< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 10 >
1 ೧ ಫಿಲಿಷ್ಟಿಯರು ಇಸ್ರಾಯೇಲರೊಡನೆ ಯುದ್ಧಮಾಡಿದರು. ಇಸ್ರಾಯೇಲರು ಅವರಿಂದ ಅಪಜಯಹೊಂದಿ ಗಿಲ್ಬೋವ ಬೆಟ್ಟದಲ್ಲಿ ಸತ್ತುಹೋದರು.
ଏଥିମଧ୍ୟରେ ପଲେଷ୍ଟୀୟମାନେ ଇସ୍ରାଏଲ ବିରୁଦ୍ଧରେ ଯୁଦ୍ଧ କଲେ; ପୁଣି, ଇସ୍ରାଏଲ ଲୋକମାନେ ପଲେଷ୍ଟୀୟମାନଙ୍କ ସମ୍ମୁଖରୁ ପଳାଇ ଗିଲ୍ବୋୟ ପର୍ବତରେ ହତ ହୋଇ ପଡ଼ିଲେ।
2 ೨ ಫಿಲಿಷ್ಟಿಯರು ಸೌಲನನ್ನೂ, ಅವನ ಮಕ್ಕಳನ್ನೂ ಬಿಡದೆ ಹಿಂದಟ್ಟಿ, ಅವನ ಮಕ್ಕಳಾದ ಯೋನಾತಾನನ್ನೂ, ಅಬೀನಾದಾಬನನ್ನೂ ಮತ್ತು ಮಲ್ಕೀಷೂವನನ್ನೂ ಕೊಂದರು.
ଆଉ ପଲେଷ୍ଟୀୟମାନେ ଶାଉଲ ଓ ତାଙ୍କ ପୁତ୍ରମାନଙ୍କ ପଛେ ପଛେ ଲାଗି ଗୋଡ଼ାଇଲେ ଓ ପଲେଷ୍ଟୀୟମାନେ ଶାଉଲଙ୍କର ପୁତ୍ର ଯୋନାଥନକୁ, ଅବୀନାଦବକୁ ଓ ମଲ୍କୀଶୂୟକୁ ବଧ କଲେ।
3 ೩ ಸೌಲನಿದ್ದ ಕಡೆಯಲ್ಲಿ ಯುದ್ಧವು ಬಹು ಘೋರವಾಗಿತ್ತು. ಬಿಲ್ಲುಗಾರರು ಅವನಿಗೆ ಗುರಿಯಿಟ್ಟರು.
ଏହିରୂପେ ଶାଉଲଙ୍କ ସଙ୍ଗେ ଭାରୀ ଯୁଦ୍ଧ ହେଲା ଓ ଧନୁର୍ଦ୍ଧରମାନେ ତାଙ୍କୁ ଧରିଲେ; ଆଉ ଧନୁର୍ଦ୍ଧରମାନଙ୍କ ସକାଶୁ ସେ ଆହତ ହେଲେ।
4 ೪ ಆಗ ಸೌಲನು ತನ್ನ ಆಯುಧ ಹೊರುವವನಿಗೆ, “ನಿನ್ನ ಕತ್ತಿಯನ್ನು ಹಿರಿದು ನನ್ನನ್ನು ತಿವಿದು ಕೊಲ್ಲು, ಇಲ್ಲವಾದರೆ ಸುನ್ನತಿಯಿಲ್ಲದ ಈ ಜನರು ಬಂದು ನನಗೆ ಅಪಕೀರ್ತಿ ತಂದಾರು” ಎಂದು ಹೇಳಲು ಅವನು ಹೆದರಿ ಹಿಂಜರಿದನು. ಆದುದರಿಂದ ಸೌಲನು ತಾನೇ ಕತ್ತಿಯನ್ನು ಹಿರಿದು, ಅದರ ಮೇಲೆ ಬಿದ್ದನು.
ତହିଁରେ ଶାଉଲ ଆପଣା ଅସ୍ତ୍ରବାହକକୁ କହିଲେ, “ତୁମ୍ଭ ଖଡ୍ଗ ବାହାର କରି ତହିଁରେ ମୋତେ ଭୁସି ପକାଅ; କେଜାଣି ଏହି ଅସୁନ୍ନତମାନେ ଆସି ମୋତେ କୌତୁକ କରିବେ।” ମାତ୍ର ତାଙ୍କର ଅସ୍ତ୍ରବାହକ ଅତିଶୟ ଭୀତ ହେବାରୁ ସମ୍ମତ ହେଲା ନାହିଁ। ଏହେତୁ ଶାଉଲ ଖଡ୍ଗ ନେଇ ଆପେ ତହିଁ ଉପରେ ପଡ଼ିଲେ।
5 ೫ ಸೌಲನು ಸತ್ತದ್ದನ್ನು ಅವನ ಆಯುಧ ಹೊರುವವನು ಕಂಡು ತಾನೂ ತನ್ನ ಕತ್ತಿಯ ಮೇಲೆ ಬಿದ್ದು ಸತ್ತನು.
