< ネヘミヤ 記 11 >
1 民のつかさたちはエルサレムに住み、その他の民はくじを引いて、十人のうちからひとりずつを、聖都エルサレムに来て住ませ、九人を他の町々に住ませた。
೧ಇಸ್ರಾಯೇಲರ ಪ್ರಮುಖರು ಮಾತ್ರ ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದರು. ಉಳಿದ ಜನರೊಳಗೆ ಹತ್ತು ಜನರಲ್ಲಿ ಒಂಭತ್ತು ಜನ ತಮ್ಮ ತಮ್ಮ ಊರುಗಳಲ್ಲಿ ವಾಸಮಾಡುತ್ತಿದ್ದರು, ಒಬ್ಬನು ಮಾತ್ರ ಪವಿತ್ರನಗರವಾಗಿರುವ ಯೆರೂಸಲೇಮಿನಲ್ಲಿ ವಾಸಮಾಡಬೇಕು ಎಂದು ಚೀಟು ಹಾಕಿ ಅವನನ್ನು ಗೊತ್ತು ಮಾಡುತ್ತಿದ್ದರು.
2 またすべてみずから進みでてエルサレムに住むことを申し出た人々は、民はこれを祝福した。
೨ಮತ್ತು ಸ್ವಇಚ್ಛೆಯಿಂದ ಯೆರೂಸಲೇಮಿನಲ್ಲಿ ವಾಸಿಸುವುದಕ್ಕೆ ಮನಸ್ಸು ಮಾಡಿದಂಥವರನ್ನು ಜನರು ಆಶೀರ್ವದಿಸಿದರು.
3 さてエルサレムに住んだこの州の長たちは次のとおりである。ただしユダの町々ではおのおのその町々にある自分の所有地に住んだ。すなわちイスラエルびと、祭司、レビびと、宮に仕えるしもべ、およびソロモンのしもべであった者たちの子孫である。
೩ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದ ಯೆಹೂದ ಸಂಸ್ಥಾನ ಪ್ರಧಾನರು ಯಾರಾರೆಂದರೆ: ಇಸ್ರಾಯೇಲರೂ, ಯಾಜಕರೂ, ಲೇವಿಯರೂ, ದೇವಾಲಯದ ಸೇವಕರು, ಸೊಲೊಮೋನನ ಸೇವಕರ ವಂಶದವರೂ ತಮ್ಮ ತಮ್ಮ ಸ್ವತ್ತುಗಳಿರುವ ಯೆಹೂದ ದೇಶದ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.
4 そしてエルサレムにはユダの子孫およびベニヤミンの子孫のうちのある者たちが住んだ。すなわちユダの子孫ではウジヤの子アタヤで、ウジヤはゼカリヤの子、ゼカリヤはアマリヤの子、アマリヤはシパテヤの子、シパテヤはマハラレルの子、マハラレルはペレヅの子孫である。
೪ಯೆರೂಸಲೇಮಿನಲ್ಲಿ, ಯೆಹೂದ ಮತ್ತು ಬೆನ್ಯಾಮೀನ್ ಕುಲಗಳವರಲ್ಲಿ ಕೆಲವರು ವಾಸವಾಗಿದ್ದರು. ಯೆಹೂದ ಕುಲದವರಲ್ಲಿ: ಅತಾಯನು, ಇವನು ಉಜ್ಜೀಯನ ಮಗ; ಇವನು ಜೆಕರ್ಯನ ಮಗ; ಇವನು ಅಮರ್ಯನ ಮಗ; ಇವನು ಶೆಫಟ್ಯನ ಮಗ; ಇವನು ಮಹಲಲೇಲನ ಮಗ, ಇವನು ಪೆರೆಚ್ ಸಂತಾನದವನು.
5 またバルクの子マアセヤで、バルクはコロホゼの子、コロホゼはハザヤの子、ハザヤはアダヤの子、アダヤはヨヤリブの子、ヨヤリブはゼカリヤの子、ゼカリヤはシロニびとの子である。
೫ಇನ್ನೊಬ್ಬನು ಮಾಸೇಯ, ಇವನು ಬಾರೂಕನ ಮಗ; ಇವನು ಕೊಲ್ಹೋಜೆಯ ಮಗ; ಇವನು ಹಜಾಯನ ಮಗ; ಇವನು ಅದಾಯನ ಮಗ; ಇವನು ಯೋಯಾರೀಬನ ಮಗ; ಇವನು ಜೆಕರ್ಯನ ಮಗ, ಇವನು ಶೇಲಹನ ಸಂತಾನದವನು.
