆ ಪರಾಕ್ರಮದಿಂದ ಈ ನೀರನ್ನು ತಂದು ಕೊಟ್ಟಿದ್ದಾರೆ. ಈ ನೀರನ್ನು ಕುಡಿದರೆ ಈ ಪರಾಕ್ರಮಶಾಲಿ ವೀರರ ರಕ್ತವನ್ನು ಕುಡಿದಂತೆ ಆಗುವುದು. ಇಂತಹ ಕಾರ್ಯವನ್ನು ನನ್ನಿಂದ ಆಗದಂತೆ ನನ್ನ ದೇವರು ತಡೆಯಲಿ” ಎಂದು ಹೇಳುತ್ತಾ, ಆ ನೀರನ್ನು ದೇವರಿಗೆ ಸಮರ್ಪಿಸುವಂತೆ ನೆಲದ ಮೇಲೆ ಸುರಿದನು.
Un sacīja: lai Dievs mani pasargā, ka es to būtu darījis un šo vīru asinis dzēris par viņu dzīvību, jo tie savu dzīvību netaupīdami to atnesuši; un viņš to negribēja dzert. To darīja šie trīs varoņi.
20 ೨೦ ಯೋವಾಬನ ತಮ್ಮನಾದ ಅಬ್ಷೈಯು ಬೇರೆ ಮೂರು ಜನರಲ್ಲಿ ಮುಖ್ಯಸ್ಥನು. ಇವನು ತನ್ನ ಬರ್ಜಿಯನ್ನು ಬೀಸುತ್ತಾ ಹೋಗಿ ಮುನ್ನೂರು ಜನರನ್ನು ಕೊಂದದ್ದರಿಂದ ಈ ಮೂವರಲ್ಲಿ ಕೀರ್ತಿಗೊಂಡನು.
Un Abizajus, Joaba brālis, bija arī par virsnieku pār trim; un tas pacēla savu šķēpu un nokāva trīs simtus. Un tam bija slava starp tiem trim.
21 ೨೧ ಉಳಿದ ಇಬ್ಬರಿಗಿಂತ ಇವನೇ ಘನತೆಯುಳ್ಳವನಾಗಿದ್ದು ಅವರ ನಾಯಕನಾದನು. ಆದರೂ ಇವನು ಮೊದಲಿನ ಮೂರು ಜನರಿಗೆ ಸಮಾನನಾಗಿರಲಿಲ್ಲ.
Starp šiem otriem trim viņš bija jo lielā godā, un viņš tiem bija par virsnieku, bet tos pirmajus trīs viņš nepanāca.
22 ೨೨ ಅನೇಕ ಶೂರಕೃತ್ಯಗಳನ್ನು ನಡಿಸಿದ ಕಬ್ಜಯೇಲನವನಾದ ಪರಾಕ್ರಮಶಾಲಿಯ ಮೊಮ್ಮಗನೂ, ಯೆಹೋಯಾದನ ಮಗನೂ ಆದ ಬೆನಾಯನು ಇನ್ನೊಬ್ಬನು. ಇವನು ಒಂದು ಸಾರಿ ಮೋವಾಬ್ಯನಾದ ಅರೀಯೇಲನ ಇನ್ನೂರು ಮಕ್ಕಳನ್ನು ಕೊಂದನು. ಇನ್ನೊಮ್ಮೆ ಹಿಮಕಾಲದಲ್ಲಿ ಒಂದು ಸಿಂಹವು ಗುಂಡಿಯಲ್ಲಿ ಬಿದ್ದಿರಲು, ಇವನು ಆ ಗುಂಡಿಗೆ ಇಳಿದು ಹೋಗಿ ಅದನ್ನು ಕೊಂದನು.
Benaja, Jojadas dēls, stipra vīra dēls, kas lielus darbus darījis, no Kabceēles, tas kāva divus stiprus Moabiešu lauvas, un nogāja un kāva vienu lauvu pašā alā sniega laikā.
23 ೨೩ ಮತ್ತೊಮ್ಮೆ ಏಳುವರೆ ಅಡಿ ಎತ್ತರದ ಅತಿ ಬಲವಾದ ಈಟಿಯನ್ನು ಹೊಂದಿದ್ದ ಒಬ್ಬ ಐಗುಪ್ತ್ಯನನ್ನು ಕೊಂದನು. ಆ ಐಗುಪ್ತ್ಯನ ಕೈಯಲ್ಲಿದ್ದ ಈಟಿಯು ನೇಕಾರರ ಕುಂಟೆಯಂತಿತ್ತು. ಆದರೆ ಇವನ ಕೈಯಲ್ಲಿ ಒಂದು ಕೋಲನ್ನು ಮಾತ್ರ ಹಿಡಿದುಕೊಂಡು ಹೋಗಿ ಅವನ ಕೈಯಲ್ಲಿದ್ದ ಈಟಿಯನ್ನು ಕಿತ್ತುಕೊಂಡು ಅದರಿಂದ ಅವನನ್ನು ಕೊಂದನು.
