< 詩篇 16 >
1 ダビデのミクタムの歌 神よ、わたしをお守りください。わたしはあなたに寄り頼みます。
ಮಿಕತಾಮ ಗೀತೆ. ದಾವೀದನ ಕೀರ್ತನೆ. ನನ್ನ ದೇವರೇ, ನನ್ನನ್ನು ಕಾಪಾಡು, ಏಕೆಂದರೆ ನಿಮ್ಮಲ್ಲಿ ಆಶ್ರಯಪಡೆದಿದ್ದೇನೆ.
2 わたしは主に言う、「あなたはわたしの主、あなたのほかにわたしの幸はない」と。
ನಾನು ಯೆಹೋವ ದೇವರಿಗೆ, “ನೀವೇ ನನ್ನ ಕರ್ತ; ನಿಮ್ಮನ್ನು ಬಿಟ್ಟು ನನಗಿಲ್ಲ ಒಳಿತು,” ಎಂದು ಹೇಳಿದೆನು.
3 地にある聖徒は、すべてわたしの喜ぶすぐれた人々である。
ಭೂಲೋಕದಲ್ಲಿರುವ ದೇವಜನರ ಕುರಿತು, “ಇವರೇ ನನಗೆ ಶ್ರೇಷ್ಠರು. ಇವರಲ್ಲಿಯೇ ನನ್ನ ಎಲ್ಲಾ ಆನಂದವು,” ಎಂದು ಹೇಳುವೆನು.
4 おおよそ、ほかの神を選ぶ者は悲しみを増す。わたしは彼らのささげる血の灌祭を注がず、その名を口にとなえることをしない。
ಇತರ ದೇವರುಗಳನ್ನು ಅವಲಂಬಿಸಿರುವವರಿಗೆ ವ್ಯಥೆಗಳು ಹೆಚ್ಚೆಚ್ಚಾಗುವವು. ಅವರಂತೆ ರಕ್ತ ಬಲಿಗಳನ್ನು ನಾನು ಅರ್ಪಿಸುವುದಿಲ್ಲ. ಅವರ ಹೆಸರುಗಳನ್ನೂ ನನ್ನ ತುಟಿಗಳಲ್ಲಿ ಉಚ್ಚರಿಸುವುದಿಲ್ಲ.
5 主はわたしの嗣業、またわたしの杯にうくべきもの。あなたはわたしの分け前を守られる。
ಯೆಹೋವ ದೇವರೇ, ನೀವೇ ನನ್ನ ಪಾಲೂ, ನನ್ನ ಪಾತ್ರೆಯೂ ಆಗಿದ್ದೀರಿ; ನನ್ನ ಸ್ವಾಸ್ತ್ಯವನ್ನು ಸುರಕ್ಷಿತವಾಗಿ ಇಡುವವರು ನೀವೇ.
6 測りなわは、わたしのために好ましい所に落ちた。まことにわたしは良い嗣業を得た。
ನನ್ನ ಪಾಲಿಗೆ ಬಂದ ಮೇರೆಯ ಸ್ಥಳವೂ ಸುಂದರವಾದದ್ದು; ನಿಶ್ಚಯವಾಗಿಯೂ, ನನಗೆ ದೊರೆತ ಸ್ವತ್ತು ಆನಂದಕರವಾದದ್ದು.
7 わたしにさとしをさずけられる主をほめまつる。夜はまた、わたしの心がわたしを教える。
ನನಗೆ ಸಮಾಲೋಚನೆ ನೀಡುತ್ತಿರುವ ಯೆಹೋವ ದೇವರನ್ನು ನಾನು ಸ್ತುತಿಸುತ್ತಿರುವೆನು; ರಾತ್ರಿಯಲ್ಲಿಯೂ ನನ್ನ ಹೃದಯವು ನನಗೆ ಬೋಧಿಸುತ್ತದೆ.
8 わたしは常に主をわたしの前に置く。主がわたしの右にいますゆえ、わたしは動かされることはない。
ನಾನು ಯೆಹೋವ ದೇವರನ್ನು ಯಾವಾಗಲೂ ನನ್ನೆದುರಿನಲ್ಲಿಯೇ ಇಟ್ಟುಕೊಂಡಿದ್ದೇನೆ. ಅವರು ನನ್ನ ಬಲಗಡೆಯಲ್ಲಿ ಇರುವುದರಿಂದ ನಾನು ಎಂದಿಗೂ ಕದಲೆನು.
9 このゆえに、わたしの心は楽しみ、わたしの魂は喜ぶ。わたしの身もまた安らかである。
ಆದ್ದರಿಂದ ನನ್ನ ಹೃದಯ ಹರ್ಷಿಸುವುದು, ನನ್ನ ನಾಲಿಗೆ ಉಲ್ಲಾಸಗೊಳ್ಳುವುದು; ನನ್ನ ಶರೀರವು ಸಹ ಸುರಕ್ಷಿತವಾಗಿ ವಿಶ್ರಮಿಸುವುದು.
10 あなたはわたしを陰府に捨ておかれず、あなたの聖者に墓を見させられないからである。 (Sheol )
ಏಕೆಂದರೆ ನೀವು ನನ್ನ ಪ್ರಾಣವನ್ನು ಪಾತಾಳದಲ್ಲಿ ಬಿಟ್ಟುಬಿಡುವುದಿಲ್ಲ; ನಿಮ್ಮ ನಂಬಿಗಸ್ತನನ್ನು ಕೊಳೆಯುವ ಅವಸ್ಥೆಗೆ ತರುವುದಿಲ್ಲ. (Sheol )
11 あなたはいのちの道をわたしに示される。あなたの前には満ちあふれる喜びがあり、あなたの右には、とこしえにもろもろの楽しみがある。
ಜೀವಮಾರ್ಗವನ್ನು ನನಗೆ ತಿಳಿಯಪಡಿಸುವಿರಿ. ನಿಮ್ಮ ಸನ್ನಿಧಿಯಲ್ಲಿ ಪರಿಪೂರ್ಣ ಸಂತೋಷವಿದೆ; ನಿಮ್ಮ ಬಲಗಡೆಯಲ್ಲಿ ನಿತ್ಯಾನಂದವೂ ಇರುತ್ತದೆ.