6 ペレヅの子孫でエルサレムに住んだ者は合わせて四百六十八人で、みな勇敢な人々である。
೬ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದ ಪೆರೆಚ್ ಸಂತಾನದ ರಣವೀರರು ನಾನೂರ ಆರುವತ್ತೆಂಟು ಮಂದಿ.
7 ベニヤミンの子孫では次のとおりである。すなわちメシュラムの子サルで、メシュラムはヨエデの子、ヨエデはペダヤの子、ペダヤはコラヤの子、コラヤはマアセヤの子、マアセヤはイテエルの子、イテエルはエサヤの子である。
೭ಬೆನ್ಯಾಮೀನ್ ಕುಲದವರಲ್ಲಿ: ಸಲ್ಲು, ಇವನು ಮೆಷುಲ್ಲಾಮನ ಮಗ; ಇವನು ಯೋವೇದನ ಮಗ; ಇವನು ಪೆದಾಯನ ಮಗ; ಇವನು ಕೋಲಾಯನ ಮಗ; ಇವನು ಮಾಸೇಯನ ಮಗ; ಇವನು ಈತೀಯೇಲನ ಮಗ; ಇವನು ಯೆಶಾಯನ ಮಗ.
8 その次はガバイおよびサライなどで合わせて九百二十八人。
೮ರಣವೀರರಾದ ಗಬ್ಬೈ ಮತ್ತು ಸಲ್ಲೈ ಹಾಗು ಒಂಭೈನೂರಿಪ್ಪತ್ತೆಂಟು ಮಂದಿ.
9 ジクリの子ヨエルが彼らの監督である。ハッセヌアの子ユダがその副官として町を治めた。
೯ಜಿಕ್ರಿಯನ ಮಗನಾದ ಯೋವೇಲನು ಇವರ ನಾಯಕನು. ಹಸ್ಸೆನೂವನ ಮಗನಾದ ಯೆಹೂದನು ಪಟ್ಟಣದ ಎರಡನೆಯ ಪುರಾಧಿಕಾರಿಯಾಗಿದ್ದನು.
೧೦ಯಾಜಕರಲ್ಲಿ: ಯೋಯಾರೀಬನ ಮಗನಾದ ಯೆದಾಯ, ಮತ್ತು ಯಾಕೀನ್,
11 および神の宮のつかさセラヤで、セラヤはヒルキヤの子、ヒルキヤはメシュラムの子、メシュラムはザドクの子、ザドクはメラヨテの子、メラヨテはアヒトブの子である。
೧೧ಅಹೀಟೂಬನ ಸಂತಾನದವನಾದ ಮೆರಾಯೋತನಿಂದ ಹುಟ್ಟಿದ ಚಾದೋಕನ ಮರಿಮಗನೂ, ಮೆಷುಲ್ಲಾಮನ ಮೊಮ್ಮಗನೂ ಹಿಲ್ಕೀಯನ ಮಗನೂ, ದೇವಾಲಯದ ಅಧಿಪತಿಯೂ ಆದ ಸೆರಾಯ ಇವರು.
12 宮の務をするその兄弟は八百二十二人あり、また、エロハムの子アダヤがある。エロハムはペラリヤの子、ペラリヤはアムジの子、アムジはゼカリヤの子、ゼカリヤはパシホルの子、パシホルはマルキヤの子である。
೧೨ಮತ್ತು ದೇವಾಲಯದ ಸೇವೆ ನಡೆಸುತ್ತಿದ್ದ ಇವರ ಬಂಧುಗಳು ಒಟ್ಟು ಎಂಟುನೂರ ಇಪ್ಪತ್ತೆರಡು ಮಂದಿ. ಇವರಲ್ಲದೆ ಅದಾಯನೆಂಬುವನು ಇನ್ನೊಬ್ಬನು. ಇವನು ಯೆರೋಹಾಮನ ಮಗ; ಇವನು ಪೆಲಲ್ಯನ ಮಗ; ಇವನು ಅಮ್ಚೀಯನ ಮಗ; ಇವನು ಜೆಕರ್ಯನ ಮಗ; ಇವನು ಪಷ್ಹೂರನ ಮಗ; ಇವನು ಮಲ್ಕೀಯನ ಮಗ.