Viņš nokāva arī vienu Ēģiptes vīru, vīru pieci olektis garu, un tam Ēģiptietim bija šķēps rokā kā riestava; bet šis tam piegāja ar zizli un izrāva to šķēpu no tā ēģiptieša rokas un to nokāva ar viņa paša šķēpu.
24 ೨೪ ಈ ಪರಾಕ್ರಮ ಕೃತ್ಯದಿಂದ ಯೆಹೋಯಾದನ ಮಗನಾದ ಬೆನಾಯನು ಈ ಮೂವರಲ್ಲಿ ಹೆಸರುವಾಸಿಯಾದನು.
To darīja Benaja, Jojadas dēls, un šis bija slavens starp tiem trim varoņiem.
25 ೨೫ ಮೂವತ್ತು ಜನರಲ್ಲಿ ಇವನು ವಿಶೇಷ ಕೀರ್ತಿಯನ್ನು ಹೊಂದಿದರೂ ಮೊದಲಿನ ಮೂವರಿಗೆ ಸಮಾನನಾಗಿರಲಿಲ್ಲ. ದಾವೀದನು ಇವನನ್ನು ತನ್ನ ಕಾವಲುದಂಡಿನ ಮುಖ್ಯಸ್ಥನನ್ನಾಗಿ ಮಾಡಿದನು.
Un viņš bija tas augstākais starp trīsdesmit, bet tos trīs (pirmajus) viņš nepanāca. Un Dāvids to iecēla par savu padomnieku.
26 ೨೬ ಯುದ್ಧವೀರರ ಇನ್ನೊಂದು ಪಟ್ಟಿ: ಯೋವಾಬನ ತಮ್ಮನಾದ ಅಸಾಹೇಲನು, ಬೇತ್ಲೆಹೇಮಿನ ದೋದೋವಿನ ಮಗನಾದ ಎಲ್ಖಾನಾನ್,
Un karaspēka varoņi bija: Azaēls, Joaba brālis; Elanans, Dodus dēls, no Bētlemes;
27 ೨೭ ಹರೋರಿನವನಾದ ಶಮ್ಮೋತ್, ಪೆಲೋನ್ಯನಾದ ಹೆಲೆಚ್,
Zamots no Aroras, Elecs no Pelonas;
28 ೨೮ ತೆಕೋವದ ಇಕ್ಕೇಷನ ಮಗನಾದ ಈರ, ಅನತೋತಿನವನಾದ ಅಬೀಯೆಜೆರ,
Īrus, Ikeša dēls, no Tekoas; Abiēzers no Antotas;
29 ೨೯ ಹುಷ ಊರಿನವನಾದ ಸಿಬ್ಬೆಕೈ, ಅಹೋಹಿನವನಾದ ಈಲೈ,
Zibekajus, Uzata dēls, Ilajus, Aoka dēls,
30 ೩೦ ನೆಟೋಫದವನಾದ ಮಹರೈ ಮತ್ತು ಬಾಣನ ಮಗನಾದ ಹೇಲೆದ್,
Makarajus no Retovas; Eleds, Baēnas dēls, no Netofas;
31 ೩೧ ಬೆನ್ಯಾಮೀನ ದೇಶದ ಗಿಬೆಯ ಊರಿನ ರೀಬೈ ಎಂಬುವನ ಮಗನಾದ ಈತೈ. ಪಿರಾತೋನ್ಯನಾದ ಬೆನಾಯ,
Itajus, Ribaja dēls, no Ģibejas Benjamina bērnos; Benaja no Pirgatoas;
32 ೩೨ ಹಲೇಗಾಷಿನವನಾದ ಹೂರೈ, ಅರಾಬಾ ತಗ್ಗಿನವನಾದ ಅಬೀಯೇಲ್,
Urajus no Gaāša upēm; Abiēls no Arbatas;
33 ೩೩ ಬಹರೂಮ್ಯನಾದ ಅಜ್ಮಾವೆತ್, ಶಾಲ್ಬೋನ್ಯನಾದ ಎಲೆಯಖ್ಬ.
Asmavets no Baērumas; Elijabus, no Zaālbonas.
