< 民数記 30 >
1 モーセはイスラエルの人々の部族のかしらたちに言った、「これは主が命じられた事である。
ಮೋಶೆಯು ಇಸ್ರಾಯೇಲರ ಗೋತ್ರಗಳ ನಾಯಕರ ಸಂಗಡ ಮಾತನಾಡಿ, “ಯೆಹೋವ ದೇವರು ಆಜ್ಞಾಪಿಸಿದ್ದೇನೆಂದರೆ:
2 もし人が主に誓願をかけ、またはその身に物断ちをしようと誓いをするならば、その言葉を破ってはならない。口で言ったとおりにすべて行わなければならない。
ಯಾವನಾದರೂ ಯೆಹೋವ ದೇವರಿಗೆ ಹರಕೆಯನ್ನು ಮಾಡಿದರೆ, ಇಲ್ಲವೆ ಕಟ್ಟಳೆಯಿಂದ ತನ್ನ ಪ್ರಾಣವನ್ನು ಬಾಧಿಸುವ ಆಣೆ ಇಟ್ಟುಕೊಂಡರೆ, ಅವನು ತನ್ನ ಮಾತನ್ನು ತಪ್ಪಿಸಬಾರದು. ಬಾಯಿಂದ ಹೊರಟ ಮಾತುಗಳ ಪ್ರಕಾರ ಎಲ್ಲವನ್ನೂ ಮಾಡಬೇಕು.
3 またもし女がまだ若く、父の家にいて、主に誓願をかけ、またはその身に物断ちをしようとする時、
“ಸ್ತ್ರೀಯು ಯೆಹೋವ ದೇವರಿಗೆ ಹರಕೆಮಾಡಿ, ತನ್ನ ಕನ್ಯಾವಸ್ಥೆಯಲ್ಲಿ ತಂದೆಯ ಮನೆಯಲ್ಲಿ ದೇವರಿಗೆ ಹರಕೆಯನ್ನು ಮಾಡಿದಾಗ, ಇಲ್ಲವೆ ಯಾವುದಾದರೊಂದನ್ನು ಮುಟ್ಟುವುದಿಲ್ಲವೆಂದು ಪ್ರತಿಜ್ಞೆ ಮಾಡಿದಾಗ,
4 父が彼女の誓願、または彼女の身に断った物断ちのことを聞いて、彼女に何も言わないならば、彼女はすべて誓願を行い、またその身に断った物断ちをすべて守らなければならない。
ಅವಳ ತಂದೆಯು ಆ ವಿಷಯವನ್ನು ತಿಳಿದು ಮೌನವಾಗಿದ್ದರೆ, ಅವಳು ಆ ಹರಕೆ ಮತ್ತು ಪ್ರಮಾಣಗಳನ್ನು ನೆರವೇರಿಸಲೇಬೇಕು.
5 しかし、彼女の父がそれを聞いた日に、それを承認しない時は、彼女はその誓願、またはその身に断った物断ちをすべてやめることができる。父が承認しないのであるから、主は彼女をゆるされるであろう。
ಆದರೆ ಅವಳ ತಂದೆ ಅದನ್ನು ಕೇಳಿ ಅವಳನ್ನು ತಡೆದರೆ, ಅವಳ ಎಲ್ಲಾ ಹರಕೆಗಳೂ ಪ್ರತಿಜ್ಞೆಗಳೂ ವ್ಯರ್ಥವಾಗುತ್ತವೆ. ಅವಳ ತಂದೆ ಅವಳನ್ನು ತಡೆದ ಕಾರಣ ಯೆಹೋವ ದೇವರು ಅವಳನ್ನು ಕ್ಷಮಿಸುವರು.
6 またもし夫のある身で、みずから誓願をかけ、またはその身に物断ちをしようと、軽々しく口で言った場合、
“ಆದರೆ ಅವಳಿಗೆ ಗಂಡನಿರುವ ವೇಳೆಯಲ್ಲಿ ಅವಳ ಮೇಲೆ ಹರಕೆಗಳು ಇಲ್ಲವೆ ಪ್ರಾಣವನ್ನು ಬಂಧಿಸುವ ಬಾಯಿಂದ ಬಂದ ಮಾತು ಇದ್ದರೆ,
7 夫がそれを聞き、それを聞いた日に彼女に何も言わないならば、彼女はその誓願を行い、その身に断った物断ちを守らなければならない。
ಅವಳ ಗಂಡನು ಆ ವಿಷಯವನ್ನು ತಿಳಿದು ಸುಮ್ಮನಿದ್ದ ಪಕ್ಷದಲ್ಲಿ ಅವಳ ಹರಕೆಗಳೂ ಪ್ರತಿಜ್ಞೆಗಳೂ ನೆರವೇರಬೇಕು.
8 しかし、もし夫がそれを聞いた日に、それを承認しないならば、夫はその女がかけた誓願、またはその身に物断ちをしようと、軽々しく口に言ったことをやめさせることができる。主はその女をゆるされるであろう。
ಆದರೆ ಅವಳ ಗಂಡನು ಅದನ್ನು ಕೇಳಿದಾಗ ಬೇಡವೆಂದು ತಡೆದು, ಅವಳ ಮೇಲೆ ಇರುವ ಅವಳ ಹರಕೆಯನ್ನೂ ಇಲ್ಲವೆ ಯೋಚಿಸದೆ ಮಾಡಿದ ಪ್ರತಿಜ್ಞೆಯನ್ನೂ ನಿರರ್ಥಕ ಮಾಡಿದ ಪಕ್ಷದಲ್ಲಿ ಯೆಹೋವ ದೇವರು ಅವಳಿಗೆ ಕ್ಷಮಿಸುವರು.