13 アダヤの兄弟で、氏族の長たる者は二百四十二人あり、またアザリエルの子アマシサイがある。アザリエルはアハザイの子、アハザイはメシレモテの子、メシレモテはインメルの子である。
೧೩ಗೋತ್ರಪ್ರಧಾನರಾದ ಈ ಅದಾಯನ ಬಂಧುಗಳು ಇನ್ನೂರ ನಲ್ವತ್ತೆರಡು ಮಂದಿ. ಅಮಷ್ಷೈ ಎಂಬುವನು ಮತ್ತೊಬ್ಬನು. ಇವನು ಅಜರೇಲನ ಮಗ; ಇವನು ಅಹಜೈಯನ ಮಗ; ಇವನು ಮೆಷಿಲ್ಲೇಮೋತನ ಮಗ; ಇವನು ಇಮ್ಮೇರನ ಮಗ.
14 その兄弟である勇士は百二十八人あり、その監督はハッゲドリムの子ザブデエルである。
೧೪ರಣವೀರರಾಗಿದ್ದ ಈ ಅಮಷ್ಷೈಯ ಬಂಧುಗಳು ನೂರಿಪ್ಪತ್ತೆಂಟು ಮಂದಿ. ಹಗ್ಗೆದೋಲೀಮನ ಮಗನಾದ ಜಬ್ದೀಯೇಲನು ಇವರ ನಾಯಕನು.
15 レビびとではハシュブの子シマヤで、ハシュブはアズリカムの子、アズリカムはハシャビヤの子、ハシャビヤはブンニの子である。
೧೫ಲೇವಿಯರಲ್ಲಿ: ಹಷ್ಷೂಬನ ಮಗನೂ, ಅಜ್ರೀಕಾಮನ ಮೊಮ್ಮಗನೂ, ಹಷಬ್ಯನ ಮರಿಮಗನೂ, ಬುನ್ನೀ ವಂಶದವನೂ ಆದ ಶೆಮಾಯನು.
16 またシャベタイおよびヨザバデがある。これらはレビびとのかしらであって、神の宮の外のわざをつかさどった。
೧೬ಲೇವಿಗೋತ್ರ ಪ್ರಧಾನರಲ್ಲಿ: ದೇವಾಲಯದ ಹೊರಗಿನ ಕಾರ್ಯಗಳ ಮೇಲ್ವಿಚಾರಕನಾದ ಶಬ್ಬೆತೈ, ಯೋಜಾಬಾದ್ ಎಂಬುವವರು,
17 またミカの子マッタニヤがある。ミカはザブデの子、ザブデはアサフの子である。マッタニヤは祈の時に感謝の言葉を唱え始める者である。その兄弟のうちのバクブキヤは彼に次ぐ者であった。またシャンマの子アブダがある。シャンマはガラルの子、ガラルはエドトンの子である。
೧೭ಮೀಕನ ಮಗನೂ, ಜಬ್ದೀಯನ ಮೊಮ್ಮಗನೂ, ಆಸಾಫನ ಮರಿಮಗನೂ, ಪ್ರಾರ್ಥನೆಯ ಸಮಯದಲ್ಲಿ ಕೃತಜ್ಞತಾಸ್ತುತಿಯನ್ನು ಆರಂಭಿಸುತ್ತಾ ಆರಾಧನೆಯಲ್ಲಿ ಜನರನ್ನು ನಡೆಸುತ್ತಿದ್ದ ಮತ್ತನ್ಯ, ತನ್ನ ಬಂಧುಗಳಲ್ಲಿ ದ್ವಿತೀಯ ಸ್ಥಾನದವನಾದ ಬಕ್ಬುಕ್ಯ, ಶಮ್ಮೂವನ ಮಗನೂ, ಗಾಲಾಲನ ಮೊಮ್ಮಗನೂ, ಯೆದೂತೂನನ ಮರಿಮಗನೂ ಆದ ಅಬ್ದ ಎಂಬುವವರು,
18 聖都におるレビびとは合わせて二百八十四人であった。
೧೮ಪರಿಶುದ್ಧ ನಗರದಲ್ಲಿದ್ದ ಎಲ್ಲಾ ಲೇವಿಯರು ಒಟ್ಟು ಇನ್ನೂರ ಎಂಭತ್ತನಾಲ್ಕು ಮಂದಿ.