ତହିଁରେ ଶାଉଲ ମରିଅଛନ୍ତି, ଏହା ଦେଖି ତାଙ୍କର ଅସ୍ତ୍ରବାହକ ସେହିପରି ଆପଣା ଖଡ୍ଗ ଉପରେ ପଡ଼ି ମଲା।
6 ೬ ಹೀಗೆ ಸೌಲನೂ, ಅವನ ಮೂರು ಮಕ್ಕಳೂ, ಅವನ ಮನೆಯವರೆಲ್ಲರೂ ಅದೇ ದಿನದಲ್ಲಿ ಸತ್ತರು.
ଏହିରୂପେ ଶାଉଲ ଓ ତାଙ୍କର ତିନି ପୁତ୍ର ଓ ତାଙ୍କର ସମସ୍ତ ପରିଜନ ଏକାସଙ୍ଗେ ମଲେ।
7 ೭ ಇಸ್ರಾಯೇಲರು ಸೋತು ಹೋದರು. ಸೌಲನೂ, ಅವನ ಮಕ್ಕಳು ಸತ್ತರು ಎಂಬ ವರ್ತಮಾನವನ್ನು ತಗ್ಗಿನಲ್ಲಿ ವಾಸವಾಗಿದ್ದ ಇಸ್ರಾಯೇಲರೆಲ್ಲರೂ ಕೇಳಿ ತಮ್ಮ ಪಟ್ಟಣಗಳನ್ನು ಬಿಟ್ಟು ಓಡಿಹೋದರು. ಫಿಲಿಷ್ಟಿಯರು ಬಂದು ಅವುಗಳಲ್ಲಿ ವಾಸಮಾಡಿದರು.
ଏଉତ୍ତାରେ ଇସ୍ରାଏଲ ଲୋକମାନେ ପଳାଇଲେ, ଆଉ ଶାଉଲ ଓ ତାଙ୍କର ପୁତ୍ରମାନେ ମଲେ, ଏହା ଦେଖି ତଳଭୂମିସ୍ଥ ସମସ୍ତ ଇସ୍ରାଏଲ ଲୋକ ଆପଣାମାନଙ୍କ ନଗରସବୁ ପରିତ୍ୟାଗ କରି ପଳାଇଲେ; ତହୁଁ ପଲେଷ୍ଟୀୟମାନେ ଆସି ତହିଁ ମଧ୍ୟରେ ବାସ କଲେ।
8 ೮ ಮರುದಿನ ಬೆಳಿಗ್ಗೆ ಫಿಲಿಷ್ಟಿಯರು ಸತ್ತವರ ಒಡವೆಗಳನ್ನು ಸುಲಿದುಕೊಳ್ಳುವುದಕ್ಕಾಗಿ ಬಂದಾಗ, ಸೌಲನೂ ಅವನ ಮೂರು ಮಕ್ಕಳೂ ಗಿಲ್ಬೋವ ಬೆಟ್ಟದಲ್ಲಿ ಸತ್ತುಬಿದ್ದಿರುವುದನ್ನು ಕಂಡರು.
ଏଥିଉତ୍ତାରେ ପରଦିନ ପଲେଷ୍ଟୀୟମାନେ ହତ ଲୋକମାନଙ୍କ ସଜ୍ଜାଦି ଫିଟାଇ ନେବା ପାଇଁ ଆସନ୍ତେ, ସେମାନେ ଶାଉଲଙ୍କୁ ଓ ତାଙ୍କର ପୁତ୍ରମାନଙ୍କୁ ଗିଲ୍ବୋୟ ପର୍ବତରେ ପଡ଼ିଥିବାର ଦେଖିଲେ।
9 ೯ ಫಿಲಿಷ್ಟಿಯರು ಸೌಲನಿಗಿರುವುದೆಲ್ಲವನ್ನು ಸುಲಿದುಕೊಂಡು ಅವನ ತಲೆಯನ್ನೂ, ಆಯುಧಗಳನ್ನೂ ತಮ್ಮ ದೇಶದ ಎಲ್ಲಾ ಕಡೆಗೆ ಕಳುಹಿಸಿ, ತಮ್ಮ ದೇವತೆಗಳಿಗೂ, ಜನರಿಗೂ ಜಯವಾರ್ತೆಯನ್ನು ಮುಟ್ಟಿಸಿದರು.
ତହୁଁ ସେମାନେ ତାଙ୍କର ସଜ୍ଜା ଫିଟାଇ ତାଙ୍କର ମସ୍ତକ ଓ ସଜ୍ଜା ନେଇ ଆପଣାମାନଙ୍କ ଦେବପ୍ରତିମାଗଣର ଗୃହକୁ ଓ ଲୋକମାନଙ୍କ ନିକଟକୁ ସମ୍ବାଦ ଦେବା ପାଇଁ ପଲେଷ୍ଟୀୟମାନଙ୍କ ଦେଶର ଚାରିଆଡ଼େ ପଠାଇଲେ।
10 ೧೦ ಅವನ ಆಯುಧಗಳನ್ನು ತಮ್ಮ ದೇವಸ್ಥಾನದಲ್ಲಿಟ್ಟರು. ಅವನ ತಲೆಯನ್ನು ದಾಗೋನನ ಗುಡಿಯಲ್ಲಿ ನೇತುಹಾಕಿದರು.
