< 2 Tesaronaika 1 >
1 Hagi nagra Poli'nagi Sailasi'ene Timotigata Tesalonaika mani'naza mono nagamota Anumza Nafatine, Ranti Jisas Kraisinte tragotetma mani'nazamotarega, ama avona kre'neramunankino,
೧ನಮ್ಮ ತಂದೆಯಾದ ದೇವರಲ್ಲಿಯೂ ಕರ್ತನಾದ ಯೇಸು ಕ್ರಿಸ್ತನಲ್ಲಿಯೂ ಇರುವ ಥೆಸಲೋನಿಕದವರ ಸಭೆಗೆ ಪೌಲ, ಸಿಲ್ವಾನ, ಮತ್ತು ತಿಮೊಥೆ ಎಂಬ ನಾವು ಬರೆಯುವುದೇನಂದರೆ,
2 Anumza Nafatimofone, Ranti Jisas Kraisi Asunku'zamo'ene rimpa fruzamo'a tamagrane mesie.
೨ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಲಭಿಸಲಿ.
3 Hagi nenfugata maka knama tamagriku'ma tagesa nentahita Anumzamofona susu hunentona zamo'a, e'i knare'zantfa hu'ne. Na'ankure tamagri tamentintimo'a rura huno nevigetma, magoke magokemotma ovesinte avesintema nehaza zamo'a hageno ra nehie.
೩ಸಹೋದರರೇ, ನಾವು ಯಾವಾಗಲೂ ನಿಮ್ಮನ್ನು ಕುರಿತು ದೇವರಿಗೆ ಕೃತಜ್ಞತಾಸ್ತುತಿ ಮಾಡುವುದಕ್ಕೆ ಬದ್ಧರಾಗಿದ್ದೇವೆ, ಹಾಗೆ ಮಾಡುವುದು ಯೋಗ್ಯವಾಗಿದೆ. ಏಕೆಂದರೆ ನೀವು ನಂಬಿಕೆಯಲ್ಲಿ ಬಹಳ ಅಭಿವೃದ್ಧಿ ಹೊಂದುತ್ತಾ, ಪರಸ್ಪರವಾದ ಪ್ರೀತಿ ನಿಮ್ಮೆಲ್ಲರಲ್ಲಿಯೂ ಹೆಚ್ಚಾಗುತ್ತಿದೆ.
4 E'ina hu'negu, tamentinti nehutma, maka tamazeri havizama nehazafine, knazama tamizafima kazikazi hutama neaza zankura, Anumzamofo mono nagamofo amu'nompina tamagri tamagenkema nezamasamita, tamagrikura husaga huneramante'na akaginerone.
೪ಹೀಗಿರುವುದರಿಂದ ನಿಮಗೆ ಬಂದಿರುವ ಎಲ್ಲಾ ಹಿಂಸೆಗಳಲ್ಲಿಯೂ ನೀವು ಅನುಭವಿಸುತ್ತಿರುವ ಎಲ್ಲಾ ಸಂಕಟಗಳಲ್ಲಿಯೂ ತೋರಿಬಂದ ನಿಮ್ಮ ತಾಳ್ಮೆ ನಂಬಿಕೆಗಳ ನಿಮಿತ್ತ ದೇವ ಜನರ ಸಭೆಗಳಲ್ಲಿ ನಾವೇ ಹೆಮ್ಮೆಯಿಂದ ಮಾತನಾಡುತ್ತೇವೆ.
5 E'i ana maka'zamo'a Anumzamo'a fatgo refko zama'a erifore nehiankino, e'inahukna tamatazama e'neriza zampi Anumzamo'a tamazeri retro nehina, Anumzamofo kumara erigahaze.
೫ದೇವರ ನೀತಿಯುಳ್ಳ ತೀರ್ಪಿಗೆ ಪ್ರಮಾಣ ಯಾವುದೆಂದರೆ, ನೀವು ಪ್ರಯಾಸಪಡುತ್ತಿರುವ ದೇವರ ರಾಜ್ಯಕ್ಕೆ ನಿಮ್ಮನ್ನು ಯೋಗ್ಯರನ್ನಾಗಿಸುವುದು.
6 Na'ankure Anumzamo'a fatgo zanke nehia Nekino, tamazeri havizama nehaza vahera, nona'a huno zamazeri haviza hugahie.
೬ನಿಮ್ಮನ್ನು ಸಂಕಟಪಡಿಸುವವರಿಗೆ ಪ್ರತಿಯಾಗಿ ಸಂಕಟವನ್ನೂ, ಸಂಕಟಪಡುವವರಾದ ನಿಮಗೆ ನಮ್ಮೊಡನೆ ಉಪಶಮನವನ್ನೂ ಕೊಡುವುದು ದೇವರ ಎಣಿಕೆಯಲ್ಲಿ ನ್ಯಾಯವಾಗಿದೆಯಷ್ಟೆ.
7 Hianagi Ramo Jisasi'ma monafintima hanavenentake ankero vahe'anema, teve anefa'ane eama hanuno'a, Agra kanazampintira tamazeri o'za nehuno, tagri'enena knazantifintira eme tazeri o'za hugahie.