19 門衛では門を守るアックブ、タルモンおよびその兄弟たち合わせて百七十二人である。
೧೯ದ್ವಾರಪಾಲಕರಲ್ಲಿ; ಅಕ್ಕೂಬ್, ಟಲ್ಮೋನರೂ ಮತ್ತು ಬಾಗಿಲುಗಳನ್ನು ಕಾಯುತ್ತಿದ್ದ ಇವರ ಬಂಧುಗಳೂ ಒಟ್ಟು ನೂರ ಎಪ್ಪತ್ತೆರಡು ಮಂದಿ.
20 その他のイスラエルびと、祭司、レビびとたちは皆ユダのすべての町々にあって、おのおの自分の嗣業にとどまった。
೨೦ಉಳಿದ ಇಸ್ರಾಯೇಲರೂ, ಯಾಜಕರೂ, ಲೇವಿಯರೂ ತಮ್ಮ ತಮ್ಮ ಸ್ವತ್ತುಗಳಿರುವ ಯೆಹೂದದ ಎಲ್ಲಾ ಪಟ್ಟಣಗಳಲ್ಲಿ ವಾಸಮಾಡುತ್ತಿದ್ದರು.
21 ただし宮に仕えるしもべたちはオペルに住み、ヂハおよびギシパが宮に仕えるしもべたちを監督していた。
೨೧ದೇವಾಲಯದ ಸೇವಕರು ಓಪೇಲ್ ಗುಡ್ಡದಲ್ಲಿ ವಾಸಿಸುತ್ತಿದ್ದರು. ಚೀಹ, ಗಿಷ್ಪ ಎಂಬುವವರು ಇವರ ನಾಯಕರಾಗಿದ್ದರು.
22 エルサレムにおるレビびとの監督はウジである。ウジはバニの子、バニはハシャビヤの子、ハシャビヤはマッタニヤの子、マッタニヤはミカの子である。ミカは歌うたう者なるアサフの子孫である。ウジは神の宮のわざを監督した。
೨೨ದೇವಾಲಯದ ಕೆಲಸದ ಸಂಬಂಧವಾಗಿ ಗಾಯಕರಾದ ಆಸಾಫ್ಯರಿಗೆ ಸೇರಿದ ಬಾನೀಯನ ಮಗನೂ, ಹಷಬ್ಯನ ಮೊಮ್ಮಗನೂ, ಮತ್ತನ್ಯನ ಮರಿಮಗನೂ, ಮೀಕನ ವಂಶದವನಾದ ಆದ ಉಜ್ಜೀಯು ಯೆರೂಸಲೇಮಿನಲ್ಲಿದ್ದ ಲೇವಿಯರ ನಾಯಕನಾಗಿದ್ದನು.
23 彼らについては王からの命令があって、歌うたう者に日々の定まった分を与えさせた。
೨೩ಗಾಯಕರ ಅನುದಿನದ ಖರ್ಚಿಗಾಗಿ ಒಂದು ನಿಯಮ ಇತ್ತು.
24 またユダの子ゼラの子孫であるメシザベルの子ペタヒヤは王の手に属して民に関するすべての事を取り扱った。
೨೪ಮೆಷೇಜಬೇಲನ ಮಗನೂ, ಜೆರಹನ ಸಂತಾನದವನೂ, ಯೆಹೂದ ಕುಲದವನೂ ಆದ ಪೆತಹ್ಯನು ಪ್ರಜೆಗಳ ಎಲ್ಲಾ ಕಾರ್ಯಗಳ ಸಂಬಂಧದಲ್ಲಿ ರಾಜನ ಕಾರ್ಯಭಾರಿಯಾಗಿದ್ದನು.