ପୁଣି, ସେମାନେ ତାଙ୍କର ସଜ୍ଜା ଆପଣାମାନଙ୍କ ଦେବ ମନ୍ଦିରରେ ରଖିଲେ ଓ ତାଙ୍କର ମସ୍ତକକୁ ଦାଗୋନ୍ ମନ୍ଦିରରେ ଟାଙ୍ଗି ଦେଲେ।
11 ೧೧ ಫಿಲಿಷ್ಟಿಯರು ಸೌಲನಿಗೆ ಏನೇನು ಮಾಡಿದರೆಂಬ ವರ್ತಮಾನವು ಯಾಬೇಷ್ ಗಿಲ್ಯಾದವರಿಗೆ ಮುಟ್ಟಿತು.
ଏଉତ୍ତାରେ ଯାବେଶ-ଗିଲୀୟଦୀୟ ସମସ୍ତେ ଶାଉଲଙ୍କ ପ୍ରତି ପଲେଷ୍ଟୀୟମାନଙ୍କ କୃତ ସକଳ କର୍ମର ସମ୍ବାଦ ପାଆନ୍ତେ,
12 ೧೨ ಆಗ ಅವರಲ್ಲಿರುವ ಶೂರರೆಲ್ಲರೂ ಹೊರಟುಹೋಗಿ ಸೌಲನ ಮತ್ತು ಅವನ ಮಕ್ಕಳ ಶವಗಳನ್ನು ಯಾಬೇಷಿಗೆ ತೆಗೆದುಕೊಂಡು ಬಂದು, ಅವರ ಎಲುಬುಗಳನ್ನು ಅಲ್ಲಿದ್ದ ಏಲಾ ಮರದ ಕೆಳಗೆ ಸಮಾಧಿ ಮಾಡಿ, ಏಳು ದಿನಗಳ ವರೆಗೆ ಉಪವಾಸ ಮಾಡಿದರು.
ସମସ୍ତ ବିକ୍ରମଶାଳୀ ଲୋକ ଉଠି ଶାଉଲଙ୍କର ଶରୀର ଓ ତାଙ୍କର ପୁତ୍ରମାନଙ୍କ ଶରୀର ଯାବେଶକୁ ନେଇ ଆସିଲେ ଓ ଯାବେଶସ୍ଥ ଅଲୋନ ବୃକ୍ଷ ମୂଳେ ସେମାନଙ୍କର ଅସ୍ଥି ପୋତି ସାତ ଦିନ ଉପବାସ କଲେ।
13 ೧೩ ಸೌಲನು ಯೆಹೋವನ ಮಾತು ಕೇಳದೆ ಆತನಿಗೆ ವಿರೋಧವಾಗಿ ದ್ರೋಹ ಮಾಡಿದ್ದರಿಂದಲೂ, ಯೆಹೋವನ ಸನ್ನಿಧಿಯಲ್ಲಿ ವಿಚಾರಿಸದೇ, ಭೂತ, ಪ್ರೇತಗಳನ್ನು ನಂಬಿ ದೇವ ದ್ರೋಹಿಯಾದುದರಿಂದ ಅವನಿಗೆ ಇಂಥ ಮರಣವಾಯಿತು.
ଏହିରୂପେ ଶାଉଲ ସଦାପ୍ରଭୁଙ୍କ ବିରୁଦ୍ଧରେ କୃତ ଆପଣା ଅବିଶ୍ଵସ୍ତତା ସକାଶୁ ମଲେ, କାରଣ ସେ ସଦାପ୍ରଭୁଙ୍କ ଆଜ୍ଞା ପାଳନ କଲେ ନାହିଁ; ମଧ୍ୟ ସେ ଭୂତୁଡ଼ିଆଠାରୁ ମନ୍ତ୍ରଣା ମାଗି ସଦାପ୍ରଭୁଙ୍କୁ ପଚାରିଲେ ନାହିଁ।
14 ೧೪ ಯೆಹೋವನು ಅವನನ್ನು ಕೊಲ್ಲಿಸಿ, ರಾಜ್ಯವನ್ನು ಇಷಯನ ಮಗನಾದ ದಾವೀದನಿಗೆ ಒಪ್ಪಿಸಿದನು.
ଏହେତୁ ସେ ତାଙ୍କୁ ବଧ କଲେ ଓ ଯିଶୀର ପୁତ୍ର ଦାଉଦଙ୍କୁ ରାଜ୍ୟ ଦେଲେ।