9 しかし、寡婦あるいは離縁された女の誓願、すべてその身に断った物断ちは、それを守らなければならない。
“ಇದಲ್ಲದೆ ವಿಧವೆಯಾದರೂ ವಿವಾಹ ವಿಚ್ಛೇದಿತ ಮಹಿಳೆಯಾದರೂ ಇಂತಹ ಹರಕೆ ಇಲ್ಲವೆ ಪ್ರಮಾಣ ಮಾಡಿಕೊಂಡರೆ ಅವಳು ಅದನ್ನು ನೆರವೇರಿಸಬೇಕು.
10 もし女が夫の家で誓願をかけ、またはその身に物断ちをしようと誓った時、
“ಅವಳು ತನ್ನ ಗಂಡನ ಮನೆಯಲ್ಲಿ ಅಂತಹ ಹರಕೆ ಇಲ್ಲವೆ ಪ್ರತಿಜ್ಞೆಯನ್ನು ಮಾಡಿದಾಗ,
11 夫がそれを聞いて、彼女に何も言わず、またそれに反対しないならば、その誓願はすべて行わなければならない。またその身に断った物断ちはすべて守らなければならない。
ಅವಳ ಗಂಡನು ಅದನ್ನು ಕೇಳಿ ಅದಕ್ಕೆ ಮೌನವಾಗಿದ್ದು, ಅವಳನ್ನು ತಡೆಯದ ಪಕ್ಷದಲ್ಲಿ, ಅವಳ ಸಮಸ್ತ ಹರಕೆಗಳೂ ಪ್ರತಿಜ್ಞೆಗಳೂ ನಿಲ್ಲುವುವು.
12 しかし、もし夫がそれを聞いた日にそれを認めないならば、彼女の誓願、または身の物断ちについて、彼女が口で言った事は、すべてやめることができる。夫がそれを認めなかったのだから、主はその女をゆるされるであろう。
ಆದರೆ ಅವಳ ಗಂಡನು ಅವುಗಳನ್ನು ಕೇಳಿದ ದಿವಸದಲ್ಲೇ ಅವುಗಳನ್ನು ಪೂರ್ಣವಾಗಿ ನಿರರ್ಥಕ ಮಾಡಿದ ಪಕ್ಷದಲ್ಲಿ ಅವಳ ಹರಕೆಗಳಿಗೋಸ್ಕರವೂ ಅವಳು ಕೈಗೊಂಡ ಕಟ್ಟಳೆಗೋಸ್ಕರವೂ ಅವಳ ತುಟಿಗಳಿಂದ ಹೊರಟದ್ದು ಯಾವುದಾಗಲಿ ನಿಲ್ಲದು. ಅವಳ ಗಂಡನು ಅವುಗಳನ್ನು ನಿರರ್ಥಕ ಮಾಡಿದ್ದಾನೆ. ಯೆಹೋವ ದೇವರು ಅವಳಿಗೆ ಕ್ಷಮಿಸುವರು.
13 すべての誓願およびすべてその身を悩ます物断ちの誓約は、夫がそれを守らせることができ、または夫がそれをやめさせることができる。
ಸಮಸ್ತ ಪ್ರಮಾಣವನ್ನೂ ಪ್ರಾಣವನ್ನು ಕುಂದಿಸುವ ಸಮಸ್ತ ಹರಕೆಗಳನ್ನೂ, ಅವಳ ಗಂಡನು ಅದನ್ನು ಸ್ಥಾಪಿಸಬಹುದು ಅಥವಾ ಅದನ್ನು ರದ್ದುಗೊಳಿಸಬಹುದು.
14 もし夫が彼女に何も言わずに日を送るならば、彼は妻がした誓願、または物断ちをすべて認めたのである。彼はそれを聞いた日に妻に何も言わなかったのだから、それを認めたのである。
ಆದರೆ ಅವಳ ಗಂಡನು ಅದಕ್ಕೆ ದಿನದಿನಕ್ಕೆ ಪೂರ್ಣವಾಗಿ ಸುಮ್ಮನಿದ್ದರೆ, ಅವನು ಅವಳ ಸಮಸ್ತ ಹರಕೆಗಳನ್ನೂ ಅವಳ ಮೇಲಿರುವ ಸಮಸ್ತ ಪ್ರತಿಜ್ಞೆಗಳನ್ನೂ ಅನುಮೋದಿಸಿದಂತಾಗುವುದು. ಅವನು ಕೇಳಿದ ದಿನದಲ್ಲಿ ಅದಕ್ಕೆ ಸುಮ್ಮನಿರುವುದರಿಂದ ಅವುಗಳನ್ನು ಸ್ಥಾಪಿಸಿದ್ದಾನೆ.
15 しかし、もし夫がそれを聞き、あとになって、それを認めないならば、彼は妻の罪を負わなければならない」。
ಆದರೆ ಅವನು ಕೇಳಿದ ತರುವಾಯ ಅವುಗಳನ್ನು ಹೇಗಾದರೂ ನಿರರ್ಥಕ ಮಾಡಿದರೆ, ಅವನೇ ಅವಳ ಅಕ್ರಮವನ್ನು ಹೊರಬೇಕು.”
16 これらは主がモーセに命じられた定めであって、夫と妻との間、および父とまだ若くて父の家にいる娘との間に関するものである。
ಗಂಡ ಹೆಂಡತಿಯರ ವಿಷಯದಲ್ಲಿಯೂ ತಂದೆಯ ಮನೆಯಲ್ಲಿ ಕನ್ಯಾವಸ್ಥೆಯಲ್ಲಿರುವ ಮಗಳ ವಿಷಯದಲ್ಲಿಯೂ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಕಟ್ಟಳೆಗಳು ಇವೇ.