25 また村々とその田畑については、ユダの子孫の者はキリアテ・アルバとその村々、デボンとその村々、エカブジエルとその村々に住み、
೨೫ಭೂಸ್ವಾಸ್ಥ್ಯವಿದ್ದವರು ವಾಸಿಸುತ್ತಿದ್ದ ಊರುಗಳು: ಕಿರ್ಯತರ್ಬ, ದೀಬೋನ್, ಯೆಕಬ್ಜೆಯೇಲ್ ಇವುಗಳೂ ಮತ್ತು ಇವುಗಳ ಗ್ರಾಮಗಳು,
೨೬ಯೇಷೂವ, ಮೋಲಾದ, ಬೇತ್ಪೆಲೆಟ್ ಇವುಗಳೂ ಮತ್ತು ಇವುಗಳ ಗ್ರಾಮಗಳು,
27 ハザル・シュアルおよびベエルシバとその村々に住み、
೨೭ಹಚರ್ ಷೂವಾಲ್ ಹಾಗು ಬೇರ್ಷೆಬ ಇವುಗಳೂ ಮತ್ತು ಇವುಗಳ ಗ್ರಾಮಗಳು,
೨೮ಚಿಕ್ಲಗ್, ಮೆಕೋನವೂ ಇವುಗಳೂ ಮತ್ತು ಇವುಗಳ ಗ್ರಾಮಗಳು,
೨೯ಏನ್ರಿಮ್ಮೋನ್, ಚೊರ್ರ, ಯರ್ಮೂತ್ ಇವುಗಳೂ ಮತ್ತು ಇವುಗಳ ಗ್ರಾಮಗಳು,
30 ザノア、アドラムおよびそれらの村々、ラキシとその田野、アゼカとその村々に住んだ。こうして彼らはベエルシバからヒンノムの谷にまで宿営した。
೩೦ಜನೋಹ, ಅದುಲ್ಲಾಮ್ ಇವುಗಳ ಮತ್ತು ಇವುಗಳ ಗ್ರಾಮಗಳು ಮತ್ತು ಲಾಕೀಷ್ ಇದರ ಪ್ರಾಂತ್ಯಗಳು, ಅಜೇಕವೂ ಅದರ ಗ್ರಾಮಗಳು ಯೆಹೂದ ಕುಲದವರ ನಿವಾಸ ಸ್ಥಾನಗಳಾಗಿದ್ದವು. ಅವರು ಬೇರ್ಷೆಬದಿಂದ ಹಿನ್ನೋಮ್ ಕಣಿವೆಯವರೆಗೂ ವಾಸಮಾಡುತ್ತಿದ್ದರು.
31 ベニヤミンの子孫はまたゲバからミクマシ、アヤおよびベテルとその村々に住み、
೩೧ಬೆನ್ಯಾಮೀನ್ ಕುಲದವರು ಗೆಬ ಊರಿನಿಂದ, ಮಿಕ್ಮಾಷ್, ಅಯ್ಯಾ ಹಾಗು ಬೇತೇಲ್ ಎಂಬ ಗ್ರಾಮಗಳವರೆಗೂ ವಾಸಮಾಡುತ್ತಿದ್ದರು.
೩೩ಹಾಚೋರ್, ರಾಮಾ, ಗಿತ್ತಯಿಮ್,
೩೪ಹಾದೀದ್, ಚೆಬೋಯಿಮ್, ನೆಬಲ್ಲಾಟ್,
೩೫ಲೋದ್, ಓನೋ, ಗೇಹರಾಷೀಮ್ ಎಂಬ ಗ್ರಾಮಗಳೂ ಬೆನ್ಯಾಮೀನ್ ಕುಲದವರ ನಿವಾಸ ಸ್ಥಾನಗಳಾಗಿದ್ದವು.
36 レビびとの組のユダにあるもののうちベニヤミンに合したものもあった。
೩೬ಲೇವಿಯರಲ್ಲಿ ಕೆಲವು ವರ್ಗಗಳವರು ಯೆಹೂದ್ಯರೊಂದಿಗೂ, ಕೆಲವರು ಬೆನ್ಯಾಮೀನ್ಯರೊಂದಿಗೂ ವಾಸಮಾಡುತ್ತಿದ್ದರು.