೭ಯೇಸು ಕರ್ತನು ತನ್ನ ಶಕ್ತಿಯುತ ದೇವದೂತರೊಂದಿಗೆ ಅಗ್ನಿ ಜ್ವಾಲೆಗಳ ಮೂಲಕ ಪರಲೋಕದಿಂದ ಪ್ರತ್ಯಕ್ಷನಾಗುವ ಕಾಲದಲ್ಲಿ ಅದನ್ನು ಕೊಡುವನು.
8 Hanki Anumzamofoma ke'za antahiza nosuza, Ranti Jisas Kraisi Knare Kusenkema novaririza vahera, nona'a huno knazana eme zamigahie.
೮ಆಗ ನಮ್ಮ ಕರ್ತನಾದ ಯೇಸುವು ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ವಿಧೇಯರಾಗದವರಿಗೂ ಪ್ರತಿಕಾರ ಮಾಡುವನು.
9 Ama ana vahe'mo'za havi mizazami e'neriza, Ramofonteti'ene hanavenentake masa'afintira atre'za afete'are mani'ne'za, zamata erivava hugahaze. (aiōnios )
೯ಅವರು ಕರ್ತನ ಸಮ್ಮುಖಕ್ಕೂ ಆತನ ಪರಾಕ್ರಮದ ವೈಭವಕ್ಕೂ ದೂರವಾಗಿ ನಿತ್ಯನಾಶನವೆಂಬ ದಂಡನೆಯನ್ನು ಅನುಭವಿಸುವರು. (aiōnios )
10 Anazama fore'ma haniana Ramoma ete esianknarera Agri vahe'ma mani'naza vahe'mo'zama ra agima nemisafina, tamagranena ana vahe amu'nompi maninetma, ra agi amigahaze. Na'ankure tagrama Agriku'ma huama hu'na kerera, tamagra tamentinti hu'naze.
೧೦ಆ ದಿನದಲ್ಲಿ ಆತನು ಬರುವಾಗ ತನ್ನ ಪರಿಶುದ್ಧ ಜನರಿಂದ ಮಹಿಮೆ ಹೊಂದಿದವನಾಗಿಯೂ ಮತ್ತು ನಾವು ನಿಮಗೆ ಹೇಳಿದ ಸಾಕ್ಷಿಯನ್ನು ನಂಬಿದವರೆಲ್ಲರ ಮೂಲಕ ತನ್ನ ವಿಷಯದಲ್ಲಿ ಆಶ್ಚರ್ಯ ಹುಟ್ಟಿಸುವನು.
11 Hagi Anumzamo huhampri tamantenegeta tamagrikura nunamuna huneramantonankino, Anumzamo'a tamazeri knare hina, Agri vahe manigahaze. Tagra nunamuna huvava nehunankino, Anumzamofo hanavemo'a tamaza nehina, maka knare'zama hunaku'ma nehaza zana nehuta, tamamentinti hutma hugahunema nehazazana hugahaze.
೧೧ಆದುದರಿಂದ ನಿಮಗೋಸ್ಕರ ಯಾವಾಗಲೂ ಪ್ರಾರ್ಥನೆಮಾಡಿ, ನಮ್ಮ ದೇವರು ನಿಮ್ಮನ್ನು ಕರೆದದ್ದಕ್ಕೆ ತಾನೇ ನಿಮ್ಮನ್ನು ಯೋಗ್ಯರೆಂದು ಎಣಿಸಬೇಕೆಂತಲೂ, ಸತ್ಕ್ರಿಯೆಗಳಿಗಾಗಿರುವ ನಿಮ್ಮ ಸಕಲ ಆಸೆಗಳನ್ನೂ, ನಂಬಿಕೆಯ ಫಲವಾದ ನಿಮ್ಮ ಕೆಲಸವನ್ನೂ ಶಕ್ತಿಪೂರ್ವಕವಾಗಿ ಈಡೇರಿಸಬೇಕೆಂತಲೂ ಬೇಡಿಕೊಳ್ಳುತ್ತೇವೆ.
12 E'inahuma hanutma Ramofo Jisas Kraisi Agi erihentesga nehnageno, Anumzantine Ranti Jisas Kraisi'enena asunkuzama'areti tamagi erisaga hugahie.
೧೨ಹೀಗಿರಲಾಗಿ ನಮ್ಮ ದೇವರು ಮತ್ತು ಕರ್ತನಾದ ಯೇಸು ಕ್ರಿಸ್ತನ ಕೃಪೆಗೆ ಅನುಸಾರವಾಗಿ ನಮ್ಮ ಕರ್ತನಾದ ಯೇಸುಕ್ರಿಸ್ತನ ಹೆಸರು ನಿಮ್ಮಲ್ಲಿ ಮಹಿಮೆ ಹೊಂದುವುದು ನೀವೂ ಆತನಲ್ಲಿ ಮಹಿಮೆ ಹೊಂದುವಿರಿ.