34 ೩೪ ಗೀಜೋನ್ಯನಾದ ಹಾಷೇಮನ ಮಕ್ಕಳು, ಹರಾರ್ಯನಾದ ಶಾಗೇಯನ ಮಗ, ಯೋನಾತಾನ,
No Azema bērniem no Ģizonas bija: Jonatāns, Zages dēls no Araras;
35 ೩೫ ಹರಾರ್ಯನಾದ ಶಾಕಾರನ ಮಗ ಅಹೀಯಾಮ್, ಊರನ ಮಗನಾದ ಎಲೀಫಲ್,
Ahijams, Zakara dēls, no Araras; Elivals, Ura dēls,
36 ೩೬ ಮೆಕೆರಾತ್ಯನಾದ ಹೇಫೆರ್, ಪೆಲೋನ್ಯನಾದ ಅಹೀಯ,
Hefers no Maķeras; Ahijus no Pelonas;
37 ೩೭ ಕರ್ಮೆಲ್ಯನಾದ ಹಚ್ರೋ, ಎಜ್ಬೈಯ ಮಗನಾದ ನಾರೈ,
Ecrus no Karmela; Naērajus, Azbajus dēls,
38 ೩೮ ನಾತಾನನ ತಮ್ಮನಾದ ಯೋವೇಲ್, ಹಗ್ರೀಯನ ಮಗನಾದ ಮಿಬ್ಹಾರ,
Joēls Nātana brālis; Mibears, Agra dēls,
39 ೩೯ ಅಮ್ಮೋನಿಯನಾದ ಚೆಲೆಕ್ ಬೇರೋತ್ಯನೂ ಚೆರೂಯಳ ಮಗನಾದ ಯೋವಾಬನೂ ಆಯುಧ ಹೊರುವವನು ಆಗಿದ್ದ ನಹರೈ,
Celeķs no Amona; Naķerajus no Berotas, bruņu nesējs Joabam, Cerujas dēlam;
40 ೪೦ ಇತ್ರೀಯರಾದ ಈರ, ಗಾರೇಬರು,
Īrus, Jetrus dēls, Gārebs, Jetrus dēls,
41 ೪೧ ಹಿತ್ತಿಯನಾದ ಊರೀಯ, ಅಹ್ಲೈಯ ಮಗನಾದ ಜಾಬಾದ್,
Ūrija, tas Etietis; Zabads, Aķelaja dēls,
42 ೪೨ ರೂಬೇನ್ಯನೂ ತನ್ನ ಜೊತೆಯಲ್ಲಿ ಬಂದ ಮೂವತ್ತು ಜನರು. ರೂಬೇನ್ಯರ ಮುಖ್ಯಸ್ಥನೂ ಶೀಜನ ಮಗನೂ ಆದ ಅದೀನ
Adinus, Zizus dēls, tas Rūbenietis, Rūbeniešu virsnieks, un pie viņa bija vēl trīsdesmit;
43 ೪೩ ಮಾಕನ ಮಗನಾದ ಹಾನಾನ್, ಮೆತೆನ ಊರಿನವನಾದ ಯೋಷಾಫಾಟ್,
Hanans, Maēkas dēls, un Jehošafats no Matonas;
44 ೪೪ ಅಷ್ಟೆರಾತ್ಯನಾದ ಉಜ್ಜೀಯ, ಅರೋಯೇರಿನ ಹೋತಾಮನ ಮಕ್ಕಳಾದ ಶಾಮಾ ಯೆಗೀಯೇಲರು,
Uzija no Astras; Šamus un Jajels, Otama dēli, no Aroēras;
45 ೪೫ ಶಿಮ್ರಿಯ ಮಗನಾದ ಎದೀಗಯೇಲ್, ಎದೀಗೇಲನ ತಮ್ಮನೂ ತೀಚೀಯನೂ ಆದ ಯೋಹ,
Jediaēls, Zimrus dēls, un Joūs, viņa brālis, no Ticas;
46 ೪೬ ಎಲ್ನಾಮನ ಮಕ್ಕಳಾದ ಮಹವೀಯನಾದ ಎಲೀಯೇಲ್, ಯೆರೀಬೈ ಮತ್ತು ಯೋಷವ್ಯರು. ಮೋವಾಬ್ಯನಾದ ಇತ್ಮ,
Eliēls no Maēvas, un Jeribajus un Jozavijas, Elnaāma dēli; un Jetmus no Moaba;
47 ೪೭ ಎಲೀಯೇಲ್ ಓಬೇದರು, ಮೆಚೋಬಾಯದವನಾದ ಯಾಸೀಯೇಲನು ಇವರೇ.
Eliēls un Abeds un Jaēziēls no Mecobajas.